ಗೀತೆ 162
ಆಧ್ಯಾತ್ಮಿಕ ಆರೋಗ್ಯ ಅಗತ್ಯ
1. ಸಂತೋಷದ ಬಾಳಿಗೆ
ಇನ್ನೇನೋ ಬೇಕಾಗಿದೆ
ಎಲ್ಲಾರಲ್ಲೂ, ಈ ಯೋಚನೆ
ಇಟ್ಟಿದ್ದು ನೀ ತಾನೇ,
ವಾಕ್ಯದ ಬಾಯಾರಿಕೆ
ಬೇಕೀಗ ಸಂತೋಷಕೆ
ನಿನ್ನಿಂದಲೇ, ಈ ಜೀವನ
ಉಲ್ಲಾಸದ ತಾಣ
(ಪಲ್ಲವಿ)
ದೇವಾ, ನನ್ನ ದಾರಿಗೆ
ಜ್ಯೋತಿಯಂತೆ, ನೀನು ನಿಂತೆ
ದೇವಾ, ನನ್ನ ನಂಬಿಕೆ
ಹೆಚ್ಚಿಸುವೆ ತಂದೆ
ಕೊಡು ನೀ ನಂಗೆ
ಆಧ್ಯಾತ್ಮಿಕತೆ.
2. ನಿನ್ ವಾಕ್ಯದ ಮೂಲಕ
ಸಂತೃಪ್ತಿ ಸಿಕ್ಕಾಗಿದೆ,
ಆಧ್ಯಾತ್ಮಿಕ, ಆರೋಗ್ಯಕೆ
ನಿನ್ ಸೇವೆ ಮದ್ದಂತೆ,
ಆ ಮದ್ದನು ನೀಡಲು
ಹೊತ್ತಾರೆಯೆ ಹೋಗುವೆ
ಇಂಥ ಸುದ್ದಿ ಹಂಚುವಾಗ
ಸಂತೋಷ ಸಂತೃಪ್ತಿ
(ಪಲ್ಲವಿ)
ದೇವಾ, ನನ್ನ ದಾರಿಗೆ
ಜ್ಯೋತಿಯಂತೆ, ನೀನು ನಿಂತೆ
ದೇವಾ, ನನ್ನ ನಂಬಿಕೆ
ಹೆಚ್ಚಿಸುವೆ ತಂದೆ
ಕೊಡು ನೀ ನಂಗೆ
ಆಧ್ಯಾತ್ಮಿಕತೆ.
ದೇವಾ, ನನ್ನ ದಾರಿಗೆ
ಜ್ಯೋತಿಯಂತೆ, ನೀನು ನಿಂತೆ
ದೇವಾ, ನನ್ನ ನಂಬಿಕೆ
ಹೆಚ್ಚಿಸುವೆ ತಂದೆ
ಕೊಡು ನೀ ನಂಗೆ
ಆಧ್ಯಾತ್ಮಿಕತೆ.
ದೇವಾ, ನನ್ನ ದಾರಿಗೆ
ಜ್ಯೋತಿಯಂತೆ, ನೀನು ನಿಂತೆ
ದೇವಾ, ನನ್ನ ನಂಬಿಕೆ
ಹೆಚ್ಚಿಸುವೆ ತಂದೆ
ಕೊಡು ನೀ ನಂಗೆ
ಆಧ್ಯಾತ್ಮಿಕತೆ.
(ಕೀರ್ತ. 1:1, 2; 112:1; 119:97; ಯೆಶಾ. 40:8; ಮತ್ತಾ. 5:6; 16:24; 2 ತಿಮೊ. 4:4 ಸಹ ನೋಡಿ.)