ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 4/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ಮಹಾ ಜಲಪ್ರಳಯ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ದೇವರು ಅವನನ್ನೂ ಅವನ ಕುಟುಂಬವನ್ನೂ ಕಾಪಾಡಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ಕಾವಲಿನಬುರುಜು—1992
w92 4/15 ಪು. 31

ವಾಚಕರಿಂದ ಪ್ರಶ್ನೆಗಳು

ನೋಹನು ನಾವೆಯಿಂದ ಒಂದು ಕಾಗೆಯನ್ನು ಮತ್ತು ಅನಂತರ ಒಂದು ಪಾರಿವಾಳವನ್ನು ಕಳುಹಿಸಿದ್ದು ಏಕೆ?

ಬೈಬಲ್‌ ಒಂದು ಸವಿಸ್ತಾರವಾದ ವಿವರಣೆಯನ್ನು ಕೊಡುವುದಿಲ್ಲ. ಆದರೂ ನೋಹನು ಹಾಗೆ ಮಾಡಿದ್ದರಲ್ಲಿ ತರ್ಕಬದ್ಧತೆ ಇದೆಯೆಂಬುದು ವ್ಯಕ್ತ.

ಭೂಮಿಯು 40 ದಿನಗಳ ಮತ್ತು 40 ರಾತ್ರಿಗಳ ಧಾರಾಕಾರ ಮಳೆಯನ್ನು ಅನುಭವಿಸಿತ್ತು, ಆ ಪ್ರಲಯವು 5 ತಿಂಗಳುಗಳ ತನಕ ಬೆಟ್ಟಗಳ ಶಿಕರಗಳನ್ನೂ ಆವರಿಸಿತ್ತು. ಅನಂತರ “ನಾವೆಯು ಅರಾರಾಟ್‌ ಸೀಮೆಯ ಬೆಟ್ಟಗಳ ಮೇಲೆ ನಿಂತಿತು.” (ಆದಿಕಾಂಡ 7:6–8:4) ತಿಂಗಳುಗಳ ತರುವಾಯ, “ಬೆಟ್ಟಗಳ ಶಿಕರಗಳು ಕಾಣಬಂದ” ನಂತರ, ನೋಹನು “ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು, ಅದು ಹೊರಗೆ ಹಾರುತ್ತಾ, ಹೋಗುತ್ತಾ ಬರುತ್ತಾ ಇತ್ತು.”—ಆದಿಕಾಂಡ 8:5, 7.

ಒಂದು ಕಾಗೆಯನ್ನು ಕಳುಹಿಸಿದ್ದೇಕೆ? ಇದು ಕಸುವಿಂದ ಹಾರಾಡುವ ಪಕ್ಷಿ, ಮತ್ತು ಅದು ಅನೇಕ ವಿಧವಾದ ಆಹಾರ ಪಧಾರ್ಥಗಳನ್ನು, ಸತ್ತಪ್ರಾಣಿಗಳನ್ನು ಸಹಾ ತಿಂದು ಜೀವಿಸಬಲ್ಲದು. ನೋಹನು ಕಾಗೆಯನ್ನು ಕಳುಹಿಸಿದ್ದು, ಅದು ಹಿಂದೆ ಬರುವುದೋ ಇಲ್ಲವೇ ನೀರಿಳಿದಾಗ ಮತ್ತು ಒಣನೆಲವು ಕಾಣಿಸಿದಾಗ ತೋರಿಬರುವ ಹೆಣಗಳ ಅವಶೇಷಗಳನ್ನು ಪ್ರಾಯಶಃ ತಿನ್ನುತ್ತಾ ನಾವೆಯ ಹೊರಗೇ ನಿಲ್ಲುವುದೋ ಎಂದು ನೋಡಲು ಇರಬಹುದು. ಆದರೂ, ಆ ಕಾಗೆಯು ಹೊರಗೆ ಉಳಿಯಲಿಲ್ಲ. ಅದು ಹಿಂದಿರುಗಿತೆಂದು ಬೈಬಲು ಹೇಳುತ್ತದೆ, ಆದರೆ ಅದು ನೋಹನ ಬಳಿಗೆ ಹಿಂದಿರುಗಿತೆಂದು ಹೇಳುವುದಿಲ್ಲ. ಇನ್ನೂ ನಿಂತಿದ್ದ ನೆರೆ ನೀರಿನ ಮೇಲೆ ತೇಲಾಡುವ ಆಹಾರವನ್ನು ತಿನ್ನುವುದಕ್ಕೆ ಅದು ಹಾರಾಡುತ್ತಾ, ನಡುನಡುವೆ ಹಿಂದೆ ಬಂದು ನಾವೆಯ ಮೇಲೆ ವಿಶ್ರಮಿಸಿದ್ದಿರಬೇಕು.

ತದನಂತರ, ನೋಹನು ಒಂದು ಪಾರಿವಾಳವನ್ನು ಕಳುಹಿಸಲು ಆರಿಸಿಕೊಂಡನು. ನಾವು ಓದುವುದು: “ಪಾರಿವಾಳವು ಕಾಲಿಡುವುದಕ್ಕೆ ಸ್ಥಳವನ್ನು ಎಲ್ಲಿಯೂ ಕಾಣದೆ ತಿರಿಗಿ ನಾವೆಗೆ ಬಂತು.” (ಆದಿಕಾಂಡ 8:9) ಆ ಪಾರಿವಾಳವು ತನ್ನ ಸ್ವಂತ ರೀತಿಯಲ್ಲಿ ನೆರೆ ನೀರು ಇಳಿದಿದೆಯೇ ಇಲ್ಲವೋ ಎಂದು ನಿರ್ಧರಿಸುವುದಕ್ಕೆ ಉಪಕರಣವಾಗಿರ ಸಾಧ್ಯವಿತ್ತೆಂದು ಇದು ಸೂಚಿಸುತ್ತದೆ. ಪಾರಿವಾಳಗಳು ಮಾನವರಲ್ಲಿ ಗಮನಾರ್ಹ ಭರವಸವನ್ನು ಪ್ರದರ್ಶಿಸುತ್ತವೆ. ಪಾರಿವಾಳವು ಹಿಂದಿರುಗುವುದೆಂದು ನೋಹನು ನಿರೀಕ್ಷಿಸ ಸಾಧ್ಯವಿತ್ತು, ನಾವೆಯ ಮೇಲೆ ಕೇವಲ ವಿಶ್ರಮಿಸಲಿಕ್ಕಾಗಿ ಅಲ್ಲ, ಸ್ವತಃ ನೋಹನ ಬಳಿಗೆ.

ಪಾರಿವಾಳಗಳು ಒಣನೆಲದಲ್ಲಿ ಮಾತ್ರ ನಿಲ್ಲುತ್ತವೆ, ಕಣಿವೆಗಳಲ್ಲಿ ಕೆಳಗಿನಿಂದ ಹಾರಾಡುತ್ತವೆ ಮತ್ತು ಸಸ್ಯಗಳನ್ನು ಭಕ್ಷಿಸುತ್ತವೆ ಎಂದು ಹೇಳಲಾಗುತ್ತದೆ. (ಯೆಹೆಜ್ಕೇಲ 7:16) ಗ್ರಾಜಿಮೆಕ್ಸ್‌ ಎನಿಮಲ್‌ ಲೈಫ್‌ ಎನ್‌ಸೈಕ್ಲೊಪೀಡಿಯ ಗಮನಿಸಿದ್ದು: “ಎಲ್ಲಾ ಕಪೋತ ಮತ್ತು ಪಾರಿವಾಳಗಳು ಕಾಳು ಮತ್ತು ಕಡಲೆಗಳನ್ನು ತಿನ್ನುವುದು ನಿಜವಾಗಿರುವುದರಿಂದ, ಹಿಮ [ಯಾ ನೀರು] ಒಂದು ದಿನಕ್ಕಿಂತ ಹೆಚ್ಚು ಸಮಯ ಅಲ್ಲಿರುವಾಗ ಅವುಗಳಿಗೆ ತಿನ್ನಿಸುವುದು ಕಷ್ಟ, ಯಾಕಂದರೆ ಅವುಗಳ ಹೆಚ್ಚಿನ ಸಂಭಾವ್ಯ ಆಹಾರವು ಒಣನೆಲದ ಮೇಲೆಯೇ ಇರುತ್ತದೆ.” ಹೀಗೆ ಆ ಪಾರಿವಾಳವು ತಾನು ಒಣನೆಲವನ್ನು ಕಂಡ ಕೆಲವು ರುಜುವಾತನ್ನು ಅಥವಾ ಸಸ್ಯಗಳ ಚಿಗುರನ್ನು ನೋಹನ ಬಳಿಗೆ ತರಬಹುದಿತ್ತು. ಮೊದಲನೆಯ ಸಲ ನೋಹನು ಅದನ್ನು ಹೊರಗೆ ಕಳುಹಿಸಿದಾಗ, ಪಾರಿವಾಳವು ಸೀದಾ ಅವನ ಬಳಿಗೆ ನಾವೆಗೆ ಹಿಂತಿರುಗಿ ಬಂತು. ಎರಡನೆಯ ಸಾರಿ, ಪಾರಿವಾಳವು ಒಂದು ಆಲಿವ್‌ ಚಿಗುರಿನೊಂದಿಗೆ ಹಿಂದಿರುಗಿತು. ಮೂರನೆಯ ಸಾರಿ ಕಳುಹಿಸಿದಾಗ ಅದು ತಿರುಗಿ ಬರಲಿಲ್ಲ, ಹೀಗೆ ನೋಹನಿಗೆ ನಾವೆಯಿಂದ ಇಳಿಯಲು ಶಕ್ಯವಿದೆ ಮತ್ತು ಸುರಕ್ಷಿತ ಎಂಬದಕ್ಕೆ ರುಜುವಾತನ್ನು ಕೊಟ್ಟಿತು.—ಆದಿಕಾಂಡ 8:8-12.

ಕೆಲವರು ಇದನ್ನು ಕೇವಲ ಪ್ರಾಸಂಗಿಕ ವಿವರಗಳೆಂದು ಗಮನಿಸಬಹುದಾದರೂ, ಸಂಪೂರ್ಣ ವಿವರಣೆಯನ್ನು ಕೊಡಲು ಯಾವುದೇ ಯತ್ನವಿಲ್ಲದೆನೇ ವೃತ್ತಾಂತವು ಅಷ್ಟು ಸ್ಪಷ್ಟವಾಗಿಗಿರುವುದು ಬೈಬಲಿನ ನಂಬಲರ್ಹತೆಯ ಪ್ರತಿಫಲನವು. ಆ ದಾಖಲೆಯು ಕಲ್ಪಿಸಿ ಬರೆದದ್ದಲ್ಲ ಇಲ್ಲವೇ ಊಹನೆಯಲ್ಲ, ಬದಲಿಗೆ ಪ್ರಾಮಾಣಿಕ ನಿಷ್ಕೃಷ್ಟತೆಯುಳ್ಳದ್ದು ಎಂದು ಸ್ವೀಕರಿಸಲು ಇದು ನಮಗೆ ಅಧಿಕ ಕಾರಣವನ್ನು ಕೊಡುತ್ತದೆ. ಸವಿಸ್ತಾರ ವಿವರಗಳ ಮತ್ತು ಅರ್ಥವಿವರಗಳ ಕೊರತೆಯು ಇದನ್ನೂ ಸೂಚಿಸುತ್ತದೆ ಏನಂದರೆ ನೋಹನು ಪುನರುತ್ಥಾನಗೊಂಡು ಬರುವಾಗ ಮತ್ತು ಅವನ ಕ್ರಿಯೆಗಳ ಏಕೆ ಎತ್ತಗಳನ್ನು ಸಾಕ್ಷಾತ್ತಾಗಿ ತಿಳಿಸುವಾಗ, ನಂಬಿಗಸ್ತ ಕ್ರೈಸ್ತರು ಎಂಥೆಲ್ಲಾ ರಸಕರವಾದ ವಿಷಯಗಳನ್ನು ಮುನ್ನೋಡಬಹುದು ಎಂಬದನ್ನೇ.—ಇಬ್ರಿಯ 11:7, 39. (w92 1/15)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ