ಹೊಸ ವಿಚಾರಗಳಿಗೆ ತೆರೆದಿರುವುದು ಯಾಕೆ?
ಮಂಜಿನ ಪರದೆಯು ಮೆಲ್ಲಮೆಲ್ಲನೇ ಎತ್ತಲ್ಪಟ್ಟಂತೆ, ಅಮೆರಿಕದ ಕಾಮಡೋರ್ ಮಾಥ್ಯೂ ಸಿ. ಪೆರ್ರಿಯು ತನ್ನ ನೌಕಾಬಲದ ಹಡಗಾದ ಸಸ್ಕ್ಹಾನ್ನಾ ದ ಅಟ್ಟದಿಂದ ಫುಜೀ ಪರ್ವತವನ್ನು ದೃಷ್ಟಿಸುತ್ತಾನೆ. ಅವನು ಜಾಪಾನನ್ನು ನೋಡಲು ತುಂಬಾ ತವಕ ಪಡುತ್ತಿದ್ದನು. ಅಂತೂ ಏಳು ತಿಂಗಳ ನೌಕಾಯಾನದ ಅನಂತರ ಜುಲೈ 8, 1853 ರಲ್ಲಿ ಕೊನೆಗೆ ಅವನಲ್ಲಿ ತಲಪಿದನು. ಆ ದೇಶದ ಕುರಿತು ದೊರೆಯುವ ಎಲ್ಲಾ ವರದಿಗಳನ್ನು ಕಾಮಡೋರನು ಅಭ್ಯಾಸಿಸಿದ್ದನು. ಯಾಕೆ? “ಸ್ವತಹ ಬೇರ್ಪಡಿಸಲ್ಪಟ್ಟ ಈ ರಾಜ್ಯ” ವನ್ನು ಅವನು ತೆರೆಯಲು ನಿರೀಕ್ಷಿಸಿದ್ದನು.
ಸ್ವತಹ ಬೇರ್ಪಡಿಸಲ್ಪಟ್ಟದ್ದು, ಖಂಡಿತವಾಗಿಯೂ! ಸುಮಾರು 200 ವರ್ಷಕ್ಕಿಂತಲೂ ಹಿಂದೆ ಚೈನಾ, ಕೊರಿಯ ಮತ್ತು ಹೊಲೆಂಡ್ ಬಿಟ್ಟು ಬೇರೆಲ್ಲಾ ದೇಶಗಳೊಂದಿಗೆ ಜಾಪಾನ್ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧ ಕಡಿದುಕೊಂಡಿತ್ತು. ಅನಂತರ ಆ ದೇಶವು ಕ್ಷೋಭೆ ರಹಿತ ನಿರಾತಂಕದಲ್ಲಿತ್ತು. ಅಂತಹ ಸ್ಥಿತಿಯಲ್ಲಿ ಅದು ಹೊಸ ವಿಚಾರಗಳಿಗೆ ಪ್ರತಿಭಟಿಸುವ ಮತ್ತು ತಮ್ಮ ಸ್ವಂತ ಅಭಿಪ್ರಾಯಗಳಿಗೆ ವ್ಯತ್ಯಾಸವಿರುವದನ್ನು ಕೇಳಲು ನಿರಾಕರಿಸುವ ಕೆಲವು ವ್ಯಕ್ತಿಗಳಿಗೆ ಸರಿಹೋಲುತಿತ್ತು. ಕೆಲವೂಂದು ರೀತಿಗಳಲ್ಲಿ ಇದು ತೃಪ್ತಿದಾಯಕವಾಗಬಲ್ಲದು. ಯಾಕಂದರೆ ಹೊಸ ವಿಚಾರಗಳು ಮನಕಲಕಿಸುವ, ಭಯಬರಿಸುವವುಗಳಾಗಿರಬಲ್ಲವು. ಆದರೆ ಅಂತಹ ನಿಲುವು ವಿವೇಕದ್ದೋ? ಒಳ್ಳೇದು, ಜಪಾನಿನ ಪ್ರತ್ಯೇಕತೆಯ ಧೋರಣೆಯ ಫಲಿತಾಂಶಗಳನ್ನು ಗಮನಿಸಿರಿ.
ಜಾಪಾನಿನ ಏಕಾಂತತೆಗೆ ನಡಿಸಿದ್ದು ಯಾವುದು?
ಜಪಾನ್ ವಿನಾಕಾರಣ ತನ್ನನ್ನು ಏಕಾಂತವಾಗಿರಿಸಿದ್ದಲ್ಲ. 1549 ರಲ್ಲಿ ಜೆಸ್ಯೂಟ್ ಮಿಶನೆರಿ ಫ್ರಾನ್ಸಿಸ್ ಕ್ಸೇವಿಯರ್ ತನ್ನ ಮತಪ್ರಚಾರಕ್ಕಾಗಿ ಜಪಾನಿಗೆ ಆಗಮಿಸಿದನು. ಕೊಂಚ ಕಾಲದೊಳಗೆ ರೋಮನ್ ಕಥೋಲಿಕ ವಿಶ್ವಾಸವು ದೇಶದಲ್ಲಿ ಪ್ರತಿಷ್ಟೆಗೆ ಬಂತು. ಒಂದು ಬೌದ್ಧ ಮತಪಂಗಡದಿಂದ ಧಾರ್ಮಿಕ ದಂಗೆಯು ಆ ಕಾಲದ ದೊರೆಗಳಿಂದ ಅನುಭವಿಸಲ್ಪಟ್ಟಿತಾದ್ದರಿಂದ ಅದೇ ಸಂಭಾವ್ಯತೆಯನ್ನು ಕಥೋಲಿಕರಲ್ಲೂ ಕಂಡಿತು. ಆದಕಾರಣ ಕಥೋಲಿಸಿಸಂ ನಿಷೇಧಿಸಲ್ಪಟ್ಟಿತಾದರೂ ಆ ನಿಷೇಧವನ್ನು ಕಟ್ಟುನಿಟ್ಟಾಗಿ ಅನ್ವಯಿಸಲ್ಲಿಲ್ಲ.
ಜಪಾನ್ ಒಂದು “ದೈವಿಕ ರಾಷ್ಟ್ರ” ವೆಂದು ವಾದಿಸಿ, ಅದರ ವ್ಯವಸ್ಥೆಗೆ ಬೆದರಿಕೆಯನ್ನೊಡ್ಡುವ ಒಂದು “ಕ್ರೈಸ್ತ” ಧರ್ಮಕ್ಕೆ ಅನುಮತಿಯನ್ನೀಯುವ ಇರಾದೆ ದೊರೆಗಳಿಗಿರಲಿಲ್ಲ. ಹಾಗಾದರೆ ಕಥೋಲಿಸಿಸಂ ಮೇಲೆ ನಿಷೇಧವನ್ನು ಹೆಚ್ಚು ಕಠೋರವಾಗಿ ಯಾಕೆ ಅನ್ವಯಿಸಲಿಲ್ಲ? ಯಾಕಂದರೆ ಕಥೋಲಿಕ ಮಿಶನೆರಿಗಳು ಪೋರ್ಚುಗೀಸ್ ವ್ಯಾಪಾರ ಹಡಗುಗಳಲ್ಲಿ ಬಂದರು ಮತ್ತು ಸರಕಾರವು ಆ ಹಡಗುಗಳಿಂದ ತಮಗಾಗುವ ಆದಾಯದ ಮೇಲೆ ಕಣ್ಣಿಟ್ಟಿದ್ದರು. ಆದಾಗ್ಯೂ, ಜಪಾನೀಯರನ್ನು ಕಥೋಲಿಕರು ಪ್ರಭಾವಿಸುವರೆಂಬ ಭೀತಿಯು ಕ್ರಮೇಣ, ದೊರೆಗಳ ವ್ಯಾಪಾರದ ಆಶೆಗಿಂತಲೂ ಹೆಚ್ಚಾಯಿತು. ಆದಕಾರಣ ವಿದೇಶ ವ್ಯಾಪಾರ, ವಲಸೆ ಹೋಗುವಿಕೆ ಮತ್ತು ಕ್ರೈಸ್ತರ ಮೇಲೆ ಬಿಗುಪಿನ ಹತೋಟಿ ತರುವ ಆಜ್ನೆಯನ್ನು ಅವರು ಹೊರಡಿಸಿದರು.
ಹಿಂಸೆಗೊಳಪಟ್ಟ ಮತ್ತು ದುರ್ಭರಕ್ಕೀಡಾದ “ಕ್ರೈಸ್ತರು” ಒಬ್ಬ ಸ್ಥಾನಿಕ ಪ್ರಭುವಿನ ವಿರುದ್ಥ ದಂಗೆ ಎದ್ದಾಗ, ಅದು ಕೊನೆಯ ಕಡ್ಡಿಯಾಯಿತು. ಕಥೋಲಿಕ ಮತಪ್ರಸಾರದ ನೇರಫಲವು ಆ ದಂಗೆ ಎಂದೆಣಿಸಿ, ಕೇಂದ್ರ ಶೊಗುನೆಟ್ ಸರಕಾರವು ಪೋರ್ಚುಗೀಸರನ್ನು ಹೊರದಬ್ಬಿತು ಮತ್ತು ಜಪಾನೀಯರು ವಿದೇಶಕ್ಕೆ ಹೋಗುವುದನ್ನು ನಿಶೇಧಿಸಿತು. 1639 ರಲ್ಲಿ ಅಪ್ಪಣೆ ಹೊರಡಿಸಿದಂದಿನಿಂದ ಜಪಾನಿನ ಏಕಾಂತತೆಯು ಒಂದು ನೈಜತೆಯಾಯಿತು.
ಪಾಶ್ಚಿಮಾತ್ಯರಲ್ಲಿ ಜಪಾನಿನೊಂದಿಗೆ ವ್ಯಾಪಾರವನ್ನು ಮುಂದುವರಿಸಲು ಅನುಮತಿಸಲ್ಪಟ್ಟವರೆಂದರೆ ಡಚ್ಚರು ಮಾತ್ರ. ಅವರು ನಾಗಸಾಕಿ ಬಂದರಿನ ಒಂದು ಚಿಕ್ಕ ದ್ವೀಪವಾದ ಡೆಜಿಮಾದ ಮುಖಾಂತರ ಮಾತ್ರ ವ್ಯವಹರಿಸುತ್ತಿದ್ದರು. ಸುಮಾರು 200 ವರ್ಷಗಳ ತನಕ ಜಪಾನಿನೊಳಗೆ ಪಾಶ್ವಿಮಾತ್ಯ ಸಂಸ್ಕೃತಿ ನುಸುಳಲು ಏಕಮಾತ್ರ ದಾರಿ, ಈಗ ಸುಧಾರಿತವಾಗಿರುವ ಡೆಜಿಮಾದ ಮೂಲಕವೇ. ಪ್ರತಿವರ್ಷ ಈ ದ್ವೀಪದ ವಾಣಿಜ್ಯ ಹುದ್ದೆಯ ನಿರ್ದೇಶಕನು “ಡಚ್ ವರದಿ” ಯೊಂದನ್ನು ಒಪ್ಪಿಸುತ್ತಿದ್ದನು. ಅದರ ಮೂಲಕ ಹೊರಲೋಕದಲ್ಲಿ ಏನೆಲ್ಲಾ ಸಂಭವಿಸುತ್ತಿತ್ತೆಂದು ಸರಕಾರಕ್ಕೆ ತಿಳಿಯುತ್ತಿತ್ತು. ಆದರೆ ಈ ವರದಿಗಳನ್ನು ಬೇರೆ ಯಾರೂ ನೊಡದಂತೆ ಶೊಗುನೆಟ್ ಆಡಳಿತೆ ಜಾಗ್ರತೆ ವಹಿಸಿತು. ಆದುದರಿಂದ 1853 ರಲ್ಲಿ ಕಾಮಡೋರ್ ಪೆರ್ರಿಯು ಅವರ ಬಾಗಲನ್ನು ತಟ್ಟುವ ತನಕ ಜಾಪನೀಯರು ಪ್ರತ್ಯೇಕಿಸಲ್ಪಟ್ಟವರಾಗಿ ಜೀವಿಸಿದರು.
ಏಕಾಂತತೆಯ ಅಂತ್ಯ
ಪೆರ್ರಿಯ ಮಹಾ ಕಪ್ಪು ಹಡಗಗಳು ಇಡೋ ಕೊಲ್ಲಿಯ ಕಡೆಗೆ ಚಲಿಸುತ್ತಿರುವಾಗ ಅವು ಹೊಗೆಯುಗುಳುತ್ತಿದ್ದವು. ಸ್ಥಳೀಯ ಬೆಸ್ತರು ಅವು ಚಲಿಸುವ ಜ್ವಾಲಾಮುಖಿಗಳೆಂದೆಣಿಸಿ ವಿಸ್ಮಿತರಾದರು. ಇಡೋವಿನ ನಾಗರಿಕರು (ಈಗ ಟೋಕಿಯೋ) ಗಾಬರಿಗೊಂಡು ಅನೇಕರು ತಮ್ಮ ಸಾಮಗ್ರಿಗಳೊಂದಿಗೆ ನಗರ ಬಿಟ್ಟು ಪಲಾಯನಗೈದರು. ಈ ಪಲಾಯನವು ಎಷ್ಟು ಮಹತ್ತಾಗಿತ್ತೆಂದರೆ, ಜನರನ್ನು ಶಮನಗೊಳಿಸಲು ಸರಕಾರವು ಒಂದು ಅಧಿಕೃತ ಸುತ್ತೋಲೆಯನ್ನು ಹೊರಡಿಸಬೇಕಾಯಿತು.
ಕಾಮಡೋರ್ ಪೆರ್ರಿಯಿಂದ ಚಲಾಯಿಸಲ್ಪಟ್ಟ ಈ ಉಗಿಹಡಗಗಳು ಮಾತ್ರವಲ್ಲ, ಅವನು ತಂದ ಉಡುಗೊರೆಗಳು ಕೂಡಾ ಈ ಚದರಿಸಲ್ಪಟ್ಟ ಜನರನ್ನು ಸ್ತಬರ್ದನ್ನಾಗಿ ಮಾಡಿತು. ಒಂದು ಕಟ್ಟಡದಿಂದ ಇನ್ನೊಂದಕ್ಕೆ ಟೆಲಿಗ್ರಾಫ್ ಮೂಲಕ ಸಂದೇಶಗಳನ್ನು ರವಾನಿಸುವ ಪ್ರದರ್ಶನೆಯಿಂದ ಅವರು ವಿಸ್ಮಿತಗೊಂಡರು. ಪೆರ್ರಿಯ ಮೇಲ್ವಿಚಾರಣೆಯಲ್ಲಿ ಸಂಗ್ರಹಿಸಲ್ಪಟ್ಟ ದಿ ನೆರಟಿವ್ ಆಫ್ ದ ಎಕ್ಸ್ಪೆಡಿಶನ್ ಆಫ್ ಎನ್ ಅಮೆರಿಕನ್ ಸ್ವ್ಕಾಡನ್ ಟು ದ ಚೈನೀಸ್ ಸೀಸ್ ಎಂಡ್ ಜಪಾನ್ ಪುಸ್ತಕದಲ್ಲಿ, “ಆರು ವರ್ಷದ ಮಗುವೂಂದನ್ನು ಕೊಂಡೊಯ್ಯಲು ಕೂಡಾ ಅಸಾಧ್ಯವಾಗಿರುವ” ಒಂದು ಲಿಲಿಪ್ಲುಟಿಯನ್ ಸ್ವಯಂಚಾಲಿತ ವಾಹನದ ಮೇಲೆ ಹಾರಲು ಬಯಸುವ ಆಶೆಯನ್ನು ಜಾಪಾನಿನ ಅಧಿಕಾರಿಗಳಿಗೂ ತಡೆಯಲಾಗಲಿಲ್ಲವೆಂದು ಹೇಳುತ್ತದೆ. ಒಬ್ಬ ಪಕ್ಷದ ಗಣ್ಯ ಚೀನಾ ಅಧಿಕಾರಿ (ಮ್ಯಾಂಡರೀನ್) ಕೂಡಾ “ತನ್ನ ಸಡಿಲಾದ ಉಡುಪುಗಳು ಗಾಳಿಯಲ್ಲಿ ಹಾರಾಡುತ್ತಿರುವಾಗಲೂ” ಈ ವಾಹನದ ಮಾಡಿಗೆ ಆತುಹಿಡಿದಿದ್ದನು.
ನಂತರದ ವರ್ಷದಲ್ಲಿ ಪೆರ್ರಿಯ ಎರಡನೆಯ ಭೇಟಿಯ ಅನಂತರ ಜಪಾನಿನ ಬಾಗಲು ಕಟ್ಟಕಡೆಗೆ ಪೂರ್ಣವಾಗಿ ತೆರೆಯುವಂತೆ ಮಾಡಲಾಯಿತು. ಒತ್ತಡಕ್ಕೆ ಮಣಿದು ಸರಕಾರವು ದೇಶವನ್ನು ತೆರೆಯಿತು. ಜಪಾನಿನ ಏಕಾಂತತೆಯನ್ನು ಕಾಪಾಡಿಕೊಂಡು ಬರಲು ಬಯಸಿದ ಜಗ್ಗದ ಪ್ರತ್ಯೇಕತಾವಾದಿಗಳು ಭಯೋತ್ಪಾದಕತೆಗೆ ಇಳಿದರು. ಸರಕಾರದ ಮುಖ್ಯ ಮಂತ್ರಿಯನ್ನು ಹತಿಸಿದರು ಮತ್ತು ವಿದೇಶಿಯರನ್ನು ಧಾಳಿಮಾಡಿದರು. ಕೆಲವು ಪ್ರತ್ಯೇಕತಾವಾದಿ ಪ್ರಭುಗಳು ವಿದೇಶಿ ನೌಕಾತಂಡಗಳ ಮೇಲೆ ಯುದ್ಧವೆಸಗಿದರು. ಅವರ ಧಾಳಿ ಆದಾಗ್ಯೂ ಕ್ರಮೇಣ ನಿಧಾನಿಸಿತು ಮತ್ತು ಟೊಕುಗಾವಾ ಶೊಗುನೆಟ್ನಿಂದ ಚಕ್ರವರ್ತಿಯೇ ಸರಕಾರವನ್ನು ತನ್ನ ಕೈವಶಮಾಡಿಕೊಂಡನು.
ಪೆರ್ರಿಯು ಜಾಪಾನಿನ ದ್ವಾರವನ್ನು ತೆರೆಯುವದರೊಳಗೆ ಪಾಶ್ಚಿಮಾತ್ಯ ದೇಶಗಳು ಕೈಗಾರಿಕಾ ಕ್ರಾಂತಿಯನ್ನು ದಾಟಿಹೋಗಿದ್ದವು. ಜಾಪಾನಿನ ಏಕಾಂತತೆಯ ಕಾರಣ ಅದು ಬಹಳ ಹಿಂದೆ ಬಿಡಲ್ಪಟ್ಟಿತ್ತು. ಕೈಗಾರಿಕಾ ರಾಷ್ಟ್ರಗಳು ಉಗಿಶಕ್ತಿಯ ಪ್ರಯೋಜನ ಪಡೆಯುತ್ತಿದ್ದವು. 1830 ರ ದಶಕದೊಳಗೆ ಉಗಿಯಂತ್ರಗಳು ಮತ್ತು ಉಗಿಶಕ್ತಿಯ ಯಂತ್ರಗಳು ಸಾಮಾನ್ಯ ಬಳಕೆಯಲ್ಲಿದ್ದವು. ಕೈಗಾರಿಕೆಯಲ್ಲಿ ಬಹಳಷ್ಟು ಹಿಂದೆ ಉಳಿಯುವಂತೆ ಜಾಪಾನಿನ ಏಕಾಂತತೆಯ ಧೋರಣೆಯು ಕಾರಣವಾಯಿತು. ಯುರೋಪಿಗೆ ಮೊದಲ ಜಾಪಾನೀ ತಂಡವು ಭೇಟಿನೀಡಿದಾಗ ಇದರ ತೀವ್ರ ಅನುಭವವು ಅದಕ್ಕಾಯಿತು. 1862 ರಲ್ಲಿ ಲಂಡನಿನಲ್ಲಿ ಜರಗಿದ ಪ್ರದರ್ಶನವೂಂದರಲ್ಲಿ ಕಾಗದ್ದ ಮತ್ತು ಮರದ ಜಾಪಾನೀ ವಸ್ತು ಪ್ರದರ್ಶನಗಳು ಒಬ್ಬ ಪೇಚಾಟಕ್ಕೀಡಾದ ಪ್ರತಿನಿಧಿಗನುಸಾರ “ಹಳೆಯ ವಸ್ತು ಮಾರಾಟದ ಅಂಗಡಿಯಲ್ಲಿಟ್ಟ ಪ್ರದರ್ಶನದಂತಿದ್ದವು.”
ಯುರೋಪ್ ಮತ್ತು ಅಮೇರಿಕಕ್ಕೆ ಭೇಟಿಮಾಡಿದ ಜಾಪಾನೀಯ ತಂಡವು ಅವರ ದೇಶದಲ್ಲಿ ಕೈಗಾರಿಕರಣ ಮಾಡುವ ಮತ್ತು ಆಧುನಿಕ ಅನ್ವೇಷಣಾ ವಿಚಾರಗಳನ್ನು ಪ್ರಸ್ತಾಪಿಸುವ ಅತ್ಯವಶ್ಯಕ ಜರೂರಿಯನ್ನು ಮನಗಂಡರು. ಪೆರ್ರಿಯ ಮೊದಲ ಭೇಟಿಯ 64 ವರ್ಷಗಳ ಅನಂತರ, ಜಾಪಾನನ್ನು ಸಂದರ್ಶಿಸಿದ ಅವನ ತಂಡದಲ್ಲಿ ಉಳಿದಿದ್ದ ಕೊನೆಯ ಸದಸ್ಯನು ಹೇಳಿದ್ದು: “60 ವರ್ಷಗಳೊಳಗೆ ಜಾಪಾನಿನ ಪ್ರಗತಿ ನನ್ನಲ್ಲಿ ಬೆರಗನ್ನುಂಟುಮಾಡಿದೆ.”
ಆದ್ದರಿಂದ ಜಪಾನಿನ ಏಕಾಂತತೆಯ ಧೋರಣೆಯು ಬೆಳವಣಿಗೆಗೆ ಅದರ ಸಾಮರ್ಥ್ಯವನ್ನು ಬಹಳಷ್ಟು ಸೀಮಿತಗೊಳಿಸಿತ್ತು. ಹೊಸ ವಿಚಾರಗಳಿಗೆ ಅದರ ದ್ವಾರಗಳನ್ನು ತೆರೆದಿಟ್ಟದರಿಂದ ರಾಷ್ಟ್ರಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯೆಂದು ರುಜುವಾಯಿತು. ಆದಾಗ್ಯೂ ಇಂದು ಜಾಪಾನಿನಲ್ಲಿ ಕೆಲವು ವ್ಯಕ್ತಿಗಳಲ್ಲಿರುವ “ಮನದ ಏಕಾಂತತೆಯನ್ನು” ತೋರಿಸುತ್ತಾರೆ. ಮತ್ತು ಅದು ಪರಿಹರಿಸಬೇಕಾದ ಒಂದು ಸಮಸ್ಯೆಯೆಂದು ಸಾದರಗೊಳಿಸುತ್ತಾರೆ. ಹೊಸ ವಿಚಾರಗಳ ಪ್ರತಿರೋಧಿಸುವ ಪ್ರವೃತಿಯನ್ನು ಜಯಿಸುವುದು ಕೇವಲ ಜಾಪಾನೀಯರಿಗೆ ಮಾತ್ರವಲ್ಲ, ಎಲ್ಲಾ ಮಾನವರಿಗೂ ಒಂದು ಪಂಥಾಹ್ವಾನವಾಗಿದೆ. ನಿಮ್ಮ ವಿಷಯದಲ್ಲೇನು ಮತ್ತು ಮನಸ್ಸಿನ “ಏಕಾಂತತೆಯ” ವಿಷಯದಲ್ಲೇನು? 1850 ರ ದಶಕದಲ್ಲಿ ಜಪಾನು ಮಾಡಿದಂತೆ ಹೊಸ ವಿಚಾರಗಳಿಗೆ ನಿಮ್ಮ ಮನಸ್ಸನ್ನು ತೆರೆದಿಡುವ ಮೂಲಕ ನೀವು ಪ್ರಯೋಜನ ಪಡೆಯಬಲ್ಲಿರೋ? (w89 1/15)