ವಾಗ್ದಾನ ದೇಶದ ದೃಶ್ಯಗಳು
ನೀವು ತಿಳಿಯದೇ ಇರಬಹುದಾದ ಒಂದು ಯೊರ್ದನ್
ಯೊರ್ದನ್ ಹೊಳೆ ಎಂಬ ಹೆಸರು ತಾನೇ ಚಿರಪರಿಚಿತ ದೃಶ್ಯಗಳನ್ನು ನಿಮ್ಮ ನೆನಪಿಗೆ ತರಬಹುದು: ಯೆರಿಕೋ ಸಮೀಪ ಅದರ ಬತ್ತಿದ ಒಣನೆಲದ ಮೇಲೆ ಯೆಹೋಶುವನ ಕೈಕೆಳಗೆ ಇಸ್ರಾಯೇಲ್ಯರು ಅದನ್ನು ದಾಟಿದ್ದರು. ನಾಮಾನನು ತನ್ನ ಕುಷ್ಠದ ವಾಸಿಗಾಗಿ ಅದರ ನೀರಿನಲ್ಲಿ ಏಳು ಸಾರಿ ಮುಳುಗಿ ಸ್ನಾನಮಾಡಿದ್ದನು. ಅನೇಕ ಯೆಹೂದ್ಯರು, ಯೇಸು ಸಹಾ, ಯೋಹಾನನಿಂದ ದೀಕ್ಷಾಸ್ನಾನವನ್ನು ಪಡೆಯಲಿಕ್ಕಾಗಿ ಅಲ್ಲಿಗೆ ಬಂದಿದ್ದರು.—ಯೆಹೋಶುವ 3:5-17; 2 ಅರಸು 5:10-14; ಮತ್ತಾಯ 3:3-5, 13.
ಈ ಎಲ್ಲಾ ಪ್ರಖ್ಯಾತ ಘಟನಾವಳಿಗಳು ಯೊರ್ದನಿನ ದೀರ್ಘ ಹಾಗೂ ಚಿರಪರಿಚಿತ ಭಾಗದಲ್ಲಿ ಸಂಭವಿಸಿತ್ತು, ಅದು ಗಲಿಲಾಯ ಸಮುದ್ರದ ದಕ್ಷಿಣದಲ್ಲಿ ಮತ್ತು ಮೃತ ಸಮುದ್ರದ ಕೆಳಭಾಗದಲ್ಲಿ. ಆದರೆ ದೇವರ ವಾಕ್ಯದ ದಕ್ಷ ವಿದ್ಯಾರ್ಥಿಗಳು ಯೊರ್ದನಿನ ಇನ್ನೊಂದು ಚಾಚನ್ನು—ಹೊಳೆಯ ಉತ್ತರ ಭಾಗ ಮತ್ತು ಅದರ ಸುತ್ತುಮುತ್ತಣ ಪ್ರದೇಶವನ್ನು ಒಂದುವೇಳೆ ಅಲಕ್ಷ್ಯಿಸಲೂ ಬಹುದು. ನಕ್ಷೆಯನ್ನು ನೋಡಿರಿ.a ಆ ಮಧ್ಯೆ ಇರುವ ತಗ್ಗು ಪ್ರದೇಶವು, ಸಿರಿಯಾದಿಂದ ಆಫ್ರಿಕಾಕ್ಕೆ ವಿಸ್ತರಿಸಿರುವ ಗ್ರೇಟ್ ರಿಫ್ಟ್ ವ್ಯಾಲಿ ಎಂಬ ಭೂಬಿರುಕಿನ ಒಂದು ಭಾಗವಾಗಿರುತ್ತದೆ.
ಯೊರ್ದನ್ ಹೊಳೆಯ ಮೂರು ಮುಖ್ಯ ಉಗಮಗಳು, ಉನ್ನತವಾದ ಹರ್ಮೋನ್ ಬೆಟ್ಟದ ಮೇಲೆ ಹಿಮ ಕರಗಿ, ಹರಿಯುವ ತೊರೆಗಳೇ. (ಇಲ್ಲಿ ತೋರಿಸಲ್ಪಟ್ಟ) ಪೂರ್ವಾಧಿಕ್ಯ ತೊರೆಯು ಬೆಟ್ಟದ ತಳದ ಸಮೀಪದ ಸುಣ್ಣ ಕಲ್ಲಿನ ಕಡಿದಾದ ಬಂಡೆಯಿಂದ ಹರಿದು ಬರುತ್ತದೆ. ಕೈಸರೇಯದ ಫಿಲಿಪ್ಪಿಯು ಇಲ್ಲೀ ನೆಲಸಿತ್ತು, ಯೇಸು ಒಂದು “ಎತ್ತರವಾದ ಬೆಟ್ಟದಲ್ಲಿ” ರೂಪಾಂತರಗೊಂಡ ಮೊದಲು ಇದನ್ನು ಸಂದರ್ಶಿಸಿದ್ದನ್ನು ನೆನಪಿಸಿರಿ. (ಮತ್ತಾಯ 16:13–17:2) ಇನ್ನೊಂದು ತೊರೆಯು, ದಾನ್ ಶಹರವು ಕಟ್ಟಲ್ಪಟ್ಟಿದ್ದ ದಿನ್ನೆಯಿಂದ ಹೊರಡುತ್ತದೆ, ಉತ್ತರ ರಾಜ್ಯದ ಇಸ್ರಾಯೇಲ್ಯರು ಬಂಗಾರದ ಬಸವನ ಮೂರ್ತಿಗಳನ್ನು ಸ್ಥಾಪಿಸಿದ್ದು ಇಲ್ಲಿಯೇ. (ನ್ಯಾಯಸ್ಥಾಪಕರು 18:27-31; 1 ಅರಸು 12:25-30) ಮೂರನೇ ತೊರೆಯ ನೀರುಗಳು ಈ ಎರಡರೊಂದಿಗೆ ಸೇರಿ ಕೊಂಡು ಯೊರ್ದನ್ ನದಿಯನ್ನು ಉಂಟು ಮಾಡುತ್ತವೆ, ಅದು ಸುಮಾರು 7 ಮೈಲುಗಳಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಅಡಿಗಳ ವಿಸ್ತಾರ್ಯದಲ್ಲಿ ಬೀಳುತ್ತದೆ.
ಅನಂತರ, ಹುಲಾ ಜಲದ್ವಾರದೊಳಗೆ ತಗ್ಗು ಸಮತಲವಾಗಿ ಯೊರ್ದನ್ ನದೀ ನೀರನ್ನು ಅಗಲವಾಗಿ ಹರಡುವಂತೆ ಮಾಡಿ, ಒಂದು ವಿಸ್ತಾರವಾದ ಜವುಗು ಪ್ರದೇಶವನ್ನು ಉಂಟು ಮಾಡುತ್ತದೆ. ಪುರಾತನ ಕಾಲದಲ್ಲಿ ಹುಲಾ (ಅಥವಾ ಹುಲೇ) ಕೊಳವೆಂದು ಕರೆಯಲ್ಪಟ್ಟ ಆಳವಿಲ್ಲದ ಮಡುವಲ್ಲಿ ಬಹಳ ನೀರು ಒಟ್ಟು ಸೇರುತ್ತಿತ್ತು. ಆದರೆ ಹುಲಾ ಕೊಳವು ಈಗ ಅಲ್ಲಿಲ್ಲ ಯಾಕಂದರೆ ಇತ್ತೀಚಿನ ಸಮಯಗಳಲ್ಲಿ ಯೊರ್ದನಿನ ಮೇಲ್ಗಡೆಯನ್ನು ಸಮತಟ್ಟು ಮಾಡಿ, ಜವುಗು ಪ್ರದೇಶದ ನೀರನ್ನು ಹೀರಲು ಕಾಲುವೆಗಳನ್ನು ತೋಡಲಾಗಿದೆ ಮತ್ತು ಕೊಳದ ತೂಬುಗಳನ್ನು ಆಳಮಾಡಲಾಗಿದೆ. ಆದಕಾರಣ, ಆ ಕ್ಷೇತ್ರದ ಒಂದು ನಕ್ಷೆಯಲ್ಲಿ ಗಲಿಲಾಯ ಸಮುದ್ರದ ಉತ್ತರ ಕಡೆಯನ್ನು ನೀವು ನೋಡುವಲ್ಲಿ ಒಂದು (ಹುಲಾ) ಕೊಳವನ್ನು ನೀವು ಕಾಣುವುದಾದರೆ, ಅದು ಪುರಾತನ ಕಾಲದ ಪ್ರದೇಶದ ನಕ್ಷೆ ಎಂದು ತಿಳಿದು ಬರುವುದು, ಇಂದು ಅದು ಆ ರೀತಿ ಇರುವುದಿಲ್ಲ.
ನೀವು ಸಂದರ್ಶನೆ ಮಾಡಿದಲ್ಲಿ, ನಿಸರ್ಗದ ಕಾಯ್ದಿಟ್ಟ ಜಾಗವೊಂದು ಬೈಬಲಿನ ದಿನಗಳಲ್ಲಿ, ಜಂಬು ಹುಲ್ಲು ಮತ್ತು ಆಪು ಹುಲ್ಲುಗಳೆಂಬ ವಿಶೇಷ ತರದ ಸಸ್ಯಗಳಿಗೆ ಬೀಡಾಗಿದ್ದ ಪ್ರದೇಶವು, ಹೇಗೆ ಕಾಣುತ್ತಿತ್ತೆಂಬ ಕಲ್ಪನೆಯನ್ನು ನಿಮಗೆ ಕೊಡುವುದು.—ಯೋಬ 8:11.
ಆ ಕ್ಷೇತ್ರವು ಸದಾ ಬದಲಾವಣೆಯಾಗುತ್ತಿದ್ದ ಪಕ್ಷಿ ವಲಯಕ್ಕೆ ಬೀಡಾಗಿತ್ತು. ಕೊಕ್ಕರೆ, ಬಕ, ನೀರಗೋಳಿ, ಕಾಡು ಕಪೋತ ಮುಂತಾದ ಬೇರೆ ಬೇರೆ ಪಕ್ಷಿಗಳು ಅಲ್ಲಿ ಹೇರಳವಾಗಿ ನೆಲೆಸಿದ್ದವು, ಯಾಕಂದರೆ ಜವುಗು ಮತ್ತು ಕೊಳವು ಕೂಡಿದ್ದ ಆ ಪ್ರದೇಶವು ಆಫ್ರಿಕಾ ಮತ್ತು ಯುರೋಪಿನ ನಡುವೇ ವಲಸೆ ಹೋಗುವ ಹಾದಿಯಲ್ಲಿದ್ದ ಅತ್ಯುತ್ತಮ ವಿಶ್ರಮ ಸ್ಥಾನವಾಗಿತ್ತು. (ಧರ್ಮೋಪದೇಶ ಕಾಂಡ 14:18; ಕೀರ್ತನೆ 102:6; ಯೆರೆಮೀಯ 8:7) ಆ ಕ್ಷೇತ್ರಕ್ಕೆ ಒಪ್ಪುವ ಇತರ ಜೀವಿಗಳು ತೋರಿ ಬರುವುದು ಕಡಿಮೆ, ಆದರೆ ಅವುಗಳ ಇರುವಿಕೆಯು ಹುಲಾ ಜಲದ್ವಾರದ ದಾಟುವಿಕೆಯನ್ನು ಅನಾಕರ್ಶಕವಾಗಿ ಮಾಡಿತ್ತು; ಅವುಗಳಲ್ಲಿ ಸಿಂಹ, ನೀರಾನೆ, ತೋಳ, ಮತ್ತು ಕಾಡು ಹಂದಿ ಸೇರಿದಿರ್ದ ಬಹುದು. (ಯೋಬ 40:15-24; ಯೆರೆಮೀಯ 49:19; 50:44; ಹಬಕ್ಕೂಕ 1:8) ಕೆಲವು ಅವಧಿಗಳಲ್ಲಿ ಸೊಳ್ಳೆ ಕಡಿತದಿಂದ ಹುಟ್ಟುವ ಮಲೇರಿಯಾ ಅಲ್ಲಿ ನೆಲೆಸಿತ್ತು, ಬೈಬಲಿನಲ್ಲಿ ತಿಳಿಸಿದ ಜ್ವರಗಳಲ್ಲಿ ಇದೊಂದಾಗಿರಬಹುದು.
ಪ್ರಯಾಣಿಕರು ಹಾಗೂ ವರ್ತಕರ ಕಾರ್ವಾನುಗಳು ಈ ಜೌಗು ಪ್ರದೇಶವನ್ನು ಸುತ್ತು ಬಳಸಿ ಹೋಗುತ್ತಿದ್ದರೆಂಬದು ಗ್ರಾಹ್ಯ. ಹಾಗಾದರೆ, ಗಲಿಲಾಯ ಸಮುದ್ರದ ಉತ್ತರ ಕಡೆಯ ತಗ್ಗಿನಲ್ಲಿ ಯೊರ್ದನ್ ಹೊಳೆಯನ್ನು ಎಲ್ಲಿಂದ ದಾಟಸಾಧ್ಯ?
ಗಲಿಲಾಯ ಸಮುದ್ರದ ಸಮೀಪ ಜಲವೇರಿ ನಿಂತ ಅಗ್ನಿ ಶಿಲೆಗಳಿವೆ, ಈ ಸೇತುವೆಯಂಥ ಶಿಲಾರಚನೆಯ ಕಾರಣದಿಂದಲೇ ನೀರು ಹಿಮ್ಮೆಟ್ಟಿ, ಹುಲಾ ಕೊಳವನ್ನು ನಿರ್ಮಿಸಿತ್ತು. ಜಲಗರ್ಭದಿಂದ ಮೇಲೆದ್ದು ಕಾಣಿಸುವ ಈ ಶಿಲಾಭಾಗವನ್ನು 16 ನೇ ಪುಟದಲ್ಲಿ ನೀವು ಕಾಣ ಬಹುದು. ಯೊರ್ದನ್ ಅದನ್ನು (ದೂರದಲ್ಲಿ ತೋರುವ) ಗಲಿಲಾಯ ಸಮುದ್ರದ ದಕ್ಷಿಣಕ್ಕೆ ರಭಸದಿಂದ ತಳ್ಳುವಾಗ ಶೇತ್ವ ಅಲೆಗಳು ಪರಿಣಮಿಸುತ್ತಿದ್ದವು. ಆ ಆಳವಾದ ಕಂದರಕ್ಕಿಳಿದು ಕ್ಷಿಪ್ರವಾಹಿ ಯೊರ್ದನ್ ನೀರನ್ನು ದಾಟುವುದು ಅಪಾಯಕರವೆಂಬದನ್ನು ಪುರಾತನ ಯಾತ್ರಿಕರು ಕಂಡಿರಬೇಕು ಎಂಬದು ನಿಶ್ಚಯ.
ಹುಲಾ ಜಲದ್ವಾರದ ಜೌಗು ಪ್ರದೇಶ ಮತ್ತು ಕಂದರದ ನಡುವೆ, ನಿಧಾನ ಜಲಪ್ರವಾಹದ ಒಂದು ಚಿಕ್ಕ ಸಮತಟ್ಟಾದ ಚಾಚು ಇತ್ತು. ಇಲ್ಲಿ ಪುರಾತನ ಪ್ರವಾಸಿಗಳು ನದಿಯನ್ನು ಸುರಕ್ಷಿತವಾಗಿ ದಾಟ ಬಹುದಿತ್ತು, ಮತ್ತು ಅದು ವಾಗ್ದತ್ತ ದೇಶದೊಳಗಿನ ಮುಖ್ಯ ಸಂಚಾರ ಮಾರ್ಗದ ಭಾಗವಾಯಿತು. ಈಗ ಈ ಸ್ಥಳದಲ್ಲಿ ಒಂದು ಸೇತುವೆ ಇದೆ, ಯೊರ್ದನನ್ನು ದಾಟುವುದಕ್ಕೆ ಇದಿನ್ನೂ ಪ್ರಧಾನ ಜಾಗವು.
ಹುಲಾ ಜಲದ್ವಾರವು ಇಂದು ಫಲವತ್ತಾದ ಒಂದು ವ್ಯವಸಾಯ ಕ್ಷೇತ್ರ. ಅಲ್ಲಿ ಮೀನಿನ ಕೊಳಗಳೂ ಇವೆ. ಇವೆಲ್ಲವೂ ಶಕ್ಯವಾದದ್ದು ಯೊರ್ದನ್ ಹೊಳೆಯ ಈ ಭಾಗದಿಂದ ಕೆಳಗೆ ಹರಿಯುವ ಹೇರಳ ಜಲಪ್ರವಾಹದ ಕಾರಣದಿಂದಲೇ. (w90 7/1)
[ಅಧ್ಯಯನ ಪ್ರಶ್ನೆಗಳು]
a ದೊಡ್ಡದಾದ ನಕ್ಷೆ ಮತ್ತು ಚಿತ್ರಕ್ಕಾಗಿ, 1990 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ ನಲ್ಲಿ ನೋಡಿರಿ.
[ಪುಟ 17ರಲ್ಲಿರುವಚಿತ]
(For fully formatted text, see publication)
ಹುಲಾ
ಗಲಿಲಾಯ ಸಮುದ್ರ
[ಕೃಪೆ]
Based on a map copyrighted by Pictorial Archive (Near Eastern History) Est. and Survey of Israel.
[ಪುಟ 16 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[[ಪುಟ 17 ರಲ್ಲಿರುವ ಚಿತ್ರ ಕೃ]
Pictorial Archive (Near Eastern History) Est.
Animal photos: Safari-Zoo of Ramat-Gan, Tel Aviv