ಹಿರಿಯರು—ಸೌಮ್ಯತೆಯ ಆತ್ಮದಿಂದ ಇತರರನ್ನು ಕ್ರಮಪಡಿಸುವುದು
ನಿಜ ಕ್ರೈಸ್ತನ ಹೃದಯವನ್ನು ಒಳ್ಳೇ ಫಲವನ್ನು ಕೊಡುವ ಒಂದು ಆತ್ಮಿಕ ತೋಟಕ್ಕೆ ಹೋಲಿಸಬಹುದಾಗಿದೆ. ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯತೆ, ಮತ್ತು ಆತ್ಮಸಂಯಮವು ಅಲ್ಲಿ ಸಮೃದ್ಧಿಯಾಗಿವೆ. ಮತ್ತು ಏಕಾಗಬಾರದು? ಎಷ್ಟೆಂದರೂ ಇವುಗಳು ಯೆಹೋವ ದೇವರಿಂದ ತನ್ನ ಸಮರ್ಪಿತ ಸೇವಕರಿಗೆ ಕೊಡಲ್ಪಟ್ಟ ಪವಿತ್ರಾತ್ಮದ ಫಲಗಳಾಗಿವೆ. (ಗಲಾತ್ಯ 5:22, 23) ಆದರೂ, ತನ್ನ ಹೃದಯದ ತೋಟವನ್ನು ತನ್ನ ಸ್ವರ್ಗೀಯ ತಂದೆಗೆ ಒಂದು ಮೆಚ್ಚಿಗೆಯ ಸ್ಥಳವಾಗಿ ಕಾಪಾಡ ಬಯಸುವ ಪ್ರತಿಯೊಬ್ಬ ಕ್ರೈಸ್ತನು, ಬಾಧ್ಯತೆಯಾಗಿ ಬಂದ ಪಾಪದ ಅನಪೇಕ್ಷಣೀಯ ಫಲಗಳ ವಿರುದ್ಧವಾಗಿ ಒಂದು ಪರಿಶ್ರಮದ, ಮುಂದರಿಯುತ್ತಿರುವ ಹೋರಾಟವನ್ನು ನಡಿಸಲೇಬೇಕು.—ರೋಮಾಪುರ 5:5, 12.
ಕೆಲವೊಮ್ಮೆ, ದೇವಭಕ್ತ ವ್ಯಕ್ತಿಯ ಅಸಂಪೂರ್ಣ ಹೃದಯದಲ್ಲಿ ಒಂದು ಅನಪೇಕ್ಷಣೀಯ ವಿಷಯವು ಬೆಳೆಯಲು ತೊಡಗುತ್ತದೆ. ಅವನು ಅಥವಾ ಅವಳು ಒಂದು ಅತ್ಯುತ್ತಮ ಆತ್ಮಿಕ ದಾಖಲೆಯುಳ್ಳವರಾಗಿದ್ದಿರಬಹುದು. ಆದರೆ, ಅಹಿತಕರ ಸಹವಾಸಗಳಿಂದ ಯಾ ಅವಿವೇಕ ನಿರ್ಣಯದಿಂದಾಗಿ ಸಂಭವನೀಯವಾಗಿ ಒಳಸೇರಿದ ಯಾವುದೋ ಒಂದು ಸಮಸ್ಯೆಯು ಅಲ್ಲಿ ಏಳುತ್ತದೆ. ಅಂಥ ಒಬ್ಬ ವ್ಯಕ್ತಿಗೆ ಸಭಾ ಹಿರಿಯರು ಆತ್ಮಿಕವಾಗಿ ಹೇಗೆ ಸಹಾಯ ನೀಡಬಲ್ಲರು?
ಅಪೊಸ್ತಲಿಕ ಬುದ್ಧಿವಾದ
ತಪ್ಪುಗೈದ ಒಬ್ಬ ಕ್ರೈಸ್ತನಿಗೆ ಸಹಾಯ ಮಾಡುವುದರಲ್ಲಿ ಹಿರಿಯರು ಅಪೊಸ್ತಲ ಪೌಲನ ಬುದ್ಧಿವಾದವನ್ನು ಅನುಸರಿಸುವ ಅಗತ್ಯವಿದೆ: “ಸಹೋದರರೇ, ನಿಮ್ಮಲ್ಲಿ ಒಬ್ಬ ಪುರುಷನು ಅವನು ಅರಿಯುವ ಮೊದಲೇ ಯಾವುದೋ ಒಂದು ತಪ್ಪು ಹೆಜ್ಜೆಯನ್ನು ತಕ್ಕೊಂಡರೂ ಕೂಡ, ಅಂಥ ಪುರುಷನನ್ನು ಆತ್ಮಿಕ ಯೋಗ್ಯತೆಗಳುಳ್ಳ ನೀವು ಸೌಮ್ಯಭಾವದಿಂದ ಸರಿಹೊಂದಿಸಲು ಪ್ರಯತ್ನಿಸಿರಿ. ನೀವಾದರೋ ಪ್ರತಿಯೊಬ್ಬರು ದುಷ್ಪ್ರೇರಣೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ.” (ಗಲಾತ್ಯ 6:1, NW) ಒಬ್ಬ ಜೊತೆ ವಿಶ್ವಾಸಿಯು “ಅವನು ಅರಿಯುವ ಮೊದಲೇ ಯಾವುದೋ ಒಂದು ತಪ್ಪು ಹೆಜ್ಜೆಯನ್ನು ತಕ್ಕೊಂಡರೆ,” ಸಾಧ್ಯವಾದಷ್ಟು ಬೇಗನೇ ಸಹಾಯನೀಡುವ ಒಂದು ಜವಾಬ್ದಾರಿಕೆಯು ಹಿರಿಯರಿಗಿದೆ.
ಪೌಲನು ಇಲ್ಲಿ “ಒಬ್ಬ ಪುರುಷನು” ತಪ್ಪು ಹೆಜ್ಜೆಯನ್ನು ತಕ್ಕೊಳ್ಳುವುದಾಗಿ ಸೂಚಿಸಿದ್ದಾನೆ. ಆದರೂ, ಇಲ್ಲಿ ಉಪಯೋಗಿಸಿದ ಗ್ರೀಕ್ ಪದ (an’thro.pos) ಪುರುಷನಿಗೆ ಅಥವಾ ಸ್ತ್ರೀಗೆ ಅನ್ವಯಿಸಬಲ್ಲದು. ಮತ್ತು ಒಬ್ಬ ವ್ಯಕ್ತಿಯನ್ನು “ಸರಿಹೊಂದಿಸು”ವುದು ಎಂಬದರ ಅರ್ಥವೇನು? ಗ್ರೀಕ್ ಪದವಾದ ಈ (ka.tar.ti’zo) ಗೆ “ಯೋಗ್ಯ ಸಮರೇಖೆಗೆ ತರು” ಎಂಬರ್ಥವಿದೆ. ಬಲೆಗಳನ್ನು ಸರಿಪಡಿಸುವುದಕ್ಕೆ ಇದೇ ಪದವನ್ನು ಉಪಯೋಗಿಸಲಾಗಿದೆ. (ಮತ್ತಾಯ 4:21) ಒಬ್ಬ ವ್ಯಕ್ತಿಯ ಮುರಿದ ಅಂಗವನ್ನು ಸ್ವಸ್ಥಾನಕ್ಕೆ ತರುವುದಕ್ಕೂ ಅದು ಅನ್ವಯಿಸುತ್ತದೆ. ಒಬ್ಬ ವೈದ್ಯನು ತನ್ನ ರೋಗಿಗೆ ಅನಾವಶ್ಯಕ ನೋವಾಗುವುದನ್ನು ತಡೆಯಲು ಇದನ್ನು ಜಾಗ್ರತೆಯಿಂದ ನಡಿಸುತ್ತಾನೆ. ಅದೇ ರೀತಿ, ಒಬ್ಬ ಸಹೋದರ ಅಥವಾ ಸಹೋದರಿಯು ಯೋಗ್ಯ ಆತ್ಮಿಕ ಸಮರೇಖೆಯೊಳಗೆ ಬರಲು ಚಿಂತನೆ, ಜಾಣತನ, ಮತ್ತು ಕನಿಕರದ ಅಗತ್ಯವಿದೆ.
ಒಬ್ಬ ವ್ಯಕ್ತಿಯನ್ನು ಸರಿಹೊಂದಿಸಲು ಪ್ರಯತ್ನಿಸುವಾಗ ಸೌಮ್ಯಭಾವವನ್ನು ತೋರಿಸುವ ಮೂಲಕ ಹಿರಿಯರು ತಮ್ಮ ಸ್ವಂತ ಆತ್ಮಿಕತೆಯ ರುಜುವಾತನ್ನು ಕೊಡುತ್ತಾರೆ. ಶಾಂತ ಸ್ವಭಾವದ ಯೇಸುವು ಅಂಥ ವಿಷಯಗಳನ್ನು ನಿಶ್ಚಯವಾಗಿಯೂ ಸೌಮ್ಯತೆಯಿಂದ ನಡಿಸುವನು. (ಮತ್ತಾಯ 11:29) ಒಂದು ತಪ್ಪು ಹೆಜ್ಜೆಯನ್ನು ತಕ್ಕೊಂಡ ಯೆಹೋವನ ಸೇವಕನ ಕಡೆಗೆ ಈ ಗುಣವನ್ನು ಹಿರಿಯರು ತೋರಿಸಲೇಬೇಕು ಯಾಕಂದರೆ ಅವರು ಸ್ವತಃ ಅವರ ಹೃದಯದ ಹೇತುಗಳಿಗೆ ಪ್ರತಿಕೂಲವಾಗಿ, ಒಂದು ಪಾಪದಲ್ಲಿ ಸಿಕ್ಕಿಬೀಳುವುದಕ್ಕೆ ಮೀರಿದವರಲ್ಲ. ಹಿಂದೆ ಈ ಮೊದಲೇ ಅದು ನಡೆದಿಲ್ಲವಾದರೆ ಭವಿಷ್ಯದಲ್ಲಿ ಅದು ನಡೆದೀತು.
ಈ ಆತ್ಮಿಕವಾಗಿ ಯೋಗ್ಯತೆ ಪಡೆದ ಪುರುಷರು ಪ್ರೀತಿಯಿಂದ ತಮ್ಮ ಜೊತೆ ಆರಾಧಕರ ‘ಭಾರವನ್ನು ಹೊತ್ತುಕೊಳ್ಳ’ ಬೇಕು. ಒಬ್ಬ ಸಹೋದರ ಅಥವಾ ಸಹೋದರಿಗೆ ಸೈತಾನನ, ಶೋಧನೆಗಳ, ಮಾಂಸಿಕ ಬಲಹೀನತೆಗಳ ಮತ್ತು ಪಾಪದ ಬಾಧೆಗಳ ವಿರುದ್ಧವಾಗಿ ಹೋರಾಡಲು ಸಹಾಯಮಾಡುವ ಹೃದಯಪೂರ್ವಕ ಭಾವವು ಹಿರಿಯರಿಗೆ ನಿಶ್ಚಯವಾಗಿಯೂ ಇದೆ. ಖಂಡಿತವಾಗಿಯೂ ಇದು ಕ್ರೈಸ್ತ ಮೇಲ್ವಿಚಾರಕರು “ಕ್ರಿಸ್ತನ ನಿಯಮವನ್ನು ನೆರವೇರಿಸುವ” ಒಂದು ಮಾರ್ಗವಾಗಿದೆ.—ಗಲಾತ್ಯ 6:2.
“ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿದವನಾಗಿದ್ದಾನೆ” ಎಂಬದನ್ನು ಒಪ್ಪಿಕೊಳ್ಳುತ್ತಾ, ನಿಜ ಆತ್ಮಿಕ ಯೋಗ್ಯತೆಗಳುಳ್ಳ ಪುರುಷರು ದೀನರಾಗಿರುತ್ತಾರೆ. (ಗಲಾತ್ಯ 6:3) ಯಾವುದು ಸರಿಯೋ ಮತ್ತು ಸಹಾಯಕಾರಿಯೋ ಅದನ್ನು ಮಾಡಲು ಹಿರಿಯರೆಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ, ಪರಿಪೂರ್ಣನೂ ಪ್ರೀತಿಯುಕ್ತ ಕನಿಕರವುಳ್ಳವನೂ ಆದ ದೇವರ ಪುತ್ರನಾದ ಯೇಸು ಕ್ರಿಸ್ತನಿಗೆ ಮತ್ತೂ ನ್ಯೂನರಾಗಿದ್ದಾರೆ. ಆದರೆ ತಮ್ಮಿಂದಾದಷ್ಟು ಅತ್ಯುತ್ತಮವನ್ನು ಮಾಡದೆ ಇರುವುದಕ್ಕೆ ಅದು ಕಾರಣವಲ್ಲ.
ಒಬ್ಬ ಜೊತೆ ವಿಶ್ವಾಸಿಯನ್ನು ಗರ್ವದಿಂದ, ನಿನಗಿಂತ ನಾನು ಪವಿತ್ರನೋ ಎಂಬ ರೀತಿಯಲ್ಲಿ ಖಂಡಿಸುವುದು ತಪ್ಪಾಗಿದೆಯೆಂದು ಹಿರಿಯರಿಗೆ ತಿಳಿದದೆ! ಯೇಸು ಖಂಡಿತವಾಗಿಯೂ ಅದನ್ನು ಮಾಡುವವನಲ್ಲ. ಅವನು ತನ್ನ ಜೀವವನ್ನು ತನ್ನ ಸ್ನೇಹಿತರಿಗಾಗಿ ಮಾತ್ರವಲ್ಲ ತನ್ನ ವೈರಿಗಳಿಗಾಗಿಯೂ ಒಪ್ಪಿಸಿಕೊಟನ್ಟಲ್ಲಾ! ಸಹೋದರರನ್ನು ಅಥವಾ ಸಹೋದರಿಯರನ್ನು ಕಷ್ಟದೊಳಗಿಂದ ಹೊರತರಲು ಮತ್ತು ಅವರ ಸ್ವರ್ಗೀಯ ತಂದೆಯ ಮತ್ತು ಆತನ ನೀತಿಯುಳ್ಳ ಮಟ್ಟಗಳಿಗೆ ನಿಕಟವಾಗಿ ತರಲು ಪ್ರಯತ್ನಿಸುವಾಗ ಅದೇ ರೀತಿಯ ಪ್ರೀತಿಯನ್ನು ತೋರಿಸಲು ಹಿರಿಯರು ಯತ್ನಿಸಬೇಕು. ಜೊತೆ ಆರಾಧಕರನ್ನು ಸರಿಹೊಂದಿಸಲು ಹಿರಿಯರಿಗೆ ಸಹಾಯ ಮಾಡುವ ಕೆಲವು ಹೆಜ್ಜೆಗಳು ಯಾವುವು?
ಕೆಲವು ಸಹಾಯಕಾರಿ ಹೆಜ್ಜೆಗಳು
ಶಾಂತಭಾವದಿಂದ ಮಾತಾಡುವಾಗ ಮತ್ತು ಕ್ರಿಯೆ ನಡಿಸುವಾಗ ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾಗಿ ಆತುಕೊಳ್ಳಿರಿ. ಯೇಸು ಶಾಂತ ಸ್ವಭಾವದವನಾಗಿದ್ದನು, ಮಾರ್ಗದರ್ಶನೆಗಾಗಿ ತನ್ನ ಸ್ವರ್ಗೀಯ ತಂದೆಗೆ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದನು, ಮತ್ತು ಯಾವಾಗಲೂ ಆತನಿಗೆ ಮೆಚ್ಚಿಕೆಯಾದ ವಿಷಯಗಳನ್ನು ಮಾಡಿದನು. (ಮತ್ತಾಯ 21:5; ಯೋಹಾನ 8:29) ಯಾವುದೋ ಒಂದು ತಪ್ಪು ಹೆಜ್ಜೆಯನ್ನು ತಕ್ಕೊಂಡ ಒಬ್ಬ ವ್ಯಕ್ತಿಯನ್ನು ಸರಿಹೊಂದಿಸಲು ಪ್ರಯತ್ನಿಸುವಾಗ ಹಿರಿಯರು ಕೂಡ ಹೀಗೆಯೇ ಮಾಡಬೇಕು. ಶಾಂತ ಸ್ವಭಾವದ ಒಬ್ಬ ಉಪಕುರುಬನೋಪಾದಿ, ಹಿರಿಯನು ಜಬರಿಸುವವನಾಗಿರದೆ, ಮಾತಿನಲ್ಲಿ ಪ್ರೋತ್ಸಾಹನೀಯನೂ ಬಲಪಡಿಸುವವನೂ ಆಗಿರಬೇಕು. ಚರ್ಚೆಯ ಸಮಯದಲ್ಲಿ, ಸಹಾಯಬೇಕಾದ ಕ್ರೈಸ್ತನು ತನ್ನ ವಿಚಾರಗಳನ್ನು ವ್ಯಕ್ತಪಡಿಸುವುದರಲ್ಲಿ ಸಾಧ್ಯವಾದಷ್ಟು ಆರಾಮತಾಳುವ ಒಂದು ಪರಿಸರವನ್ನು ನಿರ್ಮಿಸಲು ಅವನು ಪ್ರಯತ್ನಿಸಬೇಕು. ಇದನ್ನು ಮಾಡಲು, ಹೃದಯಪೂರ್ವಕವಾದ ಆರಂಭದ ಪ್ರಾರ್ಥನೆಯು ದೊಡ್ಡ ಸಹಾಯವಾಗಿರುವುದು. ಯೇಸುವಿನಂತೆ, ಬುದ್ಧಿಹೇಳುವವನು ದೇವರಿಗೆ ಮೆಚ್ಚಿಕೆಯಾಗುವ ವಿಷಯಗಳನ್ನು ಮಾಡಲು ಬಯಸುತ್ತಾನೆ ಎಂದು ಬುದ್ಧಿವಾದ ಪಡೆಯುವವನು ತಿಳಿದರೆ, ಸೌಮ್ಯತೆಯಲ್ಲಿ ಕೊಡಲ್ಪಟ್ಟ ಆ ಸಲಹೆಗೆ ಹೆಚ್ಚು ಮನಃಪೂರ್ವಕತೆಯಿಂದ ತನ್ನ ಹೃದಯವನ್ನು ತೆರೆಯುವನು. ಸಮಾಪ್ತಿಯ ಪ್ರಾರ್ಥನೆಯು ಅಂಥ ಪ್ರೀತಿಯುಳ್ಳ, ಸೌಮ್ಯಭಾವದಲ್ಲಿ ಕೊಡಲ್ಪಟ್ಟ ಬುದ್ಧಿವಾದವನ್ನು ಅನ್ವಯಿಸುವ ಅಗತ್ಯದೊಂದಿಗೆ ವ್ಯಕ್ತಿಯನ್ನು ಪ್ರಭಾವಿಸುವ ಸಂಭವನೀಯತೆ ಇದೆ.
ಪ್ರಾರ್ಥನೆಯ ಅನಂತರ, ಪ್ರಾಮಾಣಿಕ ಪ್ರಶಂಸೆಯನ್ನು ನೀಡಿರಿ. ಅದು ವ್ಯಕ್ತಿಯ ದಯಾಪರತೆ, ಭರವಸೆಯೋಗ್ಯತೆ ಅಥವಾ ದೃಢಪ್ರಯತ್ನದಂಥ ಉತ್ತಮ ಗುಣಗಳಿಗೆ ಸಂಬಂಧಿಸಿರಬಹುದು. ಪ್ರಾಯಶಃ ಅನೇಕ ವರ್ಷಗಳಿಂದ ಯೆಹೋವನಿಗೆ ಅವನ ಯಾ ಅವಳ ನಂಬಿಗಸ್ತ ಸೇವೆಯ ದಾಖಲೆಯ ಕುರಿತಾಗಿ ಸೂಚಿಸಲೂಬಹುದು. ಈ ರೀತಿಯಲ್ಲಿ ನಾವು ಆ ವ್ಯಕ್ತಿಯನ್ನು ಗಣನೆಗೆ ತರುತ್ತೇವೆ ಮತ್ತು ಅವರೆಡೆಗೆ ಕ್ರಿಸ್ತನಂಥ ಚಿಂತನೆಯು ನಮಗಿದೆ ಎಂದು ನಾವು ತೋರಿಸುತ್ತೇವೆ. ಯೇಸು ಥುವಥೈರ ಸಭೆಗೆ ತನ್ನ ಸಂದೇಶವನ್ನು ಒಂದು ಪ್ರಶಂಸೆಯಿಂದ ಪ್ರಾರಂಭಿಸುತ್ತಾ, ಅಂದದ್ದು: “ನಿನ್ನ ಕೃತ್ಯಗಳನ್ನೂ ನಿನ್ನ ಪ್ರೀತಿಯನ್ನೂ ನಂಬಿಕೆಯನ್ನೂ ಪರೋಪಕಾರವನ್ನೂ ತಾಳ್ಮೆಯನ್ನೂ ಬಲ್ಲೆನು; ಇದಲ್ಲದೆ ನಿನ್ನ ಕಡೇ ಕೃತ್ಯಗಳು ನಿನ್ನ ಮೊದಲಿನ ಕೃತ್ಯಗಳಿಗಿಂತ ಹೆಚ್ಚಾದವುಗಳೆಂದು ಬಲ್ಲೆನು.” (ಪ್ರಕಟನೆ 2:19) ಆ ಮಾತುಗಳು ಸಭಾ ಸದಸ್ಯರಿಗೆ ತಾವು ಮಾಡುತ್ತಿದ್ದ ಸತ್ಕಾರ್ಯಗಳನ್ನು ಯೇಸು ಲಕ್ಷಿಸುತ್ತಾನೆಂಬ ಆಶ್ವಾಸನೆಯನ್ನು ಕೊಟ್ಟಿತು. ಆ ಸಭೆಗೆ ಅದರ ತಪ್ಪುಗಳು ಇದ್ದರೂ—“ಯೆಜೆಬೇಲ್” ಪ್ರಭಾವವನ್ನು ತಡೆಯದೆ ಬಿಟ್ಟದ್ದು—ಬೇರೆ ವಿಷಯಗಳಲ್ಲಿ ಅದು ಒಳ್ಳೇ ಪ್ರಗತಿ ಮಾಡಿತ್ತು ಮತ್ತು ಅವರ ಹುರುಪಿನ ಚಟುವಟಿಕೆಯು ಲಕ್ಷಿಸಲ್ಪಡದೆ ಇರಲಿಲ್ಲ ಎಂದು ಆ ಸಹೋದರರು ಮತ್ತು ಸಹೋದರಿಯರು ತಿಳಿಯುವಂತೆ ಯೇಸು ಬಯಸಿದ್ದನು. (ಪ್ರಕಟನೆ 2:20) ಇದೇ ರೀತಿಯಲ್ಲಿ ಎಲ್ಲಿ ಅರ್ಹವೋ ಅಲ್ಲಿ ಹಿರಿಯರು ಪ್ರಶಂಸೆಯನ್ನು ನೀಡತಕ್ಕದ್ದು.
ಒಂದು ತಪ್ಪು ಹೆಜ್ಜೆಯನ್ನು ಪರಿಸ್ಥಿತಿಗಳು ಆವಶ್ಯಪಡಿಸುವುದಕ್ಕಿಂತ ಹೆಚ್ಚು ಗಂಭೀರವಾಗಿ ಉಪಚರಿಸಬೇಡಿರಿ. ಹಿರಿಯರು ದೇವರ ಮಂದೆಯನ್ನು ಕಾಪಾಡಬೇಕು ಮತ್ತು ಆತನ ಸಂಸ್ಥೆಯನ್ನು ಶುದ್ಧವಾಗಿಡಬೇಕು. ಆದರೆ ದೃಢತೆಯ ಬುದ್ಧಿವಾದವನ್ನು ಆವಶ್ಯಪಡಿಸುವ ಕೆಲವು ಆತ್ಮಿಕ ತಪ್ಪುಹೆಜ್ಜೆಗಳು, ಒಂದು ನ್ಯಾಯನಿರ್ಣಾಯಕ ವಿಚಾರಣೆಯಿಲ್ಲದೇ ಒಬ್ಬ ಅಥವಾ ಇಬ್ಬರು ಹಿರಿಯರ ಸ್ವಂತ ವಿವೇಚನೆಯಲ್ಲಿ ನಿರ್ವಹಿಸಲ್ಪಡ ಸಾಧ್ಯವಿದೆ. ಅನೇಕ ಸಂದರ್ಭಗಳಲ್ಲಿ, ಕ್ರೈಸ್ತನ ತಪ್ಪು ಹೆಜ್ಜೆಗೆ ಮಾನವ ಬಲಹೀನತೆಯೇ ಹೊರತು ಬುದ್ಧಿಪೂರ್ವಕ ದುಷ್ಟತೆಯು ಮುಖ್ಯ ಕಾರಣವಾಗಿರುವುದಿಲ್ಲ. ಹಿರಿಯರು ಮಂದೆಯನ್ನು ಮಮತೆಯಿಂದ ಉಪಚರಿಸಬೇಕು ಮತ್ತು ಇದನ್ನು ನೆನಪಿಡಬೇಕು: “ಕರುಣೆತೋರಿಸದೆ ಇರುವವನಿಗೆ ನ್ಯಾಯತೀರ್ಮಾನದಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ.” (ಯಾಕೋಬ 2:13; ಅ. ಕೃತ್ಯಗಳು 20:28-30) ಆದುದರಿಂದ, ವಿಷಯಗಳನ್ನು ದೊಡ್ಡದಾಗಿ ಕಾಣುವಂತೆ ಮಾಡುವ ಬದಲಾಗಿ, ಹಿರಿಯರು ಪಶ್ಚಾತ್ತಾಪಿ ಜೊತೆ ವಿಶ್ವಾಸಿಗಳೊಂದಿಗೆ, ನಮ್ಮ ಕನಿಕರವುಳ್ಳಾತನೂ ದಯಾಳುವೂ ಆದ ಯೆಹೋವ ದೇವರಂತೆ, ಶಾಂತಭಾವದಿಂದ ವ್ಯವಹರಿಸಬೇಕು.—ಎಫೆಸ 4:32.
ತಪ್ಪುಹೆಜ್ಜೆಗೆ ನಡಿಸಲ್ಪಟ್ಟಿರಬಹುದಾದ ವಿಷಯಗಳ ಬಗ್ಗೆ ತಿಳಿವಳಿಕೆಯನ್ನು ತೋರಿಸಿರಿ. ತಮ್ಮ ಜೊತೆ ವಿಶ್ವಾಸಿಯು ತನ್ನ ಹೃದಯದಲ್ಲಿರುವುದನ್ನು ಸರಾಗವಾಗಿ ವ್ಯಕ್ತಪಡಿಸುವಾಗ ಹಿರಿಯರು ಜಾಗರೂಕತೆಯಿಂದ ಕಿವಿಗೊಡುವ ಅಗತ್ಯವಿದೆ. ‘ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ದೇವರು ತಿರಸ್ಕರಿಸುವುದಿಲ್ಲ’ ವಾದ್ದರಿಂದ, ಅವರೂ ತಿರಸ್ಕರಿಸಬಾರದು. (ಕೀರ್ತನೆ 51:17) ಪ್ರಾಯಶಃ ಒಬ್ಬ ವಿವಾಹ ಸಂಗಾತಿಯ ಭಾವನಾತ್ಮಕ ಬೆಂಬಲದ ಕೊರತೆಯು ಸಮಸ್ಯೆಯ ಮೂಲಕಾರಣವಾಗಿರಬಹುದು. ತೀವ್ರವಾದ ಮತ್ತು ದೀರ್ಘಕಾಲದ ಮಾನಸಿಕ ಖಿನ್ನತೆಯು ಆ ವ್ಯಕ್ತಿಯಲ್ಲಿ ಸಾಮಾನ್ಯವಾಗಿದ್ದ ಪ್ರಬಲ ಮಾನಸಿಕ ಶಕ್ತಿಯನ್ನು ಕ್ರಮೇಣ ಸವೆಯಿಸಿರಬಹುದು ಅಥವಾ ವಿವೇಕಪೂರ್ಣ ನಿರ್ಣಯಗಳನ್ನು ಮಾಡುವುದನ್ನು ಅತಿ ಕಷ್ಟಕರವನ್ನಾಗಿ ಮಾಡಿರಬಹುದು. ಪ್ರೀತಿಯುಳ್ಳ ಹಿರಿಯರು ಅಂಥ ವಿಷಯಗಳನ್ನು ಪರಿಗಣಿಸುವರು, ಯಾಕಂದರೆ ಪೌಲನು “ಅಕ್ರಮವಾಗಿ ನಡೆಯುವವರಿಗೆ ಬುದ್ಧಿಹೇಳಿರಿ” ಎಂದು ತನ್ನ ಸಹೋದರರನ್ನು ಪ್ರಬೋಧಿಸಿದನ್ದಾದರೂ, ಅವನು ಇದನ್ನೂ ಪ್ರೇರಿಸಿದ್ದನು: “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ.” (1 ಥೆಸಲೊನೀಕ 5:14) ಹಿರಿಯರು ದೇವರ ನೀತಿಯ ಮಟ್ಟಗಳನ್ನು ನಿರ್ಬಲಗೊಳಿಸಬಾರದಾದರೂ, ದೇವರು ಸಹ ಮಾಡುವಂತೆ, ಕಾಠಿಣ್ಯವನ್ನು ತಗ್ಗಿಸುವ ವಿಷಯಗಳನ್ನು ಅವರು ಗಣನೆಗೆ ತಂದುಕೊಳ್ಳಬೇಕು.—ಕೀರ್ತನೆ 103:10-14; 130:3.
ನಿಮ್ಮ ಜೊತೆ ಕ್ರೈಸ್ತನ ಸ್ವಪ್ರತಿಷ್ಠೆಯನ್ನು ಕುಗ್ಗಿಸುವುದನ್ನು ವರ್ಜಿಸಿರಿ. ಯಾವನೇ ಸಹೋದರನ ಯಾ ಸಹೋದರಿಯ ಸ್ವಾಭಿಮಾನವನ್ನು ಅಪಹರಿಸಲು ಅಥವಾ ಅವನು ಯಾ ಅವಳು ನಿರುಪಯೋಗಿಗಳೆಂಬ ಭಾವನೆಯನ್ನು ಕೊಡಲು ನಾವೆಂದೂ ಬಯಸಲಾರೆವು. ಬದಲಾಗಿ, ಆ ವ್ಯಕ್ತಿಯ ಕ್ರೈಸ್ತ ಗುಣಗಳಲ್ಲಿ ಮತ್ತು ದೇವರೆಡೆಗಿನ ಪ್ರೀತಿಯಲ್ಲಿ ನಮಗೆ ಭರವಸೆ ಇದೆಯೆಂಬ ಆಶ್ವಾಸನೆಗಳು, ಒಂದು ತಪ್ಪನ್ನು ಸರಿಪಡಿಸಲು ಉತ್ತೇಜನವಾಗಿ ಕಾರ್ಯನಡಿಸುವುದು. ಔದಾರ್ಯ ತೋರಿಸುವುದರಲ್ಲಿ ಅವರಿಗಿದ್ದ “ಸಿದ್ಧಮನಸ್ಸು” ಮತ್ತು “ಆಸಕ್ತಿ” ಯನ್ನು ಇತರರ ಮುಂದೆ ಹೊಗಳಿದ್ದೇನೆಂದು ಪೌಲನು ಕೊರಿಂಥದವರಿಗೆ ಹೇಳಿದಾಗ ಅವರು ಆ ವಿಷಯದಲ್ಲಿ ಉದಾರಿಗಳಾಗಿರಲು ಪ್ರೇರೇಪಿಸಲ್ಪಟ್ಟರು.—2 ಕೊರಿಂಥ 9:1-3.
ಯೆಹೋವನಲ್ಲಿ ಭರವಸೆ ಇಡುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದೆಂದು ತೋರಿಸಿರಿ. ಹೌದು, ದೇವರಲ್ಲಿ ಭರವಸೆ ಇಡುವುದು ಮತ್ತು ಆತನ ವಾಕ್ಯದ ಬುದ್ಧಿವಾದವನ್ನು ಅನ್ವಯಿಸುವುದು, ಬೇಕಾದ ಸರಿಹೊಂದಿಸುವಿಕೆಯನ್ನು ತರಲು ಸಹಾಯಕಾರಿ ಎಂದು ಕಾಣುವಂತೆ ವ್ಯಕ್ತಿಗೆ ಸಹಾಯನೀಡಲು ಮನಃಪೂರ್ವಕವಾಗಿ ಪ್ರಯತ್ನಮಾಡಿರಿ. ಅದನ್ನು ಪೂರೈಸಲು, ನಮ್ಮ ಹೇಳಿಕೆಗಳು ಶಾಸ್ತ್ರವಚನಗಳ ಮೇಲೆ ಮತ್ತು ಬೈಬಲಾಧಾರಿತ ಪ್ರಕಾಶನಗಳ ಮೇಲೆ ಆಧಾರಿಸಿರಬೇಕು. ನಮ್ಮ ಗುರಿಯು ಇಮ್ಮಡಿಯಾಗಿದೆ: (1) ಸಹಾಯ ಬೇಕಾಗಿರುವವನು ಯೆಹೋವನ ದೃಷ್ಟಿಕೋನವನ್ನು ಕಾಣುವಂತೆ ಮತ್ತು ತಿಳಿಯುವಂತೆ ನೆರವಾಗುವುದು ಮತ್ತು (2) ಈ ದೈವಿಕ ಮಾರ್ಗದರ್ಶಕಗಳನ್ನು ಹಿಂಬಾಲಿಸಲು ಅವನು ಸ್ವಲ್ಪ ಮಟ್ಟಿಗೆ ಹೇಗೆ ಉಪೇಕ್ಷಿಸಿದ್ದಾನೆ ಅಥವಾ ತಪ್ಪಿದ್ದಾನೆ ಎಂದು ಅವನಿಗೆ ತೋರಿಸುವುದು.
ಶಾಸ್ತ್ರೀಯ ಬುದ್ಧಿವಾದವನ್ನು ದಯೆಯುಳ್ಳ ಆದರೂ ಸಂಬಂಧಿತ ಪ್ರಶ್ನೆಗಳೊಂದಿಗೆ ಜೋಡಿಸಿರಿ. ಹೃದಯವನ್ನು ತಲಪುವುದರಲ್ಲಿ ಇದು ಅತಿ ಪರಿಣಾಮಕಾರಿಯಾಗಿರಬಲ್ಲದು. ತನ್ನ ಪ್ರವಾದಿಯಾದ ಮಲಾಕಿಯನ ಮೂಲಕ, ತನ್ನ ಜನರು ಹೇಗೆ ಅಡದ್ಡಾರಿಗೆ ತೆರಳಿದರೆಂದು ತಿಳುಕೊಳ್ಳುವಂತೆ ಮಾಡಲು ಯೆಹೋವನು ಒಂದು ಪ್ರಶ್ನೆಯನ್ನು ಉಪಯೋಗಿಸಿದನು. “ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ?” ಎಂದು ಕೇಳುತ್ತಾ, ಅವನು ಕೂಡಿಸಿದ್ದು: “ನೀವೋ ನನ್ನಿಂದ ಕದ್ದುಕೊಳ್ಳುತಿದ್ತೀರ್ದಿ.” (ಮಲಾಕಿಯ 3:8) ಮೋಶೆಯ ಧರ್ಮಶಾಸ್ತ್ರದಿಂದ ಕೇಳಲ್ಪಟ್ಟ ಪ್ರಕಾರ, ಇಸ್ರಾಯೇಲ್ಯರು ತಮ್ಮ ಬೆಳೆಗಳಲ್ಲಿ ಹತ್ತನೆಯ ಒಂದಂಶವನ್ನು ಕೊಡಲು ತಪ್ಪಿದ್ದು ಯೆಹೋವನಿಂದ ಕದ್ದುಕೊಳ್ಳುವಿಕೆಗೆ ಸಮಾನವಾಗಿತ್ತು. ಈ ಪರಿಸ್ಥಿತಿಯ ಪರಿಹಾರಕ್ಕಾಗಿ, ದೇವರು ಅವರನ್ನು ಹೇರಳವಾಗಿ ಆಶೀರ್ವದಿಸುವಂತೆ, ಇಸ್ರಾಯೇಲ್ಯರು ಸತ್ಯಾರಾಧನೆಯ ಕಡೆಗಿನ ತಮ್ಮ ಹಂಗುಗಳನ್ನು ನಂಬಿಕೆಯಿಂದ ನೆರವೇರಿಸುವ ಅಗತ್ಯವಿತ್ತು. ವಿಚಾರ ಪ್ರೇರಕ ಮತ್ತು ಪರಿಗಣನೆಯ ಪ್ರಶ್ನೆಗಳ ಮೂಲಕ, ಇಂದು ಯೋಗ್ಯ ವಿಷಯಗಳನ್ನು ಮಾಡುವುದರಲ್ಲಿ ನಮ್ಮ ಸ್ವರ್ಗೀಯ ತಂದೆಯಲ್ಲಿ ಭರವಸೆ ಇಡುವುದು ಮತ್ತು ಅವನಿಗೆ ವಿಧೇಯರಾಗುವುದು ಒಳಗೂಡಿದೆ ಎಂದು ಹಿರಿಯರು ಸಹ ಒತ್ತನ್ನು ಹಾಕಸಾಧ್ಯವಿದೆ. (ಮಲಾಕಿಯ 3:10) ಆ ವಿಚಾರವನ್ನು ಹೃದಯಕ್ಕೆ ನಿವೇದಿಸುವ ಮೂಲಕ, ನಮ್ಮ ಸಹೋದರನಿಗೆ ‘ಅವನ ಕಾಲುಗಳಿಂದ ನೆಟ್ಟಗೆ ಮುಂದೆ ನಡೆ’ ಯುವಂತೆ ಸಹಾಯ ಮಾಡುವುದರಲ್ಲಿ ಬಹಳಷ್ಟು ಸಹಾಯವು ಸಿಗುವುದು.—ಇಬ್ರಿಯ 12:13.
ಬುದ್ಧಿವಾದಗಳನ್ನು ಸ್ವೀಕರಿಸುವುದರ ಪ್ರಯೋಜನಗಳನ್ನು ಒತ್ತಿಹೇಳಿರಿ. ಪರಿಣಾಮಕಾರಿ ಬುದ್ಧಿವಾದದಲ್ಲಿ, ಒಂದು ಕೆಟ್ಟ ಮಾರ್ಗವನ್ನು ಬೆನ್ನಟ್ಟುವ ಫಲಿತಾಂಶಗಳ ಮತ್ತು ವಿಷಯಗಳನ್ನು ಸರಿಪಡಿಸುವುದರಿಂದ ದೊರೆಯುವ ಪ್ರಯೋಜನಗಳ ಮರುಜ್ಞಾಪಕಗಳ ಕುರಿತ ಬುದ್ಧಿವಾದವು ಎರಡೂ ಸೇರಿರುತ್ತವೆ. ಒಂದು ಕಾಲೋಚಿತ ಎಚ್ಚರಿಕೆಯ ಅನಂತರ, ಯೇಸು ಲವೊದಿಕೀಯದ ಆತ್ಮಿಕ ಜಡತೆಯ ಸಭೆಯವರಿಗೆ ಆಶ್ವಾಸನೆ ಕೊಟ್ಟದೇನ್ದಂದರೆ ಅವರು ತಮ್ಮ ಹಿಂದಣ ನಡೆವಳಿಗಾಗಿ ಪಶ್ಚಾತ್ತಾಪಪಟ್ಟು, ಹುರುಪಿನ ಶಿಷ್ಯರಾಗಿ ಪರಿಣಮಿಸಿದರೆ, ಮಹತ್ತಾದ ಸುಯೋಗಗಳನ್ನು, ಪರಲೋಕದಲ್ಲಿ ಆತನೊಂದಿಗೆ ಆಳುವ ಪ್ರತೀಕ್ಷೆಯನ್ನೂ ಅವರು ಪಡೆಯುವರು.—ಪ್ರಕಟನೆ 3:14-21.
ಬುದ್ಧಿವಾದವು ಪಾಲಿಸಲ್ಪಡುತ್ತಿದೆಯೋ ಇಲ್ಲವೋ ಎಂಬದರಲ್ಲಿ ಆಸಕ್ತಿಯನ್ನು ತೋರಿಸಿರಿ. ತಾನು ಒಂದುಗೂಡಿಸಿದ ಒಂದು ಎಲುಬು ಇನ್ನೂ ಸ್ವಸ್ಥಾನಕ್ಕೆ ಬಂದಿದೆಯೋ ಎಂದು ನೋಡಲು ಆಗಿಂದಾಗ್ಯೆ ಪರೀಕೆಮ್ಷಾಡುವ ಒಬ್ಬ ಒಳ್ಳೇ ವೈದ್ಯನಂತೆ, ಶಾಸ್ತ್ರೀಯ ಬುದ್ಧಿವಾದವು ಅನ್ವಯಿಸಲ್ಪಡುತ್ತಿದೆಯೇ ಎಂದು ನಿರ್ಣಯಿಸಲು ಹಿರಿಯರು ಪ್ರಯತ್ನಿಸಬೇಕು. ಅವರು ತಮ್ಮನ್ನು ಹೀಗೆ ಕೇಳಿಕೊಳ್ಳಬಹುದು: ಅಧಿಕ ಸಹಾಯದ ಅಗತ್ಯವಿದೆಯೇ? ಸೂಚನೆಯನ್ನು ಪುನಃಕೊಡಬೇಕಾಗಿದೆಯೋ, ಪ್ರಾಯಶಃ ಇನ್ನೊಂದು ರೀತಿಯಲ್ಲಿ? ದೀನತೆಯ ಅಗತ್ಯತೆಯ ಕುರಿತಾಗಿ ಯೇಸು ತನ್ನ ಶಿಷ್ಯರಿಗೆ ಪದೇ ಪದೇ ಸೂಚನೆಯನ್ನು ಕೊಡಬೇಕಾಯಿತು. ಕೆಲವು ಕಾಲಾವಧಿಯ ತನಕ, ಸೂಚನೆ, ದೃಷ್ಟಾಂತಗಳು, ಮತ್ತು ವಸ್ತು ಪಾಠಗಳ ಮೂಲಕ ಅವರ ಯೋಚನೆಯನ್ನು ಸರಿಹೊಂದಿಸಲು ಆತನು ತಾಳ್ಮೆಯಿಂದ ಪ್ರಯತ್ನಿಸಿದನು. (ಮತ್ತಾಯ 20:20-28; ಮಾರ್ಕ 9:33-37. ಲೂಕ 22:24-27; ಯೋಹಾನ 13:5-17) ಹೋಲಿಕೆಯಾಗಿ, ಪೂರ್ಣ ಆತ್ಮಿಕ ಆರೋಗ್ಯಕ್ಕೆ ವ್ಯಕ್ತಿಯ ಪ್ರಗತಿಯನ್ನು ಪ್ರವರ್ಧಿಸಲು ರಚಿಸಲ್ಪಟ್ಟ, ಹಿಂಬಾಲಿಸುವ ಶಾಸ್ತ್ರೀಯ ಚರ್ಚೆಗಳನ್ನು ಏರ್ಪಡಿಸುವ ಮೂಲಕ ಹಿರಿಯರು ಒಬ್ಬ ಸಹೋದರನ ಅಥವಾ ಸಹೋದರಿಯ ಸರಿಹೊಂದಿಕೆಯನ್ನು ನಿಶ್ಚಯಮಾಡಲು ನೆರವಾಗಬಲ್ಲರು.
ಮಾಡಲ್ಪಟ್ಟ ಯಾವುದೇ ಸುಧಾರಣೆಯನ್ನು ಪ್ರಶಂಸಿಸಿರಿ. ತಪ್ಪು ಹೆಜ್ಜೆಯನ್ನು ತಕ್ಕೊಂಡ ಒಬ್ಬನು ಶಾಸ್ತ್ರೀಯ ಬುದ್ಧಿವಾದವನ್ನು ಅನ್ವಯಿಸಲು ಪ್ರಾಮಾಣಿಕತೆಯಿಂದ ಪ್ರಯತ್ನಿಸುವುದಾದರೆ, ಅವನನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿರಿ. ಇದು ಆರಂಭದ ಬುದ್ಧಿವಾದವನ್ನು ಪುಷ್ಟಿಗೊಳಿಸುವುದು ಮತ್ತು ಅಧಿಕ ಸುಧಾರಣೆಯನ್ನು ಉತ್ತೇಜಿಸುವ ಸಂಭವನೀಯತೆ ಇದೆ. ಕೊರಿಂಥದವರಿಗೆ ಪೌಲನು ಬರೆದ ಮೊದಲನೆಯ ಪತ್ರದಲ್ಲಿ, ಹಲವಾರು ವಿಷಯಗಳ ಮೇಲೆ ಅವರಿಗೆ ದೃಢವಾದ ಬುದ್ಧಿವಾದವನ್ನು ಕೊಡುವ ಹಂಗುಳ್ಳವನಾದನು. ಅವನ ಪತ್ರಕ್ಕೆ ದೊರೆತ ಅತ್ಯುತ್ತಮ ಪ್ರತಿಕ್ರಿಯೆಯನ್ನು ತೀತನು ಅಪೊಸ್ತಲನಿಗೆ ತಿಳಿಸಿದ ಸ್ವಲ್ಪ ಸಮಯದ ಅನಂತರ, ಪೌಲನು ಅವರನ್ನು ಹೊಗಳಿ ಪತ್ರಬರೆದನು. “ಈಗ ಸಂತೋಷಪಡುತ್ತೇನೆ” ಎಂದನವನು, “ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು (ದೇವರ ಚಿತ್ತಾನುಸಾರ) ದುಃಖಪಟ್ಟು ಬೇರೆ ಮನಸ್ಸನ್ನು ಹೊಂದಿದ್ದಕ್ಕಾಗಿ ಸಂತೋಷಪಡುತ್ತೇನೆ.”—2 ಕೊರಿಂಥ 7:9.
ಸಂತೋಷಪಡಲು ಒಂದು ಕಾರಣ
ಹೌದು, ಅವನ ಬುದ್ಧಿವಾದವು ಕೊರಿಂಥದವರಿಗೆ ಸಹಾಯ ಮಾಡಿತೆಂದು ಪೌಲನಿಗೆ ತಿಳಿದಾಗ ಅವನು ಸಂತೋಷಪಟ್ಟನು. ತದ್ರೀತಿಯಲ್ಲಿ, ಸದ್ಯದ ಹಿರಿಯರಿಗೆ, ಅವರ ಪ್ರೀತಿಯುಳ್ಳ ಸಹಾಯಕ್ಕೆ ಒಳ್ಳೆಯ ಪ್ರತಿಕ್ರಿಯೆ ತೋರಿಸಿದ ಕಾರಣ ತಪ್ಪು ಹೆಜ್ಜೆಯಿಂದ ಜೊತೆ ಆರಾಧಕನೊಬ್ಬನು ಗುಣಹೊಂದುವಾಗ, ಮಹಾ ಸಂತೋಷವಾಗುತ್ತದೆ. ಒಬ್ಬ ಪಶ್ಚಾತ್ತಾಪಿ ಕ್ರೈಸ್ತನು ತನ್ನ ಹೃದಯದಿಂದ ಪಾಪದ ಕಂಟಕಿತ ಕಳೆಗಳನ್ನು ನಿರ್ಮೂಲಗೊಳಿಸುವಂತೆ ಮತ್ತು ಹೀಗೆ ದೈವಿಕ ಫಲವು ಅಲ್ಲಿ ಹೇರಳವಾಗಿ ಬೆಳೆಯಲಾಗುವಂತೆ ಸಹಾಯಮಾಡಿದ್ದರಲ್ಲಿ ಅವರು ಖಂಡಿತವಾಗಿಯೂ ಉಲ್ಲಾಸವನ್ನು ಪಡೆಯಬಲ್ಲರು.
ಯಾವುದೋ ಒಂದು ತಪ್ಪು ಹೆಜ್ಜೆಯನ್ನು ತಕ್ಕೊಂಡ ಒಬ್ಬ ವ್ಯಕ್ತಿಯನ್ನು ಸರಿಹೊಂದಿಸುವುದರಲ್ಲಿ ಹಿರಿಯರು ಯಶಸ್ವಿಗಳಾದರೆ, ಆತ್ಮಿಕವಾಗಿ ಪೂರ್ಣ ಆಪತ್ಕಾರಕವಾಗಿರುವ ಒಂದು ಮಾರ್ಗದಿಂದ ಅವನನ್ನು ಅಥವಾ ಅವಳನ್ನು ತಿರುಗಿಸಬಹುದಾಗಿದೆ. (ಯಾಕೋಬ 5:19, 20 ಹೋಲಿಸಿರಿ.) ಅಂಥ ಸಹಾಯಕ್ಕಾಗಿ, ಸಹಾಯ ಪಡೆದವನು ಯೆಹೋವ ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಹಿರಿಯರ ಪ್ರೀತಿಯುಳ್ಳ ಸಹಾಯ, ಕನಿಕರ, ಮತ್ತು ತಿಳಿವಳಿಕೆಗಾಗಿ ಸಹ ನಿಜ ಗಣ್ಯತೆಯ ಮಾತುಗಳನ್ನು ನುಡಿಯುವುದು ಯೋಗ್ಯವಾಗಿರುವುದು. ಮತ್ತು ಆತ್ಮಿಕ ವಾಸಿಯು ಪೂರ್ಣಗೊಂಡಾಗ, ಸರಿಹೊಂದಿಕೆಯು ಸೌಮ್ಯಭಾವದಿಂದ ತರಲ್ಪಟ್ಟದ್ದಕ್ಕಾಗಿ ಸಂಬಂಧಪಟ್ಟವರೆಲ್ಲರೂ ಸಂತೋಷಪಡಬಲ್ಲರು.