ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 15-17
ಅಬ್ರಾಮ ಮತ್ತು ಸಾರಯಳ ಹೆಸರನ್ನು ಯೆಹೋವನು ಯಾಕೆ ಬದಲಿಸಿದನು?
[ಪುಟ 4 ರಲ್ಲಿರುವ ಚಿತ್ರ]
ಯೆಹೋವನ ದೃಷ್ಟಿಯಲ್ಲಿ ಅಬ್ರಾಮ ದೋಷ ಇಲ್ಲದವನಾಗಿದ್ದ. ಒಡಂಬಡಿಕೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಬ್ರಾಮನಿಗೆ ತಿಳಿಸಿದ ಸಂದರ್ಭದಲ್ಲಿ, ಯೆಹೋವನು ಅಬ್ರಾಮ ಮತ್ತು ಸಾರಯಳ ಹೆಸರನ್ನು ಬದಲಿಸಿದನು. ಈ ಹೆಸರುಗಳು ಭವಿಷ್ಯದಲ್ಲಿ ನಡೆಯುವ ವಿಷಯಗಳನ್ನು ಸೂಚಿಸುತ್ತಿದ್ದವು.
ಹೆಸರಿಗೆ ತಕ್ಕಂತೆಯೇ ಅಬ್ರಹಾಮ ಹಲವಾರು ಜನಾಂಗಗಳಿಗೆ ತಂದೆಯಾದ ಮತ್ತು ಸಾರಾ ಹಲವಾರು ರಾಜರಿಗೆ ಪೂರ್ವಜೆಯಾದಳು.
ಅಬ್ರಹಾಮ
ಹಲವಾರು ಜನಾಂಗಗಳ ತಂದೆ
ಸಾರಾ
ರಾಜಕುಮಾರಿ
ನಾವು ಹುಟ್ಟಿದಾಗ ಯಾವ ಹೆಸರು ಇಟ್ಟುಕೊಳ್ಳಬೇಕು ಅನ್ನೋದು ನಮ್ಮ ಕೈಯಲಿಲ್ಲ. ಆದರೆ ಅಬ್ರಹಾಮ ಮತ್ತು ಸಾರಾ ತರ ನಾವು ಒಳ್ಳೇ ಹೆಸರು ಗಳಿಸಬಹುದು. ನಿಮ್ಮನ್ನೇ ಕೇಳಿಕೊಳ್ಳಿ:
‘ಯೆಹೋವನ ದೃಷ್ಟಿಯಲ್ಲಿ ನಿರ್ದೋಷಿ ಆಗಿರಲು ನಾನೇನು ಮಾಡಬೇಕು?’
‘ಯೆಹೋವನ ದೃಷ್ಟಿಯಲ್ಲಿ ನಾನು ಎಂಥ ಹೆಸರನ್ನು ಗಳಿಸಿದ್ದೇನೆ?’