“ಆತನ ಕೃಪೆಯು ಅಪಾರವಾಗಿದೆ”
ಹಾಸ ವರ್ಗಾರ ಒರಾಸ್ಕೊ ಇವರಿಂದ ಹೇಳಲ್ಪಟ್ಟದ್ದು
ನಿಮ್ಮ ಜೀವಿತವು 70 ವರ್ಷ ವಯಸ್ಸಿನಲ್ಲಿ ಒಂದು ಹೊಸ ಚಾಲಕ ಶಕಿಯ್ತಿಂದ ತುಂಬಬಲ್ಲದು ಎಂದು ನೀವು ನೆನಸುತ್ತೀರೋ? ನನ್ನದ್ದು ತುಂಬಿತ್ತು. ಮತ್ತು ಅದು 35 ವರ್ಷಗಳ ಹಿಂದೆ.
ಯೆಹೋವನ ಕೃಪೆಯಿಂದಾಗಿ, 1962ರಿಂದ ನಾನು ಕ್ರಮದ ಪಯನೀಯರನಾಗಿ ಸೇವೆ ಮಾಡಿದ್ದೇನೆ, ಮತ್ತು 1972ರಿಂದ ನಾನು ಮೆಕ್ಸಿಕೋ ದೇಶದ ಜಲಿಸ್ಕೊ ರಾಜ್ಯದ ಯೆಹೋವನ ಸಾಕ್ಷಿಗಳ ಎಲ್ ಕ್ಯಾರಿಝಲ್ ಸಭೆಯ ಒಬ್ಬ ಮೇಲ್ವಿಚಾರಕನಾಗಿದ್ದೇನೆ. ನನ್ನ ಹಿನ್ನೆಲೆಯ ಕುರಿತು ನಿಮಗೆ ಸ್ವಲ್ಪ ತಿಳಿಸುತ್ತೇನೆ.
ನಾನು ಮೆಕ್ಸಿಕೊ ದೇಶದ ಮಿಚೋಕನ್ ರಾಜ್ಯದಲ್ಲಿ ಆಗಸ್ಟ್ 18, 1886ರಲ್ಲಿ ಜನಿಸಿದೆನು. ನನ್ನ ತಂದೆ ‘ಫ್ರೀಮೇಸನ್’ ಪಂಗಡದವರಾಗಿದರ್ದಿಂದ ನಮ್ಮ ಕುಟುಂಬವು ಕ್ಯಾಥ್‌ಲಿಕ್ ಚರ್ಚಿಗೆ ಹೋಗಿರಲಿಲ್ಲ, ಯಾವುವೇ ಕ್ಯಾಧ್‌ಲಿಕ್ ಧಾರ್ಮಿಕ ಆಚರಣೆಗಳಲ್ಲಿ ಪಾಲು ತಕ್ಕೊಂಡಿರಲಿಲ್ಲ, ಅಥವಾ ಯಾವುವೇ ಧಾರ್ಮಿಕ ಮೂರ್ತಿಗಳು ನಮ್ಮ ಮನೆಯಲ್ಲಿ ಇರಲೂ ಇಲ್ಲ.
ನಾನು 16 ವರ್ಷ ವಯಸ್ಸಿನವನಾಗಿದ್ದಾಗ ನನ್ನ ತಂದೆ ಕೆಲಸಕ್ಕಾಗಿ ಅಮೆರಿಕಕ್ಕೆ ಹೋದರು, ಆದರೆ ನನಗೆ ಒಂದು ಕೆಲಸ ಕಲಿಸಲು ಒಬ್ಬ ಮನುಷ್ಯನನ್ನು ಏರ್ಪಡಿಸಿದರು. ಆದರೆ ಎರಡು ವರ್ಷಗಳ ಅನಂತರ ಆ ಮನುಷ್ಯನು ನನ್ನನ್ನು ಮೆಕ್ಸಿಕೋ ಶಹರದ ಒಂದು ಮಿಲಿಟರಿ ಶಾಲೆಯಲ್ಲಿ ತರಬೇತಿಗಾಗಿ ಒಯ್ದನು. ಆ ಮೇಲೆ ನಾನು ಮೆಕ್ಸಿಕನ್ ಸೇನೆಯಲ್ಲಿ ಕೆಲಸಕ್ಕೆ ಸೇರಿದೆ.
ಸೇನೆಯಲ್ಲಿ ಮತ್ತು ಅನಂತರ
ನಾನು 1910ರಲ್ಲಿ ಆರಂಭಿಸಿದ್ದ ಮೆಕ್ಸಿಕನ್ ಕ್ರಾಂತಿಯಲ್ಲಿ ಹೋರಾಡಿದ್ದೆ. ಮಿಲಿಟರಿ ಶಾಲೆಯಲ್ಲಿ ಯುವಕರಾಗಿದ್ದ ನಾವೆಲ್ಲರೂ ಪಾರ್‌ಫರ್ಯೊ ಡಾಯಝ್‌ನ ನಿರಂಕುಶ ಪ್ರಭುತ್ವವನ್ನು ವಿರೋಧಿಸಿದ್ದ ಕ್ರಾಂತಿಕಾರಿ ಫ್ರಾನ್ಸಿಸ್ಕೊ ಐ. ಮಡೆರೋನನ್ನು ಬೆಂಬಲಿಸಿದ್ದೆವು. ಮಡೆರೋ 1913ರಲ್ಲಿ ಸಾಯುವ ತನಕ ನಾವು ಅವನನ್ನು ಬೆಂಬಲಿಸಿದ್ದೆವು ಮತ್ತು ಅನಂತರ, 1915ರಿಂದ 1920 ತನಕ ಪ್ರಜಾಪ್ರಭುತ್ವದ ರಾಷ್ಟ್ರಾಧ್ಯಕ್ಷನಾಗಿದ್ದ ಬನಸಾನ್ಟಿಯೊ ಕರಾಂಝನಿಗೆ ಬೆಂಬಲ ಕೊಟ್ಟೆವು. ನಮ್ಮನ್ನು ಕರಾನ್‌ಝಿಸ್ಟಸ್ ಎಂದು ಕರೆಯುತ್ತಿದ್ದರು.
ನಾಲ್ಕು ವಿವಿಧ ಸಂದರ್ಭಗಳಲ್ಲಿ ನಾನು ಸೇನೆಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಿದರೂ ವೈಫಲ್ಯಗೊಂಡೆ. ಕೊನೆಗೆ ನಾನು ಅದನ್ನು ಪರಿತ್ಯಜಿಸಿದೆ ಮತ್ತು ತಲೆತಪ್ಪಿಸಿಕೊಂಡೆ. ಫಲಿತಾಂಶವಾಗಿ, ಮೆಕ್ಸಿಕೋಗೆ ಹಿಂತಿರುಗಿದ ನನ್ನ ತಂದೆಯನ್ನು ಸೆರೆಮನೆಗೆ ಹಾಕಿದರು. ಒಂದು ದಿನ ನಾನು ತಂದೆಯ ಸೋದರಳಿಯನೆಂದು ನಟನೆಮಾಡಿ ಸೆರೆಮನೆಯಲ್ಲಿ ಅವರನ್ನು ಸಂಧಿಸಿದೆ. ನಮ್ಮ ಸಂಭಾಷಣೆ ಕಾವಲುಗಾರರಿಗೆ ಕೇಳಿಸದಂತೆ ಕಾಗದ ಚೂರುಗಳಲ್ಲಿ ಬರೆದು ಮಾತಾಡಿದೆವು. ನಾನು ಯಾರೆಂದು ಯಾರೂ ಕಂಡುಹಿಡಿಯದಂತೆ ನಾನು ಆ ಕಾಗದವನ್ನೂ ತಿಂದುಬಿಟ್ಟೆ.
ತಂದೆಗೆ ಸೆರೆಮನೆಯಿಂದ ಬಿಡುಗಡೆಯಾದಾಗ, ಅವರು ನನ್ನನ್ನು ಸಂದರ್ಶಿಸಿದರು ಮತ್ತು ನಾನು ಅಧಿಕಾರಿಗಳಿಗೆ ವಶವಾಗುವಂತೆ ವಿನಂತಿಸಿದರು. ನಾನು ವಶವಾದೆ, ಆದರೆ ಮುಖ್ಯಾಧಿಕಾರಿ ನನ್ನನ್ನು ಕೈದು ಮಾಡದೆ ಇದ್ದದ್ದು ನನಗೆ ಆಶ್ಚರ್ಯ. ಬದಲಿಗೆ ನಾನು ಅಮೆರಿಕಕ್ಕೆ ಸ್ಥಲಾಂತರ ಮಾಡುವಂತೆ ಅವರು ಸೂಚಿಸಿದರು. ನಾನು ಅವರ ಸೂಚನೆಯನ್ನು ಪಾಲಿಸಿದೆ ಮತ್ತು 1916ರಿಂದ 1926ರ ತನಕ ಅಲ್ಲಿ ವಾಸಿಸಿದೆ.
1923ರಲ್ಲಿ ಅಮೆರಿಕದಲ್ಲೇ ವಾಸಿಸುತ್ತಿದ್ದ ಒಬ್ಬ ಮೆಕ್ಸಿಕನ್ ಮಹಿಳೆಯನ್ನು ನಾನು ಮದುವೆಯಾದೆ. ಕಟ್ಟಡ ಕಟ್ಟುವ ಕಸುಬನ್ನು ಕಲಿತೆ, ಮತ್ತು ನಾವು ಒಬ್ಬ ಚಿಕ್ಕ ಹುಡುಗಿಯನ್ನು ದತ್ತಕ್ಕೆ ತಕ್ಕೊಂಡೆವು. ಅವಳು 17 ತಿಂಗಳಿನವಳಾದಾಗ ನಾವು ಮೆಕ್ಸಿಕೋಗೆ ಹಿಂತಿರುಗಿ ಟಬಾಸ್ಕೋದ ಹಲ್ಪಾದಲ್ಲಿ ಮನೆ ಮಾಡಿದೆವು. ಆಗ ‘ಕ್ರಿಸ್ಟೆರೋ’ ದಂಗೆಯು ಪ್ರಾರಂಭಿಸಿತು, ಮತ್ತು ಅದು 1926ರಿಂದ 1929ರ ತನಕ ಮುಂದರಿಯಿತು.
ನಾನು ಕ್ರಿಸ್ಟೆರೋದಲ್ಲಿ ಸೇರುವಂತೆ ಅವರು ಬಯಸಿದರು. ಆದರೆ ನಾನು ಮತ್ತು ನನ್ನ ಕುಟುಂಬವು ಅಕ್ವಾಸ್ಕೆಲಿಂಟಸ್ ರಾಜ್ಯಕ್ಕೆ ಓಡಿಹೋಗಲು ಇಷ್ಟಪಟ್ಟೆವು. ಮೆಕ್ಸಿಕನ್ ಗಣರಾಜ್ಯದಲ್ಲಿ ಹಲವಾರು ಸ್ಥಳಗಳಲ್ಲಿ ಜೀವಿಸಿದ ಬಳಿಕ, 1956ರಲ್ಲಿ, ಟಮೌಲಿಪಾಸ್‌ನ ಮೆಟಮರಸ್‌ನಲ್ಲಿ ನಾವು ವಾಸಿಸುತ್ತಾ, ಕಟ್ಟಡ ಕಟ್ಟುವ ಕೆಲಸಗಳ ಮೇಲ್ವಿಚಾರ ನೋಡುವ ಕೆಲಸ ಮಾಡತೊಡಗಿದೆ.
ನನ್ನ ಜೀವನ ಬದಲಾಯಿತು
ನನ್ನ ಜೀವನವು ಬದಲಾಗತೊಡಗಿದ್ದು ಆವಾಗಲೇ. ಅಷ್ಟರೊಳಗೆ ನನ್ನ ಮಗಳು ಮದುವೆಯಾಗಿದ್ದಳು ಮತ್ತು ಗಡಿನಾಡಿನಾಚೆ ಅಮೆರಿಕದ ಟೆಕ್ಸಸ್‌ನ ಬ್ರೌನ್ಸ್‌ವಿಲ್ಲ್‌ನಲ್ಲಿ ವಾಸಿಸುತ್ತಿದ್ದಳಾದರೂ ನಮ್ಮನ್ನು ಆಗಿಂದಾಗ್ಯೆ ಸಂದರ್ಶಿಸುತ್ತಿದ್ದಳು. ಒಂದು ದಿನ ಅವಳಂದದ್ದು: “ಡ್ಯಾಡ್, ಯೂನಿಯನ್ ಹೋಲ್‌ನಲ್ಲಿ ಕೆಲವು ಕುಟುಂಬಗಳು ಈಗ ಕೂಡಿಬರುತ್ತಿವೆ. ನಾವು ಹೋಗಿ ಅದೆಲ್ಲಾ ಏನೆಂತ ನೋಡಿ ಬರೋಣ.” ಅದು ಯೆಹೋವನ ಸಾಕ್ಷಿಗಳ ಒಂದು ಸಮ್ಮೇಳನವಾಗಿತ್ತು. ನನ್ನ ಮಗಳು, ಅಳಿಯ, ಮೊಮ್ಮಗ, ಪತ್ನಿ ಮತ್ತು ನಾನು ಆ ಸಮ್ಮೇಲನದ ಎಲ್ಲಾ ನಾಲ್ಕು ದಿನಗಳನ್ನು ಹಾಜರಾದೆವು.
ಆ ವರ್ಷದಿಂದ ಹಿಡಿದು, ನಾವು ಯೆಹೋವನ ಸಾಕ್ಷಿಗಳ ಕ್ರೈಸ್ತ ಕೂಟಗಳನ್ನು ಹಾಜರಾದೆವು. ನಾನು ಮೆಕ್ಸಿಕೋದಲ್ಲಿ ಆತ್ಮಿಕ ಪ್ರಗತಿ ಮಾಡಿದಾಗ, ನನ್ನ ಮಗಳು ಅಮೆರಿಕದಲ್ಲಿ ಪ್ರಗತಿಮಾಡಿದಳು. ತುಸು ಸಮಯದಲ್ಲೇ ನಾನು ಕಲಿಯುತ್ತಿದ್ದ ಬೈಬಲ್ ಸತ್ಯತೆಗಳನ್ನು ನನ್ನ ಸಹೋದ್ಯೋಗಿಗಳಿಗೆ ಹೇಳತೊಡಗಿದೆ. ವಾಚ್‌ಟವರ್ ಮತ್ತು ಅವೇಕ್!ನ ಪ್ರತಿ ಸಂಚಿಕೆಯ ಹತ್ತು ಪತ್ರಿಕೆಗಳು ನನಗೆ ದೊರೆಯುತ್ತಿದ್ದವು, ನಾನದನ್ನು ನನ್ನ ಸಹೋದ್ಯೋಗಿಗಳಿಗೆ ಹಂಚುತ್ತಿದ್ದೆ. ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಐದು ಮಂದಿ ಮತ್ತು ಇಂಜಿನಿಯರ್‌ಗಳಲ್ಲಿ ಮೂವರು ಹಾಗೂ ಬೇರೆ ಕೆಲವು ಕೆಲಸಗಾರರಲ್ಲಿ ಕೆಲವರು ಸಾಕ್ಷಿಗಳಾಗಿ ಪರಿಣಮಿಸಿದರು.
ಆ ಡಿಸೆಂಬರ್ 19, 1959ರಲ್ಲಿ ನನಗೆ ಹೊಳೆಯಲ್ಲಿ ದೀಕ್ಷಾಸ್ನಾನವಾದಾಗ ಇದ್ದ ಚಳಿಯೇ! ಆ ದಿನ ದೀಕ್ಷಾಸ್ನಾನ ಪಡೆದವರಲ್ಲಿ ಪ್ರತಿಯೊಬ್ಬರು ಆ ವಿಪರೀತ ಶೀತ ನೀರಿನಿಂದಾಗಿ ಅಸ್ವಸ್ಥರಾದರು. ನನ್ನ ಮಗಳು ನನಗಿಂತ ಮೊದಲೇ ದೀಕ್ಷಾಸ್ನಾನ ಪಡೆದಳು ಮತ್ತು ನನ್ನ ಪತ್ನಿ ದೀಕ್ಷಾಸ್ನಾನವನ್ನೆಂದೂ ಪಡೆಯದಿದ್ದರೂ, ಬೈಬಲ್ ಸತ್ಯವನ್ನು ತಿಳಿದ ಬಿಂದುವಿಗೆ ಮುಟ್ಟಿದಳ್ದು ಮತ್ತು ಆಕೆ ಒಳ್ಳೇ ಸಹಕಾರ ನೀಡಿದ್ದಳು.
ಪೂರ್ಣ ಸಮಯದ ಶುಶ್ರೂಷೆ
ದೇವರ ಕೃಪಾತಿಶಯಕ್ಕಾಗಿ ನಾನು ದೇವರಿಗೆ ಋಣಿಯಾಗಿದ್ದೆನು, ಆದ್ದರಿಂದ ಫೆಬ್ರವರಿ 1962ರಲ್ಲಿ, ನನ್ನ 75ನೆಯ ವಯಸ್ಸಿನಲ್ಲಿ, ನಾನು ಪಯನೀಯರನಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆ. ಕೆಲವು ವರ್ಷಗಳ ಅನಂತರ, 1968ರಲ್ಲಿ ನನ್ನ ಪತ್ನಿ ತೀರಿಕೊಂಡಳು. ಆಮೇಲೆ ನಾನು ಇನ್ನೊಂದು ದೇಶಕ್ಕೆ ಹೋಗಿ ಸೇವೆ ಮಾಡಲು ಬಯಸಿದೆನು, ಆದರೆ ನನ್ನ ವಯಸ್ಸಿನ ಕಾರಣ, ಅದು ಸೂಕ್ತವೆಂದು ಸಹೋದರರು ನೆನಸಲಿಲ್ಲ. ಆದರೂ, 1970ರಲ್ಲಿ, ಜಲಿಸ್ಕೊ ರಾಜ್ಯದ ಕ್ಯಾಲೊಟ್ಲನ್‌ನ ಒಂದು ಚಿಕ್ಕ ಸಭೆಯಲ್ಲಿ ಪಯನೀಯರ ನೇಮಕ ಪಡೆದೆನು.
ಸಪ್ಟಂಬರ 1972ರಲ್ಲಿ, ಕ್ಯಾಲೋಟ್ಲನ್ ಸಮೀಪದ ಚಿಕ್ಕ ಊರಾದ ಎಲ್ ಕ್ಯಾರಿಝಲ್‌ಗೆ ನಾನು ಸ್ಥಳಾಂತರ ಮಾಡುವಂತೆ ಸರ್ಕಿಟ್ ಮೇಲ್ವಿಚಾರಕರು ಸೂಚಿಸಿದರು. ಆ ವರ್ಷದ ನವಂಬರದಲ್ಲಿ ಅಲ್ಲಿ ಒಂದು ಸಭೆಯು ಸ್ಥಾಪನೆಯಾಯಿತು, ಮತ್ತು ನಾನು ಹಿರಿಯನಾಗಿ ನೇಮಕಗೊಂಡೆನು. ಅದು ಒಂದು ತೀರಾ ಒಂಟಿಯಾದ ಊರಾಗಿದ್ದರೂ, ಸಭಾ ಕೂಟಗಳಿಗೆ 31 ಮಂದಿ ಹಾಜರಾಗುತ್ತಿದ್ದಾರೆ.
ನನ್ನ ಪ್ರಾಯ ಸಂದಿರುವುದಾದರೂ, ನಾನಿನ್ನೂ ಶುಶ್ರೂಷೆಯಲ್ಲಿ ಕ್ರಿಯಾಶೀಲನಾಗಿದ್ದೇನೆ, ಜನರು ತಮ್ಮ ನಂಬಿಕೆಗಳನ್ನು ವಿವೇಚಿಸಿ ನೋಡುವಂತೆ ನಾನು ಬಹಳ ಪ್ರಯತ್ನ ಮಾಡುತ್ತಿದ್ದೇನೆ. ದೃಷ್ಟಾಂತಕ್ಕಾಗಿ, ಪ್ರಾಮಾಣಿಕ ಕ್ಯಾಥ್‌ಲಿಕರು ‘ಹೆಯ್‌ಲ್-ಮೇರಿ’ ಪ್ರಾರ್ಥನಾವಳಿಯಲ್ಲಿ ಇದನ್ನು ಪುನರುಚ್ಚರಿಸುತ್ತಾರೆ: ‘ಕೃಪಾಪೂರ್ಣಳಾದ ಮೇರಿ, ನಿನಗೆ ಜಯಕಾರ, ಕರ್ತನು ನಿನ್ನೊಂದಿಗೆ ಇದ್ದಾನೆ.’ ಪ್ರಾರ್ಥನೆ ಮತ್ತೂ ಹೇಳುವುದು: ‘ಪವಿತ್ರ ಮೇರಿ, ದೇವರ ಮಾತೆಯೇ.’ ನಾನು ಕೇಳುವುದು: ‘ಇದು ಹೇಗೆ ಸಾಧ್ಯ? ಮೇರಿಯನ್ನು ರಕ್ಷಿಸುವವನು ದೇವರಾಗಿರಲಾಗಿ, ಆತನು ಅದೇ ಸಮಯದಲ್ಲಿ ಅವಳ ಮಗನಾಗಿರುವುದು ಹೇಗೆ?’
ನನಗೀಗ 105 ವಯಸ್ಸು ಮತ್ತು ಜಾಲಿಸ್ಕೋದ ಎಲ್ ಕ್ಯಾರಿಝಲ್‌ನಲ್ಲಿ ಸುಮಾರು 20 ವರ್ಷಗಳಿಂದ ಹಿರಿಯನಾಗಿ ಮತ್ತು ಕ್ರಮದ ಪಯನೀಯರನಾಗಿ ಸೇವೆ ಮಾಡುತ್ತಿದ್ದೇನೆ. ನಾನು ಇಷ್ಟು ವರ್ಷ ಜೀವಿಸಿದ್ದು ಯೆಹೋವನ ಚಿತ್ತವಾಗಿರಬೇಕೆಂದು ನನ್ನೆಣಿಕೆ, ಯಾಕಂದರೆ ಈ ರೀತಿಯಲ್ಲಿ ನಾನಾತನನ್ನು ಸೇವಿಸದೆ ಇದ್ದ ಸಮಯಕ್ಕಾಗಿ ನಷ್ಟಭರ್ತಿ ಮಾಡಲು ಶಕ್ತನಾಗಿದ್ದೇನೆ.
ನಮ್ಮ ಸರ್ವಶ್ರೇಷ್ಠ ನ್ಯಾಯಾಧಿಪತಿಯು ತನ್ನ ನೀತಿಯುಳ್ಳ ಸಿಂಹಾಸನದಿಂದ ನಮ್ಮನ್ನು ನೋಡುತ್ತಿದ್ದಾನೆ ಮತ್ತು ನಮ್ಮ ಆವಶ್ಯಕತೆಗಳನ್ನು ಒದಗಿಸುತ್ತಿದ್ದಾನೆ ಎಂಬ ಭರವಸವು ಯಾವಾಗಲೂ ನಮ್ಮಲ್ಲಿರಬೇಕು ಎಂಬದು ನಾನು ಕಲಿತ ಒಂದು ವಿಷಯವಾಗಿದೆ. ಕೀರ್ತನೆ 117:2 ಹೇಳುವುದು: “ಆತನ ಕೃಪೆಯು ನಮ್ಮ ಮೇಲೆ ಅಪಾರವಾಗಿದೆ.” (w92 2/1)