ಪಾಠ 12
ಸ್ನೇಹಭಾವ ಮತ್ತು ಪರಚಿಂತನೆ
1 ಥೆಸಲೊನೀಕ 2:7, 8
ಏನು ಮಾಡಬೇಕು: ಪ್ರೀತಿ-ಕಾಳಜಿಯಿಂದ ಮಾತಾಡಿ.
ಹೇಗೆ ಮಾಡಬೇಕು:
ನಿಮ್ಮ ಕೇಳುಗರ ಬಗ್ಗೆ ಯೋಚಿಸಿ. ಅವರಿಗಿರುವ ಸಮಸ್ಯೆಗಳ ಬಗ್ಗೆ ಯೋಚಿಸಿ. ಅವರ ಸ್ಥಾನದಲ್ಲಿ ನಿಂತು ನೋಡಿ. ಹೀಗೆ ನಿಮ್ಮ ಹೃದಯವನ್ನು ಸಿದ್ಧಮಾಡಿಕೊಳ್ಳಿ.
ಯಾವ ಪದಗಳನ್ನು ಉಪಯೋಗಿಸಿ ಮಾತಾಡಬೇಕೆಂದು ತೀರ್ಮಾನಿಸಿ. ನಿಮ್ಮ ಮಾತುಗಳಿಂದ ಕೇಳುಗರಿಗೆ ಚೈತನ್ಯ, ಸಾಂತ್ವನ, ಬಲ ಸಿಗಬೇಕು. ಅನಾವಶ್ಯಕವಾಗಿ ಅವರಿಗೆ ನೋವು ತರುವ ರೀತಿ ಮಾತಾಡಬೇಡಿ. ಯೆಹೋವನ ಆರಾಧಕರಲ್ಲದ ಜನರ ಬಗ್ಗೆ ಮತ್ತು ಅವರು ನಂಬುವ ವಿಷಯಗಳ ಬಗ್ಗೆ ಕೀಳಾಗಿ ಮಾತಾಡಬೇಡಿ.
ಆಸಕ್ತಿ ತೋರಿಸಿ. ನಿಮಗೆ ನಿಮ್ಮ ಕೇಳುಗರ ಮೇಲೆ ನಿಜವಾದ ಕಾಳಜಿ ಇದೆ ಎಂದು ನಿಮ್ಮ ಸ್ವರ ಮತ್ತು ಸೂಕ್ತವಾದ ಸನ್ನೆಗಳ ಮೂಲಕ ತೋರಿಸಿ. ಮುಖಭಾವದ ಕಡೆ ಕೂಡ ಗಮನ ಕೊಡಿ. ಮುಖದಲ್ಲಿ ಮುಗುಳ್ನಗೆ ಇರಲಿ.