ಗೀತೆ 52
ಕ್ರೈಸ್ತ ಸಮರ್ಪಣೆ
1. ವಿಶ್ವ ಯೆಹೋವನ ಸೃಷ್ಟಿ
ಭವ್ಯ ನಿನ್ನ ಆಸ್ತಿ.
ಈ ಸುಂದರ ತಾರಾರಾಶಿ
ಎಲ್ಲಾ ನಿನ್ನ ಸೃಷ್ಟಿ.
ನೀ ತಾನೆ ಪ್ರೀತಿಯ ಮೂಲ
ನೀ ನೀಡಿದೆ ಜೀವ.
ಎಲ್ಲಾ ಘನ ಮಾನ ಪ್ರೀತಿಗೆ
ನೀ ಯೋಗ್ಯನು ಓ ದೇವ.
2. ಯೇಸು ದೀಕ್ಷಾಸ್ನಾನ ಹೊಂದಿ
ಪೂರೈಸಿದ ನೀತಿ.
ನಾ ಮಾಡುವೆ ನಿನ್ನ ಇಷ್ಟ
ಎಂದಾತ ಹೇಳಿದ.
ಯೇಸು ಅಭಿಷಿಕ್ತನಾದ
ನಿನ್ನ ಶಕ್ತಿಯಿಂದ.
’ದೇವ ಇಷ್ಟ ಬೇಗ ಆಗಲಿ
ಈ ಭೂಮಿಯಲೂ’ ಅಂದ.
3. ದೇವಾ ನಿನ್ನ ಸ್ತುತಿಗಾಗಿ
ನಿನ್ನ ಮುಂದೆ ಬಾಗಿ
ನಿರ್ಧಾರವ ನಾ ಮಾಡಿದೆ
ಸಮರ್ಪಣೆಗಾಗಿ
ನೀನು ಕೊಟ್ಟೆ ಮಗನನ್ನೇ
ಪ್ರೀತಿ ನಿನ್ನ ಚಿಹ್ನೆ.
ನನ್ನ ಉಸಿರು ನಿಂತೋದರೂ
ನಾ ನಿನ್ನವನು ದೇವ.
(ಇಬ್ರಿ. 10:7, 9; ಮಾರ್ಕ 8:34; ಲೂಕ 9:23 ಸಹ ನೋಡಿ)