ಪಾಠ 1
ಆಸಕ್ತಿ ಹುಟ್ಟಿಸುವ ಆರಂಭದ ಮಾತು
ಅ. ಕಾರ್ಯಗಳು 17:22
ಏನು ಮಾಡಬೇಕು: ಪೀಠಿಕೆ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಇರಬೇಕು. ನೀವು ಯಾವ ವಿಷಯದ ಬಗ್ಗೆ ಮಾತಾಡಲಿದ್ದೀರಿ ಎಂದು ಹೇಳಿ ಮತ್ತು ಅದಕ್ಕೆ ಯಾಕೆ ಗಮನ ಕೊಡಬೇಕೆಂದು ಸ್ಪಷ್ಟವಾಗಿ ಹೇಳಿ.
ಹೇಗೆ ಮಾಡಬೇಕು:
ಆಸಕ್ತಿ ಹುಟ್ಟಿಸಿ. ಕೇಳುಗರ ಆಸಕ್ತಿಯನ್ನು ಕೆರಳಿಸುವ ಪ್ರಶ್ನೆ, ನಿಜ-ಜೀವನದ ಅನುಭವ, ಸುದ್ದಿ ಅಥವಾ ಇನ್ಯಾವುದಾದರೂ ವಿಷಯವನ್ನು ಆರಿಸಿಕೊಳ್ಳಿ.
ವಿಷಯ ಹೇಳಿ. ನೀವು ಯಾವ ವಿಷಯದ ಬಗ್ಗೆ ಮಾತಾಡಲಿದ್ದೀರಿ ಮತ್ತು ಮಾತಾಡುವ ಉದ್ದೇಶ ಏನೆಂದು ಆರಂಭದಲ್ಲೇ ಸ್ಪಷ್ಟವಾಗಿ ಹೇಳಿ.
ವಿಷಯ ಯಾಕೆ ಮುಖ್ಯ ಎಂದು ಹೇಳಿ. ನೀವು ಹೇಳುವ ವಿಷಯ ಕೇಳುಗರ ಅಗತ್ಯಕ್ಕೆ ತಕ್ಕಂತೆ ಇರಲಿ. ಆ ವಿಷಯದಿಂದ ಅವರಿಗೆ ಏನು ಪ್ರಯೋಜನ ಸಿಗುತ್ತದೆ ಎಂದು ಅವರು ಅರ್ಥಮಾಡಿಕೊಳ್ಳಬೇಕು.