ಕ್ರೈಸ್ತಪ್ರಪಂಚ ಮತ್ತು ಗುಲಾಮ ವ್ಯಾಪಾರ
ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟ್ ಮಿಷನೆರಿಗಳು 19 ನೆಯ ಶತಮಾನದಲ್ಲಿ ಗುಲಾಮ ವ್ಯಾಪಾರಕ್ಕೆ ಐಕ್ಯದಿಂದ ವಿರೋಧ ತೋರಿಸಿದರು. ಆದರೂ ಯಾವಾಗಲೂ ಇದು ಅವರ ನೆಲೆಯಾಗಿರಲಿಲ್ಲ. ಹಿಂದಿನ ಶತಮಾನಗಳಲ್ಲಿ ಅವರು ಗುಲಾಮ ವ್ಯಾಪಾರವನ್ನು, ಅದು ಭಯಂಕರ ಕಷ್ಟಾನುಭವವನ್ನು ಹುಟ್ಟಿಸಿದರೂ, ಅದಕ್ಕೆ ಒಪ್ಪಿ ಅದರಲ್ಲಿ ಭಾಗವಹಿಸಿದ್ದರು.
ಹದಿನೈದನೆಯ ಶತಮಾನದಲ್ಲಿ ಕೇಪ್ ಆಫ್ ಗುಡ್ ಹೋಪ್ನ ಸುತ್ತಲಿನ ಸಮುದ್ರ ವ್ಯಾಪಾರ ಮಾರ್ಗ ಕಂಡುಹಿಡಿಯಲ್ಪಟ್ಟಾಗ ಆಫ್ರಿಕದ ಪೂರ್ವ ಮತ್ತು ಪಶ್ಚಿಮ ಕರಾವಳಿಗೆ ಮಿಷನೆರಿಗಳು ಬರತೊಡಗಿದರು. ಆದರೆ ಮೂರು ಶತಕಗಳು ಕಳೆದ ಮೇಲೆ, ಆಫ್ರಿಕದಲ್ಲಿ ಮಿಷನೆರಿ ಕೆಲಸ ಅಧಿಕಾಂಶ ಅಂತ್ಯಗೊಂಡಿತ್ತು. ಮತಾಂತರಿತರಾಗಿದ್ದ ಆಫ್ರಿಕನ್ ಜನರು ಕೊಂಚ. ಈ ವೈಫಲ್ಯಕ್ಕೆ ಒಂದು ಕಾರಣವು ಗುಲಾಮ ವ್ಯಾಪಾರದಲ್ಲಿ ಕ್ರೈಸ್ತಪ್ರಪಂಚದ ಸಿಕ್ಕಿಕೊಳ್ಳುವಿಕೆಯೆ. ದ ಪ್ಲಾಂಟಿಂಗ್ ಆಫ್ ಕ್ರಿಶ್ಚಿಆ್ಯನಿಟಿ ಇನ್ ಆಫ್ರಿಕ ಎಂಬ ಪುಸ್ತಕದಲ್ಲಿ ಪಿ. ಗ್ರೋವ್ಸ್ ವಿವರಿಸುವುದು:
“ಗುಲಾಮ ವ್ಯಾಪಾರದ ಕ್ರಿಯಾಶೀಲ ಬೆನ್ನಟ್ಟುವಿಕೆ ಕ್ರೈಸ್ತ ಮಿಷನ್ಗಳ ಜೊತೆಯಾಗಿ ಹೋಯಿತು ಮತ್ತು ಇದು ಅನುಚಿತವೆಂದು ಎಣಿಸಲ್ಪಡಲಿಲ್ಲ. ಆ ಮಿಷನಿಗೆ ತನ್ನದೇ ಆದ ಗುಲಾಮರಿದ್ದರು; ಲೋಅಂಡದ [ಈಗ ಲುಆಂಡ್, ಅಂಗೋಲದ ರಾಜಧಾನಿ] ಒಂದು ಜೆಸಿಟ್ವ್ ಸಂನ್ಯಾಸಿ ಮಠಕ್ಕೆ 12,000 ದಾಸರ ಉಂಬಳಿಯಿತ್ತು. ಅಂಗೋಲ ಮತ್ತು ಬ್ರೆಸೀಲ್ಗಳ ಮಧ್ಯೆ ಗುಲಾಮ ವ್ಯಾಪಾರ ಬೆಳೆದಾಗ ಲೋಅಂಡದ ಬಿಷಪರು ಬಂದರಿನ ಪಕ್ಕದಲ್ಲಿ ಶಿಲಾಸನದಲ್ಲಿ ಕುಳಿತು ಬಿಟ್ಟು ಹೋಗುತ್ತಿದ್ದ ಸರಕಿನ ಮೇಲೆ ತಮ್ಮ ಸ್ಥಾನದ ಆಶೀರ್ವಾದಗಳನ್ನು ದಯಪಾಲಿಸುತ್ತಾ, ಜೀವನದ ಉಗ್ರ ಪರೀಕ್ಷೆ ಮುಗಿದಾಗ ಭಾವೀ ಪರಮಾನಂದವನ್ನು ಅವರಿಗೆ ವಾಗ್ದಾನಿಸಿದರು.”
ಜೆಸಿಟ್ವ್ ಮಿಷನೆರಿಗಳು “ನೀಗ್ರೊ ಗುಲಾಮಗಿರಿಯ ವಿರುದ್ಧ ಆಕ್ಷೇಪ”ವನ್ನೇ ಎತ್ತಲಿಲ್ಲ ಎಂದು ದೃಢೀಕರಿಸುತ್ತಾರೆ ಆರ್. ಬಾಕ್ಸರ್ ಎಂಬವರು, ಆಫ್ರಿಕ ಫ್ರಮ್ ಅರ್ಲಿ ಟೈಮ್ಸ್ ಟು 1800 ಎಂಬ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಂತೆ. ಲುಆಂಡದಲ್ಲಿ, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ವಸಾಹತುಗಳಿಗೆ ಹೋಗಲು ಹಡಗು ಹತ್ತುವ ಮೊದಲು, ಬಾಕ್ಸರ್ ಹೇಳುವಂತೆ, “ಅವರನ್ನು ಸಮೀಪದ ಒಂದು ಚರ್ಚಿಗೆ ಕರೆದೊಯ್ದು . . . ಒಬ್ಬ ಪ್ಯಾರಿಶ್ ಪಾದ್ರಿಯಿಂದ ಒಂದು ಸಲಕ್ಕೆ ನೂರು ಜನರ ಗುಂಪಿನಂತೆ ದೀಕ್ಷಾಸ್ನಾನ ಮಾಡಿಸಿದರು.” ಆ ಬಳಿಕ, “ಪವಿತ್ರ ಜಲ” ಚಿಮುಕಿಸಿದ ಮೇಲೆ ಗುಲಾಮರಿಗೆ ಹೀಗೆ ಹೇಳಲಾಗುತ್ತಿತ್ತು: “ನೋಡಿ, ನೀವು ಆಗಲೇ ದೇವರ ಮಕ್ಕಳು; ನೀವೀಗ ಸ್ಪ್ಯಾನಿಯರ್ಡರ ದೇಶಕ್ಕೆ ಹೋಗಿ ಅಲ್ಲಿ ನಂಬಿಕೆಗೆ ಸಂಬಂಧವಾದ ಸಂಗತಿಗಳನ್ನು ಕಲಿಯುವಿರಿ. ನೀವು ಎಲ್ಲಿಂದ ಬಂದಿರಿ ಎಂದು ಇನ್ನು ಮುಂದೆ ನೀವು ಯೋಚಿಸುವುದೇ ಬೇಡ . . . ಸದುದ್ದೇಶದಿಂದ ಹೋಗಿರಿ.”
ಹೌದು, ಗುಲಾಮ ವ್ಯಾಪಾರವನ್ನು ಒಪ್ಪಿದವರಲ್ಲಿ ಕ್ರೈಸ್ತಪ್ರಪಂಚದ ಮಿಷನೆರಿಗಳು ಮಾತ್ರ ಇರಲಿಲ್ಲವೆಂಬುದು ನಿಶ್ಚಯ. ಜೊಫ್ರಿ ಮೋರ್ಹಾಸ್ ತನ್ನ ದ ಮಿಷನೆರೀಸ್ ಎಂಬ ಪುಸ್ತಕದಲ್ಲಿ ವಿವರಿಸುವುದು: “ಹದಿನೆಂಟನೆಯ ಶತಕದ ಅಪರಾರ್ಧದ ವರೆಗೆ ಅದು ಲೋಕದ ಅಧಿಕಾಂಶ ಜನರ ಮನೋಭಾವವಾಗಿತ್ತು.” ಹದಿನೆಂಟನೆಯ ಶತಮಾನದ ಪ್ರಾಟೆಸ್ಟಂಟ್ ಮಿಷನೆರಿ, ಥಾಮಸ್ ಥಾಮ್ಸನ್ ಬರೆದ ದಿ ಆಫ್ರಿಕನ್ ಟ್ರೇಡ್ ಫಾರ್ ನೀಗ್ರೋ ಸ್ಲೇವ್ಸ್ ಷೋನ್ ಟು ಬಿ ಕನ್ಸಿಸ್ಟೆಂಟ್ ವಿತ್ ದ ಪ್ರಿನ್ಸಿಪ್ಲ್ಸ್ ಆಫ್ ಹ್ಯುಮ್ಯಾನಿಟಿ ಆ್ಯಂಡ್ ವಿತ್ ದ ಲಾಸ್ ಆಫ್ ರಿವೀಲ್ಡ್ ರಿಲಿಜನ್ ಎಂಬ ಈ ವ್ಯಾಪಾರವನ್ನು ಸಮರ್ಥಿಸುವ ಒಂದು ಟ್ರ್ಯಾಕ್ಟನ್ನು ಮೋರ್ಹಾಸ್ ಉದ್ಧರಿಸುತ್ತಾರೆ.
ಆದರೂ, ಕ್ರೈಸ್ತಪ್ರಪಂಚವು ಇದರಲ್ಲಿ ಭಾಗವಹಿಸಿದರ್ದಿಂದಾಗಿ ಲಕ್ಷಗಟ್ಟಲೆ ಜನ ಆಫ್ರಿಕನ್ ಗುಲಾಮರಿಗಾದ ಭಯಂಕರ ಯಾತನೆಗೆ ಜವಾಬ್ದಾರಿಯಲ್ಲಿ ಕ್ರೈಸ್ತಪ್ರಪಂಚಕ್ಕೆ ಪಾಲಿದೆ. ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಆಫ್ರಿಕದಿಂದ ಹೊರಡುವ ಮೊದಲು ಸತ್ತವರನ್ನು ಬಿಟ್ಟು, ವೆಸ್ಟ್ ಇಂಡೀಸಿಗೆ ಪ್ರಯಾಣಿಸುವಾಗ 12.5 ಪ್ರತಿಶತ ಸತ್ತರು; ಜಮೇಕದಲ್ಲಿ ಬಂದರಿನಲ್ಲಿ ತಂಗಿರುವಾಗ ಯಾ ಅವರ ಮಾರಾಟಕ್ಕೆ ಮೊದಲು 4.5 ಪ್ರತಿಶತ ಸತ್ತರು, ಮತ್ತು ಹೊರಟು ಬಂದ ಜನರ ಆದಿಸಂಖ್ಯೆಯ ಮೂರರಲ್ಲಿ ಒಂದಂಶ ‘ಹದಮಾಡುವಾಗ’ ಸತ್ತರು.”
ಯೆಹೋವ ದೇವರು ಶೀಘ್ರವೇ ಕ್ರೈಸ್ತಪ್ರಪಂಚವನ್ನೂ ಸುಳ್ಳುಧರ್ಮದ ಇತರ ರೂಪಗಳನ್ನೂ, ಅವರು ಗೈದಿರುವ ಭಯಂಕರ ರಕ್ತಾಪರಾಧವನ್ನು ಗಣನೆಗೆ ತೆಗೆದುಕೊಳ್ಳದಿದ್ದುದಕ್ಕಾಗಿ ಮತ್ತು ಅದನ್ನು ಆಶೀರ್ವದಿಸಿದ್ದಕ್ಕಾಗಿ ಲೆಕ್ಕ ಕೇಳಲಿರುವನು.
[ಪುಟ 8ರಲ್ಲಿರುವಚಿತ್ರ]
(For fully formatted text, see publication.)
ಗುಲಾಮ ಹಡಗಿನಲ್ಲಿ ಗುಲಾಮರನ್ನು ತುಂಬಿಸಿರುವುದನ್ನು ತೋರಿಸುವ ರೇಖಾಚಿತ್ರ
[ಕೃಪೆ]
Schomburg Center for Research in Black Culture / The New York Public Library / Astor, Lenox and Tilden Foundations