ವಿಗ್ರಹಗಳು ನಿಮ್ಮನ್ನು ದೇವರ ಸಮೀಪಕ್ಕೆ ತರಬಲ್ಲವೋ?
ಅಧಿಕ ಸಂಖ್ಯಾತ ಈಜಿಪ್ಟಿಯನ್, ಬೆಬಿಲೋನ್ಯ ಮತ್ತು ಗ್ರೀಕ್ ವಿಗ್ರಹಗಳು ಇಂದು ವಸ್ತು ಸಂಗ್ರಹಾಲಯಗಳನ್ನು ತುಂಬಿವೆ. ಒಂದು ಕಾಲದಲ್ಲಿ ಪರಮ ಪೂಜ್ಯವಾಗಿದ್ದ ಆ ಪ್ರತಿಮೆಗಳು ಇಂದು ಕೇವಲ ಪುರಾತನ ಕಲಾ ಕೃತಿಗಳಾಗಿ ಪ್ರದರ್ಶಿಸಲ್ಪಡುತ್ತಾ ಇವೆ. ಅವುಗಳ ಶಕ್ತಿಯು ಇದ್ದದ್ದು ಅವನ್ನು ಆರಾಧಿಸಿದವರ ಕಲ್ಪನೆಯಲ್ಲಿ ಮಾತ್ರವೇ. ಅವನ್ನು ಪೂಜಿಸಿದ್ದ ಜನರು ಕಟ್ಟಕಡೆಗೆ ಕಾಲಾಧೀನರಾದಾಗ, ಈ ಪ್ರತಿಮೆಗಳಲ್ಲಿತ್ತೆಂದು ಹೇಳಲಾದ ಶಕ್ತಿಯು ಸಹಾ ಮಾಯವಾಯಿತು. ಆ ವಿಗ್ರಹಗಳು ಸತ್ವಹೀನ—ವಾಸ್ತವದಲ್ಲಿ ಅವು ಸದಾ ಹಾಗೆಯೇ ಇದ್ದವು—ನಿರ್ಜೀವ ವಸ್ತುಗಳಾದ ಮರ, ಕಲ್ಲು ಮತ್ತು ಲೋಹದವುಗಳಾಗಿ ಬಯಲು ಮಾಡಲ್ಪಟ್ಟವು.
ಇಂದು ಜನರಿಂದ ಪೂಜ್ಯನೀಯವಾಗಿ ಮಾಡಲ್ಪಡುವ ಮತ್ತು ಆರಾಧಿಸಲ್ಪಡುವ ವಿಗ್ರಹಗಳ ಕುರಿತೇನು? ಪುರಾತನ ಈಜಿಪ್ಟಿನ, ಬೆಬಿಲೋನಿನ ಮತ್ತು ಗ್ರೀಕ್ನ ವಿಗ್ರಹಗಳಿಗಿಂತ ಇವು ಹೆಚ್ಚು ಶಕಿಭ್ತರಿತವೋ? ಮನುಷ್ಯನನ್ನು ದೇವರಿಗೆ ಸಮೀಪ ತರಲು ಅವು ನಿಜವಾಗಿಯೂ ಸಾಧನವಾಗಿವೆಯೋ?
ಪ್ರತಿಯೊಂದು ಸಂತತಿಯು ದಾಟುತ್ತಾ ಹೋದಂತೆ ಮಾನವ ಕುಲವು ದೇವರಿಂದ ದೂರವಾಗುತ್ತಾ ದೂರವಾಗುತ್ತಾ ಹೋಗುತ್ತಿರುವಂತೆ ಕಾಣುತ್ತಿದೆ. ಲೋಕದಲ್ಲಿರುವ ಎಲ್ಲಾ ವಿಗ್ರಹಗಳು ಈ ಕುರಿತು ಮಾಡಶಕ್ತರಾಗಿರುವುದಾದರೂ ಏನನ್ನು? ಅವುಗಳ ಕಡೆಗೆ ಲಕ್ಷ್ಯಕೊಡದಿದ್ದಲ್ಲಿ, ಅವು ಧೂಳಿನಿಂದ ತುಂಬುತ್ತವೆ ಮತ್ತು ಕೊನೆಗೆ ತುಕ್ಕು ಹಿಡಿಯುತ್ತವೆ ಯಾ ನಶಿಸಿ ಹೋಗುತ್ತವೆ. ಅವು ಮಾನವರಿಗಾಗಿ ಏನಾದರೂ ಮಾಡುವುದನ್ನು ಬಿಡಿ, ತಮ್ಮನ್ನು ಸ್ವತಃ ಸಹಾ ಪರಾಮರಿಕೆಮಾಡಿಕೊಳ್ಳಲಾರವು. ಆದರೂ, ಅಧಿಕ ಮಹತ್ವವುಳ್ಳದ್ದಾಗಿ, ಈ ವಿಷಯದಲ್ಲಿ ಬೈಬಲ್ ಹೇಳುವುದೇನು?
ಬೆಲೆಬಾಳುವ, ಪರಿಷ್ಕರಿಸಿದ, ಆದರೆ ನಿಷ್ಪಯ್ರೋಜಕ
ವಿಗ್ರಹಗಳು ನಿಷ್ಪ್ರಯೋಜಕವೂ, ಅದರ ಉಪಾಸಕರನ್ನು ದೇವರ ಸಮೀಪಕ್ಕೆ ತರಲು ಸಹಾಯ ಮಾಡುವುದಕ್ಕೆ ಪೂರ್ಣ ಅಶಕ್ತವೂ ಆಗಿವೆ ಎಂದು ಬೈಬಲು ಬಯಲು ಮಾಡಿರುವುದರಲ್ಲೇನೂ ಆಶ್ಚರ್ಯವಿಲ್ಲ. ಧಾರ್ಮಿಕ ವಿಗ್ರಹಗಳು ಸಾಮಾನ್ಯವಾಗಿ ಹೆಚ್ಚು ಬೆಲೆಯುಳ್ಳ ಮತ್ತು ಉತ್ತಮವಾಗಿ ಪರಿಷ್ಕರಿಸಿದ್ದಾಗಿ ಇವೆಯಾದರೂ, ಅವುಗಳ ನಿಜ ಯೋಗ್ಯತೆಯನ್ನು ತಿಳಿಸುತ್ತಾ ಬೈಬಲು ಅನ್ನುವುದು: “ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ. ಅವು ಬಾಯಿ ಇದ್ದರೂ ಮಾತಾಡುವುದಿಲ್ಲ; ಕಣ್ಣಿದ್ದರೂ ನೋಡುವುದಿಲ್ಲ. ಕಿವಿಯಿದ್ದರೂ ಕೇಳುವುದಿಲ್ಲ. ಮೂಗಿದ್ದರೂ ಮೂಸುವುದಿಲ್ಲ. ಕೈಯುಂಟು, ಮುಟ್ಟುವುದಿಲ್ಲ. ಕಾಲುಂಟು, ನಡಿಯುವುದಿಲ್ಲ; ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ. ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.”—ಕೀರ್ತನೆ 115:4-8.
ವಿಗ್ರಹಗಳು ನಿಷ್ಪ್ರಯೋಜಕವೆಂದು ಬೈಬಲ್ ಬಯಲುಪಡಿಸುತ್ತದೆ ಮಾತ್ರವೇ ಅಲ್ಲ, ಮೂರ್ತಿಗಳ ಕುರಿತು ಮತ್ತು ಅದರ ಆರಾಧಕರ ಕುರಿತು ಖಂಡನೀಯವಾಗಿ ಮಾತಾಡುತ್ತದೆ: “ಇಂಥಾ ಬೊಂಬೆಗಳು ಸೌತೆಯ ತೋಟದ ಬೆದರುಗಂಬದಂತಿವೆ, ಮಾತಾಡಲಾರವು; ಹೊತ್ತುಕೊಂಡು ಹೋಗಬೇಕು, ನಡೆಯಲಾರವು. ಅವುಗಳಿಗೆ ಅಂಜಬೇಡಿರಿ. ಕೇಡು ಮಾಡಲಾರವು, ಮೇಲು ಮಾಡಲಿಕ್ಕೂ ಅವುಗಳಿಗೆ ಸಾಮರ್ಥ್ಯವಿಲ್ಲ. ಎಲ್ಲರೂ ತಿಳುವಳಿಕೆಯಿಲ್ಲದೆ ಪಶುಪ್ರಾಯರಾಗಿದ್ದಾರೆ; ತಾನು ಕೆತ್ತಿದ ವಿಗ್ರಹದ ನಿಮಿತ್ತ ಪ್ರತಿಯೊಬ್ಬ ಅಕ್ಕಸಾಲಿಗನೂ ಅವಮಾನಕ್ಕೆ ಗುರಿಯಾಗುವನು; ಅವನು ಎರಕಹೊಯ್ದ ಪುತಳ್ತಿಯು ಸುಳ್ಳು, ಅವುಗಳಲ್ಲಿ ಶ್ವಾಸವೇ ಇಲ್ಲ. ಅವು ವ್ಯರ್ಥ, ಹಾಸ್ಯಾಸ್ಪದವಾದ ಕೆಲಸ.”—ಯೆರೆಮೀಯ 10:5, 14, 15.
ಕ್ಯಾಥ್ಲಿಕ್ ದೃಷ್ಟಿಕೋನ
ಧಾರ್ಮಿಕ ವಿಗ್ರಹಗಳಿಗೆ ಅಡ್ಡಬೀಳುವ, ಪ್ರಾರ್ಥನೆಮಾಡುವ ಮತ್ತು ಮೋಂಬತ್ತಿಗಳನ್ನು ಹಚ್ಚುವ ಹಾಗೂ ಮುತ್ತು ಕೊಡುವ ಹೆಚ್ಚಿನವರು ತಮ್ಮನ್ನು ಮೂರ್ತಿಪೂಜಕರಾಗಿ ಅಥವಾ ವಿಗ್ರಹಾರಾಧಕರಾಗಿ ವೀಕ್ಷಿಸುವುದಿಲ್ಲವೆಂಬದು ನಿಜ. ಉದಾಹರಣೆಗಾಗಿ, ಕ್ರಿಸ್ತನ ಮತ್ತು ಮರಿಯಳ ವಿಗ್ರಹಗಳನ್ನು ತಾವು ಪೂಜ್ಯಭಾವನೆಯಿಂದ ನೋಡುತ್ತೇವೆ, ವಿಗ್ರಹಗಳು ತಾವೇ ಯಾವುದೇ ದೇವತ್ವವನ್ನು ವಹಿಸಿರುವುದರಿಂದಾಗಿ ಅಲ್ಲ, ವಿಗ್ರಹಗಳು ಯಾರನ್ನು ಪ್ರತಿನಿಧಿಸುತ್ತವೋ ಅವರ ಕಾರಣದಿಂದಾಗಿಯೇ ಎಂದು ಕ್ಯಾಥ್ಲಿಕ್ರು ವಾದಿಸುತ್ತಾರೆ. ದ ವ ಬುಕ್ ಎನ್ಸೈಕ್ಲೊಪೀಡಿಯಾ ಹೇಳುವುದು, “ರೋಮನ್ ಕ್ಯಾಥ್ಲಿಕ್ ಚರ್ಚಿನಲ್ಲಿ, ವಿಗ್ರಹಗಳು ಪೂಜ್ಯ ಭಾವನೆಯಿಂದ ನೋಡಲ್ಪಡುವುದು ಅವುಗಳಿಂದ ಪ್ರತಿನಿಧಿಸಲ್ಪಡುವ ಜನರ ಕುರುಹುಗಳಾಗಿರುವ ಕಾರಣದಿಂದಲೇ.” ಎಷ್ಟರತನಕ ವಿಗ್ರಹಕ್ಕೆ ತೋರಿಸುವ ಪೂಜ್ಯಭಾವನೆ ದೇವರಿಗೆ ಸಲ್ಲಲ್ಪಡಬೇಕಾದ್ದಕ್ಕಿಂತ ಗುಣಮಟ್ಟದಲ್ಲಿ ಕೆಳಗಿನದ್ದೋ ಆ ತನಕ ಅದು ಯೋಗ್ಯವೆಂದು ಕ್ಯಾಥ್ಲಿಕ್ ವೈದಿಕರು ಸಾರಿದ್ದಾರೆ.
ವಾಸ್ತವಾಂಶವೇನಂದರೆ ಈ ವಿಗ್ರಹಗಳು ಪೂಜ್ಯ ಭಾವನೆಯಿಂದ ನೋಡಲ್ಪಡುವ ಸಂಗತಿಯೇ. ದ ನ್ಯೂ ಕ್ಯಾಧ್ಲಿಕ್ ಎನ್ಸೈಕ್ಲೊಪೀಡಿಯ ಸಹಾ ಅಂಥ ಪೂಜ್ಯ ಭಾವನೆ “ಒಂದು ಆರಾಧನಾ ಕ್ರಿಯೆ” ಎಂದು ಒಪ್ಪುತ್ತದೆ. ಆದರೂ ದೇವರನ್ನು ಸಮೀಪಿಸುವುದರಲ್ಲಿ ವಿಗ್ರಹದ ಉಪಯೋಗವನ್ನು ಯೇಸು ಕ್ರಿಸ್ತನು ತಳ್ಳಿ ಹಾಕುತ್ತಾ ಅಂದದ್ದು: “ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ.” (ಯೋಹಾನ 14:6) ಹೀಗಿರಲಾಗಿ, ಒಂದನೆಯ ಶತಕದ ಕ್ರೈಸ್ತರು ಆರಾಧನೆಯಲ್ಲಿ ವಿಗ್ರಹಗಳನ್ನು ನಿರಾಕರಿಸಿದ್ದರಲ್ಲೇನೂ ಆಶ್ಚರ್ಯವಿಲ್ಲ.
ಆದರೂ ಇಂದು ಕ್ರೈಸ್ತ ಪ್ರಪಂಚದ ಧರ್ಮಗಳು ವಿಗ್ರಹಗಳ ಬಹುಸಂಖ್ಯೆಯಲ್ಲಿ ಬೇರೆ ಎಲ್ಲವುಗಳನ್ನು ಮೀರಿಸಿವೆ. ಹೌದು, ವಿಗ್ರಹದೆಡೆಗೆ ಪೂಜ್ಯಭಾವನೆ ತೋರಿಸುವ ವ್ಯರ್ಥತೆಯನ್ನು ಬಯಲು ಪಡಿಸಿರುವ ಎಲ್ಲಾ ಚಾರಿತ್ರಿಕ ಮತ್ತು ಶಾಸ್ತ್ರೀಯ ರುಜುವಾತಿನ ನಡುವೆಯೂ, ಕ್ರೈಸ್ತರೆನಿಸಿಕೊಳ್ಳುವವರು ಲೋಕವ್ಯಾಪಕವಾಗಿ ದೇವರಿಗಾಗಿ ಹುಡುಕುವ ತಮ್ಮ ಪ್ರಾಮಾಣಿಕ ಅನ್ವೇಷಣೆಯಲ್ಲಿ ವಿಗ್ರಹಗಳ ಮುಂದೆ ಅಡ್ಡಬೀಳುವುದನ್ನು ಮತ್ತು ಪ್ರಾರ್ಥನೆ ಮಾಡುವುದನ್ನು ಮುಂದರಿಸುತ್ತಾರೆ. ಏಕೆ?
ಒಬ್ಬ ವೈರಿಯಿಂದ ಸೆಳೆಯಲ್ಪಟ್ಟದ್ದು
ತನ್ನ ಕಾಲದ ಮೂರ್ತಿಪೂಜಕರು ತಮ್ಮ ಕೃತ್ಯಗಳ ವ್ಯರ್ಥತೆಯನ್ನು ಕಾಣಲು ತಪ್ಪಿಹೋದದ್ದು ಯಾಕಂದರೆ ಅವರ “ಕಣ್ಣುಗಳು ಕಾಣದಂತೆಯೂ ಹೃದಯ ಗ್ರಹಿಸದಂತೆಯೂ ಅಂಟುಬಳಿಯ”ಲ್ಪಟ್ಟದರ್ದಿಂದಲೇ ಎಂದು ಪ್ರವಾದಿ ಯೆಶಾಯನು ಹೇಳಿದ್ದಾನೆ. (ಯೆಶಾಯ 44:18) ಮಾನವರ ಮೇಲೆ ಅಂಥ ಒಂದು ಪ್ರಭಾವವನ್ನು ಪ್ರಯೋಗಿಸಲು ಯಾರು ತಾನೇ ಶಕ್ತನಾದಾನು? ಸತ್ಯದೇವರಿಂದ ಮನುಷ್ಯನನ್ನು ದೂರ ಸೆಳೆಯುವ ಉದ್ದೇಶಕ್ಕಾಗಿ ವಿಗ್ರಹಾರಾಧನೆಯು ಸೈತಾನನಿಂದ ಒಳತರಲ್ಪಟ್ಟ ಒಂದು ಸಂಗತಿಯೆಂದು ಸಾ.ಶ. 754 ರ ಐಕಾನೊಕ್ಲಾಸ್ಟಿಕ್ ಕೌನ್ಸಿಲ್ ಘೋಷಿಸಿದೆ. ಈ ತೀರ್ಮಾನವು ಸರಿಯೋ?
ಹೌದು, ಯಾಕಂದರೆ ಸತ್ಯವು “ಉದಯವಾಗ ಬಾರದೆಂದು” ದೇವರ ಪ್ರಧಾನ ವೈರಿಯಾದ ಪಿಶಾಚನಾದ ಸೈತಾನನು ಜನರ “ಮನಸ್ಸನ್ನು ಮಂಕುಮಾಡಿ” ದ್ದಾನೆಂದು ಶತಮಾನಗಳ ಮುಂಚೆಯೇ ತಿಳಿಸಿದ್ದ ಪ್ರೇರಿತ ಬೈಬಲ್ನೊಂದಿಗೆ ಇದು ಸಹಮತದಲ್ಲಿದೆ. (2 ಕೊರಿಂಥ 4:4) ಹೀಗೆ, ದೇವರಿಗೆ ಹತ್ತಿರ ಬರುವ ಬದಲಾಗಿ ವಿಗ್ರಹದೆಡೆಗೆ ಪೂಜ್ಯ ಭಾವನೆ ತೋರಿಸುವಾಗ, ಒಬ್ಬನು ಕಾರ್ಯಥಃ ದೆವ್ವಗಳ ಅಭಿರುಚಿಗಳನ್ನು ಸೇವಿಸುವವನಾಗುತ್ತಾನೆ.—1 ಕೊರಿಂಥ 10:19, 20.
ದೇವರಿಗೆ ಸಮೀಪ ಬರುವುದು
ದೇವರನ್ನು ಸಮೀಪಿಸಲು ವಿಗ್ರಹಗಳು ನಮಗೆ ಸಹಾಯ ಮಾಡ ಶಕವ್ತಲ್ಲ. ಮಹಾ ನಿರ್ಮಾಣಿಕನಾದ ಯೆಹೋವ ದೇವರು ವಿಗ್ರಹಗಳ ಕಡೆಗಿನ ಪೂಜ್ಯಭಾವನೆಯನ್ನು ಹೇಸುತ್ತಾನೆ. (ಧರ್ಮೋಪದೇಶಕಾಂಡ 7:25) “ಯೆಹೋವನು ಪರಿಪೂರ್ಣ ಭಕ್ತಿಯನ್ನು ಕೇಳುವ ದೇವರಾಗಿದ್ದಾನೆ.” (ನಹೂಮ 1:2, NW) “ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಳಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲುಮಾಡೆನು.” (ಯೆಶಾಯ 42:8) ಇದಕ್ಕನುಸಾರ, ಯಾರು ವಿಗ್ರಹಗಳಿಗೆ ಪೂಜ್ಯ ಭಾವನೆ ತೋರಿಸುತ್ತಾರೋ ಅವರು “ದೇವರ ರಾಜ್ಯವನ್ನು ಬಾಧ್ಯತೆಯಾಗಿ ಹೊಂದಲಾರರು.”—ಗಲಾತ್ಯ 5:19-21.
ಆದರೂ, ಯೆಹೋವನು ಕರುಣೆಯುಳ್ಳವನೂ ಕ್ಷಮಿಸುವವನೂ ಆಗಿರುವ ದೇವರು. ತಮ್ಮ ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡವರ ಮತ್ತು ತಮ್ಮ ವಿಗ್ರಹಾರಾಧನೆಯ ಪದ್ಧತಿಗಳನ್ನು ಬಿಟ್ಟುಬಿಟ್ಟ ನಂತರ, ನೀತಿವಂತರಾಗಿ ನಿರ್ಣಯಿಸಲ್ಪಟ್ಟವರ ಕುರಿತು ಬೈಬಲ್ ಮಾತಾಡುತ್ತದೆ. (1 ಕೊರಿಂಥ 6:9-11; 1 ಥೆಸಲೊನೀಕ 1:9) ಅವರು ಯೇಸುವಿನ ಮಾತುಗಳನ್ನು ಪಾಲಿಸಿದರು: “ದೇವರು ಆತ್ಮಸ್ವರೂಪನು, ಆತನನ್ನು ಆರಾಧಿಸುವವರು ಆತ್ಮದಿಂದ ಮತ್ತು ಸತ್ಯದಿಂದ ಆರಾಧಿಸಬೇಕು.”—ಯೋಹಾನ 4:24.
ದೇವರಿಗೆ ಸಮೀಪವಾಗಿ ಬರಲು ಕಷ್ಟವಿಲ್ಲವೆಂಬದನ್ನು ಬೈಬಲಿನ ಒಂದು ಶ್ರದ್ಧೆಯಳ್ಳ ಅಭ್ಯಾಸವು ತೋರಿಸಿ ಕೊಡುವುದು. (ಅಪೊಸ್ತಲರ ಕೃತ್ಯಗಳು 17:26-28) ಆತನಲ್ಲಿ ಒಂದು ಬೆಚ್ಚಗೆನ, ಪ್ರೀತಿಯುಳ್ಳ, ಗೋಚರಣೀಯ ವ್ಯಕ್ತಿತ್ವವು ಇದೆ, ಮತ್ತು ಆತನೊಂದಿಗೆ ಆಪ್ತ ಸಂಬಂಧವನ್ನು ವಿಕಾಸಿಸುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಾನೆ ಮತ್ತು ನಮ್ಮಿಂದ ಅಪೇಕ್ಷಿಸುತ್ತಾನೆ.—ಯೆಶಾಯ 1:18.
ನಮ್ಮ ಸ್ವರ್ಗೀಯ ತಂದೆಯನ್ನು ಒಬ್ಬ ವ್ಯಕ್ತಿಯಾಗಿ ತಿಳಿಯುವಂತೆ ಮತ್ತು ಯೆಹೋವ ಎಂಬ ಆತನ ಹೆಸರಿನ ಕುರಿತು, ಆತನ ಗುಣಗಳ ಮತ್ತು ಮಾನವರೊಂದಿಗೆ ಆತನ ವ್ಯವಹಾರದ ಕುರಿತು ಕಲಿಯುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಆಮಂತ್ರಿಸುತ್ತಾರೆ. ದೇವರನ್ನು ಗೋಚರಿಸಲಿಕ್ಕೆ ಪ್ರತಿಮೆಗಳು ಮತ್ತು ಚಿತ್ರಗಳು ಮುಂತಾದ ದೃಶ್ಯ ಸಾಧನಗಳು ನಿಜವಾಗಿ ಏಕೆ ಅಗತ್ಯವಿಲ್ಲವೆಂಬದನ್ನು ಆತನ ವಾಕ್ಯವಾದ ಬೈಬಲ್ನ ಮೂಲಕ ನೀವು ತಿಳುಕೊಳ್ಳುವಿರಿ. ಹೌದು, “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋಬ 4:8. (w92 2/15)
[ಪುಟ 6 ರಲ್ಲಿರುವ ಚೌಕ]
ಇತಿಹಾಸಕಾರರು ಅವಲೋಕಿಸುವುದು . . .
▫ “ಸಾ.ಶ.ಪೂ. ಆರನೆಯ ಶತಮಾನದಲ್ಲಿ ಸ್ಥಾಪನೆಗೊಂಡ ಬೌದ್ಧಮತವು ತನ್ನ ಸ್ಥಾಪಕನ ಪ್ರತಿಮೆಯನ್ನು ಸುಮಾರು ಸಾ.ಶ. ಒಂದನೆಯ ಶತಮಾನದ ತನಕ ಕಂಡಿರಲಿಲವ್ಲೆಂಬದು ಒಂದು ಸುವಿದಿತ ಸತ್ಯ.”
“ಶತಮಾನಗಳಿಂದ ಹಿಂದೂ ಸಂಪ್ರದಾಯವು ಮೂಲತಃ ವಿಗ್ರಹರಹಿತ [ವಿಗ್ರಹಗಳು ಯಾ ಪ್ರತಿಮೆಗಳು ಇಲ್ಲದೆ] ವಾಗಿತ್ತು.”
“ಹಿಂದೂ ಧರ್ಮ ಮತ್ತು ಬೌದ್ಧ ಧರ್ಮ ಎರಡೂ ವಿಗ್ರಹರಹಿತವಾಗಿ ಪ್ರಾರಂಭಿಸಿದ್ದವು ಮತ್ತು ಕ್ರಮೇಣ ತಮ್ಮ ಆರಾಧನೆಯೊಳಗೆ ವಿಗ್ರಹಗಳನ್ನು ಸ್ವೀಕರಿಸಿದವು. ಕ್ರೈಸ್ತತ್ವವೂ ಇದನ್ನೇ ಮಾಡಿತು.”—ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್, ಮರ್ಚಾ ಎಲ್ಯಡ್ ಇವರಿಂದ.
▫ “ದೇವರ ಸತ್ಯ ಭಕ್ತಿ ವಿಗ್ರಹರಹಿತವಾಗಿತ್ತೆಂದು ಹಲವಾರು ಬೈಬಲ್ ವೃತ್ತಾಂತಗಳಿಂತ ರುಜುವಾಗುತ್ತದೆ. . . . ಎನ್.ಟಿ. [ನ್ಯೂ ಟೆಸ್ಟಮೆಂಟ್, ಹೊಸ ಒಡಂಬಡಿಕೆ] ಯಲ್ಲೂ ವಿಧರ್ಮಿ ದೇವರುಗಳ ಮತ್ತು ವಿಗ್ರಹಗಳ ಆರಾಧನೆಯು ನಿಷಿದ್ಧವಾಗಿತ್ತು.”—ನ್ಯೂ ಕ್ಯಾಥ್ಲಿಕ್ ಎನ್ಸೈಕ್ಲೊಪೀಡಿಯ.
▫ “ಆದಿ ಕ್ರೈಸ್ತರ ಆರಾಧನೆಯಲ್ಲಿ ವಿಗ್ರಹಗಳು ಅಜ್ಞಾತವಾಗಿದ್ದವು.”—ಸೈಕ್ಲೊಪೀಡಿಯ ಆಫ್ ಬಿಬ್ಲಿಕಲ್, ಥಿಯೊಲಾಜಿಕಲ್ ಆ್ಯಂಡ್ ಎಕೀಸ್ಲಿಯಾಸಿಕ್ಟಲ್ ಲಿಟ್ರೇಚರ್, ಮೆಕ್ಲಿಂಟಕ್ ಮತ್ತು ಸ್ಟ್ರಾಂಗ್ ಇವರಿಂದ.
▫ “ಬಹಿರಂಗವಾಗಿ ಯಾ ಖಾಸಗಿಯಾಗಿ, ಕ್ರೈಸ್ತರು ಆರಾಧನೆಯಲ್ಲಿ ಪ್ರತಿಮೆಗಳನ್ನು ಅಥವಾ ಚಿತ್ರಗಳನ್ನು ಉಪಯೋಗಿಸುತ್ತಿದ್ದರೆಂಬ ಯಾವುದೇ ಸುಳಿವು ಹೊಸ ಒಡಂಬಡಿಕೆಯಲ್ಲಿ ಅಥವಾ ಕ್ರೈಸ್ತತ್ವದ ಆದಿ ಯುಗದ ಯಾವುದೇ ಸತ್ಯ ಬರಹಗಳಲ್ಲಿ ಕಂಡುಬರುವುದಿಲ್ಲ.”—ಎ ಕನ್ಸೊಯಿಸ್ ಸೈಕ್ಲೊಪೀಡಿಯ ಆಫ್ ರಿಲಿಜಿಯಸ್ ನಾಲೆಡ್ಜ್, ಎಲೈಯಸ್ ಬೆಂಜಮಿನ್ ಸಾನ್ಫರ್ಡ್ ಇವರಿಂದ.
▫ “ಚರ್ಚುಗಳಲ್ಲಿ ವಿಗ್ರಹಗಳನ್ನು ಇಡುವ ಕೇವಲ ಸಲಹೆಯನ್ನು ಸಹಾ ಆದಿ ಕ್ರೈಸ್ತರು ಥರಥರಿಕೆಯಿಂದ ನೋಡುತ್ತಿರುತ್ತಿದ್ದರು, ಮತ್ತು ಅವುಗಳ ಮುಂದೆ ಅಡ್ಡಬೀಳುವುದು ಅಥವಾ ಪ್ರಾರ್ಥಿಸುವುದನ್ನು ಮೂರ್ತಿಪೂಜೆಯಂತೆಯೇ ಪರಿಗಣಿಸುತ್ತಿರುತ್ತಿದ್ದರು.”—ಹಿಸ್ಟರಿ ಆಫ್ ದ ಕ್ರಿಶ್ಚನ್ ಚರ್ಚ್, ಜಾನ್ ಫೆಲ್ಲರ್ಚ್ ಹರ್ಟ್ಸ್ ಇವರಿಂದ.
▫ “ಆದಿ ಚರ್ಚ್ನಲ್ಲಿ ಕ್ರಿಸ್ತನ ಮತ್ತು ಸಂತರ ಭಾವಚಿತ್ರಗಳನ್ನು ಮಾಡುವುದನ್ನು ಅಥವಾ ಅವನ್ನು ಗೌರವಿಸುವುದನ್ನು ಸತತವಾಗಿ ವಿರೋಧಿಸಲಾಗಿತ್ತು.”—ದಿ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕ.
▫ “ಆದಿ ಚರ್ಚಿಗೆ ಕಲೆಯ ಬಗ್ಗೆ ಹೇವರಿಕೆ ಇರಲಿಲ್ಲ, ಆದರೂ ಕ್ರಿಸ್ತನ ವಿಗ್ರಹಗಳು ಅದಕ್ಕಿರಲಿಲ್ಲ.”—ಸ್ಕೈಫ್-ಹರ್ಝಗ್ ಎನ್ಸೈಕ್ಲೊಪೀಡಿಯ ಆಫ್ ರಿಲಿಜಿಯಸ್ ನಾಲೆಡ್ಜ್.
[ಪುಟ 7 ರಲ್ಲಿರುವ ಚಿತ್ರ]
“ತಂದೆಯನ್ನು ಆತ್ಮದಿಂದ ಮತ್ತು ಸತ್ಯದಿಂದ ಆರಾಧಿಸುವವ” ರಿಗಾಗಿ ದೇವರು ಹುಡುಕುತ್ತಾನೆಂದು ಯೇಸು ಒತ್ತಿಹೇಳಿದನು