ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 5/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ಅಬ್ರಹಾಮ ಮತ್ತು ಸಾರ ಅವರ ನಂಬಿಕೆಯನ್ನು ನೀವು ಅನುಕರಿಸಬಲ್ಲಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಕೊನೆಗೂ ಮಗನನ್ನು ಹೆತ್ತಳು!
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅಬ್ರಾಮ ಮತ್ತು ಸಾರಯಳ ಹೆಸರನ್ನು ಯೆಹೋವನು ಯಾಕೆ ಬದಲಿಸಿದನು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ಇನ್ನಷ್ಟು
ಕಾವಲಿನಬುರುಜು—1992
w92 5/1 ಪು. 31

ವಾಚಕರಿಂದ ಪ್ರಶ್ನೆಗಳು

ಆದಿಕಾಂಡ 12:19ರಲ್ಲಿ ಕೆಲವು ಬೈಬಲ್‌ ತರ್ಜುಮೆಗಳು ತೋರಿಸುವ ಪ್ರಕಾರ, ಫರೋಹನು ಅಬ್ರಹಾಮನ ಪತ್ನಿಯಾದ ಸಾರಳನ್ನು ನಿಜವಾಗಿಯೂ ಮದುವೆಯಾಗಿದ್ದನೋ?

ಇಲ್ಲ. ಫರೋಹನು ಸಾರ (ಸಾರಯ) ಳನ್ನು ತನ್ನ ಪತ್ನಿಯಾಗಿ ತಕ್ಕೊಳ್ಳುವುದರಿಂದ ತಡೆಯಲ್ಪಟ್ಟನು. ಆದಕಾರಣ, ಸಾರಳ ಮಾನ ಮತ್ತು ಘನತೆಗೆ ಯಾವ ಅಪಕೀರ್ತಿಯೂ ಬಂದಿರುವುದಿಲ್ಲ.

ಆ ವಚನದ ಪೂರ್ವಾಪರ ಸಂದರ್ಭವನ್ನು ಪರೀಕ್ಷಿಸುವಲ್ಲಿ ನಾವದನ್ನು ಕಾಣಲು ಸಹಾಯ ಮಾಡಲ್ಪಡುವೆವು. ಒಂದು ಕ್ಷಾಮವು ಬಂದ ಕಾರಣ ಅಬ್ರಹಾಮ (ಅಬ್ರಾಮ) ನು ಸ್ವಲ್ಪ ಸಮಯದ ತನಕ ಈಜಿಪ್ಟನ್ನು ಮರೆಹೋಗಬೇಕಾಯಿತು. ತನ್ನ ಸುಂದರಿಯಾದ ಪತ್ನಿ ಸಾರಳ ಕಾರಣದಿಂದಾಗಿ ತನ್ನ ಪ್ರಾಣಕ್ಕೆ ಅಲ್ಲಿ ಆಪತ್ತು ಬಂದೀತೆಂದು ಅಬ್ರಹಾಮನು ಹೆದರಿದ್ದನು. ಅಬ್ರಹಾಮನಿಗೆ ಸಾರಳಿಂದ ಆ ತನಕ ಮಗನು ಹುಟ್ಟಿರಲಿಲ್ಲ ಮತ್ತು ತಾನು ಈಜಿಪ್ಟಿನಲ್ಲಿ ಮರಣಕ್ಕೆ ಗುರಿಯಾದಲ್ಲಿ, ಯಾವ ಸಂತಾನದ ಮೂಲಕವಾಗಿ ಭೂಮಿಯ ಸಕಲ ಕುಟುಂಬಗಳು ಆಶೀರ್ವದಿಸಲ್ಪಡಲಿದ್ದವೋ ಆ ಸಂತಾನದ ವಂಶವು ಕಡಿಯಲ್ಪಡಲಿಕ್ಕಿತ್ತು. (ಆದಿಕಾಂಡ 12:1-3) ಆದುದರಿಂದ ಅಬ್ರಹಾಮನು ಸಾರಳನ್ನು ಅವನ ಸಹೋದರಿಯಾಗಿ ಪರಿಚಯಿಸುವಂತೆ ಹೇಳಿದನು, ಯಾಕಂದರೆ ವಾಸ್ತವದಲ್ಲಿ ಆಕೆ ಅವನ ಮಲತಂಗಿಯೇ ಆಗಿದ್ದಳು.—ಆದಿಕಾಂಡ 12:10-13; 20:12.

ಅವನ ಭಯವು ಆಧಾರರಹಿತವಾಗಿರಲಿಲ್ಲ. ಪಂಡಿತರಾದ ಆಗಸ್ಟ್‌ ಕ್ನಾಬೆಲ್‌ ವಿವರಿಸಿದ್ದು: “ಅಬ್ರಾಮನು ಸಾರಯಳಿಗೆ ಅವನ ತಂಗಿಯಾಗಿ ಪರಿಚಯಿಸುವಂತೆ ವಿನಂತಿಸಿದ್ದು ಅವನು ಈಜಿಪ್ಟಿನಲ್ಲಿ ಕೊಲ್ಲಲ್ಪಡದಂತೆಯೇ. ಆಕೆ ವಿವಾಹಿತ ಸ್ತ್ರೀಯೆಂದು ವೀಕ್ಷಿಸಲ್ಪಟ್ಟಲ್ಲಿ, ಅವಳ ಗಂಡನೂ ಯಜಮಾನನೂ ಆದಾತನನ್ನು ಕೊಲ್ಲುವ ಮೂಲಕ ಮಾತ್ರವೇ ಈಜಿಪ್ಟಿನವನೊಬ್ಬನು ಅವಳನ್ನು ಹೊಂದಶಕ್ತನಾಗಿದ್ದನು. ಒಂದುವೇಳೆ ಆಕೆ ತಂಗಿಯೆಂದು ವೀಕ್ಷಿಸಲ್ಪಟ್ಟಲ್ಲಿ, ಅವಳನ್ನು ಸಹೋದರನ ವಶದಿಂದ ಸ್ನೇಹಭಾವದಿಂದ ಒಲಿಸಿಕೊಳ್ಳುವ ಸಂಭವನೀಯತೆ ಅಲ್ಲಿರುತ್ತಿತ್ತು.”

ಆದರೆ ಈಜಿಪ್ಟಿನ ಪ್ರಧಾನರಾದರೋ ಫರೋಹನು ಸಾರಳನ್ನು ಮದುವೆಯಾಗುವ ವಿಷಯದಲ್ಲಿ ಅಬ್ರಹಾಮನೊಂದಿಗೆ ಯಾವ ಪ್ರಸ್ತಾಪಗಳನ್ನೂ ಮಾಡಿರಲಿಲ್ಲ. ಅವರು ಸುಂದರಿಯಾದ ಸಾರಳನ್ನು ಫರೋಹನ ಅರಮನೆಗೆ ಕೇವಲ ಕರತಂದರು ಮತ್ತು ಈಜಿಪ್ಟಿನ ಅರಸನು ಸಹೋದರನೆಂದು ಭಾವಿಸಿದ ಅಬ್ರಹಾಮನಿಗೆ ಉಡುಗೊರೆಗಳನ್ನು ಕೊಟ್ಟನು. ಆದರೆ ಇದನ್ನು ಹಿಂಬಾಲಿಸಿ, ಯೆಹೋವನು ಫರೋಹನ ಮನೆವಾರ್ತೆಯನ್ನು ಉಪದ್ರವಗಳಿಂದ ಬಾಧಿಸಿದನು. ಮತ್ತು ನಿಜ ಪರಿಸ್ಥಿತಿಯು ಫರೋಹನಿಗೆ ಅನುಲ್ಲೇಖಿತ ರೀತಿಯಲ್ಲಿ ಪ್ರಕಟವಾದಾಗ, ಅವನು ಅಬ್ರಹಾಮನಿಗೆ ಹೇಳಿದ್ದು: “ಯಾಕೆ ಹೀಗೆ ಮಾಡಿದೆ? ತಂಗಿಯೆಂದು ಯಾಕೆ ಹೇಳಿದೆ? ಹೀಗೆ ಹೇಳಿದ್ದರಿದ ಆಕೆಯನ್ನು ಹೆಂಡತಿಯಾಗಿ ತೆಗೆದುಕೊಳ್ಳಲಿಕ್ಕಿದ್ದೆನಲ್ಲಾ? ಇಗೋ ನಿನ್ನ ಹೆಂಡತಿ; ಕರೆದುಕೊಂಡು ಹೋಗು!”—ಆದಿಕಾಂಡ 12:14-19.

ದ ನ್ಯೂ ಇಂಗ್ಲಿಷ್‌ ಬೈಬಲ್‌ ಮತ್ತು ಇತರ ಬೈಬಲ್‌ ಭಾಷಾಂತರಗಳು ಮೇಲಿನ ವಚನದ ಓರೆ ಅಕ್ಷರಾಂಶವನ್ನು “ಹೀಗೆ ಹೇಳಿದ್ದರಿಂದ ಆಕೆಯನ್ನು ಹೆಂಡತಿಯಾಗುವುದಕ್ಕೆ ತೆಗೆದುಕೊಂಡೆನಲ್ಲಾ” ಅಥವಾ ತದ್ರೀತಿಯ ಪದಪ್ರಯೋಗವನ್ನು ಮಾಡಿವೆ. ಇದು ಒಂದು ತಪ್ಪು ತರ್ಜುಮೆಯಾಗಿರುವ ಅಗತ್ಯವಿಲ್ಲವಾದರೂ, ಅಂಥ ಪದಪ್ರಯೋಗವು ಫರೋಹನು ಸಾರಳನ್ನು ನಿಜವಾಗಿಯೂ ವಿವಾಹವಾಗಿದ್ದನು, ಮದುವೆಯು ನಿಜವಾಗಿ ಆಗಿಹೋಗಿತ್ತು ಎಂಬ ಅಭಿಪ್ರಾಯವನ್ನು ಕೊಡಸಾಧ್ಯವಿದೆ. ಆದಿಕಾಂಡ 12:19ರಲ್ಲಿ “ತೆಗೆದುಕೊಳ್ಳು” ಎಂದು ತರ್ಜುಮೆಯಾದ ಹಿಬ್ರೂ ಕ್ರಿಯಾಪದವು ನ್ಯೂನ ಕ್ರಿಯಾರೂಪದಲ್ಲಿದ್ದು, ಕ್ರಿಯೆಯು ಇನ್ನೂ ಮುಗಿದಿಲ್ಲ ಎಂಬದನ್ನು ಸೂಚಿಸುತ್ತದೆ. ಆದುದರಿಂದ ದ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಈ ಹಿಬ್ರೂ ಕ್ರಿಯಾಪದವನ್ನು ಪೂರ್ವಾಪರ ಸಂದರ್ಭಕ್ಕೆ ಹೊಂದಿಕೆಯಲ್ಲಿ ಮತ್ತು ಆ ಕ್ರಿಯಾಪದದ ನ್ಯೂನರೂಪವನ್ನು ಸ್ವಷ್ಟವಾಗಿ ಪ್ರತಿಬಿಂಬಿಸುವ ರೀತಿಯಲ್ಲಿ—“ಹೀಗೆ ಹೇಳಿದ್ದರಿದ ಆಕೆಯನ್ನು ಹೆಂಡತಿಯಾಗಲಿಕ್ಕೆ ತೆಗೆದುಕೊಳ್ಳಲಿಕ್ಕಿದ್ದೆನಲ್ಲಾ” ಎಂದು ಭಾಷಾಂತರಿಸಿದೆ.a ಫರೋಹನು ಸಾರಳನ್ನು ತನ್ನ ಪತ್ನಿಯಾಗಿ “ತೆಗೆದುಕೊಳ್ಳಲಿಕ್ಕಿದ್ದರೂ,” ಯಾವುದೇ ಕಾರ್ಯವಿಧಾನ ಅಥವಾ ಸಂಸ್ಕಾರದಲ್ಲಿ ಅವನಿನ್ನೂ ಮುಂದುವರಿದಿರಲಿಲ್ಲ.

ವಿಷಯವನ್ನು ಆ ರೀತಿಯಲ್ಲಿ ಗೋಚರಿಸಿದ್ದಕ್ಕಾಗಿ ಅಬ್ರಹಾಮನನ್ನು ಆಗಿಂದಾಗ್ಗೆ ಠೀಕಿಸಲಾಗಿದೆ, ಆದರೆ ಅವನು ವಾಗ್ದಾತ್ತ ಸಂತತಿಯ ಹಿತಚಿಂತನೆಗಳ ಪರವಾಗಿ ಮತ್ತು ಹೀಗೆ ಮಾನವ ಕುಲವೆಲ್ಲಾದರ ಪರವಾಗಿ ಕಾರ್ಯನಡಿಸಿದ್ದನು.—ಆದಿಕಾಂಡ 3:15; 22:17, 18; ಗಲಾತ್ಯ 3:16.

ಇದನ್ನು ಹೋಲುವ ಸಂಭವನೀಯ ಅಪಾಯವಿದ್ದ ಇನ್ನೊಂದು ಸಂದರ್ಭದಲ್ಲಿ ಇಸಾಕನು ತನ್ನ ಪತ್ನಿ ರೆಬೆಕ್ಕಳನ್ನು ಅವಳ ವಿವಾಹಿತ ಸ್ಥಿತಿಯನ್ನು ತಿಳಿಸದೆ ಇರುವಂತೆ ಮಾಡಿದ್ದನು. ಯಾರ ಮೂಲಕವಾಗಿ ಸಂತತಿಯು ಬರಲಿಕ್ಕಿತ್ತೋ ಆ ಪುತ್ರನಾದ ಯಾಕೋಬನು ಅವರಿಗೆ ಈ ಮೊದಲೇ ಹುಟ್ಟಿದ್ದನು ಮತ್ತು ಆಗ ಯುವಕನಾಗಿದ್ದಿರಬೇಕೆಂಬದು ವ್ಯಕ್ತ. (ಆದಿಕಾಂಡ 25:20-27; 26:1-11) ಆದರೂ, ಈ ಉದಾತ್ತ ವ್ಯೂಹದ ಹಿಂದಿನ ಹೇತುವು ಅಬ್ರಹಾಮನಂಥಾದ್ದೇ ಆಗಿದ್ದಿರಬೇಕು. ಒಂದು ಕ್ಷಾಮದ ಸಮಯದಲ್ಲಿ ಇಸಾಕನು ಮತ್ತು ಅವನ ಕುಟುಂಬವು ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಕ್ಷೇತ್ರದಲ್ಲಿ ನಿವಾಸಿಸಿದ್ದರು. ರೆಬೆಕ್ಕಳು ಇಸಾಕನ ಪತ್ನಿಯೆಂದು ಅವನಿಗೆ ಗೊತ್ತಾಗಿದ್ದರೆ, ಅಬೀಮೆಲೆಕನು ಇಸಾಕನ ಕುಟುಂಬದಲ್ಲಿ ಉಳಿದವರನ್ನೆಲ್ಲಾ, ಯಾಕೋಬನನ್ನು ಸಹಾ, ಕೊಂದುಬಿಡುವ ಮಾರ್ಗವನ್ನು ಕೈಕೊಳ್ಳಬಹುದಾಗಿತ್ತು. ಈ ಸಂದರ್ಭದಲ್ಲಿ ಕೂಡಾ, ಯೆಹೋವನು ತನ್ನ ಸೇವಕರನ್ನು ಮತ್ತು ಸಂತಾನದ ವಂಶವನ್ನು ರಕ್ಷಿಸಲು ಹಸ್ತಕ್ಷೇಪ ಮಾಡಿದನು. (w92 2/1)

[ಅಧ್ಯಯನ ಪ್ರಶ್ನೆಗಳು]

a  ಜೆ.ಬಿ. ರಾಥರ್‌ಹ್ಯಾಮ ಭಾಷಾಂತರವು ಓದುವುದು: “ಅವಳು ನಿನ್ನ ತಂಗಿಯೆಂದು ನೀನು ಹೇಳಿದೇತಕ್ಕೆ? ಹೀಗೆ ಹೇಳಿದ್ದರಿಂದ ಅವಳನ್ನು ನನ್ನ ಹೆಂಡತಿಯಾಗಿ ತಕ್ಕೊಳ್ಳಲಿಕ್ಕಿದ್ದೆನಲ್ಲಾ?”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ