ಬೈಬಲಿನ ದೃಷ್ಟಿಕೋನ
ಮಾನವ ಜೀವ ಯಾವಾಗ ಆರಂಭಗೊಳ್ಳುತ್ತದೆ?
ಸಪ್ಟಂಬರ್ 21, 1989, ಅಮೆರಿಕದ ಟೆನೆಸಿ ರಾಜ್ಯದ ಫಿಫ್ತ್ ಜುಡಿಶಲ್ ಡಿಸ್ಟಿಕ್ರಿಗ್ಟೆ ಒಂದು ಅಸಾಮಾನ್ಯ ದಿನವಾಗಿತ್ತು. ಆ ದಿವಸ, ಅಲ್ಲಿಯ ಸರ್ಕಿಟ್ ಕೋರ್ಟು ಏಳು ಘನೀಭವಿಸಿದ ಮಾನವ ಭ್ರೂಣಗಳು ಯಾರ ವಶವಾಗಬೇಕು ಎಂಬ ವಿಷಯದ ಮೇಲೆ ನಡೆದ ವ್ಯಾಜ್ಯದಲ್ಲಿ ತನ್ನ ಅಭಿಪ್ರಾಯವನ್ನು ಕೊಟ್ಟಿತು. ವಿವಾಹ ವಿಚ್ಛೇದನ ಮಾಡಿಕೊಳ್ಳುತ್ತಿದ್ದ ಹೆತ್ತವರಲ್ಲಿ ಯಾರಿಗೆ ಪಾಲನೆಯ ಹಕ್ಕಿದೆ ಎಂದು ಕೋರ್ಟಿಗೆ ತೀರ್ಮಾನಿಸಲಿಕ್ಕಿತ್ತು. ಆದರೂ, ಮೊದಲನೆಯದಾಗಿ, ಇನ್ನೊಂದು ವಿವಾದಾಂಶ ತೀರ್ಮಾನಕ್ಕಾಗಿ ಕೂಗಿತು: ಆ ಭ್ರೂಣಗಳು ಸೊತ್ತೊ, ಮಾನವ ಜೀವಿಗಳೊ?
ಜಗತ್ಪಸ್ರಿದ್ಧ ತಳಿಶಾಸ್ತ್ರಜ್ಞ, ಪ್ಯಾರಿಸಿನ ಪ್ರೊಫೆಸರ್ ಜೆರೋಮ್ ಲಿಜ್ಯೂನ್ ಅವರು, ಕೋರ್ಟಿನ ಮುಂದೆ, ಪ್ರತಿ ಮಾನವನಿಗೆ ಒಂದು ಅದ್ವಿತೀಯವಾದ ಆರಂಭವಿದೆ, ಮತ್ತು ಇದು ಗರ್ಭಧಾರಣೆಯ ಕ್ಷಣದಲ್ಲಿ ಸಂಭವಿಸುತ್ತದೆ ಮತ್ತು, “ಅವನ ಗರ್ಭಧಾರಣೆಯಾದಾಗ ಮನುಷ್ಯನು ಮನುಷ್ಯನಾಗಿದ್ದಾನೆ” ಎಂದು ಸಾಕ್ಷಿ ಕೊಟ್ಟರು. ಇನ್ನೊಂದು ಮಾತಿನಲ್ಲಿ, ಮೂರು ಕಣಗಳ ಹಂತ (ಸೈಗೋಟ್)ದಲ್ಲಿ, ಅವರು ಕೋರ್ಟಿಗೆ ಹೇಳಿದಂತೆ, ಆ ಭ್ರೂಣಗಳು “ಪುಟ್ಟ ಮಾನವ ಜೀವಿಗಳು”!—ಒತ್ತು ನಮ್ಮದು.
ಈ ಸೈಗೋಟನ್ನು ವಯಸ್ಕನಿಗಿರುವ ಹಕ್ಕಿನಿಂದಲೆ ಕಾಣಬೇಕೆಂದು ಸಾಕ್ಷಿ ನೀಡುತ್ತಿದ್ದೀರೊ ಎಂದು ಅವರನ್ನು ಕೇಳಲಾಗಿ, ಡಾ. ಲಿಜ್ಯೂನ್ ಉತ್ತರಿಸಿದ್ದು: “ನಾನು ಹಾಗೆಂದು ಹೇಳುವುದಲ್ಲ, ಏಕೆಂದರೆ ಅದನ್ನು ತಿಳಿಯುವ ಸ್ಥಾನದಲ್ಲಿ ನಾನಿಲ್ಲ. ಅವನು ಮಾನವ ಜೀವಿ ಎಂದು ಹೇಳುತ್ತಿದ್ದೇನೆ, ಮತ್ತು ಇತರರಂತೆಯೆ ಈ ಮಾನವ ಜೀವಿಗೂ ಹಕ್ಕುಂಟೊ ಎಂದು ಹೇಳುವವರು ನ್ಯಾಯಾಧೀಶರು. . . . ಆದರೆ ನೀವು ತಳಿಶಾಸ್ತ್ರಜ್ಞನಾದ ನನ್ನನ್ನು ಈ ಮಾನವ ಜೀವಿ ಮಾನವನೊ ಎಂದು ಕೇಳಿದರೆ ಅವನು ಜೀವಿಯೂ ಮಾನವನೂ ಆಗಿರುವುದರಿಂದ ಅವನು ಮಾನವ ಜೀವಿಯೆ ಎಂದು ಹೇಳುವೆನು.”
ಪ್ರಧಾನವಾಗಿ, ಡಾ. ಲಿಜ್ಯೂನರ ಅಬದ್ಧವೆಂದು ತೋರಿಸಲ್ಪಟ್ಟಿರದ ಸಾಕ್ಷಿಯ ಮೇರೆಗೆ ಕೋರ್ಟಿನ ಎದ್ದು ಕಾಣುವ ತೀರ್ಮಾನಗಳಲ್ಲಿ ಮೂರು ಹೀಗಿವೆ:
◻ “ಗರ್ಭಾಧಾನದಿಂದ ಹಿಡಿದು, ಮಾನವ ಭ್ರೂಣದ ಕಣಗಳು ವೈಶಿಷ್ಟ್ಯದ ಅತ್ಯುನ್ನತ ಹಂತಕ್ಕೆ ಭಿನ್ನವೂ ಅದ್ವಿತೀಯವೂ ವಿಶೇಷತೆಯುಳ್ಳದ್ದೂ ಆಗಿ ಮಾಡಲ್ಪಟ್ಟಿವೆ.”
◻ “ಮಾನವ ಭ್ರೂಣಗಳು ಸೊತ್ತಲ್ಲ.”
◻ “ಮಾನವ ಜೀವ ಗರ್ಭಧಾರಣೆಯಲ್ಲಿ ಆರಂಭಗೊಳ್ಳುತ್ತದೆ.”
ಆದರೆ ಇದು, ಮಾನವ ಜೀವದ ಆರಂಭವೆಂದು ಬೈಬಲು ಹೇಳುವ ಅಭಿಪ್ರಾಯವನ್ನು ಒಪ್ಪುತ್ತದೆಯೆ?
ಗರ್ಭಧಾರಣೆಯಲ್ಲಿ ಜೀವ ಪ್ರಾರಂಭಿಸುತ್ತದೆ
ಯೆಹೋವ ದೇವರು “ಜೀವದ ಬುಗ್ಗೆ” ಮತ್ತು “ನಾವು ಆತನಲ್ಲಿಯೇ ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ.” (ಕೀರ್ತನೆ 36:9; ಅಪೊಸ್ತಲರ ಕೃತ್ಯ 17:28) ಹಾಗಾದರೆ, ಸೃಷ್ಟಿಕರ್ತನು ಜೀವಾರಂಭ ಯಾವಾಗವೆಂದು ಹೇಳುತ್ತಾನೆ? ಗರ್ಭಧಾರಣೆಯಾಗಿ ಮಗುವಿನ ಬೆಳವಣಿಗೆಯ ಅತಿ ಆದಿಯ ಹಂತಗಳಲ್ಲಿ ಆತನು ಮಗುವಿನ ಜೀವ ಅಮೂಲ್ಯವೆಂದು ವೀಕ್ಷಿಸುತ್ತಾನೆ. ಮೇಲೆ ಹೇಳಿರುವ ಕೋರ್ಟಿನ ತೀರ್ಮಾನಕ್ಕೆ 3,000ಕ್ಕೂ ಹೆಚ್ಚು ವರ್ಷಗಳಿಗೆ ಮೊದಲು, ತನ್ನ ಪ್ರವಾದಿ ದಾವೀದನು ಹೀಗೆ ಬರೆಯುವಂತೆ ಅವನು ಪ್ರೇರಿಸಿದನು:
“ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ. ನಾನು ಗುಪ್ತ ಸ್ಥಳ[ಗರ್ಭದೊಳಗೆ]ದಲ್ಲಿ ಏರ್ಪಡುತ್ತಾ ಭೂಗರ್ಭ [ಗರ್ಭದಲ್ಲಿರುವ ಕತ್ತಲೆಯ ಕವಿತಾ ವರ್ಣನೆ]ದಲ್ಲಿ ರಚಿಸಲ್ಪಡುತ್ತಾ [ನೇಯಲ್ಪಡುತ್ತಾ, NW; ಬಟ್ಟೆಯ ಮೇಲೆ ಬಣ್ಣದ ನೂಲಿನ ಕಸೂತಿ ಹೇಗೊ ಹಾಗೆಯೆ ದೇಹವನ್ನು ಹರಡಿರುವ ಅಪಧಮನಿ, ಅಭಿಧಮನಿಗಳಿಗೆ ಅಪ್ರತ್ಯಕ್ಷ ಸೂಚನೆ] ಇದ್ದಾಗ ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ. ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು. . . ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.”—ಕೀರ್ತನೆ 139:13-16.
ಗರ್ಭಧಾರಣೆಯ ಕ್ಷಣ ಮೊದಲ್ಗೊಂಡು, ಬೆಳೆಯುತ್ತಿರುವ ಜೀವವು ಒಂದು ನಿಷ್ಕೃಷ್ಟ ನಮೂನೆಯನ್ನು, ಅದು ಒಂದು ಪುಸ್ತಕದಲ್ಲಿ, ಒಂದು ದೊಡ್ಡ ಗ್ರಂಥದಲ್ಲಿ ಬರೆದಿರುವ ಮಾಹಿತಿಗೆ ವಿಧೇಯತೆ ತೋರಿಸುತ್ತದೆಯೆ ಎಂಬಂತೆ ಅನುಸರಿಸುತ್ತದೆ. ಡಾ. ಲಿಜ್ಯೂನ್ ಹೇಳುವುದು: “ಸೈಗೋಟಿನ ಒಳಗಿರುವ ಮಾಹಿತಿ ಎಷ್ಟೆಂದರೆ, ಅದನ್ನು ವಿವರವಾಗಿ ಬರೆದು ಕಂಪ್ಯೂಟರಿನ ಒಳಗೆ ಹಾಕಿ, ಮುಂದೆ ಸಂಭವಿಸುವುದನ್ನು ಹೇಗೆ ಎಣಿಕೆ ಹಾಕುವುದೆಂದು ತಿಳಿಸುವಲ್ಲಿ, ಈ ಮಾಹಿತಿಯ ಮೊತ್ತ ಎಷ್ಟಾಗಿರುವುದೆಂದರೆ ಅದನ್ನು ಯಾರೂ ಅಳೆಯಸಾಧ್ಯವಿಲ್ಲ.”
ಅಜಾತ ಮಗುವಿನ ಜೀವ ಅಮೂಲ್ಯ
ಹೀಗೆ, ಗರ್ಭದೊಳಗೆ ಬೆಳೆಯುತ್ತಿರುವ ಅಜಾತ ಶಿಶು ಕೇವಲ ಅಂಗಾಂಶದ ಒಂದು ಮುದ್ದೆಯಲ್ಲ. ಅದಕ್ಕೆ ಮಹಾ ಬೆಲೆಯಿದೆ, ಮತ್ತು ಈ ಕಾರಣಕ್ಕಾಗಿ, ಅಜಾತ ಮಗುವಿಗೆ ಹಾನಿ ಮಾಡುವವನಿಂದ ಲೆಕ್ಕ ಕೇಳಲಾಗುವುದೆಂದು ದೇವರು ಹೇಳಿದ್ದಾನೆ. ವಿಮೋಚನಕಾಂಡ 21:22,23 (NW) ರಲ್ಲಿ ಆತನ ನಿಯಮ ಎಚ್ಚರಿಸುವುದು: “ಪುರುಷರು ಜಗಳವಾಡುತ್ತಿರಲಾಗಿ ಗರ್ಭಿಣಿಯಾದ ಹೆಂಗಸಿಗೆ ನಿಜವಾಗಿಯೂ ಏಟು ತಗಲಿದದರಿಂದ ಅವಳ ಮಕ್ಕಳು ಹೊರಗೆ ಬಂದರೂ ಮಾರಕ ಅಪಘಾತ ಸಂಭವಿಸದಿದ್ದರೆ ಆ ಸ್ತ್ರೀಯ ಗಂಡನು ಕೇಳುವ ನಷ್ಟ ಪರಿಹಾರವನ್ನು ಆ ಪುರುಷನಿಗೆ ವಿಧಿಸತಕ್ಕದ್ದು ಮತ್ತು ಅವನು ಇದನ್ನು ನ್ಯಾಯಾಧಿಪತಿಗಳ ಮೂಲಕ ತೆರಬೇಕು. ಆದರೆ ಮಾರಕ ಅಪಘಾತ ಸಂಭವಿಸುವಲ್ಲಿ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಬೇಕು.”
ಹಲವು ಬೈಬಲುಗಳು ಈ ಮೇಲಿನ ವಚನಗಳನ್ನು, ಸ್ತ್ರೀಗೆ ಸಂಭವಿಸುವ ಸಂಗತಿಯೇ ಆ ನಿಯಮದ ಕೇಂದ್ರವೆಂಬಂತೆ ಭಾಷಾಂತರಿಸುತ್ತವೆ. ಆದರೂ, ಮೂಲ ಹಿಬ್ರು ವಚನವು ತಾಯಿ ಯಾ ಮಗುವಿಗೆ ಆಗಬಹುದಾದ ಹಾನಿಗೆ ಗಮನವನ್ನು ಹರಿಯಿಸುತ್ತದೆ.a ಈ ಕಾರಣದಿಂದ, ಅನಪೇಕ್ಷಿತ ಮಗು ಹುಟ್ಟದಂತೆ ಮಾಡಲು ಬೇಕೆಂದು ಗರ್ಭಪಾತ ಮಾಡಿಸುವುದು ಉದ್ದೇಶಪೂರ್ವಕವಾಗಿ ಮಾನವ ಜೀವವನ್ನು ತೆಗೆಯುವುದಕ್ಕೆ ಸಮಾನ.
ಮಾನವ ಭ್ರೂಣವು ಗರ್ಭಕೋಶದ ಹೊರಗೆ ತನ್ನನ್ನು ಪೋಷಿಸಿಕೊಳ್ಳುವುದು ಅಸಾಧ್ಯವಾಗಿರುವುದರಿಂದ ಅದು ಮಾನವ ಜೀವವಲ್ಲ ಎಂದು ಕೆಲವರು ವಾದಿಸಬಹುದು. ಇದು ಟೊಳ್ಳು ವಾದ. ಹೊಸದಾಗಿ ಜನಿಸಿದ ಕೂಸು, ಅದು ಹುಟ್ಟಿ ಕೇವಲ ಕೆಲವೇ ನಿಮಿಷಗಳಾದರೂ ಮಾನವ ಜೀವವೆಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೂ ಆ ಶಿಶುವನ್ನು ಬೆತ್ತಲೆಯಾಗಿ ಹೊರಗೆ ಬಯಲಲ್ಲಿ ಇಡುವುದಾದರೆ, ಆ ಕೂಸು ಎಷ್ಟು ಕಾಲ ಬದುಕೀತು? ಅದು ತೀರಾ ಸಹಾಯಶೂನ್ಯವಾಗಿದೆ, ಮತ್ತು ಭ್ರೂಣ ಯಾ ಗರ್ಭದಂತೆ, ತನ್ನನ್ನು ಪೋಷಿಸಿಕೊಳ್ಳುವ ಸಾಮರ್ಥ್ಯ ಅದಕ್ಕಿಲ್ಲ. ಹೊಸದಾಗಿ ಹುಟ್ಟಿದ ಮಗುವಿಗೆ ಮರೆ, ಬೆಚ್ಚಗೆನ ಸ್ಥಿತಿ ಮತ್ತು ಆಹಾರ ಬೇಕು. ಈ ಪೋಷಣೆ, ಸಹಾಯ ಮತ್ತು ನೆರವನ್ನು ತಾಯಿಯಂಥ ವಯಸ್ಕರು ಮಾತ್ರ ಒದಗಿಸಬಲ್ಲರು.
ಹೀಗೆ, ಈ ಮೇಲೆ ಹೇಳಲಾಗಿರುವ ನ್ಯಾಯ ನಿರ್ಣಯ, ಮಾನವ ಜೀವ ಗರ್ಭಧಾರಣೆಯಲ್ಲಿ ಆರಂಭಗೊಳ್ಳುತ್ತದೆಂಬ ಬೈಬಲಿನ ದೃಷ್ಟಿಕೋನವನ್ನು ಒಪ್ಪುತ್ತದೆ. ಅಜಾತ ಶಿಶುವಿನ ಜೀವ, ಅದೊಂದು ಅನನುಕೂಲವಾದ, ಬೇಕೆಂದು ಬಿಸಾಡಯೋಗ್ಯವಾದ ಪರಕೀಯ ವಸ್ತುವೊ ಎಂಬಂತೆ ಅಲ್ಪ ವಿಷಯವಾಗಿರುವುದಿಲ್ಲ. ಮಾನವ ಜೀವವು ಗರ್ಭಕೋಶವನ್ನು ಬಿಟ್ಟ ಮೇಲೆ ಮಾತ್ರವಲ್ಲ, ಗರ್ಭಕೋಶದೊಳಗೆ ಇರುವಾಗಲೂ ಪವಿತ್ರವಾಗಿದೆ. (g90 10/8)
[ಅಧ್ಯಯನ ಪ್ರಶ್ನೆಗಳು]
a “ಮಾರಕ ಅಪಘಾತ” (ಹಿಬ್ರು, ‘ಅಸೋಹ್ನ್’) ಎಂಬ ನಾಮಪದಕ್ಕೆ “ಗರ್ಭಿಣಿಯಾದ ಹೆಂಗಸು” ಎಂಬುದರೊಂದಿಗೆ ಯಾವ ವಿಶೇಷ ಸಂಬಂಧವೂ ಇಲ್ಲ; ಹೀಗೆ, ಮಾರಕ ಅಪಘಾತ ಸ್ತ್ರೀಗೆ ಪರಿಮಿತವಾಗಿರದೆ ಯೋಗ್ಯವಾಗಿಯೆ ಗರ್ಭದಲ್ಲಿರುವ “ಅವಳ ಮಕ್ಕಳನ್ನು” ಆವರಿಸುತ್ತದೆ.
[ಪುಟ 26 ರಲ್ಲಿರುವಚಿತ್ರ]
Windsor Castle, Royal Library. © 1970 Her Majesty The Queen