ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸಿರಿ
“ಕರ್ತವ್ಯನಿಷ್ಠನೊಂದಿಗೆ ನೀನು [ಯೆಹೋವ] ಕರ್ತವ್ಯನಿಷ್ಠೆಯಲ್ಲಿ ಕ್ರಿಯೆಗೈಯುವಿ.”—2 ಸಮುವೇಲ 22:26, NW.
1. ತನಗೆ ಕರ್ತವ್ಯನಿಷ್ಠೆಯುಳ್ಳವರೊಂದಿಗೆ ಯೆಹೋವನು ಹೇಗೆ ಕ್ರಿಯೆಗೈಯುತ್ತಾನೆ?
ಯೆಹೋವನು ತನ್ನ ಜನರಿಗಾಗಿ ಮಾಡುವ ಎಲ್ಲವುಗಳ ಬದಲಾಗಿ ಏನನ್ನೂ ಹಿಂದೆ ಸಲ್ಲಿಸಸಾಧ್ಯವಿಲ್ಲ. (ಕೀರ್ತನೆ 116:12) ಆತನ ಆತ್ಮಿಕ ಮತ್ತು ಭೌತಿಕ ದಾನಗಳು ಮತ್ತು ಕೋಮಲ ಕರುಣೆಯು ಅವೆಷ್ಟು ಆಶ್ಚರ್ಯಕರವು! ತನಗೆ ಕರ್ತವ್ಯನಿಷ್ಠರಾಗಿರುವವರೊಂದಿಗೆ ದೇವರು ಸಹ ಕರ್ತವ್ಯನಿಷ್ಠೆಯಲ್ಲಿ ಕ್ರಿಯೆಗೈಯುತ್ತಾನೆಂದು ಪ್ರಾಚೀನ ಇಸ್ರಾಯೇಲಿನ ಅರಸ ದಾವೀದನಿಗೆ ತಿಳಿದಿತ್ತು. “ಯೆಹೋವನು ದಾವೀದನನ್ನು ಎಲ್ಲಾ ಶತ್ರುಗಳ ಕೈಗೂ [ಅರಸ] ಸೌಲನ ಕೈಗೂ ಸಿಕ್ಕದಂತೆ ತಪ್ಪಿಸಿದಾಗ” ಅವನು ರಚಿಸಿದ ಪದ್ಯವೊಂದರಲ್ಲಿ ಹಾಗೆಂದು ಹೇಳಿದ್ದನು.—2 ಸಮುವೇಲ 22:1.
2. ಯಾವ ಕೆಲವು ವಿಷಯಗಳನ್ನು 2 ಸಮುವೇಲ 22 ನೆಯ ಅಧ್ಯಾಯದಲ್ಲಿ ದಾಖಲೆಯಾದ ದಾವೀದನ ಪದ್ಯದಲ್ಲಿ ನಿರೂಪಿಸಲಾಗಿದೆ?
2 ಯೆಹೋವನು ಪ್ರಾರ್ಥನೆಗೆ ಉತ್ತರವಾಗಿ “ವಿಮೋಚನೆಯನ್ನು” ಒದಗಿಸುವವನು ಎಂದು ಸ್ತುತಿಸುವ ಮೂಲಕ ದಾವೀದನು (ಕೀರ್ತನೆ 18 ಕ್ಕೆ ಅನುರೂಪವಾಗಿರುವ) ತನ್ನ ಪದ್ಯವನ್ನು ಪ್ರಾರಂಭಿಸಿದನು. (2 ಸಮುವೇಲ 22:2-7) ತನ್ನ ಸ್ವರ್ಗೀಯ ಆಲಯದಿಂದ ತನ್ನ ಕರ್ತವ್ಯನಿಷ್ಠ ಸೇವಕನನ್ನು ಬಲಾಢ್ಯ ಶತ್ರುಗಳ ಕೈಯಿಂದ ಬಿಡಿಸಲು ದೇವರು ಕ್ರಿಯೆಗೈದನು. (ವಚನಗಳು 8-19) ಹೀಗೆ ಒಂದು ನೀತಿಯ ನಡೆವಳಿಯನ್ನು ಬೆನ್ನಟ್ಟಿದ್ದಕ್ಕಾಗಿ ಮತ್ತು ಯೆಹೋವನ ಮಾರ್ಗವನ್ನು ಅನುಸರಿಸಿದಕ್ಕಾಗಿ ದಾವೀದನಿಗೆ ಪ್ರತಿಫಲ ಸಿಕ್ಕಿತು. (ವಚನಗಳು 20-27) ಅನಂತರ, ದೇವದತ್ತ ಬಲದಲ್ಲಿ ಮಾಡಲ್ಪಟ್ಟ ಕೃತ್ಯಗಳನ್ನು ನಮೂದಿಸಲಾಗಿದೆ. (ವಚನಗಳು 28-43) ಕೊನೆಗೆ ದಾವೀದನು, ಸ್ವದೇಶದ ಮತ್ತು ದೇಶಾಂತರದ ಕಲಹಗಾರರೊಳಗಿಂದ ತನಗಾದ ವಿಮೋಚನೆಯನ್ನು ತಿಳಿಸುತ್ತಾನೆ ಮತ್ತು ಯೆಹೋವನು “ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನು . . . ತಾನು ಅಭಿಷೇಕಿಸಿದವನಿಗೆ . . . ಸದಾಕಾಲ ಕೃಪೆಯನ್ನು ಅನುಗ್ರಹಿಸುವನು” ಎಂದು ಆತನಿಗೆ ಉಪಕಾರ ಸಲ್ಲಿಸುತ್ತಾನೆ. (ವಚನಗಳು 44-51) ನಾವು ಸಹ ನೀತಿಯ ನಡೆವಳಿಯನ್ನು ಬೆನ್ನಟ್ಟಿದರೆ ಮತ್ತು ಬಲಕ್ಕಾಗಿ ಆತನ ಮೇಲೆ ಆತುಕೊಂಡರೆ ಯೆಹೋವನು ನಮ್ಮನ್ನೂ ವಿಮೋಚಿಸಶಕ್ತನು.
ಕರ್ತವ್ಯನಿಷ್ಠೆಯುಳ್ಳವನಾಗಿರುವುದು ಎಂಬದರ ಅರ್ಥ
3. ಒಂದು ಶಾಸ್ತ್ರೀಯ ದೃಷ್ಟಿಕೋನದಿಂದ, ಕರ್ತವ್ಯನಿಷ್ಠೆಯಿಂದಿರುವುದು ಎಂಬದರ ಅರ್ಥವೇನು?
3 ದಾವೀದನ ಈ ರಕ್ಷಣಾ ಗೀತವು ನಮಗೆ ಈ ಸಾಂತ್ವನದ ಆಶ್ವಾಸನೆಯನ್ನು ಕೊಡುತ್ತದೆ: “ಕರ್ತವ್ಯನಿಷ್ಠನೊಂದಿಗೆ ನೀನು [ಯೆಹೋವ] ಕರ್ತವ್ಯನಿಷ್ಠೆಯಲ್ಲಿ ಕ್ರಿಯೆಗೈಯುವಿ.” (2 ಸಮುವೇಲ 22:26, NW) ಹೀಬ್ರು ಗುಣವಾಚಕ ಚಾಸಿದ್ಹ್ ಎಂಬದು “ಕರ್ತವ್ಯನಿಷ್ಠನು” ಅಥವಾ “ಕೃಪಾವಂತನು” ಎಂಬದನ್ನು ನಿರ್ದೇಶಿಸುತ್ತದೆ. (ಕೀರ್ತನೆ 18:25) ನಾಮಪದ ಚಿಸೇದ್ಹ್ ನಲ್ಲಿ, ಒಂದು ವಸ್ತುವಿಗೆ ಅದರ ಸಂಬಂಧವಾದ ಉದ್ದೇಶವು ಪೂರ್ತಿಗೊಳ್ಳುವ ತನಕ ಪ್ರೀತಿಯಿಂದ ತನ್ನನ್ನು ಜೋಡಿಸಿಕೊಳ್ಳುವ ಒಂದು ದಯಾಭಾವವು ಅಡಕವಾಗಿದೆ. ಯೆಹೋವನು ತನ್ನ ಜನರಿಗೆ, ಅವರು ಆತನೆಡೆಗೆ ವ್ಯಕ್ತಪಡಿಸುವ ಪ್ರಕಾರವೇ, ಆ ರೀತಿಯ ಕೃಪೆಯನ್ನು ತೋರಿಸುತ್ತಾನೆ. ಈ ನೀತಿಯುಳ್ಳ, ಪವಿತ್ರ ನಿಷ್ಠೆಯನ್ನು “ಕೃಪೆ” ಮತ್ತು “ಕರ್ತವ್ಯನಿಷ್ಠ ಪ್ರೀತಿ” ಎಂಬದಾಗಿ ಭಾಷಾಂತರಿಸಲಾಗಿದೆ. (ಆದಿಕಾಂಡ 20:13; 21:23, NW) ಗ್ರೀಕ್ ಶಾಸ್ತ್ರಗ್ರಂಥದಲ್ಲಿ “ಕರ್ತವ್ಯನಿಷ್ಠೆ” ಯು, ನಾಮಪದವಾದ ಹೊಸಿಯೊಟಸ್ ಮತ್ತು ವಿಶೇಷಣವಾದ ಹೊಸಿಯೊಸ್ ನಲ್ಲಿ ವ್ಯಕ್ತಪಡಿಸಲ್ಪಟ್ಟ ಪವಿತ್ರತೆ ಮತ್ತು ಪೂಜ್ಯತೆಯ ಅಭಿಪ್ರಾಯವನ್ನು ಕೊಡುತ್ತದೆ. ಅಂಥ ಕರ್ತವ್ಯನಿಷ್ಠೆಯಲ್ಲಿ ನಂಬಿಗಸ್ತಿಕೆ ಮತ್ತು ಭಕ್ತಿಯು ಅಡಕವಾಗಿವೆ ಮತ್ತು ಧರ್ಮನಿಷ್ಠನಾಗಿರುವುದು ಮತ್ತು ದೇವರೆಡೆಗೆ ಎಲ್ಲಾ ಕರ್ತವ್ಯಗಳನ್ನು ಎಚ್ಚರಿಕೆಯಿಂದ ನಡಿಸುವುದು ಎಂಬರ್ಥವನ್ನು ಕೊಡುತ್ತದೆ. ಯೆಹೋವನಿಗೆ ಕರ್ತವ್ಯನಿಷ್ಠನಾಗಿರುವುದು ಎಂದರೆ ಅದು ಒಂದು ಪ್ರಬಲವಾದ ಅಂಟಿನಂತೆ ಕಾರ್ಯನಡಿಸುವಷ್ಟು ದೃಢವಾದ ಭಕ್ತಿಯಿಂದ ಯೆಹೋವನಿಗೆ ಅಂಟಿಕೊಳ್ಳುವುದೆಂದರ್ಥ.
4. ಯೆಹೋವನ ಕರ್ತವ್ಯನಿಷ್ಠೆಯು ಹೇಗೆ ತೋರಿಸಲ್ಪಟ್ಟಿದೆ?
4 ಯೆಹೋವನ ಸ್ವಂತ ಕರ್ತವ್ಯನಿಷ್ಠೆಯು ಅನೇಕ ರೀತಿಗಳಲ್ಲಿ ತೋರಿಸಲ್ಪಟ್ಟಿದೆ. ಉದಾಹರಣೆಗಾಗಿ, ಆತನು ದುಷ್ಟರ ವಿರುದ್ಧವಾಗಿ ದೈವದಂಡನೆಯನ್ನು ಕೈಕೊಳ್ಳುವುದು, ತನ್ನ ಜನರ ಕಡೆಗಿರುವ ಕರ್ತವ್ಯನಿಷ್ಠ ಪ್ರೀತಿಯಿಂದ ಮತ್ತು ನೀತಿ ನ್ಯಾಯಗಳೆಡೆಗಿರುವ ನಿಷ್ಠೆಯಿಂದಾಗಿಯೇ. (ಪ್ರಕಟನೆ 15:3, 4; 16:5) ಅಬ್ರಹಾಮನೊಂದಿಗೆ ಅವನ ಒಡಂಬಡಿಕೆಗೆ ಕರ್ತವ್ಯನಿಷ್ಠೆಯು, ಇಸ್ರಾಯೇಲ್ಯರೆಡೆಗೆ ದೀರ್ಘಶಾಂತಿಯಿಂದಿರುವಂತೆ ಅವನನ್ನು ಪ್ರೇರಿಸಿತು. (2 ಅರಸುಗಳು 13:23) ಯಾರು ದೇವರಿಗೆ ಕರ್ತವ್ಯನಿಷ್ಠರೋ ಅವರು ತಮ್ಮ ಕರ್ತವ್ಯನಿಷ್ಠ ನಡೆವಳಿಯ ಕೊನೆಯ ತನಕ ಆತನ ಸಹಾಯದ ಮೇಲೆ ಆತುಕೊಳ್ಳಬಲ್ಲರು ಮತ್ತು ಆತನು ಅವರನ್ನು ನೆನಪಿಸುವನೆಂಬ ಖಾತರಿಯಿಂದಿರಬಲ್ಲರು. (ಕೀರ್ತನೆ 37:27, 28; 97:10) ದೇವರ ಮುಖ್ಯ “ಕರ್ತವ್ಯನಿಷ್ಠ” ನೋಪಾದಿ ಯೇಸುವು ತನ್ನಾತ್ಮವೆಂದೂ ಶಿಯೋಲ್ನಲ್ಲಿ ಬಿಡಲ್ಪಡದು ಎಂಬ ಅರಿವಿನಿಂದ ಬಲಪಡಿಸಲ್ಪಟ್ಟನು.—ಕೀರ್ತನೆ 16:10, NW; ಅ. ಕೃತ್ಯಗಳು 2:25, 27.
5. ಯೆಹೋವನು ಕರ್ತವ್ಯನಿಷ್ಠನಾಗಿರುವುದರಿಂದ, ತನ್ನ ಸೇವಕರಿಂದ ಆತನೇನನ್ನು ಆವಶ್ಯಪಡಿಸುತ್ತಾನೆ, ಮತ್ತು ಯಾವ ಪ್ರಶ್ನೆಗೆ ಗಮನವನ್ನು ಕೊಡಲಾಗುವುದು?
5 ಯೆಹೋವ ದೇವರು ಕರ್ತವ್ಯನಿಷ್ಠನಾಗಿರುವುದರಿಂದ, ತನ್ನ ಸೇವಕರಿಂದ ಕರ್ತವ್ಯನಿಷ್ಠೆಯನ್ನು ಅವನು ಆವಶ್ಯಪಡಿಸುತ್ತಾನೆ. (ಎಫೆಸ 4:24) ಉದಾಹರಣೆಗಾಗಿ, ಸಭಾ ಹಿರಿಯರಾಗಿ ನೇಮಕಹೊಂದುವುದಕ್ಕೆ ಯೋಗ್ಯತೆ ಪಡೆಯಲು ಪುರುಷರು ಕರ್ತವ್ಯನಿಷ್ಠರಾಗಿರಬೇಕು. (ತೀತ 1:8) ಆತನನ್ನು ಕರ್ತವ್ಯನಿಷ್ಠೆಯಿಂದ ಸೇವಿಸಲು ಯೆಹೋವನ ಜನರನ್ನು ಯಾವ ವಿಷಯಗಳು ಪ್ರೇರೇಪಿಸತಕ್ಕದ್ದು?
ಕಲಿತ ವಿಷಯಗಳಿಗಾಗಿ ಗಣ್ಯತೆ
6. ನಾವು ಕಲಿತ ಶಾಸ್ತ್ರೀಯ ವಿಷಯಗಳ ಕುರಿತು ನಮ್ಮ ಭಾವನೆ ಏನಾಗಿರಬೇಕು, ಮತ್ತು ಅಂಥ ಜ್ಞಾನದ ಕುರಿತು ನಾವೇನನ್ನು ನೆನಪಿನಲ್ಲಡಬೇಕು?
6 ನಾವು ಕಲಿತ ಶಾಸ್ತ್ರೀಯ ವಿಷಯಗಳಿಗಾಗಿ ಗಣ್ಯತೆಯು ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುವಂತೆ ನಮ್ಮನ್ನು ಪ್ರೇರೇಪಿಸಬೇಕು. ಅಪೊಸ್ತಲ ಪೌಲನು ತಿಮೊಥೆಯನನ್ನು ಪ್ರೇರಿಸಿದ್ದು: “ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು. ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕವ್ತಾಗಿವೆ.” (2 ತಿಮೊಥೆಯ 3:14, 15) ಅಂಥ ಜ್ಞಾನವು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕವಾಗಿ ದೇವರಿಂದ ಬಂದದ್ದು ಎಂಬದನ್ನು ನೆನಪಿನಲ್ಲಿಡಿರಿ.—ಮತ್ತಾಯ 24:45-47.
7. ನಂಬಿಗಸ್ತ ಆಳಿನ ಮೂಲಕವಾಗಿ ದೇವರಿಂದ ಒದಗಿಸಲ್ಪಟ್ಟ ಆತ್ಮಿಕ ಆಹಾರದ ಕುರಿತು ಹಿರಿಯರ ಭಾವನೆ ಏನಾಗಿರಬೇಕು?
7 ನಂಬಿಗಸ್ತ ಆಳಿನ ಮೂಲಕವಾಗಿ ದೇವರಿಂದ ಒದಗಿಸಲ್ಪಟ್ಟ ಆ ಪೋಷಕ ಆತ್ಮಿಕ ಆಹಾರವನ್ನು ವಿಶೇಷವಾಗಿ ನೇಮಿತ ಹಿರಿಯರು ಗಣ್ಯಮಾಡತಕ್ಕದ್ದು. ವರ್ಷಗಳ ಹಿಂದೆ ಕೆಲವು ಹಿರಿಯರು ಅಂಥ ಗಣ್ಯತೆ ಇಲ್ಲದೆ ಇದ್ದರು. ಈ ಪುರುಷರು “ದ ವಾಚ್ಟವರ್ ನಲ್ಲಿ ಲೇಖನಗಳನ್ನು ದೇವರ ಸತ್ಯದ ಕಾಲುವೆಯಾಗಿ . . . ಸ್ವೀಕರಿಸಲು ಬಯಸದಿದವ್ದರಾಗಿ, ಯಾವಾಗಲೂ ತಮ್ಮ ಆಲೋಚನೆಯ ಮೇರೆಗೆ ಇತರರನ್ನು ಪ್ರಭಾವಿಸಲು ಪ್ರಯತ್ನಿಸುತ್ತಾ, ಅವನ್ನು ವಿಮರ್ಶಾತ್ಮಕವಾಗಿ ನೋಡುತ್ತಿದ್ದರು,” ಎಂದು ಒಬ್ಬಾಕೆ ಪ್ರೇಕ್ಷಕಿ ಗಮನಿಸಿದಳು. ಆದರೂ, ಕರ್ತವ್ಯನಿಷ್ಠ ಹಿರಿಯರು ನಂಬಿಗಸ್ತ ಆಳಿನ ಮೂಲಕವಾಗಿ ದೇವರಿಂದ ಒದಗಿಸಲ್ಪಟ್ಟ ಯಾವುದೇ ಆತ್ಮಿಕ ಆಹಾರವನ್ನು ತಿರಸ್ಕರಿಸುವಂತೆ ಇತರರನ್ನು ಪ್ರಭಾವಿಸಲು ಎಂದೂ ಪ್ರಯತ್ನಿಸುವುದಿಲ್ಲ.
8. ನಂಬಿಗಸ್ತನೂ ವಿಶ್ವಾಸಿಯೂ ಆದಂಥ ಆಳಿನಿಂದ ನೀಡಲ್ಪಟ್ಟ ಕೆಲವು ಶಾಸ್ತ್ರೀಯ ವಿಷಯವನ್ನು ಒಂದುವೇಳೆ ನಾವು ಪೂರ್ಣವಾಗಿ ಗಣ್ಯಮಾಡದಿದ್ದರೆ, ಆಗೇನು?
8 ಯೆಹೋವನ ಸಮರ್ಪಿತ ಸಾಕ್ಷಿಗಳೋಪಾದಿ, ನಾವೆಲ್ಲರೂ ಆತನಿಗೆ ಮತ್ತು ಆತನ ಸಂಸ್ಥೆಗೆ ಕರ್ತವ್ಯನಿಷ್ಠರಾಗಿ ಇರತಕ್ಕದ್ದು. ಇಂದು ಆತ್ಮಿಕ ಮರಣಕ್ಕೆ ಮತ್ತು ಕಟ್ಟಕಡೆಗೆ ನಾಶನಕ್ಕೆ ನಡಿಸಬಲ್ಲ ಒಂದು ಧರ್ಮಭ್ರಷ್ಟ ನಡೆವಳಿಯನ್ನು ಬೆನ್ನಟ್ಟುತ್ತಾ, ದೇವರ ಆಶ್ಚರ್ಯಕರವಾದ ಬೆಳಕಿನಿಂದ ದೂರ ತೆರಳುವುದನ್ನು ನಾವೆಂದೂ ಆಲೋಚಿಸಲು ಸಹ ಬಾರದು. (ಯೆರೆಮೀಯ 17:13) ಆದರೆ ನಂಬಿಗಸ್ತ ಆಳಿನಿಂದ ನೀಡಲ್ಪಟ್ಟ ಒಂದು ಶಾಸ್ತ್ರೀಯ ವಿಷಯವನ್ನು ಸ್ವೀಕರಿಸಲು ಅಥವಾ ಪೂರ್ಣವಾಗಿ ಗಣ್ಯಮಾಡಲು ಒಂದುವೇಳೆ ನಮಗೆ ಕಷ್ಟವಾದರೆ ಆಗೇನು? ಆಗ ನಾವು, ಸತ್ಯವನ್ನು ಎಲ್ಲಿಂದ ಕಲಿತೆವು ಎಂಬದನ್ನು ಧೈನ್ಯದಿಂದ ಅಂಗೀಕರಿಸೋಣ ಮತ್ತು ವಿಷಯಗಳ ಕೆಲವು ಪ್ರಕಾಶಿತ ಸ್ಪಷ್ಟೀಕರಣದೊಂದಿಗೆ ಅದು ಕೊನೆಗೊಳ್ಳುವ ತನಕ ಈ ಶೋಧನೆಯೊಂದಿಗೆ ವ್ಯವಹರಿಸಲು ವಿವೇಕಕ್ಕಾಗಿ ಪ್ರಾರ್ಥಿಸೋಣ.—ಯಾಕೋಬ 1:5-8.
ಕ್ರೈಸ್ತ ಸಹೋದರತ್ವವನ್ನು ಗಣ್ಯಮಾಡಿರಿ
9. ಕ್ರೈಸ್ತರಲ್ಲಿ ಸಾಹಚರ್ಯದ ಆತ್ಮವಿರಬೇಕೆಂದು 1 ಯೋಹಾನ 1:3-6 ಹೇಗೆ ತೋರಿಸುತ್ತದೆ?
9 ನಮ್ಮ ಕ್ರೈಸ್ತ ಸಹೋದರತ್ವದೊಳಗೆ ಅಸ್ತಿತ್ವದಲ್ಲಿರುವ ಸಾಹಚರ್ಯದ ಆತ್ಮಕ್ಕಾಗಿ ಹೃದಯಪೂರ್ವಕ ಗಣ್ಯತೆಯು ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುವುದಕ್ಕೆ ಇನ್ನೊಂದು ಪ್ರೇರಕವಾಗಿಯದೆ. ವಾಸ್ತವದಲ್ಲಿ ಈ ಆತ್ಮದ ಹೊರತು, ದೇವರೊಂದಿಗೆ ಮತ್ತು ಕ್ರಿಸ್ತನೊಂದಿಗೆ ನಮ್ಮ ಸಂಬಂಧವು ಆತ್ಮಿಕವಾಗಿ ದೃಢವಾಗಿರದು. ಅಪೊಸ್ತಲ ಯೋಹಾನನು ಅಭಿಷಿಕ್ತ ಕ್ರೈಸ್ತರಿಗೆ ಹೇಳಿದ್ದು: “ನಾವು ಕಂಡುಕೇಳಿದ್ದು ನಿಮಗೂ ಗೊತ್ತಾಗಿ ನಮಗಿರುವ ಅನ್ಯೋನ್ಯತೆ [“ಸಾಹಚರ್ಯ,” ಡಯಗ್ಲಾಟ್] ಯಲ್ಲಿ ನೀವೂ ಸೇರಬೇಕೆಂದು ಅದನ್ನು ನಿಮಗೆ ಪ್ರಸಿದ್ಧಿಪಡಿಸುತ್ತೇವೆ. ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರುವಂಥದು. . . . ನಾವು ದೇವರ ಸಂಗಡ ಅನ್ಯೋನ್ಯತೆಯುಳ್ಳವರಾಗಿದ್ದೇವೆಂದು ಹೇಳಿ ಕತ್ತಲೆಯಲ್ಲಿ ನಡೆದರೆ ಸುಳ್ಳಾಡುವವರಾಗಿದ್ದೇವೆ, ಸತ್ಯವನ್ನನುಸರಿಸುವವರಲ್ಲ.” (1 ಯೋಹಾನ 1:3-6) ಈ ಸೂತ್ರವು ಎಲ್ಲಾ ಕ್ರೈಸ್ತರಿಗೆ, ಅವರ ನಿರೀಕ್ಷೆಯು ಸ್ವರ್ಗೀಯವಾಗಿರಲಿ ಅಥವಾ ಐಹಿಕವಾಗಿರಲಿ, ಅನ್ವಯಿಸುತ್ತದೆ.
10. ಯುವೊದ್ಯ ಮತ್ತು ಸಂತುಕೆಗೆ ಒಂದು ವೈಯಕ್ತಿಕ ಸಮಸ್ಯೆಯನ್ನು ಪರಿಹರಿಸುವುದು ಕಷ್ಟವೆಂದು ತೋರಿಬಂದರೂ, ಪೌಲನು ಈ ಸ್ತ್ರೀಯರನ್ನು ಹೇಗೆ ವೀಕ್ಷಿಸಿದ್ದನು?
10 ಸಾಹಚರ್ಯದ ಒಂದು ಆತ್ಮವನ್ನು ಕಾಪಾಡಿಕೊಳ್ಳಲು ಪ್ರಯತ್ನದ ಆವಶ್ಯಕತೆಯಿದೆ. ಉದಾಹರಣೆಗಾಗಿ, ಕ್ರೈಸ್ತ ಸ್ತ್ರೀಯರಾದ ಯುವೊದ್ಯ ಮತ್ತು ಸಂತುಕೆ ತಮ್ಮೊಳಗಿನ ಒಂದು ಸಮಸ್ಯೆಯನ್ನು ನಿಭಾಯಿಸಲು ಕಷ್ಟವಾಗಿ ಕಂಡರು. ಆದ್ದರಿಂದ “ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿ” ರುವಂತೆ ಪೌಲನು ಅವರಿಗೆ ಬುದ್ಧಿವಾದ ಹೇಳಿದನು. ಅವನು ಕೂಡಿಸಿದ್ದು: “ಸತ್ಯ ಸಯುಜನೇ, ಅವರಿಗೆ ಸಹಾಯಕನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕೇಮ್ಲೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು. ಅವರವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದವೆ.” (ಫಿಲಿಪ್ಪಿ 4:2, 3) ಆ ದೇವಭಕ್ತೆಯರಾದ ಸ್ತ್ರೀಯರು ಪೌಲನೊಂದಿಗೆ ಮತ್ತು ಇತರರೊಂದಿಗೆ “ಸುವಾರ್ತೆಗೋಸ್ಕರ” ಒತ್ತಾಗಿ ಹೋರಾಡಿದ್ದರು ಮತ್ತು ಯಾರ ‘ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದವೆ’ ಯೋ ಅವರಲ್ಲಿ ಇವರೂ ಸೇರಿದ್ದರೆಂಬ ವಿಷಯದಲ್ಲಿ ಪೌಲನು ನಿಶ್ಚಯತೆಯಿಂದಿದ್ದನು.
11. ಒಬ್ಬ ಕರ್ತವ್ಯನಿಷ್ಠ ಕ್ರೈಸ್ತನು ಒಂದು ಆತ್ಮಿಕ ಸಮಸ್ಯೆಯನ್ನು ಎದುರಿಸಿದ್ದಾದರೆ, ಏನನ್ನು ಮನಸ್ಸಿನಲ್ಲಿಡುವುದು ಯೋಗ್ಯವಾಗಿರುವುದು?
11 ಯೆಹೋವನ ಸಂಸ್ಥೆಯಲ್ಲಿ ಏನು ಮಾಡಲು ತಾವು ಸುಯೋಗವನ್ನು ಪಡೆದಿದ್ದಾರೋ ಅದನ್ನು ಮತ್ತು ತಾವು ಹೇಗೆ ಕರ್ತವ್ಯನಿಷ್ಠೆಯಿಂದ ಅವನನ್ನು ಸೇವಿಸಿದ್ದಾರೆ ಎಂಬದನ್ನು ತೋರಿಸಲಿಕ್ಕಾಗಿ ಒಂದು ಪದಚಿಹ್ನೆಯನ್ನು ಕ್ರೈಸ್ತರು ಧರಿಸುವುದಿಲ್ಲ. ಅವರಿಗೆ ಒಂದು ಆತ್ಮಿಕ ಸಮಸ್ಯೆಯಿದ್ದರೆ, ಯೆಹೋವನಿಗೆ ಅವರ ವರ್ಷಾವಧಿಗಳ ಕರ್ತವ್ಯನಿಷ್ಠೆಯ ಸೇವೆಯನ್ನು ದುರ್ಲಕ್ಷಿಸುವುದು ಅದೆಷ್ಟು ಪ್ರೀತಿಹೀನತೆಯು! “ಸತ್ಯ ಸಯುಜನೇ” ಎಂದು ಕರೆಯಲ್ಪಟ್ಟ ಆ ವ್ಯಕ್ತಿಯು ಇತರರಿಗೆ ನೆರವಾಗಲು ಉತ್ಸುಕನಾಗಿದ್ದ ಒಬ್ಬ ಕರ್ತವ್ಯನಿಷ್ಠ ಸಹೋದರನಾಗಿದ್ದಿರುವುದು ಸಂಭವನೀಯ. ನೀವೊಬ್ಬ ಹಿರಿಯರಾಗಿದ್ದರೆ, ಕರುಣೆತೋರುವ ರೀತಿಯಲ್ಲಿ ಸಹಾಯನೀಡಲು ಸಿದ್ಧರಾಗಿರುವ ಒಬ್ಬ “ಸತ್ಯ ಸಯುಜನು” ನೀವಾಗಿದ್ದೀರೋ? ದೇವರು ಕೂಡ ಮಾಡುವ ಪ್ರಕಾರವೇ, ನಾವೆಲ್ಲರೂ ನಮ್ಮ ಜೊತೆ ವಿಶ್ವಾಸಿಗಳಿಂದ ನಡಿಸಲ್ಪಟ್ಟ ಸತ್ಕಾರ್ಯವನ್ನು ಪರಿಗಣಿಸೋಣ, ಮತ್ತು ಅವರ ಹೊರೆಗಳನ್ನು ಹೊತ್ತುಕೊಳ್ಳುವಂತೆ ಪ್ರೀತಿಯಿಂದ ಸಹಾಯಮಾಡೋಣ.—ಗಲಾತ್ಯ 6:2; ಇಬ್ರಿಯ 6:10.
ಹೋಗಲು ಬೇರೆ ಯಾವ ಸ್ಥಳವೂ ಇಲ್ಲ
12. ಯೇಸುವಿನ ಹೇಳಿಕೆಗಳು ‘ಅನೇಕ ಶಿಷ್ಯರನ್ನು ಹಿಂಜರಿಯುವಂತೆ’ ಮಾಡಿದಾಗ, ಪೇತ್ರನಾದರೋ ಯಾವ ನಿಲುವನ್ನು ತಕ್ಕೊಂಡನು?
12 ನಿತ್ಯಜೀವಕ್ಕಾಗಿ ಹೋಗಲು ಬೇರೆ ಯಾವ ಸ್ಥಳವೂ ಇಲ್ಲವೆಂಬದನ್ನು ನಾವು ನೆನಪಿನಲ್ಲಿಡುವುದಾದರೆ, ಯೆಹೋವನನ್ನು ಆತನ ಸಂಸ್ಥೆಯೊಂದಿಗೆ ಕರ್ತವ್ಯನಿಷ್ಠೆಯಿಂದ ಸೇವಿಸಲು ನಾವು ಪ್ರಚೋದಿಸಲ್ಪಡುವೆವು. ಯೇಸುವಿನ ಹೇಳಿಕೆಗಳು ‘ಆತನ ಶಿಷ್ಯರಲ್ಲಿ ಅನೇಕರನ್ನು ಹಿಂಜರಿಯುವಂತೆ’ ಮಾಡಿದಾಗ, ಅವನು ತನ್ನ ಅಪೊಸ್ತಲರನ್ನು ಕೇಳಿದ್ದು: “ನೀವು ಸಹ ಹೋಗಬೇಕೆಂದಿದ್ದೀರಾ?” ಪೇತ್ರನು ಉತ್ತರಿಸಿದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ.”—ಯೋಹಾನ 6:66-69.
13, 14. (ಎ) ಒಂದನೆಯ ಶತಮಾನದ ಯೆಹೂದ್ಯ ಮತವು ದೈವಿಕ ಅನುಗ್ರಹವನ್ನು ಕಳಕೊಂಡದೇಕ್ದೆ? (ಬಿ) ದೇವರ ದೃಶ್ಯ ಸಂಸ್ಥೆಯ ಕುರಿತು ಒಬ್ಬ ದೀರ್ಘಕಾಲದ ಯೆಹೋವನ ಸಾಕ್ಷಿಯು ಹೇಳಿದ್ದೇನು?
13 “ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳು” ಒಂದನೆಯ ಶತಮಾನದ ಯೆಹೂದ್ಯ ಮತದಲ್ಲಿ ಕಂಡುಬಂದಿರಲಿಲ್ಲ. ಅದರ ಪ್ರಧಾನ ಪಾಪವು ಯೇಸುವನ್ನು ಮೆಸ್ಸೀಯನಾಗಿ ತಿರಸ್ಕರಿಸಿದ್ದೇ. ಅದರ ಯಾವ ರೂಪಗಳಲ್ಲೂ ಯೆಹೂದ್ಯ ಮತವು ಹೀಬ್ರು ಶಾಸ್ತ್ರಗ್ರಂಥಗಳ ಮೇಲೆ ಸಂಪೂರ್ಣವಾಗಿ ಆಧಾರಿತವಾಗಿರಲಿಲ್ಲ. ಸದ್ದುಕಾಯರು ದೇವದೂತರ ಅಸ್ತಿತ್ವವನ್ನು ಅಲ್ಲಗಳೆದಿದ್ದರು ಮತ್ತು ಪುನರುತ್ಥಾನದಲ್ಲಿ ನಂಬಿಕೆಯನ್ನಿಡಲಿಲ್ಲ. ಫರಿಸಾಯರು ವಿಷಯಗಳಲ್ಲಿ ಅವರೊಂದಿಗೆ ಅಸಮ್ಮತರಿದ್ದರೂ, ಅವರು ಪಾಪಪೂರ್ಣರಾಗಿ ತಮ್ಮ ಅಶಾಸ್ತ್ರೀಯ ಸಂಪ್ರದಾಯಗಳ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕಗೊಳಿಸಿದರು. (ಮತ್ತಾಯ 15:1-11; ಅ. ಕೃತ್ಯಗಳು 23:6-9) ಈ ಸಂಪ್ರದಾಯಗಳು ಯೆಹೂದ್ಯರನ್ನು ದಾಸ್ವತಕ್ಕೆ ಹಾಕಿತು ಮತ್ತು ಯೇಸು ಕ್ರಿಸ್ತನನ್ನು ಸ್ವೀಕರಿಸಲು ಅನೇಕರಿಗೆ ಕಷ್ಟಕರವನ್ನಾಗಿ ಮಾಡಿತು. (ಕೊಲೊಸ್ಸೆ 2:8) ‘ಪಿತೃಗಳಿಂದ ಬಂದ ಸಂಪ್ರದಾಯಗಳಲ್ಲಿ’ ಅಭಿಮಾನವು ಸೌಲ (ಪೌಲ) ನನ್ನು ಅವನ ಅಜ್ಞಾನದಲ್ಲಿ ಕ್ರಿಸ್ತನ ಹಿಂಬಾಲಕರನ್ನು ಕ್ರೂರವಾಗಿ ಹಿಂಸಿಸುವಂತೆ ಮಾಡಿತ್ತು.—ಗಲಾತ್ಯ 1:13, 14, 23.
14 ಯೆಹೂದ್ಯ ಧರ್ಮವು ದೇವರ ಅನುಗ್ರಹವನ್ನು ಕಳಕೊಂಡಿತ್ತು, ಆದರೆ ಯೆಹೋವನು ತನ್ನ ಪುತ್ರನ ಹಿಂಬಾಲಕರು ಕೂಡಿದ್ದ ಸಂಸ್ಥೆಯನ್ನು— ‘ಸತ್ಕ್ರಿಯೆಗಳಲ್ಲಿ ಆಸಕ್ತರಾದ ಜನರನ್ನು’ ಆಶೀರ್ವದಿಸಿದನು. (ತೀತ 2:14) ಆ ಸಂಸ್ಥೆಯು ಇನ್ನೂ ಅಸ್ತಿತ್ವದಲ್ಲಿದೆ, ಮತ್ತು ದೀರ್ಘಕಾಲದಿಂದ ಯೆಹೋವನ ಸಾಕ್ಷಿಯಾಗಿದ್ದ ಒಬ್ಬನು ಅದರ ಕುರಿತು ಹೇಳಿದ್ದು: “ನನಗೆ ಅತ್ಯಂತ ಮಹತ್ವದ ಒಂದು ಸಂಗತಿ ಯಾವುದೆಂದರೆ ಯೆಹೋವನ ದೃಶ್ಯ ಸಂಸ್ಥೆಗೆ ನಿಕಟವಾಗಿ ಹೊಂದಿಕೊಂಡಿರುವುದೇ. ನನ್ನ ಆರಂಭದ ಅನುಭವವು ಮಾನವ ವಿವೇಚನೆಯ ಮೇಲೆ ಆತುಕೊಳ್ಳುವದು ಅದೆಷ್ಟು ಅಯುಕ್ತವೆಂಬದನ್ನು ನನಗೆ ಕಲಿಸಿತು. ಆ ವಿಷಯದ ಮೇಲೆ ಒಮ್ಮೆ ನನ್ನ ಮನಸ್ಸು ತೀರ್ಮಾನಕ್ಕೆ ಬಂದಾಗ, ಆ ನಂಬಿಗಸ್ತ ಸಂಸ್ಥೆಯ ಜೊತೆಯಲ್ಲಿ ಉಳಿಯುವ ನಿರ್ಧಾರವನ್ನು ನಾನು ಮಾಡಿದೆನು. ಬೇರೆ ಹೇಗೆ ಒಬ್ಬನು ಯೆಹೋವನ ಅನುಗ್ರಹ ಮತ್ತು ಆಶೀರ್ವಾದವನ್ನು ಪಡೆಯಬಲ್ಲನು?” ದೈವಿಕ ಅನುಗ್ರಹ ಮತ್ತು ನಿತ್ಯಜೀವಕ್ಕಾಗಿ ಹೋಗಲು ಬೇರೆ ಯಾವ ಸ್ಥಳವೂ ಇಲ್ಲ.
15. ಯೆಹೋವನ ದೃಶ್ಯ ಸಂಸ್ಥೆಯೊಂದಿಗೆ ಮತ್ತು ಅದರಲ್ಲಿ ಜವಾಬ್ದಾರಿಕೆಯನ್ನು ಹೊರುತ್ತಿರುವವರೊಂದಿಗೆ ಏಕೆ ಸಹಕರಿಸಬೇಕು?
15 ಯೆಹೋವನ ಸಂಸ್ಥೆಯೊಂದಿಗೆ ಸಹಕರಿಸುವಂತೆ ನಮ್ಮ ಹೃದಯಗಳು ನಮ್ಮನ್ನು ಪ್ರಚೋದಿಸಬೇಕು ಯಾಕಂದರೆ ಅದೊಂದೇ ಆತನ ಆತ್ಮದಿಂದ ಮಾರ್ಗದರ್ಶಿಸಲ್ಪಟ್ಟಿದೆ ಮತ್ತು ಆತನ ನಾಮವನ್ನೂ ಉದ್ದೇಶವನ್ನೂ ಪ್ರಕಟಪಡಿಸುತ್ತಿದೆ ಎಂದು ನಮಗೆ ತಿಳಿದಿದೆ. ಅದರಲ್ಲಿ ಜವಾಬ್ದಾರಿಕೆಯನ್ನು ಹೊರುತ್ತಿರುವವರು ಅಸಂಪೂರ್ಣರೆಂಬದು ನಿಜ. (ರೋಮಾಪುರ 5:12) ಆರೋನ ಮತ್ತು ಮಿರ್ಯಾಮ್ ಮೋಶೆಯಲ್ಲಿ ತಪ್ಪುಹುಡುಕಿದಾಗ ಮತ್ತು ದೇವದತ್ತ ಜವಾಬ್ದಾರಿಕೆ ವಹಿಸಲ್ಪಟ್ಟದ್ದು ತಮಗಲ್ಲ, ಅವನಿಗೆ ಎಂಬದನ್ನು ಮರೆತಾಗ, ಅವರ ವಿರುದ್ಧವಾಗಿ “ಯೆಹೋವನು ಕೋಪಗೊಂಡನು.” (ಅರಣ್ಯಕಾಂಡ 12:7-9) ಇಂದು ಕರ್ತವ್ಯನಿಷ್ಠ ಕ್ರೈಸ್ತರು, “ಸಭಾನಾಯಕರೊಂದಿಗೆ” ಸಹಕರಿಸುತ್ತಾರೆ ಯಾಕಂದರೆ ಯೆಹೋವನು ಆವಶ್ಯಪಡಿಸುವುದೂ ಅದನ್ನೇ. (ಇಬ್ರಿಯ 13:7, 17) ನಮ್ಮ ಕರ್ತವ್ಯನಿಷ್ಠೆಯ ರುಜುವಾತಿನಲ್ಲಿ, ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದೂ ‘ಇತರರನ್ನು ಪ್ರೀತಿ ಮತ್ತು ಸತ್ಕಾರ್ಯಗಳಿಗೆ ಪ್ರೇರೇಪಿಸುವ’ ಉತ್ತರಗಳನ್ನು ಕೊಡುವುದೂ ಸೇರಿರುತ್ತದೆ.—ಇಬ್ರಿಯ 10:24, 25.
ಭಕ್ತಿವೃದ್ಧಿ ಮಾಡುವವರಾಗಿರಿ
16. ಇತರರಿಗಾಗಿ ಏನು ಮಾಡುವ ಒಂದು ಅಪೇಕ್ಷೆಯು ಸಹ ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುವಂತೆ ನಮ್ಮನ್ನು ಪ್ರೇರಿಸಬೇಕು?
16 ಇತರರ ಭಕ್ತಿವೃದ್ಧಿಮಾಡುವವರಾಗಿರುವ ಅಪೇಕ್ಷೆಯು ಸಹ ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುವಂತೆ ನಮ್ಮನ್ನು ಪ್ರೇರಿಸಬೇಕು. ಪೌಲನು ಬರೆದದ್ದು: “ಜ್ಞಾನವು ಉಬ್ಬಿಸುತ್ತದೆ, ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.” (1 ಕೊರಿಂಥ 8:1) ಒಂದು ನಿರ್ದಿಷ್ಟ ತರದ ಜ್ಞಾನವು ಅದನ್ನು ಹೊಂದಿದವರನ್ನು ಉಬ್ಬಿಸಿತ್ತಾದ್ದರಿಂದ, ಪ್ರೀತಿಯು ಸಹ ಆ ಗುಣವನ್ನು ಪ್ರದರ್ಶಿಸುವವರ ಭಕ್ತಿವೃದ್ಧಿಮಾಡುತ್ತದೆಂದು ಪೌಲನು ಅರ್ಥೈಸಿರಬೇಕು. ಪ್ರೊಫೆಸರರಾದ ವೈಸ್ ಮತ್ತು ಇಂಗ್ಲಿಷ್ ಇವರ ಒಂದು ಪುಸ್ತಕವು ಹೇಳುವುದು: “ಯಾರಿಗೆ ಪ್ರೀತಿಸುವ ಸಾಮರ್ಥ್ಯವಿದೆಯೋ ಅವನು ಸಾಮಾನ್ಯವಾಗಿ ಪ್ರತಿಯಾಗಿ ಪ್ರೀತಿಸಲ್ಪಡುತ್ತಾನೆ. ಜೀವಿತದ ಪ್ರತಿಯೊಂದು ವಿಭಾಗಕ್ಕೆ ಸದ್ಭಾವನೆ ಮತ್ತು ಪರಿಗಣನೆಯನ್ನು ವಿಸ್ತರಿಸುವ ಸಾಮರ್ಥ್ಯವು . . . ಅಂಥ ಭಾವನೆಗಳನ್ನು ತೋರಿಸುವ ವ್ಯಕ್ತಿಯ ಮೇಲೆ ಹಾಗೂ ಅವನ್ನು ಪಡೆಯುವವನ ಮೇಲೆ ಒಂದು ರಚನಾತ್ಮಕ ಪರಿಣಾಮವನ್ನು ಬೀರುವುದು ಮತ್ತು ಹೀಗೆ ಇಬ್ಬರಿಗೂ ಸಂತೋಷವನ್ನು ತರುವುದು.” ಪ್ರೀತಿಯನ್ನು ತೋರಿಸುವ ಮೂಲಕ, ಯೇಸುವಿನ ಮಾತುಗಳಲ್ಲಿ ಸೂಚಿಸಲ್ಪಟ್ಟ ಪ್ರಕಾರ, ನಾವು ಇತರರ ಮತ್ತು ನಮ್ಮ ಭಕ್ತಿವೃದ್ಧಿಯನ್ನು ಮಾಡುತ್ತೇವೆ: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.”—ಅ. ಕೃತ್ಯಗಳು 20:35.
17. ಪ್ರೀತಿಯು ಭಕ್ತಿವೃದ್ಧಿಯನ್ನು ಮಾಡುವುದು ಹೇಗೆ, ಮತ್ತು ನಾವೇನನ್ನು ಮಾಡದಂತೆ ಅದು ತಡೆಯುವುದು?
17 ಪೌಲನು 1 ಕೊರಿಂಥ 8:1 ರಲ್ಲಿ, ತತ್ವಾಧಾರಿತ ಪ್ರೀತಿಯನ್ನು ಸೂಚಿಸುವ ಗ್ರೀಕ್ ಪದವಾದ ಅಗಾಪೆ ಯನ್ನು ಉಪಯೋಗಿಸಿದ್ದಾನೆ. ಅದು ಭಕ್ತಿವೃದ್ಧಿಯನ್ನು ಮಾಡುತ್ತದೆ ಯಾಕಂದರೆ ಅದು ಬಹು ತಾಳ್ಮೆಯುಳ್ಳದ್ದು ಮತ್ತು ದಯೆತೋರಿಸುವಂಥದ್ದು, ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ ಮತ್ತು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಮತ್ತು ಅದೆಂದೂ ಬಿದ್ದುಹೋಗುವದಿಲ್ಲ. ಈ ಪ್ರೀತಿಯು ಹೆಮ್ಮೆ ಮತ್ತು ಹೊಟ್ಟೆಕಿಚ್ಚು ಮುಂತಾದ ಹಾನಿಕಾರಕ ಭಾವುಕತೆಗಳನ್ನು ತೆಗೆದುಹಾಕುತ್ತದೆ. (1 ಕೊರಿಂಥ 13:4-8) ಅಂಥ ಪ್ರೀತಿಯು ನಮ್ಮನ್ನು, ನಮ್ಮಂತೆಯೇ ಅಸಂಪೂರ್ಣರಾದ ನಮ್ಮ ಸಹೋದರರ ಕುರಿತು ಗುಣುಗುಟ್ಟದಿರುವಂತೆ ಮಾಡುತ್ತದೆ. ಒಂದನೆಯ ಶತಕದ ನಿಜ ಕ್ರೈಸ್ತರ ನಡುವೆ “ಹೊಕ್ಕಿದ” “ಭಕ್ತಿಹೀನ” ಜನರಂತೆ ಆಗುವುದರಿಂದ ಅದು ನಮ್ಮನ್ನು ತಡೆಯುತ್ತದೆ. ಅಭಿಷಿಕ್ತ ಕ್ರೈಸ್ತ ಮೇಲ್ವಿಚಾರಕರೋಪಾದಿ ಯಾರಿಗೆ ನಿರ್ದಿಷ್ಟ ಮಹಿಮೆಯು ಕೊಡಲ್ಪಟ್ಟಿರುವುದೋ ಅಂಥ ವ್ಯಕ್ತಿಗಳ ವಿಷಯದಲ್ಲಿ ಕೆಟ್ಟದ್ದನ್ನು ಆಡುವ ಮೂಲಕ, ಆ ಪುರುಷರು “ಪ್ರಭುತ್ವವನ್ನು ಅಸಡ್ಡೆಮಾಡುತ್ತಾ, ಮಹಾ ಪದವಿಯವರನ್ನು [ಮಹಿಮಾಭರಿತರನ್ನು, NW] ದೂಷಿಸು” ತ್ತಿದ್ದರು. (ಯೂದ 3, 4, 8) ಯೆಹೋವನಿಗೆ ಕರ್ತವ್ಯನಿಷ್ಠೆಯಲ್ಲಿ, ತದ್ರೀತಿಯ ಯಾವುದನ್ನೂ ಮಾಡುವ ಶೋಧನೆಗೆ ನಾವೆಂದೂ ಬಲಿಯಾಗದೆ ಇರೋಣ.
ಪಿಶಾಚನನ್ನು ಎದುರಿಸಿರಿ!
18. ಯೆಹೋವನ ಜನರಿಗೆ ಏನನ್ನು ಮಾಡುವಂತೆ ಸೈತಾನನು ಬಯಸುವನು, ಮತ್ತು ಆದರೆ ಅವನು ಹಾಗೆ ಮಾಡಶಕ್ತನಲ್ಲವೇಕೆ?
18 ದೇವಜನರಾದ ನಮ್ಮ ಐಕ್ಯತೆಯನ್ನು ನಾಶಗೊಳಿಸಲು ಸೈತಾನನು ಬಯಸುತ್ತಾನೆಂಬ ಜ್ಞಾನವು ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುವ ನಮ್ಮ ನಿರ್ಧಾರವನ್ನು ಹೆಚ್ಚಿಸತಕ್ಕದ್ದು. ದೇವಜನರೆಲ್ಲರನ್ನು ತೊಲಗಿಸಿಬಿಡಲು ಸಹ ಸೈತಾನನು ಬಯಸುವನು, ಮತ್ತು ಪಿಶಾಚನ ಐಹಿಕ ಸೇವಕರು ಕೆಲವು ಸಾರಿ ಸತ್ಯಾರಾಧಕರನ್ನು ಕೊಲ್ಲುತ್ತಾರೆ. ಆದರೆ ಅವರೆಲ್ಲರನ್ನು ನಿರ್ಮೂಲಮಾಡಿಬಿಡುವಂತೆ ದೇವರು ಸೈತಾನನನ್ನು ಬಿಡಲಾರನು. “ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡುವದ” ಕ್ಕಾಗಿಯೇ ಯೇಸು ಸತ್ತನು. (ಇಬ್ರಿಯ 2:14) ಸೈತಾನನ ಅಧಿಕಾರ ನಡಿಸುವ ಕ್ಷೇತ್ರವು, ಕ್ರಿಸ್ತನು 1914 ರಲ್ಲಿ ರಾಜನಾದ ಮೇಲೆ ಪರಲೋಕದಿಂದ ಅವನನ್ನು ದೊಬ್ಬಿಬಿಟ್ಟಂದಿನಿಂದ, ವಿಶೇಷವಾಗಿ ಸೀಮಿತಗೊಂಡಿದೆ. ಮತ್ತು ಯೆಹೋವನ ಕ್ಲುಪ್ತಕಾಲದಲ್ಲಿ, ಯೇಸು ಸೈತಾನನನ್ನು ಮತ್ತು ಅವನ ಸಂಸ್ಥೆಯನ್ನು ನಾಶಮಾಡುವನು.
19. (ಎ) ಸೈತಾನನ ಪ್ರಯತ್ನಗಳ ಕುರಿತು ಯಾವ ಎಚ್ಚರಿಕೆಯನ್ನು ಈ ಪತ್ರಿಕೆಯು ವರ್ಷಗಳ ಹಿಂದೆ ಕೊಟ್ಟಿತ್ತು? (ಬಿ) ಸೈತಾನನ ಪಾಶಗಳನ್ನು ತಪ್ಪಿಸಲು, ಜೊತೆ ಕ್ರೈಸ್ತರೊಂದಿಗೆ ವ್ಯವಹರಿಸುವುದರಲ್ಲಿ ಯಾವ ಎಚ್ಚರಿಕೆಯನ್ನು ನಾವು ತೋರಿಸಬೇಕು?
19 ಈ ಪತ್ರಿಕೆಯು ಒಮ್ಮೆ ಎಚ್ಚರಿಕೆಕೊಟ್ಟದ್ದು: “ಒಂದುವೇಳೆ ಪಿಶಾಚನಾದ ಸೈತಾನನು ದೇವಜನರ ನಡುವೆ ಕ್ರಮಭಂಗವನ್ನು ಉಂಟುಮಾಡಶಕ್ತನಾದರೆ, ಅವರು ಕಚ್ಚಾಟ ನಡಿಸಿ ಒಬ್ಬರೊಂದಿಗೊಬ್ಬರು ಜಗಳವಾಡುವಂತೆ ಅಥವಾ ಸಹೋದರರ ಪ್ರೀತಿಯನ್ನು ನಷ್ಟಗೊಳಿಸುವುದಕ್ಕೆ ನಡಿಸುವ ಒಂದು ಸ್ವಾರ್ಥಪರ ಪ್ರವೃತ್ತಿಯನ್ನು ಪ್ರದರ್ಶಿಸುವಂತೆ ಮತ್ತು ಬೆಳೆಸುವಂತೆ ಮಾಡಶಕ್ತನಾದರೆ, ಅವನು ಆ ಮೂಲಕ ಅವರನ್ನು ಕಬಳಿಸಿಬಿಡುವದರಲ್ಲಿ ಯಶಸ್ವಿಯಾಗುವನು.” (ದ ವಾಚ್ ಟವರ್, ಮೇ 1, 1921, ಪುಟ 134) ಪ್ರಾಯಶಃ ಅಪನಿಂದೆಯನ್ನು ಮಾಡುವಂತೆ ಅಥವಾ ಒಬ್ಬರೊಂದಿಗೊಬ್ಬರು ಜಗಳವಾಡುವಂತೆ ನಮ್ಮನ್ನು ಪ್ರೇರೇಪಿಸುವ ಮೂಲಕ ಪಿಶಾಚನು ನಮ್ಮ ಐಕಮತ್ಯವನ್ನು ನಾಶಗೊಳಿಸುವಂತೆ ನಾವು ಬಿಡದಿರೋಣ. (ಯಾಜಕಕಾಂಡ 19:16) ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುವವರಿಗೆ ನಾವು ವೈಯಕ್ತಿವಾಗಿ ಹಾನಿಮಾಡುವಂಥ ಅಥವಾ ಅವರ ಜೀವಿತವನ್ನು ಅವರಿಗೆ ಹೆಚ್ಚು ಕಷ್ಟಕರವಾಗಿ ಮಾಡುವಂಥ ಒಂದು ರೀತಿಯಲ್ಲಿ ನಮ್ಮನ್ನು ಸೈತಾನನೆಂದೂ ಸಿಕ್ಕಿಸಿಹಾಕದಿರಲಿ. (2 ಕೊರಿಂಥ 2:10, 11 ಹೋಲಿಸಿರಿ.) ಬದಲಿಗೆ, ಪೇತ್ರನ ಮಾತುಗಳನ್ನು ನಾವು ಅನ್ವಯಿಸೋಣ: “ಸ್ವಸ್ಥಚಿತ್ತರಾಗಿರಿ. ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ.” (1 ಪೇತ್ರ 5:8, 9) ಸೈತಾನನ ವಿರುದ್ಧವಾಗಿ ಒಂದು ದೃಢವಾದ ನಿಲುವನ್ನು ತಕ್ಕೊಳ್ಳುವ ಮೂಲಕ, ಯೆಹೋವನ ಜನರೋಪಾದಿ ನಮ್ಮ ಆಶೀರ್ವಾದಿತ ಐಕ್ಯತೆಯನ್ನು ನಾವು ಕಾಪಾಡಿಕೊಳ್ಳಬಲ್ಲೆವು.—ಕೀರ್ತನೆ 133:1-3.
ಪ್ರಾರ್ಥನಾಪೂರ್ವಕವಾಗಿ ದೇವರ ಮೇಲೆ ಆತುಕೊಳ್ಳಿರಿ
20, 21. ಯೆಹೋವನ ಮೇಲೆ ಪ್ರಾರ್ಥನಾಪೂರ್ವಕ ಆತುಕೊಳ್ಳುವಿಕೆಯು ಆತನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುವುದಕ್ಕೆ ಹೇಗೆ ಸಂಬಂಧಿಸಿದೆ?
20 ದೇವರ ಮೇಲೆ ಪ್ರಾರ್ಥನಾಪೂರ್ವಕವಾಗಿ ಆತುಕೊಳ್ಳುವಿಕೆಯು ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುತ್ತಾ ಮುಂದರಿಯುವಂತೆ ನಮಗೆ ಸಹಾಯಮಾಡುವುದು. ಆತನು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಾ ಇರುವುದನ್ನು ನಾವು ಕಾಣುವಾಗ, ನಾವಾತನಿಗೆ ಇನ್ನಷ್ಟು ಹತ್ತಿರವಾಗಿ ಎಳೆಯಲ್ಪಡುತ್ತೇವೆ. “ಹೀಗಿರಲಾಗಿ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ ಭಕ್ತಿಪೂರ್ವಕವಾಗಿಯೇ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ,” ಎಂದು ಅಪೊಸ್ತಲ ಪೌಲನು ಬರೆದಾಗ, ಯೆಹೋವ ದೇವರ ಮೇಲೆ ಪ್ರಾರ್ಥನಾಪೂರ್ವಕ ಆತುಕೊಳ್ಳುವಿಕೆಯು ಪ್ರೇರೇಪಿಸಲ್ಪಟ್ಟಿತ್ತು. (1 ತಿಮೊಥೆಯ 2:8) ಉದಾಹರಣೆಗಾಗಿ, ಹಿರಿಯರು ಪ್ರಾರ್ಥನಾಪೂರ್ವಕವಾಗಿ ದೇವರ ಮೇಲೆ ಆತುಕೊಳ್ಳುವುದು ಅದೆಷ್ಟು ಮಹತ್ವವುಳ್ಳದ್ದು! ಸಭಾ ಕಾರ್ಯಾಧಿಗಳನ್ನು ಚರ್ಚಿಸಲಿಕ್ಕಾಗಿ ಕೂಡಿಬರುವಾಗ, ಯೆಹೋವನೆಡೆಗೆ ಕರ್ತವ್ಯನಿಷ್ಠೆಯ ಅಂಥ ಒಂದು ವ್ಯಕ್ತತೆಯು ಅನಂತ ವಾಗ್ವಾದಗಳನ್ನು ಮತ್ತು ಕೋಪದ ಕೆರಳಾಟಗಳ ಸಂಭವನೀಯತೆಗಳನ್ನು ತಡೆಯಲು ಸಹಾಯಕಾರಿಯಾಗುವುದು.
21 ಯೆಹೋವ ದೇವರ ಮೇಲೆ ಪ್ರಾರ್ಥನಾಪೂರ್ವಕ ಆತುಕೊಳ್ಳುವಿಕೆಯು ಆತನ ಸೇವೆಯಲ್ಲಿ ಸುಯೋಗಗಳನ್ನು ನಿರ್ವಹಿಸಲು ನಮಗೆ ಸಹಾಯಮಾಡುತ್ತದೆ. ದಶಾಬ್ದಗಳ ತನಕ ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸಿದ ಒಬ್ಬ ಪುರುಷನು ಹೀಗನ್ನಶಕ್ತನಾದನು: “ದೇವರ ಲೋಕವ್ಯಾಪಕ ಸಂಸ್ಥೆಯಲ್ಲಿ ನಮಗೆ ಕೊಡಲ್ಪಟ್ಟ ಯಾವುದೇ ನೇಮಕದ ನಮ್ಮ ಮನಃಪೂರ್ವಕ ಸ್ವೀಕರಣೆಯು, ಮತ್ತು ನಮ್ಮ ನೇಮಕದಲ್ಲಿ ನಿಶ್ಚಲವಾಗಿ ಉಳಿಯುವಿಕೆಯು, ನಮ್ಮ ಯಥಾರ್ಥ ಪ್ರಯತ್ನಗಳ ಮೇಲೆ ಯೆಹೋವನ ಅನುಗ್ರಹದ ಪ್ರಸನ್ನತೆಯನ್ನು ತರುತ್ತದೆ. ನೇಮಿಸಲ್ಪಟ್ಟ ಕೆಲಸವು ಅಲ್ಪವೆಂದು ಕಂಡರೂ, ಅದರ ನಂಬಿಗಸ್ತ ನಿರ್ವಹಣೆಯ ಹೊರತು ಬೇರೆ ಅನೇಕ ಪ್ರಾಮುಖ್ಯ ಕೆಲಸಗಳನ್ನು ನಡಿಸಶಕ್ಯವಾಗುತ್ತಿರಲಿಲ್ಲವೆಂದು ಆಗಾಗ್ಯೆ ತೋರಿಬಂದಿದೆ. ಹೀಗೆ ನಾವು ದೀನರಾಗಿದ್ದರೆ ಮತ್ತು ನಮ್ಮ ಸ್ವಂತದ್ದನ್ನಲ್ಲ, ಯೆಹೋವನ ನಾಮವನ್ನು ಮಹಿಮೆಪಡಿಸುವುದರಲ್ಲಿ ನೇರವಾಗಿ ಆಸಕ್ತರಿದ್ದರೆ, ಆಗ ಮಾತ್ರ ನಾವು ಯಾವಾಗಲೂ ‘ಸ್ಥಿರಚಿತ್ತರೂ ನಿಶ್ಚಲರೂ ಯೆಹೋವನ ಕಾರ್ಯದಲ್ಲಿ ಯಥೇಷ್ಟವಾಗಿ ಮಾಡಲಿಕ್ಕಿರುವವರೂ’ ಆಗಿರುವ ಖಾತರಿಯಿಂದಿರಬಲ್ಲೆವು.—1 ಕೊರಿಂಥ 15:58, NW.
22. ಯೆಹೋವನ ಅನೇಕ ಆಶೀರ್ವಾದಗಳು ನಮ್ಮ ಕರ್ತವ್ಯನಿಷ್ಠೆಯ ಮೇಲೆ ಹೇಗೆ ಪರಿಣಾಮ ಬೀರಬೇಕು?
22 ಯೆಹೋವನ ಸೇವೆಯಲ್ಲಿ ನಾವೇನನ್ನೇ ಮಾಡಲಿ, ಆತನು ನಮಗಾಗಿ ಏನನ್ನು ಮಾಡುತ್ತಾನೋ ಅದಕ್ಕೆ ಬದಲಾಗಿ ಏನನ್ನೂ ಹಿಂದೆ ಸಲ್ಲಿಸಲಾರೆವು. ಯಾರು ಆತನ [ದೇವರ] ಸ್ನೇಹಿತರಾಗಿದ್ದಾರೋ ಅವರಿಂದ ಸುತ್ತುವರಿಯಲ್ಪಟ್ಟವರಾದ ನಾವು, ದೇವರ ಸಂಸ್ಥೆಯಲ್ಲಿ ಎಷ್ಟು ಸುಭದ್ರರಾಗಿದ್ದೇವೆ! (ಯಾಕೋಬ 2:23) ಸೈತಾನನು ಸ್ವತಃ ಕಿತ್ತುಹಾಕಲಶಕ್ಯವಾದಷ್ಟು ಆಳವಾಗಿ ಬೇರೂರಿದ ಸಹೋದರ ಪ್ರೀತಿಯಿಂದ ಹೊರಚಿಮ್ಮುವ ಐಕ್ಯತೆಯೊಂದಿಗೆ ಯೆಹೋವನು ನಮ್ಮನ್ನು ಆಶೀರ್ವದಿಸಿದ್ದಾನೆ. ಆದುದರಿಂದ ನಾವು ನಮ್ಮ ಕರ್ತವ್ಯನಿಷ್ಠ ಸ್ವರ್ಗೀಯ ತಂದೆಗೆ ಅಂಟಿಕೊಳ್ಳೋಣ ಮತ್ತು ಆತನ ಜನರಾಗಿ ಒಟ್ಟುಗೂಡಿ ಕಾರ್ಯನಡಿಸೋಣ. ಇಂದೂ ಮತ್ತು ಸದಾಕಾಲಕ್ಕೂ ನಾವು ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸೋಣ.
ನೀವು ಹೇಗೆ ಉತ್ತರಿಸುವಿರಿ?
▫ ಕರ್ತವ್ಯನಿಷ್ಠೆಯುಳ್ಳವರಾಗಿರುವುದು ಎಂಬದರ ಅರ್ಥವೇನು?
▫ ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸುವಂತೆ ನಮ್ಮನ್ನು ಪ್ರೇರೇಪಿಸಬೇಕಾದ ಕೆಲವು ವಿಷಯಗಳು ಯಾವುವು?
▫ ನಾವು ಪಿಶಾಚನನ್ನು ಎದುರಿಸಬೇಕು ಏಕೆ?
▫ ಯೆಹೋವನ ಕರ್ತವ್ಯನಿಷ್ಠ ಸೇವಕರಾಗಿರುವಂತೆ ಪ್ರಾರ್ಥನೆಯು ನಮಗೆ ಹೇಗೆ ಸಹಾಯಮಾಡಬಲ್ಲದು?
[ಪುಟ 23 ರಲ್ಲಿರುವ ಚಿತ್ರ]
ಯೆಹೋವನ ಕರ್ತವ್ಯನಿಷ್ಠ ಸೇವಕರು, ಸಿಂಹದೋಪಾದಿಯಲ್ಲಿರುವ ಅವರ ವಿರೋಧಿಯಾದ ಪಿಶಾಚನು, ಅವರ ಐಕ್ಯತೆಯನ್ನು ಭಂಗಪಡಿಸುವಂತೆ ಬಿಡುವುದಿಲ್ಲ