ಕ್ರಿಸ್ತನು ಅಧರ್ಮವನ್ನು ದ್ವೇಷಿಸಿದನು—ನೀವು ಹಾಗೆ ಮಾಡುತ್ತೀರೊ?
“ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.”—ಇಬ್ರಿಯ 1:9.
1. ಅಧರ್ಮವನ್ನು ಪ್ರೀತಿಸುವುದರ ಹೊರತಾಗಿ, ಯೆಹೋವ ದೇವರ ಎಲ್ಲಾ ನಿಜ ಸೇವಕರಿಂದ ಬೇರೆ ಏನನ್ನು ಕೂಡ ಅಪೇಕ್ಷಿಸಲಾಗಿದೆ?
ಯೆಹೋವನ ನಿಜ ಸೇವಕರು ಅವನನ್ನು ತಮ್ಮೆಲ್ಲಾ ಹೃದಯ, ಆತ್ಮ, ಮನಸ್ಸು, ಮತ್ತು ಶಕಿಯ್ತಿಂದ ಪ್ರೀತಿಸುತ್ತಾರೆ. (ಮಾರ್ಕ 12:30) ಸಮಗ್ರತೆಯನ್ನು ಕಾಪಾಡಿಕೊಳ್ಳುವದರ ಮೂಲಕ ಯೆಹೋವನ ಹೃದಯವನ್ನು ಸಂತೋಷಗೊಳಿಸಲು ಅವರು ಬಯಸುತ್ತಾರೆ. (ಜ್ಞಾನೋಕ್ತಿ 27:11) ಅದನ್ನು ಮಾಡಲು, ಅವರು ಧರ್ಮವನ್ನು ಪ್ರೀತಿಸುವದು ಮಾತ್ರವಲ್ಲ, ಅವರು ಅಧರ್ಮವನ್ನು ಕೂಡ ದ್ವೇಷಿಸತಕ್ಕದ್ದು. ಅವರ ಆದರ್ಶಪ್ರಾಯನಾದ ಯೇಸು ಕ್ರಿಸ್ತನು ನಿಶ್ಚಯವಾಗಿಯೂ ಅದನ್ನು ಮಾಡಿದನು. ಅವನ ಕುರಿತಾಗಿ ಹೇಳಲ್ಪಟ್ಟಿದೆ: “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ.”—ಇಬ್ರಿಯ 1:9.
2. ಅಧರ್ಮದಲ್ಲಿ ಏನು ಒಳಗೂಡಿರುತ್ತದೆ?
2 ಅಧರ್ಮವೆಂದರೆ ಏನು? ಅಪೊಸ್ತಲ ಯೋಹಾನನು ಬರೆದಾಗ ತೋರಿಸಿದಂತೆ ಅದು ಪಾಪವಾಗಿದೆ: “ಪಾಪಮಾಡುವ ಪ್ರತಿಯೊಬ್ಬನು ಅಧರ್ಮವನ್ನು ಮಾಡುವವನಾಗಿದ್ದಾನೆ; ಪಾಪವು ಅಧರ್ಮವೇ.” (1 ಯೋಹಾನ 3:4) ಅಧರ್ಮಿ ವ್ಯಕ್ತಿಯೊಬ್ಬನು “ನಿಯಮದ ಮೂಲಕ ನಿರ್ಬಂಧಿತನಾಗಿರುವದಿಲ್ಲ ಯಾ ನಿಯಂತ್ರಿತನಾಗಿರುವದಿಲ್ಲ.” (ವೆಬ್ಸ್ಟರ್ಸ್ ನೈನ್ತ್ ನ್ಯೂ ಕಾಲೆಜಿಯೇಟ್ ಡಿಕ್ಷನರಿ) ಅಧರ್ಮದಲ್ಲಿ ಕೆಟ್ಟತನ, ದುಷ್ಟತನ, ಅನೈತಿಕತೆ, ಭ್ರಷ್ಟತೆ, ಮತ್ತು ಅಪ್ರಾಮಾಣಿಕತೆಯಾಗಿರುವ ಎಲ್ಲವೂ ಸೇರಿರುತ್ತದೆ. ಹಿಂದೆಂದಿಗಿಂತಲೂ ಇಂದು ಅಧರ್ಮವು ಬಹಳವಾಗಿ ಹಬ್ಬಿರುತ್ತದೆ ಎಂಬುದು ಲೋಕದ ಕಡೆಗಿನ ಒಂದು ವೀಕ್ಷಣವು ನಮಗೆ ತೋರಿಸುತ್ತದೆ. ಅಪೊಸ್ತಲ ಪೌಲನು 2 ತಿಮೊಥಿ 3:1-5 ರಲ್ಲಿ ಮುನ್ನುಡಿದಂಥ “ಕಠಿಣಕಾಲಗಳಲ್ಲಿ” ನಾವು ಜೀವಿಸುತ್ತಾ ಇದ್ದೇವೆ ಎಂಬುದರಲ್ಲಿ ಯಾವುದೇ ಸಂಶಯವಿರುವದಿಲ್ಲ. ಇವೆಲ್ಲಾ ಅಧರ್ಮದ ನೋಟದಲ್ಲಿ, ಎಲ್ಲಾ ಕೆಟ್ಟತನವನ್ನು ದ್ವೇಷಿಸುವಂತೆ ನಮಗೆ ಆಜ್ಞಾಪಿಸಲ್ಪಟ್ಟಿರುವದು ಎಷ್ಟೊಂದು ಉತ್ತಮವಾಗಿರುತ್ತದೆ! ಉದಾಹರಣೆಗೆ, ನಮಗೆ ಹೀಗೆ ಹೇಳಲ್ಪಟ್ಟಿದೆ: “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ.” (ಕೀರ್ತನೆ 97:10) ತದ್ರೀತಿಯಲ್ಲಿ ನಾವು ಓದುವದು: “ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ.”—ಆಮೋಸ 5:15.
ದ್ವೇಷದ ಮೂರು ವಿಧಗಳು
3-5. ದೇವರ ವಾಕ್ಯದಲ್ಲಿ “ದ್ವೇಷ” ಪದ ಯಾವ ಮೂರು ವಿಧಗಳಲ್ಲಿ ಉಪಯೋಗಿಸಲ್ಪಟ್ಟಿದೆ?
3 ದ್ವೇಷಿಸುವದು ಅಂದರೆ ಅರ್ಥವೇನು? ದೇವರ ವಾಕ್ಯದಲ್ಲಿ, “ದ್ವೇಷ” ಎಂಬುದನ್ನು ಮೂರು ವಿಶಿಷ್ಟ ರೀತಿಗಳಲ್ಲಿ ಬಳಸಲಾಗಿದೆ. ಹಗೆಸಾಧನೆಯಿಂದ ಪ್ರೇರಿಸಲ್ಪಟ್ಟ ಮತ್ತು ಅದರ ಗುರಿಗೆ ಕೇಡನ್ನುಂಟುಮಾಡಲು ಹುಡುಕುವ ದ್ವೇಷವು ಅಲ್ಲಿದೆ. ಈ ರೀತಿಯ ದ್ವೇಷವನ್ನು ಕ್ರೈಸ್ತರು ಹೋಗಲಾಡಿಸತಕ್ಕದ್ದು. ಅವನ ಧರ್ಮಿ ಸಹೋದರನಾದ ಹೇಬೆಲನನ್ನು ಕೊಲ್ಲುವಂತೆ ಕಾಯಿನನನ್ನು ಪ್ರಚೋದಿಸಿದ್ದು ಈ ರೀತಿಯದ್ದೆ ಆಗಿರುತ್ತದೆ. (1 ಯೋಹಾನ 3:12) ಯೇಸು ಕ್ರಿಸ್ತನೆಡೆಗೆ ಧಾರ್ಮಿಕ ಮುಂದಾಳುಗಳಿಗೆ ಇದ್ದ ದ್ವೇಷವು ಸಹ ಈ ರೀತಿಯದ್ದಾಗಿತ್ತು.—ಮತ್ತಾಯ 26:3, 4.
4 ಇನ್ನೂ ಹೆಚ್ಚಾಗಿ, ಶಾಸ್ತ್ರವಚನಗಳಲ್ಲಿ “ದ್ವೇಷ” ಎಂಬ ಪದವನ್ನು ಕಡಿಮೆ ಪ್ರೀತಿಸುವದು ಎಂಬರ್ಥದಲ್ಲಿ ಉಪಯೋಗಿಸಲಾಗಿದೆ. ಉದಾಹರಣೆಗೆ, ಯೇಸುವಂದದ್ದು: “ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ತಾಯಿ ಹೆಂಡತಿ ಮಕ್ಕಳು ಅಣತ್ಣಮ್ಮಂದಿರು ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.” (ಲೂಕ 14:26) ಅವನನ್ನು ಪ್ರೀತಿಸುವದಕ್ಕಿಂತ ಕಡಿಮೆ ಪ್ರೀತಿಸುವದು ಎಂದು ಯೇಸುವು ಸರಳವಾಗಿ ಅರ್ಥೈಸಿದ್ದನು ಎಂಬುದು ಸ್ಪಷ್ಟ. ಯಾಕೋಬನು ‘ಲೇಯಳನ್ನು ದ್ವೇಷಿಸಿದನು,’ ಆದರೆ ವಾಸ್ತವದಲ್ಲಿ ಅವನು ರಾಹೇಲಳನ್ನು ಪ್ರೀತಿಸಿದ್ದಕ್ಕಿಂತ ಅವಳನ್ನು ಕಡಿಮೆ ಪ್ರೀತಿಸಿದ್ದನು.—ಆದಿಕಾಂಡ 29:30, 31.
5 ಅನಂತರ ನಾವು ಇಲ್ಲಿ ವಿಶೇಷವಾಗಿ ಗಮನಿಸುವ “ದ್ವೇಷ” ಎಂಬ ಶಬ್ದದ ಅರ್ಥವೊಂದಿರುತ್ತದೆ. ಅದಕ್ಕೆ ಒಬ್ಬನೆಡೆಗೆ ಯಾ ಒಂದು ವಿಷಯದೆಡೆಗೆ ಅಸಹ್ಯತೆಯ ಎಂಥಾ ಕಡು ಭಾವನೆ ಯಾ ಕಡು ಹೇವರಿಕೆಯೆಂದರೆ ಅಂಥಾ ವ್ಯಕ್ತಿಯೊಡನೆ ಯಾ ವಿಷಯದೊಂದಿಗೆ ಯಾವ ಸಂಬಂಧವನ್ನೂ ನಾವು ವರ್ಜಿಸುತ್ತೇವೆ. ಕೀರ್ತನೆ 139 ರಲ್ಲಿ ಇದನ್ನು “ಸಂಪೂರ್ಣವಾಗಿ ಹಗೆಮಾಡುತ್ತೇನೆ” ಎಂದು ಹೇಳಲಾಗಿದೆ. ಅಲ್ಲಿ ದಾವೀದನು ಅಂದದ್ದು: “ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಶಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವದಿಲ್ಲವೋ? ನಾನು ಅವರನ್ನು ಸಂಪೂರ್ಣವಾಗಿ ಹಗೆಮಾಡುತ್ತೇನೆ; ಅವರು ನನಗೂ ವೈರಿಗಳೇ ಆಗಿದ್ದಾರೆ.”—ಕೀರ್ತನೆ 139:21, 22.
ಅಧರ್ಮವನ್ನು ನಾವು ದ್ವೇಷಿಸಬೇಕಾದ ಕಾರಣ
6, 7. (ಎ) ಪ್ರಾಮುಖ್ಯವಾಗಿ ನಾವು ಅಧರ್ಮವನ್ನು ಯಾಕಾಗಿ ದ್ವೇಷಿಸತಕ್ಕದ್ದು? (ಬಿ) ಅಧರ್ಮವನ್ನು ದ್ವೇಷಿಸಲು ಎರಡನೆಯ ಬಲವಾದ ಕಾರಣ ಯಾವುದು?
6 ನಾವು ಅಧರ್ಮವನ್ನು ಯಾಕೆ ದ್ವೇಷಿಸಬೇಕು? ಒಂದು ಕಾರಣವೇನಂದರೆ ನಮಗೆ ಸ್ವ ಗೌರವ ಮತ್ತು ಒಂದು ಒಳ್ಳೆಯ ಮನಸ್ಸಾಕ್ಷಿ ಇರಲಿಕ್ಕಾಗಿಯೇ. ಈ ರೀತಿಯಲ್ಲಿ ಮಾತ್ರವೇ ನಮ್ಮ ನೀತಿಯ, ಪ್ರೀತಿಯ ಸ್ವರ್ಗೀಯ ಪಿತನಾದ ಯೆಹೋವನೊಂದಿಗೆ ನಮಗೆ ಒಂದು ಒಳ್ಳೆಯ ಸಂಬಂಧ ಇರಲು ಸಾಧ್ಯವಿದೆ. ಈ ವಿಷಯದಲ್ಲಿ ದಾವೀದನು ಒಂದು ಉತ್ತಮ ಉದಾಹರಣೆಯನ್ನು ಇಟ್ಟಿರುತ್ತಾನೆ, ಇದನ್ನು ನಾವು ಕೀರ್ತನೆ 26 ನ್ನು ಓದುವದರ ಮೂಲಕ ಕಾಣಬಹುದು. ಉದಾಹರಣೆಗೆ ಅವನಂದದ್ದು: “ನನಗೆ ದುರ್ಜನರ ಕೂಟವು ಅಸಹ್ಯ; ದುಷ್ಟರ ಸಂಗವು ಬೇಕಿಲ್ಲ.” (ಕೀರ್ತನೆ 26:5) ದೇವರಿಗಾಗಿ ಮತ್ತು ನೀತಿಗಾಗಿ ಇರುವ ನಮ್ಮ ಪ್ರೀತಿಯು, ಯೆಹೋವನಿಗೆ ಅವಿಧೇಯರಾಗುವವರ ಮತ್ತು ದ್ವೇಷಿಸುವವರ ನಿಯಮರಾಹಿತ್ಯ ಕ್ರಿಯೆಗಳ ಸಹಿತ ಅವನ ದೃಷ್ಟಿಕೋನದಿಂದ ನಿಯಮರಾಹಿತ್ಯವಾಗಿರುವದೆಲ್ಲದರ ಕಡೆಗೆ ನೀತಿಯ ಧರ್ಮಕ್ರೋಧ—ಹೌದು, ದ್ವೇಷವು—ಇರುವಂತೆ ನಮ್ಮನ್ನು ಪ್ರಚೋದಿಸಬೇಕು. ಇನ್ನೂ ಹೆಚ್ಚಾಗಿ, ಅದು ದೇವರ ನಾಮದ ಮೇಲೆ ತರುವ ಅಪನಿಂದೆಯ ಕಾರಣದಿಂದ ನಾವು ಅಧರ್ಮವನ್ನು ದ್ವೇಷಿಸಬೇಕು.
7 ಯೆಹೋವನ ಜನರು ಅಧರ್ಮವನ್ನು ದ್ವೇಷಿಸಲು ಇನ್ನೊಂದು ಕಾರಣ ಏನಂದರೆ ಅದು ಬಹಳಷ್ಟು ಅಪಾಯಕಾರಿಯೂ, ಹಾನಿಕಾರಕವೂ ಆಗಿರುತ್ತದೆ. ಶರೀರಭಾವದಿಂದ ಬಿತ್ತುವದು ಅಂದರೆ ಅಧರ್ಮವನ್ನು ಬಿತ್ತುವದರಿಂದ ಆಗುವ ಫಲಿತಾಂಶವೇನು? ಪೌಲನು ಎಚ್ಚರಿಸಿದ್ದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.” (ಗಲಾತ್ಯ 6:7, 8) ಆದುದರಿಂದ ಅಧರ್ಮದೊಂದಿಗೆ ಖಂಡಿತವಾಗಿ ನಮಗೆ ಯಾವ ಸಂಬಂಧವೂ ಇರಲೇ ಕೂಡದು. ನಿಜವಾಗಿಯೂ, ನಮ್ಮ ಸ್ವಂತ ಹಿತಾಸಕ್ತಿಗಾಗಿ ಮತ್ತು ಮನಶ್ಶಾಂತಿಗಾಗಿ ಎಲ್ಲಾ ಅಧರ್ಮವನ್ನು ನಾವು ದ್ವೇಷಿಸುವ ಅಗತ್ಯವಿದೆ.
ಅಧರ್ಮವನ್ನು ದ್ವೇಷಿಸುವವರು
8. ಯಾವ ಶಾಸ್ತ್ರವಚನಗಳಲ್ಲಿ ತೋರಿಸಲ್ಪಟ್ಟಂತೆ, ಅಧರ್ಮವನ್ನು ದ್ವೇಷಿಸುವುದರಲ್ಲಿ ಮಹತ್ತಮ ಮಾದರಿಯನ್ನು ಯಾರು ಇಟ್ಟಿದ್ದಾನೆ?
8 ಅಧರ್ಮವನ್ನು ದ್ವೇಷಿಸುವದರಲ್ಲಿ ಬುದ್ಧಿಶಕ್ತಿಯ ಎಲ್ಲಾ ಜೀವಿಗಳಿಗೆ ದೇವರು ಮಹತ್ತಮ ಮಾದರಿಯನ್ನು ಇಡುತ್ತಾನೆ. ಅಧರ್ಮದೆಡೆಗೆ ಅವನು ಯೋಗ್ಯವಾಗಿಯೇ ಧರ್ಮಕ್ರೋಧವುಳ್ಳವನಾಗಿದ್ದಾನೆ, ಮತ್ತು ಅವನ ವಾಕ್ಯವು ಹೇಳುವದು: “ಯೆಹೋವನು ಹಗೆಮಾಡುವ ವಸ್ತುಗಳು ಆರು ಇವೆ. ಹೌದು, ಏಳು ಆತನಿಗೆ ಅಸಹ್ಯಗಳಾಗಿ ತೋರುತ್ತವೆ. ಯಾವವಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷರಕ್ತವನ್ನು ಸುರಿಸುವ ಕೈ, ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತರ್ವೆಪಡುವ ಕಾಲು, ಅಸತ್ಯವಾಡುವ ಸುಳ್ಳುಸಾಕ್ಷಿ, ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು ಈ ಏಳೇ.” ನಾವು ಇದನ್ನೂ ಓದುತ್ತೇವೆ: “ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.” (ಜ್ಞಾನೋಕ್ತಿ 6:16-19; 8:13) ಇನ್ನೂ ಹೆಚ್ಚಾಗಿ, ನಮಗೆ ತಿಳಿಸಲ್ಪಟ್ಟದ್ದು: “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ, ಕೊಳ್ಳೆಯನ್ನೂ ಅನ್ಯಾಯವನ್ನೂ ದ್ವೇಷಿಸುತ್ತೇನೆ.”—ಯೆಶಾಯ 61:8.
9, 10. ಯೇಸುವು ಅಧರ್ಮವನ್ನು ದ್ವೇಷಿಸಿದನೆಂದು ಅವನು ಹೇಗೆ ತೋರಿಸಿದನು?
9 ಅಧರ್ಮವನ್ನು ದ್ವೇಷಿಸುವದರಲ್ಲಿ ತನ್ನ ತಂದೆಯನ್ನು ಯೇಸು ಕ್ರಿಸ್ತನು ಅನುಕರಿಸಿದನು. ಆದುದರಿಂದ ನಾವು ಓದುವದು: “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.” (ಇಬ್ರಿಯ 1:9) ಈ ರೀತಿಯ ದ್ವೇಷದ ಕುರಿತು ಯೇಸುವು ನಮಗಾಗಿ ಒಂದು ಮಾದರಿಯನ್ನು ಇಟ್ಟಿದ್ದಾನೆ. ಅದನ್ನು ಬೇಕುಬೇಕೆಂದೇ ಆಚರಿಸುತ್ತಿರುವವರನ್ನು—ಸುಳ್ಳು ಧಾರ್ಮಿಕ ಮುಖಂಡರುಗಳನ್ನು ಹೊರಗೆಡಹುವದರ ಮೂಲಕ ಅವನು ಅಧರ್ಮದ ಕಡೆಗಿನ ಅವನ ದ್ವೇಷವನ್ನು ಪ್ರದರ್ಶಿಸಿದನು. ಪುನಃ ಪುನಃ, ಕಪಟಿಗಳೆಂದು ಅವರನ್ನು ಅವನು ಖಂಡಿಸಿದನು. (ಮತ್ತಾಯ, ಅಧ್ಯಾಯ 23) ಇನ್ನೊಂದು ಸಂದರ್ಭದಲ್ಲಿ ಯೇಸುವು ಅವರಿಗೆ ಹೇಳಿದ್ದು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ.” (ಯೋಹಾನ 8:44) ಎರಡು ಸಂದರ್ಭಗಳಲ್ಲಿ ದುರಾಶೆಯ ಧಾರ್ಮಿಕ ಕಪಟಿಗಳಿಂದ ದೇವಾಲಯವನ್ನು ಶುದ್ಧಗೊಳಿಸಿದರ್ದ ಮೂಲಕ, ಯೇಸುವು ದೈಹಿಕ ಶಕ್ತಿಯನ್ನು ಬಳಸಿಯೂ ಅಧರ್ಮದ ಕಡೆಗಿನ ತನ್ನ ದ್ವೇಷವನ್ನು ತೋರಿಸಿದನು.—ಮತ್ತಾಯ 21:12, 13; ಯೋಹಾನ 2:13-17.
10 ಅಧರ್ಮ ಮತ್ತು ಪಾಪದ ಕಡೆಗಿನ ಅವನ ದ್ವೇಷವನ್ನು, ಅವುಗಳಿಂದ ಪೂರ್ಣವಾಗಿ ಸ್ವತಂತ್ರವಾಗಿದ್ದ ಮೂಲಕವೂ ಯೇಸುವು ತೋರಿಸಿದನು. ಆದಕಾರಣ, ಅವನು ತನ್ನ ವಿರೋಧಿಗಳಿಗೆ ಹೀಗೆ ಹೇಳಶಕ್ತನಾದನು: “ನನ್ನಲ್ಲಿ ಪಾಪವನ್ನು ತೋರಿಸಿಕೊಡುವವರು ನಿಮ್ಮಲ್ಲಿ ಯಾರಿದ್ದಾರೆ?” (ಯೋಹಾನ 8:46) ಯೇಸುವು “ಪರಿಶುದ್ಧನೂ ನಿರ್ದೋಷಿಯೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದವನೂ” ಆಗಿದ್ದನು. (ಇಬ್ರಿಯ 7:26) ಇದನ್ನು ದೃಢೀಕರಿಸುತ್ತಾ, ಪೇತ್ರನು ಬರೆದದ್ದು ಏನಂದರೆ ಯೇಸುವು “ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.”—1 ಪೇತ್ರ 2:22.
11. ಅಧರ್ಮವನ್ನು ದ್ವೇಷಿಸಿದ ಯಾವ ಅಪರಿಪೂರ್ಣ ಮಾನವರ ಶಾಸ್ತ್ರೀಯ ಉದಾಹರಣೆಗಳು ನಮಗೆ ಇವೆ?
11 ಆದಾಗ್ಯೂ, ಯೇಸುವು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದನು. ಅಧರ್ಮವನ್ನು ನಿಜವಾಗಿ ದ್ವೇಷಿಸಿದ ಅಪರಿಪೂರ್ಣ ಜನರ ಶಾಸ್ತ್ರೀಯ ಉದಾಹರಣೆಗಳು ನಮಗಿವೆಯೋ? ಖಂಡಿತವಾಗಿಯೂ ನಮಗಿವೆ! ಉದಾಹರಣೆಗೆ, ಯೆಹೋವನ ಅಪ್ಪಣೆಯ ಪ್ರಕಾರ ಸುಮಾರು 3,000 ವಿಗ್ರಹಾರಾಧಕರನ್ನು ಹತಿಸಿದರ್ದ ಮೂಲಕ ವಿಗ್ರಹಾರಾಧನೆಯ ಕಡೆಗಿನ ಮಹಾ ದ್ವೇಷವನ್ನು ಮೋಶೆ ಮತ್ತು ಅವನ ಜತೆ ಲೇವಿಯರು ತೋರಿಸಿದರು. (ವಿಮೋಚನಕಾಂಡ 32:27, 28) ಈಟಿಯಿಂದ ಇಬ್ಬರು ಜಾರರನ್ನು ಫಿನೇಹಾಸನು ಕೊಂದಾಗ, ಅಧರ್ಮದ ಮಹಾ ದ್ವೇಷವನ್ನು ಅವನು ತೋರಿಸಿದನು.—ಅರಣ್ಯಕಾಂಡ 25:7, 8.
ಅಧರ್ಮದ ಕಡೆಗೆ ದ್ವೇಷವನ್ನು ವ್ಯಕ್ತಪಡಿಸುವದು
12. (ಎ) ಅಧರ್ಮದ ದ್ವೇಷವನ್ನು ನಾವು ಹೇಗೆ ತೋರಿಸಸಾಧ್ಯವಿದೆ? (ಬಿ) ಅಧರ್ಮದ ಯೋಚನೆಗಳನ್ನು ತಪ್ಪಿಸುವ ಕೆಲವು ವ್ಯಾವಹಾರ್ಯ ಮಾರ್ಗಗಳು ಯಾವುವು?
12 ನಮ್ಮ ದಿನಗಳಿಗೆ ಬರುವಾಗ, ಅಧರ್ಮದ ಕಡೆಗಿನ ನಮ್ಮ ದ್ವೇಷವನ್ನು ನಾವು ಹೇಗೆ ತೋರಿಸಸಾಧ್ಯವಿದೆ? ನಮ್ಮ ಯೋಚನೆಗಳನ್ನು, ಮಾತುಗಳನ್ನು, ಮತ್ತು ವರ್ತನೆಗಳನ್ನು ನಿಯಂತ್ರಿಸುವದರ ಮೂಲಕ. ನಾವು ನಮ್ಮ ಮನಸ್ಸಿನಲ್ಲಿ ಕಾರ್ಯಮಗ್ನರಾಗಿಲ್ಲದ ಸಮಯದಲ್ಲಿ ಭಕ್ತಿವರ್ಧಕ ವಿಷಯಗಳನ್ನು ಯೋಚಿಸುವ ಹವ್ಯಾಸವನ್ನು ಬೆಳೆಸುವ ಆವಶ್ಯಕತೆಯಿದೆ. ರಾತ್ರಿ ಸಮಯದಲ್ಲಿ ನಾವು ಸಚೇತಕರಾಗಿರುವದಾದರೆ, ವ್ಯಥೆಗಳ ಮೇಲೆ ನೆಲಸುವ ಯಾ ಲೈಂಗಿಕ ಭ್ರಾಂತಿಗಳಲ್ಲಿ ತೊಡಗುವಂಥ ಕೆಲವು ನಕಾರಾತ್ಮಕ ಯೋಚನೆಯನ್ನು ಮಾಡುವ ಒಲವು ಅಲ್ಲಿರಬಹುದು. ಎಂದಿಗೂ ಅಂತಹ ವಿಷಯಗಳಿಗೆ ಎಡೆಕೊಡಬೇಡಿರಿ, ಬದಲು ಪ್ರಯೋಜನದಾಯಕ ಯೋಚನೆಯಲ್ಲಿ ತೊಡಗುವ ಅಭ್ಯಾಸದೊಳಗೆ ಸೇರಿರಿ. ಉದಾಹರಣೆಗೆ, ಶಾಸ್ತ್ರವಚನಗಳನ್ನು, ಒಂಭತ್ತು ದಿವ್ಯಾನಂದಗಳನ್ನು, ಮತ್ತು ಆತ್ಮದ ಒಂಬತ್ತು ಫಲಗಳನ್ನು ನೆನಪಿನಲ್ಲಿಡುವಂತೆ ಪ್ರಯತ್ನಿಸಿರಿ. (ಮತ್ತಾಯ 5:3-12; ಗಲಾತ್ಯ 5:22, 23) ನೀವು ಹನ್ನೆರಡು ಅಪೊಸ್ತಲರುಗಳನ್ನು ಹೆಸರಿಸಬಲ್ಲಿರೊ? ದಶಾಜ್ಞೆಗಳು ನಿಮಗೆ ಗೊತ್ತಿವೆಯೊ? ಪ್ರಕಟನೆಯಲ್ಲಿ ಸಂಬೋಧಿಸಲ್ಪಟ್ಟ ಏಳು ಸಭೆಗಳು ಯಾವುವು? ರಾಜ್ಯ ಸಂಗೀತಗಳನ್ನು ಸ್ಮರಿಸುವದರ ಮೂಲಕ ಕೂಡ ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ, ಸದ್ಗುಣವೂ, ಮತ್ತು ಕೀರ್ತಿಗೆ ಯೋಗ್ಯವೂ ಆಗಿರುವ ವಿಷಯಗಳ ಮೇಲೆ ನಮ್ಮ ಮನಸ್ಸನ್ನಿಡುವಂತೆ ಸಹಾಯವಾಗುತ್ತದೆ.—ಫಿಲಿಪ್ಪಿ 4:8.
13. ಅಧರ್ಮವನ್ನು ದ್ವೇಷಿಸುವುದು ಯಾವ ವಿಧದ ಮಾತುಕತೆಯನ್ನು ದ್ವೇಷಿಸುವಂತೆ ನಮಗೆ ಕಾರಣವಾಗುತ್ತದೆ?
13 ಇನ್ನೂ ಹೆಚ್ಚಾಗಿ ಎಲ್ಲಾ ರೀತಿಯ ಅಶುದ್ಧ ಮಾತುಕತೆಯನ್ನು ಹೋಗಲಾಡಿಸುವ ಮೂಲಕ ಅಧರ್ಮದ ದ್ವೇಷವನ್ನು ನಾವು ತೋರಿಸುತ್ತೇವೆ. ಕೊಳಕು ತಮಾಷೆಗಳನ್ನು ಹೇಳುವದರಲ್ಲಿ ಮತ್ತು ಕೇಳುವದರಲ್ಲಿ ಲೋಕದ ಅನೇಕ ಜನರು ಆನಂದವನ್ನು ಪಡೆಯುತ್ತಾರೆ, ಆದರೆ ಅವುಗಳನ್ನು ಕೇಳುವ ಪ್ರವೃತ್ತಿಯೂ ಕೂಡ ಕ್ರೈಸ್ತರಲ್ಲಿರಕೂಡದು. ಬದಲಾಗಿ, ಅಂಥ ಕೀಳ್ಮಟಗ್ಟಳಿಗೆ ಕೇಂದ್ರಿತವಾಗಿ ಸೆಳೆಯುತ್ತಿರುವ ಯಾವುದೇ ಸಂಭಾಷಣೆಯಿಂದ ನಾವು ದೂರಹೋಗತಕ್ಕದ್ದು ಮತ್ತು ಅದರಲ್ಲಿ ಭಾಗವಹಿಸುವದನ್ನು ತೊರೆಯಬೇಕು. ಅಲ್ಲಿಂದ ದೂರ ಹೋಗಲು ಅಸಾಧ್ಯವಾಗುವುದಾದರೆ, ಅಂಥ ಮಾತುಕತೆಯನ್ನು ನಾವು ದ್ವೇಷಿಸುತ್ತೇವೆಂದು ಕಡಿಮೆಪಕ್ಷ ನಮ್ಮ ಮುಖಭಾವದ ವ್ಯಕ್ತಪಡಿಸುವಿಕೆಯಿಂದ ನಾವು ತೋರಿಸಸಾಧ್ಯವಿದೆ. ಈ ಉತ್ತಮ ಹಿತೋಪದೇಶವನ್ನು ನಾವು ಆಲಿಸುವ ಜರೂರಿಯಿದೆ: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.” (ಎಫೆಸ 4:29) ಅಶುದ್ಧವಾದುದನ್ನು ಮಾತಾಡುವದರ ಮತ್ತು ಅದನ್ನು ಆಲಿಸುವದರ ಮೂಲಕ ಸ್ವತಃ ನಮ್ಮನ್ನು ನಾವು ಕಳಂಕಿತರನ್ನಾಗಿ ಮಾಡಕೂಡದು.
14. ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ಉದ್ಯೋಗದಲ್ಲಿ ಅಧರ್ಮದ ದ್ವೇಷವು ಯಾವ ಸುರಕ್ಷೆಯನ್ನು ಒದಗಿಸುತ್ತದೆ?
14 ಎಲ್ಲಾ ರೀತಿಯ ಕೆಟ್ಟ ಹವ್ಯಾಸಗಳ ವಿರುದ್ಧವಾಗಿಯೂ ಕೂಡ ಅಧರ್ಮದ ನಮ್ಮ ದ್ವೇಷವನ್ನು ನಿರ್ದೇಶಿಸಬೇಕು. ಅಧರ್ಮವನ್ನು ದ್ವೇಷಿಸುವದು ಈ ವಿಚಾರದಲ್ಲಿ ಒಪ್ಪಂದಮಾಡಿಕೊಳ್ಳುವ ಉರುಳನ್ನು ಹೋಗಲಾಡಿಸುವಂತೆ ನಮಗೆ ನೆರವಾಗುವದು. ಸಾಚಾ ಕ್ರೈಸ್ತರು ಪಾಪವನ್ನು ಅಭ್ಯಾಸಿಸುವದಿಲ್ಲ. (1 ಯೋಹಾನ 5:18 ಹೋಲಿಸಿರಿ.) ಉದಾಹರಣೆಗೆ, ಎಲ್ಲಾ ರೀತಿಯ ಅಪ್ರಾಮಾಣಿಕತೆಯ ವ್ಯಾಪಾರ ವ್ಯವಹಾರವನ್ನು ನಾವು ದ್ವೇಷಿಸತಕ್ಕದ್ದು. ಇಂದು ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಅವರ ಧಣಿಗಳಿಂದ ಅಪ್ರಾಮಾಣಿಕತೆಯ ವಿಷಯಗಳನ್ನು ಮಾಡುವಂತಹ ಒತ್ತಡಕ್ಕೆ ಹಾಕಲ್ಪಟ್ಟಿದ್ದಾರೆ, ಆದರೆ ಅವರದನ್ನು ಮಾಡಲು ನಿರಾಕರಿಸಿರುತ್ತಾರೆ. ಅವರ ಉದ್ಯೋಗವನ್ನಾದರೂ ಕಳೆದುಕೊಳ್ಳಲು ಕ್ರೈಸ್ತರು ಸಿದ್ಧರಾಗಿರುತ್ತಾರೆಯೇ ಹೊರತು ಅವರ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಉಲ್ಲಂಘಿಸಲು ಅವರು ತಯಾರಿರುವದಿಲ್ಲ. ಅಲ್ಲದೆ, ವಾಹನಸಂಚಾರದ ನಿಯಮಗಳನ್ನು ಉಲ್ಲಂಘಿಸದೆ ಇರುವದರಿಂದ ಮತ್ತು ಕರವನ್ನು ಸಲ್ಲಿಸುವಾಗ ಇಲ್ಲವೆ ಸೀಮಾಸುಂಕ (ಕಸ್ಟಮ್ಸ್) ತೆರಲು ಇರುವಾಗ ಮೋಸಮಾಡದೆ ಇರುವದರ ಮೂಲಕ ಅಧರ್ಮದ ನಮ್ಮ ದ್ವೇಷವನ್ನು ತೋರಿಸಲು ಕೂಡ ನಾವು ಇಚ್ಛೆಯುಳ್ಳವರಾಗಿರತಕ್ಕದ್ದು.—ಅ. ಕೃತ್ಯಗಳು 23:1; ಇಬ್ರಿಯ 13:18.
ಲೈಂಗಿಕ ಅಶುದ್ಧತೆಯನ್ನು ದ್ವೇಷಿಸುವದು
15. ಸಂಭೋಗಿಸುವ ಬಲವಾದ ಸಹಜಪ್ರವೃತ್ತಿಗಳಿಂದ ಮನುಷ್ಯರನ್ನು ಉಂಟುಮಾಡಿದ್ದು ಯಾವ ಉತ್ತಮ ಉದ್ದೇಶಗಳನ್ನು ಪೂರೈಸಿತು?
15 ಕ್ರೈಸ್ತರೋಪಾದಿ, ಲೈಂಗಿಕ ವಿಷಯಗಳು ಒಳಗೂಡಿರುವ ಎಲ್ಲಾ ಅಶುದ್ಧತೆಯನ್ನು ನಿರ್ದಿಷ್ಟವಾಗಿ ನಾವು ದ್ವೇಷಿಸತಕ್ಕದ್ದು. ಸಂಭೋಗಿಸುವ ಬಲವಾದ ಸಹಜಪ್ರವೃತ್ತಿಯಿಂದ ಮಾನವಕುಲವನ್ನು ಸೃಷ್ಟಿಸಿದರ್ದ ಮೂಲಕ, ದೇವರು ಎರಡು ಉತ್ತಮ ಉದ್ದೇಶಗಳನ್ನು ನಿರ್ವಹಿಸಿದನು. ಮಾನವ ಕುಲವು ನಶಿಸಿಹೋಗದಂತೆ ಅವನು ಖಂಡಿತಗೊಳಿಸಿದನು, ಮತ್ತು ಸಂತೋಷಕ್ಕಾಗಿ ಅತ್ಯಂತ ಪ್ರೀತಿಯ ಒಂದು ಒದಗಿಸುವಿಕೆಯನ್ನೂ ಆತನು ಮಾಡಿದನು. ಬಡವರು, ಅನರಕ್ಷಸ್ಥರು, ಯಾ ಬೇರೆ ಯಾವುದಾದರೂ ಒಂದು ರೀತಿಯಲ್ಲಿ ಅನಾನುಕೂಲ ಪರಿಸ್ಥಿತಿಯಲ್ಲಿರುವವರು, ವೈವಾಹಿಕ ಸಂಬಂಧದಲ್ಲಿ ಮಹಾ ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆ. ಆದಾಗ್ಯೂ, ಈ ಸಂಬಂಧದೊಳಗೆ ಆನಂದಿಸಬಹುದಾದ ಕೆಲವೊಂದು ಪರಿಮಿತಿಗಳನ್ನು ಯೆಹೋವನು ಇಟ್ಟಿರುತ್ತಾನೆ. ದೈವಿಕವಾಗಿ ಇಟ್ಟಿರುವ ಈ ಪರಿಮಿತಿಗಳನ್ನು ಗೌರವಿಸಬೇಕಾಗಿದೆ.—ಆದಿಕಾಂಡ 2:24; ಇಬ್ರಿಯ 13:4.
16. ಲೈಂಗಿಕವಾಗಿ ಅಶುದ್ಧವಾದ ಮನೋರಂಜನೆ ಮತ್ತು ಹವ್ಯಾಸಗಳ ಕಡೆಗೆ ನಮ್ಮ ಮನೋಭಾವ ಏನಾಗಿರತಕ್ಕದ್ದು?
16 ನಾವು ಅಧರ್ಮವನ್ನು ದ್ವೇಷಿಸುವುದಾದರೆ, ಎಲ್ಲಾ ಲೈಂಗಿಕ ಅಶುದ್ಧ ಆಚರಣೆಗಳನ್ನು ಮತ್ತು ಅನೈತಿಕ ಮನೋರಂಜನೆಗಳನ್ನು ಜಾಗರೂಕತೆಯಿಂದ ತಪ್ಪಿಸಿಕೊಳ್ಳುವೆವು. ಆದಕಾರಣ ನೈತಿಕವಾಗಿ ವಿವಾದಾತ್ಮಕವಾದ ಎಲ್ಲಾ ಪುಸ್ತಕಗಳನ್ನು, ಪತ್ರಿಕೆಗಳನ್ನು, ಮತ್ತು ವೃತ್ತಪತ್ರಗಳನ್ನು ವರ್ಜಿಸುವೆವು. ತದ್ರೀತಿಯಲ್ಲಿ, ನಾವು ಅಧರ್ಮವನ್ನು ದ್ವೇಷಿಸುವುದಾದರೆ, ಟೆಲಿವಿಷನ್ ಮೇಲಾಗಲಿ, ಚಲನ ಚಿತ್ರಗಳಲ್ಲಾಗಲಿ, ಯಾ ರಂಗಮಂಚದ ಮೇಲಾಗಲಿ ಯಾವುದೇ ಅಶುದ್ಧ ದೃಶ್ಯಪ್ರದರ್ಶನಗಳನ್ನು ನಾವು ನೋಡೆವು. ಒಂದು ಕಾರ್ಯಕ್ರಮವು ಅನೈತಿಕವೆಂದು ನಾವು ಕಂಡುಕೊಳ್ಳುವುದಾದರೆ, ತಕ್ಷಣವೇ ಟೆಲಿವಿಷನ್ನನ್ನು ಮುಚ್ಚಲು ನಾವು ಪ್ರೇರಿಸಲ್ಪಡಬೇಕು ಯಾ ಚಲನ ಚಿತ್ರ ಮಂದಿರವನ್ನು ಬಿಟ್ಟುಹೋಗಲು ನಮ್ಮಲ್ಲಿ ಧೈರ್ಯವಿರತಕ್ಕದ್ದು. ತದ್ರೀತಿಯಲ್ಲಿ, ಅದರ ಭಾವಗೀತೆ ಮತ್ತು ತಾಳದ ಸಹಿತ ಕಾಮೋದ್ರೇಕಗೊಳಿಸುವ ಎಲ್ಲಾ ಸಂಗೀತಗಳ ವಿರುದ್ಧ ಅಧರ್ಮದ ದ್ವೇಷವು ನಮ್ಮನ್ನು ಕಾಯುವುದು. ಅನೈತಿಕ ವಿಷಯಗಳ ಜ್ಞಾನವನ್ನು ನಾವು ಅನ್ವೇಷಿಸೆವು, ಬದಲು ‘ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರುವೆವು.’—1 ಕೊರಿಂಥ 14:20.
17. ನೈತಿಕವಾಗಿ ಶುದ್ಧರಾಗಿ ನಿಲ್ಲಲು ನಮಗೆ ಸಹಾಯವಾಗುವಂತೆ ಕೊಲೊಸ್ಸೆ 3:5 ಯಾವ ಹಿತೋಪದೇಶವನ್ನು ನೀಡುತ್ತದೆ?
17 ಅತಿ ತಕ್ಕದ್ದಾಗಿಯೇ, ನಮಗೆ ಬುದ್ಧಿವಾದವನ್ನೀಯಲಾಗಿರುವುದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ . . . ವಿಸರ್ಜಿಸಿಬಿಡಿರಿ.” (ಕೊಲೊಸ್ಸೆ 3:5) ನೈತಿಕವಾಗಿ ಶುದ್ಧರಾಗಿ ನಿಲ್ಲಲು ನಾವು ದೃಢಮನಸ್ಕರಾಗಿರುವುದಾದರೆ, ನಮ್ಮ ವತಿಯಿಂದ ಶಕ್ತಿಯುತ ಕ್ರಮಗಳು ಆವಶ್ಯಕವಾಗಿವೆ ಎಂಬ ವಿಷಯದಲ್ಲಿ ಪ್ರಶ್ನೆಯಿರುವದಿಲ್ಲ. ಇಲ್ಲಿ ಕೊಲೊಸ್ಸೆ 3:5 ರಲ್ಲಿ “ಸಾಯಿಸಿರಿ” ಎಂಬ ಶಬ್ದಕ್ಕೆ ಉಪಯೋಗಿಸಲ್ಪಟ್ಟ ಗ್ರೀಕ್ ಕ್ರಿಯಾಪದದ ಕುರಿತು, ದಿ ಎಕ್ಪ್ಷೊಸಿಟರ್ಸ್ ಬೈಬಲ್ ಕಾಮೆಂಟರಿ ಹೇಳುವದು: “ಕೆಟ್ಟ ವರ್ತನೆಗಳನ್ನು ಮತ್ತು ಮನೋಭಾವನೆಗಳನ್ನು ನಾವು ಕೇವಲ ದಮನಿಸುವುದಲ್ಲ ಯಾ ಹತೋಟಿಯಲ್ಲಿಡುವದಲ್ಲ ಎಂದು ಅದು ಸೂಚಿಸುತ್ತದೆ. ನಾವು ಅದನ್ನು ಅಳಿಸಿಹಾಕುವುದು, ಪೂರ್ಣವಾಗಿ ಹಳೆಯ ಜೀವನ ಪದ್ಧತಿಯನ್ನು ಧ್ವಂಸಗೊಳಿಸುವುದಾಗಿದೆ. ‘ಸಂಪೂರ್ಣವಾಗಿ ಕಡಿದುಹಾಕುವದು’ ಅದರ ರಭಸವನ್ನು ವ್ಯಕ್ತಪಡಿಸಬಹುದು. . . . ಕ್ರಿಯಾಪದದ ಅರ್ಥ ಮತ್ತು ಧಾತು ರೂಪದ ಒತ್ತರ ಎರಡೂ ವೈಯಕ್ತಿಕ ನಿಷ್ಕರ್ಷೆಯ ಒಂದು ಶ್ರಮಭರಿತ, ವೇದನಾಮಯ ಕ್ರಿಯೆಯನ್ನು ಸೂಚಿಸುತ್ತವೆ.” ಆದಕಾರಣ ಲಂಪಟಸಾಹಿತ್ಯವು ಒಂದು ಅಪಾಯಕಾರಿ, ಸೋಂಕು ತಟ್ಟಿಸುವ, ಮರಣದೊಂದಿಗೆ ವ್ಯವಹರಿಸುವ ರೋಗವಾಗಿದೆಯೋ ಎಂಬಂತೆ ನಾವು ಹೋಗಲಾಡಿಸತಕ್ಕದ್ದು, ಯಾಕಂದರೆ ನೈತಿಕವಾಗಿ ಮತ್ತು ಆತ್ಮಿಕವಾಗಿಯೂ ಅದು ಹಾಗೆಯೇ ಇದೆ. ಅಡಿಯ್ಡಾಗುವಂತೆ ನಮಗೆ ಕಾರಣವಾಗುವ ಒಂದು ಕೈ, ಕಾಲು, ಯಾ ಒಂದು ಕಣ್ಣನ್ನೂ ಕೂಡ ನಾವು ತೆಗೆದುಹಾಕುವಂತೆ ಹೇಳಿದಾಗ, ಕ್ರಿಸ್ತನು ತದ್ರೀತಿಯ ಯೋಚನೆಯನ್ನು ವ್ಯಕ್ತಪಡಿಸಿದನು.—ಮಾರ್ಕ 9:43-48.
ಸುಳ್ಳು ಧರ್ಮ ಮತ್ತು ಧರ್ಮಭ್ರಷ್ಟತೆಯನ್ನು ದ್ವೇಷಿಸುವದು
18. ಧಾರ್ಮಿಕ ಅಧರ್ಮದೆಡೆಗಿನ ನಮ್ಮ ದ್ವೇಷವನ್ನು ನಾವು ಹೇಗೆ ವ್ಯಕ್ತಪಡಿಸಬಲ್ಲೆವು?
18 ಅಂದು ಕೂಡ ಕಪಟಿಗಳಾದ ಧಾರ್ಮಿಕಸ್ಥರನ್ನು ಬಯಲುಗೊಳಿಸಿದ್ದರ ಮೂಲಕ ಅಧರ್ಮದ ತನ್ನ ದ್ವೇಷವನ್ನು ಯೇಸುವು ತೋರಿಸಿದಂತೆ, ಇಂದೂ ಕಪಟತನದ ಎಲ್ಲಾ ಧಾರ್ಮಿಕ ಅಧರ್ಮಕ್ಕಾಗಿ ತಮ್ಮ ದ್ವೇಷವನ್ನು ಯೆಹೋವನ ಸಾಕ್ಷಿಗಳು ತೋರಿಸುತ್ತಿದ್ದಾರೆ. ಹೇಗೆ? ಮಹಾ ಬಾಬೆಲ್ ನಿಜವಾಗಿ ಏನಾಗಿದ್ದಾಳೊ ಆ ಒಂದು ಧಾರ್ಮಿಕ ಜಾರಸ್ತ್ರೀಯೆಂದು ಅವಳನ್ನು ಬಯಲುಗೊಳಿಸುವ ಬೈಬಲ್ ಸಾಹಿತ್ಯವನ್ನು ವಿತರಿಸುವುದರ ಮೂಲಕವೇ. ಅಧರ್ಮದ ಧಾರ್ಮಿಕ ಕಪಟತನವನ್ನು ನಾವು ನಿಜವಾಗಿಯೂ ದ್ವೇಷಿಸುವುದಾದರೆ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲನ್ನು ಬಯಲುಗೊಳಿಸುವುದರಲ್ಲಿ ನಾವು ಮುಚ್ಚುಮರೆಯಿಲ್ಲದವರಾಗಿರುವೆವು. ಯಾರನ್ನು ಅವಳು ಕುರುಡುಗೊಳಿಸಿ, ಆತ್ಮಿಕ ದಾಸತ್ವದಲ್ಲಿ ಇಟ್ಟಿದ್ದಾಳೊ, ಆ ಪ್ರಾಮಾಣಿಕ ಹೃದಯದ ಜನರ ಪರವಾಗಿ ನಾವು ಹೀಗೆ ಮಾಡುವೆವು. ಮಹಾ ಬಾಬೆಲಿನ ಅಧರ್ಮವನ್ನು ನಾವು ಎಷ್ಟೊಂದು ವ್ಯಾಪಕವಾಗಿ ದ್ವೇಷಿಸುತ್ತೇವೊ, ಅಷ್ಟರ ಮಟ್ಟಿಗೆ ರಾಜ್ಯ ಶುಶ್ರೂಷೆಯ ಎಲ್ಲಾ ವಿಭಾಗಗಳಲ್ಲಿ ಪಾಲಿಗರಾಗುವುದರಲ್ಲಿ ನಾವು ಉತ್ಸುಕರಾಗಿರುವೆವು.—ಮತ್ತಾಯ 15:1-3, 7-9; ತೀತ 2:13, 14; ಪ್ರಕಟನೆ 18:1-5.
19. ಧರ್ಮಭ್ರಷ್ಟರನ್ನು ನಾವು ಹೇಗೆ ವೀಕ್ಷಿಸತಕ್ಕದ್ದು, ಮತ್ತು ಯಾಕೆ?
19 ಧರ್ಮಭ್ರಷ್ಟರ ಎಲ್ಲಾ ಚಟುವಟಿಕೆಗಳಿಗೂ ಕೂಡ ಅಧರ್ಮವನ್ನು ದ್ವೇಷಿಸುವ ಹಂಗು ಅನ್ವಯಿಸುತ್ತದೆ. ಧರ್ಮಭ್ರಷ್ಟರ ಕಡೆಗಿನ ನಮ್ಮ ಮನೋಭಾವವು, ದಾವೀದನಂತೆ ಇರತಕ್ಕದ್ದು, ಅವನು ಘೋಷಿಸಿದ್ದು: “ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಶಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವದಿಲ್ಲವೋ? ನಾನು ಅವರನ್ನು ಸಂಪೂರ್ಣವಾಗಿ ಹಗೆಮಾಡುತ್ತೇನೆ; ಅವರು ನನಗೂ ವೈರಿಗಳೇ ಆಗಿದ್ದಾರೆ.” (ಕೀರ್ತನೆ 139:21, 22) ಆಧುನಿಕ ದಿನದ ಧರ್ಮಭ್ರಷ್ಟರು, ಕ್ರೈಸ್ತಪ್ರಪಂಚದ ವೈದಿಕರುಗಳಾದ “ಅಧರ್ಮ ಸ್ವರೂಪ” ನೊಂದಿಗೆ ಸಮಾನೋದ್ದೇಶದಲ್ಲಿ ಸೇರಿರುತ್ತಾರೆ. (2 ಥೆಸಲೊನೀಕ 2:3) ಆದಕಾರಣ ಯೆಹೋವನ ನಿಷ್ಠ ಸಾಕ್ಷಿಗಳೋಪಾದಿ, ನಮಗೆ ಅವರೊಂದಿಗೆ ಸಮಾನವಾದದ್ದು ಸಮಗ್ರವಾಗಿ ಯಾವುದೇ ಒಂದು ಸಂಗತಿಯಿರುವದಿಲ್ಲ. ಅಪರಿಪೂರ್ಣರಾಗಿರುವದರಿಂದ, ನಮ್ಮ ಸಹೋದರರ ಕಡೆಗೆ ಠೀಕಿಸುವವರಾಗಿರುವ ಪ್ರವೃತ್ತಿ ನಮ್ಮ ಹೃದಯದಲ್ಲಿ ಸುಲಭವಾಗಿ ಇರಸಾಧ್ಯವಿದೆ. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದವರು ವೈಯಕ್ತಿಕವಾಗಿ ಅಪರಿಪೂರ್ಣ ಮಾನವರಾಗಿರುತ್ತಾರೆ. (ಮತ್ತಾಯ 24:45-47) ಆದರೆ ಈ ವರ್ಗವು ನಂಬಿಗಸ್ತಿಕೆ, ವಿವೇಕವುಳ್ಳದ್ದಾಗಿದೆ. ಮುಂದಾಳುತನವನ್ನು ವಹಿಸುವ ಸಹೋದರರಿಂದ ಆದ ತಪ್ಪುಗಳನ್ನು ಯಾ ದೋಷಗಳೆಂದು ತೋರುವದನ್ನು ಧರ್ಮಭ್ರಷ್ಟರು ಭಂಡವಾಳವನ್ನಾಗಿ ಉಪಯೋಗಿಸುತ್ತಾರೆ. ವಿಷವೂ ಎಂಬಂತಹ ರೀತಿಯಲ್ಲಿ ಧರ್ಮಭ್ರಷ್ಟರ ಪ್ರಚಾರವನ್ನು ತ್ಯಜಿಸುವದರಲ್ಲಿ ನಮ್ಮ ಭದ್ರತೆಯು ಇದೆ, ವಾಸ್ತವದಲ್ಲಿ ಅದು ವಿಷವೇ ಆಗಿದೆ.—ರೋಮಾಪುರ 16:17, 18.
20, 21. ಅಧರ್ಮವನ್ನು ದ್ವೇಷಿಸುವುದರ ಕಾರಣಗಳನ್ನು ಹೇಗೆ ಸಾರಾಂಶಿಸಬಹುದು?
20 ಲೋಕವು ಅಧರ್ಮದಿಂದ ತುಂಬಿರುವದನ್ನು ನಾವು ನೋಡಿದ್ದೇವೆ, ಅದು ಪಾಪದೊಂದಿಗೆ ಸಮಾನಾರ್ಥಕ ಪದವಾಗಿದೆ. ನಾವು ಕೇವಲ ಧರ್ಮವನ್ನು ಪ್ರೀತಿಸಿದರೆ ಸಾಲದು; ನಾವು ಅಧರ್ಮವನ್ನು ಕೂಡ ದ್ವೇಷಿಸತಕ್ಕದ್ದು. ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಟ್ಟವರಲ್ಲಿ ಕೆಲವರು, ಅವರು ಧರ್ಮವನ್ನು ಪ್ರೀತಿಸಿದ್ದರು ಎಂದು ಎಣಿಸಿದಿರ್ದಬಹುದು, ಆದರೆ ಅವರು ಬೇಕಾಗುವಷ್ಟು ಮಟ್ಟಿಗೆ ಅಧರ್ಮವನ್ನು ದ್ವೇಷಿಸಿರಲಿಲ್ಲ. ಅಧರ್ಮವನ್ನು ನಾವು ಯಾಕೆ ದ್ವೇಷಿಸಬೇಕು ಎಂಬುದಕ್ಕೆ ಕಾರಣವನ್ನೂ ಕೂಡ ನಾವು ನೋಡಿದ್ದೇವೆ. ಹಾಗೆ ಮಾಡದಿದ್ದರೆ, ನಮಗೆ ಒಳ್ಳೆಯ ಮನಸ್ಸಾಕ್ಷಿ ಮತ್ತು ಸ್ವಗೌರವವು ಇರಸಾಧ್ಯವಿಲ್ಲ. ಇನ್ನೂ ಅಧಿಕವಾಗಿ, ಅಧರ್ಮವೆಂದರೆ ಯೆಹೋವ ದೇವರಿಗೆ ನಿಷ್ಠೆಯಿಲ್ಲದವರಾಗಿರುವದೆಂಬ ಅರ್ಥ. ಮತ್ತು ಅಧರ್ಮವು ಅತಿ ಕಹಿ ಫಲಗಳನ್ನು—ದುರವಸ್ಥೆ, ಭ್ರಷ್ಟತೆ, ಮತ್ತು ಮರಣ—ನಾವು ಕೊಯ್ಯುವಂತೆ ಕಾರಣವಾಗುತ್ತದೆ.
21 ನಾವು ಅಧರ್ಮವನ್ನು ದ್ವೇಷಿಸುತ್ತೇವೆಂದು ಹೇಗೆ ತೋರಿಸುತ್ತೇವೆಂಬದನ್ನು ಕೂಡ ನಾವು ಪರಿಗಣಿಸಿದೆವು. ಯಾವುದೇ ರೀತಿಯ ಅಪ್ರಾಮಾಣಿಕತೆ, ಲೈಂಗಿಕ ಅನೈತಿಕತೆ, ಯಾ ಧರ್ಮಭ್ರಷ್ಟತೆಯೊಂದಿಗೆ ನಮಗೆ ಸಂಪೂರ್ಣವಾಗಿ ಯಾವ ಸಂಬಂಧವೂ ಇಲ್ಲದಿರುವ ಮೂಲಕ ನಾವದನ್ನು ಮಾಡುತ್ತೇವೆ. ಯೆಹೋವನ ನಿರ್ದೋಷೀಕರಣದಲ್ಲಿ ಪಾಲಿಗರಾಗಲು ನಾವು ಬಯಸುವುದರಿಂದ ಮತ್ತು ಅವನ ಹೃದಯವನ್ನು ಸಂತೋಷಗೊಳಿಸಲು ಇಚ್ಛಿಸುವುದರಿಂದ, ನಾವು ಧರ್ಮವನ್ನು ಪ್ರೀತಿಸತಕ್ಕದ್ದು ಮತ್ತು ಅವನ ಸೇವೆಯಲ್ಲಿ ಕಾರ್ಯಮಗ್ನರಾಗಿರತಕ್ಕದ್ದು ಮಾತ್ರವಲ್ಲ, ನಮ್ಮ ನಾಯಕನೂ, ದಳಾಧಿಪತಿಯೂ ಆದ ಯೇಸು ಕ್ರಿಸ್ತನು ಮಾಡಿದಂತೆ, ಅಧರ್ಮವನ್ನು ಕೂಡ ದ್ವೇಷಿಸತಕ್ಕದ್ದು.
ನೀವು ಹೇಗೆ ಉತ್ತರಿಸಲಿರುವಿರಿ?
▫ “ದ್ವೇಷ” ಶಬ್ದವನ್ನು ಶಾಸ್ತ್ರವಚನಗಳು ಹೇಗೆ ಬಳಸಿವೆ?
▫ ಅಧರ್ಮವನ್ನು ದ್ವೇಷಿಸಲು ನಮಗಿರುವ ಕೆಲವು ಉತ್ತಮ ಕಾರಣಗಳು ಯಾವುವು?
▫ ಅಧರ್ಮವನ್ನು ದ್ವೇಷಿಸಿದವರ ಯಾವ ಉತ್ತಮ ಉದಾಹರಣೆಗಳು ನಮಗೆ ಇವೆ?
▫ ಅಧರ್ಮದೆಡೆಗಿನ ನಮ್ಮ ದ್ವೇಷವನ್ನು ನಾವು ಹೇಗೆ ತೋರಿಸಸಾಧ್ಯವಿದೆ?
[ಪುಟ 8 ರಲ್ಲಿರುವ ಚಿತ್ರ]
ಯೇಸುವು ದೇವಾಲಯವನ್ನು ಶುದ್ಧಗೊಳಿಸಿದನು ಯಾಕಂದರೆ ಅವನು ಅಧರ್ಮವನ್ನು ದ್ವೇಷಿಸಿದನು
[ಪುಟ 10 ರಲ್ಲಿರುವ ಚಿತ್ರ]
ನಾವು ಅಧರ್ಮವನ್ನು ದ್ವೇಷಿಸಿದರೆ, ಲೈಂಗಿಕ ಅನೈತಿಕ ಮನೋರಂಜನೆಯನ್ನು ತೊರೆಯುವೆವು