ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 6
  • ಹಿಂಜರಿಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಿಂಜರಿಬೇಡಿ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಏನು ಮಾಡಿದನು?
  • ನಮಗೇನು ಪಾಠ?
  • ಯೇಸು ತರ ನೀವೂ ಮಾಡಿ
  • ಯೇಸುವನ್ನು ಅನುಕರಿಸುತ್ತಾ ಧೈರ್ಯದಿಂದ ಸಾರಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ನೀವು ಧೈರ್ಯದಿಂದ ಸಾರುತ್ತೀರೋ?
    2000 ನಮ್ಮ ರಾಜ್ಯದ ಸೇವೆ
  • ‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಇರಿ
    2005 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 6

ಸಂಭಾಷಣೆ ಶುರುಮಾಡಿ

ಯೇಸು ಮರದ ಮೇಲಿರೋ ಜಕ್ಕಾಯನನ್ನ ಕೆಳಗೆ ಇಳಿಯೋಕೆ ಹೇಳ್ತಿದ್ದಾನೆ, ಇದನ್ನ ಜನ ಆಶ್ಚರ್ಯದಿಂದ ನೋಡ್ತಿದ್ದಾರೆ.

ಲೂಕ 19:1-7

ಪಾಠ 6

ಹಿಂಜರಿಬೇಡಿ

ತತ್ವ: “ನಮ್ಮ ದೇವರು ಆತನ ಸಿಹಿಸುದ್ದಿಯನ್ನ ನಿಮಗೆ ಹೇಳೋಕೆ ನಮಗೆ ಧೈರ್ಯ ಕೊಟ್ಟನು.”—1 ಥೆಸ. 2:2.

ಯೇಸು ಏನು ಮಾಡಿದನು?

ಯೇಸು ಮರದ ಮೇಲಿರೋ ಜಕ್ಕಾಯನನ್ನ ಕೆಳಗೆ ಇಳಿಯೋಕೆ ಹೇಳ್ತಿದ್ದಾನೆ, ಇದನ್ನ ಜನ ಆಶ್ಚರ್ಯದಿಂದ ನೋಡ್ತಿದ್ದಾರೆ.

ವಿಡಿಯೋ: ಯೇಸು ಜಕ್ಕಾಯನಿಗೆ ಸಾರಿದನು

1. ವಿಡಿಯೋ ನೋಡಿ ಅಥವಾ ಲೂಕ 19:1-7 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಕೆಲವರು ಜಕ್ಕಾಯನ ಜೊತೆ ಯಾಕೆ ಸೇರ್ತಿರಲಿಲ್ಲ?

  2. ಬಿ. ಆದ್ರೂ ಯೇಸು ಜಕ್ಕಾಯನಿಗೆ ಸಿಹಿಸುದ್ದಿ ಸಾರೋಕೆ ಯಾಕೆ ಹಿಂಜರಿಲಿಲ್ಲ?

ನಮಗೇನು ಪಾಠ?

2. ಹಿಂಜರಿದೆ ಇದ್ರೆ ನಾವು ಎಲ್ಲಾ ತರದ ಜನರಿಗೂ ಸಿಹಿಸುದ್ದಿ ಸಾರೋಕೆ ಆಗುತ್ತೆ.

ಯೇಸು ತರ ನೀವೂ ಮಾಡಿ

3. ಯೆಹೋವನ ಮೇಲೆ ಭರವಸೆ ಇಡಿ. ಸಿಹಿಸುದ್ದಿ ಸಾರೋಕೆ ಯೇಸುಗೆ ಪವಿತ್ರಶಕ್ತಿ ಸಹಾಯ ಮಾಡ್ತು. ನಿಮಗೂ ಸಹಾಯ ಮಾಡುತ್ತೆ. (ಮತ್ತಾ. 10:19, 20; ಲೂಕ 4:18) ಕೆಲವರನ್ನ ನೋಡಿದ್ರೆ ನಮಗೆ ಭಯ ಆಗುತ್ತೆ. ಆಗ ಯೆಹೋವನ ಹತ್ರ ಸಹಾಯ ಕೇಳಿ.—ಅ. ಕಾ. 4:29.

4. ಜನರನ್ನ ನೋಡಿ ತೀರ್ಪು ಮಾಡಬೇಡಿ. ಒಬ್ಬರು ನೋಡೋಕೆ ಹೇಗಿದ್ದಾರೆ, ಅವರ ಸ್ಥಾನಮಾನ ಏನು, ಜೀವನಶೈಲಿ ಹೇಗಿದೆ ಮತ್ತು ಆಚಾರ-ವಿಚಾರಗಳನ್ನ ನೋಡಿ ಅವರ ಹತ್ರ ಮಾತಾಡೋಕೆ ಹಿಂಜರಿತೀವಿ. ಆದ್ರೆ ನೆನಪಿಡಿ:

  1. ಎ. ಜನರ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೊಳ್ಳೋಕೆ ಆಗೋದು ಯೆಹೋವ ಮತ್ತು ಯೇಸುಗೆ ಮಾತ್ರ, ನಮಗಲ್ಲ.

  2. ಬಿ. ಯೆಹೋವ ದೇವರಿಗೆ ಯಾರನ್ನ ಬೇಕಾದ್ರೂ ಬದಲಾಯಿಸೋ ಶಕ್ತಿ ಇದೆ.

5. ಅತಿಯಾದ ಧೈರ್ಯ ತೋರಿಸಬೇಡಿ, ಹುಷಾರಾಗಿರಿ. (ಮತ್ತಾ. 10:16) ವಾದ ಮಾಡಬೇಡಿ. ಒಬ್ಬ ವ್ಯಕ್ತಿಗೆ ಸಿಹಿಸುದ್ದಿ ಕೇಳೋಕೆ ಇಷ್ಟ ಇಲ್ಲ ಅಂತ ಗೊತ್ತಾದ್ರೆ ಅಥವಾ ನಿಮಗೇನಾದ್ರೂ ತೊಂದರೆ ಆಗುತ್ತೆ ಅಂತ ಅನಿಸಿದ್ರೆ ಜಾಣ್ಮೆಯಿಂದ ತಕ್ಷಣ ಸಂಭಾಷಣೆಯನ್ನ ಅಲ್ಲಿಗೆ ನಿಲ್ಲಿಸಿ.—ಜ್ಞಾನೋ. 17:14.

ಇದನ್ನೂ ನೋಡಿ

ಅ. ಕಾ. 4:31; ಎಫೆ. 6:19, 20; 2 ತಿಮೊ. 1:7

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ