ಪುನರುತ್ಥಾನ –ಯಾರಿಗೆ ಮತ್ತು ಯಾವಾಗ?
ಅದು ಸಾ.ಶ. 32 ರಲ್ಲಿ ಬೇಥಾನ್ಯದಲ್ಲಿ ಸಂಭವಿಸಿತು, ಅಲ್ಲಿ ಲಾಜರನು ತನ್ನ ಅಕ್ಕತಂಗಿಯರಾದ ಮಾರ್ಥ ಮತ್ತು ಮರಿಯಳೊಂದಿಗೆ ವಾಸವಾಗಿದ್ದನು. ಲಾಜರನು ಅಸ್ವಸ್ಥನಾಗಿದ್ದಾನೆ ಎಂಬ ಸುದ್ದಿಯನ್ನು ಸಹೋದರಿಯರು ಯೇಸುವಿಗೆ ಕಳುಹಿಸಿದ್ದರು.
ಯೇಸುವು ಲಾಜರನನ್ನೂ, ಅವನ ಸಹೋದರಿಯರನ್ನೂ ಪ್ರೀತಿಸುತ್ತಿದ್ದನು, ಆದುದರಿಂದ ಅವನು ಬೇಥಾನ್ಯಕ್ಕೆ ಹೋಗುವ ದಾರಿ ಹಿಡಿದನು. ದಾರಿಯಲ್ಲಿ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಿದ್ದಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವುದಕ್ಕಾಗಿ ಹೋಗುತ್ತೇನೆ.” ಯೇಸು ಅಕ್ಷರಶಃ ನಿದ್ರೆಯ ಕುರಿತಾಗಿ ಮಾತಾಡುತ್ತಾನೆಂದು ಶಿಷ್ಯರು ಎಣಿಸಿದರು. ಆದುದರಿಂದ ಯೇಸುವು ಸ್ಪಷ್ಟವಾಗಿ ಅಂದದ್ದು: “ಲಾಜರನು ಸತ್ತು ಹೋದನು.”—ಯೋಹಾನ 11:38-45.
ಈ ಘಟನೆಯು ಪುನರುತ್ಥಾನವೊಂದರ ನೈಜ ನಿರೀಕ್ಷೆಯನ್ನು ಒದಗಿಸುತ್ತದೆ. ಆದಾಗ್ಯೂ ಯೇಸುವು ಶೀಘ್ರದಲ್ಲಿ ಅವರನ್ನು ಪುನರುತ್ಥಾನ ಮಾಡುವ ಪ್ರತೀಕ್ಷೆಯೊಂದಿಲ್ಲದಿರುವುದಾದರೆ, ಸಾಮಾನ್ಯವಾಗಿ, ಮರಣವು ನಮ್ಮ ಪ್ರೀತಿಯವರನ್ನು ತೆಗೆದು ಕೊಂಡು ಹೋಗುವ ಒಂದು ಭಯಂಕರ ಶತ್ರುವಾಗಿದೆ. ನಾವೆಲ್ಲರೂ ಚಲೋದಾಗಿ ತಿಳಿದಿರುವಂತೆ, ನಮ್ಮ ಈ ನೆಚ್ಚಿನವರಲ್ಲಿ ಹೆಚ್ಚಿನವರು ಒಳ್ಳೆಯವರೂ, ಅತಿ ದಯೆಯುಳ್ಳವರೂ ಆಗಿದ್ದರು. ಆದುದರಿಂದ, ಸಹಜವಾಗಿ ಏಳುವ ಪ್ರಶ್ನೆಯು . . .
ಮನುಷ್ಯರು ಸಾಯಬೇಕು ಯಾಕೆ?
ಒಂದು ನಿಖರವಾದ, ನಂಬಲರ್ಹವಾದ ಉತ್ತರವನ್ನು ನೀವು ಬಯಸುವುದಾದರೆ, ನಾವು ಏದೇನ್ ತೋಟದಲ್ಲಿ ಆರಂಭಿಸಲ್ಪಟ್ಟ ಮಾನವ ಕುಲಕ್ಕೆ ಹಿಂತೆರಳಬೇಕಾಗಿದೆ. ಆದಾಮನ ವಿಧೇಯತೆಯನ್ನು ಪರೀಕ್ಷಿಸಲು, ಒಂದು ನಿರ್ದಿಷ್ಟ ಮರದ ಹಣ್ಣನ್ನು ತಿನ್ನ ಬಾರದೆಂದು ದೇವರು ಅವನಿಗೆ ಅಪ್ಪಣೆಯನ್ನಿತ್ತನು. ಅವನು ಮತ್ತು ಹವ್ವಳು ತಿಂದದಾದ್ದರೆ, ದೇವರು ಅಂದದ್ದು, ಅವರು “ಖಂಡಿತವಾಗಿ ಸಾಯುವರು.” (ಆದಿಕಾಂಡ 2:17) ಸೈತಾನನಿಂದ ಶೋಧಿಸಲ್ಪಟ್ಟಾಗ, ಅವರು ದೇವರಿಗೆ ಅವಿಧೇಯರಾದರು ಮತ್ತು ನಿರ್ಣಾಯಕ ಪರೀಕ್ಷೆಯಲ್ಲಿ ಸೋತು ಹೋದರು. ಮರಣವು ಫಲವಾಗಿ ಬಂತು.
ಅಷ್ಟೊಂದು ಕ್ಷುಲ್ಲಕವಾಗಿ ತೋರುವ ಪಾತಕಕ್ಕೆ ಅಂತಹ ದಂಡನೆಯು ಯಾಕೆ? ಅವರು ಕ್ರಿಯೆಯು ಸಣ್ಣದ್ದಾಗಿತ್ತು, ಆದರೆ ಅವರ ಪಾತಕವು ಮಾರಕವಾಗುವಷ್ಟು ಗಂಭೀರವಾಗಿತ್ತು—ಅವರ ನಿರ್ಮಾಣಿಕನ ವಿರುದ್ಧ ಪರಿಪೂರ್ಣರಾದ ಆದಾಮ-ಹವ್ವರು ದಂಗೆಯೊಂದಾಗಿತ್ತು. ಅವರು ಇನ್ನು ಪರಿಪೂರ್ಣರಾಗಿ ಇರಲಿಲ್ಲ ಮತ್ತು ದೇವರು ಮರಣದ ಶಿಕ್ಷೆಯನ್ನು ವಿಧಿಸಿದನು. ಆದರೂ, ನ್ಯಾಯಯುಕ್ತವಾದ ಆ ಶಿಕ್ಷೆಯನ್ನು ಆದಾಮನ ಸಂತತಿಯವರಿಗೆ ವಿಪರ್ಯಸ್ತವಾಗುವಂತೆ ದೇವರು ಏರ್ಪಾಡು ಮಾಡಿದನು. ಹೇಗೆ? ಪೌಲನು ಬರೆದದ್ದು, “ಕ್ರಿಸ್ತ ಯೇಸುವು . . . ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿ ಕೊಟ್ಟನು.”—1 ತಿಮೊಥಿ 2:5, 6; ರೋಮಾಪುರದವರಿಗೆ 5:17.
ಸತ್ತವರ ಸ್ಥಿತಿಯೇನು?
ಲಾಜರನು ಸತ್ತು ನಾಲ್ಕು ದಿನಗಳಾಗಿದ್ದವು. ನೀವು ಈಗಾಗಲೇ ಸತ್ತಿರುವುದಾದರೆ ಮತ್ತು ಬೇರೊಂದು ಆತ್ಮಿಕ ಕ್ಷೇತ್ರದಲ್ಲಿ ನಾಲ್ಕು ದಿವಸ ಜೀವಿಸಿದ್ದರೆ, ಮತ್ತು ಅನಂತರ ಪುನರುತ್ಥಾನಗೊಳಿಸಲ್ಪಟ್ಟರೆ, ಅದರ ಕುರಿತು ಇತರರಿಗೆ ಹೇಳಲು ನೀವು ಬಯಸಲಾರಿರೋ? ಆದರೆ ಲಾಜರನು ಬೇರೊಂದು ಕ್ಷೇತ್ರದಲ್ಲಿ ತಾನು ಜೀವಂತನಾಗಿದ್ದುದರ್ದ ಕುರಿತು ಏನನ್ನೂ ಹೇಳಲಿಲ್ಲ. ಬೈಬಲು ಹೇಳುವುದು: “ಸತ್ತವರ ಕುರಿತಾದರೋ, ಅವರಿಗೆ —ಪ್ರಸಂಗಿ 9:5, NW; ಕೀರ್ತನೆ 146:3, 4.
ಅದರಲ್ಲಿ ಏನು ಒಳಗೂಡಿದೆ ಎಂದು ಪರಿಗಣಿಸಿರಿ. ಬೈಬಲಿನಲ್ಲಿ ಆ ಶಬ್ದವು ಇಲ್ಲದಿರುವುದಾದರೂ, ಲಕ್ಷಾಂತರ ಜನರು ಪರ್ಗೆಟರಿಯಲ್ಲಿ ವಿಶ್ವಾಸವಿಟ್ಟಿದ್ದಾರೆ. ಇತರ ಅನೇಕರು ಅಗ್ನಿಯ ನರಕವೊಂದರಲ್ಲಿ ನಂಬಿಕೆಯಿಡುತ್ತಾರೆ. ಆದಾಗ್ಯೂ, ನಿತ್ಯವೂ ನಿಮ್ಮ ವೈರಿಯನ್ನು ಸಹಾ ನೀವು ದಹಿಸುವುದಿಲ್ಲ. ಅಂತಹ ಕ್ರೂರ ಸಂಗತಿಯನ್ನು ನೀವು ಮಾಡಲು ನಿರಾಕರಿಸುವುದಾದರೆ, ನಮ್ಮ ಪ್ರೀತಿಯ ನಿರ್ಮಾಣಿಕನು ಅಗ್ನಿಯ ನರಕದಲ್ಲಿ ವ್ಯಕ್ತಿಗಳು ನರಳುವಂತೆ ಆ ರೀತಿ ಮಾಡುವನೋ? ಅದರೆ, ಮೇಲೆ ಉಲ್ಲೇಖಿಸಿದ ಸಂತೈಸುವ — ಸತ್ತವರಿಗೆ “ಯಾವ ಪ್ರಜ್ಞೆಯೂ ಇರುವುದಿಲ್ಲ” — ಎಂಬ ಬೈಬಲಿನ ವಾಗ್ದಾನವನ್ನು, ದಯಮಾಡಿ ಪ್ರತಿಬಿಂಬಿಸಿರಿ.
ಶಾಸ್ತ್ರ ಬರಹಕ್ಕನುಸಾರ, ಕ್ರಿಸ್ತನೊಂದಿಗೆ ಪರಲೋಕದಲ್ಲಿ ರಾಜ್ಯವಾಳುವವರು ತುಲನಾತ್ಮಕವಾಗಿ ಕೊಂಚವೇ ಮಂದಿ. ಯೇಸು ಅವರನ್ನು “ಚಿಕ್ಕ ಹಿಂಡು” ಎಂದು ವಿವರಿಸಿದ್ದಾನೆ. (ಲೂಕ 12:32) ಅಪೊಸ್ತಲ ಯೋಹಾನನು “ಯಜ್ಞದ ಕುರಿಯಾದಾತನು (ಯೇಸು ಕ್ರಿಸ್ತನು) ಚೀಯೋನ್ ಪರ್ವತದ (ಪರಲೋಕದ) ಮೇಲೆ ಕಂಡನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತನಾಲ್ಕು ಸಾವಿರ ಮಂದಿ ಇದ್ದರು . . . ಭೂಲೋಕದಿಂದ ಕೊಂಡು ಕೊಳ್ಳಲ್ಪಟ್ಟವರು.” (ಪ್ರಕಟನೆ 14:1-3) ಇದರ ಅರ್ಥ, ಅಂತಹ ವ್ಯಕ್ತಿಗಳು ಮಾನವರಾಗಿದ್ದರು, ಮರಣ ಹೊಂದಿದ ನಂತರ ಅವರು ಕ್ರಿಸ್ತನೊಂದಿಗೆ ಪರಲೋಕದಲ್ಲಿ ಜೀವಿಸಲು ಪುನರುತ್ಥಾನಗೊಳಿಸಲ್ಪಟ್ಟರು.
ನೀವು ಊಹಿಸಸಾಧ್ಯವಿರುವಂತೆ, ಈ ಬೈಬಲ್ ಸತ್ಯತೆಗಳನ್ನು—ಪರ್ಗೆಟರಿಯಾಗಲೀ ಯಾ ದಹಿಸುವ ನರಕವಾಗಲಿ ಅಲ್ಲಿಲ್ಲ ಮತ್ತು ಸತ್ತ ಜನರು ಪರಲೋಕಕ್ಕೆ ಪುನರುತ್ಥಾನಗೊಳಿಸಲ್ಪಡುವ ನಿರೀಕ್ಷೆಯಿದೆ—ತಿಳಿದುಕೊಳ್ಳಲು ಜನರಿಗೆ ಸಹಾಯ ಮಾಡಲ್ಪಟ್ಟಿದೆ. ಆದರೂ, ಪರಲೋಕಕ್ಕೆ ಪುನರುತ್ಥಾನಗೊಳಿಸಲ್ಪಡುವವರು ಅಷ್ಟೇ ಕೊಂಚ ಮಂದಿಯಾಗಿರುವುದಾದರೆ, ಇತರರಿಗೆ ಯಾವ ನಿರೀಕ್ಷೆಯಿದೆ?
ಐಹಿಕ ಪುನರುತ್ಥಾನ
ಪರಲೋಕದ ಜೀವಿತಕ್ಕಾಗಿ ಪುನರುತ್ಥಾನಗೊಳಿಸಲ್ಪಡುವ ದಾರಿಯನ್ನು ಯೇಸು ಕ್ರಿಸ್ತನು ತೆರೆದನು ಇಲ್ಲವೇ ವಿಧ್ಯುಕ್ತವಾಗಿ ಆರಂಭಿಸಿದನು. (ಇಬ್ರಿಯರಿಗೆ 9:24; 10:19, 20) ಆದುದರಿಂದ, ಪರಲೋಕದ ಜೀವಿತಕ್ಕೆ ಸ್ನಾನಿಕನಾದ ಯೋಹಾನನು ಪಾಲಿಗನಾಗುವುದಿಲ್ಲ, ಯಾಕಂದರೆ ಪರಲೋಕದ ಜೀವಿತಕ್ಕೆ ಯೇಸುವು ದಾರಿಯನ್ನು ತೆರೆಯುವ ಮೊದಲು ಅವನ ಕೊಲೆಯಾಗಿತ್ತು. ಯೇಸುವಂದದ್ದು: “ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ; ಆದರೂ ಪರಲೋಕ ರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿರುತ್ತಾನೆ.” (ಮತ್ತಾಯ 11:11) ಈ ನಂಬಿಗಸ್ತ ಪುರುಷನಿಗೆ ಮತ್ತು ಸತ್ತಿರುವ ಅವನಂತಹ ಇತರರಿಗೆ ದೇವರು ಯಾವ ಬಹುಮಾನವನ್ನು ಇಟ್ಟಿರುತ್ತಾನೆ?
ನಿಮ್ಮ ಬೈಬಲನ್ನು ಲೂಕ 23 ಕ್ಕೆ ತೆರೆಯಿರಿ ಮತ್ತು ವಚನ 39 ರಿಂದ 43 ನ್ನು ಓದಿರಿ. ಯೇಸುವಿನ ಪಕ್ಕದಲ್ಲಿ ನೇತು ಹಾಕಲ್ಪಟ್ಟ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬನು ಅಂದದ್ದು: “ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.” ಅವನು ಪರದೈಸದಲ್ಲಿರುವನು ಎಂಬ ಆಶ್ವಾಸನೆಯನ್ನು ಯೇಸುವು ಅವನಿಗೆ ಕೊಡುತ್ತಾನೆ. ಇದು ಪರಲೋಕವಲ್ಲ, ಮೊದಲ ಪರದೈಸವು ಇದ್ದಂತೆಯೇ, ಅದು ಐಹಿಕ ಪರದೈಸವಾಗಿರುತ್ತದೆ.
ಪುನರುತ್ಥಾನ—ಸಂತೈಸುವಿಕೆಯ ಒಂದು ಮೂಲ
ನಾವು ನಿರೀಕ್ಷಿಸಲು ಕಾರಣಗಳಿರುವುದರಿಂದ, ಆ ಸಪ್ರಮಾಣದ ಬೈಬಲಿನ ಪ್ರತೀಕ್ಷೆಯು ಬಹಳ ಸಂತೈಸುವಿಕೆಯಾಗಿರುತ್ತದೆ. ಯಾಕೆ? ಯಾಕಂದರೆ ಯೆಹೋವನು ಪ್ರೀತಿಯಾಗಿದ್ದಾನೆ. (1 ಯೋಹಾನ 4:8) ಅವಮಾನಕಾರೀ ಮರಣವೊಂದನ್ನು ಅನುಭವಿಸುವಂತೆ ಬಿಟ್ಟಾಗ, ದೇವರು ಅವನ ಪ್ರೀತಿಯ ಅದ್ಭುತವಾದ ಗುಣವನ್ನು ನಿಜವಾಗಿಯೂ ಪ್ರದರ್ಶಿಸಿದನು. ಸ್ವಲ್ಪ ಸಮಯದ ಮೊದಲು, ಯೇಸುವಂದದ್ದು: “ದೇವರು ಲೋಕದ (ಮಾನವ ಕುಲ) ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”—ಯೋಹಾನ 3:16.
ನಂಬುವ ಮಾನವ ಕುಲಕ್ಕೆ ವಿಮೋಚನೆಯೊಂದನ್ನು ಒದಗಿಸಲು ತನ್ನ ಜೀವವನ್ನು ಕೊಡುವುದರಲ್ಲಿ ಯೇಸುವು ಕೂಡಾ ಅಸಾಧಾರಣವಾದ ಪ್ರೀತಿಯನ್ನು ತೋರಿಸಿದನು. ಅವನು ಸ್ವತಹ ಅಂದದ್ದು: “ಹಾಗೆಯೇ ಮನುಷ್ಯ ಕುಮಾರನು ಸೇವೆ ಮಾಡಿಸಿ ಕೊಳ್ಳುವುದಕ್ಕೆ ಬರಲಿಲ್ಲ, ಸೇವೆ ಮಾಡುವುದಕ್ಕೂ ಅನೇಕರನ್ನು ಬಿಡಿಸಿ ಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವುದಕ್ಕೂ ಬಂದನು.”—ಮತ್ತಾಯ 20:28.
ಮೊದಲ ಲೇಖನದಲ್ಲಿ ತಿಳಿಸಿದಂತಹ ಕರೊಲಾನ್ ಭಯಂಕರ ಅಪಘಾತವೊಂದರಲ್ಲಿ ಅವಳ ಪ್ರೀತಿಯ ಅನೇಕರನ್ನು ಕಳಕೊಂಡದರ್ದಿಂದ ನಂತರ ಸ್ಥಂಭೀತಳಾದಳು. ಆದರೆ ಸತ್ತ ಅವಳ ಪ್ರಿಯ ಜನರು ಸಂಕಟಕ್ಕೆ ಈಡಾಗಿರುವುದಿಲ್ಲ ಎಂದು ತಿಳಿದು ಕೊಳ್ಳುವುದರಿಂದ ಸಂತೈಸಲ್ಪಟ್ಟಳು. ನಿಭಾಯಿಸಲು ಅವಳಿಗೆ ಇನ್ನೂ ಹೆಚ್ಚಾಗಿ ಸಹಾಯ ಮಾಡಿದ್ದು ಯಾವುದು? ಅವಳ ಪ್ರೀತಿಯ ಆತ್ಮೀಕ ಸಹೋದರರುಗಳಾದ, ಯೆಹೋವನ ಸಾಕ್ಷಿಗಳು ತೋರಿಸಿದ ಅಪ್ಪಟವಾದ ಸಂತಾಪ ಸೂಚಕ ಹೇಳಿಕೆಗಳು ಬಹಳ ಸಹಾಯಕಾರಿಯಾಗಿ ರುಜುವಾದವು.—ಕೀರ್ತನೆ 34:18.
ಯೆಹೋವನಿಗೆ ಪ್ರಾರ್ಥನೆಯೂ ಬಹಳವಾಗಿ ನೆರವಾಯಿತು. ಅನೇಕ ರಾತ್ರಿ ಅವಳು ಎಚ್ಚರಗೊಳ್ಳುತಿದ್ತಳ್ದು ಮತ್ತು ಅದು ಕೆಟ್ಟ ಸ್ವಪ್ನವಾಗಿ ಯೋಚಿಸುತ್ತಿದ್ದಳು, ಆದರೆ ಅನಂತರ ವಾಸ್ತವಿಕತೆಯು ಅವಳಿಗೆ ತಟ್ಟುತ್ತಿತ್ತು. ಯೆಹೋವನಿಗೆ ವಿಜ್ಞಾಪಿಸುವುದು ಅವಳನ್ನು ಶಾಂತಗೊಳಿಸುತ್ತಿತ್ತು ಮತ್ತು ಪೌಲನು ಬರೆದದ್ದನ್ನು ಅವಳು ಬಹಳವಾಗಿ ಗಣ್ಯ ಮಾಡಿದಳು: “ಯಾವ ಸಂಬಂಧವಾಗಿಯೂ ಚಿಂತೆ ಮಾಡದೆ ಸರ್ವ ವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು.”—ಫಿಲಿಪ್ಪಿಯವರಿಗೆ 4:6, 7.
ಪುನರುತ್ಥಾನದ ನಿರೀಕ್ಷೆಯು ಎಷ್ಟೊಂದು ಸಂತೈಸುವಿಕೆಯಾಗಿರುತ್ತದೆ ಎಂಬುದಕ್ಕೆ ಶರ್ಲೀಯು ಇನ್ನೊಂದು ಉದಾಹರಣೆಯನ್ನು ಒದಗಿಸುತ್ತಾಳೆ. ಒಂದು ಭಾರವಾದ ಕಾಂಕ್ರೀಟಿನ ತುಂಡು ಅವನ ಎದೆಯ ಮೇಲೆ ಬಿದ್ದು, ಅವನ ಚಿಕ್ಕ ಹೃದಯವನ್ನು ಛಿದ್ರಗೊಳಿಸಿ, ಅವಳ ಎಳೆಯ ಮಗ ರಿಕಾರ್ಡೊನು ತಕ್ಷಣವೇ ಕೊಲ್ಲಲ್ಪಟ್ಟನು. ಜನವರಿ 1986 ರಲ್ಲಿ ಈ ದುರಂತದ ನಂತರ, ಶರ್ಲೀಯು ತನ್ನ ಮಿತ್ರರಿಗೆ ಅಂದದ್ದು: “ಅದೊಂದು ಸ್ವಪ್ನಪಿಶಾಚಿಯೋಪಾದಿ ಇತ್ತು.” ಕಥೊಲಿಕ ಚರ್ಚಿನಲ್ಲಿ ಅವಳು ಈ ಮಾತುಗಳನ್ನು ಕೇಳಿದಳು: “ದೇವರು ಜೀವಂತರ ಮತ್ತು ಸತ್ತವರ ನ್ಯಾಯತೀರ್ಪು ಮಾಡುತ್ತಾನೆ.” ಶರ್ಲೀಯು ಆಲೋಚಿಸಲು ಆರಂಭಿಸಿದಳು, ‘ದೇವರು ಸತ್ತವರ ಮತ್ತು ಜೀವಂತರ ನ್ಯಾಯತೀರ್ಪು ಮಾಡುವುದಾದರೆ, ಸತ್ತ ನಂತರ ಜನರು ಎಲ್ಲಿಗೆ ಹೋಗುತ್ತಾರೆ ಎಂದು ಒಬ್ಬನು ತಿಳಿಯುವುದು ಹೇಗೆ? ಮತ್ತು ಅವರು ಸ್ವರ್ಗದಲ್ಲಿರುವುದಾದರೆ, ನಂತರ ನ್ಯಾಯತೀರ್ಪು ಮಾಡಲು ಅವರನ್ನು ಪುನರುತ್ಥಾನಗೊಳಿಸುವುದು ಯಾಕೆ? ಇನ್ನೂ ಹೆಚ್ಚಾಗಿ, ಅವರು ಸ್ವರ್ಗದಲ್ಲಿ ಜೀವಂತರಾಗಿರುವುದಾದರೆ, ಅವರನ್ನು ಪುನರುತ್ಥಾನಗೊಳಿಸುವುದಾದರೂ ಹೇಗೆ?’ ಸತ್ತವರ ಪುನರುತ್ಥಾನದ ಕುರಿತು ಮಾತ್ರ ಹೇಳುತ್ತದೆಯೇ ಹೊರತು, ಜೀವಂತರ ಪುನರುತ್ಥಾನದ ಕುರಿತು ಬೈಬಲಿನಲ್ಲಿ ಎಲ್ಲಿಯೂ ಹೇಳುವುದಿಲ್ಲ.
ಶರ್ಲೀಯು ಈ ಸಮಸ್ಯೆಯ ಕುರಿತು ತನ್ನ ಗಂಡನನ್ನು ಕೇಳಿದಳು, ಯಾಕಂದರೆ ಅವನಿಗೆ ಬೈಬಲಿನ ಕುರಿತು ತಿಳಿದಿತ್ತು. ಶಾಸ್ತ್ರ ವಚನಗಳು ಈ ವಿಷಯದ ಮೇಲೆ ಹೇಳುವ ಕೆಲವು ವಿಚಾರಗಳನ್ನು ಒಮ್ಮೆ ಅವಳು ತಿಳಿದ ಮೇಲೆ, ಶರ್ಲೀಯು ಪುನಃ ಎಂದೂ ಚರ್ಚಿಗೆ ಹೋಗಲಿಲ್ಲ. ಮಾರ್ಚ್ 1986 ರಲ್ಲಿ ಯೆಹೋವನ ಸಾಕ್ಷಿಗಳಲ್ಲೊಬ್ಬನಾಗಿರುವ ಅವಳ ಸಂಬಂಧಿಕನು ಶರ್ಲೀಯೊಂದಿಗೂ, ಅವಳ ಗಂಡನೊಂದಿಗೂ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದನು ಮತ್ತು ಬೇಗನೆ ದೀಕ್ಷಾಸ್ನಾನ ಅವರು ಪಡೆದರು. ಈಗ ಅವಳು ಸಮಾಪ್ತಿಗೆ ಬಂದದ್ದು: “ಸತ್ಯವನ್ನು ತಿಳಿಯುವುದು, ಪುನರುತ್ಥಾನದ ಕುರಿತು ತಿಳಿಯುವುದು ಮತ್ತು ಯೆಹೋವನು ಎಂತಹ ಅದ್ಭುತಕರನಾದ ವ್ಯಕ್ತಿಯಾಗಿದ್ದಾನೆ ಎಂದು ತಿಳಿಯುವುದು ಒಂದು ಕೌತುಕದ ಸಂಗತಿಯಾಗಿರುತ್ತದೆ.”
ಪುನರುತ್ಥಾನ—ಯಾವಾಗ?
ದರ್ಶನವೊಂದರಲ್ಲಿ ಅಪೊಸ್ತಲ ಯೋಹಾನನು “ಯಾರಿಂದಲೂ ಎಣಿಸಲಾಗದಂತಹ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡನು. ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. (ಪ್ರಕಟನೆ 7:9) ಮಹಾ ಸಮೂಹದವರು ‘ದೇವರ ಸಿಂಹಾಸನದ ಮುಂದೆ ನಿಂತಿರುವುದು’ ಭೂಮಿಯ ಮೇಲೆ ಅವರು ಜೀವಿಸಲಿರುವ ವಾಸ್ತವಾಂಶಕ್ಕೆ ಕ್ರಮಬದ್ಧವಾಗಿದೆ. (ಯೆಶಾಯ 66:1) ಅವರಲ್ಲಿ ಕೆಲವರು ಈಗ ಸಾಯುವುದಾದರೆ, ಅವರು ಯಾವಾಗ ಪುನರುತ್ಥಾನ ಹೊಂದುವರು? ಬೈಬಲು ಯಾವುದೇ ದಿನ ತಿಳಿಸುವುದಿಲ್ಲ, ಆದರೆ ದೇವರ ನೀತಿಯ ಮಟ್ಟಗಳಿಗನುಸಾರ ಜೀವಿಸುವ ಇಚ್ಛೆಯಿಲ್ಲದಿರುವ ಎಲ್ಲರನ್ನು ಭೂಮಿಯ ಮೇಲಿನಿಂದ ಸನ್ನಿಹಿತವಾಗಿರುವ ಯುದ್ಧದಲ್ಲಿ ನಿರ್ಮೂಲಗೊಳಿಸಿದ ನಂತರ ಇದು ನಡೆಯಲಿರುವುದು. (2 ಥೆಸಲೋನಿಕದವರಿಗೆ 1:6-9) ಇದು ನ್ಯಾಯತೀರ್ಪಿನ ದಿನಕ್ಕಾಗಿ ಮತ್ತು ಭೂಮಿಯ ಮೇಲಿನ ಪುನರುತ್ಥಾನಕ್ಕೆ ಅರ್ಹರೆಂದು ದೇವರು ಎಣಿಸುವ ಎಲ್ಲರನ್ನು ಪುನರುತ್ಥಾನಕ್ಕಾಗಿ ದಾರಿಯನ್ನು ತೆರೆಯುವುದು. (ಯೋಹಾನ 5:28, 29; ಅ.ಕೃತ್ಯಗಳು 24:15) ಈ ಉತ್ತೇಜಕ ಮತ್ತು ಅದ್ಭುತಕರ ಬೆಳವಣಿಗೆಗಳು ಬಲುಬೇಗನೆ ನಡೆಯಲಿರುವವು ಎಂದು ಬೈಬಲ್ ಪ್ರವಾದನೆಯ ನೆರವೇರಿಕೆಯು ರುಜುಪಡಿಸುತ್ತದೆ!—ಪ್ರಕಟನೆ 16:14-16.
ಒಮ್ಮೆ ಯೇಸುವಿನ ಶಿಷ್ಯರು ಅವನಿಗೆ ಕೇಳಿದ್ದು: “ನಿನ್ನ ಸಾನ್ನಿಧ್ಯತೆಗೂ, ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆಯೇನು?” ಅದಕ್ಕುತ್ತರವಾಗಿ ಯೇಸುವು, ಯುದ್ಧಗಳ, ಆಹಾರದ ಕೊರತೆಗಳ, ಭೂಕಂಪಗಳ, ಅಂಟುರೋಗಗಳ ಮತ್ತು ರಾಜ್ಯದ ಸುವಾರ್ತೆಯನ್ನು ಲೋಕ ವ್ಯಾಪಕವಾಗಿ ಸಾರುವುದರ ಕುರಿತು ಹೇಳಿದ್ದನು.—ಮತ್ತಾಯ 24:3-14; ಲೂಕ 21:7-11.
ಈ ವೈಶಿಷ್ಟಮಯ ಪ್ರವಾದನೆಯು ಮೊದಲನೆಯ ಲೋಕ ಯುದ್ಧ ಆರಂಭವಾದಾಗ ಅಂದರೆ 1914 ರಿಂದ ನೆರವೇರುತ್ತಾ ಇದೆ. ಆ ಯುದ್ಧವು ಲಕ್ಷಾಂತರ ಮಂದಿಯನ್ನು ಕೊಂದಿತು ಮತ್ತು ಅನೇಕ ದೇಶಗಳಲ್ಲಿ ಕ್ಷಾಮ ಮತ್ತು ಆಹಾರದ ಕೊರತೆಯನ್ನು ಉಂಟುಮಾಡಿತು. ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಮತ್ತು ತದನಂತರ ಲೋಕದ ಸನ್ನಿವೇಶವು ಇನ್ನಷ್ಟು ಬಿಗಡಾಯಿಸಿದೆ.
ಅಂಟುರೋಗಗಳ ವಿಷಯದಲ್ಲಿ ಅತಿ ಕೆಟ್ಟ ಉದಾಹರಣೆಯು ಏಯ್ಡ್ಸ್ ಎಂದು ಅನೇಕರು ಎಣಿಸುತ್ತಾರೆ. “ಈ ಜಾಡ್ಯವು ಎಷ್ಟೊಂದು ವಿಸ್ತಾರ್ಯವಾಗಿದೆ ಮತ್ತು ಎಷ್ಟೊಂದು ಮಾರಕವಾಗಿದೆಯೆಂದರೆ ತಜ್ಞರು ಅದನ್ನು ಹದಿನಾಲ್ಕನೆಯ ಶತಮಾನದಲ್ಲಿ ಯುರೋಪಿನ ಜನಸಂಖ್ಯೆಯ ಕಾಲುಭಾಗವನ್ನು ಕೊಂದ ಉಗ್ರ ಪೇಗ್ಲುವ್ಯಾಧಿಗೆ (ಬ್ಲೇಕ್ ಡೆತ್) ಹೋಲಿಸುತ್ತಾರೆ.”—ರೀಡರ್ಸ್ ಡೈಜೆಸ್ಟ್, ಜೂನ್ 1987.
ಇಂತಹ ಅತ್ಯಂತ ಭೀತಿಗಳ ನೋಟದಲ್ಲಿ, ಪುನರುತ್ಥಾನವು ಎಂತಹ ವಿಸ್ಮಯಕಾರಿ ಘಟನೆಯಾಗಲಿರುವುದು! ಮರಣದಿಂದ ವಿಭಜಿತಗೊಂಡಿರುವ ಕರೊಲಾನ್ ಮತ್ತು ಶರ್ಲೀಯಂತಹ ಕುಟುಂಬಗಳು ಪುನಃ ಐಕ್ಯಗೊಳ್ಳುವಾಗ ಅದೊಂದು ತಡೆಹಿಡಿಯಲಾಗದ ಒಂದು ಸಂತೋಷದ ಸಮಯವಾಗಲಿರುವುದು! ಸ್ಪಷ್ಟವಾಗಿ, ನಮ್ಮಲ್ಲಿ ಪ್ರತಿಯೊಬ್ಬನಿಗೆ ಇರುವ ವಿವೇಕಯುಕ್ತ ಮಾರ್ಗವೆಂದರೆ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಜೀವಿತಗಳನ್ನು ಈಗಲೇ ಅಳವಡಿಸಿ ಕೊಳ್ಳುವುದು ಮತ್ತು ಈ ರೀತಿಯಲ್ಲಿ, ಪುನರುತ್ಥಾನವು ಜರುಗುವಾಗ ನಾವು ಅಲ್ಲಿ ಹಾಜರಿರುವಂತೆ ಅರ್ಹರಾಗುವುದೇ ಆಗಿದೆ. (w89 10/15)
[ಪುಟ 7 ರಲ್ಲಿರುವ ಚಿತ್ರ]
ಮರವೊಂದನ್ನು ಕಡಿದರೂ ಅದು ಪುನಃ ಮೊಳೆದು ಚಿಗುರೊಡೆಯುವಂತೆ, ತನ್ನ ಜ್ಞಾಪಕದಲ್ಲಿರುವ ಮೃತರನ್ನು ದೇವರು ಎಬ್ಬಿಸ ಶಕ್ತನು ಎಂದು ಬೈಬಲು ಹೇಳುತ್ತದೆ.—ಯೋಬನು 14:7-9, 14, 15