ಗೀತೆ 152
ನೀಡಿದೆ ನೀನು ಆರಾಧನಾ ಆಲಯ
(1 ಅರಸು 8:27; 1 ಪೂರ್ವಕಾಲವೃತ್ತಾಂತ 29:14)
1. ಯೆಹೋವನೇ ಸ್ವರ್ಗದ ರಾಜ
ಎಲ್ಲಾ ಸೃಷ್ಟಿಯ ಒಡೆಯ,
ಸಾಲದು ನಿಂಗೆ ಈ ಆಲಯ,
ನಮ್ಮ ಆರಾಧನಾ ಜಾಗ.
ನಿನ್ನ ಪವಿತ್ರ ಶಕ್ತಿಯಿಂದ,
ಈ ಕೂಟದಲ್ಲಿ ಸಂತೋಷ,
ಅದಕೆ ತಾನೇ ಈ ಐಕ್ಯತೆ,
ಭಕ್ತಿಗೆ ಕಾರಣ ನೀನೇ.
(ಅನುಪಲ್ಲವಿ)
ಏನನ್ನೂ ಕೊಡಲು
ಆಗದು ನಮಗೆಂದೂ
ನಾವು ನೀಡುವ ಎಲ್ಲಾ,
ನೀನು ಕೊಟ್ಟ ದಾನ.
(ಪಲ್ಲವಿ)
ಈ ಆಲಯ ನೀಡಿದೆ ನೀನು,
ಧನ್ಯ ನಿನಗೆ ದಿನವೂ,
ಅದರಲ್ಲಿ ನಾವು ನಿನಗೆ,
ಸ್ತುತಿ ಹಾಡುವೆವು ದೇವ.
2. ಈ ಆಲಯ ಪ್ರೀತಿಯ ಮೂಲ,
ಈ ಜಾಗಕ್ಕೆ ಸಾಟಿಯಿಲ್ಲ.
ಒಳ್ಳೇ ತಾಣ ಸೇವೆ ಮಾಡಲು,
ಸಹಾಯ ನೀಡಲು ನಾವು.
ಈ ಆಲಯ ಕಾರಣ ತಾನೇ,
ಸಾರೋದಕೆ ಈ ಜಗಕ್ಕೆ.
ನಮ್ಮ ಸೇವೆ ಹೆಚ್ಚು ಮಾಡಲು,
ಯೇಸುವು ತೋರುವ ದಾರಿ.
(ಅನುಪಲ್ಲವಿ)
ನಮ್ಮ ಶಕ್ತಿಯೆಲ್ಲ,
ನಮ್ಮ ಆಸ್ತಿಯನೆಲ್ಲ,
ನಿನಗೆ ಕೊಡುವ ಸಿದ್ಧ —
ಮನವ ನೀಡು.
(ಪಲ್ಲವಿ)
ಈ ಆಲಯ ನೀಡಿದೆ ನೀನು,
ಧನ್ಯ ನಿನಗೆ ದಿನವೂ,
ಅದರಲ್ಲಿ ನಾವು ನಿನಗೆ,
ಸ್ತುತಿ ಹಾಡುವೆವು ದೇವ.