ರಾಜ್ಯ ಘೋಷಕರ ವರದಿ
ಮೆಕ್ಸಿಕೊವಿನಲ್ಲಿ “ಆತ್ಮದೊಂದಿಗೆ ಪ್ರಜ್ವಲಿಸುವುದು”
“ಇಡೀ ದೇಶವು ಪ್ರಜ್ವಲಿಸುತ್ತಾ ಕ್ರಿಯಾಶೀಲತೆಯಿಂದ ಕಂಪಿಸುತ್ತದೆ.” ಹೀಗೆಂದು ವಾಚ್ಟವರ್ ಸೊಸೈಟಿಯ ಮೆಕ್ಸಿಕೋ ಶಾಖಾ ಆಫೀಸು ಬರೆಯುತ್ತದೆ ಮತ್ತು ಈ ಹೇಳಿಕೆಯು ಎಷ್ಟೊಂದು ಸತ್ಯ! ಈ ಕಂಪನದ ಚಟುವಟಿಕೆಯು ಈ ದೇಶದಲ್ಲಿ ಕಳೆದ 70 ತಿಂಗಳುಗಳಿಂದ ಸತತವಾಗಿ ಉನ್ನತ ಸಂಖ್ಯೆಗೆ ಏರುತ್ತಾ, ಅಗೋಸ್ತಿನಲ್ಲಿ 2,77,436 ಪ್ರಚಾರಕರಿಗೆ ತಲಪಿದ್ದೇ. ಇದಕ್ಕೆ ಸೇರಿಸಿ, 400,000 ಹೆಚ್ಚು ಬೈಬಲ್ ಅಭ್ಯಾಸಗಳು ವರದಿಯಾಗಿವೆ. ಹಾಗೂ ಕಳೆದ ಜ್ಞಾಪಕಾಚರಣೆಗೆ ಹಾಜರಿ 10,46,291. ಭಾವೀ ಬೆಳವಣಿಗೆಗೆ ಎಷ್ಟೊಂದು ಉತ್ತಮ ಆಧಾರವಿದೆ.
1989 ರ ಅತ್ಯುಜ್ವಲ ಭಾಗವೆಂದರೆ ಮೆಕ್ಸಿಕೊವಿನಲ್ಲಿ ಯೆಹೋವನ ಸಾಕ್ಷಿಗಳ ಸ್ಥಾನಮಾನದಲ್ಲಿ ಒಂದು ಬದಲಾವಣೆಯೇ. ಇದರ ಫಲವಾಗಿ ಮೊತ್ತಮೊದಲಾಗಿ ಮನೆಮನೆಯ ಸಾರುವ ಕೆಲಸದಲ್ಲಿ ಬೈಬಲನ್ನು ಉಪಯೋಗಿಸಸಾಧ್ಯವಿದೆ ಮತ್ತು ಕೂಟಗಳನ್ನು ಪ್ರಾರ್ಥನೆಯೊಂದಿಗೆ ಆರಂಭಿಸಬಹುದು. ಇದರಿಂದ ಕೂಡಲೇಪರಿಣಾಮವುಂಟಾಯಿತು. ಎರಡು ತಿಂಗಳುಗಳಲ್ಲಿ ಪ್ರಚಾರಕರ ಸಂಖ್ಯೆಯು 17,000 ಕ್ಕಿಂತಲೂ ಹೆಚ್ಚಾಯಿತು.
ಈ ಬೆಳವಣಿಗೆಯಿಂದ ಸಹೋದರರ ಸಂತೋಷ ಅವರ ಹೇಳಿಕೆಗಳಿಂದ ಕಾಣಬಹುದು. ಒಬ್ಬನು ಬರೆದದ್ದು: “ಸಭೆಯಲ್ಲಿ ಕಾಗದವು ಓದಲ್ಪಟ್ಟಾಗ, ಎರಡು ಬಾರಿ ಸ್ವಪ್ರೇರಿತ ಕೈಚಪ್ಪಾಳೆಗಳಿಂದ ಅದು ತಡೆಯಲ್ಪಟ್ಟಿತು. ಅದು ರೋಮಾಂಚಕವೇ!” ಇನ್ನೊಬ್ಬನು ಅಂದದ್ದು: “ಆನಂದ ಬಾಷ್ಪಗಳನ್ನು ನಾವು ತಡೆಹಿಡಿಯಲಾರದೆ ಹೋದೆವು. ಇನ್ನಷ್ಟು ಕ್ರಮಭರಿತವಾಗಿ ಬರುವದರಲ್ಲಿ ಇದರ ಫಲಿತಾಂಶ ತೋರಿ ಬಂತು. ಆರಂಭದ ಪ್ರಾರ್ಥನೆಯಲ್ಲಿ ಪ್ರತಿಯೊಬ್ಬನು ಹಾಜರಿರಲು ಬಯಸಿದನು.”
ಇನ್ನೊಬ್ಬ ಸಾಕ್ಷಿಯು ಹೇಳಿದ್ದು?: “ಕ್ಯಾಥ್ಲಿಕ್ ಚರ್ಚಿನ ಬೈಬಲ್ ಅಧ್ಯಯನದ ಕಾರ್ಯಕ್ರಮದಲ್ಲಿ ಕಾರ್ಯಮಗ್ನ ಸ್ತ್ರೀಯೊಬ್ಬಳು ನಮ್ಮ ಕ್ಷೇತ್ರದಲ್ಲಿ ಹೇಳಿದ್ದು: “[ಸಾಕ್ಷಿಗಳು] ಈ ಹಿಂದೆ ಕೇವಲ ಅವರ ಹೇಳಿಕೆಗಳನ್ನು ಮತ್ತು ಪತ್ರಿಕೆಗಳನ್ನು ನೀಡಿ ಹೋಗುವಾಗ ನಾವು ಮಾತಿಲ್ಲದವರಾಗುತ್ತಿದ್ದೆವು, ಈಗ ಅವರು ಬಾಗಲಲ್ಲಿ ಬೈಬಲನ್ನು ತೆರೆಯುವದರಿಂದ ನಾವು ನಷ್ಟಹೊಂದಿದ್ದೇವೆ!”
ಮೆಕ್ಸಿಕೋದಲ್ಲಿರುವ ಯೆಹೋವನ ಸಾಕ್ಷಿಗಳು ಬೈಬಲಿನೊಂದಿಗೆ ಅನೌಪಚಾರಿಕ ಸಾಕ್ಷಿಯನ್ನು ನೀಡುವುದನ್ನು ಸಹಾ ಉತ್ತೇಜಿಸುತ್ತಾರೆ. ಗರ್ಭಪಾತದ ಕುರಿತು ಅವಳೇನನ್ನುತ್ತಾಳೆಂದು ಸ್ತ್ರೀಯೊಬ್ಬಳು ಒಬ್ಬ ಸಹೋದರಿಯನ್ನು ಸಮೀಪಿಸಿದಳು. ಸಾಕ್ಷಿಯು ಉತ್ತರಿಸಿದ್ದು: “ಬೈಬಲು ಏನು ಹೇಳುತ್ತದೋ ಅದಕ್ಕಿಂತಲೂ ನಾನೇನು ಎಣಿಸುತ್ತೇನೆಂಬದು ಅಷ್ಟೇನೂ ಪ್ರಾಮುಖ್ಯವಲ್ಲ.” ಹಲವಾರು ಶಾಸ್ತ್ರವಚನಗಳನ್ನು ಓದಿಯಾದ ಮೇಲೆ ಸಹೋದರಿಯು ಪರ್ಯಾಲೋಚಿಸಿದ್ದು: “ನಿರ್ಮಾಣಿಕನಿಗೆ ಜೀವವು ಅತೀ ಪ್ರಾಮುಖ್ಯ, ಇನ್ನೂ ಹುಟ್ಟದಿರುವ ಜೀವವು ಕೂಡಾ.”
ಆಗ ಸ್ತ್ರೀಯು ತಾನು ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತೇನೆಂದೂ, ಆದರೆ ವೈದ್ಯಕೀಯ ಪರೀಕ್ಷೆಗಳು ಮಗುವು ವಿಕಾರವಾಗಿರುವದನ್ನು ಸೂಚಿಸಿದೆಂದೂ ತಿಳಿಸಿದಳು. ಗರ್ಭಪಾತಮಾಡಬೇಕೆಂದು ಅವಳ ವೈದ್ಯನು ಬಯಸಿದ್ದನು ಮತ್ತು ಗಂಡನು ಒಪ್ಪಿದ್ದಾನೆ, ಆದರೆ ಅವಳಿಗೆ ಸ್ವತಹಾ ಖಚಿತವಾಗಿ ತಿಳಿದಿಲ್ಲ. ಇನ್ನಷ್ಟು ಅವಳೊಂದಿಗೆ ಪ್ರಚಾರಕಳು ಬೈಬಲಿನಿಂದ ವಿವೇಚಿಸಿದಳು. ಅವಳ ಹೆಸರುಕೊಟ್ಟಳು, ಅನಂತರ ಇಬ್ಬರೂ ಅಗಲಿದರು.
ಐದು ವರ್ಷಗಳ ನಂತರ ಜಿಲ್ಲಾ ಅಧಿವೇಶನವೊಂದರಲ್ಲಿ 4 ವರ್ಷದ ಮಗುವಿನೊಂದಿಗೆ ದಂಪತಿಗಳಿಬ್ಬರು ಈ ಸಹೋದರಿ ಮತ್ತು ಅವಳ ಗಂಡನನ್ನು ಕಾಣಲು ಬಯಸಿದರು. ಅವಳು ಅದೇ ಸ್ತ್ರೀ! ಏನು ಸಂಭವಿಸಿತ್ತು? ಸಾಕ್ಷಿಯೊಂದಿಗೆ ಅವಳ ಸಂಭಷಣೆಯ ನಂತರ, ಮಗುವು ಇರುವಂತೆ ಸ್ತ್ರೀಯು ತೀರ್ಮಾನಿಸಿದಳು. ಅವಳನ್ನು ಪುನಃ ಕಾಣಲು ಅವಳ ವೈದ್ಯನು ನಿರಾಕರಿಸಿದನು. ಅವಳ ಗಂಡನು ಮಗುವು ಅಂಗವಿಕಲವಾಗಿ ಹುಟ್ಟುವದಾದರೆ ಅವಳನ್ನು ತ್ಯಜಿಸುತ್ತೇನೆಂದು ಬೆದರಿಕೆ ಹಾಕಿದನು. ಜನನದ ಸಮಯ ಬಂದಾಗ, ಅವಳಿಗೆ ದೊರಕಬಹುದಾದ ಮೊದಲ ವೈದ್ಯನ ಸಹಾಯಕ್ಕಾಗಿ ಅವಳು ಹೋದಳು.
ಮಗುವು ಹುಟ್ಟಿದ ತಕ್ಷಣ, ವೈದ್ಯನು ಹೇಳಿದ್ದು: “ಶುಭಾಶಯಗಳು, ತಾಯೀ! ನಿನಗೆ ಒಂದು ಸುಂದರ ಹೆಣ್ಣು ಮಗು ಆಗಿದೆ.” ತನ್ನ ಕಿವಿಗಳನ್ನು ನಂಬದೇ, ಮಗುವನ್ನು ಸೂಕ್ಷ್ಮವಾಗಿ ಪರೀಕ್ಷಿಸುವಂತೆ ಅವಳು ವಿನಂತಿಸಿದಳು. ಅನಂತರ ಅವನಿಗೆ ತನ್ನ ಕಥೆಯನ್ನು ವರ್ಣಿಸಿದಳು. ವೈದ್ಯನು ಇದನ್ನು ಮಾತ್ರ ಹೇಳಶಕ್ತನಾದನು: “ಇದೊಂದು ಅದ್ಭುತ.” ಜೀವದ ಪವಿತ್ರತೆಯ ಕುರಿತು ಯೆಹೋವನ ನೋಟವನ್ನು ಗೌರವಿಸಲು ತನಗೆ ಧೈರ್ಯವಿದ್ದಕ್ಕಾಗಿ ಆ ಸ್ತ್ರೀ ಸಂತೋಷಪಟ್ಟಳು ಮತ್ತು ಅವಳ ಸುಂದರ, ಆರೋಗ್ಯವಂತ ಮಗುವಿಗೆ ಈ ಸಹೋದರಿಯ ಹೆಸರನ್ನು ಇಟ್ಟಳು. ಅವಳು ಶಕ್ತಿ ಪಡೆದ ಕೂಡಲೇ, ಸಾಕ್ಷಿಗಳನ್ನು ಹುಡುಕಿ, ಅವರೊಂದಿಗೆ ಆಭ್ಯಾಸ ಆರಂಭಿಸಿದಳು. ಒಂದು ವರ್ಷದೊಳಗೆ ಅವಳೂ ಅವಳ ಗಂಡನೂ ದೀಕ್ಷಾಸ್ನಾನ ಪಡೆದರು.
ಅಪೋಸ್ತಲ ಪೌಲನು ಒತ್ತಾಯಿಸಿದ್ದು: “ಆತ್ಮದೊಂದಿಗೆ ಪ್ರಜ್ವಲಿಸುವವರಾಗಿರ್ರಿ. ಯೆಹೋವನಿಗಾಗಿ ಸೇವೆ ಮಾಡಿರಿ.” (ರೋಮಾಪುರ 12:11) ಬೇರೆಲ್ಲಾ ಕಡೆಗಳಲ್ಲಿರುವಂತೆಯೇ, ಮೆಕ್ಸಿಕೋವಿನ ಯೆಹೋವನ ಸಾಕ್ಷಿಗಳು ತಮ್ಮೆಲ್ಲಾ ಹೃದಯದಿಂದ ಈ ಬುದ್ಧಿವಾದಕ್ಕೆ ಪ್ರತಿವರ್ತಿಸುತ್ತಾರೆ. ಆದಕಾರಣ ಇಡೀ ದೇಶವೇ ಆತ್ಮಿಕ ಚಟುವಟಿಕೆಯಿಂದ ಪ್ರಜ್ವಲಿಸುತ್ತಾ, ಕಂಪಿಸುತ್ತದೆ. ತನ್ನ ನಂಬಿಗಸ್ತನನ್ನು ಯೆಹೋವನು ಎಷ್ಟು ವಿಫಲವಾಗಿ ಆಶೀರ್ವದಿಸುತ್ತಾನೆ! (w90 1/1)