ಯೌವನದಿಂದಲೂ ನನ್ನ ಭರವಸೆಯಾಗಿರುವ ಯೆಹೋವನು
ಬ್ಯಾಸಿಲ್ ಟ್ಸಾಟಸ್ರಿಂದ ಹೇಳಲ್ಪಟ್ಟ ಪ್ರಕಾರ
ಇಸವಿ 1920 ಆಗಿತ್ತು; ಸ್ಥಳ, ಗ್ರೀಸ್ನ ಸುಂದರವಾದ ಪೆಲೊಪೊನೀಸಸ್ನಲ್ಲಿನ ಆರ್ಕೇಡಿಯ ಗುಡ್ಡಗಳು. ಲೋಕವನ್ನೇ ಬಿರುಸಾಗಿ ಹಬ್ಬುತ್ತಿದ್ದ ಭೀಕರ ಸ್ಪ್ಯಾನಿಷ್ ಇನ್ಫ್ಲುಯೆನ್ಸದಿಂದ ಗಂಭೀರವಾಗಿ ಅಸ್ವಸ್ಥಗೊಂಡವನಾಗಿ, ನಾನು ಹಾಸಿಗೆ ಹಿಡಿದಿದ್ದೆ.
ಪ್ರತಿ ಸಲ ಚರ್ಚ್ ಗಂಟೆ ಹೊಡೆದಾಗ, ಇನ್ನೊಂದು ಬಲಿಯ ಮರಣವನ್ನು ಅದು ಪ್ರಕಟಿಸುತ್ತಿದ್ದದಾಗಿ ನಾನು ತಿಳಿಯುತ್ತಿದ್ದೆ. ಮುಂದಿನ ಸರತಿಯು ನನ್ನದೋ? ಸುಯೋಗದಿಂದ, ನಾನು ಗುಣಹೊಂದಿದೆ, ಆದರೆ ಲಕ್ಷಾಂತರ ಮಂದಿ ಪಾರಾಗಲಿಲ್ಲ. ನಾನಾಗ ಬರೇ ಎಂಟು ವರ್ಷ ಪ್ರಾಯದವನಾಗಿದ್ದಾಗ್ಯೂ, ಈ ಭೀತಿದಾಯಕ ಅನುಭವವು ನನ್ನ ಸ್ಮರಣೆಯಲ್ಲಿ ಇನ್ನೂ ಸುಸ್ಪಷ್ಟವಾಗಿಗಿ ಉಳಿದದೆ.
ಆರಂಭದ ಆತ್ಮಿಕ ಚಿಂತನೆಗಳು
ಸ್ಪಲ್ಪ ಸಮಯದ ಅನಂತರ, ಅಜ್ಜ ತೀರಿಕೊಂಡರು. ಶವ ಸಂಸ್ಕಾರವಾದ ಮೇಲೆ ನನ್ನ ತಾಯಿ, ನನ್ನ ತಂಗಿ ಮತ್ತು ನನ್ನನ್ನು ನಮ್ಮ ಮನೆಯ ಬಾಲ್ಕನಿಯಲ್ಲಿ ಜತೆಗೂಡಿದ ನೆನಪು ನನಗಿದೆ. ನಿಸ್ಸಂದೇಹವಾಗಿ ನಮ್ಮ ದುಃಖವನ್ನು ಶಮನಗೊಳಿಸಲು ಪ್ರಯತ್ನಿಸುತ್ತಾ, ಮೆಲ್ಲನೆ ಆಕೆಯಂದದ್ದು: “ಒಳ್ಳೇದು, ಮಕ್ಕಳೇ, ನಾವೆಲ್ಲರೂ ಮುದುಕರಾಗಬೇಕು ಮತ್ತು ಸಾಯಬೇಕಾಗಿದೆ.”
ಅವಳು ಅದನ್ನು ಅಷ್ಟು ಮೃದುವಾಗಿ ಹೇಳಿದಳಾದರೂ, ಆಕೆಯ ಮಾತುಗಳು ನನ್ನನ್ನು ಕದಡಿಸಿಬಿಟ್ಟವು. ‘ಎಷ್ಟು ದುಃಖಕರ! ಎಷ್ಟು ಅನ್ಯಾಯ!’ ಎಂದು ನೆನಸಿದೆ ನಾನು. ಆದರೆ ತಾಯಿ ಇದನ್ನು ಕೂಡಿಸಿದಾಗ ನಾವಿಬ್ಬರೂ ಗೆಲವುಗೊಂಡೆವು: “ಕರ್ತನು ಪುನಃ ಆಗಮಿಸುವಾಗಲಾದರೋ, ಅವನು ಮೃತರನ್ನು ಪುನರುತ್ಥಾನಗೊಳಿಸುವನು, ಮತ್ತು ಆಮೇಲೆ ನಾವು ಎಂದೂ ಸಾಯಲಾರೆವು!” ಅಹಾ, ಅದು ಸಾಂತ್ವನಕರವಾಗಿತ್ತು!
ಅಂದಿನಿಂದ ಆ ಸಂತೋಷದ ಸಮಯವು ಯಾವಾಗ ಬರಬಹುದು ಎಂದು ಕಂಡುಕೊಳ್ಳುವುದರಲ್ಲಿ ನಾನು ಅತೀವ ಆಸಕ್ತನಾದೆನು. ಅನೇಕ ಜನರನ್ನು ನಾನು ಕೇಳಿದೆನು, ಆದರೆ ಯಾರೂ ನನಗದನ್ನು ಹೇಳಶಕ್ತರಾಗಲಿಲ್ಲ, ಮಾತ್ರವೇ ಅಲ್ಲ, ಆ ವಿಷಯ ಚರ್ಚಿಸುವುದರಲ್ಲಿ ಸಹ ಯಾರಿಗೂ ಆಸಕ್ತಿಯಿಲ್ಲದಂತೆ ತೋರಿತು.
ಒಂದು ದಿನ ನಾನು ಸುಮಾರು 12 ವಯಸ್ಸಿನವನಾಗಿದ್ದಾಗ, ನನ್ನ ತಂದೆಗೆ ಅಮೆರಿಕದಲ್ಲಿ ಜೀವಿಸುತ್ತಿದ್ದ ಅವರ ಅಣನ್ಣಿಂದ ಒಂದು ಪುಸ್ತಕವು ಬಂತು. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ಅದರ ಶೀರ್ಷಿಕೆಯು ದ ಹಾರ್ಪ್ ಆಫ್ ಗಾಡ್ ಎಂದಾಗಿತ್ತು. ಅನುಕ್ರಮಣಿಕೆಯನ್ನು ನಾನು ಕೆಳಗಿನ ತನಕ ನೋಡಿದೆ ಮತ್ತು “ನಮ್ಮ ಕರ್ತನ ಪುನರಾಗಮನ” ಅಧ್ಯಾಯವನ್ನು ಕಂಡಾಗ ನನ್ನ ಕಣ್ಣುಗಳು ಸಂತಸದಿಂದ ಬೆಳಗಿದವು. ಮಹಾ ಆಸಕ್ತಿಯಿಂದ ನಾನದನ್ನು ಓದಿದೆನು, ಆದರೆ ಪುನರಾಗಮನದ ಯಾವ ವರ್ಷವೂ ಕೊಡಲ್ಪಡದೆ ಇದದ್ದರಿಂದ ನಾನು ನಿರಾಶೆಗೊಂಡೆನು. ಆದರೆ ಅದು ತುಂಬಾ ದೂರವಿಲ್ಲ ಎಂಬದಾಗಿ ಪುಸ್ತಕವು ಸೂಚಿಸಿತ್ತು.
ಅಷ್ಟರಲ್ಲಿ ನಾನು ಹೈಸ್ಕೂಲನ್ನು ಹಾಜರಾಗಲಾರಂಭಿಸಿದೆ ಮತ್ತು ನನ್ನ ಅಧ್ಯಯನಗಳಲ್ಲಿ ತಲ್ಲೀನನಾದೆನು. ಆಗಿಂದಾಗಲಾದರೋ ನನ್ನ ಅಮೆರಿಕದ ದೊಡ್ಡಪ್ಪ ದ ವಾಚ್ಟವರ್ ನ ಪ್ರತಿಗಳನ್ನು ಕಳುಹಿಸುತ್ತಿದ್ದರು, ಅವುಗಳನ್ನೋದುವುದರಲ್ಲಿ ನಾನು ಆನಂದಿಸುತ್ತಿದ್ದೆನು. ಅಲ್ಲದೆ ಪ್ರತಿ ಭಾನುವಾರ, ಸಂಡೇ ಸ್ಕೂಲನ್ನು ನಾನು ಹಾಜರಾಗುತ್ತಿದ್ದೆ, ಅಲ್ಲಿ ಬಿಷಪರು ಆಗಿಂದಾಗ್ಗೆ ಬಂದು ನಮ್ಮೊಂದಿಗೆ ಮಾತಾಡುತ್ತಿದ್ದರು.
ಒಂದು ವಿಶಿಷ್ಟ ಆದಿತ್ಯವಾರ, ಬಿಷಪರು ಬಹಳವಾಗಿ ರೇಗಿದ್ದರು ಮತ್ತು ಅಂದದ್ದು: “ಸಂದರ್ಶಕರು ನಮ್ಮ ಪಟ್ಟಣವನ್ನು ಪಾಷಂಡಿ ಪ್ರಕಾಶನಗಳಿಂದ ತುಂಬಿಸುತ್ತಿದ್ದಾರೆ.” ಅನಂತರ ಅವರು ದ ವಾಚ್ಟವರ್ ನ ಪ್ರತಿಯೊಂದನ್ನು ಎತ್ತಿ ಹಿಡಿದು, ಅರಚಿದ್ದು: “ನಿಮ್ಮಲ್ಲಿ ಯಾರಾದರೂ ಮನೆಯಲ್ಲಿ ಇಂಥ ಪ್ರಕಾಶನಗಳನ್ನು ಕಂಡರೆ, ಅವನ್ನು ಚರ್ಚಿಗೆ ತನ್ನಿರಿ ಮತ್ತು ನಾನು ಅವನ್ನು ಸುಟ್ಟುಬಿಡುವೆನು.”
ಅವರ ಸರ್ವದ ನಾದವು ನನ್ನನ್ನು ಕಲಕಿತು, ಆದರೆ ಅವನ ಪ್ರತಿವೈರ ಭಾವವು ನನ್ನನ್ನು ಇನ್ನಷ್ಟು ಹೆಚ್ಚು ಕಲಕಿಸಿತು. ಆದುದರಿಂದ ನಾನು ಅವರ ವಿನಂತಿಯನ್ನು ಪಾಲಿಸಲಿಲ್ಲ. ಆದರೂ, ನಾನು ನನ್ನ ದೊಡ್ಡಪ್ಪಗೆ ಬರೆದು ಅವರು ಇನ್ನು ಮುಂದೆ ವಾಚ್ ಟವರ್ ಪ್ರಕಾಶನಗಳನ್ನು ಕಳುಹಿಸುವುದು ಬೇಡವೆಂದು ಹೇಳಿದೆ. ಆದರೂ, ಕ್ರಿಸ್ತನ ಪುನರಾಗಮನದ ವಿಷಯವಾಗಿ ನಾನು ಪರ್ಯಾಲೋಚಿಸುತ್ತಾ ಇದ್ದೆನು.
ಆತ್ಮಿಕ ಹಸಿವು ಬೆಳೆಯುತ್ತದೆ
ಬೇಸಗೆಯ ರಜಾಕಾಲವು ಬಂದಾಗ, ನನ್ನ ಬಟ್ಟೆಗೆಳನ್ನು ತುಂಬಲು ನನ್ನ ಸೂಟ್ಕೇಸನ್ನು ಹೊರದೆಗೆದೆ. ಅದರ ಅಡಿಯಲ್ಲಿ ವಾಚ್ ಟವರ್ ಸೊಸೈಟಿಯಿಂದ ಮುದ್ರಿಸಲ್ಪಟ್ಟ ಮೂರು ಕಿರುಪುಸ್ತಕಗಳು ಇದ್ದವು. ಹೇಗೋ ನಾನದನ್ನು ಹಿಂದೆ ಗಮನಿಸಿರಲಿಲ್ಲ. ಒಂದರ ಹೆಸರು ವೇರ್ ಆರ್ ದ ಡೆಡ್? ಎಂದಾಗಿತ್ತು.
‘ಅದು ಆಸಕ್ತಿಭರಿತವಾಗಿ ಕಾಣುತ್ತದೆ,’ ಎಂದು ನಾನು ನೆನಸಿದೆ. ಬಿಷಪರ ಎಚ್ಚರಿಕೆಯನ್ನು ನೆನಪಿಸಿದೆನಾದರೂ, ಅದರಲ್ಲಿ ಅಡಕವಾಗಿವೆಯೆಂದು ನಾನು ನೆನಸಿದ್ದ ತಪ್ಪುಗಳನ್ನು ಕಂಡುಕೊಳ್ಳಲು, ಕಿರುಪುಸ್ತಕಗಳನ್ನು ಜಾಗ್ರತೆಯಿಂದ ಓದಲು ನಾನು ನಿರ್ಣಯಿಸಿದೆನು. ನಾನು ಪೆನ್ಸಿಲ್ ತಕ್ಕೊಂಡು ಜಾಗ್ರತೆಯಿಂದ ನನ್ನ ಅನ್ವೇಷಣೆಯನ್ನಾರಂಭಿಸಿದೆನು. ನನ್ನ ಆಶ್ಚರ್ಯಕ್ಕೆ, ಕಿರುಪುಸ್ತಕಗಳಲ್ಲಿದ್ದ ಪ್ರತಿಯೊಂದು ವಿಷಯವೂ ನ್ಯಾಯಸಮ್ಮತವಾಗಿ ಕಂಡಿತು, ಮತ್ತು ವಾಚಕನು ಬೈಬಲನ್ನು ಪರೀಕ್ಷಿಸುವಂತೆ ಪ್ರತಿಯೊಂದು ಹೇಳಿಕೆಗೆ ವಚನಾಧಾರಗಳು ಕೊಡಲ್ಪಟ್ಟಿದ್ದವು.
ನಮ್ಮಲ್ಲಿ ಬೈಬಲು ಇಲ್ಲದಿದದ್ದರಿಂದ, ಕೊಡಲ್ಪಟ್ಟ ವಚನಗಳು ಲೇಖಕರ ಹೇತುವನ್ನು ಪೂರೈಸಲಿಕ್ಕಾಗಿ ತಪ್ಪಾಗಿ ಅನ್ವಯಿಸಲ್ಪಟ್ಟಿವೆಯೋ ಎಂದು ನಾನು ಯೋಚಿಸಿದೆ. ಆದುದರಿಂದ ನನ್ನ ದೊಡ್ಡಪ್ಪನಿಗೆ ಬರೆದು, ಒಂದು ಸಂಪೂರ್ಣ ಬೈಬಲಿನ ಪ್ರತಿಯನ್ನು ಕಳುಹಿಸುವಂತೆ ಕೇಳಿಕೊಂಡೆನು. ಅವರು ತಡವಿಲ್ಲದೆ ಕಳುಹಿಸಿದರು. ನಾನದನ್ನು ನೇರವಾಗಿ ಎರಡು ಸಾರಿ ಓದಿಮುಗಿಸಿದೆ, ಮತ್ತು ನನಗೆ ಅರ್ಥವಾಗದ ಅನೇಕ ವಿಷಯಗಳು ಅದರಲಿದ್ಲರ್ದೂ, ದಾನಿಯೇಲ ಮತ್ತು ಪ್ರಕಟನೆ ಪುಸ್ತಕಗಳಿಂದ ನನ್ನ ಕುತೂಹಲ ಕೆರಳಿಸಲ್ಪಟ್ಟಿತು. ಅವು ಮುಂತಿಳಿಸಿದ ವಿಷಯಗಳನ್ನು ತಿಳುಕೊಳ್ಳಲು ನಾನು ಬಯಸಿದೆನು, ಆದರೆ ನನಗೆ ಸಹಾಯ ಮಾಡುವವರು ಯಾರೂ ಅಲ್ಲಿರಲಿಲ್ಲ.
ಇಸವಿ 1929 ರಲ್ಲಿ ನಾನು ಶಾಲೆ ಬಿಟ್ಟೆನು, ಅನಂತರ ತುಸು ಸಮಯದೊಳಗೆ ಅಮೆರಿಕದ ನನ್ನ ದೊಡ್ಡಪ್ಪ ದ ವಾಚ್ಟವರ್ ಪ್ರತಿಗಳನ್ನು ಪುನಃ ನನಗೆ ಕಳುಹಿಸಿದರು. ನಾನು ಅವುಗಳಲ್ಲಿ ಹೆಚ್ಚೆಚ್ಚಾಗಿ ಆನಂದಿಸ ತೊಡಗಿದೆ ಮತ್ತು ಅವನ್ನು ನನಗೆ ಕ್ರಮವಾಗಿ ಕಳುಹಿಸುವಂತೆ ಕೇಳಿಕೊಂಡೆ. ಪತ್ರಿಕೆಗಳಿಂದ ನಾನು ಕಲಿಯುತ್ತಿದ್ದ ಭವಿಷ್ಯತ್ತಿನ ನಿರೀಕ್ಷೆಯ ಕುರಿತು ಇತರರಿಗೆ ತಿಳಿಸಲೂ ನಾನು ಪ್ರಾರಂಭಿಸಿದೆ. ಆದರೆ ಆಗ ನನ್ನ ಜೀವನವು ನಾಟಕೀಯವಾಗಿ ಮಾರ್ಪಟ್ಟಿತು.
ಬರ್ಮಾದಲ್ಲಿ ಆತ್ಮಿಕ ಪ್ರಗತಿ
ನನ್ನ ತಾಯಿಯ ಸಹೋದರರು ಬರ್ಮಾ (ಈಗ ಮ್ಯಾನ್ಮಾರ್) ಗೆ ವಲಸೆ ಹೋಗಿದ್ದರು, ಮತ್ತು ನಾನು ಅವರನ್ನು ಜತೆಗೂಡಿದ್ದಲ್ಲಿ ಅದು ನನ್ನ ಅನುಭವವನ್ನು ವಿಸ್ತರಿಸುವುದೆಂದೂ ಮತ್ತು ಪ್ರಾಯಶಃ ನನಗಾಗಿ ವ್ಯಾಪಾರ ಸಂದರ್ಭಗಳನ್ನು ತೆರೆಯಬಹುದೆಂದೂ ಕುಟುಂಬವು ನಿರ್ಧರಿಸಿತು. ಪೌರಸ್ತ್ಯ ದೇಶಗಳು ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದ್ದವು, ಮತ್ತು ಹೀಗೆ ಅಲ್ಲಿಗೆ ಹೋಗುವ ಪ್ರತೀಕ್ಷೆಯಿಂದಾಗಿ ಪುಳಕಿತಗೊಂಡೆನು. ನನ್ನ ದೊಡ್ಡಪ್ಪನಿಂದ ದ ವಾಚ್ಟವರ್ ನ್ನು ಬರ್ಮಾದಲ್ಲೂ ನಾನು ಪಡೆಯುತ್ತಲೇ ಇದ್ದೆನು, ಆದರೆ ಆಗ ಬೈಬಲ್ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು ವೈಯಕ್ತಿಕವಾಗಿ ನಾನೆಂದೂ ಸಂಧಿಸಿರಲಿಲ್ಲ.
ಒಂದು ದಿನ ದ ವಾಚ್ಟವರ್ ನಲ್ಲಿ ಲೈಟ್ ಪುಸ್ತಕಗಳ ಒಂದು ಪ್ರಕಟನೆಯನ್ನು ಕಂಡು ನಾನು ರೋಮಾಂಚಗೊಂಡೆನು, ಅವು ಎರಡು ಸಂಪುಟಗಳುಳ್ಳದ್ದಾಗಿದ್ದು ಬೈಬಲಿನ ಪ್ರಕಟನೆ ಪುಸ್ತಕವನ್ನು ವಿವರಿಸಿದ್ದವು. ಅದಲ್ಲದೆ, ಬರ್ಮಾದಲ್ಲಿ ಬೈಬಲ್ ವಿದ್ಯಾರ್ಥಿಗಳ ಚಟುವಟಿಕೆಯು, ಬೊಂಬಾಯಿಯಲ್ಲಿ ನೆಲೆಸಿದ್ದ ವಾಚ್ ಟವರ್ ಸೊಸೈಟಿಯ ಇಂಡಿಯ ಬ್ರಾಂಚ್ನಿಂದ ನಡಿಸಲ್ಪಡುತ್ತಿತ್ತು ಎಂದು ನನಗೆ ತಿಳಿಯಿತು. ಲೈಟ್ ಪುಸ್ತಕಗಳಿಗಾಗಿ ವಿನಂತಿಸಲು ಮತ್ತು ಭಾರತದ ಬೈಬಲ್ ವಿದ್ಯಾರ್ಥಿಗಳನ್ನು ಬರ್ಮಾದಲ್ಲಿ ಸಾರುವುದಕ್ಕಾಗಿ ಕಳುಹಿಸಲು ನಾನು ಕೂಡಲೆ ಬರೆದೆನು.
ಪುಸ್ತಕಗಳು ತಡವಿಲ್ಲದೆ ಅಂಚೆಯ ಮೂಲಕ ಬಂದವು, ಮತ್ತು ಸುಮಾರು ಒಂದು ವಾರದ ತರುವಾಯ ಸ್ಥಳೀಕ ಬರ್ಮೀಯ ಬೈಬಲ್ ವಿದ್ಯಾರ್ಥಿಗಳು ನನ್ನನ್ನು ಸಂದರ್ಶಿಸಿದರು. ಅವರ ಒಂದು ಚಿಕ್ಕ ಗುಂಪು ನಾವು ವಾಸಿಸುತ್ತಿದ್ದ ಬರ್ಮಾದ ರಾಜಧಾನಿ ರಂಗೂನ್ (ಈಗ ಯಾಂಗೊನ್) ನಲ್ಲಿ ಇತ್ತೆಂದು ತಿಳಿಯಲು ನಾನು ಸಂತೋಷಪಟ್ಟೆನು. ಅವರ ಕ್ರಮದ ಬೈಬಲ್ ಅಭ್ಯಾಸದ ವರ್ಗವನ್ನು ಹಾಜರಾಗುವಂತೆ ಮತ್ತು ಅವರೊಂದಿಗೆ ಮನೆಯಿಂದ ಮನೆಗೆ ಸಾರುವುದರಲ್ಲಿ ಭಾಗವಹಿಸಲು ಸಹ ಅವರು ನನ್ನನ್ನು ಆಮಂತ್ರಿಸಿದರು. ಮೊದಮೊದಲು ನಾನು ತುಸು ಮನಸ್ಸಿಲ್ಲದೆ ಇದ್ದೆ, ಆದರೆ ಬೇಗನೆ ಬೌದ್ಧರು, ಹಿಂದುಗಳು, ಮತ್ತು ಮುಸ್ಲಿಮರು ಮತ್ತು ಹೆಸರಿನ ಕ್ರೈಸ್ತರೊಂದಿಗೆ ಬೈಬಲ್ ಜ್ಞಾನವನ್ನು ಹಂಚುವುದರಲ್ಲಿ ಆನಂದಿಸಲಾರಂಭಿಸಿದೆ.
ಭಾರತ ಬ್ರಾಂಚ್ ಆಮೇಲೆ ಯುವರ್ಟ್ ಫ್ರಾನ್ಸಿಸ್ ಮತ್ತು ರ್ಯಾಂಡ್ಲ್ ಹೋಪ್ಲಿ ಎಂಬ ಇಬ್ಬರು ಪೂರ್ಣ ಸಮಯದ (ಪಯನೀಯರರೆಂದು ಕರೆಯಲ್ಪಡುವ) ಶುಶ್ರೂಷಕರನ್ನು ಕಳುಹಿಸಿಕೊಟ್ಟಿತು. ಇಬ್ಬರೂ ಮೂಲತಃ ಇಂಗ್ಲೆಂಡಿನವರು, ಆದರೆ ಭಾರತದಲ್ಲಿ ಹಲವಾರು ವರ್ಷಗಳ ಸೇವೆಯನ್ನು ಮಾಡಿದವರಾಗಿದ್ದರು. ಅವರು ನನಗೆ ಹೆಚ್ಚಿನ ಉತ್ತೇಜನವನ್ನು ಕೊಟ್ಟರು, ಮತ್ತು 1934 ರಲ್ಲಿ, ಯೆಹೋವನಿಗೆ ನನ್ನ ಸಮರ್ಪಣೆಯ ಸೂಚಕವಾಗಿ ನನಗೆ ದೀಕ್ಷಾಸ್ನಾನವಾಯಿತು.
ಒಬ್ಬಾಕೆ ಧೀರ ಸಾಕ್ಷಿ
ಸಮಯಾನಂತರ ಭಾರತ ಬ್ರಾಂಚ್ ಹೆಚ್ಚು ಪಯನೀಯರರನ್ನು ಬರ್ಮಾಕ್ಕೆ ಕಳುಹಿಸಿತು. ಅವರಲ್ಲಿ ಇಬ್ಬರು, ಕ್ಲಾಡ್ ಗುಡ್ಮ್ಯಾನ್ ಮತ್ತು ರಾನ್ ಟಿಪ್ಪಿನ್, ರೈಲ್ವೆ ಸ್ಟೇಷನನ್ನು ಸಂದರ್ಶಿಸಿ, ಸೇಷ್ಟನ್ ಮಾಸರ್ಟ್ ಸಿಡ್ನಿ ಕೂಟ್ನೊಂದಿಗೆ ಮಾತಾಡಿದರು. ಅವನು ಪುಸ್ತಕಗಳನ್ನು ತಕ್ಕೊಂಡನು, ಪೂರಾ ಓದಿದನು ಮತ್ತು ಮಂಡಲೆಯಲ್ಲಿದ್ದ ತನ್ನ ವಿವಾಹಿತೆ ಅಕ್ಕ ಡೇಯ್ಸಿ ಡಿಸೋಜಳಿಗೆ ಬರೆಯ ತೊಡಗಿದನು. ಅವಳೂ ಪುಸ್ತಕಗಳನ್ನು ಆಸಕ್ತಿಯುಳ್ಳವುಗಳಾಗಿ ಕಂಡಳು ಮತ್ತು ಹೆಚ್ಚು ಪುಸ್ತಕಗಳಿಗಾಗಿ ಕೇಳಿದಳು.
ಕ್ಯಾತೊಲಿಕ್ ಧರ್ಮಾಚರಣೆ ನಡಿಸುತ್ತಿದ್ದ ಡೇಯ್ಸಿ, ಅಸಾಮಾನ್ಯ ಧೈರ್ಯವುಳ್ಳ ಒಬ್ಬ ವ್ಯಕ್ತಿಯಾಗಿದ್ದಳು. ಅವಳು ನೆರೆಯವರನ್ನು ಸಂದರ್ಶಿಸಲಾರಂಭಿಸಿ, ತಾನು ಕಲಿಯುತ್ತಿದ್ದ ವಿಷಯಗಳನ್ನು ಅವರಿಗೆ ಹೇಳತೊಡಗಿದಳು. ಚರ್ಚಿಗೆ ಬರುವುದನ್ನು ಅವಳು ನಿಲ್ಲಿಸಿದ್ದೇಕೆಂದು ಕೇಳಲು ಇಗರ್ಜಿಯ ಪಾದ್ರಿಯು ಅವಳನ್ನು ಸಂದರ್ಶಿಸಿದಾಗ, ಉರಿಯುವ ನರಕವೇ ಮುಂತಾದ ಅವನು ಕಲಿಸುತ್ತಿದ್ದ ವಿಷಯಗಳನ್ನು ಬೈಬಲ್ ಬೆಂಬಲಿಸುವುದಿಲ್ಲವೆಂದು ಆಕೆ ತೋರಿಸಿದಳು.
ಕೊನೆಗೆ, ಅವನು ಅವಳನ್ನು ಕೇಳಿದ್ದು: “ಉರಿಯುವ ನರಕದ ಕುರಿತು ಈ ಎಲ್ಲಾ ವರ್ಷಗಳಲ್ಲಿ ಅವರಿಗೆ ತಿಳಿಸಿದ ಮೇಲೆ, ಅಂಥ ಒಂದು ಸ್ಥಳವಿಲ್ಲವೆಂದು ಈಗ ನಾನು ಅವರಿಗೆ ಹೇಳುವುದು ಹೇಗೆ? ಯಾರೂ ಚರ್ಚಿಗೆ ಬರಲು ಬಯಸಲಿಕ್ಕಿಲ್ಲ.”
“ನೀನು ಒಬ್ಬ ಪ್ರಾಮಾಣಿಕ ಕ್ರೈಸ್ತನಾಗಿದ್ದರೆ,” ಡೇಯ್ಸಿ ಪ್ರತಿಕ್ರಿಯಿಸಿದ್ದು, “ಫಲಿತಾಂಶಗಳೇನೇ ಆಗಲಿ, ನೀನವರಿಗೆ ಸತ್ಯವನ್ನು ಕಲಿಸುವಿ.” ಅನಂತರ ಅವಳು ಕೂಡಿಸಿದ್ದು: “ನೀನು ಕಲಿಸದಿದ್ದರೆ, ನಾನು ಕಲಿಸುವೆ!” ಮತ್ತು ಆಕೆ ಕಲಿಸಿದಳು.
ಡಿಕ್ ಮತ್ತು ಡೇಯ್ಸಿ ಮತ್ತು ಅವರ ಇಬ್ಬರು ಹಿರಿಯ ಹೆಣ್ಣು ಮಕ್ಕಳು ನನಗೆ ದೀಕ್ಷಾಸ್ನಾನವಾದ ಸಮಯದಲ್ಲೇ ರಂಗೂನ್ನಲ್ಲಿ ದೀಕ್ಷಾಸ್ನಾನ ಪಡೆದರು. ಮೂರು ವರ್ಷಗಳ ತರುವಾಯ, 1937 ರಲ್ಲಿ, ಅವರ ದ್ವಿತೀಯ ಪುತ್ರಿ ಫಿಲಿಸ್ನ್ನು ನಾನು ಮದುವೆಯಾದೆನು, ಅವಳೀಗಲೂ ನನ್ನ ಪ್ರೀತಿಯ ಪತ್ನಿಯಾಗಿ ಇದ್ದಾಳೆ.
ಭಾರತಕ್ಕೆ ಪಾರಾದದ್ದು
ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಜಪಾನಿ ಸೇನೆಗಳು ಬರ್ಮಾವನ್ನು ಆಕ್ರಮಿಸಿದವು, ಮತ್ತು ರಂಗೂನ್ ಮಾರ್ಚ್ 8, 1942 ರಲ್ಲಿ ಪತನಗೊಂಡಿತು. ವಿದೇಶೀ ನಾಗರಿಕರು ಭಾರತಕ್ಕೆ ತರ್ವೆಯಾಗಿ ಓಡಿಹೋಗುವಂತೆ ಒತ್ತಾಯಿಸಲ್ಪಟ್ಟರು. ನೂರಾರು ಮಂದಿ ಅರಣ್ಯಗಳ ಮಾರ್ಗವಾಗಿ ಅಲ್ಲಿಗೆ ದಾಟಲು ಪ್ರಯತ್ನಿಸಿದರು, ಆದರೆ ಅನೇಕರು ದಾರಿಯಲ್ಲಿ ಸತ್ತರು. ತೆರವುಮಾಡುವ ಮೇಲ್ವಿಚಾರಕ ಅಧಿಕಾರಿಯೊಬ್ಬನ ವೈಯಕ್ತಿಕ ಪರಿಚಯ ನನಗಿದದ್ದರಿಂದ, ರಂಗೂನ್ನಿಂದ ಕಲ್ಕತ್ತಾಕ್ಕೆ ಹೋಗಲಿದ್ದ ಒಂದು ಕೊನೆಯ ಸರಕಿನ ಹಡಗದಲ್ಲಿ ಟಿಕೆಟುಗಳನ್ನು ಪಡೆಯಲು ನಾನು ಶಕ್ತನಾದೆನು. ನಮ್ಮ ಮನೆಯನ್ನು ಮತ್ತು ನಮ್ಮ ಹೆಚ್ಚಿನ ಸೊತ್ತುಗಳನ್ನು ಅಷ್ಟು ಅವಸರದಲ್ಲಿ ಬಿಟ್ಟುಹೋಗುವದು ನಮಗೆಲ್ಲರಿಗೆ ಒಂದು ದುಃಖದ ಕ್ಷಣವಾಗಿತ್ತು. ಬರ್ಮಾವು 1942 ರಿಂದ 1945 ರ ತನಕ ಜಪಾನಿಯರ ಸ್ವಾಧೀನದಲ್ಲಿತ್ತು.
ಭಾರತಕ್ಕೆ ನಾವು ತಲಪಿದಾಗ ನಮ್ಮ ಆರ್ಥಿಕ ಸ್ಥಿತಿಯು ಕೆಳಗಿಳಿದಿತ್ತು, ಮತ್ತು ಕೆಲಸವನ್ನು ಕಂಡುಕೊಳ್ಳುವದೇನೂ ಸುಲಭವಾಗಿರಲಿಲ್ಲ. ಇದು ನಂಬಿಕೆಯ ಒಂದು ಪರೀಕ್ಷೆಯಲ್ಲಿ ಫಲಿಸಿತು. ಒಂದು ಲಾಭಕರವಾದ ಯುದ್ಧಸಂಬಂಧವಿಲ್ಲದ ಕೆಲಸವೊಂದನ್ನು ನೀಡಿದ ಒಬ್ಬ ಬ್ರಿಟಿಷ್ ಆಫೀಸರನನ್ನು ನಾನು ಸಂಧಿಸಿದೆನು, ಆದರೆ ಅದರಲ್ಲಿ ಮಿಲಿಟರಿ ವ್ಯವಸ್ಥಾಪನೆಯ ಭಾಗವಾಗಿ ಕೆಲಸ ಮಾಡುವುದು ಒಳಗೂಡಿತ್ತು. ಯೆಹೋವನ ಸಹಾಯದಿಂದ ನಾನು ಆ ನೀಡಿಕೆಯನ್ನು ನಿರಾಕರಿಸಲು ಮತ್ತು ಹೀಗೆ ಶುದ್ಧ ಕ್ರೈಸ್ತ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಲು ಶಕ್ತನಾದೆನು. (ಯೆಶಾಯ 2:2-4) ಬೇರೆ ವಿಧಗಳಲ್ಲೂ ನಮಗೆ ಯೆಹೋವನ ಪ್ರೀತಿಯುಳ್ಳ ಹಸ್ತದ ಅನುಭವವಾಯಿತು.
ಉಳುಕೊಳ್ಳಲು ವಸತಿಗಳನ್ನು ಪಡೆಯಲು ಬಹುಮಟ್ಟಿಗೆ ಅಶಕ್ಯವೇ ಆಗಿದ್ದ ಭಾರತದ ರಾಜಧಾನಿ ಹೊಸದಿಲ್ಲಿಯಲ್ಲಿ ನಾವು ನೆಲೆಸಿದೆವು. ಆದಾಗ್ಯೂ, ಶಹರದ ಮಧ್ಯದಲ್ಲೇ ಒಂದು ವಿಶಾಲವಾದ ವಸತಿಯನ್ನು ನಾವು ಕಂಡುಕೊಂಡೆವು. ಸ್ವತಂತ್ರ ಪ್ರವೇಶದ್ವಾರವಿದ್ದ ಒಂದು ದೊಡ್ಡ ಮೊಗಸಾಲೆ ಅದಕ್ಕಿತ್ತು, ಮತ್ತು ಈ ಕೋಣೆಯು ಮುಂದಿನ ಹಲವಾರು ವರ್ಷಗಳ ತನಕ ಯೆಹೋವನ ಸಾಕ್ಷಿಗಳ ದಿಲ್ಲಿ ಸಭೆಗೆ ರಾಜ್ಯ ಸಭಾಗೃಹವಾಗಿ ಕಾರ್ಯನಡಿಸಿತು. ಆದರೂ, 1941 ರಲ್ಲಿ ವಾಚ್ ಟವರ್ ಸೊಸೈಟಿಯ ಎಲ್ಲಾ ಪ್ರಕಾಶನಗಳ ಮೇಲೆ ಭಾರತದಲ್ಲಿ ನಿಷೇಧ ಹಾಕಲ್ಪಟ್ಟ ಕಾರಣ, ನಾವು ಬೈಬಲ್ ಸಾಹಿತ್ಯವನ್ನು ಪಡಕೊಳ್ಳಲು ಅಶಕ್ತರಾದೆವು.
ನಿಷೇಧವು ತೆಗೆಯಲ್ಪಟ್ಟ ವಿಧ
ಇಸವಿ 1943 ರ ಒಂದು ಆದಿತ್ಯವಾರ, ದಿಲ್ಲಿಯ ಚರ್ಚ್ಗಳಲ್ಲಿ ಆರಾಧನೆಗಳನ್ನು ಹಾಜರಾದವರು, ಬೇರೆ ಬೇರೆ ಚರ್ಚುಗಳ 13 ಪಾದ್ರಿಗಳಿಂದ ಸಹಿಮಾಡಲ್ಪಟ್ಟ ಒಂದು ಕಿರುಹೊತ್ತಗೆಯನ್ನು ಪಡೆದರು. ಅದು ಎಚ್ಚರಿಸಿದ್ದು: “ದಿಲ್ಲಿಯ ನಾಗರಿಕರೇ ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ.” ಆರೋಪವು ಏನಾಗಿತ್ತೆಂದರೆ ರಾಜಕೀಯ ಕಾರಣಗಳಿಂದಾಗಿ ನಮಗೆ ಭಾರತದಲ್ಲಿ ನಿಷೇಧ ಹಾಕಲ್ಪಟ್ಟಿದೆ.
ಬೊಂಬಾಯಿಯ ಬ್ರಾಂಚ್ ಆಫೀಸಿನ ಒಪ್ಪಿಗೆಯೊಂದಿಗೆ, ವೈದಿಕರನ್ನು ಬಯಲುಪಡಿಸಿದ ಒಂದು ಕಿರುಹೊತ್ತಗೆಯನ್ನು ನಾವು ಕೂಡಲೆ ಮುದ್ರಿಸಿದೆವು ಮತ್ತು ಹಂಚಿದೆವು. ನಾನು ಅಧ್ಯಕ್ಷ ಮೇಲ್ವಿಚಾರಕನಾಗಿದದ್ದರಿಂದ, ಪ್ರಬಲೋಕ್ತಿಗಳು ಸೇರಿದ್ದ ಕಿರುಹೊತ್ತಗೆಯ ಕೆಳಗೆ ನನ್ನ ಹೆಸರು ಮತ್ತು ವಿಳಾಸವು ಮುದ್ರಿಸಲ್ಪಟ್ಟಿದ್ದವು. ತರುವಾಯ ಸ್ವಲ್ಪದರಲ್ಲಿಯೇ, ಮಾರ್ಗ್ರೆಟ್ ಹಾಫ್ಮ್ಯಾನ್ ಮತ್ತು ನಾನು ಕಿರುಹೊತ್ತಗೆಯ ಪ್ರತಿಗಳನ್ನು ಹಂಚುವುದನ್ನು ಪೊಲೀಸರು ಕಂಡಾಗ, ಕೈದು ಮಾಡಲ್ಪಟ್ಟೆವು ಮತ್ತು ಸೆರೆಮನೆಗೆ ಹಾಕಲ್ಪಟ್ಟೆವು. ಆದರೆ, ಬೇಗನೆ ಜಾಮೀನಿನ ಮೇಲೆ ನಾವು ಬಿಡಿಸಲ್ಪಟ್ಟೆವು.
ತದನಂತರ, ಮಾರ್ಗ್ರೆಟ್ ತನ್ನ ಶುಶ್ರೂಷೆಯನ್ನು ನಡಿಸುತ್ತಿದ್ದಾಗ, ಇಂಡಿಯದ ವೈಸರಾಯರ ಮಂತ್ರಿಮಂಡಲದಲ್ಲಿ ಒಬ್ಬ ಪ್ರಖ್ಯಾತ ಮಂತ್ರಿಯಾಗಿದ್ದ ಸರ್ ಶ್ರೀವಾಸ್ತವರ ಮನೆಯನ್ನು ಸಂದರ್ಶಿಸಿದಳು. ಸರ್ ಶ್ರೀವಾಸ್ತವರು ಅವಳನ್ನು ಆದರದಿಂದ ಸ್ವಾಗತಿಸಿದರು, ಮತ್ತು ಸಂಭಾಷಣೆಯ ಸಮಯದಲ್ಲಿ, ನಮ್ಮ ಸಾಹಿತ್ಯವು ಭಾರತದಲ್ಲಿ ಅನ್ಯಾಯವಾಗಿ ನಿಷೇಧಿಸಲ್ಪಟ್ಟಿದೆ ಎಂದಾಕೆ ಅವರಿಗೆ ತಿಳಿಸಿದಳು. ಆ ದಿನದಲ್ಲಿ ಮಾರ್ಗ್ರೆಟ್ ಮದ್ರಾಸ್ ರಾಜ್ಯದ ಒಬ್ಬ ಪಾರ್ಲಿಮೆಂಟಿನ ಒಬ್ಬ ಸದಸ್ಯನನ್ನೂ ಭೇಟಿಯಾದಳು. ಪಾರ್ಲಿಮೆಂಟಿನ ಒಂದು ಕೂಟವನ್ನು ಹಾಜರಾಗಲು ಅವನು ಶಹರಕ್ಕೆ ಬಂದಿದ್ದನು. ನಮ್ಮ ಸಾಹಿತ್ಯದ ಮೇಲೆ ಹಾಕಲ್ಪಟ್ಟ ನಿಷೇಧದ ಅನ್ಯಾಯಪರತೆಯ ಕುರಿತು ಆಕೆ ಅವನಿಗೆ ತಿಳಿಸಿದಳು, ಮತ್ತು ಮುಂದಿನ ಒಂದು ಕೂಟದಲ್ಲಿ ತಾನು ಆ ಪ್ರಶ್ನೆಯನ್ನೆತ್ತುವನೆಂದು ಆವನು ವಚನಕೊಟ್ಟನು.
ಆ ಸಮಯದಲ್ಲಿ ನಾನು ಒಂದು ಸ್ಥಳೀಕ ಆಸ್ಪತ್ರೆಯಲ್ಲಿ ಫಿಸಿಯೊಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆನು. ಒಳ್ಳೇದು, ಸರ್ ಶ್ರೀವಾಸ್ತವರು ಅಕಸ್ಮಾತ್ತಾಗಿ ಗಾಯಗೊಂಡರು ಮತ್ತು ಫಿಸಿಯೊಥೆರಪಿ ಅವರಿಗೆ ನೆರವಾಗಬಹುದೋ ಎಂದು ನೋಡಲು ಆಸ್ಪತ್ರೆಯು ನನ್ನನ್ನು ಕಳುಹಿಸಿತು. ಸರ್ ಶ್ರೀವಾಸ್ತವರು ನನಗೆ ಒಬ್ಬ ಸೌಜನ್ಯವುಳ್ಳ ವ್ಯಕ್ತಿಯಾಗಿ ಕಂಡುಬಂದರು, ಮತ್ತು ನಾವು ಮಾತಾಡುತ್ತಿದ್ದಂತೆಯೇ, ಮಿಸ್ ಹಾಫ್ಮ್ಯಾನ್ ಮತ್ತು ನಾನು ಜಾಮೀನಿನ ಮೇಲೆ ಸೆರೆಮನೆಯಿಂದ ಬಿಡುಗಡೆಯಾದವರೆಂದು ನಾನು ಸಹಜವಾಗಿ ತಿಳಿಸಿದೆ. ರಾಜಕೀಯ ಕಾರಣಗಳ ಮೇಲೆ ನಮ್ಮ ಬೈಬಲ್ ಸಾಹಿತ್ಯವು ನಿಷೇಧಗೊಂಡದ್ದು ಪಾದ್ರಿಗಳ ಒತ್ತಡದ ಕಾರಣದಿಂದಾಗಿ, ಮತ್ತು ನಾವು ಎಷ್ಟು ಮಾತ್ರಕ್ಕೂ ರಾಜಕೀಯಸ್ಥರಲವ್ಲೆಂದೂ ನಾನು ವಿವರಿಸಿದೆ. ನಮ್ಮ ಬ್ರಾಂಚ್ ಪ್ರತಿನಿಧಿಯಾದ ಎಡ್ವಿನ್ ಸ್ಕಿನ್ನರ್, ನಮ್ಮ ಸ್ಥಾನವನ್ನು ವಿವರಿಸಲು ಒಂದು ಸಾಕ್ಷತ್ ದರ್ಶನವನ್ನು ವಿನಂತಿಸಿದ್ದರೆಂದೂ ಆದರೆ ಅದು ನಿರಾಕರಿಸಲ್ಪಟ್ಟಿತ್ತೆಂದೂ ನಾನು ಮುಂದರಿಸಿ ಹೇಳಿದೆನು.
ಕೆಲವು ದಿನಗಳ ನಂತರ, ಶ್ರೀವಾಸ್ತವರು ನನಗೆ ಹೇಳಿದ್ದು: “ಶ್ರೀಯುತ ಜಂಕಿನ್ಸ್ [ನಮ್ಮ ಕಾರ್ಯದೆಡೆಗೆ ಮೆಚ್ಚಿಗೆ ತೋರದ ಸರಕಾರಿ ಅಧಿಕಾರಿ] ಕೆಲವೇ ದಿನಗಳಲ್ಲಿ ನಿವೃತ್ತರಾಗಲಿದ್ದಾರೆ ಮತ್ತು ಅವರ ಸ್ಥಳವನ್ನು ಸರ್ ಫ್ರಾನ್ಸಿಸ್ ಮೂಡಿಯವರು ತಕ್ಕೊಳ್ಳುವರು. ಶ್ರೀಯುತ ಸ್ಕಿನ್ನರ್ರನ್ನು ಬರುವಂತೆ ಹೇಳು, ನಾನು ಅವರನ್ನು ಸರ್ ಫ್ರಾನ್ಸಿಸ್ಗೆ ಪರಿಚಯ ಮಾಡಿಸುವೆನು.”
ಸರ್ ಶ್ರೀವಾಸ್ತವ ತಾನು ವಚನವಿತ್ತಂತೆಯೇ ಕೂಟವನ್ನು ಏರ್ಪಡಿಸಿದರು. ಆ ಸಮಯದಲ್ಲಿ, ಸರ್ ಫ್ರಾನ್ಸಿಸ್ ಮೂಡಿ ಸಹೋದರ ಸ್ಕಿನ್ನರ್ಗೆ ಹೇಳಿದ್ದು: “ನಾನು ನಿಮಗೇನೂ ವಚನ ಕೊಡಲಾರೆನು, ಆದರೆ ನಾನು ವಿಷಯವನ್ನು ಪರ್ಯಾಲೋಚಿಸುವೆನು.” ಪಾರ್ಲಿಮೆಂಟ್ ಕೆಲವೇ ದಿನಗಳಲ್ಲಿ ತೆರೆಯಲಿದದ್ದರಿಂದ ಸಹೋದರ ಸ್ಕಿನ್ನರ್ ಫಲಿತಾಂಶವನ್ನು ನೋಡಲು ನಿಂತರು. ಕೊಟ್ಟ ಮಾತಿನಂತೆಯೇ, ಮದ್ರಾಸಿನ ಆ ಪಾರ್ಲಿಮೆಂಟ್ ಸದಸ್ಯನು ಎದ್ದುನಿಂತು, ಕೇಳಿದ್ದು: “ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಕಾಶನಗಳು ರಾಜಕೀಯ ಕಾರಣಗಳಿಗಾಗಿ ನಿಷೇಧಿಸಲ್ಪಟ್ಟದ್ದು ನಿಜವೋ?”
“ಇಲ್ಲ, ನಿಷೇಧವು ವಿಧಿಸಲ್ಪಟ್ಟದ್ದು ಮುಂಜಾಗ್ರತೆಯ ಕಾರಣಗಳಿಂದಾಗಿ,” ಎಂದರು ಸರ್ ಫ್ರಾನ್ಸಿಸ್ ಮೂಡಿ ಉತ್ತರಿಸುತ್ತಾ, “ಆದರೆ ಈಗ ಸರಕಾರವು ನಿಷೇಧವನ್ನು ವಜಾಮಾಡಲು ನಿರ್ಧರಿಸಿದೆ.”
ನಾವು ಆ ಸುದ್ಧಿಯನ್ನು ಕೇಳಿದಾಗ ಅದು ನಮಗೆಂತಹ ರೋಮಾಂಚಕ ಕ್ಷಣವಾಗಿತ್ತು! ನಿಷೇಧದ ಅಂತ್ಯವನ್ನು ದೃಢೀಕರಿಸಿದ ಒಂದು ಪತ್ರವು ಒಂದು ವಾರದ ನಂತರ ಬೊಂಬಾಯಿಯ ಬ್ರಾಂಚ್ ಆಫೀಸನ್ನು ತಲಪಿತು.
ಯುದ್ಧ-ಜರ್ಜರಿತ ಬರ್ಮಾಕ್ಕೆ ಹಿಂದೆ
ಎರಡನೆಯ ಲೋಕ ಯುದ್ಧದ ನಂತರ ಬರ್ಮಾಕ್ಕೆ ಬ್ರಿಟಿಷ್ ಆಡಳಿತ ಹಿಂತಿರುಗಿತು, ಮತ್ತು ನಾವು ಹತ್ತು ಮಂದಿ ಸಾಕ್ಷಿಗಳು ಕೆಲವು ತಿಂಗಳ ನಂತರ ರಂಗೂನಿಗೆ ಹಿಂತಿರುಗಿದೆವು. ಉಳಿದಿರುವ ಕೆಲವು ಸ್ಥಳೀಕ ಸಾಕ್ಷಿಗಳನ್ನು ಪುನಃ ಕಾಣಲು ನಾವು ಸಂತೋಷಪಟ್ಟೆವು. ದೇಶವು ಶೋಚನೀಯ ಪರಿಸ್ಥಿತಿಯಲ್ಲಿತ್ತು. ವಿದ್ಯುತ್ ಮತ್ತು ಸಾರ್ವಜನಿಕ ಸಂಚಾರ ಸಾಧನಗಳು ಸೇರಿದ ಸಾರ್ವಜನಿಕ ಸೇವೆಗಳೂ ದೊರೆಯುತ್ತಿರಲಿಲ್ಲ. ಆದುದರಿಂದ ನಾವು ಮಿಲಿಟರಿಯಿಂದ ಒಂದು ಜೀಪನ್ನು ಕೊಂಡುಕೊಂಡೆವು ಮತ್ತು ನಮ್ಮ ಹಿಂತಿರುಗುವಿಕೆಯ ನಂತರ ತಡವಿಲ್ಲದೆ ನಾವು ವ್ಯವಸ್ಥಾಪಿಸಿದ ಕೂಟಗಳಿಗೆ ಜನರನ್ನು ಒಯ್ಯುವುದರಲ್ಲಿ ಅದನ್ನು ಸದುಪಯೋಗಕ್ಕೆ ಹಾಕಿದೆವು.
ಒಬ್ಬ ಆಸಕ್ತ ವ್ಯಕ್ತಿಯು ನಮಗೊಂದು ಜಾಗವನ್ನು ಕೊಟ್ಟನು, ಮತ್ತು ಕ್ಷೇತ್ರದ ದಯಾಪರ ಜನರ ಸಹಾಯದಿಂದ, ನಾವು ಸಾಕಷ್ಟು ದೊಡ್ಡ ರಾಜ್ಯ ಸಭಾಗೃಹವನ್ನು ಕಟ್ಟಿದೆವು. ದಪ್ಪದ ಬಿದುರು ಕಂಭಗಳಿಂದ, ಹೊಸೆದ ಬಿದುರಿನ ಗೋಡೆಗಳಿಂದ ಮತ್ತು ಹುಲ್ಲಿನ ಚಾವಣಿಯಿಂದ ಅದು ಮಾಡಲ್ಪಟ್ಟಿತ್ತು. ಇಲ್ಲಿ, ಎಪ್ರಿಲ್ 1947 ರಲ್ಲಿ ಅವರ ರಂಗೂನಿನ ಸಂದರ್ಶನದ ಸಮಯದಲ್ಲಿ, ಆಗ ವಾಚ್ ಟವರ್ ಸೊಸೈಟಿಯ ಪ್ರೆಸಿಡೆಂಟರಾಗಿದ್ದ ನೇತನ್ ಎಚ್. ನಾರ್ ಮತ್ತು ಅವರ ಕಾರ್ಯದರ್ಶಿ ಮಿಲ್ಟನ್ ಜಿ. ಹೆನ್ಶೆಲ್ರು ಭಾಷಣಗಳನ್ನು ಕೊಟ್ಟರು. ಆ ಸಮಯದಲ್ಲಿ ಇಡೀ ಬರ್ಮಾದಲ್ಲಿ ಒಟ್ಟಿಗೆ 19 ಸಾಕ್ಷಿಗಳಿದ್ದರು. ಆದರೆ, ನ್ಯೂ ಎಕ್ಸೆಲ್ಸಿಯರ್ ತಿಯಟರ್ನಲ್ಲಿ ನಡೆದ ಸಹೋದರ ನಾರ್ರ ಭಾಷಣಕ್ಕೆ 287 ಮಂದಿ ಹಾಜರಿದ್ದರು!
ನಾವು ಆಸ್ಟ್ರೇಲಿಯದಲ್ಲಿ ನೆಲೆಸಿದೆವು
ಜನವರಿ 4, 1948 ರಲ್ಲಿ ಬರ್ಮಾಕ್ಕೆ ಗ್ರೇಟ್ ಬ್ರಿಟನ್ನಿಂದ ಸ್ವಾತಂತ್ರ್ಯವು ದೊರಕಿತು, ಮತ್ತು ದೇಶವನ್ನು ಬಿಟ್ಟುಹೋಗುವುದು ಒಳ್ಳೆಯದೆಂದು ಹೆಚ್ಚಿನ ಯೂರೋಪಿಯನರು ಯೋಚಿಸಿದರು. ಪ್ರಾರ್ಥನಾಪೂರ್ವಕ ಪರಿಗಣನೆಯ ನಂತರ ಫಿಲಿಸ್ ಮತ್ತು ನಾನು ನಮ್ಮ ಮಗಳನ್ನು ತಕ್ಕೊಂಡು ಆಸ್ಟ್ರೇಲಿಯಕ್ಕೆ ವಲಸೆ ಹೋಗಲು ನಿರ್ಣಯಿಸಿದೆವು. ನಾವು ಪಶ್ಚಿಮ ಆಸ್ಟ್ರೇಲಿಯದ ರಾಜಧಾನಿಯಾದ ಪರ್ತ್ನಲ್ಲಿ ನೆಲೆಸಿದೆವು.
ಪುನಃ ಬರ್ಮಾವನ್ನು ಬಿಡುವುದು, ಮತ್ತು ಈ ಸಾರಿ ಖಾಯಂ ಆಗಿ ಬಿಟ್ಟುಹೋಗುವುದು ನಮಗೆ ಅತಿ ದುಃಖದ ಕ್ಷಣವಾಗಿತ್ತು. ಆಗಿಂದಾಗ್ಗೆ ಅಲ್ಲಿನ ಪ್ರಿಯ ಜನರಿಂದ ನಾವು ಸುದ್ದಿ ಕೇಳಿದ್ದೇವೆ, ಮತ್ತು ರಾಜ್ಯದ ಕಾರ್ಯವು ಆ ದೇಶದಲ್ಲಿ ಸಂತತವಾಗಿ ಮುಂದರಿದೆ ಎಂದು ತಿಳಿಯಲು ನಾವು ಸಂತೋಷಿಸಿದ್ದೇವೆ.
ಇಸವಿ 1978 ರಿಂದ ಆರಂಭಿಸಿ, ನಾಲ್ಕು ವರ್ಷದ ತನಕ, ಆಸ್ಟ್ರೇಲಿಯದ ಪ್ರಧಾನ ನಗರಗಳಲ್ಲಿರುವ ಎಲ್ಲಾ ಗ್ರೀಕ್-ಭಾಷೆಯನ್ನಾಡುವ ಸಭೆಗಳಲ್ಲಿ ಸೇವೆಮಾಡುವ ಆನಂದವು ನಮ್ಮದಾಯಿತು. ಅದು ವಿಸ್ತಾರವಾದ ಪ್ರಯಾಣದ ಅರ್ಥದಲ್ಲಿತ್ತು, ಯಾಕಂದರೆ ಈ ವಿಶಾಲ ದೇಶದ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ 4,200 ಕಿಲೊಮೀಟರ್ಗಿಂತಲೂ ಹೆಚ್ಚು ದೂರವಿದೆ. ಕೆಲವು ಸಮಯದ ನಂತರ, ಒಂದು ರಾಜ್ಯದಿಂದ ಇನ್ನೊಂದಕ್ಕೆ ಗಮನಾರ್ಹವಾಗಿ ಬೇರೆಯಾಗಿರುವ ಹವಾಮಾನದಿಂದಾಗಿ ನಮ್ಮ ಆರೋಗ್ಯವು ಕೆಟ್ಟಿತು. ಆದುದರಿಂದ ನಾವು ಪುನಃ ಪರ್ತ್ನಲ್ಲಿ ಬಂದು ನೆಲೆಸಿದೆವು, ಈ ಶಹರದ 44 ಸಭೆಗಳಲ್ಲೊಂದರಲ್ಲಿ ಒಬ್ಬ ಹಿರಿಯನಾಗಿ ನಾನು ಸೇವೆಯನ್ನು ಮುಂದರಿಸುತ್ತಿದ್ದೇನೆ.
ವರ್ಷಗಳು ದಾಟಿದಷ್ಟಕ್ಕೆ, ನನ್ನ ದೃಷ್ಟಿಯು ಹೆಚ್ಚು ಕೆಡುತ್ತಾ ಬಂದಿದೆ ಮತ್ತು ವಾಚನವು ಕಷ್ಟಕರವಾಗಿದೆ. ಆದರೂ, ಆರೋಗ್ಯ ಸಮಸ್ಯೆಗಳ ನಡುವೆಯೂ, ನಮ್ಮ ಹೃದಯಗಳಿನ್ನೂ ಹರೆಯದಲ್ಲಿವೆ. ಯೆಹೋವನಿಗೆ ಭಯಪಡುವವರೆಲ್ಲರಿಗೆ ಆತನ ಅನುಗ್ರಹದ ಸೂರ್ಯನು “ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುವನು; ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ [ನಾವು] ಹೊರಟು ಬಂದು ಕುಣಿದಾಡು” ವ ಆ ಸಂತೋಷದ ಸುದಿನಕ್ಕಾಗಿ ನಾವಿಬ್ಬರೂ ಭರವಸೆಯಿಂದ ಕಾಯುತ್ತಾ ಇದ್ದೇವೆ.—ಮಲಾಕಿಯ 4:2.a
[ಅಧ್ಯಯನ ಪ್ರಶ್ನೆಗಳು]
a ದಶಂಬರ 13, 1992 ರಲ್ಲಿ, ಈ ಜೀವನ-ವೃತ್ತಾಂತವು ಮುಗಿಸಲ್ಪಡುತ್ತಾ ಇದ್ದಾಗ, ಸಹೋದರ ಟ್ಸಾಟಸ್ ಮರಣದಲ್ಲಿ ನಿದ್ರೆ ಹೋದರು.
[ಪುಟ 24 ರಲ್ಲಿರುವ ಚಿತ್ರ]
ಬರ್ಮಾ (ಮ್ಯಾನ್ಮಾರ್) ದಲ್ಲಿ, 1947 ರಲ್ಲಿ, ಸಹೋದರರಾದ ಹೆನ್ಶೆಲ್ ಮತ್ತು ನಾರ್ರೊಂದಿಗೆ ನನ್ನ ಕುಟುಂಬ
[ಪುಟ 25 ರಲ್ಲಿರುವ ಚಿತ್ರ]
ಬ್ಯಾಸಿಲ್ ಟ್ಸಾಟಸ್ ಮತ್ತು ಅವರ ಪತ್ನಿ ಫಿಲಿಸ್, ಆಸ್ಟ್ರೇಲಿಯದಲ್ಲಿ