ಯಾವ ರೀತಿಯ ಜನರನ್ನು ನೀವು ಮೆಚ್ಚುತ್ತೀರಿ?
“ವಧು ಬೇಕಾಗಿದ್ದಾಳೆ. ಗೌರವರ್ಣ ಮತ್ತು ತೆಳ್ಳನೆಯ ಮೈಕಟ್ಟಿನ, ಪದವೀಧರೆ ಯಾ ಪದವೀಧೋತ್ತರೆ ಇಷ್ಟಕರ. ಆಸ್ತಿಗಳುಳ್ಳ ಒಳ್ಳೇ ಕುಟುಂಬದವಳಾಗಿರಬೇಕು. ಸಮಾನ ಜಾತಿಗೆ ಹೆಚ್ಚು ಒಲವು.”
ಹೀಗೆಂದು ಓದುವ ಒಂದು ಮಾದರಿ ವೈವಾಹಿಕ ಜಾಹೀರಾತನ್ನು ಭಾರತದ ಒಂದು ವಾರ್ತಾ ಪತ್ರಿಕೆಯಲ್ಲಿ ನೀವು ನೋಡಬಹುದು. ಲೋಕದ ಬೇರೆ ಅನೇಕ ಭಾಗಗಳಲ್ಲೂ ತದ್ರೀತಿಯ ಒಂದು ವಿಷಯವನ್ನು ನೀವು ನೋಡಸಾಧ್ಯವಿರುವ ಸಂಭವನೀಯತೆ ಇದೆ. ಭಾರತದಲ್ಲಿ ಈ ನೋಟೀಸು ಸಾಮಾನ್ಯವಾಗಿ ಒಬ್ಬ ಭಾವೀ ವರನ ಹೆತ್ತವರಿಂದ ಹಾಕಲ್ಪಡುತ್ತದೆ. ಪ್ರತ್ಯುತ್ತರಗಳಲ್ಲಿ, ಒಂದು ಕಡು ಕೆಂಪು ಸೀರೆಯನ್ನುಟ್ಟು, ತುಂಬಾ ಚಿನ್ನದ ಆಭರಣಗಳನ್ನು ತೊಟ್ಟಿರುವ ಒಬ್ಬ ಹುಡುಗಿಯ ಒಂದು ಭಾವಚಿತ್ರವು ಒಳಗೂಡಿರಬಹುದು. ಹುಡುಗನ ಕುಟುಂಬದವರಿಗೆ ಮೆಚ್ಚಿಕೆಯಾದಲ್ಲಿ, ವಿವಾಹ ಪ್ರಸ್ತಾಪಗಳು ಪ್ರಾರಂಭಿಸುತ್ತವೆ.
ಮೂಲ್ಯತೆಯ ಸಾಮಾನ್ಯ ಮಟ್ಟಗಳು
ಭಾರತದಲ್ಲಿ ಒಂದು ಗೌರವರ್ಣದ ವಧುವಿಗಾಗಿ ವಿನಂತಿಗಳು ಸರ್ವಸಾಮಾನ್ಯವು. ಹಿಂದೂ ಸಮಾಜದಲ್ಲಿ ನೀಚ ಜಾತಿಗಳೆಂದೆಣಿಸುವವರ ಮೈಬಣ್ಣ ಕಪ್ಪು ಎಂಬ ಆಳವಾಗಿ ಬೇರೂರಿರುವ ನಂಬಿಕೆಯೇ ಇದಕ್ಕೆ ಕಾರಣ. ಇತ್ತೀಚೆಗೆ ಭಾರತೀಯ ಟೆಲಿವಿಷನ್ನ ಮೇಲೆ ಒಂದು ಕಾರ್ಯಕ್ರಮವು, ಒಬ್ಬಳು ಬಿಳಿವರ್ಣದ ಮತ್ತು ಇನ್ನೊಬ್ಬಳು ಕಪ್ಪುಬಣ್ಣದ ಎರಡು ಹುಡುಗಿಯರ ಒಂದು ಕಥೆಯನ್ನು ತಿಳಿಸಿತು. ಬಿಳೀ ಹುಡುಗಿ ಕ್ರೂರಳೂ ಒರಟು ನಡತೆಯವಳೂ ಆಗಿದ್ದಳು; ಕಪ್ಪು ಹುಡುಗಿ ದಯಾಪರಳೂ ಸೌಮ್ಯಳೂ ಆಗಿದ್ದಳು. ಒಂದು ಇಂದ್ರಜಾಲ ವಿಪರ್ಯಸತ್ತೆಯು ಸಂಭವಿಸಿತು, ಬಿಳೀ ಹುಡುಗಿ ಶಿಕ್ಷೆಯಿಂದಾಗಿ ಕಪ್ಪಾಗಿ ಪರಿಣಮಿಸಿದಳು, ಕಪ್ಪು ಹುಡುಗಿಯನ್ನು ಬಿಳಿವರ್ಣದವಳಾಗಿ ಮಾಡಲಾಯಿತು. ಕಟ್ಟಕಡೆಗೆ ಒಳ್ಳೇಯದೇ ವಿಜೈಸುತ್ತದೆ ಎಂಬದು ಈ ಕಥೆಯ ನೈತಿಕಪಾಠ ಎಂದು ವ್ಯಕ್ತವಾದರೂ, ಬಿಳಿ ಮೈಬಣ್ಣವು ಒಂದು ಅಪೇಕ್ಷಿತ ಪ್ರತಿಫಲವು.
ಅಂಥ ಜಾತೀಯ ಭಾವನೆಗಳು ಹೆಚ್ಚಾಗಿ ಒಬ್ಬನು ಗ್ರಹಿಸುವುದಕ್ಕಿಂತಲೂ ಎಷ್ಟೋ ಹೆಚ್ಚು ಆಳವಾಗಿ ತಳವೂರಿರಬಹುದು. ದೃಷ್ಟಾಂತಕ್ಕಾಗಿ, ಏಷ್ಯಾದವನೊಬ್ಬನು ಪಾಶ್ಚಿಮಾತ್ಯ ದೇಶವನ್ನು ಸಂದರ್ಶಿಸಬಹುದು ಮತ್ತು ತನ್ನ ಮೈಬಣ್ಣಕ್ಕಾಗಿ ಅಥವಾ ಕಣ್ಣಿನ ಓಲಿಗಾಗಿ ತನ್ನನ್ನು ಕೆಟ್ಟದಾಗಿ ಉಪಚರಿಸಲಾಯಿತೆಂದು ದೂರಬಹುದು. ಅಂಥ ಕ್ರಿಯೆಗಳು ಅವನನ್ನು ಕಲಕಿಸುತ್ತವೆ, ಪ್ರತಿಕೂಲ ಭೇದಭಾವದ ಅನಿಸಿಕೆ ಅವನಿಗಾಗುತ್ತದೆ. ಆದರೆ ತನ್ನ ಸ್ವದೇಶಕ್ಕೆ ಹಿಂತಿರುಗಿದಾಗ, ಒಂದು ಬೇರೆ ಜಾತೀಯ ಗುಂಪಿನ ಜನರನ್ನು ಅವನೂ ಅದೇ ರೀತಿ ಉಪಚರಿಸಬಹುದು. ಇಂದು ಸಹ ಹೆಚ್ಚಿನ ಜನರ ಅಂದಾಜಿನಲ್ಲಿ ಮೈಬಣ್ಣ ಮತ್ತು ಕುಲವು, ಇನ್ನೊಬ್ಬ ವ್ಯಕ್ತಿಯ ಪಾತ್ರತೆಯಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ.
“ಧನವು ಎಲ್ಲವನ್ನು ಒದಗಿಸಿಕೊಡುವದು,” ಎಂದು ಬರೆದನು ಪ್ರಾಚೀನ ಕಾಲದ ಅರಸ ಸೊಲೊಮೋನನು. (ಪ್ರಸಂಗಿ 10:19) ಅದೆಷ್ಟು ಸತ್ಯವು! ಜನರನ್ನು ವೀಕ್ಷಿಸುವ ರೀತಿಯಲ್ಲೂ ಐಶ್ಚರ್ಯವು ಪ್ರಭಾವ ಬೀರುತ್ತದೆ. ಐಶ್ವರ್ಯದ ಮೂಲದ ಕುರಿತು ಪ್ರಶ್ನಿಸುವುದು ಬಹಳ ಅಪರೂಪ. ಒಬ್ಬ ಮನುಷ್ಯನು ಧನವಂತನಾಗಿರುವುದು ಕಷ್ಟದ ದುಡಿಮೆಯಿಂದಲೋ ಅಥವಾ ಜಾಗ್ರತೆಯ ಕಾರ್ಯ ನಿರ್ವಾಹಣೆಯಿಂದಲೋ ಇಲ್ಲವೇ ಅಪ್ರಾಮಾಣಿಕತೆಯಿಂದಲೋ? ಅದು ಪ್ರಾಮುಖ್ಯವೇ ಅಲ್ಲ. ಐಶ್ವರ್ಯ—ಅಯೋಗ್ಯವಾಗಿ ಗಳಿಸಿದ್ದಾಗಿರಲಿ, ಇಲ್ಲದಿರಲಿ, ಅದನ್ನು ಪಡೆದವನೊಂದಿಗೆ ಮೆಚ್ಚಿಗೆಯನ್ನು ಸಂಪಾದಿಸಿಕೊಳ್ಳಲು ಅನೇಕರನ್ನು ಮುನ್ನಡಿಸುತ್ತದೆ.
ಉಚ್ಚ ಶಿಕ್ಷಣವು ಸಹ ಈ ಸ್ಪರ್ಧಾತ್ಮಕ ಲೋಕದಲ್ಲಿ ದೊಡ್ಡದೆಂದೆಣಿಸಲ್ಪಡುತ್ತದೆ. ಒಂದು ಮಗುವು ಹುಟ್ಟಿದ ಕೂಡಲೇ, ಶಿಕ್ಷಣಕ್ಕಾಗಿ ತುಂಬಾ ಹಣವನ್ನು ಬದಿಗಿಡಲು ಪ್ರಾರಂಭಿಸುವಂತೆ ಹೆತ್ತವರನ್ನು ಪ್ರೇರಿಸಲಾಗುತ್ತದೆ. ಮಗುವು ಎರಡು ಅಥವಾ ಮೂರು ವರ್ಷದ್ದಾಗುವುದರೊಳಗೆ, ಒಂದು ಯೋಗ್ಯವಾದ ನರ್ಸೆರಿ ಶಾಲೆಗೆ ಅಥವಾ ಕಿಂಡರ್ಗಾರ್ಟನ್ಗೆ, ಒಂದು ವಿಶ್ವವಿದ್ಯಾಲಯದ ಪದವಿಯ ದೀರ್ಘ ಪ್ರಯಾಣದ ಮೊದಲನೆಯ ಹೆಜ್ಜೆಯಾಗಿ ಸೇರಿಸುವ ವಿಷಯದಲ್ಲಿ ಅವರು ಚಿಂತಿಸುತ್ತಾರೆ. ಒಂದು ಪ್ರತಿಷ್ಠಿತ ಪ್ರಶಸ್ತಿಪತ್ರಕ್ಕೆ ಬೇರೆಯವರ ಮೆಚ್ಚಿಕೆ ಮತ್ತು ಗೌರವವನ್ನು ಗಳಿಸುವ ಯೋಗ್ಯತೆಯಿದೆಯೆಂದು ಕೆಲವು ಜನರು ನೆನಸುವಂತೆ ತೋರುತ್ತದೆ.
ಹೌದು, ಮೈಬಣ್ಣ, ವಿದ್ಯೆ, ಹಣ, ಜಾತೀಯ ಹಿನ್ನೆಲೆ—ಇವುಗಳು ಇನ್ನೊಬ್ಬ ವ್ಯಕ್ತಿಯ ಯೋಗ್ಯತೆಯನ್ನು ನಿರ್ಣಯಿಸುವ ಇಲ್ಲವೇ ಮುಂದಾಗಿ ತೀರ್ಪುಮಾಡುವ ಅನೇಕ ವ್ಯಕ್ತಿಗಳ ಮಟ್ಟಗಳಾಗಿ ಪರಿಣಮಿಸಿವೆ. ತಾವು ಯಾರಿಗೆ ಮೆಚ್ಚಿಕೆ ತೋರಿಸಬೇಕು ಮತ್ತು ಯಾರಿಂದ ತಾವು ಅದನ್ನು ತಡೆದಿಡಬೇಕು ಎಂದು ನಿರ್ಧರಿಸುವ ವಿಷಯಗಳು ಅವಾಗಿವೆ. ನಿಮ್ಮ ಕುರಿತೇನು? ನೀವು ಯಾರನ್ನು ಮೆಚ್ಚುತ್ತೀರಿ? ಹಣವಿರುವ, ಗೌರವರ್ಣವಿರುವ ಅಥವಾ ಉಚ್ಚ ಶಿಕ್ಷಣವಿರುವ ಯಾರನ್ನಾದರೂ ಮೆಚ್ಚಿಕೆ ಮತ್ತು ಗೌರವಕ್ಕೆ ಹೆಚ್ಚು ಪಾತ್ರರೆಂದು ನೀವು ಪರಿಗಣಿಸುತ್ತಿರೋ? ಹಾಗಿದ್ದರೆ, ನಿಮ್ಮ ಅನಿಸಿಕೆಗಳ ಮೂಲಾಧಾರವನ್ನು ಗಂಭೀರವಾಗಿ ಗಮನಿಸುವ ಅಗತ್ಯತೆಯು ನಿಮಗಿದೆ.
ಇವು ಯೋಗ್ಯ ಮಟ್ಟಗಳೋ?
ಹಿಂದೂ ವರ್ಲ್ಡ್ ಪುಸ್ತಕವು ಅವಲೋಕಿಸುವುದು: “ಬ್ರಾಹ್ಮಣನನ್ನು ಕೊಲ್ಲುವ ಒಬ್ಬ ನೀಚ ಜಾತಿಯವನನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಸಾಧ್ಯವಿದೆ ಮತ್ತು ಅವನ ಅಸ್ತಿಯನ್ನು ಜಪ್ತುಮಾಡಸಾಧ್ಯವಿದೆ ಮತ್ತು ಅವನ ಆತ್ಮವು ನಿತ್ಯ ಶಾಪಕ್ಕೆ ಒಳಗಾಗುತ್ತದೆ. ಯಾರನ್ನಾದರೂ ಕೊಲ್ಲುವ ಬ್ರಾಹ್ಮಣನಿಗೆ ಮಾತ್ರ ಕೇವಲ ದಂಡ ವಿಧಿಸಲಾಗುತ್ತದೆ, ಮರಣಶಿಕ್ಷೆಯನ್ನೆಂದೂ ವಿಧಿಸಲಾಗುವುದಿಲ್ಲ.” ಪುಸ್ತಕವು ಪ್ರಾಚೀನ ಕಾಲದ ಕುರಿತು ತಿಳಿಸುತ್ತದಾದರೂ, ಇಂದಿನ ಕುರಿತಾಗಿ ಏನು? ಜಾತೀಯ ದುರಭಿಮಾನಗಳು ಮತ್ತು ಸಾಮಾಜಿಕ ಒತ್ತಡಗಳು ಈ ಇಪ್ಪತ್ತನೆಯ ಶತಮಾನದಲ್ಲೂ ರಕ್ತದ ಹೊಳೆಗಳನ್ನೇ ಹರಿಸಿವೆ. ಮತ್ತು ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ದಕ್ಷಿಣ ಆಫ್ರಿಕದಲ್ಲಿ ವರ್ಣೀಯ ಪ್ರತ್ಯೇಕತೆಯಿಂದ ನಿರಂತರಗೊಳಿಸಲ್ಪಟ್ಟ ಹಗೆ ಮತ್ತು ಹಿಂಸಾಚಾರ, ಅಮೆರಿಕದಲ್ಲಿ ಕುಲಸಂಬಂಧವಾದ ದುರಭಿಮಾನ, ಮತ್ತು ಬಾಲಿಕ್ಟ್ಗಳ ದೇಶೀಯ ದುರಾಗ್ರಹ—ಪಟ್ಟಿಯು ಮುಂದುವರಿಯುತ್ತಲೇ ಇದೆ—ಇವೆಲ್ಲವೂ ಒಳಹುಟ್ಟಿದ ಶ್ರೇಷ್ಠತೆಯ ಅನಿಸಿಕೆಗಳಿಂದಾಗಿ ಉಂಟಾಗಿವೆ. ಜಾತಿ ಅಥವಾ ರಾಷ್ಟ್ರೀಯತೆಯ ಕಾರಣದಿಂದಾಗಿ ಒಬ್ಬನಿಗಿಂತ ಹೆಚ್ಚಾಗಿ ಇನ್ನೊಬ್ಬನನ್ನು ಇಂಥ ಮೆಚ್ಚುವಿಕೆಯು ಖಂಡಿತವಾಗಿಯೂ ಉತ್ತಮವಾದ, ಶಾಂತಿಭರಿತ ಫಲಗಳನ್ನು ಉತ್ಪಾದಿಸಿರುವುದಿಲ್ಲ.
ಐಶ್ವರ್ಯದ ಕುರಿತೇನು? ಅನೇಕರು ಪ್ರಾಮಾಣಿಕತೆಯ, ಕಷ್ಟದ ದುಡಿಮೆಯಿಂದ ಧನಿಕರಾಗಿದ್ದಾರೆಂಬದು ನಿಸ್ಸಂಶಯ. ಆದರೂ, ಭೂಗತ ಪಾತಕಿಗಳಿಂದ, ಕಳ್ಳ ಸಂತೆಗಾರರಿಂದ, ಅಮಲೌಷಧಿ ಸಾಗಣೆಗಾರರಿಂದ, ನಿರ್ನ್ಯಾಯ-ಶಸ್ತ್ರ ಸಾವಕಾರರಿಂದ ಅಪಾರ ಐಶ್ವರ್ಯದ ಸಂಚಯವಾಗಿದೆ. ಇವರಲ್ಲಿ ಕೆಲವರು ಧರ್ಮಕಾರ್ಯಗಳಿಗೆ ದಾನಕೊಡುತ್ತಾರೆ ಅಥವಾ ಬಡವರಿಗೆ ಸಹಾಯ ಮಾಡುವ ಯೋಜನೆಗಳಿಗೆ ಬೆಂಬಲಕೊಡುತ್ತಾರೆ ನಿಜ. ಆದರೂ, ಅವರ ಪಾತಕೀಯ ಕೃತ್ಯಗಳು ಅವರಿಗೆ ತುತ್ತಾದ ಬಲಿಗಳಿಗೆ ಅಗಣಿತ ಕಷ್ಟಾನುಭವ ಮತ್ತು ಕ್ಲೇಶವನ್ನು ತಂದಿರುತ್ತವೆ. ಲಂಚ ತಕ್ಕೊಳ್ಳುವ ಯಾ ಶಂಕಾಸ್ಪದ ವ್ಯಾಪಾರ ವ್ಯವಹಾರಿಗಳಂಥ ತುಲನಾತ್ಮಕ ಚಿಲ್ಲರ ದಳ್ಳಾಳಿಗಳು ಸಹ, ಅವರ ಉತ್ಪಾದನೆಗಳು ಯಾ ಸೇವೆಗಳು ನ್ಯೂನತೆ ಮತ್ತು ಲೋಪಗೊಳ್ಳುವಾಗ, ಆಶಾಭಂಗ, ಹಾನಿ, ಮತ್ತು ಮರಣವನ್ನು ತಂದಿರುತ್ತಾರೆ. ನಿಶ್ಚಯವಾಗಿಯೂ ಐಶ್ವರ್ಯದ ಒಡೆತನವು ತಾನೇ ಮೆಚ್ಚಿಗೆಯ ನಿರ್ಣಯಕ್ಕೆ ಯಾವ ಆಧಾರವೂ ಆಗಿರುವುದಿಲ್ಲ.
ಶಿಕ್ಷಣದ ಕುರಿತಾಗಿ ಏನು? ಒಬ್ಬ ವ್ಯಕ್ತಿಯ ಹೆಸರಿನ ಹಿಂದೆ ಪಾಂಡಿತ್ಯ ಪದವಿಯ ಮತ್ತು ಬಿರುದುಗಳ ಒಂದು ಉದ್ದವಾದ ಪಟ್ಟಿಯು ಅವನು ಪ್ರಾಮಾಣಿಕನು ಮತ್ತು ಯಥಾರ್ಥವಂತನೆಂಬ ಖಾತರಿಯನ್ನು ಕೊಡುತ್ತದೋ? ಅವನನ್ನು ಮೆಚ್ಚಿಕೆಯಿಂದ ನೋಡಬೇಕು ಎಂದದರ ಅರ್ಥವೋ? ವಿದ್ಯೆಯು ಒಬ್ಬನ ಪರಿಜ್ಞಾನದ ವ್ಯಾಪ್ತಿಯನ್ನು ವಿಶಾಲಗೊಳಿಸಬಲ್ಲದೆಂಬದು ಗ್ರಾಹ್ಯ, ಮತ್ತು ಇತರರ ಪ್ರಯೋಜನಕ್ಕಾಗಿ ತಮ್ಮ ವಿದ್ಯೆಯ ಉಪಯೋಗವನ್ನು ಮಾಡಿದ ಅನೇಕರು ಗೌರವ ಮತ್ತು ಸನ್ಮಾನಕ್ಕೆ ಪಾತ್ರರಾಗಿರುತ್ತಾರೆ. ಆದರೆ ವಿದ್ಯಾಸಂಪನ್ನ ವರ್ಗದಿಂದ ಜನಸಮೂಹಗಳು ದುರುಪಯೋಗ ಮತ್ತು ದಬ್ಬಾಳಿಕೆಗೆ ಗುರಿಯಾಗಿರುವ ಉದಾಹರಣೆಗಳಿಂದ ಇತಿಹಾಸವು ತುಂಬಿಹೋಗಿರುತ್ತದೆ. ಮತ್ತು ಕಾಲೇಜು ಅಥವಾ ಯೂನಿರ್ವಸಿಟಿಯ ದೃಶ್ಯದಲ್ಲಿ ಇಂದು ಏನು ಸಂಭವಿಸುತ್ತಿದೆ ಎಂಬದನ್ನು ಪರಿಗಣಿಸಿರಿ. ವಿದ್ಯಾಶಾಲೆಯ ಬಯಲುಗಳು ಇಂದು ಅಮಲೌಷಧ ದುರುಪಯೋಗ ಮತ್ತು ಲೈಂಗಿಕವಾಗಿ ರವಾನಿತ ರೋಗಗಳ ಸಮಸ್ಯೆಗಳಿಂದ ಬಾಧಿತವಾಗಿವೆ, ಮತ್ತು ಅನೇಕ ವಿದ್ಯಾರ್ಥಿಗಳು ದಾಖಲಾಗುವುದು ಧನ, ಅಧಿಕಾರ ಮತ್ತು ಕೀರ್ತಿಯ ಬೆನ್ನಟ್ಟುವಿಕೆಯಲ್ಲಿ ಮಾತ್ರವೇ. ಒಬ್ಬ ವ್ಯಕ್ತಿಯ ಶಿಕ್ಷಣವೊಂದೇ ಎಷ್ಟು ಮಾತ್ರಕ್ಕೂ ಅವನ ನಿಜ ಗುಣಲಕ್ಷಣಗಳ ಒಂದು ನಂಬಲರ್ಹ ಸೂಚನೆಯಾಗಿರದು.
ಇಲ್ಲ, ಮೈಬಣ್ಣ, ವಿದ್ಯೆ, ಹಣ, ಜಾತೀಯ ಹಿನ್ನೆಲೆ ಮತ್ತು ಅಂಥ ಇತರ ವಿಷಯಗಳು ಇನ್ನೊಬ್ಬ ವ್ಯಕ್ತಿಯ ಪಾತ್ರತೆಯನ್ನು ನಿರ್ಣಯಿಸುವ ಒಂದು ಯೋಗ್ಯ ಬುನಾದಿಯಲ್ಲ. ಇತರರ ಮೆಚ್ಚಿಕೆಯನ್ನು ಸಂಪಾದಿಸುವ ಪ್ರಯತ್ನದಲ್ಲಿ ಕ್ರೈಸ್ತರು ಈ ವಿಷಯಗಳಲ್ಲಿ ತಲ್ಲೀನರಾಗಿರಬಾರದು. ಹಾಗಾದರೆ ಒಬ್ಬನು ಯಾವ ವಿಷಯದಲ್ಲಿ ಚಿಂತಿತನಾಗಿರಬೇಕು? ಒಬ್ಬನು ಅನುಸರಿಸತಕ್ಕ ಮಟ್ಟಗಳು ಯಾವುವು?