ವೆಚ್ಚವನ್ನು ನೀವು ಲೆಕ್ಕಿಸಿದ್ದೀರೊ?
“ಏನು! ಅಂಥ ಒಂದು ಅದ್ಭುತಕರ ನೀಡಿಕೆಯನ್ನು ನೀನು ನಿರಾಕರಿಸುತ್ತಿಯಾ?” ಅವಳು ಈಗಮಾತ್ರವೆ ಏನನ್ನು ಕೇಳಿದಳೋ ಅದನ್ನು ಮೇಲ್ವಿಚಾರಕಳಿಗೆ ನಂಬಲು ಕಷ್ಟವಾಯಿತು. ಅವಳ ಕೆಳದರ್ಜೆಯಲ್ಲಿ ಕೆಲಸ ಮಾಡುವ, ಕೌಶಲ ಮತ್ತು ಸ್ವದರ್ತನೆಗಾಗಿ ಗೌರವಾನಿತ್ವಳಾದ ಸ್ತ್ರೀಯು ಕಂಪೆನಿಯ ಖರ್ಚಿನಲ್ಲಿ ವಿದೇಶದಲ್ಲಿ ಎರಡು ವರ್ಷ ಅಧ್ಯಯನ ಮಾಡಲು ಹೋಗುವ ನೀಡುವಿಕೆಯನ್ನು ಈಗ ಮಾತ್ರವೆ ನಿರಾಕರಿಸಿದ್ದಳು. ಅವಳು ಹಾಗೆ ಮಾಡಿದ್ದು ಯಾಕೆ?
ಸ್ತ್ರೀಯು ವಿವರಿಸಿದ್ದು, ನೀಡುವಿಕೆಯನ್ನು ಸ್ವೀಕರಿಸುವುದು ಅಂದರೆ ಅವಳ ಗಂಡನಿಂದ ಮತ್ತು ಇಬ್ಬರು ಮಕ್ಕಳಿಂದ ಎರಡು ವರ್ಷ ಬೇರ್ಪಡಲಿರುವ ಅರ್ಥದಲ್ಲಿತ್ತು. ಅವಳು ಅವರ ಗೈರುಹಾಜರಿಗೆ ಬಹಳ ವಿಷಾದಪಡುತ್ತಿದ್ದಳು. ಇನ್ನು ಪ್ರಾಮುಖ್ಯವಾಗಿ, ಒಬ್ಬ ಪತ್ನಿಯಾಗಿ ಮತ್ತು ತಾಯಿಯಾಗಿ ಅವಳ ದೇವದತ್ತ ಕರ್ತವ್ಯಗಳನ್ನು ಅವಳು ತಾತ್ಸಾರಮಾಡಿದಂತೆಯೂ ಕೂಡ ಆಗುತ್ತಿತ್ತು. ಭಾವನಾತ್ಮಕವಾಗಿ ಮತ್ತು ಆತ್ಮಿಕವಾಗಿ ತೆರಬೇಕಾದ ಬೆಲೆಯು ಬಹಳ ಅಧಿಕತಮವಾಗಿತ್ತು. ಆದಕಾರಣ, ವೆಚ್ಚವನ್ನು ಲೆಕ್ಕಿಸಿಯಾದ ನಂತರ, ಅವಳು ನೀಡಿಕೆಯನ್ನು ನಿರಾಕರಿಸಲು ನಿರ್ಣಯಿಸಿದ್ದಳು.
ಅವಳ ಸ್ಥಾನದಲ್ಲಿ ನೀವು ಇದ್ದಿದ್ದರೆ, ಏನು ಮಾಡುತ್ತಿದ್ದೀರಿ? ಈ ಕ್ರೈಸ್ತ ಸ್ತ್ರೀಯು ಮಾಡಿದ ತೀರ್ಮಾನದೊಂದಿಗೆ ಪ್ರತಿಯೊಬ್ಬರು ಸಹಮತಿಸುವದಿಲ್ಲವೆಂಬುದು ನಿಸ್ಸಂಶಯ. ಅವಳ ಜೀವನೋದ್ಯೋಗದ ಸುವರ್ಣಾವಕಾಶವನ್ನು ಅವಳು ಹಾಳುಮಾಡಿಕೊಂಡಳು ಎಂದು ಅವಳ ಜತೆ ಕಾರ್ಮಿಕರಂತೆ, ಕೆಲವರು ಭಾವಿಸಬಹುದು. ಎಷ್ಟೆಂದರೂ ಎರಡು ವರ್ಷಗಳು ಬೇಗನೆ ಗತಿಸಿಹೋಗುತ್ತವೆಯಾದರ್ದಿಂದ, ಅವಳ ಕುಟುಂಬದ ಭವಿಷ್ಯವನ್ನು ಅವಳು ಯೋಚಿಸಲಿಲ್ಲವೆಂದು ಇತರರು ಆಪಾದಿಸಲೂ ಬಹುದು. ಆದರೂ, ಅವಳದ್ದು ಒಂದು ಆವೇಶಪರ ಯಾ ಭಾವನಾತ್ಮಕ ನಿರ್ಣಯವಾಗಿರಲಿಲ್ಲ. ಅದು ಸ್ವಸ್ಥಪೂರ್ಣ ವಿವೇಚನೆ ಮತ್ತು ದೂರಗಾಮಿ ಸೂತ್ರಗಳ ಮೇಲೆ ಆಧಾರಿತವಾಗಿತ್ತು. ಅವುಗಳು ಏನಾಗಿವೆ?
ವ್ಯವಹಾರ ಜ್ಞಾನಕ್ಕಿಂತಲೂ ಹೆಚ್ಚಿನದ್ದು
ಭೂಮಿಯ ಮೇಲೆ ನಡೆದಾಡಿದವರಲ್ಲಿ ಅತಿ ವಿವೇಕಿ ಮನುಷ್ಯನಾದ ಯೇಸು ಕ್ರಿಸ್ತನು, ತನ್ನ ಸಾಮ್ಯಗಳೊಂದರಲ್ಲಿ ಮಾರ್ಗದರ್ಶನವನ್ನು ಒದಗಿಸಿದ್ದಾನೆ. “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ? ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು—ಈ ಮನುಷ್ಯನು ಕಟ್ಟಿಸುವದಕ್ಕಂತೂ ತೊಡಗಿದನು, ಕೆಲಸಪೂರೈಸಲಾರದೆ ಹೋದನು ಎಂದು ಅವನನ್ನು ಹಾಸ್ಯಮಾಡಾರು.”—ಲೂಕ 14:28-30.
ಯಾವುದೇ ಮಹತ್ತಾದದ್ದನ್ನು ಮಾಡಲು ನಿರ್ಣಯಿಸುವ ಮೊದಲು ವೆಚ್ಚವನ್ನು ಲೆಕ್ಕಿಸುವದು ಒಳಿತೆಂದು ಪ್ರತಿಯೊಬ್ಬರು ಒಪ್ಪುವರು. ಉದಾಹರಣೆಗೆ, ಒಬ್ಬ ಮನುಷ್ಯನು ಮನೆಯೊಂದನ್ನು ಖರೀದಿಸಲು ಬಯಸುವುದಾದರೆ, ಬೆಲೆಯನ್ನು ಕೂಡ ಕಂಡುಕೊಳ್ಳದೆ ಮತ್ತು ವ್ಯವಹಾರವನ್ನು ಪೂರ್ಣಗೊಳಿಸಲು ಬೇಕಾದಷ್ಟು ಆರ್ಥಿಕ ಸಾಮರ್ಥ್ಯವಿದೆಯೋ ಎಂದು ಖಂಡಿತಮಾಡಿಕೊಳ್ಳದೆ ಕಂಟ್ರ್ಯಾಕ್ಟ್‌ಗೆ ಸಹಿಮಾಡಲು ಅವಸರಿಸುವನೋ? ಅಂಥ ಸಂಗತಿಯನ್ನು ಮಾಡುವುದಾದರೆ, ಅವನು ಮೂರ್ಖನೆಂದು ಪರಿಗಣಿಸಲ್ಪಡುವನು. ಹೌದು, ಒಂದು ಹೊಣೆಯನ್ನು ಆರಂಭಿಸುವ ಮೊದಲು ಒಬ್ಬನು ವೆಚ್ಚವನ್ನು ಲೆಕ್ಕಿಸುವುದು ವ್ಯವಹಾರ ಜ್ಞಾನವಾಗಿರುತ್ತದೆ.
ಆ ಸಾಮ್ಯದಲಾದ್ಲರೊ, ನಿಜವಾಗಿಯೂ ಯೇಸುವು ತಿಳಿದುಕೊಳ್ಳುವಂತೆ ಮಾಡುವ ವಿಷಯವೇನಾಗಿತ್ತು? ಆ ಸಾಮ್ಯವನ್ನು ಪ್ರಸ್ತಾಪಿಸುವ ಸ್ವಲ್ಪ ಮುಂಚೆ, ಅವನಂದದ್ದು: “ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.” (ಲೂಕ 14:27) ಹೀಗೆ, ನಮ್ಮ ಸರ್ವೇಸಾಮಾನ್ಯ, ಪ್ರತಿದಿನದ ಹೊಣೆಗಳ ಕುರಿತಾಗಿ ಯೇಸುವು ಕೇವಲ ಕೆಲವೊಂದು ವ್ಯವಹಾರ ಜ್ಞಾನವನ್ನು ನೀಡುತ್ತಿರಲಿಲ್ಲವೆಂದು ಪೂರ್ವಾಪರವು ತೋರಿಸುತ್ತದೆ. ಬದಲಾಗಿ, ಅವನ ಶಿಷ್ಯನಾಗುವದರ ಸಂಬಂಧದಲ್ಲಿ ವೆಚ್ಚವನ್ನು ಲೆಕ್ಕಿಸುವದರ ಕುರಿತು ಅವನು ಮಾತಾಡುತ್ತಿದ್ದನು.
ತನ್ನ ಶಿಷ್ಯರಾಗುವದರಲ್ಲಿ ಬದಲಾವಣೆಗಳು ಮತ್ತು ತ್ಯಾಗಗಳು ಒಳಗೂಡಿವೆ ಎಂದು ಅವನ ಸಾಮ್ಯದಿಂದ ಯೇಸುವು ತೋರಿಸಿದನು. ಯಾಕೆ? ಕಾರಣವೇನಂದರೆ ಸದ್ಯದ ವಿಷಯಗಳ ವ್ಯವಸ್ಥೆಯ ಪ್ರಾಪಂಚಿಕತೆಯ ಅಭಿಮುಖವಾಗಿದೆ ಮತ್ತು ಸ್ವಪ್ರಯೇಜನದಿಂದ ಪ್ರಚೋದಿಸಲ್ಪಡುತ್ತದೆ. ಹೆಚ್ಚಿನ ಜನರು ಅವರ ಮಾಂಸಿಕ ಆಶೆಗಳನ್ನು ತೃಪ್ತಿಪಡಿಸುವದರಲ್ಲಿ ಹೆಚ್ಚು ಗಮನಹರಿಸುತ್ತಾರೆ, ಅವರ ಆತ್ಮಿಕ ಆವಶ್ಯಕತೆಗಳ ಯಾ ದೇವರೊಂದಿಗಿನ ಅವರ ಸಂಬಂಧದ ಕುರಿತಾಗಿ ಲಕ್ಷ್ಯವಿಲ್ಲದವರಾಗಿದ್ದಾರೆ. (2 ತಿಮೊಥೆಯ 3:1-4) ಆದಾಗ್ಯೂ, ಈ ಮನೋಭಾವವು, ಯಾ ಆತ್ಮವು ಯೇಸು ಕ್ರಿಸ್ತನಿಂದ ತೋರಿಸಲ್ಪಟ್ಟದ್ದಕ್ಕಿಂತ ನೇರ ವಿಪರ್ಯಸ್ತವಾಗಿದೆ. ಅವನಂದದ್ದು, “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” ಅವನು ಹೀಗೆ ಹೇಳಿದ್ದರಲ್ಲಿ, ಪ್ರಾಪಂಚಿಕ ವಸ್ತುಗಳಿಗಿಂತಲೂ ಆತ್ಮಿಕದವುಗಳ ಮೇಲೆ ಗರಿಷ್ಠ ಮೂಲ್ಯತೆಯನ್ನು ಅವನು ಇಟ್ಟಿದ್ದನು: “ಬದುಕಿಸುವಂಥದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ.”—ಮತ್ತಾಯ 20:28; ಯೋಹಾನ 6:63.
ತದನಂತರ, ತನ್ನ ಶಿಷ್ಯರಾಗಲು ಬಯಸುವವರು ವೆಚ್ಚವನ್ನು ಲೆಕ್ಕಿಸಬೇಕೆಂದು ಹೇಳುವಾಗ, ಅವನು ಪ್ರಥಮವಾಗಿ ಪ್ರಾಪಂಚಿಕ ಮೌಲ್ಯಗಳ ಕುರಿತಾಗಿ ಅಲ್ಲ, ಬದಲು ಆತ್ಮಿಕ ಮೂಲ್ಯತೆಗಳ ಕುರಿತು ಮಾತಾಡುತ್ತಿದ್ದನು. ಅವರಿಗೆ ಯಾವುದು ಅಧಿಕ ಪ್ರಾಮುಖ್ಯ, ಲೋಕವು ನೀಡುವ ಪ್ರಾಪಂಚಿಕ ಅನುಕೂಲತೆಗಳೋ ಯಾ ಶಿಷ್ಯತ್ವವು ನೀಡುವ ಆತ್ಮಿಕ ಲಾಭಗಳೋ? ಈ ಕಾರಣದಿಂದ ಅದನ್ನು ಮತ್ತು ಇನ್ನೊಂದು ಸಂಬಂಧಿತ ಸಾಮ್ಯವನ್ನು ಹೇಳಿಯಾದ ಮೇಲೆ, ಅವನು ಈ ರೀತಿ ಸಮಾಪ್ತಿಗೊಳಿಸಿದನು: “ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು.” (ಲೂಕ 14:33) ಭಾವಿ ಹಿಂಬಾಲಕನು ಅಂಥ ತ್ಯಾಗವನ್ನು ಮಾಡಲು ಇಚ್ಛೆ ಮತ್ತು ಸಿದ್ಧಮನಸ್ಕನಾಗಿರುವನೋ, ಯಾ ತೆರಬೇಕಾದ ಬೆಲೆ ತುಂಬಾ ಗರಿಷ್ಠತೇಯದ್ದೋ?
ಸಮತೂಕದ ಒಂದು ನೋಟ
ಹೆಚ್ಚು ಗೋಚರಿಸುವ ಮತ್ತು ತಡವಾಗಿಲ್ಲದ ತೋರಿಕೆಯ ಪ್ರಯೋಜನಗಳನ್ನು ಪ್ರಾಪಂಚಿಕ ವಿಷಯಗಳು ತರಬಹುದಾದರೂ, ಆತ್ಮಿಕ ಬೆನ್ನಟ್ಟುವಿಕೆಯ ಪ್ರಯೋಜನಗಳು ಬಾಳುವಂಥವುಗಳು ಮತ್ತು ತೃಪ್ತಿದಾಯಕವೂ ಆಗಿವೆ. ಈ ರೀತಿಯಲ್ಲಿ ಯೇಸುವು ವಿವೇಚಿಸಿದನು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ.” (ಮತ್ತಾಯ 6:19, 20) ನಮ್ಮ ಸಮಯಗಳಲ್ಲಿ, ಬೆಲೆಯೇರಿಕೆ, ಶೇರುಮಾರುಕಟ್ಟೆಗಳ ಕುಸಿತಗಳು, ಬ್ಯಾಂಕ್‌ಗಳ ಸೋಲುಗಳು, ಮತ್ತು ಇತ್ಯಾದಿ ಪ್ರಾಪಂಚಿಕತೆಯ ಐಶ್ವರ್ಯದಲ್ಲಿ ಪೂರ್ಣವಾಗಿ ಭರವಸವನ್ನಿಟ್ಟ ಅನೇಕರ ವಿನಾಶಕ್ಕೆ ಕಾರಣವಾಗಿದೆ. ಆದರೂ ಅಪೊಸ್ತಲ ಪೌಲನು ನಮಗೆ ಒತ್ತಾಯಿಸುವುದೇನಂದರೆ, “ಕಾಣುವಂಥದನ್ನು ಲಕ್ಷಿಸದೆ ಕಾಣದಿರುವದನ್ನು ಲಕ್ಷಿಸುವವರಾಗಿರಬೇಕು; ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಆದರೆ ಕಾಣದಿರುವಂಥದು ಸದಾಕಾಲವೂ ಇರುವದು.” (2 ಕೊರಿಂಥ 4:18) ಆದರೂ, ಅಂಥ ಒಂದು ದೃಷ್ಟಿಕೋನವನ್ನು ನಾವು ಹೇಗೆ ಬೆಳೆಸಬಲ್ಲೆವು?
ನಮ್ಮ ನಮೂನೆ ಮತ್ತು ಆದರ್ಶನಾದ ಯೇಸು ಕ್ರಿಸ್ತನನ್ನು ಅನುಕರಿಸುವದರ ಮೂಲಕ ನಾವದನ್ನು ಮಾಡಬಲ್ಲೆವು. ಭೂಮಿಯಲ್ಲಿದ್ದಾಗ, ಅವನು ಯಾವುದೇ ರೀತಿಯಲ್ಲಿ ಒಬ್ಬ ಸಂನ್ಯಾಸಿಯಾಗಿರಲಿಲ್ಲವೆಂಬುದು, ಕೆಲವೊಮ್ಮೆ ವಿವಾಹದೌತಣಗಳಲ್ಲಿ ಮತ್ತು ಭೋಜನಕೂಟಗಳಲ್ಲಿ ಅವನು ಪಾಲಿಗನಾಗಿದ್ದನು ಎಂಬ ವಾಸ್ತವಾಂಶದಿಂದ ರುಜುವಾಗಿದೆ. ಆದಾಗ್ಯೂ, ಆತ್ಮಿಕ ವಿಷಯಗಳನ್ನು ಅವನು ಪ್ರಥಮವಾಗಿಟ್ಟಿದ್ದನು ಎಂಬದು ಸ್ಪಷ್ಟವಾಗಿಗುತ್ತದೆ. ತನ್ನ ತಂದೆಯ ಚಿತ್ತವನ್ನು ಪೂರೈಸಲು ಅವನು ಜೀವನಾವಶ್ಯಕತೆಗಳೆಂದು ಪರಿಗಣಿಸಿರುವವುಗಳನ್ನೂ ಕೂಡ ತ್ಯಜಿಸಲು ಅವನು ಇಚ್ಛೆಯುಳ್ಳವನಾಗಿದ್ದನು. ಒಮ್ಮೆ ಅವನು ಘೋಷಿಸಿದ್ದು: “ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ.” (ಲೂಕ 9:58) ತನ್ನ ತಂದೆಯ ಚಿತ್ತವನ್ನು ಮಾಡುವದು ಅಷ್ಟೊಂದು ಅತ್ಯಾವಶ್ಯಕವಾಗಿತ್ತು ಮತ್ತು ಆಹ್ಲಾದಕರವಾಗಿತ್ತು ಎಂದು ಅವನು ಪರಿಗಣಿಸಿದನು, ಆದುದರಿಂದ ಅವನು ಹೃದಯಪೂರಿತ ಯಥಾರ್ಥತೆಯಿಂದ ಅಂದದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.”—ಯೋಹಾನ 4:34.
ಸೈತಾನನ ಶೋಧನೆಗಳನ್ನು ತಿರಸ್ಕರಿಸಿದರ್ದ ಮೂಲಕ ಮೌಲ್ಯಗಳ ತನ್ನ ಅರಿವನ್ನು ಯೇಸುವು ಪ್ರದರ್ಶಿಸಿದನು. ದೇವದತ್ತ ಶಕ್ತಿಯನ್ನು ಸ್ವತಃ ತನ್ನ ಪ್ರಯೋಜನಕ್ಕಾಗಿ, ತನ್ನ ಶಾರೀರಿಕ ಆವಶ್ಯಕತೆಗಳನ್ನು ತೃಪ್ತಿಪಡಿಸಲಿಕ್ಕಾಗಿ, ಮತ್ತು ಲೌಕಿಕ ಖ್ಯಾತಿ ಮತ್ತು ಜನಪ್ರಿಯತೆಯನ್ನು ಗಳಿಸುವದಕ್ಕಾಗಿ ಯೇಸು ಬಳಸುವಂತೆ ಮಾಡಲು ಸೈತಾನನು ಪ್ರಯತ್ನಿಸಿದನು. ಅಂಥ ಆಕ್ಷೇಪಾರ್ಹ ಪ್ರಯೋಜನಗಳನ್ನು ಅವನು ಅತಿ ಮಹತ್ತಾದ ಬೆಲೆಯನ್ನು—ದೇವರ ಮೆಚ್ಚಿಕೆಯ ನಷ್ಟ—ತೆರುವದರ ಮೂಲಕ ಪಡೆಯಸಾಧ್ಯವಿತ್ತು, ಈ ಬೆಲೆಯು ಅವನು ತೆರಲು ಇಚ್ಛೆಯುಳ್ಳವನಾಗಿರುವದಕ್ಕಿಂತಲೂ ಉನ್ನತವಾಗಿತ್ತು, ಯಾಕಂದರೆ ತನ್ನ ತಂದೆಯೊಂದಿಗಿನ ಒಳ್ಳೆಯ ಸಂಬಂಧವನ್ನು ಬೇರೆಲ್ಲವುಗಳಿಗಿಂತಲೂ ಉನ್ನತದಲ್ಲಿ ಅವನು ನಿಧಿಯಾಗಿ ಇಟ್ಟಿದ್ದನು. ಆದಕಾರಣ ಸೈತಾನನ ನೀಡಿಕೆಗಳನ್ನು ಅವನು ನಿಸ್ಸಂದಿಗ್ಧವಾಗಿ, ಯಾವುದೇ ಶಂಕೆಯಿಲ್ಲದೆ ತಿರಸ್ಕರಿಸಿದನು.—ಮತ್ತಾಯ 4:1-10.
ಕ್ರಿಸ್ತನ ಅನುಯಾಯಿಗಳೋಪಾದಿ, ನಮ್ಮ ಧಣಿಯಲ್ಲಿದ್ದಂಥ ಮೌಲ್ಯಗಳ ತದ್ರೀತಿಯ ಜ್ಞಾನ ನಮ್ಮಲ್ಲಿರಲು ನಾವು ಖಂಡಿತವಾಗಿಯೂ ಬಯಸಬೇಕು. ಸೈತಾನನ ನಿಯಂತ್ರಣದಲ್ಲಿರುವ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ, ಉತ್ತಮ ಪ್ರಯೋಜನಗಳನ್ನು ವಾಗ್ದಾನಿಸುತ್ತವೆಂದು ಭಾಸವಾಗುವ, ಆದರೆ ದೇವರೊಂದಿಗಿನ ನಮ್ಮ ಸಂಬಂಧಕ್ಕೆ ನಿಜವಾಗಿಯೂ ಬಾಧಕವಾಗುವ ಅನೇಕ ವಿಷಯಗಳು ಇರುತ್ತವೆ. ಸಂಸ್ಥೆಯ ಏಣಿಯಲ್ಲಿ ಹತ್ತುವ, ಒಬ್ಬನ ಸ್ಥಾನವನ್ನು ಪ್ರಗತಿಗೊಳಿಸಲು ಉನ್ನತ ಶಿಕ್ಷಣವನ್ನು ಬೆನ್ನಟ್ಟುವ, ಅವಿಶ್ವಾಸಿಗಳೊಂದಿಗೆ ಪ್ರಣಯಗೆಳೆತನ ಮಾಡುವ, ಯಾ ಆಕ್ಷೇಪಾರ್ಹವಾದ ವ್ಯಾಪಾರ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವಂಥ ಸಂಗತಿಗಳು ನಂಬಿಕೆಯನ್ನು ನಷ್ಟಗೊಳಿಸುವ ಮತ್ತು ಕಟ್ಟಕಡೆಗೆ ಯೆಹೋವನ ಮೆಚ್ಚಿಕೆಯಿಂದ ಪತನಗೊಳ್ಳುವದಕ್ಕೆ ಸುಲಭವಾಗಿ ನಡಿಸಸಾಧ್ಯವಿರುತ್ತದೆ. ಅಂಥ ಶೋಧನೆಗಳನ್ನು ಎದುರಿಸುತ್ತಿರುವಾಗ ನಾವು ಜಾಗರೂಕತೆಯಿಂದ ವೆಚ್ಚವನ್ನು ಲೆಕ್ಕಿಸತಕ್ಕದ್ದು.
ನಿಜ ವಿವೇಕ ಒಂದು ಭದ್ರತೆ
ಕೆಲವು ವರ್ಷಗಳ ಹಿಂದೆ, ಫ್ರಾಚ್ಯ ದೇಶದ ದೊಡ್ಡ ನಗರವೊಂದರ ಎಳೇ ಕ್ರೈಸ್ತನೊಬ್ಬನಿಗೆ ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಒಂದು ಅವಕಾಶವಿತ್ತು. ಒಂದು ಒಳ್ಳೆಯ ಲೌಕಿಕ ವಿದ್ಯೆ ಮತ್ತು ಒಳ್ಳೆಯ ಸಂಬಳ ತರುವ ಉದ್ಯೋಗ ಈಗಾಗಲೇ ಅವನಿಗೆ ಇತ್ತಾದರೂ, ಇದು ಸಾಕಾಗುವದಿಲ್ಲ ಎಂಬ ಭಾವನೆ ಅವನಲ್ಲಿ ಉದ್ಭವಿಸಿತು; ಜೀವಿತವನ್ನು ಇನ್ನಷ್ಟು ಉತ್ತಮಗೊಳಿಸಲು ಅವನು ಬಯಸಿದನು. ಈಗಾಗಲೇ ನಾವು ಗಮನಿಸಿದ ಶಾಸ್ತ್ರೀಯ ವಿಷಯಗಳೊಂದಿಗೆ ಜತೆ ಕ್ರೈಸ್ತರು ಅವನೊಂದಿಗೆ ವಿವೇಚಿಸಲು ಪ್ರಯತ್ನಿಸಿದರು, ಆದರೆ ಅವನು ಅಚಲನಾಗಿದ್ದು, ಯೋಜನೆಗನುಸಾರ ಮುಂದರಿದನು. ಮೊದಲು ಸತ್ಯದಲ್ಲಿ ನಿಲ್ಲಲು ಅವನು ಪ್ರಯತ್ನಿಸಿದನಾದರೂ, ಕ್ರಮೇಣ ಬೈಬಲ್ ಸತ್ಯದ ಗಣ್ಯತೆಯನ್ನು ಕಳೆದುಕೊಂಡನು ಮತ್ತು ಸಂದೇಹಗಳು ನುಸುಳಲು ಆರಂಭಗೊಂಡವು. ಕೇವಲ ಒಂದು ಯಾ ಹೆಚ್ಚು ವರ್ಷದೊಳಗೆ, ಪೂರ್ಣವಾಗಿ ನಂಬಿಕೆಯಲ್ಲಿ ನಷ್ಟಹೊಂದಿದನು ಮತ್ತು ತಾನೊಬ್ಬ ಆಜೇಯ್ಞವಾದಿ ಎಂದು ವಾದಿಸಿದನು. ಪ್ರಗತಿಪಥದ ಲೌಕಿಕ ಶಿಕ್ಷಣದ ಮೂಲಕ ದೊರೆರತ ಉನ್ನತ ಪದವಿ (ಡಿಗ್ರಿ) ಅವನಿಗೆ ತಕ್ಕಮಟ್ಟಿನ ತೃಪ್ತಿಯನ್ನು ತಂದಿತು ಎಂದೆಣಿಸೋಣ, ಆದರೆ ತಾತ್ಕಾಲಿಕ ಅತಿಶಯ ಕೀರ್ತಿಗಾಗಿ, ಅವನು ಎಂಥ ಬೆಲೆಯನ್ನು ತೆರಬೇಕಾಗಿ ಬಂತು—ಅವನ ನಂಬಿಕೆಯ ಹಡಗನಷ್ಟ ಮತ್ತು ನಿತ್ಯ ಜೀವವನ್ನು ಕಳೆದುಕೊಳ್ಳುವ ಗಂಡಾಂತರ!—1 ತಿಮೊಥೆಯ 1:19.
ಇನ್ನೊಂದು ಪಕ್ಕದಲ್ಲಿ, ದೇವರೊಂದಿಗಿನ ಅವರ ಸಂಬಂಧಕ್ಕೆ ಧಕ್ಕೆ ತರುವ ಯಾವುದನ್ನೂ ಮಾಡಲು ನಿರಾಕರಿಸಿದವರು ಯೆಹೋವನಿಂದ ಮಹಾ ಆಶೀರ್ವಾದಗಳನ್ನು ಕೊಯ್ದರು.
ಈ ವಿಷಯದಲ್ಲಿ ಮೇಲೆ ಸೂಚಿಸಲ್ಪಟ್ಟ ಅದೇ ನಗರದಲ್ಲಿ ಗೃಹಾಲಂಕಾರ ವ್ಯಾಪಾರದ ಧಣಿಯಾಗಿದ್ದ ಯುವಕನೊಬ್ಬನ ಒಂದು ಉದಾಹರಣೆ ಇದೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದ ಕೆಲವೇ ತಿಂಗಳುಗಳೊಳಗೆ, ಅವನು ಒಂದು ಪ್ರಲೋಭಿಸುವ ನೀಡಿಕೆಯೊಂದನ್ನು ಎದುರಿಸಿದನು—30,000 ಅಮೆರಿಕನ್ ಡಾಲರುಗಳ ಜೀರ್ಣೋದ್ಧಾರಮಾಡುವ ಒಂದು ಕೆಲಸ. ಆದಾಗ್ಯೂ, ಕೆಲವು ಕಾನೂನುರೀತ್ಯವಾದ ಕಟ್ಟಡಗಳನ್ನು ರಚಿಸಲು ಕಟ್ಟಡದ ನಿಯಮಾವಳಿಗಳನ್ನು ಮತ್ತು ಕ್ರಮಗಳನ್ನು ತಪ್ಪಿಸಿ ಮಾಡುವುದು ಅದರಲ್ಲಿ ಸೇರಿತ್ತು. ಕ್ರೈಸ್ತರು ನಿಯಮ ಪಾಲಕರಾಗಿರತಕ್ಕದ್ದು ಎಂದು ಅವನು ಕಲಿತಿದುದ್ದರಿಂದ, ಆ ಕೆಲಸವನ್ನು ತೆಗೆದುಕೊಳ್ಳುವದೆಂದರೆ ದೇವರ ಮೆಚ್ಚಿಕೆಯನ್ನು ಕಳೆದುಕೊಳ್ಳುವದೆಂಬ ಅರ್ಥದಲ್ಲಿತ್ತು ಎಂದವನು ತಿಳಿದನು. (ರೋಮಾಪುರ 13:1, 2) ಜಾಗರೂಕತೆಯಿಂದ ವಿಷಯವನ್ನು ತೂಗಿನೋಡಿದ ನಂತರ, ಆ ಕೆಲಸವನ್ನು ಅವನು ನಿರಾಕರಿಸಿದನು. ಫಲಿತಾಂಶ? ನಂಬಿಕೆಯ ಈ ಕೃತ್ಯವು ಅವನ ಆತ್ಮಿಕ ಪ್ರಗತಿಯ ಒಂದು ಸಂಧಿಕಾಲವಾಗಿ ಪರಿಣಮಿಸಿತು. ಒಂದು ವರ್ಷದೊಳಗೆ ಅವನು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹಂತಕ್ಕೆ ಪ್ರಗತಿ ಮಾಡಿದನು. ಅವನು ತನ್ನ ವ್ಯಾಪಾರವನ್ನು ಮಾರಿದನು ಮತ್ತು ಆತ್ಮಿಕ ಬೆನ್ನಟ್ಟುವಿಕೆಯನ್ನು ಮಾಡಲು ಅಧಿಕ ಸಮಯವನ್ನು ನೀಡುವ ಒಂದು ಉದ್ಯೋಗವನ್ನು ಅವನು ಪಡೆದನು. ಈಗ ಅವನು ಯೆಹೋವನನ್ನು ಆನಂದ ಮತ್ತು ಹುರುಪಿನಿಂದ ಸೇವಿಸುತ್ತಾ ಇದ್ದಾನೆ.
ಈ ಇಬ್ಬರೂ ಯುವಕರು ತಮ್ಮ ವೆಚ್ಚವನ್ನು ಲೆಕ್ಕಮಾಡಿದರು. ಅವರ ಆಯ್ಕೆಯಲ್ಲಿ ವ್ಯತ್ಯಾಸವನ್ನುಂಟುಮಾಡಿದ್ದು ಯಾವುದು? ದೈವಿಕ ವಿವೇಕ! ಅದು ಹೇಗೆ? ಸಾಮಾನ್ಯವಾಗಿ ಬಾಳುವ ಪ್ರಯೋಜನಗಳನ್ನು ತರುವ ರೀತಿಯಲ್ಲಿ ಜ್ಞಾನವನ್ನು ಬಳಸುವ ಸಾಮರ್ಥ್ಯವೇ ವಿವೇಕವಾಗಿರುತ್ತದೆ, ಮತ್ತು ದೈವಿಕ ವಿವೇಕವೆಂದರೆ ನಮಗಾಗಿರುವ ದೇವರ ಉದ್ದೇಶಕ್ಕನುಸಾರ ಜ್ಞಾನವನ್ನು ಉಪಯೋಗಿಸುವದೆಂದರ್ಥವಾಗಿದೆ. ಇಬ್ಬರೂ ಯುವಕರಿಗೆ ಬೈಬಲಿನ ಸ್ವಲ್ಪ ಜ್ಞಾನವಿತ್ತಾದರೂ, ಅವರ ಅದರ ಅನ್ವಯಿಸುವಿಕೆಯು ಭಿನ್ನವಾದ ಫಲಿತಾಂಶಗಳಿಗೆ ನಡಿಸಿತು. ಜ್ಞಾನೋಕ್ತಿ ಪುಸ್ತಕವು ಹೇಳುವುದು: “ಜ್ಞಾನವು (ವಿವೇಕವು, NW ) ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ ಕೆಟ್ಟ ಮಾತಾಡುವವರಿಂದಲೂ ತಪ್ಪಿಸಿಕೊಳ್ಳುವಿ.”—ಜ್ಞಾನೋಕ್ತಿ 2:10-12.
ಪ್ರಾಮುಖ್ಯವಾದ ನಿರ್ಣಯಗಳನ್ನು ಮಾಡಲಿಕ್ಕಿರುವಾಗ ಮಾರ್ಗದರ್ಶನೆಗಾಗಿ ನೀವು ಯಾವಾಗಲೂ ತೆರಳಬಹುದಾದ ನಿಜ ವಿವೇಕದ ಉಗಮವಾಗಿ ದೇವರ ವಾಕ್ಯ, ಬೈಬಲ್ ಇದೆ. ನಿಮ್ಮ ಸ್ವಂತ ದೃಷ್ಟಿಯಲ್ಲಿ ಬುದ್ಧಿವಂತರಾಗುವದರ ಬದಲಾಗಿ, ಈ ಹಿತೋಪದೇಶವನ್ನು ಆಲಿಸಿರಿ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗವನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ನಾವು ದೀನರಾಗಿರತಕ್ಕದ್ದು ಮತ್ತು ಕಲಿಸಲ್ಪಡಲು ಇಚ್ಛೆಯುಳ್ಳವರಾಗಬೇಕು, ಇಂದು ವ್ಯಾಪಕವಾಗಿ ಪ್ರಚಲಿತದಲ್ಲಿರುವ ಸ್ವಇಚ್ಛೆಯ ಮತ್ತು ಲೋಕದ ಸ್ವತಂತ್ರ ಆತ್ಮವನ್ನು ವರ್ಜಿಸತಕ್ಕದ್ದು.
ಹೌದು, ನಾವೇನನ್ನು ಬಿತ್ತುತ್ತೇವೊ ಅದನ್ನು ಕೊಯ್ಯುವುದನ್ನು ನಾವು ತಪ್ಪಿಸಲಾರೆವು, ಮತ್ತು ನಾವು ಮಾಡುವ ನಿರ್ಣಯಗಳ ಮತ್ತು ಆಯ್ಕೆಗಳ ಪರಿಣಾಮಗಳನ್ನು ನಾವು ಅನುಭವಿಸುವಂಥದ್ದು ಕೇವಲ ಉಚಿತವೂ, ನ್ಯಾಯವೂ ಆಗಿರುತ್ತದೆ. (ಗಲಾತ್ಯ 6:7, 8) ಆದುದರಿಂದ ಪ್ರತಿಯೊಂದು ಕಾರ್ಯನಿರ್ವಹಣೆಯ ಮೊದಲು ವೆಚ್ಚವನ್ನು ಲೆಕ್ಕಿಸಿರಿ. ನಿಮ್ಮ ಆತ್ಮಿಕತೆಯನ್ನು ಯಾ ಯೆಹೋವ ದೇವರೊಂದಿಗಿನ ನಿಮ್ಮ ಸಂಬಂಧವನ್ನು ಕಳ್ಳತನಗೈಯಲು ಪ್ರಯೋಜನಕಾರಿಯೆಂದು ತೋರುವ ಯಾವುದನ್ನೂ ಅನುಮತಿಸಿದಿರ್ರಿ. ಯೋಗ್ಯ ನಿರ್ಣಯಗಳನ್ನು ಮಾಡಲಾಗುವಂತೆ ವಿವೇಕಕ್ಕಾಗಿ ಮತ್ತು ಒಳ್ಳೆಯ ನ್ಯಾಯಕ್ಕಾಗಿ ಪ್ರಾರ್ಥಿಸಿರಿ, ಯಾಕಂದರೆ ನೀವು ಮಾಡುವ ತೀರ್ಮಾನಗಳು ಜೀವ ಮತ್ತು ಮರಣದ—ನಿತ್ಯತೆಗೂ—ನಡುವಣ ವ್ಯತ್ಯಾಸದ ಅರ್ಥದಲ್ಲಿರಬಹುದು.—ಹೋಲಿಸಿರಿ ಧರ್ಮೋಪದೇಶಕಾಂಡ 30:19, 20.
[ಪುಟ 28 ರಲ್ಲಿರುವ ಚಿತ್ರಗಳು]
ಅವನು ಜೀವಿತದಲ್ಲಿ ಆತ್ಮಿಕ ಚಟುವಟಿಕೆಗಳನ್ನು ಪ್ರಥಮವಾಗಿರಿಸುವನೋ, ಯಾ ಒಂದು ಐಹಿಕ ಜೀವನೋಪಾಯವನ್ನೊ?