ದೇವರ ಪ್ರವಾದನಾ ವಾಕ್ಯಕ್ಕೆ ಲಕ್ಷ್ಯಕೊಡುವದು
ಪೇತ್ರನ ಎರಡನೆಯ ಪತ್ರದಿಂದ ಅತ್ಯುಜ್ವಲ ಭಾಗಗಳು
ಯೆಹೋವನ ಪ್ರವಾದನ ವಾಕ್ಯ, ಇಲ್ಲವೇ ಸಂದೇಶವು ಕತ್ತಲೆಯ ಸ್ಥಳದಲ್ಲಿ ಒಂದು ಪ್ರಕಾಶಿಸುವ ದೀಪದೋಪಾದಿ ಇದೆ ಮತ್ತು ನಿಜ ಕ್ರೈಸ್ತರು ಅದಕ್ಕೆ ಕಟ್ಟುನಿಟ್ಟಾದ ಲಕ್ಷ್ಯ ಕೊಡುವ ಜರೂರಿ ಇದೆ. ಧರ್ಮಭೃಷ್ಟತೆಯನ್ನು ಸುಳ್ಳು ಬೋಧಕರು ವರ್ಧಿಸಲು ಪ್ರಯತ್ನಿಸುವಾಗ ಇದೇನು ಅಷ್ಟು ಸುಲಭವಲ್ಲ. ಆದರೆ ದೈವಿಕ ಸಹಾಯದ ಮೂಲಕ ಅದನ್ನು ಮಾಡಸಾಧ್ಯವಿದೆ. ಮತ್ತು ನಾವು ರಭಸದಿಂದ ಸಮೀಪಿಸುತ್ತಿರುವ ಯೆಹೋವನ ದಿನದಿಂದ ಪಾರಾಗಲಿರುವುದಾದರೆ, ದೇವರ ವಾಕ್ಯಕ್ಕೆ ಸ್ಥಿರತೆಯಿಂದ ಅಂಟಿಕೊಂಡಿರತಕ್ಕದ್ದು.
ಅಪೊಸ್ತಲ ಪೇತ್ರನ ಎರಡನೆಯ ಪತ್ರವು ದೇವರ ಪ್ರವಾದನ ವಾಕ್ಯಕ್ಕೆ ಲಕ್ಷ್ಯಕೊಡಲು ಸಹಾಯ ಮಾಡಸಾಧ್ಯವಿದೆ. ಪೇತ್ರನು ಈ ಪತ್ರಿಕೆಯನ್ನು ಬೆಬಿಲೋನಿನಿಂದ ಸಾ.ಶ. 64ರ ಸುಮಾರಿಗೆ ಬರೆದನು. ಅವನ ಪತ್ರದಂಲ್ಲಿ ಅವನು ದೇವರ ಸತ್ಯತೆಗಳ ಪಕ್ಷ ಹಿಡಿದು ವಾದಿಸುತ್ತಾನೆ, ಕಳ್ಳನೋಪಾದಿ ಬರುವ ಯೆಹೋವನ ದಿನದ ಕುರಿತು ಸಹ ವಿಶ್ವಾಸೀಗಳನ್ನು ಎಚ್ಚರಿಸುತ್ತಾನೆ, ಮತ್ತು ನಿಯಮ-ಭಂಜಕರ ತಪ್ಪಾದ ಮಾರ್ಗದಿಂದ ನಡಿಸಲ್ಪಡದಂತೆ ತನ್ನ ವಾಚಕರಿಗೆ ಸಹಾಯವನ್ನೀಯುತ್ತಾನೆ. ಹೆಚ್ಚುಕಡಿಮೆ ಯೆಹೋವನ ದಿನವು ನಮ್ಮ ಮೇಲೆ ಬಂದಿರುವುದರಿಂದ, ಪೇತ್ರನ ಪ್ರೇರಿತ ಮಾತುಗಳಿಂದ ನಾವು ಬಹಳಷ್ಟು ಪ್ರಯೋಜನ ಪಡೆಯಸಾಧ್ಯವಿದೆ.
ಪ್ರವಾದನಾ ವಾಕ್ಯದಲ್ಲಿ ಭರವಸೆ
ಕ್ರೈಸ್ತರೋಪಾದಿ ದೈವಿಕ ಗುಣಗಳನ್ನು ಪ್ರದರ್ಶಿಸಲು ನಾವು ಸ್ವತಃ ಹೆಣಗಾಡುವ ಅಗತ್ಯವಿದೆ ಮತ್ತು ಪ್ರವಾದನಾ ವಾಕ್ಯಕ್ಕೆ ಲಕ್ಷ್ಯ ಕೊಡತಕ್ಕದ್ದು. (2 ಪೇತ್ರ 1:1-21) ನಿಷ್ಕ್ರಿಯರೂ, ನಿಷ್ಫಲರೂ ಆಗುವದನ್ನು ಹೋಗಲಾಡಿಸಲು ‘ನಮ್ಮ ನಂಬಿಕೆಗೆ ಸದ್ಗುಣ, ಜ್ಞಾನ, ದಮೆ, ತಾಳ್ಮೆ, ದಿವ್ಯ ಭಕ್ತಿ, ಸಹೋದರವಾತ್ಸಲ್ಯ ಮತ್ತು ಪ್ರೀತಿಯನ್ನು ಕೂಡಿಸಬೇಕು’ ಯೇಸುವು ರೂಪಾಂತರವಾಗುವುದನ್ನು ನೋಡಿದಾಗ ಮತ್ತು ಆ ಸಂದರ್ಭದಲ್ಲಿ ಕ್ರಿಸ್ತನ ಕುರಿತಾಗಿ ದೇವರು ಮಾತಾಡುವುದನ್ನು ಕೇಳಿದಾಗ, ಪ್ರವಾದನ ವಾಕ್ಯವು ಮತ್ತೂ ದೃಢವಾಯಿತು. (ಮಾರ್ಕ 9:1-8) ಆ ದೇವ ಪ್ರೇರಿತ ವಾಕ್ಯಕ್ಕೆ ನಾವು ಲಕ್ಷ್ಯ ಕೊಡುವ ಅಗತ್ಯವಿದೆ.
ಧರ್ಮಭೃಷ್ಟರ ವಿರುದ್ಧ ಕಾದು ಕೊಳ್ಳುವದು
ದೇವರ ಪ್ರವಾದನ ವಾಕ್ಯಕ್ಕೆ ಕಟ್ಟುನಿಟ್ಟಾದ ಲಕ್ಷ್ಯಕೊಡುವದರಿಂದ, ನಾವು ಧರ್ಮಭೃಷ್ಟರ ಮತ್ತು ಇತರ ಭೃಷ್ಟಗೊಳಿಸುವ ವ್ಯಕ್ತಿಗಳ ವಿರುದ್ಧ ಕಾದು ಕೊಳ್ಳಸಾಧ್ಯವಿದೆ. (2:1-22) ಸಭೆಯೊಳಗೆ ನುಸುಳುವ ಸುಳ್ಳು ಬೋಧಕರ ಕುರಿತು ಪೇತ್ರನು ಎಚ್ಚರಿಸಿದ್ದಾನೆ. ಆದಾಗ್ಯೂ, ಅವಿಧೇಯ ದೇವದೂತರುಗಳ, ನೋಹನ ದಿನಗಳ ಭಕ್ತಿಹೀನ ಲೋಕದ, ಮತ್ತು ಸೊದೋಮ ಗೊಮೋರ ಪಟ್ಟಣಗಳ ತೀರ್ಪುಮಾಡಿದಂತೆ, ಯೆಹೋವನು ಈ ಧರ್ಮಭೃಷ್ಟರ ವಿರುದ್ಧ ಪ್ರತಿಕೂಲ ತೀರ್ಪನ್ನು ಮಾಡಲಿರುವನು. ದೇವ-ದತ್ತ ಅಧಿಕಾರವನ್ನು ಈ ಸುಳ್ಳು ಬೋಧಕರು ತುಚ್ಛೀಕರಿಸುವರು ಮತ್ತು ಅವರ ತಪ್ಪು ಗೈಯುವಿಕೆಯಲ್ಲಿ ಸೇರುವಂತೆ ನಿರ್ಬಲರನ್ನು ಮೋಸಗೊಳಿಸಿ ಸೆಳೆಯುವರು. ಅಂಥಹ ಧರ್ಮಭೃಷ್ಟರು “ನೀತಿ ಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯಿಂದ ತೊಲಗಿಹೋಗುವದಕ್ಕಿಂತ ಆ ಮಾರ್ಗವನ್ನು ತಿಳಿಯದಿದ್ದರೆ” ಎಷ್ಟೋ ಮೇಲಾಗುತ್ತಿತ್ತು.
ಯೆಹೋವನ ದಿನವು ಬರುತ್ತಿದೆ!
ಈ ಕಡೆಯ ದಿನಗಳಲ್ಲಿ ಪ್ರವಾದನಾ ವಾಕ್ಯಕ್ಕೆ ಲಕ್ಷ್ಯ ಕೊಡುವವರಾಗಿ, ಯೇಸುವಿನ ಸಾನ್ನಿಧ್ಯತೆಯ ಸಂದೇಶವನ್ನು ಗೇಲಿಮಾಡುವ ಕುಚೋದ್ಯಗಾರರಿಂದ ನಾವು ಪ್ರಭಾವಿತರಾಗುವಂತೆ ನಮ್ಮನ್ನು ಬಿಟ್ಟುಕೊಡಬಾರದು. (3:1-18) ಜಲಪ್ರಲಯ-ಪೂರ್ವಿ ಲೋಕವನ್ನು ನಾಶ ಮಾಡಿದಂತೆ, ಸದ್ಯದ ವಿಷಯಗಳ ವ್ಯವಸ್ಥೆಯನ್ನು ನಾಶ ಮಾಡಲು ದೇವರು ಉದ್ದೇಶಿಸಿದ್ದಾನೆ ಎಂದು ಅವರು ಮರೆಯುತ್ತಾರೆ. ಯೆಹೋವನ ದೀರ್ಘಶಾಂತಿಯನ್ನು ತಡ ಮಾಡುತ್ತಾನೆ ಎಂದು ತಪ್ಪಾಗಿ ಪರಿಗಣಿಸಬಾರದು, ಯಾಕಂದರೆ ಅವನು ಜನರು ಪಶ್ಚಾತ್ತಾಪ ಪಡುವಂತೆ ಬಯಸುತ್ತಾನೆ. ಈ ವ್ಯವಸ್ಥೆಯ “ಯೆಹೋವನ ದಿನ” ದಲ್ಲಿ ನಾಶ ಮಾಡಲ್ಪಡುವದು ಮತ್ತು ‘ನೀತಿಯು ವಾಸವಾಗಿರುವ ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ ದಿಂದ ಸ್ಥಾನಪಲ್ಲಟಗೊಳ್ಳುವದು. ಆದಕಾರಣ, “ಶಾಂತರಾಗಿಯೂ, ನಿರ್ಮಲರಾಗಿಯೂ ಮತ್ತು ನಿರ್ದೋಷಿಗಳಾಗಿಯೂ” ಇರುವಂತೆ ನಾವು ಅತ್ಯಧಿಕವಾಗಿ ಪ್ರಯತ್ನಿಸಬೇಕು. ಸುಳ್ಳು ಬೋಧಕರುಗಳಿಂದ ಮೋಸಗೊಳಿಸಲ್ಪಡುವದರ ಬದಲು, ಯೇಸು ಕ್ರಿಸ್ತನ ಜ್ಞಾನದಲ್ಲಿ ನಾವು ಅಭಿವೃದ್ಧಿಗೊಳ್ಳುತ್ತಿರೋಣ.
ಪೇತ್ರನ ಮಾತುಗಳನ್ನು ನಾವು ನಮ್ಮ ಹೃದಯಕ್ಕೆ ಹಚ್ಚಿಕೊಳ್ಳೋಣ. ಸುಳ್ಳು ಬೋಧಕರ ವಿರುದ್ಧ ಕಾದು ಕೊಳ್ಳುವದರಲ್ಲಿ ನಾವೆಂದೂ ಪರಾಜಯಗೊಳ್ಳದಿರೋಣ. ಯೆಹೋವನ ದಿನವು ಬೇಗನೆ ಬರುತ್ತಿದೆ ಎಂಬ ಪ್ರಜ್ಞೆಯಿಂದ ಜೀವಿಸುತ್ತಿರೋಣ. ಮತ್ತು ಯಾವಾಗಲೂ ದೇವರ ಪ್ರವಾದನಾ ವಾಕ್ಯಕ್ಕೆ ಲಕ್ಷ್ಯಕೊಡುತ್ತೀರೋಣ. (w91 3/15)
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ಟಾರ್ಟರಸ್ಗೆ ದೊಬ್ಬುವದು: ಯೆಹೋವನು “ದೇವದೂತರು ಪಾಪ ಮಾಡಿದಾಗ ಅವರನ್ನು ಸುಮ್ಮನೆ ಬಿಡದೆ ಟಾರ್ಟರಸ್ಗೆ ದೊಬ್ಬಿ, ನ್ಯಾಯತೀರ್ಪನು ಹೊಂದುವದಕ್ಕೆ ಇಡಲ್ಪಟ್ಟವರಾಗಿ ಕತ್ತಲೇ ಗುಂಡಿಗಳಿಗೆ ಒಪ್ಪಿಸಿದನು.” (2 ಪೇತ್ರ 2:4) ಇದು ಹೋಮರನ ಇಲ್ಯಾಡ್ ನಲ್ಲಿ ಪ್ರತಿನಿಧಿಸಲ್ಪಟ್ಟ ಪುರಾಣಕಥೆಯ ಟಾರ್ಟರಸ್ವಾಗಿರುವದಿಲ್ಲ, ಇದರಲ್ಲಿ ಇದು, ಕ್ರೊನಸ್ ಮತ್ತು ಇತರ ಟೈಟನ್ ಆತ್ಮಗಳಾಗಿರುವ ಕನಿಷ್ಠ ದರ್ಜೆಯ ಸುಳ್ಳು ದೇವರುಗಳನ್ನು ಬಂಧೀವಾಸದಲ್ಲಿಟ್ಟ ಭೂತಳದಲ್ಲಿರುವ ಸ್ಥಳವಾಗಿ ವಿವರಿಸಲ್ಪಟ್ಟಿದೆ. ಬೈಬಲಿನ ಟಾರ್ಟರಸ್ ಒಂದು ಅಧೋಗತಿಯ, ಬಂಧೀವಾಸದ ಥರಹದ ಸ್ಥಿತಿಯಾಗಿದ್ದು, ಅದರಲ್ಲಿ ದೇವರು ನೋಹನ ದಿನಗಳಲ್ಲಿ ಅವಿಧೇಯರಾದ ದೇವದೂತರನ್ನು ದೊಬ್ಬಿದನು. (ಆದಿಕಾಂಡ 6:1-8; 1 ಪೇತ್ರ 3:19, 20; ಯೂದ 6) “ಕತ್ತಲೇ ಗುಂಡಿಗಳು” ದೇವರ ಆತ್ಮಿಕ ಪ್ರಕಾಶದಿಂದ ಅವರು ಕತ್ತರಿಸಲ್ಪಟ್ಟದರ್ದಿಂದಾಗಿ, ಅವನ ಕುಟುಂಬದಿಂದ ಬಹಿಷ್ಕೃತರಾದುದರಿಂದ ಉಂಟಾಗುತ್ತದೆ. ಅವನ ಪ್ರತಿಕೂಲ ನ್ಯಾಯತೀರ್ಪಿಗಾಗಿ ಕಾದಿರಿಸಲ್ಪಟ್ಟವರೋಪಾದಿ, ಅವರಿಗೆ ಕೇವಲ ಕತ್ತಲೆಯ ಭವಿಷ್ಯ ಮಾತ್ರವಿದೆ. ಕ್ರಿಸ್ತನ ಸಾವಿರ ವರ್ಷದ ಆಳಿಕ್ವೆಯ ಆರಂಭದಲ್ಲಿ ಸೈತಾನನನ್ನೂ, ಅವನ ದೆವ್ವಗಳನ್ನೂ ಅಧೋಲೋಕಕ್ಕೆ ದೊಬ್ಬುವದರ ಪೂರ್ವ-ಸೂಚಕವಾಗಿ ಟಾರ್ಟರಸ್ ಇರುತ್ತದೆ. ಅವರ ನಾಶನವು ಯೇಸುವಿನ ಸಾವಿರ ವರ್ಷದ ಆಳಿಕ್ವೆಯ ನಂತರ ಸಂಭವಿಸಲಿರುವದು.—ಮತ್ತಾಯ 25:41; ಪ್ರಕಟನೆ 20:1-3, 7-10, 14.
[ಚಿತ್ರ]
ಜ್ಯೂಸ್ ಕನಿಷ್ಠ ಮಟ್ಟದ ದೇವರುಗಳನ್ನು ಪುರಾಣಕಥೆಯ ಟಾರ್ಟರಸ್ಗೆ ದೊಬ್ಬುವದು
[ಕೃಪೆ]
National Archaeological Museum, Athens, Greece