ನೀವು ಆಶಾಭಂಗವನ್ನು ನಿಭಾಯಿಸಬಲ್ಲಿರಿ!
ಇಪ್ಪತ್ತಮೂರು ವರ್ಷಗಳ ಒಬ್ಬ ನಿರ್ದಿಷ್ಟ ಮನುಷ್ಯನ ಅವಸ್ಥೆಯನ್ನು ಪರಿಗಣಿಸಿರಿ. ಅವನಿಗೆ ಕೇವಲ ಮಿತವಾದ ಶಿಕ್ಷಣವಿದೆ ಮತ್ತು ಅವನೊಂದು ಕನಿಷ್ಠ ವೇತನದಲ್ಲಿ ದುಡಿಯುತ್ತಿದ್ದಾನೆ. ಮದುವೆಯ ಮತ್ತು ತೃಪ್ತಿದಾಯಕ ಜೀವನದ ವಿಚಾರಗಳು ಅವನು ಯೋಚಿಸಲಾಗದ್ದು ಎಂದು ಭಾಸವಾಗುತ್ತದೆ. ಅವನ ತಾಯಿಯು ಹೀದನ್ನುವುದಲ್ಲೇನೂ ಆಶ್ಚರ್ಯವಿಲ್ಲ: “ಅವನು ಅತಿಯಾಗಿ ದುಃಖಿತನೂ, ಆಶಾಭಂಗಗೊಂಡವನೂ ಆಗಿದ್ದಾನೆ.” ಈ ಯುವಕನ ವಿದ್ಯಮಾನವು ಇತರ ಲಕ್ಷಾಂತರ ಜನರ ಜೀವಿತದ ಪ್ರತಿನಿಧಿರೂಪದ್ದಾಗಿದೆ. ಒಂದಲ್ಲ, ಇನ್ನೊಂದು ಕಾರಣಕ್ಕಾಗಿ, ಜೀವಿತದ ಎಲ್ಲಾ ನಡೆಯ ಜನರು ಆಶಾಭಂಗಗೊಂಡಿದ್ದಾರೆ.
ಆಶಾಭಂಗವು “ಭಗ್ನಗೊಂಡ ಆಶೆಗಳಿಂದ, ಆಂತರಿಕ ಸಂಘರ್ಷಣೆಗಳಿಂದ, ಯಾ ಇತರ ಪರಿಹರಿಸಲ್ಪಡದ ಸಮಸ್ಯೆಗಳಿಂದ ಎದ್ದೇಳುವ ಅಭದ್ರತೆಯ, ಎದೆಗುಂದುವಿಕೆಯ ಮತ್ತು ಅತೃಪ್ತಿಯ ಒಂದು ಆಳವಾದ ಅಸ್ತಿಗತವಾಗಿರುವ ಪ್ರಜೆ ಯಾ ಸ್ಥಿತಿ”ಯಾಗಿದೆ. (ವೆಬ್ಸ್ಟರ್ಸ್ ಥರ್ಡ್ ನ್ಯೂ ಇಂಟರ್ನ್ಯಾಷನಲ್ ಡಿಕ್ಷನೆರಿ) ನಾವು ಒಂದು ಸಂಗತಿಯನ್ನು ಪೂರೈಸಲು ಅತಿ ಕಠಿಣವಾಗಿ ಪ್ರಯತ್ನಿಸಿದರೂ, ಯಶಸ್ವಿಯಾಗದಿರುವುದರಿಂದ ನಾವು ತಲೆಯನ್ನು ಜಜ್ಜುತ್ತೇವೆಯೋ ಎಂದಂತೆ, ಯಶಸ್ಸಿನ ಯಾವುದೇ ಅವಕಾಶವಿಲ್ಲದೆ, ಎಲ್ಲಾ ಕಡೆಗಳಲ್ಲಿಯೂ ತಡೆಗಟ್ಟಲ್ಪಟ್ಟಿದ್ದೇವೆ ಎಂಬ ಭಾವನೆ ನಮಗಾಗುತ್ತದೆ. ಆ ಭಾವನೆಯನ್ನು ನಾವೆಲ್ಲರೂ ಬಲ್ಲೆವು.
ಪ್ರತಿಫಲವನ್ನೀಯುವುದಿಲ್ಲವೆಂದು ತೋರುವ ಕೆಲಸಗಳಲ್ಲಿ ಕಾರ್ಮಿಕರು ನಿಷ್ಪ್ರಯೋಜಕ ಭಾವನೆಗಳುಳ್ಳುವರಾಗಬಹುದು. ಅವರೆಡೆಗೆ ಯಾರು ಲಕ್ಷಿಸದಿದ್ದಲ್ಲಿ. ದಿನಚರಿಯ ಚಿಂತೆಗಳಲ್ಲಿ ಮತ್ತು ಆಯಾಸಕರ ಕೆಲಸಗಳಲ್ಲಿ ಹೋರಾಡುತ್ತಿರುವ ಹೆಂಡತಿಯರು ಯಾ ತಾಯಂದಿರುಗಳು ಪೂರೈಸದಿರುವ, ಗಣ್ಯತೆತೋರಿಸದಿರುವ ಭಾವನೆಯನ್ನು ಹೊಂದಬಹುದು. ಶಾಲೆಯಲ್ಲಿ ಶೋಧನೆಗಳನ್ನು ಎದುರಿಸುತ್ತಿರುವ ಎಳೆಯರು ಶಿಕ್ಷಣವನ್ನು ಪಡೆಯುವ ಪ್ರಯತ್ನಗಳಲ್ಲಿ ಆಶಾಭಂಗಗೊಳ್ಳಬಹುದು. ಅನ್ಯಾಯದ ಪಕ್ಷಪಾತದ ಬಲಿಗಳು ತಾವಾಗಿದ್ದೇವೆಂದು ಅನಿಸಿಕೆಹೊಂದಿ, ಅಲ್ಪಸಂಖ್ಯಾತ ಗುಂಪಿನ ಸದಸ್ಯರು ಒಳಗಿಂದೊಳಗೆ ಹರಿದು ಛಿದ್ರವಾಗಿರಬಹುದು. ಉಚ್ಛಗುಣಮಟ್ಟದ ಉತ್ಫಾದನೆಗಳನ್ನು ಯಾ ಸೇವೆಗಳನ್ನು ಒದಗಿಸಲು ಪ್ರಯತ್ನಿಸುವ ವ್ಯಾಪಾರಿಗಳು, ನೀತಿನಿಷ್ಠೆಗಳಿಲ್ಲದ ಮತ್ತು ತದ್ರೀತಿಯ ಅನುಭವಗಳು ಆಶಾಭಂಗಕ್ಕೆ ಕಾರಣವಾಗುತ್ತವೆ ಮತ್ತು ಅನೇಕರನ್ನು ನಿರೀಕ್ಷಾಹೀನತೆಯ ಭಾವನೆಗಳಿಂದ ಬಿಟ್ಟುಹೋಗುತ್ತವೆ.
ಶತಮಾನಗಳ ಹಿಂದೆ ಜೀವಿಸಿದ್ದ ಒಬ್ಬ ವಿವೇಕಿ ಮನುಷ್ಯನು ತನ್ನ ಆಶಾಭಂಗಗಳನ್ನು ನಾವು ಅರ್ಥೈಬಹುದಾದ ಮಾತುಗಳಲ್ಲಿ ಹೇಳಿದ್ದಾನೆ. ಇಸ್ರಾಯೇಲ್ಯರ ಅರಸ ಸೊಲೊಮೋನನು ಅಂದದ್ದು: “ಆಗ ನನ್ನ ಕೈಯಿಂದ ನಡಿಸಿದ ಎಲ್ಲಾ ಕೆಲಸಗಳಲ್ಲಿಯೂ ನಾನು ಪಟ್ಟ ಪ್ರಯಾಸದಲ್ಲಿಯೂ ದೃಪ್ಟಿಯಿಟ್ಟೆನು; ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು, ಲೋಕದಲ್ಲಿ ಯಾವ ಲಾಭವೂ ಕಾಣಲಿಲ್ಲ. ಲೋಕದಲ್ಲಿ ಮನುಷ್ಯನು ಹೃದಯಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಲಾಭವೇನು? ಅವನ ದಿನಗಳೆಲ್ಲಾ ವ್ಯಸನಮಯವೇ, ಅವನ ಕೆಲಸವು ತೊಂದರೆಯೇ; ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ನಿಲುಗಡೆಯಿಲ್ಲ. ಇದೂ ವ್ಯರ್ಥ.” (ಪ್ರಸಂಗಿ 2:11, 22, 23) ಪ್ರತಿಫಲವನ್ನೀಯುವ ಜೀವನವನ್ನು ಅವರಿಂದ ಕಸಿದುಕೊಳ್ಳುವ ಹತಾಶೆಗಳನ್ನು ನಿಭಾಯಿಸಲು ಪ್ರಯತ್ನಿಸುವ ಅಷ್ಟೊಂದು ಜನರ ನಿರಾಶೆಯ ಭಾವನೆಗಳನ್ನು ಸೊಲೊಮೋನನ ಮಾತುಗಳು ವ್ಯಕ್ತಪಡಿಸುತ್ತವೆ.
ನಿರಾಶೆಗೊಂಡ ಜನರು ಹಿಂಸಾತ್ಮಕರೂ ಕೂಡ ಆಗಬಹುದು. ಅತಿ ತೀವ್ರತಮ ವಿದ್ಯಮಾನಗಳಲ್ಲಿ ಕೆಲವರು ಹೋರಾಡುವದನ್ನು ತ್ಯಜಿಸಿ, ಸಮಾಜದಿಂದ ಹೊರಬಿದ್ದು, ಅಸಾಂಪ್ರದಾಯಿಕ ರೀತಿಯಲ್ಲಿ ಜೀವಿಸುತ್ತಾರೆ. ಅವರು ಯಾವುದಕ್ಕೆ ಅರ್ಹರಾಗಿದ್ದಾರೆಂದು ಎಣಿಸುವದನ್ನು ಪಡೆಯಲು, ಕೆಲವರು ಪಾತಕ ಮತ್ತು ಹಿಂಸಾಚಾರಕ್ಕೂ ಇಳಿದಿರುತ್ತಾರೆ. ಎಡೆಬಿಡದ ಒತ್ತಡಗಳು ವಿವಾಹಗಳನ್ನು ಮತ್ತು ಕೌಟುಂಬಿಕ ಸಂಬಂಧಗಳನ್ನು ನುಚ್ಚುನೂರುಗೊಳಿಸಿವೆ.
ಆಶಾಭಂಗವನ್ನು ನಿಭಾಯಿಸಲು ಇರುವ ಮಾರ್ಗಗಳನ್ನು ಹುಡುಕುವುದರಲ್ಲಿ ನಮ್ಮಲ್ಲಿ ಅನೇಕರು ಬಹಳಷ್ಟು ಪ್ರಯತ್ನಗಳನ್ನು ಹಾಕಿರುತ್ತಾರೆ. ನಾವೇನು ಮಾಡಿದರೂ ಕೂಡ, ವಿಷಯಗಳು ಇನ್ನಷ್ಟು ಕೆಡುವಂತೆ ಭಾಸವಾಗಬಹುದು. ಜ್ಞಾನೋಕ್ತಿ 13:12 ಹೇಳುವದು: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು.” ನಮ್ಮ ದೈಹಿಕ ಮತ್ತು ಆತ್ಮಿಕ ಹಿತಾಸಕ್ತಿಯು ಅಪಾಯದಲ್ಲಿರಬಹುದು. ಸನ್ನಿವೇಶವು ನಿರೀಕ್ಷಾಹೀನವೋ? ನಮ್ಮ ಕೊರತೆಗಳಿಗಾಗಿ ಯಾ ತಪ್ಪುಗಳಿಗಾಗಿ ಪ್ರತೀಕಾರವೋ ಎಂಬಂತೆ ನಿರಂತರ ಆಶಾಭಂಗದೊಂದಿಗೆ ನಾವು ಜೀವಿಸಬೇಕೋ? ಹೆಚ್ಚು ಸಂತೃಪ್ತಿಯ ಜೀವಿತವೊಂದರಲ್ಲಿ ಆನಂದಿಸಲು ಶಕ್ಯರಾಗುವಂತೆ ಆಶಾಭಂಗವನ್ನು ನಿಭಾಯಿಸಲು ಯಾವ ಕೆಲವು ವ್ಯಾವಹಾರಿಕ ಹೆಜ್ಜೆಗಳನ್ನು ತಕ್ಕೊಳ್ಳಬಹುದು? ನಾವೀಗ ನೋಡೋಣ.
ಆಶಾಭಂಗವನ್ನು ನಿಭಾಯಿಸುವ ಕೆಲವು ವಿಧಗಳು
ನಮಗೆ ಸಮಸ್ಯೆಯೊಂದು ಇದ್ದಾಗ ಮತ್ತು ಸಲಹೆಯು ಬೇಕಾದಾಗ, ಯಥಾಪ್ರಕಾರ ನಾವು ಭರವಸವಿಡಬಹುದಾದ ಹೆಚ್ಚು ಜ್ಞಾನವುಳ್ಳ, ಅನುಭಸ್ಥ ವ್ಯಕ್ತಿಯ ಬಳಿಗೆ ಹೋಗುತ್ತೇವೆ. ಜ್ಞಾನೋಕ್ತಿ 3:5,6 ಶಿಫಾರಸು ಮಾಡುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ದೇವರ ವಾಕ್ಯವಾದ ಬೈಬಲಿನಲ್ಲಿ ವ್ಯಾವಹಾರಿಕ ಬುದ್ಧಿವಾದವನ್ನು ಕಂಡುಕೊಳ್ಳ ಬಹುದಾಗಿದೆ. ಅದು ಒದಗಿಸುವ ಒಳನೋಟದ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಒಂದು ಜೀವನೋಪಾಯ ನಡಿಸುವದಕ್ಕೆ ಆಶಾಭಂಗವು ಸಂಬಂಧಿಸಿರಬಹುದು. ಉದಾಹರಣೆಗೆ, ನಮ್ಮ ಐಹಿಕ ಕೆಲಸವು ತೃಪ್ತಿದಾಯಕವಾಗಿರಬಹುದು, ಆದರೆ ಕಡಿಮೆ ವೇತನವು ನಿರಾಶೆಯ ಮೂಲವಾಗಿರಬಹುದು. ನಮ್ಮ ಕುಟುಂಬಗಳನ್ನು ನಾವು ಪ್ರೀತಿಸುತ್ತೇವೆ ಮತ್ತು ಅವರಿಗಾಗಿ ಅತ್ಯುತ್ತಮವಾದುದನ್ನು ನಾವು ಬಯಸುತ್ತೇವೆ. ಆದರೂ, ನಮ್ಮ ಆರ್ಥಿಕ ಹಂಗುಗಳನ್ನು ಪೂರೈಸುವ ವ್ಯಾಕುಲತೆಗೆ ಕೊನೆಯೇ ಇಲ್ಲವೆಂಬಂತೆ ತೋರಬಹುದು. ನಾವು ಕೆಲಸದ ನಿಯತಕಾಲಕ್ಕಿಂತ ಹೆಚ್ಚಿಗೆಯ ಕೆಲಸವನ್ನು ಯಾ ಎರಡನೆಯ ಕೆಲಸವನ್ನು ಮಾಡಲೂ ಬಹುದು. ಸ್ವಲ್ಪ ಸಮಯದ ನಂತರ ಜೀವನವು ಉಟಮಾಡುವ, ಮಲಗುವ ಮತ್ತು ಕೆಲಸಮಾಡುವ ಒಂದು ಬಳಲಿಸುವ ವೃತ್ತವಾಗಿ ತೋರುತ್ತದೆ. ಆದರೂ, ತೆರಬೇಕಾದ ಬೆಲೆಪಟ್ಟಿಗಳು ರಾಶಿಯಾಗುತ್ತವೆ, ಸಾಲ ಏರುತ್ತದೆ, ಮತ್ತು ಆಶಾಭಂಗವು ವರ್ಧಿಸುತ್ತದೆ.
ನಮ್ಮ ಆವಶ್ಯಕತೆಗಳನ್ನು ಪೂರೈಸುವದೇ ಐಹಿಕ ಕೆಲಸದ ಪ್ರಾಥಮಿಕ ಉದ್ದೇಶವಾಗಿದೆ. ಆದರೆ ನಮಗೆ ಎಷ್ಟು ಬೇಕು? ಅಪೊಸ್ತಲ ಪೌಲನು ಬರೆದದ್ದು: “ನಾವು ಲೋಕದೊಳಗೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” ನಾವು ಅದಕ್ಕಿಂತಲೂ ಅಧಿಕವಾದುದ್ದನ್ನು ಸಂಪಾದಿಸಲು ಮತ್ತು ಇತರರಲ್ಲಿ ಏನಿದೆಯೋ ಯಾ ಮಾಡಲು ಶಕ್ತರಾಗಿದ್ದರೋ ಅದನ್ನು ಸರಿಗಟ್ಟಿಸಲು ಪ್ರಯತ್ನಿಸುತ್ತೇವೊ? ಹಾಗಿರುವಲ್ಲಿ, ಆಶಾಭಂಗದ ರೀತಿಯಲ್ಲಿ ನಾವು ಪರಿಣಾಮಗಳನ್ನು ಕೊಯ್ಯುತ್ತಿರಬಹುದು. ಪೌಲನು ಎಚ್ಚರಿಸಿದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” (1 ತಿಮೊಥೆಯ 6:7-10) ಪ್ರಾಪಂಚಿಕ ಬೆನ್ನಟ್ಟುವಿಕೆಗಳ ಪ್ರಾಮಾಣಿಕ ಬೆಲೆಕಟ್ಟುವಿಕೆಯು ಕೆಲವು ಅನಾವಶ್ಯಕಗಳನ್ನು ಹೊರಪಡಿಸಬಹುದು. ಮಿತವ್ಯಯದ ಮತ್ತು ಹೆಚ್ಚು ಹಾಳತವಿರುವ ಜೀವನಶೈಲಿಯ ಕೆಲವೊಂದು ಸಮಂಜಸವಾದ ಅಳವಡಿಸುವಿಕೆಗಳು ನಮ್ಮ ಆಶಾಭಂಗವನ್ನು ಕಡಿಮೆಗೊಳಿಸುವದರಲ್ಲಿ ಸಹಾಯಕರವಾಗಬಲ್ಲವು.
ಅದುಮಿಟ್ಟ ಸ್ವಾಭಾವಿಕ ಅಶೆಗಳು ಬಹಳಷ್ಟು ಆಶಾಭಂಗಕ್ಕೆ ಕಾರಣವಾಗಿವೆ. ಉದಾಹರಣೆಗೆ, ಮದುವೆಯಾಗುವ ಮತ್ತು ಕೌಟುಂಬಿಕ ಜೀವನದಿಂದ ಬರುವ ಭದ್ರತೆ ಮತ್ತು ಬಿಸಿಯಾದ ವಾತ್ಸಲ್ಯದ ಬಲವಾದ ಆಕಾಂಕ್ಷೆ ಯುವತಿಯೊಬ್ಬಳಿಗೆ ಇರುವುದು ಸ್ವಾಭಾವಿಕವಾಗಿದೆ. ತಾನು ಹೆಚ್ಚು ಆಕರ್ಷಣೀಯಳಾಗಿ ತೋರಲು ಅತ್ಯಾಧುನಿಕ ಶೈಲಿಗಳನ್ನು ಯಾ ಸೌಂದರ್ಯವರ್ಧಕಗಳನ್ನು ಬಳಸಲು ಮತ್ತು ವಿರಹವ್ಯಥೆಯನ್ನನುಭವಿಸುವವರಿಗೆ ಸಲಹೆಗಳನ್ನು ಕೊಡುವ ನಿಯತಕಾಲಿಕಗಳ ಅತ್ಯಾಶೆಯ ವಾಚಕಳಾಗುವಂತೆ ಅವಳು ಅಧಿಕ ಸಮಯ ಮತ್ತು ಪ್ರಯತ್ನಗಳನ್ನು ವ್ಯಯಿಸಬಹುದು. ಅರ್ಹನಾದ ಒಬ್ಬನನ್ನು ಭೇಟಿಯಾಗುವ ನಿರೀಕ್ಷೆಗಳಿಂದ ಹೆಂಗಸು ಹಲವಾರು ತುದಿಮೊದಲಿಲ್ಲದ ಸಾಮಾಜಿಕ ಗೋಷ್ಠಿಗಳಿಗೆ ಹಾಜರಾಗಬಹುದು—ಆದರೂ ಯಾವುದೇ ಪ್ರಯೋಜನವಿಲ್ಲ. ವರ್ಷಗಳು ದಾಟುತ್ತಾ ಇವೆ, ಮತ್ತು ನಿರಾಶೆಯು ತಡೆಯಲಸಾಧ್ಯವಾಗುತ್ತದೆ. ಹತಾಶಳಾಗಿ, ಅವಳು ಅನರ್ಹನಾದವನೊಬ್ಬನನ್ನು ಮದುವೆಯಾಗುವಂತೆ ಶೋಧಿತಳಾಗಬಹುದು. ಇನ್ನೂ ಕೆಡಕೇನಂದರೆ, ವಾತ್ಸಲ್ಯಕ್ಕಾಗಿರುವ ಅವಳ ಹಂಬಲವನ್ನು ತಣಿಸಲು, ಅವಳು ಅನೈತಿಕ ವರ್ತನೆಗಳಲ್ಲಿ ಒಳಗೂಡಲೂಬಹುದು.
ಅಂಥ ವಿದ್ಯಮಾನಗಳಲ್ಲಿ, ತಾಳ್ಮೆ ಮತ್ತು ಒಳ್ಳೆಯ ತೀರ್ಮಾನ ಆವಶ್ಯಕ. ತಕ್ಕವನಾಗಿರದ ವ್ಯಕ್ತಿಯೊಡನೆ—ವಿಶೇಷವಾಗಿ ಯೆಹೋವನಲ್ಲಿ ಭರವಸೆಯ ಕೊರತೆಯಿರುವ ಒಬ್ಬನೊಡನೆ—ಮದುವೆಯು ಒಂದು ದೊಡ್ಡ ಪ್ರಮಾದವಾಗಬಹುದು. (1 ಕೊರಿಂಥ 7:39; 2 ಕೊರಿಂಥ 6:14, 15) ಅನೈತಿಕತೆಯು ಅನಿವಾರ್ಯವಾಗಿ ಹೃದಯಾಶೂಲೆಯನ್ನು ಮತ್ತು ಹತಾಶೆಯನ್ನು ತರುತ್ತದಲ್ಲದೇ ಬೇರೇನೂ ಇಲ್ಲ. (ಜ್ಞಾನೋಕ್ತಿ 6:32, 33) ವಿವೇಕಭರಿತವಾದ ಗೋಚರಿಸುವಿಕೆಯೊಂದಿಗೆ ಪ್ರಾಮಾಣಿಕ ಸ್ವ-ಪರೀಕ್ಷಣೆಯು ಸಹಾಯಮಾಡಬಲ್ಲದು. ಯಾವುದೇ ಶೈಲಿಯ ಉಡುಪುಗಳಾಗಲಿ ಯಾ ಅಸಾಮಾನ್ಯವಾದ ಶೃಂಗಾರಸಾಧನಗಳಿಗಿಂತಲೂ ಎಷ್ಟೋ ಹೆಚ್ಚಾಗಿ, ಒಂದು “ಸಾತ್ವಿಕವಾದ ಶಾಂತಮನಸ್ಸು” ಯೋಗ್ಯನಾದ ವಿವಾಹ ಸಂಗಾತಿಯನ್ನು ಆಕರ್ಷಿಸಬಹುದು. (1 ಪೇತ್ರ 3:3, 4) ಲೌಕಿಕ ತಜ್ಞರ ಸಮೀಪದೃಷ್ಟಿಯ ಯಾ ತಿಳಿಗೇಡಿತನದ ಸಲಹೆಗಳ ಮೇಲೆ ಆತುಕೊಳ್ಳುವ ಬದಲು, ಪ್ರೀತಿಪಾತ್ರಳೂ, ನೆಚ್ಚಿಕೆಪಡೆಯುವವಳೂ ಆದ ಪತ್ನಿಯಾಗಲು ಏನು ಬೇಕಾಗಿದೆ ಎಂದು ಕಲಿಯಲು ವಿವಾಹದ ಮೂಲಕರ್ತನ ಬಳಿಗೆ ಹೋಗುವುದು ಅತ್ಯಾವಶ್ಯಕ. (ಜ್ಞಾನೋಕ್ತಿ, ಅಧ್ಯಾಯ 31) ಅವಿವಾಹಿತ ಪುರುಷರು ಮತ್ತು ಸ್ತ್ರೀಯರು ಒಬ್ಬ ಸಂಗಾತಿಯಲ್ಲಿ ಅವರು ಬಯಸುವ ಗುಣಗಳನ್ನು ಪ್ರದರ್ಶಿಸಲು ಪ್ರಯತ್ನಿಸತಕ್ಕದ್ದು. ಬೈಬಲ್ ಸೂತ್ರಗಳನ್ನು ಗೌರವಿಸುವ ಜನರ ಆರೋಗ್ಯಕರ ಸಹವಾಸವನ್ನು ಹುಡುಕುವುದು ಎಷ್ಟೊಂದು ವಿವೇಕತನದ್ದು. ಇದನ್ನು ನಾವು ಜೀವಿತಗಳಲ್ಲಿ ಅನ್ವಯಿಸುವುದಾದರೆ, ಒಂದು ಸಂತೋಷದ ವಿವಾಹದ ಪ್ರತೀಕ್ಷೆಗಳು ಖಂಡಿತವಾಗಿ ನಿತ್ಯನಿರಂತರಕ್ಕೂ ಉತ್ತಮವಾಗಿರುವವು. ಈಗಲೇ ಮದುವೆಯು ಕೈಗೂಡದಿದ್ದರೂ, ಶಾಸ್ತ್ರಗ್ರಂಥದ ಹೊಂದಿಕೆಯಲ್ಲಿ ವರ್ತಿಸುವುದು ಆನಂದವನ್ನು ತರುತ್ತದೆ ಮತ್ತು ಏಕಾಂತ ಜೀವನವನ್ನು ಪ್ರತಿಫಲದ್ದಾಗಿ ಮಾಡುತ್ತದೆ.
ಹಂಗುಗಳ ಭಾರವಾದ ಹೊರೆಯು ಹತಾಶೆಯ ಬಿಂದುವಿಗೆ ನಮ್ಮನ್ನು ತರಬಹುದು. ಎಲ್ಲಾ ಪಕ್ಕಗಳಿಂದಲೂ ಒತ್ತಡ ಇರಬಹುದು. ನಮ್ಮ ಕುಟುಂಬದ ಆವಶ್ಯಕತೆಗಳ, ಮತ್ತು ಎಂದಿಗೂ ಸಂತೃಪ್ತಿಯಾಗದ ನಮ್ಮ ಧನಿಯ ಒತ್ತಡದ ಕುರಿತು ನಾವು ಚಿಂತಿತರಾಗಿರಬಹುದು. ಏನಾದರೂ ವಿಷಮ ಸ್ಥಿತಿ ಎದ್ದಲ್ಲಿ, ಪ್ರತಿ ಬಾರಿಯೂ ಸಂಬಂಧಿಕರು ಸಹಾಯವನ್ನು ಕೊಡುವಂತೆ ನಮ್ಮಿಂದ ಬಯಸಬಹುದು. ಅನೇಕ ಒತ್ತಡಗಳ ಕಾರಣ, ಅಲಕ್ಷಿಸಲ್ಪಟ್ಟ ವೈಯಕ್ತಿಕ ಸಂಗತಿಗಳ ಉದ್ದಪಟ್ಟಿಯು ಗಮನಕೊಡುವಂತೆ ನಮ್ಮ ಗಮನಕ್ಕಾಗಿ ಮೊರೆಯಿಡುಹುದು. ನಮ್ಮ ಸಮಯ ಮತ್ತು ಶಕ್ತಿಗಳು ಏಕಕಾಲದಲ್ಲಿ ಡಜನುಗಟ್ಟಲೆ ಭಿನ್ನವಾದ ದಿಕ್ಕುಗಳಿಗೆ ಹರಿಸಬೇಕಾಗಿದೆ ಎಂಬ ಅನಿಸಿಕೆಯುಂಟಾಗಬಹುದು. ಆಶಾಭಂಗವು ಉದ್ರೇಕಕ್ಕೆ ತಿರುಗಬಹುದು, ಮತ್ತು ತೊರೆಯುವುದೇ ವಾಸಿ ಎಂದು ನಾವು ಭಾವಿಸಬಹುದು. ಹಾಗಾದರೆ ನಾವೇನು ಮಾಡತಕ್ಕದ್ದು?
ನಮ್ಮ ಆದ್ಯತೆಗಳನ್ನು ನಾವು ಪುನಃ ಮೌಲ್ಯೀಕರಣ ಮಾಡುವುದು ವಿವೇಕತನದ್ದಾಗಿದೆ. ನಾವು ಇಂತಿಷ್ಟೇ ಮಾಡಲಿಕ್ಕೆ ಶಕ್ತರಾಗಿರುವುದರಿಂದ, ಇತರರಿಂದ ಮಾಡಲ್ಪಟ್ಟ ಎಲ್ಲಾ ಬೇಡಿಕೆಗಳನ್ನು ಅಳವಡಿಸಿಕೊಳ್ಳಲು ಅಸಾಧ್ಯವಾಗಿದೆ. ನಾವು ವಿಷಯಗಳನ್ನು “ಅತಿ ಪ್ರಾಮುಖ್ಯ ಸಂಗತಿಗಳಿಗೆ” ಮೊಟಕುಗೊಳಿಸುವ ಅಗತ್ಯವಿದೆ. (ಫಿಲಿಪ್ಪಿ 1:10, NW) ಎಷ್ಟೆಂದರೂ, “ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.” (ಪ್ರಸಂಗಿ 9:4) ಕೆಲವು ಹಂಗುಗಳು ವಿಷಮತರಹದ್ದು ಮತ್ತು ಫಕ್ಕಕ್ಕೆ ತಳ್ಳಸಾಧ್ಯವಿಲ್ಲ, ಆದರೆ ಕಡಿಮ ನಿಷ್ಕರ್ಷಕ ಸಂಗತಿಗಳು ಕಾಯಬೇಕಾದೀತು. ಇತರರಿಂದ ಹಂಚಿಕೊಳ್ಳಬೇಕಾಗಿದ್ದ ಕೆಲವು ಕರ್ತವ್ಯಗಳಿಗಾಗಿ ಪೂರ್ಣ ಹೊಣೆಯನ್ನು ನಾವು ಹೊತ್ತಿರಬಹುದು. ಅನಾವಶ್ಯಕವಾಗಿರುವ ಕೆಲವು ಜವಾಬ್ದಾರಿಕೆಗಳನ್ನು ನಾವು ಪೂರ್ಣವಾಗಿ ತೊರೆಯಲಿಕ್ಕೂ ಇರಬಹುದು. ಆರಂಭದಲ್ಲಿ ಇದು ಅನಾನುಕೂಲತೆಗೆ ಕಾರಣವಾಗಬಹುದು ಯಾ ಇತರರಿಗೆ ನಿರಾಶೆಯನ್ನುಂಟುಮಾಡಬಹುದು, ಆದರೂ ನಮ್ಮ ಸ್ವಂತ ಶಾರೀರಿಕ ಮತ್ತು ಭಾವನಾತ್ಮಕ ಮಿತಿಗಳಿಗೆ ಗೌರವವನ್ನು ನಾವು ಕೊಡುವ ಜರೂರಿಯಿದೆ.
ನಿತ್ರಾಣಗೊಳಿಸುವ ರೋಗವೊಂದು ಅತಿ ಯಾತನೆಕೊಡುವ ಆಶಾಭಂಗವನ್ನು ತರಬಲ್ಲದು, ಯಾಕಂದರೆ ಒಂದೇ ಸಮಯದಲ್ಲಿ ಹಲವಾರು ದಿನಗಳ ಯಾ ವಾರಗಳ ತನಕ ಅದು ನಮ್ಮನ್ನು ರೋಗಶಯ್ಯೆಯಲ್ಲಿ ಮಲಗಿಸಬಹುದು. ಕಠಿಣವಾದ ಬೇನೆಯು ನಮ್ಮನ್ನು ಸಂಕಟಪಡುವವರನ್ನಾಗಿ ಮಾಡಬಹುದು. ವಾಸಿಗಾಗಿ ಹುಡುಕುವಿಕೆಯು ಒಬ್ಬ ವೈದ್ಯನಿಂದ ಇನ್ನೊಬ್ಬನ ಬಳಿಗೆ ನಮ್ಮನ್ನು ಕೊಂಡೊಯ್ಯಬಹುದು ಯಾ ಏನಾದರೂ ಗುಣಕೊಡಬಹುದು ಎಂಬ ನಿರೀಕ್ಷೆಗಳಿಂದ ಅನೇಕ ಔಷಧಗಳನ್ನು ಮತ್ತು ವಿಟಾಮಿನ್ಗಳನ್ನು ನಾವು ತಕ್ಕೊಳ್ಳಬಹುದು. ಆದರೂ, ನಾವಿನ್ನೂ ಯಾತನೆ ಪಡುವುದು ಮುಂದರಿಯುತ್ತಿರಬಹುದು ಮತ್ತು ಇಷ್ಟೆಲ್ಲಾ ಹೋರಾಟಕ್ಕೆ ಜೀವನವು ಅರ್ಹವಾಗಿದೆಯೇ ಎಂದು ನಾವು ಯೋಚಿಸತೊಡಗಲೂ ಬಹುದು.
ದೇವರ ಹೊಸ ಲೋಕದಲ್ಲಿ ಮಾತ್ರವೇ ಪರಿಹರಿಸಬಹುದಾದ ಸಮಸ್ಯೆ ಇದಾಗಿರಬಹುದು. (2 ಪೇತ್ರ 3:13; ಹೋಲಿಸಿರಿ ಯೆಶಾಯ 33:24.) ಮಾನವರು ಅಪರಿಪೂರ್ಣರಾಗಿರುವುದರಿಂದ, ವೈದ್ಯರು ಮತ್ತು ಔಷಧಗಳು ಇಷ್ಟನ್ನೇ ಮಾಡಬಹುದು. ಯಾವುದಾದರೂ ಒಂದು ಬಿಂದುವಿನಲ್ಲಿ, ನಮ್ಮ ಯಾತನೆಯನ್ನು ಜೀವನದ ಒಂದು ಭಾಗವೆಂದು ನಾವು ಅಂಗೀಕರಿಸಬೇಕಾಗಬಹುದು. ಅಪೊಸ್ತಲ ಪೌಲನಿಗೆ “ಶೂಲ ನನ್ನ ಶರೀರದಲ್ಲಿ ನಾಟಿದೆಯೋ ಎಂಬಂತೆ” ಇತ್ತು, ಪ್ರಾಯಶಃ ಅವನ ಕಣ್ಣಿನ ಬಾಧೆ ಯಾ ಅವನ ಶರೀರದ ಇನ್ನೊಂದು ಅಂಗದ ಬಾಧೆಯಾಗಿದ್ದಿರಬಹುದು, ಅದು ಎಷ್ಟೊಂದು ತೊಂದರೆಯನ್ನೀಯುತ್ತಿತ್ತು ಅಂದರೆ ಪುನಃ ಪುನಃ ಪರಿಹಾರಕ್ಕಾಗಿ ಅವನು ಪ್ರಾರ್ಥಿಸಿದನು. (2 ಕೊರಿಂಥ 12:7-10) ಆದರೆ ದೇವರು ಪೌಲನನ್ನು ವಾಸಿಮಾಡಲಿಲ್ಲ, ಮತ್ತು ಪ್ರಾಯಶಃ ಮರಣದ ತನಕ ಈ ಬಾಧೆಯನ್ನು ಅಪೊಸ್ತಲನು ತಾಳಿಕೊಂಡಿದ್ದಿರಬೇಕು. ಈ ಬಾಧೆಯೊಂದಿಗೆ ಅವನು ಜೀವಿಸಿದನು, ಅನುಕಂಪಕ್ಕಾಗಿ ಬೇಡಲಿಲ್ಲ, ಮತ್ತು ಎಂದಿಗೂ ಅವನ ಆನಂದವನ್ನು ಕಳಕೊಳ್ಳಲಿಲ್ಲ. (2 ಕೊರಿಂಥ 7:4) ನೀತಿವಂತ ಮನುಷ್ಯನಾಗಿದ್ದ ಯೋಬನು ಮಹಾ ಬಾಧೆಯನ್ನು ಅನುಭವಿಸಿದರೂ, ಯೆಹೋವನಲ್ಲಿ ತನ್ನ ವಿಶ್ವಾಸವನ್ನು ಅವನು ಕಾಪಾಡಿಕೊಂಡನು, ಮತ್ತು ಇದು ಹೇರಳವಾದ ಬಹುಮಾನಕ್ಕೆ ನಡಿಸಿತು. (ಯೋಬ 42:12, 13) ನಾವು ದೇವರ ಸೇವಕರಾಗಿರುವುದಾದರೆ, ಈ ಉದಾಹರಣೆಗಳ ಮೇಲೆ ಪ್ರತಿಬಿಂಬಿಸುವುದರ ಮೂಲಕ ಮತ್ತು ಯೆಹೋವನ ಸಹಾಯಕ್ಕಾಗಿ ಬೇಡುವುದರ ಮೂಲಕ ತಾಳಿಕೊಳ್ಳಲು ಬಲವನ್ನು ನಾವು ದೊರಕಿಸಿಕೊಳ್ಳಬಲ್ಲೆವು.—ಕೀರ್ತನೆ 41:1-3.
ಆಶಾಭಂಗಗಳ ಎದುರಲ್ಲೂ ಬಲ
ಯಾವುವೇ ಆಶಾಭಂಗಗಳ ಎದುರಿನಲ್ಲಿಯೂ ಯೆಹೋವನ ಜನರು ಆತ್ಮಿಕವಾಗಿ ಬಲವಾಗಿರಸಾಧ್ಯವಿದೆ. ಉದಾಹರಣೆಗೆ, ರೋಗವನ್ನು ನಾವು ತಾಳಿಕೊಳ್ಳಬೇಕಾಗಿರುವುದಾದರೂ, ದೇವರ ಆತ್ಮಿಕ ಒದಗಿಸುವಿಕೆಗಳ ಎಲ್ಲಾ ಸದುಪಯೋಗವನ್ನು ಮಾಡಿಕೊಳ್ಳುವದರ ಮೂಲಕ, ನಾವು “ಸ್ವಸ್ಥಬೊಧನೆ”ಯಲ್ಲಿ ನಿಲ್ಲಶಕ್ತರಾಗಿದ್ದೇವೆ. (ತೀತ 2:1, 2) ಪ್ರಾಪಂಚಿಕವಾಗಿ ನಾವು ನಿರಾಶಜನಕರಾಗಿ ಬಡವರಾಗಿಬಹುದಾದರೂ, ಆಶ್ಚರ್ಯಕರವಾಗಿ ನಾವು ಅತ್ಮಿಕವಾಗಿ ಐಶ್ವರ್ಯವಂತರಾಗಿರಸಾಧ್ಯವಿದೆ.
ವಿವೇಕ ಮತ್ತು ಬಲಕ್ಕಾಗಿ ದೇವರ ಮೇಲೆ ಆತುಕೊಳ್ಳುವ ಮೂಲಕ, ಗೃಹಸಂಬಂಧದ ಸನ್ನಿವೇಶಗಳಲ್ಲಿ ಎದ್ದೇಳುವ ಆಶಾಭಂಗಗಳನ್ನು ನಾವು ನಿಭಾಯಿಸಬಲ್ಲೆವು. ಉದಾಹರಣೆಗೆ, ನಾಬಾಲನ ಹೆಂಡತಿಯಾದ ಅಬೀಗೈಲಳನ್ನು ಪರಿಗಣಿಸಿರಿ. ಅವನು “ನಿಷ್ಠುರನೂ ದುಷ್ಕರ್ಮಿಯೂ” ಆಗಿದ್ದನು, ಮತ್ತು ಅವನ ಹೆಸರು ತಾನೇ “ಬುದ್ಧಿಯಿಲ್ಲದವನು; ಮೂರ್ಖನು” ಎಂದೇ ಅರ್ಥವಾಗಿದೆ. ಅಂಥ ಮನುಷ್ಯನೊಂದಿಗೆ ಜೀವಿಸುವುದು ತಾನೇ ಎಂಥ ಹತಾಶೆಯನ್ನುಂಟು ಮಾಡಿರಬೇಕು! ಆದರೂ, ಅಬೀಗೈಲಳು “ಬಹುಬುದ್ಧಿವಂತೆಯಾಗಿ” ಉಳಿದಳು ಮತ್ತು ನಿರಾಶೆಗೊಳ್ಳಲಿಲ್ಲ. ಒಂದು ಆಪತ್ಕಾಲದಲ್ಲಿ ಅವಳ ಮಾತುಗಳು ಮತ್ತು ಕೃತ್ಯಗಳು ಎಷ್ಟೊಂದು ವಿವೇಕತನದ್ದಾಗಿದ್ದುವೆಂದರೆ, ದಾವೀದನು ನಾಬಾಲನ ಅಪಮಾನಗಳಿಗೆ ಮತ್ತು ಕೃತಘ್ನತೆಗೆ, ರಕ್ತವನ್ನು ಸುರಿಸಿ ಮತ್ತು ಯೆಹೋವನಲ್ಲಿ ಭರವಸವನ್ನಿಡಲು ತಪ್ಪುವಂತಹ ರೀತಿಯಲ್ಲಿ ಪ್ರತೀಕಾರಮಾಡದಂತೆ ಅವನಿಗೆ ಮನವರಿಕೆ ಮಾಡಿದಳು.—1 ಸಮುವೇಲ 25:2-38.
ಕ್ರೈಸ್ತ ಸಭೆಯಲ್ಲಿ ಸಹವಸಿಸುವ ಒಬ್ಬನನ್ನು ಒಳಗೂಡಿರುವಂತಹ ಸನ್ನಿವೇಶವೊಂದು ನಮಗೆ ಆಶಾಭಂಗ ತರಲು ಕಾರಣವಾದರೂ ಕೂಡ, ಯೆಹೋವನು ದಯಪಾಲಿಸುವ ಬಲದಿಂದ ನಾವು ತಾಳಿಕೊಳ್ಳಸಾಧ್ಯವಿದೆ. ದಿಯೊತ್ತೇಪನ ನಿರಾಶೆಗೊಳಿಸುವ ಸಂಭಾವ್ಯತೆಯಿರುವ ವರ್ತನೆಯು, ದೈವಭಕ್ತಿಯ ಮನುಷ್ಯನಾದ ಗಾಯನು ಒಳ್ಳೆಯದನ್ನು ಮಾಡುವುದನ್ನು ಮತ್ತು ಹೀಗೆ ಸಂತೋಷವನ್ನು ಮತ್ತು ಹೇರಳವಾದ ಆತ್ಮಿಕ ಬಹುಮಾನಗಳನ್ನು ಕೊಯ್ಯುವುದನ್ನು ತಡೆಯಲಿಲ್ಲ ಎಂಬ ವಾಸ್ತವಾಂಶದಿಂದ ಇದು ತೋರಿಸಲ್ಪಟ್ಟಿದೆ.—ಅ. ಕೃತ್ಯಗಳು 20:35; 3 ಯೋಹಾನ 1-10.
ಸಭೆಯಲ್ಲಿ ನಮ್ಮ ಸಹ ವಿಶ್ವಾಸಿಗಳ ಸೇವೆಯನ್ನು ಮಾಡಲು ನಾವು ಬಯಸುವಾಗ, ಆದರೆ ನಮ್ಮನ್ನು ಬಿಟ್ಟು ಇತರರನ್ನು ಹಿರಿಯರನ್ನಾಗಿ ಯಾ ಶುಶ್ರೂಷಕಾ ಸೇವಕರಾಗಿ ನೇಮಿಸಿದಾಗ, ನಿರಾಶೆಯು ಫಲಿತಾಂಶವಾಗಿ ಬರಬಹುದು. ಈ ನಿರಾಶೆಯು ನಮ್ಮನ್ನು ಮುಳುಗಿಸಿಬಿಡುವಂತೆ ಅನುಮತಿಸುವುದರ ಬದಲು, ನಮ್ಮನ್ನು ಸ್ವತಃ ಆತ್ಮಿಕವಾಗಿ ಬಲಗೊಳಿಸಲು ಹುಡುಕೋಣ ಮತ್ತು ದೇವರ ಆತ್ಮದ ಫಲಗಳು ಇನ್ನಷ್ಟು ವ್ಯಾಪಕವಾಗಿ ನಮ್ಮಲ್ಲಿ ಉತ್ಪಾದಿಸಲ್ಪಡುವಂತೆ ಅನ್ವೇಷಿಸೋಣ. (ಗಲಾತ್ಯ 5:22, 23) ಮಿದ್ಯಾನ್ಯರಲ್ಲಿ 40 ವರ್ಷ ಮೋಶೆಯು ಕಳೆದ ಸಮಯದಲ್ಲಿ, ಅವನಲ್ಲಿ ಉನ್ನತ ಮಟ್ಟದ ನಮ್ರತೆ, ತಾಳ್ಮೆ, ಮತ್ತು ಇಸ್ರಾಯೇಲ್ಯರ ನಾಯಕನಾಗಿ ಅವನು ಎದುರಿಸಲಿರುವ ಕಠಿಣದೆಸೆಗಳನ್ನು ಮತ್ತು ಆಶಾಭಂಗಗಳನ್ನು ನಿಭಾಯಿಸಲು ಬೇಕಾದ ಇತರ ಗುಣಗಳನ್ನು ದೇವರು ಬೆಳೆಸಿದನು. ತದ್ರೀತಿಯಲ್ಲಿ, ಆತ್ಮಿಕವಾಗಿ ಬಲವಾಗಿ ನಿಲ್ಲುವುದಾದರೆ ಮತ್ತು ಆಶಾಭಂಗಕ್ಕೆ ನಾವು ಬಲಿಯಾಗದಿರುವುದಾದರೆ, ಭವಿಷ್ಯದ ಸೇವಾ ಸುಯೋಗಗಳಿಗಾಗಿ ಯೆಹೋವನು ನಮ್ಮನ್ನು ಸಿದ್ಧಗೊಳಿಸುತ್ತಿರಬಹುದು.
ಆಶಾಭಂಗದಿಂದ ಪರಿಹಾರ—ಶೀಘ್ರದಲ್ಲಿಯೇ!
ಯಾವುದೇ ಸ್ವರೂಪದ್ದೇ ಆಗಿರಲಿ, ನಮ್ಮ ಆಶಾಭಂಗಗಳು ಎಂದಿಗೂ ಅಂತ್ಯಗೊಳ್ಳುವದಿಲ್ಲವೇ? ನಮಗೆ, ನಮ್ಮ ಸನ್ನಿವೇಶವು ನಿರೀಕ್ಷಾಹೀನವಾಗಿ ತೋರಬಹುದು, ಆದರೆ ನಮ್ಮ ನಿರ್ಮಾಣಿಕನಾದ ಯೆಹೋವ ದೇವರಿಗೆ ಅಲ್ಲ. ಅವನು ಆಶಾಭಂಗಕ್ಕೆ ಒಳಪಡುವುದಿಲ್ಲ. ಪ್ರವಾದಿ ಯೆಶಾಯನ ಮೂಲಕ ದೇವರು ಹೇಳಿದ್ದು: “ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” (ಯೆಶಾಯ 55:11) ಯೆಹೋವನಿಗೆ ಸರ್ವಶಕ್ತಿ ಮತ್ತು ಅಧಿಕಾರ ಇರುವುದರಿಂದ, ಅವನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. (ಮಾರ್ಕ 10:27) ಮುಗಿಯದ ಆಶೀರ್ವಾದಗಳನ್ನು ತರುವ ಅವನ ವಾಗ್ದಾನಗಳು ಖಂಡಿತವಾಗಿಯೂ ನೆರವೇರಲಿರುವವು.—ಯೆಹೋಶುವ 21:45.
ಸಂದೇಹ ಮತ್ತು ಅನಿಶ್ಚತತೆಗಳು ಆಶಾಭಂಗದ ಪ್ರಧಾನ ಘಟಕಾಂಶಗಳಾಗಿವೆ, ವ್ಯತಿರಿಕ್ತವಾಗಿ, “ನಂಬಿಕೆಯೋ . . . ನಿರೀಕ್ಷಿಸುವವುಗಳ ವಿಷಯವಾಗಿ ನಿಜವೆಂದು ಭರವಸದಿಂದಿರುವದು” ಆಗಿದೆ. (ಇಬ್ರಿಯ 11:1) ದೇವರಲ್ಲಿ ನಂಬಿಕೆಯು ನಮ್ಮ ಬೈಬಲಾಧಾರಿತ ಎಲ್ಲಾ ನಿರೀಕ್ಷೆಗಳು ಪೂರ್ಣವಾಗಿ ನೆರವೇರುವವು ಎಂಬ ಖಾತರಿಯನ್ನು ಕೊಡುತ್ತವೆ. ಬೈಬಲಿನ ಸಮಗ್ರ ಮುಖ್ಯವಿಷಯವು ಯೆಹೋವನ ವಾಗ್ದಾನಿತ ರಾಜ್ಯ ಆಳ್ವಿಕೆಯನ್ನು ಎತ್ತಿಹಿಡಿಯುತ್ತದೆ, ಅದರ ಕೆಳಗೆ ಭೂಮಿಯು ಪರಿಪೂರ್ಣ ಪರದೈಸವಾಗಲಿರುವದು, ಅಲ್ಲಿ ನೀತಿಯ ಜನರು ಸದಾಕಾಲ ಆನಂದದಿಂದ ಜೀವಿಸಲಿರುವರು. (ಕೀರ್ತನೆ 37:11, 29) ಕೆಟ್ಟದ್ದೆಲ್ಲವೂ—ಆಶಾಭಂಗ ಸಹಿತ—ಇಲ್ಲದೆ ಹೋಗುವವು, ಯಾಕಂದರೆ ದೇವರು ‘ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸ’ಲಿರುವನು.—ಕೀರ್ತನೆ 145:16.
ಅವೆಲ್ಲಾ ಆಸೀರ್ವಾದಗಳು ಒಂದು ವಾಸ್ತವತೆಯಾಗುವ ತನಕ ನಮಗೆಲ್ಲರಿಗೂ, ಆಶಾಭಂಗದ ನಮ್ಮ ಪಾಲು ಇರುವುದು. ಆದರೆ ಶಾಸ್ತ್ರೀಯ ನಿರೀಕ್ಷೆಯ ನಮಗೆ ಧೈರ್ಯ ಮತ್ತು ತಾಳಿಕೊಳ್ಳಲು ಸಹಿಷ್ಟುತೆಯನ್ನು ಕೂಡ ಬಲ್ಲದು. ಬೈಬಲಿನಲ್ಲಿ ನಾವು ಕಂಡುಕೊಳ್ಳುವ ಸ್ವಸ್ಥವಾದ ಬುದ್ಧಿವಾದವು ಒಳ್ಳೆಯ ನಿರ್ಣಯವನ್ನು ಮತ್ತು ಸಮಂಜಸತೆಯನ್ನು ನಾವು ಹೇಗೆ ಬಳಸಬೇಕು ಎಂದು ನಮಗೆ ತೋರಿಸಬಲ್ಲದು, ಆ ಮೂಲಕ ಅದು ನಮ್ಮ ಜೀವಿತಗಳಲ್ಲಿ ಸ್ಥಿರತೆಯನ್ನೂ ಮತ್ತು ನಮ್ಮ ಹೃದಯಕ್ಕೆ ಶಾಂತಿಯನ್ನೂ ತರಲಿರುವುದು. ನಮ್ಮ ನಿರಾಶೆಗಳ ಹೊರತಾಗಿಯೂ, ನಾವು “ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿ”ಯನ್ನು ಅನುಭವಿಸಸಾಧ್ಯವಿದೆ. (ಫಿಲಿಪ್ಪಿ 4:6, 7) ಆದುದರಿಂದ ಆಶಾಭಂಗದ ವಿರುದ್ಧವಾದ ಹೋರಾಟವು ಆಶಾರಹಿತವಲ್ಲ. ಯೆಹೋವನ ಸಹಾಯದೊಂದಿಗೆ ನಾವದನ್ನು ಇಂದು ನಿಭಾಯಿಸಶಕ್ತರು ಮತ್ತು ನಾಳೆ ಅದನ್ನು ಜಯಿಸುವೆವು.
[ಪುಟ 30 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಆಶಾಭಂಗವನ್ನು ನಿಭಾಯಿಸುವಂತೆ, ಅವನು ಯೋಬ, ಮೋಶೆ, ಅಬೀಗೈಲ, ಮತ್ತು ಪೌಲರಿಗೆ ಸಹಾಯಮಾಡಿದ್ದಂತೆ, ಯೆಹೋವನು ನಿಮಗೆ ಸಹಾಯ ಮಾಡಬಲ್ಲನು