ದೇವರ ಒಡಂಬಡಿಕೆಗಳಿಂದ ನೀವು ಪ್ರಯೋಜನ ಪಡೆಯುವಿರೋ?
“ನಿನ್ನ ಮೂಲಕ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವುದು. . . .ಹೀಗಿರಲಾಗಿ ನಂಬುವವರು ನಂಬಿಕೆಯಿಟ್ಟ ಅಬ್ರಹಾಮನೊಂದಿಗೆ ಸೌಭಾಗ್ಯವನ್ನು ಹೊಂದುವರು.”—ಗಲಾತ್ಯ 3:8,9.
1. ಅನೇಕ ಆಳಿಕೆಗಳ ಪರಿಣಾಮದ ಕುರಿತು ಇತಿಹಾಸ ಏನು ತೋರಿಸುತ್ತದೆ?
18ನೇ ಶತಮಾನದ ಯೂರೋಪಿನ ಕೆಲವು ರಾಜರುಗಳನ್ನು “ಧರ್ಮಶೀಲರಾದ [ಜ್ಞಾನೋದಯವಾಗಿರುವ] ಕ್ರೂರ ರಾಜರು” ಎಂದು ಕರೆಯಲಾಗುತ್ತದೆ. ‘ಅವರು ಪಿತೃರೂಪದ ದಯೆ ತೋರಿಸಿ ಜನರನ್ನಾಳ ಬಯಸಿದರೂ ಅವರ ಸುಧಾರಣೆಗಳು ವಿಫಲಗೊಂಡವು.’a (ದಿ ಎನ್ ಸೈಕ್ಲೊಪೀಡಿಯ ಅಮೆರಿಕಾನ) ಯೂರೋಪನ್ನು ಶೀಘ್ರವೇ ಮುಳುಗಿಸಿದ ಕ್ರಾಂತಿಗಳಿಗೆ ಇದೊಂದು ಮುಖ್ಯ ಕಾರಣವಾಗಿತ್ತು.
2, 3. ಯೆಹೋವನು ಮಾನವ ರಾಜರುಗಳಿಂದ ಪ್ರತ್ಯೇಕನು ಹೇಗೆ?
2 ಆದರೆ ಯೆಹೋವ ದೇವರು ಈ ಅಸ್ಥಿರತೆಯ ಮಾನವ ಪ್ರಭುಗಳಿಗಿಂತ ಎಷ್ಟು ಪ್ರತ್ಯೇಕನು. ಅನ್ಯಾಯ ಮತ್ತು ಕಷ್ಟಾನುಭವಗಳಿಗೆ ನಿಜ ಔಷಧವನ್ನು ಅಂತಿಮವಾಗಿ ತರುವ ಬದಲಾವಣೆಗಾಗಿ ಮಾನವ ಕುಲಕ್ಕಿರುವ ಕಷ್ಟಕರವಾದ ಅವಶ್ಯಕತೆಯನ್ನು ನಾವು ಸುಲಭವಾಗಿ ನೋಡಬಲ್ಲಿವು. ಆದರೆ ದೇವರು ಇದನ್ನು ತರುವುದು ಆತನ ಮನಸ್ಸಿನ ವಿಚಿತ್ರಭಾವನೆಯ ಮೇಲೆ ಹೊಂದಿಕೆಕೊಂಡಿದೆಯೆಂದು ನಾವು ಚಿಂತಿಸುವ ಅಗತ್ಯವಿಲ್ಲ. ಲೋಕದಲ್ಲಿ ಅತ್ಯಂತ ಹೆಚ್ಚು ವಿತರಣೆಯಾಗಿರುವ ಗ್ರಂಥದಲ್ಲಿ ಆತನು ವಿಶ್ವಾಸಿ ಮಾನವ ಕುಲಕ್ಕೆ ಬಾಳುವ ಆಶೀರ್ವಾದವನ್ನು ತರುವ ತನ್ನ ವಾಗ್ದಾನವನ್ನು ದಾಖಲೆ ಮಾಡಿದ್ದಾನೆ. ಜನರ ಹಿಂದಿನ ಜನಾಂಗ, ಕುಲ, ವಿದ್ಯಾಭ್ಯಾಸ ಅಥವಾ ಸಾಮಾಜಿಕ ನೆಲೆ ಯಾವುದಾಗಿದ್ದರೂ ಇವನ್ನು ಆತನು ಲಕ್ಷಕ್ಕೆ ತರುವುದಿಲ್ಲ. (ಗಲಾತ್ಯ 3:28) ಆದರೆ ನೀವು ಇದರಲ್ಲಿ ಹೇಗೆ ಭರವಸೆವಿಡಬಲ್ಲಿರಿ?
3 “ನಿಜವಾಗಿ ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವನು” ಎಂದು ಹೇಳಿ ದೇವರು ಅಬ್ರಹಾಮನಿಗೆ ಕೊಟ್ಟ ಆಶ್ವಾಸನೆಯ ಅಂಶವನ್ನು ಅಪೊಸ್ತಲ ಪೌಲನು ಉಲ್ಲೀಖಿಸಿದನು. ಮತ್ತು “ದೇವರು ಸುಳ್ಳಾಡ ಸಾಧ್ಯವಿಲ್ಲದ” ಕಾರಣ “ನಮ್ಮ ಮುಂದಿರುವ ನಿರೀಕ್ಷೆಯನ್ನು ಹಿಡಿದಿಟ್ಟುಕೊಳ್ಳಲು ನಮಗೆ ಬಲವಾದ ಪ್ರೋತ್ಸಾಹನೆ” ಇರಬೇಕೆಂದೂ ಪೌಲನು ಹೇಳಿದನು. (ಇಬ್ರಿಯ 6:13-18) ದೇವರು ಇದನ್ನು ನೆರವೇರಿಸಲು ನಿಯತ ಕ್ರಮದಲ್ಲಿ ಆಧಾರವನ್ನಿಟ್ಟದ್ದರಿಂದ ಆ ಆಶೀರ್ವಾದಗಳಲ್ಲಿ ನಮ್ಮ ಭರವಸೆ ಇನ್ನೂ ಬಲವಾಗಬಲ್ಲದು.
4. ದೇವರು ತನ್ನ ಉದ್ದೇಶವನ್ನು ನೆರವೇರಿಸಲು ವಿವಿಧ ಒಡಂಬಡಿಕೆಗಳನ್ನು ಹೇಗೆ ಉಪಯೋಗಿಸಿದನು?
4 ದೇವರು ಅಬ್ರಹಾಮನೊಂದಿಗೆ “ಭೂಮಿಯ ಸಕಲ ಜನಾಂಗಗಳನ್ನು” ಆಶೀರ್ವದಿಸುವ ಉಪಕರಣವಾಗಿರುವ ಒಂದು ಸಂತಾನವು ಕೂಡಿರುವ ಒಂದು ಒಡಂಬಡಿಕೆಯನ್ನು ಮಾಡಿದನೆಂದು ನಾವು ಆಗಲೇ ನೋಡಿದ್ದೇವೆ. (ಆದಿಕಾಂಡ 22:17,18) ಇಸ್ರಾಯೇಲರು ಮಾಂಸಿಕ ಸಂತಾನವಾದರೂ ಹೆಚ್ಚು ಪ್ರಾಮುಖ್ಯವಾದ ಆತ್ಮಿಕಾರ್ಥದಲ್ಲಿ ಯೇಸು ಕ್ರಿಸ್ತನು ಅಬ್ರಹಾಮನ ಸಂತಾನದ ಪ್ರಧಾನ ಭಾಗವಾದನು. ಯೇಸು ಮಹಾ ಅಬ್ರಹಾಮನಾದ ಯೆಹೋವನ ಪುತ್ರ ಅಥವಾ ಸಂತಾನವೂ ಆಗಿದ್ದನು. “ಕ್ರಿಸ್ತನವರು” ಆದ ಕ್ರೈಸ್ತರು ಅಬ್ರಹಾಮನ ಸಂತಾನದ ದ್ವಿತೀಯ ಭಾಗವಾಗಿದ್ದಾರೆ. ಅಬ್ರಹಾಮನ ಒಡಂಬಡಿಕೆಯನ್ನು ಮಾಡಿದ ಬಳಿಕ ದೇವರು ಇಸ್ರಾಯೇಲ್ ಜನಾಂಗದೊಂದಿಗೆ ಧರ್ಮಶಾಸ್ತ್ರದೊಡಂಬಡಿಕೆಯನ್ನು ತಾತ್ಕಾಲಿಕವಾಗಿ ಕೂಡಿಸಿದನು. ಶಾಶ್ವತನಾದ ಒಬ್ಬ ಯಾಜಕನು ಮತ್ತು ಪರಿಪೂರ್ಣವಾದ ಯಜ್ಞವೊಂದು ಬೇಕಾಗಿದ್ದ ಪಾಪಿಗಳು ಈ ಇಸ್ರಾಯೇಲ್ಯರಿಗಾಗಿ ಇದ್ದರೆಂದು ಅದು ರುಜುಪಡಿಸಿತು. ಅದು ಸಂತಾನವು ಬರಲಿದ್ದ ವಂಶವನ್ನು ಜೋಪಾನ ಮಾಡಿ ಅವನನ್ನು ಗುರುತಿಸಲು ಸಹಾಯ ನೀಡಿತು. ದೇವರು ಹೇಗೋ ಒಂದು ರಾಜ-ಯಾಜಕರ ಜನಾಂಗವನ್ನು ಹುಟ್ಟಿಸುವನೆಂದೂ ಈ ಧರ್ಮಶಾಸ್ತ್ರದೊಡಂಬಡಿಕೆ ತೋರಿಸಿತು. ಈ ಧರ್ಮಶಾಸ್ತ್ರವು ಜಾರಿಯಲ್ಲಿದ್ದಾಗಲೇ ದೇವರು ಇಸ್ರಾಯೇಲಿನಲ್ಲಿ ಒಂದು ರಾಜ ವಂಶವಿರುವಂತೆ ದಾವೀದನೊಂದಿಗೆ ಒಂದು ಒಡಂಬಡಿಕೆಯು ಭೂಮಿಯ ಮೇಲೆ ಶಾಶ್ವತ ಪ್ರಭುತ್ವವಿರುವ ಒಬ್ಬ ವ್ಯಕ್ತಿಗೂ ಕೈ ತೋರಿಸಿತು.
5. ತೀರಿಸಬೇಕಾಗಿದ್ದ ಯಾವ ಪ್ರಶ್ನೆಗಳು ಅಥವಾ ಸಮಸ್ಯೆಗಳು ಇನ್ನೂ ಉಳಿದಿದ್ದವು?
5 ಆದರೂ ಈ ಒಡಂಬಡಿಕೆಗಳ ಕೆಲವು ಭಾಗಗಳು ಅಥವಾ ಗುರಿಗಳು ಅಪೂರ್ಣವಾಗಿದ್ದಂತೆ ಅಥವಾ ಸ್ಪಷ್ಟತೆಯ ಅಗತ್ಯವಿರುವಂತೆ ಕಂಡುಬಂದವು. ದೃಷ್ಟಾಂತಕ್ಕೆ ಬರಲಿದ್ದ ಸಂತಾನವು ದಾವೀದನ ವಂಶಜನಾಗಿರುವಲ್ಲಿ ಅವನು ಹಿಂದಿನ ಯಾಜಕರಿಗಿಂತ ಹೆಚ್ಚು ಕೆಲಸ ಮಾಡುವ ಖಾಯಂ ಯಾಜಕನಾಗುವುದು ಹೇಗೆ? (ಇಬ್ರಿಯ 5:1; 7:13,14) ಈ ಅರಸನು ಪರಿಮಿತವಾದ ಭೂಕ್ಷೇತ್ರಕ್ಕಿಂತ ಹೆಚ್ಚಿನದನ್ನು ಆಳುವನೋ? ಈ ಸಂತಾನದ ದ್ವಿತೀಯ ಭಾಗವು ಮಹಾ ಅಬ್ರಹಾಮನ ಕುಟುಂಬದವರಾಗಲು ಅರ್ಹರಾಗುವುದು ಹೇಗೆ? ಒಂದು ವೇಳೆ ಅರ್ಹರಾದರೂ, ಅವರಲ್ಲಿ ಅನೇಕರು ದಾವೀದನ ವಂಶಜರಲ್ಲದೇ ಇರುವುದರಿಂದ ಅವರು ಆಳುವ ಕ್ಷೇತ್ರವು ಎಲ್ಲಿರುವುದು? ದೇವರು ಈ ಪ್ರಶ್ನೆಗಳನ್ನು ತೀರ್ಮಾನಿಸಿ ನಮ್ಮ ನಿತ್ಯಾಶೀರ್ವಾದಕ್ಕಾಗಿ ದಾರಿ ತೆರೆಯಲು ಇನ್ನೂ ಹೆಚ್ಚಿನ ಒಡಂಬಡಿಕೆಗಳ ರೂಪದಲ್ಲಿ ಹೇಗೆ ಶಾಸನಬದ್ಧವಾದ ಹೆಜ್ಜೆಗಳನ್ನು ತಕ್ಕೊಂಡನೆಂದು ನಾವು ನೋಡೋಣ.
ಸ್ವರ್ಗೀಯ ಯಾಜಕನಾಗಿ ಒಡಂಬಡಿಕೆ
6, 7. (ಎ)ಕೀರ್ತನೆ 110:4 ಕ್ಕನುಸಾರವಾಗಿ ಇನ್ನಾವ ಸೇರಿಸಿದ ಒಡಂಬಡಿಕೆಯನ್ನು ದೇವರು ಸ್ಥಾಪಿಸಿದನು? (ಬಿ) ಈ ಸೇರಿಸಿದ ಒಡಂಬಡಿಕೆಯ ಗ್ರಹಿಕೆ ಪಡೆಯಲು ಯಾವ ಹಿನ್ನೆಲೆ ನಮಗೆ ಸಹಾಯ ನೀಡುತ್ತದೆ?
6 ನಾವು ನೋಡಿದಂತೆ, ಧರ್ಮಶಾಸ್ತ್ರದೊಡಂಬಡಿಕೆಯೊಳಗೆ, ದೇವರು ದಾವೀದನೊಂದಿಗೆ ಅವನ ವಂಶಜ (ಸಂತಾನ)ನೊಬ್ಬನು ಒಂದು ಭೂಕ್ಷೇತ್ರವನ್ನು ಶಾಶ್ವತವಾಗಿ ಆಳುವನೆಂದು ಒಡಂಬಡಿಕೆ ಮಾಡಿದನು. ಆದರೆ ಶಾಶ್ವತವಾದ ಯಾಜಕನೊಬ್ಬನು ಬರುವನೆಂದೂ ದೇವರು ದಾವೀದನಿಗೆ ತಿಳಿಸಿದನು. ದಾವೀದನು ಬರೆದುದು. “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ; ಪಶ್ಚಾತ್ತಾಪಪಡುವದಿಲ್ಲ.” (ಕೀರ್ತನೆ 110:4) ಯಾವುದು ಯೆಹೋವನ ಮತ್ತು ಬರಲಿರುವ ಯಾಜಕನ ಮಧ್ಯೆ ವ್ಯಕ್ತಿ ಪರವಾದ ಒಡಂಬಡಿಕೆಯಾಗಿ ಪರಿಣಮಿಸುತ್ತಿದೋ, ಆ ದೇವರ, ಆಣೆಯಿಟ್ಟು ನುಡಿದ ವಚನದ ಹಿಂದೆ ಏನಿತ್ತು?
7 ಮೆಲ್ಕಿಜೆದೇಕನು ಪುರಾತನ ಕಾಲದ ಸಾಲೇಮಿನ ರಾಜನು. (ಯಾವುದರಲ್ಲಿ “ಸಾಲೇಮ್” ಎಂಬ ಶಬ್ದ ಅಡಕವಾಗಿದೆಯೋ) ಆ ಯೆರೂಸಲೇಮು ಇದೇ ನಿವೇಶದ ಮೇಲೆ ಬಳಿಕ ಕಟ್ಟಲ್ಪಟ್ಟಿರುವುದೆಂಬುದು ವ್ಯಕ್ತ. ಅಬ್ರಹಾಮನೊಂದಿಗೆ ಈ ರಾಜನ ವ್ಯವಹಾರದ ವೃತ್ತಾಂತವು, ಈ ರಾಜನು “ಪರಾತ್ಪರ ದೇವರನ್ನು” ಆರಾಧಿಸಿದನೆಂಬುದನ್ನು ಎತ್ತಿ ತೋರಿಸುತ್ತಿದೆ. (ಆದಿಕಾಂಡ 14:17-20) ಆದರೂ, ಕೀರ್ತನೆ 110:4ರಲ್ಲಿ ಹೇಳಿರುವ ದೇವರ ಹೇಳಿಕೆಯು ಅವನು ದೇವರ ಯಾಜಕನೂ ಆಗಿದ್ದನೆಂದು ತೋರಿಸಿ ಅವನನ್ನು ಒಬ್ಬ ಅದ್ವಿತೀಯ ವ್ಯಕ್ತಿಯಾಗಿ ಮಾಡುತ್ತದೆ. ಇವನು ರಾಜ ಮತ್ತು ಯಾಜಕ—ಇವೆರಡೂ ಆಗಿದ್ದು, ದಾವೀದನ ವಂಶದ ಅರಸರು ಮತ್ತು ಲೇವಿ ವಂಶದ ಯಾಜಕರು ಆ ಬಳಿಕ ಎಲ್ಲಿ ತಮ್ಮ ದೈವಿಕವಾಗಿ ಏರ್ಪಡಿಸಿದ ಕಾರ್ಯಗಳನ್ನು ಮಾಡಿದರೋ ಅಲ್ಲಿ ಸೇವೆ ಮಾಡಿದನು.
8. ಮೆಲ್ಕಿಜೆದೇಕನ ತರಹದ ಯಾಜಕನಿಗಾಗಿ ಮಾಡಿದ ಒಡಂಬಡಿಕೆ ಯಾರೊಂದಿಗೆ ಮಾಡಲ್ಪಟ್ಟಿತು ಮತ್ತು ಇದರ ಪರಿಣಾಮವೇನು?
8 ಮೆಲ್ಕಿಜೆದೇಕನಂಥ ಯಾಜಕನಾಗಿ ಮಾಡಿದ ಈ ಒಡಂಬಡಿಕೆಯ ಕುರಿತು ಪೌಲನು ಇನ್ನೂ ಹೆಚ್ಚಿನ ವಿವರಗಳನ್ನು ನಮಗೆ ಒದಗಿಸುತ್ತಾನೆ. ದೃಷ್ಟಾಂತಕ್ಕೆ ಅವನು “ದೇವರಿಂದ ಮೆಲ್ಕಿಜೆದೇಕನ ತರಹದ ಮಹಾಯಾಜಕನೆನಿಸಿಕೊಂಡನು” ಅದು ಯೇಸು ಕ್ರಿಸ್ತನೆಂದು ಹೇಳುತ್ತಾನೆ. (ಇಬ್ರಿಯ 5:4-10; 6:20; 7:17,21,22) ಮೆಲ್ಕಿಜೆದೇಕನಿಗೆ ಮಾನವ ಹೆತ್ತವರಿದ್ದರೆಂಬುದು ವ್ಯಕ್ತವಾದರೂ ಅವನ ವಂಶಾವಳಿಯ ಯಾವ ದಾಖಲೆಯೂ ಇರುವುದಿಲ್ಲ. ಹೀಗೆ, ದಾಖಲೆಯಾಗಿರುವ ಮೆಲ್ಕಿಜೆದೇಕನ ವಂಶಾವಳಿಯ ಪ್ರಕಾರ ಯೇಸು ಯಾಜಕ ಸ್ಥಾನವನ್ನು ಪಡೆಯುವ ಬದಲಿಗೆ ಅವನ ನೇಮಕವು ನೇರವಾಗಿ ದೇವರಿಂದ ಬಂತು. ಯೇಸುವಿನ ಯಾಜಕತ್ವವು ಉತ್ತರಾಧಿಕಾರಿಗೆ ದಾಟಿ ಹೋಗದು, ಏಕೆಂದರೆ “ಅವನು ನಿರಂತರವಾಗಿ ಯಾಜಕನಾಗಿರುವನು.” ಇದು ನಿಜ, ಏಕೆಂದರೆ ಅವನ ಯಾಜಕ ಸೇವೆಯ ಪ್ರಯೋಜನಗಳು ನಿರಂತರವಾಗಿರುವುವು. “ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತ”ನಾಗಿರುವ ಮತ್ತು ನಂಬಿಗಸ್ತರಿಗೆ ಶಿಕ್ಷಣ ಕೊಟ್ಟು ಸದಾ ನಡಿಸಲು ಶಕ್ತನಾಗಿರುವ ಯಾಜಕನು ನಮಗಿರುವುದರಿಂದ ನಾವು ನಿಜವಾಗಿಯೂ ಆಶೀರ್ವದಿತರು.—ಇಬ್ರಿಯ 7:1-3,15-17,23-25.
9, 10. ಈ ಐದನೆಯ ಒಡಂಬಡಿಕೆಯ ಜ್ಞಾನವು ದೇವರ ಉದ್ದೇಶವು ಹೇಗೆ ನೆರವೇರುವುದೆಂಬುದರ ಕುರಿತು ನಮ್ಮ ತಿಳುವಳಿಕೆಯನ್ನು ಹೇಗೆ ಹೆಚ್ಚಿಸುತ್ತದೆ?
9 ಯೇಸುವಿನ ರಾಜ-ಯಾಜಕ ಪಾತ್ರವು ಭೂಗೋಳಕ್ಕಿಂತಲೂ ವಿಸ್ತಾರವಾಗಿ ವ್ಯಾಪಿಸಲಿರುವದು ಇನ್ನೊಂದು ಗಮನಾರ್ಹವಾದ ವಿಚಾರ. ಮೆಲ್ಕಿಜೆದೇಕನ ತರಹದ ಯಾಜಕನಿಗಾಗಿ ಮಾಡಿದ ಒಡಂಬಡಿಕೆಯು ಎಲ್ಲಿ ಹೇಳಲ್ಪಟ್ಟಿದೆಯೋ ಅದೇ ಸಂಬಂಧದಲ್ಲಿ ದಾವೀದನು ಬರೆದುದು: “ಯೆಹೋವನು ನನ್ನ ಒಡೆಯನಿಗೆ —ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ನುಡಿದನು.” ಹೀಗೆ ದಾವೀದನ ಒಡೆಯನಾದ ಯೇಸುವಿಗೆ ಸ್ವರ್ಗದಲ್ಲಿ ಯೆಹೋವನೊಂದಿಗೆ ಒಂದು ಸ್ಥಳವಿತ್ತು ಎಂದು ನೋಡಬಲ್ಲಿವು. ಇದು ಅವನ ದಿವಾರೋಹಣದಲ್ಲಿ ಸಂಭವಿಸಿತು. ಮತ್ತು ಸ್ವರ್ಗದಿಂದ, ತಂದೆಯೊಂದಿಗೆ ಕ್ರಿಸ್ತನು ವೈರಿಗಳನ್ನು ಅಂಕೆಗೆ ತರುವ ಮತ್ತು ಅವರಿಗೆ ನ್ಯಾಯ ತೀರ್ಪು ಮಾಡುವ ಅಧಿಕಾರವನ್ನು ವಹಿಸುವನು.—ಕೀರ್ತನೆ 110:1,2; ಅಪೊಸ್ತಲರ ಕೃತ್ಯ 2:33-36; ಇಬ್ರಿಯ 1:3; 8:1; 12:2.
10 ಈ ಕಾರಣದಿಂದ, ಈ ಐದನೆಯ ಒಡಂಬಡಿಕೆಯ ಕುರಿತು ತಿಳುವಳಿಕೆ ಪಡೆಯುವುದರಿಂದ ಯೆಹೋವನು ತನ್ನ ಉದ್ದೇಶವನ್ನು ಕ್ರಮಬದ್ಧ ರೀತಿಯಲ್ಲಿ ಪೂರ್ತಿಯಾಗಿ ನೆರವೇರಿಸುವನೆಂಬುದರ ವಿಸ್ತೃತ ನೋಟ ನಮಗೆ ದೊರೆಯುತ್ತದೆ. ಸಂತಾನದ ಪ್ರಧಾನ ಭಾಗವು ಸ್ವರ್ಗದಲ್ಲಿ ಯಾಜಕನೂ ಆಗಿರುವನೆಂಬುದನ್ನು ಮತ್ತು ರಾಜ-ಯಾಜಕನಾದ ಅವನ ಅಧಿಕಾರವು ವಿಶ್ವವ್ಯಾಪಕವಾಗಿರುವುದೆಂದು ಇದು ದೃಢೀಕರಿಸುತ್ತದೆ.—1 ಪೇತ್ರ 3:22.
ಹೊಸ ಒಡಂಬಡಿಕೆ ಮತ್ತು ಸಂತಾನದ ದ್ವಿತೀಯ ಭಾಗ
11. ಸಂತಾನದ ದ್ವಿತೀಯ ಭಾಗದ ವಿಷಯದಲ್ಲಿ ಯಾವ ತೊಡಕು ಎದ್ದಿತ್ತು?
11 ನಾವು ಈ ಮೊದಲು ಅಬ್ರಹಾಮಿಕ ಒಡಂಬಡಿಕೆಯನ್ನು ಚರ್ಚಿಸಿದಾಗ ಯೇಸು ಸ್ವಾಭಾವಿಕ ಹಕ್ಕಿನ ಮೂಲಕ ಸಂತಾನದ ಪ್ರಧಾನ ಭಾಗವಾದನೆಂದು ಗಮನಿಸಿದೆವು. ಅವನು ಮೂಲಪಿತ ಅಬ್ರಹಾಮನ ನೇರವಾದ ವಂಶಜನಾಗಿದ್ದನು ಮತ್ತು ಪರಿಪೂರ್ಣ ಮಾನವನಾಗಿದ್ದ ಅವನನ್ನು ಮಹಾ ಅಬ್ರಹಾಮನ ಪುತ್ರನೆಂದು ಅಂಗೀಕರಿಸಲಾಯಿತು. ಆದರೆ ಅಬ್ರಹಾಮನ ಸಂತಾನದ ದ್ವಿತೀಯ ಭಾಗವಾಗಿ “ವಾಗ್ದಾನಕ್ಕನುಸಾರವಾಗಿ ಬಾಧ್ಯರು” ಆಗುವ ಸುಯೋಗವಿರುವ ಮಾನವರ ವಿಷಯವೇನು? (ಗಲಾತ್ಯ 3:29) ಪಾಪಿಯಾದ ಆದಾಮನ ಕುಟುಂಬದ ಭಾಗವಾಗಿದ್ದು ಅಪೂರ್ಣರಾಗಿರುವ ಅವರಿಗೆ ಮಹಾ ಅಬ್ರಹಾಮನಾದ ಯೆಹೋವನ ಕುಟುಂಬದಲ್ಲಿರುವ ಅರ್ಹತೆಯಿರಲಾರದು. ಹಾಗಾದರೆ ಅಪೂರ್ಣತೆಯ ತಡೆಯನ್ನು ನಿವಾರಿಸುವದು ಹೇಗೆ ಸಾಧ್ಯ? ಮಾನವರಿಗೆ ಇದು ಅಸಾಧ್ಯವಾದರೂ ದೇವರಿಗೆ ಅಸಾಧ್ಯವಲ್ಲ.—ಮತ್ತಾಯ 19:25,26.
12, 13. (ಎ) ದೇವರು ಇನ್ನೊಂದು ಒಡಂಬಡಿಕೆಯನ್ನು ಹೇಗೆ ಮುಂತಿಳಿಸಿದನು? (ಬಿ) ಈ ಒಡಂಬಡಿಕೆಯ ಯಾವ ವಿಶೇಷ ಲಕ್ಷಣ ನಮ್ಮ ಗಮನಕ್ಕೆ ಅರ್ಹವಾಗಿದೆ?
12 ಧರ್ಮಶಾಸ್ತ್ರವು ಇನ್ನೂ ಜಾರಿಯಲ್ಲಿದ್ದಾಗ ದೇವರು ತನ್ನ ಪ್ರವಾದಿಯ ಮೂಲಕ ಹೀಗೆ ಮುಂತಿಳಿಸಿದನು: “ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; ಈ ಒಡಂಬಡಿಕೆಯು ನಾನು ಇವರ ಪಿತೃಗಳ. . . . ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ. . . . ಆ ನನ್ನ ಒಡಂಬಡಿಕೆಯನ್ನು ಅವರು ಮೀರಿದರಷ್ಟೆ. . . . ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. . . .ಒಬ್ಬರಿಗೊಬ್ಬರು— ಯೆಹೋವನ ಜ್ಞಾನವನ್ನು ಪಡೆಯಿರಿ ಎಂದು ಇನ್ನು ಮೇಲೆ ಬೋಧಿಸಬೇಕಾಗಿರುವದಿಲ್ಲ. . . . ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು; ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ.” —ಯೆರೆಮೀಯ 31:31-34.
13 ಈ ಹೊಸ ಒಡಂಬಡಿಕೆಯ ಒಂದು ಲಕ್ಷಣವು ಪಾಪ ಕ್ಷಮಾಪಣೆಯೆಂಬುದನ್ನು ಗಮನಿಸಿರಿ. ಈ ಕ್ಷಮಾಪಣೆಯಜ್ಞ ‘ತರಹದ್ದಲ್ಲ’ ಎಂದು ವ್ಯಕ್ತವಾಗುತ್ತದೆ. ಯೇಸು ತಾನು ಸಾಯುವ ದಿವಸ ಈ ವಿಷಯದ ಮೇಲೆ ಬೆಳಕು ಬೀರಿದನು. ಧರ್ಮಶಾಸ್ತ್ರವು ಕೇಳಿಕೊಂಡಂತೆ ಪಸ್ಕ ಹಬ್ಬವನ್ನು ತನ್ನ ಶಿಷ್ಯರ ಜೊತೆಯಲ್ಲಿ ಆಚರಿಸಿದ ಬಳಿಕ ಕ್ರಿಸ್ತನು ಕರ್ತನ ಸಂಧ್ಯಾ ಭೋಜನವನ್ನು ಸ್ಥಾಪಿಸಿದನು. ಈ ವಾರ್ಷಿಕ ಆಚರಣೆಯಲ್ಲಿ ಹುಳಿ ಹಿಡಿಸಿದ ದ್ರಾಕ್ಷಾರಸದ ಪಾತ್ರೆಯಲ್ಲಿ ಪಾಲು ತೆಗೆದುಕೊಳ್ಳುವ ವಿಷಯ ಅಡಗಿರುವುದೆಂದು ಹೇಳುತ್ತಾ ಯೇಸು ನುಡಿದುದು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.”—ಲೂಕ 22:14.
14. ಸಂತಾನದ ದ್ವಿತೀಯ ಭಾಗದ ಉತ್ಪಾದನೆಯಲ್ಲಿ ಹೊಸ ಒಡಂಬಡಿಕೆಯು ಏಕೆ ಪ್ರಾಮುಖ್ಯವಾಗಿದೆ?
14 ಹೀಗೆ, ಈ ಹೊಸ ಒಡಂಬಡಿಕೆಯನ್ನು ಯೇಸುವಿನ ರಕ್ತವು ಜಾರಿಗೆ ತರಲಿಕ್ಕಿತ್ತು. ಮತ್ತು ಇಂಥ ಪರಿಪೂರ್ಣ ಯಜ್ಞದ ಆಧಾರದ ಮೇರೆಗೆ ದೇವರು ‘ಅಪರಾಧ ಮತ್ತು ಪಾಪ’ವನ್ನು ಮುಕ್ತಾಯ ರೀತಿಯಲ್ಲಿ ಕ್ಷಮಿಸಸಾಧ್ಯವಿತ್ತು. ಇದರ ಅರ್ಥದ ಕುರಿತು ಯೋಚಿಸಿರಿ! ಆದಾಮನ ಕುಟುಂಬದ ಸಮರ್ಪಿತ ಮಾನವರ ಪಾಪಗಳನ್ನು ಕ್ಷಮಿಸುವುದರ ಮೂಲಕ ದೇವರು ಇವರನ್ನು ಪಾಪರಹಿತರೆಂದು ಕಂಡು. ಮಹಾ ಅಬ್ರಹಾಮನ ಆತ್ಮಿಕ ಪುತ್ರರಾಗಿ ಹುಟ್ಟಿಸಿ, ಆ ಬಳಿಕ ಅವರ ಮೇಲೆ ಪವಿತ್ರಾತ್ಮವನ್ನು ಸುರಿಸಸಾಧ್ಯವಿತ್ತು. (ರೋಮಾಪುರ 8:14-17) ಹೀಗೆ, ಯೇಸುವಿನ ಯಜ್ಞದಿಂದ ಸ್ಥಿರೀಕರಿಸಲ್ಪಟ್ಟ ಹೊಸ ಒಡಂಬಡಿಕೆ ಅವನ ಶಿಷ್ಯರು ಅಬ್ರಹಾಮನ ಸಂತಾನದ ದ್ವಿತೀಯ ಭಾಗವಾಗುವಂತೆ ಮಾಡುತ್ತದೆ. ಪೌಲನು ಬರೆದುದು: “ತನ್ನ ಮರಣದಿಂದಲೇ (ಯೇಸು) ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡುವದಕ್ಕೂ, ಮರಣ ಭಯದ ದೆಸೆಯಿಂದ ತಮ್ಮ ಜೀವಮಾನದಲ್ಲಿಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು. ಆತನು ದೇವದೂತರನ್ನು ಹಿಡಿದವನೆಂದು (ದೇವದೂತರಿಗೆ ನೆರವಾದನೆಂದು) ಬರೆದಿಲ್ಲ; ಅಬ್ರಹಾಮನ ಸಂತತಿಯನ್ನು ಕೈಹಿಡಿದಿದ್ದಾನಷ್ಟೆ, (ಸಂತತಿಗೆ ನೆರವಾದನಷ್ಟೆ).”—ಇಬ್ರಿಯ 2:14-16.
15. ಹೊಸ ಒಡಂಬಡಿಕೆಯ ಪಕ್ಷಗಳು ಯಾರು?
15 ಯೇಸು ಹೊಸ ಒಡಂಬಡಿಕೆಯ ಮಧ್ಯಸ್ಥ ಮತ್ತು ಸ್ಥಿರೀಕರಿಸುವ ಯಜ್ಞವೆಂಬುದು ನಿಜವಾದರೂ ಈ ಒಡಂಬಡಿಕೆಯ ಪಕ್ಷಗಳು ಯಾರು? ದೇವರು “ಇಸ್ರಾಯೇಲ್ ವಂಶದವರೊಂದಿಗೆ” ಒಡಂಬಡಿಕೆ ಮಾಡುವನೆಂದು ಯೆರೆಮೀಯನು ಮುಂತಿಳಿಸಿದನು. ಇದು ಯಾವ ಇಸ್ರಾಯೇಲ್? ಧರ್ಮಶಾಸ್ತ್ರಾನುಸಾರವಾಗಿ ಸುನ್ನತಿ ಹೊಂದಿದ ಮಾಂಸಿಕ ಇಸ್ರಾಯೇಲ್ ಇದಲ್ಲ. ಏಕೆಂದರೆ ಹೊಸ ಒಡಂಬಡಿಕೆ ಹಳೆಯದ್ದನ್ನು ರದ್ದು ಮಾಡಿತ್ತು. (ಇಬ್ರಿಯ 8:7,13; 32ನೇ ಪುಟ ನೋಡಿ.) ಈಗ ದೇವರು, ಯಾರು ನಂಬಿಕೆಯ ಮೂಲಕ ಸಾಂಕೇಂತಿಕವಾಗಿ ‘ಆತ್ಮದಿಂದ ಹೃದಯದಲ್ಲಿ ಸುನ್ನತಿ’ ಮಾಡಿಸಿಕೊಂಡಿದ್ದಾರೋ ಆ ಯೆಹೂದ್ಯರ ಮತ್ತು ಅನ್ಯರೊಂದಿಗೆ ವ್ಯವಹರಿಸಲಿದ್ದನು. ಹೊಸ ಒಡಂಬಡಿಕೆಯಲ್ಲಿರುವವರ ‘ಹೃದಯ ಮತ್ತು ಮನಸ್ಸುಗಳಲ್ಲಿ ತನ್ನ ಧರ್ಮೋಪದೇಶವನ್ನು ಬರೆಯುವನು’ ಎಂದು ಹೇಳಿದ ದೇವರ ಮಾತುಗಳೊಂದಿಗೆ ಇದು ಹೊಂದಿಕೆಯಾಗುತ್ತದೆ. (ರೋಮಾಪುರ 2:28,29; ಇಬ್ರಿಯ 8:10) ಪೌಲನು ಇಂಥ ಆತ್ಮಿಕ ಯೆಹೂದ್ಯರನ್ನು “ದೇವರ ಇಸ್ರಾಯೇಲ್ಯರು” ಎಂದು ಕರೆದನು.
16. ವಿಮೋಚನಾಕಾಂಡ 17:6 ಸೂಚಿಸಿದ್ದನ್ನು ಸಾಧಿಸುವುದರಲ್ಲಿ ಹೊಸ ಒಡಂಬಡಿಕೆಯು ಹೇಗೆ ಸಹಾಯ ಮಾಡುತ್ತದೆ?
16 ಈಗ ದೇವರು ಆತ್ಮಿಕ ಇಸ್ರಾಯೇಲ್ಯರೊಂದಿಗೆ ವ್ಯವಹಾರಿಸಿದುದರಿಂದ ಒಂದೂ ಸಂದರ್ಭ ದ್ವಾರವು ತೆರೆಯಿತು. ದೇವರು ಧರ್ಮಶಾಸ್ತ್ರವನ್ನು ಸ್ಥಾಪಿಸಿದ ಸಮಯ ಇಸ್ರಾಯೇಲ್ಯರು ತನಗೆ “ಯಾಜಕ ರಾಜ್ಯವೂ ಪರಿಶುದ್ಧ ಜನವೂ” ಆಗುವರೆಂದು ಹೇಳಿದ್ದನು. (ವಿಮೋಚನಾಕಾಂಡ 19:6) ಮಾಂಸಿಕ ಇಸ್ರಾಯೇಲ್ಯರೆಲ್ಲರೂ ರಾಜ ಯಾಜಕರಾಗುವ ಸಾಧ್ಯತೆಯೂ ಇರಲಿಲ್ಲ. ಅವರು ಹಾಗೆ ಆಗಲೂ ಇಲ್ಲ. ಆದರೆ ಅಬ್ರಹಾಮನ ಸಂತಾನದ ದ್ವಿತೀಯ ಭಾಗವಾಗಿ ಅಂಗೀಕರಿಸಲ್ಪಟ್ಟ ಯೆಹೂದ್ಯರೂ ಅನ್ಯರೂ ರಾಜ-ಯಾಜಕರಾಗುವ ಸಾಧ್ಯತೆ ಇತ್ತು. b ಅಪೊಸ್ತಲ ಪೇತ್ರನು ಇದನ್ನು ದೃಢೀಕರಿಸುತ್ತಾ ಇಂಥವರಿಗೆ ಹೇಳಿದ್ದು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರ ಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ.” ಅವರಿಗೆ ‘ಬಾಡಿಹೋಗದ ಬಾಧ್ಯತೆಯು ಸ್ವರ್ಗದಲ್ಲಿ ಕಾದಿರಿಸಲ್ಪಟ್ಟಿದೆ’ ಎಂದೂ ಅವನು ಬರೆದನು.—1 ಪೇತ್ರ 1:4; 2:9,10
17. ಹೊಸ ಒಡಂಬಡಿಕೆಯು ಧರ್ಮಶಾಸ್ತ್ರದೊಡಂಬಡಿಕೆಗಿಂತ “ಉತ್ತಮ”ವೇಕೆ?
17 ಹೀಗೆ, ಹೊಸ ಒಡಂಬಡಿಕೆಯು ಅದರ ಪೂರ್ವದಲ್ಲಿದ್ದ ಅಬ್ರಹಾಮನ ಒಡಂಬಡಿಕೆಯೊಂದಿಗೆ ಕಾರ್ಯನಡಿಸುತ್ತಾ ಸಂತಾನದ ದ್ವಿತೀಯ ಭಾಗವನ್ನು ಉತ್ಪಾದಿಸುತ್ತದೆ. ಯೆಹೋವನ ಮತ್ತು ಆತ್ಮಜನಿತ ಕ್ರೈಸ್ತರ ಮಧ್ಯೆ ಇರುವ ಈ ಹೊಸ ಒಡಂಬಡಿಕೆಯು ಮಹಾ ಅಬ್ರಹಾಮನ ರಾಜಮನೆತನದಲ್ಲಿ ರಾಜ-ಯಾಜಕರ ಸ್ವರ್ಗೀಯ ಜನಾಂಗವೊಂದು ರಚಿಸಲ್ಪಡುವುದಕ್ಕೆ ಅವಕಾಶ ನೀಡುತ್ತದೆ. ಹೀಗಿರುವುದರಿಂದ, “ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಉತ್ತಮವಾದ ಒಡಂಬಡಿಕೆ” ಯೆಂದು ಇದನ್ನು ಸೂಚಿಸಿ ಪೌಲನು ಏಕೆ ಹೇಳಿದನೆಂದು ನಾವು ನೋಡಬಲ್ಲಿವು. (ಇಬ್ರಿಯ 8:6) ಈ ವಾಗ್ದಾನಗಳಲ್ಲಿ ಯಾರ ಪಾಪಗಳು ಗಣನೆಗೆ ತರಲ್ಪಡುವುದಿಲ್ಲವೂ ಅಂಥ ಸಮರ್ಪಿತರ ಹೃದಯಗಳಲ್ಲಿ ದೇವರ ನಿಯಮಗಳು ಬರೆಯಲ್ಪಡುವ ಆಶೀರ್ವಾದಗಳು ಮತ್ತು ‘ಚಿಕ್ಕವರೂ ದೊಡ್ಡವರೂ ಹೀಗೆ ಎಲ್ಲರೂ ಯೆಹೋವನ ಜ್ಞಾನವನ್ನು’ ಪಡೆಯುವ ವಿಷಯಗಳು ಸೇರಿವೆ.—ಇಬ್ರಿಯ 8:11.
ಯೇಸು ರಾಜ್ಯಕ್ಕಾಗಿ ಮಾಡಿದ ಒಡಂಬಡಿಕೆ
18. ನಾವು ಈ ವರೆಗೆ ಚರ್ಚಿಸಿರುವ ಒಡಂಬಡಿಕೆಗಳು ದೇವರ ಉದ್ದೇಶವನ್ನು ಯಾವ ಅರ್ಥದಲ್ಲಿ ಪೂರ್ಣವಾಗಿ ನೆರವೇರಿಸಿರುವುದಿಲ್ಲ?
18 ನಾವು ಚರ್ಚಿಸುವ ಆರು ಒಡಂಬಡಿಕೆಗಳ ಕುರಿತು ನೆನಸುವಾಗ, ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲು ಬೇಕಾಗಿರುವುದನ್ನೆಲ್ಲಾ ಶಾಸನಬದ್ಧವಾಗಿ ಏರ್ಪಡಿಸಿದ್ದಾನೆಂದು ತೋರಬಹುದು. ಆದರೂ, ನಾವು ಚರ್ಚಿಸುವ ಒಡಂಬಡಿಕೆಗಳಿಗೆ ಸಂಬಂಧಿಸಿರುವ ಇನ್ನೊಂದು ಒಡಂಬಡಿಕೆಯನ್ನು, ಈ ಮಹತ್ವದ ವಿಚಾರಕ್ಕೆ ಸೇರಿಸಿರುವ ಲಕ್ಷಣಗಳನ್ನು ಪೂರ್ಣ ಮಾಡುವ ಇನ್ನೊಂದು ಒಡಂಬಡಿಕೆಯನ್ನು ಬೈಬಲು ಪ್ರಸ್ತಾಪಿಸುತ್ತದೆ. ಆತ್ಮಜನಿತ ಕ್ರೈಸ್ತರು, ‘ಕರ್ತನು ತಮ್ಮನ್ನು ಸಕಲ ದುಷ್ಕೃತ್ಯಗಳಿಂದ ಬಿಡುಗಡೆ ಮಾಡಿ ತನ್ನ ಸ್ವರ್ಗೀಯ ರಾಜ್ಯಕ್ಕಾಗಿ ರಕ್ಷಿಸುವನು’ ಎಂದು ಯೋಗ್ಯವಾಗಿಯೇ ಅಪೇಕ್ಷಿಸುತ್ತಾರೆ. (2 ತಿಮೊಥಿ 4:18) ಸ್ವರ್ಗದಲ್ಲಿ ಅವರು ರಾಜ-ಯಾಜಕರ ಒಂದು ಜನಾಂಗವಾಗುವರು. ಆದರೆ ಆವರು ಆಳುವ ಕ್ಷೇತ್ರ ಯಾವುದಾಗಿರಬಹುದು? ಅವರು ಸ್ವರ್ಗಕ್ಕೆ ಹೋಗಲು ಎಬ್ಬಿಸಲ್ಪಡುವಾಗ ಕ್ರಿಸ್ತನು ಪರಿಪೂರ್ಣ ಮಹಾಯಾಜಕನಾಗಿ ಆಗಲೇ ಅಲ್ಲಿರುವನು. ವಿಶ್ವದಾಳಿಕೆಗೆ ಅವನು ರಾಜ್ಯಾಧಿಕಾರದಿಂದ ಆಗಲೇ ನಿಂತಿರುವನು. (ಕೀರ್ತನೆ 2:6-9; ಪ್ರಕಟನೆ 11:15) ಹಾಗಾದರೆ ಈ ಇತರ ರಾಜ-ಯಾಜಕರಿಗೆ ಅಲ್ಲಿ ಯಾವ ಕೆಲಸಮಾಡಲಿಕ್ಕಿರುವುದು?
19. ಏಳನೆಯ ಪ್ರಾಮುಖ್ಯ ಒಡಂಬಡಿಕೆ ಯಾವಾಗ ಮತ್ತು ಹೇಗೆ ಮಾಡಲ್ಪಟ್ಟಿತು?
19 ಕರ್ತನ ಸಂಧ್ಯಾಭೋಜನವನ್ನು ಆರಂಭಿಸಿ, “ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆ”ಯ ಕುರಿತು ಯೇಸು ಮಾತಾಡಿದ ಆ ಸಾ.ಶ.33ರ ನೈಸನ್ 14 ರ ಸಾಯಂಕಾಲ, ಅವನು ಇನ್ನೊಂದು ಒಡಂಬಡಿಕೆಯ ಕುರಿತು, ನಾವು ಚರ್ಚಿಸಲಿರುವ ಏಳನೆಯ ಒಡಂಬಡಿಕೆಯ ಕುರಿತು ಮಾತಾಡಿದನು. ಅವನು ತನ್ನ ನಂಬಿಗಸ್ತ ಅಪೊಸ್ತಲರಿಗೆ ಹೇಳಿದ್ದು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ್ದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” (ಲೂಕ 22:20, 28-30)ತಂದೆಯು ಯೇಸುವಿನ ಸಂಗಡ ಮೆಲ್ಕಿಜೆದೇಕಿನ ರೀತಿಯ ಯಾಜಕನಾಗಿರುವಂತೆ ಒಡಂಬಡಿಕೆಯನ್ನು ಮಾಡಿದಂತೆಯೇ ಯೇಸು ತನ್ನ ನಿಷ್ಠಾವಂತರಾದ ಹಿಂಬಾಲಕರೊಂದಿಗೆ ವೈಯಕ್ತಿಕ ಒಡಂಬಡಿಕೆಯೊಂದನ್ನು ಮಾಡಿದನು.
20. ರಾಜ್ಯಕ್ಕಾಗಿ ಮಾಡಿದ ಒಡಂಬಡಿಕೆಯು ಯಾರೊಂದಿಗೆ ಮಾಡಲ್ಪಟ್ಟಿತು, ಮತ್ತು ಏಕೆ? (ದಾನಿಯೇಲ 7:18; 2 ತಿಮೊಥಿ 2:11-13)
20 11 ಜನ ಅಪೊಸ್ತಲರು ಯೇಸುವಿನ ಕಷ್ಟಗಳಲ್ಲಿ ಅವನೊಂದಿಗೆ ಇದ್ದದ್ದು ನಿಶ್ಚಯವಾಗಿತ್ತು ಮತ್ತು ಅವರು ಸಿಂಹಾಸನಗಳಲ್ಲಿ ಕುಳಿತುಕೊಳ್ಳುವರೆಂದು ಈ ಒಡಂಬಡಿಕೆ ತೋರಿಸಿತು. ಇದಲ್ಲದೆ, ನಂಬಿಗಸ್ತರಾಗಿ ಪರಿಣಮಿಸುವ ಎಲ್ಲಾ ಆತ್ಮಜನಿತ ಕ್ರೈಸ್ತರು ಸ್ವರ್ಗೀಯ ಸಿಂಹಾಸನಗಳಲ್ಲಿ ಕುಳಿತುಕೊಳ್ಳುವರೆಂದು ಪ್ರಕಟನೆ 3:21 ತೋರಿಸುತ್ತದೆ. ಹೀಗೆ, ಈ ಒಡಂಬಡಿಕೆಯು, ಸ್ವರ್ಗದಲ್ಲಿ ಯಾಜಕರಾಗಿ ಮತ್ತು ‘ಭೂಮಿಯ ಮೇಲೆ ಆಳಲು’ ಯೇಸುವಿನ ರಕ್ತದಿಂದ ಖರೀದಿಸಲ್ಪಟ್ಟ 1,44,000 ಮಂದಿಯಲ್ಲಿ ಎಲ್ಲರೊಂದಿಗೆ ಮಾಡಲ್ಪಟ್ಟಿದೆ. (ಪ್ರಕಟನೆ 1:4-6; 5:9,10; 20:6) ಯೇಸು ಅವರೊಂದಿಗೆ ಮಾಡಿದ ಒಡಂಬಡಿಕೆಯು ಅವರು ಅವನೊಂದಿಗೆ ಆಳಿಕೆಯಲ್ಲಿ ಭಾಗವಹಿಸುವಂತೆ ಅವರನ್ನು ಜೋಡಿಸುತ್ತದೆ. ಒಂದು ವಿಧದಲ್ಲಿ, ಕುಲೀನ ಕುಟುಂಬದ ವಧುವೊಬ್ಬಳು ಆಳುತ್ತಿರುವ ಅರಸನೊಬ್ಬನಿಗೆ ವಿವಾಹದಲ್ಲಿ ಜೊತೆ ಸೇರುವಂತೆ ಇದು ಇದೆ. ಹೀಗೆ, ಅವನ ರಾಜ್ಯಾಳಿಕೆಯಲ್ಲಿ ಭಾಗವಹಿಸುವ ಪದವಿಗೆ ಬರುತ್ತಾಳೆ.—ಯೋಹಾನ 3:29; 2 ಕೊರಿಂಥ 11:2; ಪ್ರಕಟನೆ 19:7,8.
21, 22. ಈ ಒಡಂಬಡಿಕೆಗಳು ಯಾವುದನ್ನು ಸಾಧಿಸಿವೆಯೋ ಆ ಕಾರಣದಿಂದ ಯಾವ ಆಶೀರ್ವಾದವನ್ನು ನಿರೀಕ್ಷಿಸಬಹುದು?
21 ಇದು, ವಿಧೇಯ ಮಾನವ ಕುಲಕ್ಕೆ ಯಾವ ಪ್ರಯೋಜನಗಳನ್ನು ತರುವುದು? ಯೇಸುವಾಗಲಿ, 1,44,000 ಮಂದಿಯಾಗಲಿ, “ಯಾವ ನಿಜ ಪರಿಹಾರವನ್ನು ಒದಗಿಸದ” ಧರ್ಮಶೀಲರಾದ ಕ್ರೂರರಾಜರಂತೆ ಇರರು. ಇದಕ್ಕೆ ಬದಲಾಗಿ ಯೇಸುವಿನ ವಿಷಯದಲ್ಲಿ, ಅವನು ‘ಸರ್ವ ವಿಷಯದಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದರೂ ಪಾಪ ಮಾತ್ರ ಮಾಡದ’ ಮಹಾಯಾಜಕನೆಂಬ ಆಶ್ವಾಸನೆ ನಮಗೆ ನೀಡಲ್ಪಡುತ್ತದೆ. ಹೀಗಿರುವುದರುಂದ, ಅವನು ಏಕೆ ಮಾನವ ಬಲಹೀನತೆಗಳ ವಿಷಯದಲ್ಲಿ “ಅನುತಾಪ” ತೋರಿಸಬಲ್ಲನೆಂದೂ “ಬೇರೆ ಕುರಿ”ಗಳು ಅಭಿಷಿಕ್ತ ಕ್ರೈಸ್ತರಂತೆಯೇ ಕ್ರಿಸ್ತನ ಮೂಲಕ ದೇವರ ಸಿಂಹಾಸನವನ್ನು ಏಕೆ ‘ವಾಕ್ಶಕ್ತಿಯ ಸರಳತೆ’ಯಿಂದ ಸಮೀಪಿಸಬಹುದೆಂದೂ ನಮಗೆ ತಿಳಿಯ ಸಾಧ್ಯವಿದೆ. ಹೀಗೆ, ಅವರೂ ‘ಕರುಣೆಹೊಂದಿ. . . . ದಯೆಯಿಂದ ಸಮಯೋಚಿತ ಸಹಾಯವನ್ನು’ ಪಡೆಯಬಹುದು.—ಇಬ್ರಿಯ 4:14-16; ಯೋಹಾನ 10:16.
22 ಯೇಸುವಿನೊಂದಿಗೆ ರಾಜ-ಯಾಜಕರಾಗುವ ಒಡಂಬಡಿಕೆಯಲ್ಲಿರುವವರು ಮಾನವ ಕುಲದ ಆಶೀರ್ವಾದದಲ್ಲಿಯೂ ಪಾಲಿಗರಾಗುವರು. ಪುರಾತನ ಕಾಲದ ಲೇವಿ ಕುಲದ ಯಾಜಕರು ಇಡೀ ಇಸ್ರಾಯೇಲ್ ಜನಾಂಗಕ್ಕೆ ಹೇಗೆ ಪ್ರಯೋಜನ ತಂದರೋ ಹಾಗೆಯೇ ಯೇಸುವಿನೊಂದಿಗೆ ಸ್ವರ್ಗೀಯ ಸಿಂಹಾಸನಗಳಿಂದ ಸೇವೆ ಮಾಡುವವರು ಭೂನಿವಾಸಿಗಳಿಗೆಲ್ಲಾ ನೀತಿಯಿಂದ ನ್ಯಾಯ ತೀರಿಸುವರು. (ಲೂಕ 22:30) ಆ ರಾಜ-ಯಾಜಕರು ಒಂದೊಮ್ಮೆ ಮಾನವರಾಗಿದ್ದುದರಿಂದ ಮಾನವರ ಅವಶ್ಯಕತೆಗಳಿಗೆ ಅವರು ಸಹಾನುತಾಪ ತೋರಿಸುವರು. ಸಂತಾನದ ದ್ವಿತೀಯ ಭಾಗವಾಗಿರುವ ಇವರು ಯೇಸುವಿನೊಂದಿಗೆ ಸಹಕರಿಸುತ್ತಾ “ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗು” ವಂತೆ ನೋಡುವರು.
23. ಈ ಒಡಂಬಡಿಕೆಗಳೊಂದಿಗೆ ಸಹಕರಿಸುವುದರಲ್ಲಿ ವ್ಯಕ್ತಿಗಳು ಹೇಗೆ ವರ್ತಿಸಬೇಕು?
23 ಮಾನವಕುಲದ ಮೇಲೆ ಈ ಆಶೀರ್ವಾದಗಳಲ್ಲಿ ಪಾಲಿಗರಾಗಿ, ಹೀಗೆ, ದೇವರ ಒಡಂಬಡಿಕೆಗಳಿಂದ ಪ್ರಯೋಜನ ಪಡೆಯ ಅಪೇಕ್ಷಿಸುವವರೆಲ್ಲರೂ ಈಗ ಅದಕ್ಕಾಗಿ ಆಮಂತ್ರಿಸಲ್ಪಡುತ್ತಿದ್ದಾರೆ. (ಪ್ರಕಚನೆ 22:17) ಇದಕ್ಕೆ ಒಂದು ಉತ್ತಮ ಹೆಜ್ಜೆಯು ಕರ್ತನ ಸಂಧ್ಯಾಭೋಜನಕ್ಕೆ ಹಾಜರಾಗುವುದೇ. ಇದು 1990 ರ ಎಪ್ರಿಲ್ 10ನೇ ಮಂಗಳವಾರ ನಡೆಯುವುದು. ಯೆಹೋವರ ಸಾಕ್ಷಿಗಳ ಸಭೆಗಳಲ್ಲಿ ಒಂದರಲ್ಲಿ ಹಾಜರಾಗಲು ಈಗಲೇ ಕ್ರಮ ಕೈಕೊಳ್ಳಿರಿ. ಅಲ್ಲಿ ನೀವು ದೈವಿಕ ಒಡಂಬಡಿಕೆಗಳ ಕುರಿತು ಹೆಚ್ಚು ಕಲಿತು ಅವುಗಳಿಂದ ಹೇಗೆ ಪ್ರಯೋಜನ ಪಡೆಯ ಸಾಧ್ಯವಿದೆಯೆಂದು ಇನ್ನೂ ಹೆಚ್ಚು ನೋಡುವಿರಿ.
[ಅಧ್ಯಯನ ಪ್ರಶ್ನೆಗಳು]
a “ಅತ್ಯಂತ ಸಾಹಸದ ಸುಧಾರಣೆಯೂ ಹೆಚ್ಚು ಬಡತನದ ರೈತರನ್ನು, ಅತ್ಯವಕಾಶ ಮತ್ತು ಕಡಿಮೆ ತೆರಿಗೆಯ ಕುಲೀನ ವರ್ಗವನ್ನು ಮತ್ತು ಸರಕಾರ ಮತ್ತು ಸಮಾಜದೊಂದಿಗೆ ಸರಿಯಾಗಿ ವಿಲೀನವಾಗದ ಮಧ್ಯಮ ವರ್ಗವನ್ನು ಬಿಟ್ಟು ಹೋಯಿತು. . . . ಈ ಜ್ಞಾನೋದಯದ ದಬ್ಬಾಳಿಕೆಯ ಎದುರಿಗೆ ಮುಂದೆ ಅಸಡ್ಡೆ ಮಾಡಸಾಧ್ಯವಿಲ್ಲದ ಪ್ರಶ್ನೆಗಳು ಬಂದು ನಿಂತರೂ ಆ ಯುಗದ ರಾಜಕೀಯ ಮತ್ತು ಆರ್ಥಿಕ ನಿಜತ್ವದೊಳಗೆ ಅದು ಯಾವ ನಿಜ ಪರಿಹಾರವನ್ನು ಒದಗಿಸದೆ ಹೋಯಿತು.”—ವೆಸ್ಟರ್ನ್ ಸಿವಿಲೈಸೇಶನ್—ಇಟ್ಸ್ ಜೆನಿಸಿಸ್ ಎಂಡ್ ಡೆಸ್ಟಿನಿ: ದ ಮಾಡರ್ನ್ ಹೆರಿಟೆಜ್.
b ಯೇಸು ಹೊಸ ಒಡಂಬಡಿಕೆಯಲ್ಲಿ ಯಾವ ಪಕ್ಷವೂ ಆಗಿರುವುದಿಲ್ಲ. ಅವನು ಅದರ ಮಧ್ಯಸ್ಥನಾಗಿದ್ದು ಪಾಪರಹಿತನಾದ. ಕ್ಷಮಾಪಣೆ ಅಗತ್ಯವಿಲ್ಲದ ವ್ಯಕ್ತಿಯಾಗಿದ್ದಾನೆ. ಇದಲ್ಲದೆ ಅವನು ಅದರಲ್ಲಿ ರಾಜ-ಯಾಜಕನಾಗುವ ಅಗತ್ಯವಿಲ್ಲ. ಏಕೆಂದರೆ, ಅವನು ದಾವೀದನ ಒಡಂಬಡಿಕೆಯಲ್ಲಿ ರಾಜನೂ ಮೆಲ್ಕಿಜೆದೇಕನಂಥ ಯಾಜಕನೂ ಆಗಿದ್ದಾನೆ.
ನಿಮಗೆ ನೆನಪಿದೆಯೋ?
▫ ಕೀರ್ತನೆ 110:4 ಒಡಂಬಡಿಕೆ ಏಕೆ ಮಾಡಲ್ಪಟ್ಟಿತು?
▫ ಹೊಸ ಒಡಂಬಡಿಕೆಯಲ್ಲಿ ಯಾರಿದ್ದಾರೆ, ಮತ್ತು ಒಂದು ರಾಜ-ಯಾಜಕ ಜನಾಂಗವನ್ನು ಹುಟ್ಟಿಸಲು ಅದು ಹೇಗೆ ಸಹಾಯ ಮಾಡಿತು?
▫ ಯೇಸು ತನ್ನ ಹಿಂಬಾಲಕರೊಂದಿಗೆ ಒಂದು ವೈಯಕ್ತಿಕ ಒಡಂಬಡಿಕೆಯನ್ನು ಏಕೆ ಮಾಡಿದನು?
▫ ನಾವು ಚರ್ಚಿಸುವ ಏಳು ಒಡಂಬಡಿಕೆಗಳಾವುವು?
[ಪುಟ 17ರಲ್ಲಿರುವಚಿತ್ರ]
(For fully formatted text, see publication)
ಏದೆನಿನ ಒಡಂಬಡಿಕೆ ಆದಿಕಾಂಡ 3:15
ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆ
ಧರ್ಮಶಾಸ್ತ್ರದೊಡಂಬಡಿಕೆ
ದಾವೀದನೊಂದಿಗಿನ ರಾಜ್ಯ ಒಡಂಬಡಿಕೆ
ಮೆಲ್ಕಿಜೆದೇಕನ ತರಹದ ಯಾಜಕನಾಗಲು ಒಡಂಬಡಿಕೆ
ಪ್ರಧಾನ ಸಂತಾನ
ದ್ವಿತೀಯ ಸಂತಾನ
ಅನಂತ ಆಶೀರ್ವಾದಗಳು
[ಪುಟ 19ರಲ್ಲಿರುವಚಿತ್ರ]
(For fully formatted text, see publication)
ಏದೆನಿನ ಒಡಂಬಡಿಕೆ ಆದಿಕಾಂಡ 3:15
ಅಬ್ರಹಾಮನೊಂದಿಗಿನ ಒಡಂಬಡಿಕೆ
ಧರ್ಮಶಾಸ್ತ್ರದೊಡಂಬಡಿಕೆ
ಹೊಸ ಒಡಂಬಡಿಕೆ
ದಾವೀದನೊಂದಿಗಿನ ರಾಜ್ಯ ಒಡಂಬಡಿಕೆ
ಮೆಲ್ಕಿಜೆದೇಕನ ತರಹದ ಯಾಜಕನಾಗಲು ಒಡಂಬಡಿಕೆ
ಪ್ರಧಾನ ಸಂತಾನ
ಸ್ವರ್ಗೀಯ ರಾಜ್ಯಕ್ಕಾಗಿ ಒಡಂಬಡಿಕೆ
ದ್ವಿತೀಯ ಸಂತಾನನ
ಅನಂತ ಆಶೀರ್ವಾದಗಳು