ರಾಜ್ಯ ಘೋಷಕರ ವರದಿ
ಬರ್ಮದಲ್ಲಿ ‘ಪೈರು ಮಾಗಿದೆ’
ರಮಣೀಯ ದೇಶವಾದ ಬರ್ಮದಲ್ಲಿ 1500ಕ್ಕೂ ಹೆಚ್ಚು ರಾಜ್ಯ ಪ್ರಚಾರಕರಿದ್ದಾರೆ. ಅವರ ಇತ್ತೀಚಿಗಿನ ಸಮ್ಮೇಲನಗಳು ಬರ್ಮೀಸ್, ಲುಶಯಿ ಮತ್ತು ಹಕಚಿನ್ ಭಾಷೆಗಳಲ್ಲಿ ನಡೆದವು. ಒಟ್ಟು 2273 ಜನರು ಹಾಜರಿದ್ದರು. ಈ ಕೆಳಗಿನ ಅನುಭವಗಳು ಕುರಿಸದೃಶ ಜನರಿಗೆ ರಾಜ್ಯ ಸಂದೇಶದಲ್ಲಿರುವ ಆಸಕ್ತಿಯನ್ನು ಸೂಚಿಸಿ, ಯೋಹಾನನು ದರ್ಶನದಲ್ಲಿ ನೋಡಿದಂತೆ, “ಭೂಮಿಯ ಪೈರು ಮಾಗಿ ಒಣಗಿದೆ” ಎಂಬದನ್ನು ಒತ್ತಿಹೇಳುತ್ತದೆ.—ಪ್ರಕಟನೆ 14:15.
ಇದು ಡಿನಾಮ್ನಲ್ಲಿ ನಡೆಯಿತು
◻ ಮಾಟುಪಿಯಲ್ಲಿ ಮನೆಮನೆ ಸೇವೆ ಮಾಡುತ್ತಿದ್ದಾಗ ಒಬ್ಬ ವಿಶೇಷ ಪಯನೀಯರನು ನರಕದ ವಿಷಯ ವಿಶೇಷವಾಗಿ ತಿಳಿಯ ಬಯಸಿದ ವಿದ್ಯಾರ್ಥಿಯೊಬ್ಬನನ್ನು ಭೇಟಿಯಾದನು. ಬೈಬಲಿನ ನರಕ ಮಾನವ ಕುಲದಸಾಮಾನ್ಯ ಸಮಾಧಿ ಎಂದು ವಿವರಿಸಲ್ಪಟ್ಟಾಗ ಅವನಿಗೆ ತುಂಬಾ ಆಶ್ಚರ್ಯವಾಯಿತು. ಇದನ್ನು ಅವನು ತನ್ನಷ್ಟಕ್ಕೆ ಇಟ್ಟುಕೊಳ್ಳಲಿಲ್ಲ. ತನ್ನ ಹಳ್ಳಿಯಾದ ಡಿನಾಮ್ನಲ್ಲಿ ತನ್ನ ಸಂಬಂಧಿಗಳಿಗೆ ತಿಳಿಸಲಿಚ್ಚಿದನು. ಶಾಲಾ ರಜಾದಿನಗಳಲ್ಲಿ ಹಳ್ಳಿಗೆ ಹೋದ ಅವನು ನರಕದ ವಿಷಯವಾದಸತ್ಯವನ್ನು ಅಲ್ಲಿ ಹರಡಿಸಿದನು. ಅವನ ಭಾವ ಇದರ ಬಗ್ಗೆ ಹೆಚ್ಚು ತಿಳಿಯಲು ತುಂಬಾ ಆಸಕ್ತಿ ತೋರಿಸಿ ವಿದ್ಯಾರ್ಥಿಯೊಂದಿಗೆ, ತಾನೇ ಇದನ್ನು ಪಯನೀಯರನೊಂದಿಗೆ ಮಾತಾಡಲಿಕ್ಕಾಗಿ ಮಾಟುಪಿಗೆ ಹೋದನು. ಅವನು ಅಲ್ಲಿ ವಾರಗಳನ್ನು ಕಳೆದು ಪಯನೀಯರನ ಸಂಗಡ ಅಧ್ಯಯನಿಸಿದನು. ಆ ಬಳಿಕ ಹಳ್ಳಿಗೆ ತಾನು ಕೊಟ್ಟ ಎರಡನೆಯ ಭೇಟಿಯ ಸಮಯದಲ್ಲಿ, ಪಯನೀಯರನು ತನ್ನ ಹಳ್ಳಿಗೆ ಅಲ್ಲಿ ಅನೇಕ ಆಸಕ್ತರು ಇರುವ ಕಾರಣ ಬರುವಂತೆ ಒತ್ತಾಯ ಪಡಿಸಿದನು. ಮೂವರು ಪಯನೀಯರರೂ ಸಂತೋಷದಿಂದ ಆಮಂತ್ರಣ ಸ್ವೀಕರಿಸಿದರು. ಡಿನಾಮನ್ನು ಮುಟ್ಟಲು 12 ಕಠಿಣ ತಾಸುಗಳು ಹಿಡಿದವು.
ಪಯನೀಯರರು ಮುಟ್ಟಿದ ದಿನ ಡಿನಾಮ್ನಲ್ಲಿ ಒಂದು ಶವಸಂಸ್ಕಾರ ಇದದ್ದರಿಂದ ಅಕ್ಕಪಕ್ಕದ ಹಳ್ಳಿಯವರು ಈ ಬೈಬಲ್ ನರಕದ ಕುರಿತು ಹೆಚ್ಚು ತಿಳಿಯಲು ಅಲಿದ್ದರು. ಅವರು ಈ ಪಯನೀಯರರನ್ನು ನೋಡಲು ಧಾವಿಸಿ ಬಂದರು. ಬೈಬಲಿನ ಚರ್ಚೆ ರಾತ್ರಿ 7 ರಿಂದ 11 ರ ವರೆಗೆ ನಡೆಯಿತು. 11 ಘಂಟೆಗೆ ವಿವೇಚನೆಯ ವ್ಯಕ್ತಿಯೊಬ್ಬನು ಪಯನೀಯರರು ಮುಂದಿನ ದಿನಕ್ಕಾಗಿ ತುಸು ವಿಶ್ರಮಿಸಿಕೊಳ್ಳುವಂತೆ ಚರ್ಚೆ ನಿಲ್ಲಿಸಿದನು. ಮರುದಿನ ಬೆಳಿಗ್ಗೆ ಅವರು ಸುಮಾರು ಏಳು ಗಂಟೆಗೆ ಚರ್ಚೆ ಆರಂಭಿಸಿ ರಾತ್ರಿ ಹತ್ತು ಗಂಟೆಯ ತನಕ ಮುಂದುವರಿಸಿದರು. ಊಟಕ್ಕೆ ಮಾತ್ರ ತುಸು ಸಮಯ ತಕ್ಕೊಳ್ಳಲಾಯಿತು. ಪಯನೀಯರರು ಹಳ್ಳಿಯಿಂದ ಹೊರಟಾಗ ಅವರು ಹಿಂದೆ ಬಂದುತಮ್ಮೊಂದಿಗೆ ಹೆಚ್ಚು ಸಮಯ ತಕ್ಕೊಳ್ಳುವಂತೆ ಕುರಿಸದೃಶ ಜನರು ಕೇಳಿಕೊಂಡರು. ಇಂತಹ ಶಿಕ್ಷಣ ಸಾಧ್ಯ ಜನರಿಗೆ ಅಮೂಲ್ಯವಾದ ರಾಜ್ಯದ ಸುವಾರ್ತೆಯ ಮೂಲಕ ಸಹಾಯ ನೀಡುವದು ಎಂಥ ಸುಯೋಗ. ಹೌದು, ಬರ್ಮದಲ್ಲಿ ಪೈರು ನಿಜವಾಗಿಯೂ ‘ಮಾಗಿದೆ.’!
ತ್ಯಜಿಸಲ್ಪಟ್ಟ ಪುಸ್ತಕದಿಂದ ಸತ್ಯ ದೊರೆತದ್ದು
◻ ಬರ್ಮದಲ್ಲಿ ಒಬ್ಬನು ಹಳೆಯ ಪುಸ್ತಕ ಮತ್ತು ಪತ್ರಿಕೆಗಳನ್ನು ಮಾರುತ್ತಿದ್ದ ತನ್ನ ಮಿತ್ರನಿಗೆ ಭೇಟಿ ನೀಡಿದಾಗ ಕಸಕಾಗದಗಳ ನಡುವೆ ಒಂದು ಹಳೆಯ ಪುಸ್ತಕವನ್ನು ಕಂಡನು. ಅದನ್ನು ಹೆಕ್ಕಿ ಓದಲಾರಂಭಿಸಿದನು. ಕೂಡಲೇ ಓದುವದರಲ್ಲೀ ಮಗ್ನನಾದನು. ಅದು ವಾಚ್ಟವರ್ ಸೊಸೈಟಿಯ ಲಿಸ್ನಿಂಗ್ ಟು ದ ಗ್ರೇಟ್ ಟೀಚರ್ ಪುಸ್ತಕವಾಗಿತ್ತು. ಹೆಚ್ಚು ಪುಸ್ತಕಗಳನ್ನು ಪಡೆಯಲು ಅವನು ಸೊಸೈಟಿಯ ಶಾಖಾ ಆಫೀಸಿಗೆ ಬರೆದನು. ಬ್ರಾಂಚ್ ಒಡನೆಯೇ ಒಬ್ಬ ಪಯನೀಯರನನ್ನು ಅಲ್ಲಿಗೆ ಕಳುಹಿಸಿತು. ಅವನೊಂದಿಗೆ ಅಧ್ಯಯನ ಆರಂಭವಾಯಿತು. ಕೆಲವೇ ಅಧ್ಯಯನಗಳ ಅನಂತರ ಅವನು ಸತ್ಯವನ್ನು ಗುರುತಿಸಿ ತನ್ನ ದುರಭ್ಯಾಸಗಳ ಜೀವನವನ್ನು ಶುಚಿಗೊಳಿಸಿ ಕೊನೆಗೆ ಹಿಂದು ಧರ್ಮದ ವಿಗ್ರಹಗಳನ್ನು ತೆಗೆದು ಬಿಟ್ಟನು. ಸ್ವಲ್ಪ ಸಮಯದಲ್ಲಿ ಅವನೂ ಹಿರಿಯ ಮಗಳೂ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಹೊಂದಿದರು. ಈಗ ಅವನು ನಿಯತಕ್ರಮದ ಪಯನೀಯರನು.
ಬರ್ಮದ ಫಲಭರಿತ ಹೊಲದಲ್ಲಿ “ಬೆಳೆಯು ಬಹಳ, ಕೆಲಸದವರು ಸ್ವಲ್ಪ” ಎಂಬದು ಸತ್ಯ.—ಮತ್ತಾಯ 9:37, 38. (w89 2/1)