ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 11/1 ಪು. 3-4
  • ಜೀವ—ದೇವರಿಂದ ಒಂದು ವರದಾನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವ—ದೇವರಿಂದ ಒಂದು ವರದಾನ
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ತಣ್ಣನೆಯ ಜಗತ್ತಿನೊಳಕ್ಕೆ ಪ್ರವೇಶ!
    ಎಚ್ಚರ!—2004
  • ಮಾನವ ಜೀವ ಯಾವಾಗ ಆರಂಭಗೊಳ್ಳುತ್ತದೆ?
    ಎಚ್ಚರ!—1991
  • ಗರ್ಭಪಾತದ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ಕಾವಲಿನಬುರುಜು—1992
w92 11/1 ಪು. 3-4

ಜೀವ—ದೇವರಿಂದ ಒಂದು ವರದಾನ

ದಿನಕ್ಕೆ ಇಪ್ಪತ್ತನಾಲ್ಕು ತಾಸು ನಮ್ಮ ಹೃದಯವು ಅಮೂಲ್ಯ ರಕ್ತವನ್ನು ನಮ್ಮ ಶರೀರದೊಳಗೆಲ್ಲಾ ಪಂಪುಮಾಡುತ್ತದೆ. ನಾವು ನಿದ್ದೆಹೋಗುತ್ತೇವೆ, ನಮ್ಮ ಶ್ವಾಸಕೋಶಗಳು ಸಂಕುಚಿತ ಮತ್ತು ವಿಕಸಿತಗೊಳ್ಳುತ್ತಾ ಮುಂದರಿಯುತ್ತವೆ. ನಾವೊಂದು ಊಟವನ್ನು ಮಾಡುತ್ತೇವೆ, ಆಹಾರ ಯಾಂತ್ರಿಕವಾಗಿಯೇ ಜೀರ್ಣಗೊಳ್ಳುತ್ತದೆ. ನಮ್ಮ ಭಾಗದ ಕೊಂಚ ಅಥವಾ ಏನೂ ಪ್ರಜ್ಞಾಯುಕ್ತ ಪ್ರಯತ್ನವಿಲ್ಲದೆ ಇವೆಲ್ಲವು ದಿನಂಪ್ರತಿ ನಡಿಯುತ್ತಾ ಇರುತ್ತವೆ. ಬಹಳ ಸುಲಭದಲ್ಲಿ ಹಗುರವಾಗಿ ತಕ್ಕೊಳ್ಳಸಾಧ್ಯವಿರುವ ಈ ಗೂಢ ಹಾಗೂ ಆಶ್ಚರ್ಯಕರ ಕಾರ್ಯಗತಿಗಳು ನಾವು ಜೀವವೆಂದು ಕರೆಯುವ ವರದಾನದ ಭಾಗಗಳಾಗಿವೆ. ಒಂದು ಅರ್ಥದಲ್ಲಿ ನಾವು ವಿಸ್ಮಯಕರವೆಂದು ಕರೆಯಬಲ್ಲ ಒಂದು ಕೊಡುಗೆಯು ಅದಾಗಿದೆ.

ಮಾನವ ಗರ್ಭಧಾರಣೆ ಮತ್ತು ಜನನದ ಕಾರ್ಯವಿಧಾನವನ್ನು ತುಸು ಗಮನಿಸಿರಿ. ಶರೀರವು ಸಾಮಾನ್ಯವಾಗಿ ಪರಕೀಯ ಅಂಗಾಂಶವನ್ನು ತಿರಸ್ಕರಿಸುತ್ತದ್ದಾದರೂ, ಗರ್ಭವು ಫಲವತ್ತಾದ ತತ್ತಿಗೆ ವಿನಾಯಿತಿ ಮಾಡುತ್ತದೆ. ಬೆಳೆಯುತ್ತಿರುವ ಭ್ರೂಣವನ್ನು ಪರಕೀಯ ಅಂಗಾಂಶದೋಪಾದಿ ತಿರಸ್ಕರಿಸುವ ಬದಲಿಗೆ, ಅದು ಕೂಸಾಗಿ ಹೊರಬರಲು ಸಾಧ್ಯವಾಗುವ ತನಕ ಅದನ್ನು ಪೋಷಿಸುತ್ತದೆ ಮತ್ತು ಕಾಪಾಡುತ್ತದೆ. ಪರಕೀಯ ಅಂಗಾಂಶವನ್ನು ತಿರಸ್ಕರಿಸುವ ನಿಯಮಕ್ಕೆ ಈ ಸಂದುಕಟ್ಟಿನ ವಿನಾಯಿತಿ ಮಾಡಲು ಗರ್ಭಕ್ಕಿರುವ ಈ ಶಕ್ತಿಯ ಹೊರತು ಮಾನವ ಜನನವು ಅಶಕ್ಯವಾಗುವುದು.

ಹೀಗಿದ್ದರು ಸಹ, ಭ್ರೂಣವು ಸುಮಾರು ನಾಲ್ಕು ತಿಂಗಳುಗಳದ್ದಾಗಿರುವಾಗ, ಗರ್ಭದಲ್ಲಿ ಸಂಭವಿಸುವ ಒಂದು ವಿಕಸನದ ಹೊರತಲ್ಲದಿದ್ದರೆ, ಹೊಸಕೂಸಿನ ಜೀವವು ಅಲ್ಪಕಾಲದ್ದಾಗಿರುತ್ತಿತ್ತು. ಆ ಸಮಯದಲ್ಲಿ ಅದು ಮುಂದಕ್ಕೆ ತನ್ನ ತಾಯಿಯ ಮೊಲೆಯುಣಲ್ಣು ಶಕ್ಯಮಾಡುವ ಸ್ನಾಯುಗಳಿಗೆ ವ್ಯಾಯಾಮ ನೀಡುತ್ತಾ ತನ್ನ ಹೆಬ್ಬೆರಳನ್ನು ಚೀಪಲಾರಂಭಿಸುತ್ತದೆ. ಮತ್ತು ಇದು ಕೂಸಿನ ಜನನಕ್ಕೆ ಬಹಳ ಮುಂಚಿತವಾಗಿಯೇ ನಿರ್ಣಯಿಸಲ್ಪಡುವ ಜೀವ-ಮರಣದ ಅನೇಕ ವಿಷಯಗಳಲ್ಲಿ ಕೇವಲ ಒಂದಾಗಿದೆ.

ಭ್ರೂಣವು ಗರ್ಭದಲ್ಲಿರುವಾಗ, ಅದರ ಹೃದಯದ ಆವರಣದಲ್ಲಿ ಒಂದು ರಂಧ್ರವಿರುತ್ತದೆ. ಆದರೂ ಜನನದ ಸಮಯದಲ್ಲಿ ಈ ರಂಧ್ರವು ಯಾಂತ್ರಿಕವಾಗಿಯೇ ಮುಚ್ಚುತ್ತದ. ಅದಲ್ಲದೆ, ಭ್ರೂಣವು ಗರ್ಭದಲ್ಲಿರುವಾಗ, ಶ್ವಾಸಕೋಶಗಳನ್ನು ಅಡಹ್ಡಾಯುವ ಒಂದು ಅಭಿದಮನಿಯು ಯಾಂತ್ರಿಕವಾಗಿಯೇ ಜನನದಲ್ಲಿ ಸಂಕುಚಿತಗೊಳ್ಳುತ್ತದೆ; ಆಗ ರಕ್ತವು ಶ್ವಾಸಕೋಶಗಳಿಗೆ ಹೋಗುತ್ತದೆ ಮತ್ತು ಮಗುವು ಉಸಿರಾಡಲಾರಂಭಿಸುವಾಗ, ಅದು ಆಮ್ಲೀಕರಣವನ್ನು ಹೊಂದಬಲ್ಲದು.

ಇದೆಲ್ಲವು ಕೇವಲ ಪ್ರಾರಂಭವು. ನಾಜೂಕಾಗಿ ರಚಿಸಲ್ಪಟ್ಟ ವ್ಯವಸ್ಥೆಗಳ ಒಂದು ಶ್ರೇಣಿಯು (ಶ್ವಾಸೋಚ್ಛಾಸ, ರಕ್ತಪರಿಚಲನೆ, ನರವ್ಯೂಹಗಳು ಮತ್ತು ರಸಗ್ರಂಥಿ ವ್ಯವಸ್ಥೆಗಳು) ಮಾನವ ಗ್ರಹಿಕೆಯನ್ನು ಅಚ್ಚರಿಗೊಳಿಸುವ ದಕ್ಷತೆಯಿಂದ ಜೀವಮಾನವೆಲ್ಲಾ ಕಾರ್ಯನಡಿಸುತ್ತವೆ—ಎಲ್ಲವೂ ಜೀವವನ್ನು ನಿರಂತರಗೊಳಿಸುವುದಕ್ಕಾಗಿ. ಒಬ್ಬ ಪುರಾತನ ಲೇಖಕನು ದೇವರನ್ನು ಉದ್ದೇಶಿಸಿ ಹೀಗಂದದರ್ದಲ್ಲೇನೂ ಆಶ್ಚರ್ಯವಿಲ್ಲ: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.”—ಕೀರ್ತನೆ 139:14.

ಸ್ಪಷ್ಟವಾಗಿಗಿ, ಜೀವವು ಕೇವಲ ಒಂದು ಕುರುಡಾದ, ವಿಕಾಸವಾದ ಯೋಗದ ಅಥವಾ ಆಕಸ್ಮಿಕ ಘಟನೆಯ ಉತ್ಪಾದನೆ ಎಂದು ಆ ಅಂದವಾದ ಮಾತುಗಳನ್ನು ಬರೆದವನು ನಂಬಿರಲಿಲ್ಲ. ವಿಷಯವು ಹಾಗಿದದ್ದಾದ್ದರೆ, ನಾವು ನಮ್ಮ ಜೀವವನ್ನು ಹೇಗೆ ಉಪಯೋಗಿಸಬೇಕೆಂಬ ವಿಷಯದಲ್ಲಿ ನಮಗೆ ಯಾವ ಹಂಗುಗಳಾಗಲಿ ಜವಾಬ್ದಾರಿಕೆಗಳಾಗಲಿ ಇರುತ್ತಿರಲ್ಲಿಲ್ಲ. ಆದರೂ, ಜೀವದ ಯಂತ್ರಪ್ರಾಯ ರಚನೆಯು ಸ್ಪಷ್ಟವಾಗಿಗಿ ರಚನೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ರಚನೆಗಾದರೋ ಒಬ್ಬ ರಚನೆಗಾರನ ಆವಶ್ಯಕತೆ ಇದೆ. ಬೈಬಲ್‌ ಈ ತತ್ವವನ್ನು ಮುಂದಿಡುತ್ತದೆ: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ಆದುದರಿಂದ ಇದು ಆವಶ್ಯಕ ಏನೆಂದರೆ, “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು.” (ಕೀರ್ತನೆ 100:3) ಹೌದು, ಜೀವವು ಕೇವಲ ಒಂದು ದಯಾಮಯ ಆಕಸ್ಮಿಕ ಘಟನೆಯಲ್ಲ; ಅದು ದೇವರ ಒಂದು ವರದಾನವಾಗಿದೆ.—ಕೀರ್ತನೆ 36:9.

ವಿಷಯವು ಹೀಗಿರಲಾಗಿ, ಜೀವದಾತನೆಡೆಗೆ ನಮಗಿರುವ ಹಂಗುಗಳು ಏನು? ನಮ್ಮ ಜೀವವನ್ನು ಹೇಗೆ ಉಪಯೋಗಿಸಬೇಕೆಂದು ಆತನು ನಮ್ಮಿಂದ ಅಪೇಕ್ಷಿಸುತ್ತಾನೆ? ಇವನ್ನು ಮತ್ತು ಸಂಬಂಧಿತ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ