ನಿಮಗೆ ನೆನಪಿದೆಯೇ?
ಇತ್ತೀಚಿಗಿನ ಕಾವಲಿನಬುರುಜು ಸಂಚಿಕೆಗಳ ವಾಚನವನ್ನು ನೀವು ಗಣ್ಯಮಾಡಿದ್ದೀರೋ? ಒಳ್ಳೇದು, ಕೆಳಗಿನ ಪ್ರಶ್ನೆಗಳಿಗೆ ನೀವು ಉತ್ತರ ಕೊಡಶಕ್ತರೋ ಎಂದು ನೋಡಿರಿ.
▫ ಬ್ಯಾಬಿಲೊನಿನ ಬಂದೀವಾಸದಿಂದ ಅವರ ಹಿಂತೆರಳುವಿಕೆಯ ನಂತರ ನೆತಿನಿಮ್ ಮತ್ತು ಸೊಲೊಮೋನನ ದಾಸರ ಸಂತಾನದವರಿಗೆ ನೀಡಲ್ಪಟ್ಟ ವಿಶೇಷ ಸೇವಾ ಸುಯೋಗಗಳು ಒಳ್ಳೆಯ ರೀತಿಯಲ್ಲಿ ಯಾವುದನ್ನು ಮುನ್‌ಚಿತ್ರಿಸಬಹುದು?
ಇಂದು ಆತ್ಮಿಕ ಇಸ್ರಾಯೇಲಿನ ಉಳಿಕೆಯವರು ಕಡಿಮೆಯಾಗುತ್ತಿರುವಂತೆಯೇ, ಬೇರೆ ಕುರಿಗಳು ಹೆಚ್ಚುತ್ತಾ ಹೋಗುತ್ತಿದ್ದಾರೆ. ನೆತಿನಿಮ್ ಮತ್ತು ಸೊಲೊಮೋನನ ದಾಸರ ಸಂತಾನದವರಂತೆ, ಕುರಿಗಳಂಥವರಲ್ಲಿ ಕೆಲವರನ್ನು ಉಳಿಕೆಯವರ ಮೇಲ್ವಿಚಾರಣೆಯ ಕೆಳಗೆ ಗುರುತರವಾದ ಜವಾಬ್ದಾರಿಕೆಗಳಿಗೆ ನೇಮಿಸಲಾಗಿದೆ. (ಯೆಶಾಯ 61:5)—7⁄15, ಪುಟಗಳು 16-17.
▫ ಪ್ರವಾದಿ ಚೆಫನ್ಯನು “ಯೆಹೋವನ ಸಿಟ್ಟಿನ ದಿನದಲ್ಲಿ ಒಂದು ವೇಳೆ ಮರೆಯಾಗುವಿರಿ” ಎಂದು ಹೇಳಿರುವದರ ಅರ್ಥವೇನು? (ಚೆಫನ್ಯ 2:2, 3)
ಬರಲಿರುವ “ಮಹಾ ಸಂಕಟ” ದಲ್ಲಿ ಯಾರೊಬ್ಬನು ಸುರಕ್ಷಿತವಾಗಿ ಉಳಿಸಲ್ಪಡಬೇಕಾದರೆ, ಒಮ್ಮೆ ರಕ್ಷಿಸಲ್ಪಟ್ಟವನು ಎಂದೆಂದಿಗೂ ರಕ್ಷಿಸಲ್ಪಡುವನು ಎಂಬಂತಿರುವುದಿಲ್ಲ. (ಮತ್ತಾಯ 24:13, 21) ಆ ದಿನದಲ್ಲಿ ಮರೆಮಾಡಿಡುವುದು ಮೂರು ವಿಷಯಗಳನ್ನು ಮಾಡುತ್ತಾ ಇರುವುದರ ಮೇಲೆ ಆಧಾರಿತವಾಗಿದೆ: ಅವನು ಯೆಹೋವನನ್ನು ಹುಡುಕಬೇಕು, ನೀತಿಯನ್ನು ಹುಡುಕಬೇಕು, ಮತ್ತು ದೈನ್ಯವನ್ನು ಹುಡುಕಬೇಕು.—8⁄1, ಪುಟಗಳು 15-16.
▫ “ಅಂತ್ಯಕಾಲದಲ್ಲಿ” ಮೀಕಾಯೇಲನು “ಏಳುವನು” ಎಂಬುದು ಯಾವ ಅರ್ಥದಲ್ಲಿ? (ದಾನಿಯೇಲ 12:1, 4)
ರಾಜನಾಗಿ 1914 ರಲ್ಲಿ ಪ್ರತಿಷ್ಠಾಪಿಸಲ್ಲಟ್ಟಂದಿನಿಂದ, ಮೀಕಾಯೇಲನು ಯೆಹೋವನ ಜನರ ಪರವಾಗಿ “ನಿಂತಿರುತ್ತಾನೆ.” (NW) ಆದರೆ ಶೀಘ್ರದಲ್ಲಿಯೇ ಒಂದು ಅತಿ ವಿಶೇಷಾರ್ಥದಲ್ಲಿ “ಏಳುವನು”—ಭೂಮಿಯಿಂದ ಎಲ್ಲಾ ದುಷ್ಟತನವನ್ನು ತೆಗೆದುಹಾಕುವ ದೇವರ ಕಾರ್ಯಭಾರಿಯೋಪಾದಿ ಮತ್ತು ದೇವ ಜನರ ವಿಮೋಚಕನೋಪಾದಿ.—8⁄1, ಪುಟ 17.
▫ ನಿಜ ಸಂತೋಷವು ಯಾವುದರ ಮೇಲೆ ಆಧಾರಿತವಾಗಿದೆ?
ನಿಜ ಸಂತೋಷವು ಯೆಹೋವನೊಂದಿಗಿನ ನಮ್ಮ ಅಮೂಲ್ಯವಾದ ಸಂಬಂಧ, ಅವನ ಮೆಚ್ಚಿಕೆ, ಮತ್ತು ಅವನ ಆಶೀರ್ವಾದದ ಮೇಲೆ ಆಧಾರಿತವಾಗಿರುತ್ತದೆ. (ಜ್ಞಾನೋಕ್ತಿ 10:22) ಆದಕಾರಣ, ಯೆಹೋವನಿಗೆ ವಿಧೇಯರಾಗುವ ಮತ್ತು ಅವನ ಚಿತ್ತಕ್ಕೆ ಆನಂದಭರಿತರಾಗಿ ಅಧೀನರಾಗುವುದರ ಹೊರತಾಗಿ ನಿಜ ಸಂತೋಷವನ್ನು ಪಡೆಯಸಾಧ್ಯವಿಲ್ಲ. (ಲೂಕ 11:28)—8⁄15, ಪುಟಗಳು 16, 19.
▫ ಯೇಸುವು ಅವನ ವಾಸಿಮಾಡುವಿಕೆಯ ಅದ್ಭುತಗಳನ್ನು ನಡಿಸಿದಾಗ, ವಾಸಿಯಾದವರ ವತಿಯಿಂದ ನಂಬಿಕೆಯು ಅವಶ್ಯವಾಗಿತ್ತೋ?
ವಾಸಿಯಾಗಲ್ಪಡುವಂತೆ ಯೇಸುವಿನ ಬಳಿಗೆ ಬರಲು ಅನೇಕರ ವತಿಯಿಂದ ಕೆಲವೊಂದು ಪ್ರಮಾಣದ ನಂಬಿಕೆಯು ಬೇಕಾಗಿತ್ತು. (ಮತ್ತಾಯ 8:13) ಆದಾಗ್ಯೂ, ಯೇಸುವು ಯಾರೆಂದು ತಿಳಿಯದಿದ್ದ ಒಬ್ಬ ಕುಂಟನನ್ನು ಅವನು ಗುಣಪಡಿಸಿದಂತೆ, ಅವನ ಅದ್ಭುತಗಳನ್ನು ನಡಿಸಲು ಯೇಸುವಿಗೆ ನಂಬಿಕೆಯ ಅರಿಕೆಯನ್ನು ಮಾಡುವ ಅಗತ್ಯವೇನೂ ಇರಲಿಲ್ಲ. (ಯೋಹಾನ 5:5-13) ಯೇಸುವಿನ ಶತ್ರುಗಳ ಗುಂಪಿನೊಂದಿಗಿದ್ದ ಮಹಾ ಯಾಜಕನ ಸೇವಕನ ಕತ್ತರಿಸಲ್ಪಟ್ಟ ಕಿವಿಯನ್ನು ಸಹ ಯೇಸುವು ಪುನಃ ಸರಿಪಡಿಸಿದನು. (ಲೂಕ 22:50, 51) ಈ ಅದ್ಭುತಗಳು ದೇವರ ಪವಿತ್ರಾತ್ಮದ ಶಕಿಯ್ತಿಂದ ನಡಿಸಲ್ಪಟ್ಟವು, ರೋಗಿಯಾಗಿದವ್ದನ ನಂಬಿಕೆಯ ಕಾರಣದಿಂದಲ್ಲ.—9⁄1, ಪುಟ 3.
▫ ಮತ್ತಾಯ 13:47-50 ರಲ್ಲಿರುವ ಯೇಸುವಿನ ದೃಷ್ಟಾಂತದಲ್ಲಿ ಹೇಳಲ್ಪಟ್ಟ “ಬಲೆ” ಯಿಂದ ಏನು ಪ್ರತಿನಿಧಿಸಲ್ಪಟ್ಟಿದೆ?
“ಬಲೆ” ಯು ದೇವರ ಸಭೆಯೆಂದು ಹೇಳಿಕೊಳ್ಳುವ ಮತ್ತು ಮೀನುಗಳನ್ನು ಒಟ್ಟುಗೂಡಿಸುವ ಒಂದು ಐಹಿಕ ಉಪಕರಣವನ್ನು ಪ್ರತಿನಿಧಿಸುತ್ತದೆ. ಅದರಲ್ಲಿ ಕ್ರೈಸ್ತ ಪ್ರಪಂಚ ಮತ್ತು ನಿಜ ಅಭಿಷಿಕ್ತ ಕ್ರೈಸ್ತರ ಸಭೆ ಎರಡೂ ಸೇರಿರುತ್ತವೆ. ಎರಡನೆಯದು ಮಾತ್ರ ಮತ್ತಾಯ 13:49 ಕ್ಕೆ ಹೊಂದಿಕೆಯಲ್ಲಿ, ದೇವದೂತರ ಅದೃಶ್ಯ ಮಾರ್ಗದರ್ಶನೆಯ ಕೆಳಗೆ ‘ಒಳ್ಳೆಯ ಮೀನು’ ಗಳನ್ನು ಒಟ್ಟುಗೂಡಿಸುವುದನ್ನು ಮುಂದುವರಿಸಿದೆ.—9⁄15, ಪುಟ 20.
▫ ಅವರ ನೇಮಕಗಳನ್ನು ನಿರ್ವಹಿಸಲು ಇಸ್ರಾಯೇಲಿನ ನ್ಯಾಯಾಧಿಪತಿಗಳು ಅನ್ವಯಿಸಬೇಕಾಗಿದ್ದ ಕೆಲವು ಸೂತ್ರಗಳು ಯಾವುವು?
ಶ್ರೀಮಂತರಿಗೆ ಮತ್ತು ಬಡವರಿಗೆ ಸರಿಸಮಾನ ನ್ಯಾಯ, ಕಟ್ಟುನಿಟ್ಟಿನ ನಿಷ್ಪಕ್ಷಪಾತ, ಮತ್ತು ಲಂಚವನ್ನು ಸ್ವೀಕರಿಸದೆ ಇರುವದು. (ಯಾಜಕಕಾಂಡ 19:15; ಧರ್ಮೋಪದೇಶಕಾಂಡ 16:19)—10⁄1, ಪುಟ 13.
▫ ನ್ಯಾಯವಿಚಾರಣೆಗಳ ಮೂಲಕ ಹಿರಿಯರು ಯಾವುದನ್ನು ಸಾಧಿಸಲು ಪ್ರಯತ್ನಿಸತಕ್ಕದ್ದು?
ಮೊಕದ್ದಮೆಯ ನಿಜಾಂಶಗಳನ್ನು ಕಂಡುಹಿಡಿಯುವದು ಒಂದು ಧ್ಯೇಯವಾಗಿದೆ, ಇದನ್ನು ಪ್ರೀತಿಯಿಂದ ಮಾಡಬೇಕು. ಒಮ್ಮೆ ನಿಜಾಂಶಗಳು ತಿಳಿದಾದ ಮೇಲೆ, ಸಭೆಯನ್ನು ಸಂರಕ್ಷಿಸಲು ಮತ್ತು ಅದರೊಳಗೆ ಯೆಹೋವನ ಉನ್ನತ ಮಟ್ಟಗಳನ್ನು ಕಾಪಾಡಲು ಮತ್ತು ಅವನ ಆತ್ಮವು ಸರಾಗವಾಗಿ ಹರಿಯಲು ಏನು ಆವಶ್ಯಕವೂ ಅದನ್ನು ಹಿರಿಯರು ಮಾಡುವರು. ಆದಾಗ್ಯೂ, ಒಂದು ವೇಳೆ ಸಾಧ್ಯವಾಗುವಲ್ಲಿ, ನ್ಯಾಯವಿಚಾರಣೆಯು ಅಪಾಯಕ್ಕೊಡ್ಡಲ್ಪಟ್ಟ ಪಾಪಿಯನ್ನು ರಕ್ಷಿಸಲಿಕ್ಕಾಗಿಯೂ ಆಗಿರುತ್ತದೆ. (ಹೋಲಿಸಿರಿ ಲೂಕ 15:8-10.)—10⁄1, ಪುಟ 18-19.
▫ ನಿಷಿದ್ಧ ಲೈಂಗಿಕತೆಗೆ ಸಂಬಂಧಿಸಿದ ಭ್ರಾಂತಿಗಳು ಯಾಕೆ ಅಷ್ಟು ಹಾನಿಕರವಾಗಿವೆ?
ಮತ್ತಾಯ 5:27, 28 ರಲ್ಲಿರುವ ಯೇಸುವಿನ ಮಾತುಗಳ ನೋಟದಲ್ಲಿ, ನಿಷಿದ್ಧ ಲೈಂಗಿಕತೆಯ ಭ್ರಾಂತಿಗಳಲ್ಲಿ ಅವಿರತವಾಗಿ ಲೋಲುಪರಾಗಿರುವವರೆಲ್ಲರೂ ಅವರ ಹೃದಯಗಳಲ್ಲಿ ವ್ಯಭಿಚಾರವನ್ನು ಗೈಯುವ ದೋಷಿಗಳಾಗಿರುತ್ತಾರೆ. ಮತ್ತು ಅಂಥ ಭ್ರಾಂತಿಗಳು ಅನೈತಿಕತೆಗೆ ನಡಿಸಬಹುದಾದ ನಿಜ ಅಪಾಯವು ಅಲ್ಲಿದೆ.—10⁄15, ಪುಟ 15.
▫ ನಮ್ಮ ಶೋಧನೆಗಳನ್ನು ಯೋಗ್ಯವಾಗಿ ದೃಷ್ಟಿಸಲು ಮತ್ತು ಅವುಗಳನ್ನು ಸಹಿಸಲು ಯಾವ ವಿಧಗಳಲ್ಲಿ ಯೆಹೋವನು ನಮಗೆ ಸಹಾಯವನ್ನೀಯಬಹುದು?
ಸಹ ವಿಶ್ವಾಸಿಗಳಿಂದ ಯಾ ಬೈಬಲ್ ಅಧ್ಯಯನದ ಸಮಯದಲ್ಲಿ ಶಾಸ್ತ್ರವಚನಗಳು ನಮ್ಮ ಗಮನಕ್ಕೆ ತರಲ್ಪಡಬಹುದು. ದೇವರ ಅನುಗ್ರಹದ ಮೂಲಕ ಘಟನೆಗಳು ನಿಯೋಜಿಸಲ್ಪಟ್ಟು, ನಾವೇನು ಮಾಡತಕ್ಕದ್ದು ಎಂಬುದನ್ನು ಕಾಣುವಂತೆ ನಮಗೆ ಸಹಾಯವಾಗಬಹುದು. ನಮ್ಮನ್ನು ಮಾರ್ಗದರ್ಶಿಸುವದರಲ್ಲಿ ದೇವದೂತರು ಪಾಲಿಗರಾಗಬಹುದು, ಯಾ ಪವಿತ್ರಾತ್ಮನಿಂದ ನಾವು ಮಾರ್ಗದರ್ಶನೆಯನ್ನು ಪಡೆಯಬಹುದು. (ಇಬ್ರಿಯ 1:14)—10⁄15, ಪುಟ 21.
▫ ಸಾ. ಶ. 325 ರ ನೈಸೀಯದ ಕೌನ್ಸಿಲ್ ತ್ರಯೇಕತ್ವ ಬೋಧನೆಯನ್ನು ಸ್ಥಾಪಿಸಿತೊ, ಯಾ ಸ್ಥಿರೀಕರಿಸಿತೊ?
ಇಲ್ಲ, ನೈಸೀಯದ ಕೌನ್ಸಿಲ್ “ಒಂದೇ ದ್ರವ್ಯದವರು” ಆಗಿರುವದರಿಂದ, ತಂದೆಯೊಂದಿಗೆ ಮಗನನ್ನು ಸರಿಸಮಾನ ಮಾಡಿತು ಅಷ್ಟೇ. ಪ್ರತಿಯೊಂದು ತಂದೆ, ಮಗ, ಮತ್ತು ಪವಿತ್ರಾತ್ಮವು ನಿಜ ದೇವರು—ಒಂದು ದೇವರಲ್ಲಿ ಮೂವರು—ಎಂಬ ಕಲ್ಪನೆಯು ಆ ಕೌನ್ಸಿಲ್‌ನಲಿಯ್ಲಾಗಲಿ ಯಾ ಇನ್ನೂ ಆದಿಯ ಚರ್ಚ್ ಪ್ರಮುಖರಾಗಲಿ ವಿಕಸಿಸಲಿಲ್ಲ.—11⁄1, ಪುಟ 20.
▫ ಅವನು ಜೀವಿಸಿದ್ದ ಸಮಯದಲ್ಲಿ ಯೆಹೋವನಿಗೆ ನಂಬಿಗಸ್ತನಾಗಿದ್ದ ಮನುಷ್ಯನು ಯೋಬನು ಮಾತ್ರವೋ? (ಯೋಬ 1:8)
ಇಲ್ಲ, ಯೋಬನ ಪುಸ್ತಕವು ಸ್ವತಃ ಸೂಚಿಸುವಂತೆ ಎಲೀಹು ದೇವರಿಂದ ಸ್ವೀಕೃತನಾಗಿದ್ದನು. ಯೋಬನು ಜೀವಿಸುವಂಥ ಸಮಯದಲ್ಲಿ ಐಗುಪ್ತದಲ್ಲಿ ಅನೇಕ ಇಸ್ರಾಯೇಲ್ಯರು ಕೂಡ ಇದ್ದರು, ಮತ್ತು ಅವರೆಲ್ಲರೂ ಅಪನಂಬಿಗಸ್ತರಾಗಿದ್ದರು ಮತ್ತು ದೇವರಿಗೆ ಸ್ವೀಕೃತರಾಗಿರಲಿಲ್ಲವೆಂದು ಯೋಚಿಸಲು ಅಲ್ಲಿ ಯಾವ ಕಾರಣವೂ ಇಲ್ಲ.—11⁄1, ಪುಟ 31.