ಕಷದ ಕೆಲಸವು ಸಂತೋಷವನ್ನು ತರುತ್ತದೋ?
“ಎಷ್ಟೆಂದರೂ ಕೆಲಸವು ಮನುಷ್ಯನಿಗೆ ಸರ್ವಸ್ಯ, ಅಲ್ಲವೇ?” ಎಂದರು ಬುನುಪೆ ಒಟ್ಸೂಕಿ, ಜಪಾನಿನ ವ್ಯಾಪಾರ ರಂಗದ ಪ್ರಮುಖ ಉದ್ಯೋಗಪತಿ. ಬೇಸಗೆಯ ರಜೆಯನ್ನು ತಾನೇಕೆ ತಕ್ಕೊಳ್ಳ ಬಯಸುವದಿಲ್ಲ ಎಂಬದನ್ನು ಅವರು ವಿವರಿಸುತ್ತಿದ್ದರು. ಅವರ ಮಾತುಗಳು, ಯುದ್ಧಾನಂತರದ ಅವ್ಯವಸ್ಥೆಯಿಂದ ತಮ್ಮ ದೇಶವನ್ನು ಪುನಃ ಕಟ್ಟಿದ ಜಪಾನೀಯರು ಮಾತಾಡುವ ನಮೂನೆಯದ್ದು. ಅಮೆರಿಕದ ಕಾಮೆಡೊರ್ ಪೆರಿ ಜಪಾನನ್ನು ಅದರ ದೀರ್ಘ ಕಾಲದ ಏಕಾಂತತೆಯಿಂದ ತೆರೆದನು. ಅಂದಿನಿಂದ, ಜಪಾನೀಯರು ಉದ್ಯೋಗ ಶೀಲರಾಗಿ ಪರಿಗಣಿಸಲ್ಪಡುತ್ತಾರೆ. ಕಷ್ಟ ಪಟ್ಟು ದುಡಿಯುವದು, ಅದರಲ್ಲಿ ಅವರಿಗೆ ಅಭಿಮಾನ.
ಆದರೂ, ತೀರಾ ಕಷ್ಟ ಪಟ್ಟು ಕೆಲಸ ಮಾಡುವದಕ್ಕಾಗಿ ಈಗ ಜಪಾನನ್ನು ಠೀಕಿಸಲಾಗುತ್ತದೆ, ಉದ್ಯೋಗಶೀಲ ರಾಷ್ಟ್ರಗಳಲ್ಲಿ ಅವರ ವಾರ್ಷಿಕ ದುಡಿಮೆಯ ತಾಸುಗಳು ಬಲು ಹೆಚ್ಚು. ಜಪಾನಿ ಸರಕಾರವು ಈ ಕೆಲಸದ ಚಟವನ್ನು ತಡೆಗಟ್ಟಲು ಪ್ರಯತ್ನಪಡುತ್ತಿದೆ. “ಅಷ್ಟು ಕಷ್ಟ ಪಟ್ಟು ಕೆಲಸ ಮಾಡುವದನ್ನು ನಿಲ್ಲಿಸಿ ಎಂದು ಕಾರ್ಮಿಕ ಇಲಾಖೆಯು ಹೇಳುತ್ತದೆ” ಎಂದು ಒಂದು ವಾರ್ತಾಪತ್ರದ ಮೇಲ್ಬರಹವು ಹೇಳಿತ್ತು. 1987 ರ ಬೇಸಗೆಯ ರಜಾವಧಿಗಾಗಿ ತನ್ನ ಚಟುವಟಿಕೆಯ ಗುರಿಮಂತ್ರದಲ್ಲಿ ಸರಕಾರಿ ಖಾತೆಯು, “ರಜೆಯನ್ನು ತಕ್ಕೊಳ್ಳುವದು ನಿಮ್ಮ ಕಾರ್ಯಕಮ್ಷತೆಯ ರುಜುವಾತು” ಎಂದು ಹೇಳುವಷ್ಟರ ಮಟ್ಟಿಗೂ ಮುಂದುವರಿಯಿತು. ಬೇರೊಂದು ಮಾತಿನಲ್ಲಿ, “ಅಷ್ಟು ಕಷ್ಟ ಕೆಲಸವೇಕೆ ಮಾಡ ಬೇಕು?” ಎಂದು ಸರಕಾರವು ದೇಶವನ್ನು ಕೇಳುತ್ತಾ ಇದೆ.
ಜಪಾನಿನ ಜನರೆಲ್ಲರೂ ಮುಡಿಪಿಟ್ಟ, ಕಷ್ಟಪಟ್ಟು ದುಡಿಯುವ ಕಾರ್ಮಿಕರಲ್ಲ. ಇತ್ತೀಚೆಗೆ ಜಪಾನಿನ ಉತ್ಪಾದನೆ ಕೇಂದ್ರವು ತೆಗೆದ 7,000 ಹೊಸ ಕೆಲಸಗಾರರ ಸಮೀಕ್ಷೆಯಲ್ಲಿ ಕೇವಲ 7 ಸೇಕಡಾ ಮಂದಿ ಮಾತ್ರವೇ ಉದ್ಯೋಗಕ್ಕೆ ತಮ್ಮ ಖಾಸಗೀ ಜೀವನಕ್ಕಿಂತ ಆದ್ಯತೆ ಕೊಟ್ಟರು. ಈ ಪ್ರವೃತ್ತಿಯನ್ನು ಬೇರೆ ದೇಶಗಳಲ್ಲೂ ಕಾಣಬಹುದು. ಜರ್ಮನಿಯಲ್ಲಿ ಅಲೆನ್ಸ್ಬೇಕರ್ ಇನ್ಸ್ಟಿಟ್ಯೂಟ್ ಫರ್ ಡೆಮಾಸ್ಕಫಿ ಕಂಡುಹಿಡಿದದ್ದೇನಂದರೆ, 18 ರಿಂದ 20 ವಯಸ್ಸಿನ ಜರ್ಮನರಲ್ಲಿ, ಸಂಬಳವೆಷ್ಟೇ ಇರಲಿ, ಕೇವಲ 19 ಸೇಕಡಾ ಜರ್ಮನರು ಮಾತ್ರವೇ ಪೂರಾ ದಕ್ಷತೆಯಿಂದ ಕೆಲಸಮಾಡುತ್ತಾರೆ.
ಸುಖಾಭಿಲಾಷಿ ಯುವಜನತೆಗೆ ತುಲನೆಯಲ್ಲಿ, ಜಪಾನಿನ ಅತಿಥಿ ಕಾರ್ಮಿಕರಾದರೋ ಹೆಚ್ಚು ಶ್ರಮಪಟ್ಟು ದುಡಿಯುವವರು. ಕೈದುಡಿಮೆಯ ಕೆಲಸಮಾಡುವ ತನ್ನ ಅಲೀರ್ಜಿಯನ್ ನೌಕರನ ಕುರಿತಾಗಿ ಟೋಕಿಯೊ ಧನಿಯೊಬ್ಬನು ಮೆಚ್ಚಿಗೆಯಿಂದ ಹೊಗಳುತ್ತಾನೆ. ಅವನನ್ನುವುದು: “ಜಪಾನೀಯರು ಇಂಥ ಕೆಲಸವನ್ನು ಯಾಚಿಸುವುದಿಲ್ಲ, ಒಂದುವೇಳೆ ಯಾಚಿಸಿದರೂ ಬೇಗನೇ ಬಿಟ್ಟುಬಿಡುತ್ತಾರೆ.” ಇಲ್ಲ, ಶ್ರಮಜೀವಿಗಳಾದ ಜಪಾನೀಯರು ಸಹಾ ಸ್ವಭಾವಸಿದ್ದ ದಕ್ಷತೆಯವರಲ್ಲ. ಜನರು ಕಷ್ಟಪಟ್ಟು ಕೆಲಸ ಮಾಡಲಿಕ್ಕೆ, ಒಂದು ಬಲವಾದ ಪ್ರಚೋದನೆ ಅಲ್ಲಿರಲೇಬೇಕು.
ಕಷ್ಟಪಟ್ಟು ಕೆಲಸಮಾಡಲು ಕಾರಣಗಳು
“ಐಶ್ವರ್ಯ, ಸಾಯ್ಥಿಕತೆ, ಸೊತ್ತುಗಳು ಮತ್ತು ಲೋಕದಲ್ಲಿ ಖ್ಯಾತಿ”—ಇವನ್ನೇ ಕಷ್ಟಾಳು ಜರ್ಮನರು ಬೆನ್ನಟ್ಟುತ್ತಾರೆಂದು ಜರ್ಮನ್ ವಾರಪತ್ರಿಕೆ ಡಾರ್ ಸ್ಪೈಗೆಲ್ ವರದಿಸುತ್ತದೆ. ಹೌದು, ಜೀವಿತದಲ್ಲಿ ಸ್ಪಲ್ಪ ಮಟ್ಟಿಗಾದರೂ ಸ್ಥಿರತೆಯಲ್ಲಿ ಆನಂದಿಸುವಂತೆ ಅನೇಕರು ಐಹಿಕ ಸಂಪತ್ತನ್ನು ಕಷ್ಟಪಟ್ಟು ಸಂಪಾದಿಸುತ್ತಾರೆ. ಇತರರು “ಲೋಕದಲ್ಲಿ ಮೇಲೇರುವ” ಧ್ಯೇಯದಿಂದ ಅಥವಾ ಏಳಿಗೆಯನ್ನು ಪಡೆಯುವ ಹೇತುವಿಂದ ಕಷ್ಟಪಟ್ಟು ದುಡಿಯುತ್ತಾರೆ. ಅಂಥ ಧ್ಯೇಯಗಳನ್ನು ಬೆನ್ನಟಲ್ಟು ಶಿಕ್ಷಣ ವ್ಯವಸ್ಥೆಯ ಮೇಲಾಟದಿಂದ ಬಲವಾಗಿ ಪ್ರಚೋದಿಸಲ್ಪಡುವ ಹಲವರು, ದೌರ್ಭಾಗ್ಯದಿಂದ, ಔದ್ಯೋಗಿಕ ಸಮಾಜದಲ್ಲಿ ಕೊನೆಗೆ ಗಾಣದೆತ್ತಿನ ದುಡಿತಕ್ಕೆ ಗುರಿಯಾಗಿ— ತಮ್ಮನ್ನು ದಣಿಸಿಕೊಂಡು, ಎಲ್ಲಿಗೂ ಮುಟ್ಟದಿರುತ್ತಾರೆ.
ಜನರು ಕಷ್ಟಪಟ್ಟು ಕೆಲಸ ಮಾಡುವದು, ಹಾಗಿದ್ದರೂ, ಧನ ಸಂಪಾದನೆ ಮತ್ತು ಪ್ರತಿಷ್ಟೆಯ ಕಾರಣ ಮಾತ್ರದಿಂದಲ್ಲ. ಕೆಲವರು ಕೆಲಸಕ್ಕಾಗಿ ಕೆಲಸಮಾಡುತ್ತಾರೆ. ಅವರಿಗೆ ಕೆಲಸವು ಸರ್ವಸ್ಯ. ತಮ್ಮ ಕೆಲಸದಲ್ಲಿ ಆನಂದಿಸುವ ಇತರರೂ ಇದ್ದಾರೆ. “ನನ್ನ ಪ್ರಯೋಗಶಾಲೆಯ ಕೆಲಸದಲ್ಲಿ ನಾನೆಷ್ಟು ಅಸಕ್ತನಿದ್ದೇನೆಂದರೆ, ಆತ್ಮಿಕ ಧ್ಯೇಯಗಳು ಅದುಮಲ್ಪಟ್ಟವು” ಎಂದು ಒಪ್ಪುತ್ತಾನೆ ಹರೂಒ.
ಅದಲ್ಲದೆ, ಇತರರ ಸೇವೆ ಮತ್ತು ಹಿತಚಿಂತನೆಗಳೆಂಬ ಗೌರವಾರ್ಹ ಕಾರಣಗಳಿಗಾಗಿ ಮುಡಿಪಾದವರೂ ಇದ್ದಾರೆ. ಜೀವರಕ್ಷಣೆಗಾಗಿ ಅವರು ಶ್ರಮಪಟ್ಟು ದುಡಿಯುತ್ತಾರೆ. ದೃಷ್ಟಾಂತಕ್ಕೆ, ಅಗ್ನಿಶಾಮಕನು ತನ್ನ ಉಪಕರಣವನ್ನು ದುರುಸ್ತಿಯಲಿಡ್ಲಲು ಪ್ರತಿದಿನ ಕಷ್ಟಪಟ್ಟು ಕೆಲಸ ಮಾಡುತ್ತಾನೆ.
ಆದರೆ ಕಷ್ಟಪಟ್ಟು ದುಡಿಯಲು ಇವೆಲ್ಲಾ ಯೋಗ್ಯ ಕಾರಣಗಳೋ? ಅವು ಸಂತೋಷಕ್ಕೆ ನಡಿಸುವವೂ? ನಿಜವಾಗಿಯೂ ಯಾವ ಕೆಲಸವು ನಿಮ್ಮನ್ನು ಸಂತೋಷ ಪಡಿಸಬಲ್ಲದು? (w89 7/15)