ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಯೇಸುವಿನ ಕುರಿಗಳು ಅವನ ಸರ್ವವನ್ನು ಆಲಿಸುತ್ತವೆ
ಸಾರುವ ಕೆಲಸವು ಭೂಮಿಯ ಎಲ್ಲ ಬಾಗಗಳಿಗೆ ವಿಸ್ತರಿಸುವ ಸಮಯದಲ್ಲಿ, ಯೆಹೋವನು ತನ್ನ ದೇವದೂತರ ಮೂಲಕ ತನ್ನ ಸೇವಕರನ್ನು ಕುರಿಸದೃಶರ ಬಳಿ ನಡಿಸುತ್ತಾನೆ. ಅವರು ಯೇಸುವಿನ ಸರ್ವವನ್ನು ಕೇಳಿ, ನಿತ್ಯಜೀವದ ದೃಷ್ಟಿಯುಳ್ಳವರಾಗಿ ಅವನನ್ನು ಸೇವಿಸಲು ಕಲಿಯುತ್ತಾರೆ. ಯೇಸು, ಯೋಹಾನ 10:27, 28 ರಲ್ಲಿ ಹೇಳಿದ್ದು: “ನನ್ನ ಕುರಿಗಳು ನನ್ನ ಸರ್ವಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ.” ಮಡಗಾಸ್ಕರಿನ ಪ್ರಾಮಾಣಿಕಹೃದಯಿಗಳು ಯೇಸುವಿನ ಸರ್ವವನ್ನು ಹೇಗೆ ಕೇಳಿದರೆಂದು ಗಮನಿಸಿರಿ.
ಯೆಹೋವನ ಸಾಕ್ಷಿಗಳಲ್ಲೊಬ್ಬನು ತನ್ನ ರೋಗಿಯಾದ ತಂದೆಯನ್ನು ಪರೀಕ್ಷಿಸಲು ಬಂದ ವೈದ್ಯನಿಗೆ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಮತ್ತು ಯೂಅರ್ ಯೂತ್—ಗೆಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್ ಎಂಬ ಪುಸ್ತಕಗಳ ಪ್ರತಿಗಳನ್ನು ಕೊಟ್ಟನು.
ವೈದ್ಯನು ಪ್ರಾಟೆಸ್ಟಂಟನೂ ಸಾಕ್ಷಿಗಳ ತೀವ್ರ ವಿರೋಧಿಯೂ ಆಗಿದ್ದರೂ ಅವನು ಪುಸ್ತಕವನ್ನು ಓದಿ ತನ್ನ ಸ್ವಂತ ಬೈಬಲಿನಲ್ಲಿ ವಚನಗಳನ್ನು ಪರೀಕ್ಷಿಸಿದನು. ಕ್ಯಾಥೊಲಿಕಳೂ ಡಾಕ್ಟರಳೂ ಆಗಿದ್ದ ಅವನ ಪತ್ನಿ ಯೂತ್ ಪುಸ್ತಕವನ್ನು, ಅದು ಅವಳಿಗಾಗಿಯೇ ವಿಶೇಷವಾಗಿ ಬರೆಯಲ್ಪಟ್ಟಿದೆಯೋ ಎಂಬಂತೆ ಕಂಡದರ್ದಿಂದ, ಅನೇಕ ಬಾರಿ ಓದಿದಳು. ಸೊಸೈಟಿಯ 1914 ರ ಗಮನಾರ್ಹತೆಯ ಕುರಿತ ಬೈಬಲಾಧಾರಿತ ವಿವರಣೆ ಅವರಿಬ್ಬರ ಮನವನ್ನೂ ಮುಟ್ಟಿತು. ಪುಸ್ತಕಗಳನ್ನು ಕೊಟ್ಟಿದ್ದ ಸಾಕ್ಷಿಯನ್ನು ಗಂಡನು ಸಂಪರ್ಕಿಸಿದನು. ಸಾಕ್ಷಿಯು ಅವನಿಗೆ, ಲೈಫ್—ಹೌ ಡಿಡ್ ಇಟ್ ಗೆಟ್ ಹಿಯರ್? ಬೈ ಎವೊಲ್ಯೂಷನ್ ಆರ್ ಬೈ ಕ್ರಿಯೇಷನ್? ಎಂಬ ಪುಸ್ತಕವನ್ನು ಕೊಟ್ಟು, ಅವರ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ ಅವನನ್ನೂ ಅವನ ಪತ್ನಿಯನ್ನೂ ಭೇಟಿ ಮಾಡಲು ಏರ್ಪಡಿಸಿದನು. ಅವನು ಭೇಟಿಕೊಟ್ಟಾಗ, ಆ ದಂಪತಿಗಳೊಂದಿಗೆ ಮತ್ತು ಅವರ ಮೂವರು ಮಕ್ಕಳೊಂದಿಗೆ ಒಂದು ಕ್ರಮದ ಬೈಬಲ್ ಅಧ್ಯಯನವನ್ನು ಆರಂಭಿಸಿದನು. ಬೈಬಲ್ ತಿಳಿವಳಿಕೆಯಲ್ಲಿ ಶೀಘ್ರ ಪ್ರಗತಿಯಾಯಿತು.
ಮೊದಲನೆಯ ಅಧ್ಯಯನವಾದ ಬಳಿಕ, ಇಡೀ ಕುಟುಂಬವು ರಾಜ್ಯ ಸಭಾಗೃಹಕ್ಕೆ ಹಾಜರಾಗಲು ಪ್ರಾರಂಭಿಸಿ, ಬೇಗನೆ ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ಸೇರಿದರು. ಆ ಮಕ್ಕಳ ನಡತೆ ತುಂಬ ಅಭಿವೃದ್ಧಿಯಾಯಿತು. ಜನ್ಮದಿನ ಮತ್ತು ಇತರ ಧಾರ್ಮಿಕ ರಜಾದಿನಗಳ ಆಚರಣೆ ಕ್ರಿಸ್ತೀಯವಲ್ಲ ಎಂದು ಅವರ ಬೈಬಲ್ ಅಧ್ಯಯನದಿಂದ ಅವರಿಗೆ ತಿಳಿದುಬಂದುದರಿಂದ, ಅವುಗಳ ಆಚರಣೆಯನ್ನು ಅವರು ನಿಲ್ಲಿಸಿದರು. ಗಂಡನು ಒಬ್ಬ ಸಂಬಂಧಿಗೆ ತನ್ನ ರಕ್ತವನ್ನು ಕೊಡಲು, ಬೈಬಲ್ ಅಧ್ಯಯನದಲ್ಲಿ ಆ ವಿಷಯದ ಚರ್ಚೆ ನಡೆದಿರದಿದ್ದರೂ ನಿರಾಕರಿಸಿದನು. ಬೇಗನೆ ಅವನ ಬಟ್ಟೆಯ ಕಪಾಟಿನಿಂದ ಅವನ ಕರಾಟೆ ಸಮವಸ್ತ್ರ ಕಾಣದೆ ಹೋಯಿತು. ಅವನು ಅದನ್ನು, ಅದರಿಂದ ಮಕ್ಕಳಿಗೆ ಉಡುಪು ಮಾಡಲಿಕ್ಕಾಗಿ ದರ್ಜಿಯ ಬಳಿ ಕಳುಹಿಸಿದನು. ಜಾತಕ ಸಂಬಂಧವಾದ ಅವನ ಎಲ್ಲ ಪುಸ್ತಕಗಳನ್ನು ಅವನು ಸುಟ್ಟುಹಾಕಿದನು. ಅವನು ಅಭ್ಯಾಸವನ್ನು ಆರಂಭಿಸಿ ಕೇವಲ ಮೂರು ತಿಂಗಳುಗಳಲ್ಲಿ, ಗಂಡನೂ ಹೆಂಡತಿಯೂ ತಮ್ಮ ತಮ್ಮ ಚರ್ಚುಗಳಿಗೆ ರಾಜೀನಾಮೆ ಕೊಟ್ಟು, ಸಾರುವ ಕೆಲಸದಲ್ಲಿ ಭಾಗವಹಿಸಲು ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಅವರಿಗೆ ಈಗ ದೀಕ್ಷಾಸ್ನಾನವಾಗಿದೆ.
▫ ಥಾಯ್ಲೆಂಡಿನ ಒಬ್ಬ ಮಹಿಳೆ ಸತ್ಯವನ್ನು ಹುಡುಕುತ್ತಿದ್ದಳು. ಅವಳು ಬೌದ್ಧಳಾಗಿದ್ದರೂ, ಆ ಧರ್ಮದಲ್ಲಿ ಧಾರಾಳ ಕಪಟಾಚಾರ ಮತ್ತು ಲೋಭವನ್ನು ಕಂಡದರ್ದಿಂದ ಅದರಲ್ಲಿ ಶ್ರದ್ಧೆಯಿಂದಿರಲಿಲ್ಲ. ಇದಲ್ಲದೆ, ಜುಗುಪ್ಸೆ ಹುಟ್ಟಿಸುವ ಅನೇಕ ಆಚಾರಗಳು ಅದರಲಿದ್ಲವ್ದು. ಇವೆಲ್ಲವುಗಳ ವಿಷಯ ಅವಳಿಗೆ ಬೇಸರ ಬಂದು ಹೋಗಿತ್ತು.
ಆಗ ಒಬ್ಬ ನೆರೆಯಾಕೆ, ಅವಳು ಕ್ರೈಸ್ತರ ಬಳಿಗೆ ಹೋಗುವಂತೆ ಶಿಫಾರಸು ಮಾಡಿ ಒಂದು ಪೆಂಟೆಕಾಸ್ಟ್ ಚರ್ಚಿಗೆ ಅವಳನ್ನು ಕರೆದುಕೊಂಡು ಹೋದಳು. ಆದರೆ ಆರಾಧನೆಯ ಸಮಯದಲ್ಲಿ, ಹಾಜರಿದ್ದ ಎಲ್ಲರೂ ಗಟ್ಟಿ ಶಬ್ದದಿಂದ ಪ್ರಾರ್ಥಿಸುವಾಗ ಮಾಡಿದ ಸದ್ದಿನ ಕಾರಣ, ಆ ಮಹಿಳೆಗೆ ಎದ್ದು ಮನೆಗೆ ಹೋಗುವ ಬಲವಾದ ಮನಸ್ಸಾಯಿತು. ಆ ಚರ್ಚಿಗೆ ಅವಳು ಹಾಜರಾದದ್ದು ಅದೇ ಕೊನೆಯ ಸಲ.
ಅನಂತರ, ಅವಳು ಒಂದು ರೋಮನ್ ಕ್ಯಾಥೊಲಿಕ್ ಚರ್ಚಿಗೆ ಹೋದಳು. ಆದರೆ, ಅನೇಕ ಬಾರಿ ಹಾಜರಾದ ಬಳಿಕ, ಕಪಟಾಚರಣೆ, ಲೋಭ ಹಾಗೂ ಪಾದ್ರಿಗಳ ಭೋಗಾಸಕ್ತ ಜೀವನ ಶೈಲಿ ಅವಳ ಗಮನಕ್ಕೆ ಪುನಃ ಬಂತು. ಜುಗುಪ್ಸೆ ಬಂದು, ಅಲ್ಲಿಗೆ ಹೋಗುವುದನ್ನು ಸಹ ನಿಲ್ಲಿಸಿದಳು. ಅವಳು ಚರ್ಚನ್ನು ಬಿಟ್ಟದ್ದೇಕೆಂದು ತಿಳಿಯಲು ಪಾದ್ರಿ ಕುತೂಹಲಿಯಾದನು. ಕಾರಣ ತಿಳಿದ ಬಳಿಕ ಅವನು ಅಣಕಿಸುವ ರೀತಿಯಲ್ಲಿ, “ನೀನು ನಿಜವಾಗಿಯೂ ಕಟ್ಟುನಿಟ್ಟಾದ ಜನರನ್ನು ಸೇರಲು ಬಯಸುವಲ್ಲಿ, ಯೆಹೋವನ ಸಾಕ್ಷಿಗಳ ಬಳಿಗೆ ಹೋಗು” ಎಂದನು. “ಅವರೆಲ್ಲಿದ್ದಾರೆ?” ಎಂದು ಆಕೆ ಕೇಳಲು, “ಜಲ ಸರಬರಾಯಿ ಕೇಂದ್ರದ ಹತ್ತಿರ” ಎಂದು ಅವನು ಹೇಳಿದನು. ಮರುದಿನ, ಅವಳು ಅವರನ್ನು ಹುಡುಕುವುದರಲ್ಲಿ ಜಯಹೊಂದಲಿಲ್ಲ. ನಿರಾಶಳಾದರೂ, ಆಕೆ ಅವರ ವಿಷಯ ಸದಾ ಯೋಚಿಸುತ್ತಿದ್ದಳು.
ಒಂದು ದಿನ, ನೆರೆಯವರಲ್ಲಿ ಒಬ್ಬನು ಇನ್ನೊಬ್ಬನಿಗೆ, “ನೀನು ಬೇಗನೆ ಯೆಹೋವನ ಸಾಕ್ಷಿಯಾಗಿ ಬಿಡುವಿ” ಎಂದು ಅಣಕಿಸುವುದನ್ನು ಕೇಳಿದಳು. ಇದನ್ನು ಕೇಳಿದ ಮಹಿಳೆ ಅಲ್ಲಿ ಧಾವಿಸಿ ನೆರೆಯವನೊಡನೆ, “ಇಲ್ಲಿ ಯೆಹೋವನ ಸಾಕ್ಷಿಗಳಿದ್ದಾರೆಯೆ?” ಎಂದು ಕೇಳಿದಳು. ಅವನು “ಹೌದು” ಎಂದನು. “ಕೆಲವರು ಈ ನೆರೆಹೊರೆಯಲ್ಲಿ ಮನೆಯಿಂದ ಮನೆಗೆ ಸಾರಲು ಬರುವರು. ಅವರ ನಿರ್ಮಲವಾದ ಮತ್ತು ನೀಟಾದ ಪೋಷಾಕಿನಿಂದ ನೀನು ಅವರನ್ನು ಗುರುತಿಸುವಿ.” ಇದನ್ನು ಕೇಳಿದ ಅವಳು ಅವರನ್ನು ಹುಡುಕಲು ಧಾವಿಸಿ ಹೋದಳು. ಮೊದಲು ಅವರು ಸಿಕ್ಕಲಿಲ್ಲವಾದರೂ, ಅವಳು ಮನೆಗೆ ಹಿಂದಿರುಗುತ್ತಿರುವಾಗ ಇಬ್ಬರು ಅಚ್ಚುಕಟ್ಟಾಗಿ ಬಟ್ಟೆ ಉಟ್ಟಿದ್ದ ಸ್ತ್ರೀಯರು ಯಾರೊಂದಿಗೊ ಮಾತಾಡುವುದನ್ನು ನೋಡಿದಳು. ಆಕೆ ಅವರನ್ನು ಸಮೀಪಿಸಿ ಅವರು ಯೆಹೋವನ ಸಾಕ್ಷಿಗಳೋ ಎಂದು ಕೇಳಿದಳು. ಹೌದೆಂದು ಅವರು ಹೇಳಿದಾಗ, “ದಯವಿಟ್ಟು ನನ್ನ ಮನೆಗೆ ಬನ್ನಿ, ನನಗೆ ನಿಮ್ಮೊಂದಿಗೆ ಮಾತಾಡಲಿಕ್ಕಿದೆ” ಎಂದು ಬೇಡಿಕೊಂಡಳು.
ಒಂದು ಬೈಬಲ್ ಅಧ್ಯಯನ ಆರಂಭಿಸಲ್ಪಟ್ಟಿತು, ಮತ್ತು ಕುಟುಂಬದ ಸದಸ್ಯರ ವಿರೋಧ ಮತ್ತು ಅಪಹಾಸ್ಯದ ಎದುರಿನಲ್ಲಿಯೂ, ಈ ಮಹಿಳೆ ಕೂಟಗಳಿಗೆ ಹಾಜರಾಗಲು ಮತ್ತು ಆಕೆಯ ಸಂಬಂಧಿಗಳಿಗೆ ಸಾಕ್ಷಿ ನೀಡಲು ತೊಡಗಿದ್ದಾಳೆ.
ಯೇಸು ತನ್ನ ಕುರಿಗಳನ್ನು ನಿಜವಾಗಿಯೂ ಬಲ್ಲವನಾಗಿದ್ದು, ಅವರು ಅವನ ನೀತಿಯ ನೂತನ ಲೋಕಕ್ಕೆ ಪಾರಾಗಲಿಕ್ಕಾಗಿ ಅವರನ್ನು ತನ್ನ ಸಂಸ್ಥೆಯೊಳಗೆ ಒಟ್ಟುಗೂಡಿಸುತ್ತಿದ್ದಾನೆ.