ಗಿಲ್ಯಾದ್ ಶಾಲೆ ವಯಸ್ಸು 50, ಏಳಿಗೆ ಹೊಂದುತ್ತಾ ಇದೆ
“ರಾಜ್ಯದ ಕುರಿತು ಸಾಕ್ಷಿಯನ್ನು ಹೆಚ್ಚು ವಿಸ್ತಾರವಾಗಿ ಕೊಡದೆ ಇರುವ ಅನೇಕ ಸ್ಥಳಗಳಿವೆ,” ಎಂದರು ಎನ್. ಎಚ್. ನಾರ್, ಗಿಲ್ಯಾದ್ ಶಾಲೆಯ ಆರಂಭದ ದಿನವಾದ ಫೆಬ್ರವರಿ 1, 1943 ರಂದು, ಶಾಲೆಯ ಒಂದನೆಯ ಕ್ಲಾಸಿಗೆ. ಅವರು ಕೂಡಿಸಿದ್ದು: “ಹೊಲದಲ್ಲಿ ಹೆಚ್ಚು ಕೆಲಸಗಾರರು ಇರುವಲ್ಲಿ ತಲಪಲು ನೂರಾರು ಮತ್ತು ಸಾವಿರಾರು ಜನರು ಇದ್ದಾರೆಂಬುದು ಖಂಡಿತ. ಕರ್ತನ ದಯೆಯಿಂದ, ಹೆಚ್ಚು ಕೆಲಸಗಾರರಿರುವರು.”
ಮತ್ತು ಹೆಚ್ಚು ಕೆಲಸಗಾರರೇನೋ ಇದ್ದಾರೆ—ಲಕ್ಷಗಟ್ಟಲೆ ಹೆಚ್ಚು! ರಾಜ್ಯ ಪ್ರಚಾರಕದ ಸಂಖ್ಯೆ 1943 ರಲ್ಲಿ 54 ದೇಶಗಳಲ್ಲಿದ್ದ 1,29,070 ರಿಂದ 1992 ರಲ್ಲಿ 229 ದೇಶಗಳಲ್ಲಿ 44,72,787 ಕ್ಕೆ ಹೆಚ್ಚಿದೆ! ಈ ಅಭಿವೃದ್ಧಿಗೆ ಕಾರಣವಾದ ಸಾಕ್ಷಿಗೆ ಗಿಲ್ಯಾದ್ ಶಾಲೆ ತುಂಬಾ ಸಹಾಯವನ್ನು ಮಾಡಿದೆ. ಐವತ್ತು ವರ್ಷಗಳಾನಂತರ ಲೋಕ ಹೊಲದಲ್ಲಿ ಎಲ್ಲಿ ಅವರ ಆವಶ್ಯಕತೆ ಇದೆಯೋ ಅಲ್ಲಿ ಸೇವೆ ಮಾಡಲು ಮಿಷನೆರಿ ಕೆಲಸಗಾರರನ್ನು ತರಬೇತುಗೊಳಿಸುವುದರಲ್ಲಿ ಇದು ಮುಖ್ಯ ಪಾತ್ರ ವಹಿಸಿದೆ.
ಮಾರ್ಚ್ 7, 1993 ರಲ್ಲಿ, ನ್ಯೂ ಜರ್ಸಿಯ ಜರ್ಸಿ ಸಿಟಿ ಎಸೆಂಬ್ಲಿ ಹಾಲ್ನಲ್ಲಿ ನಡೆದ 94 ನೆಯ ಕ್ಲಾಸಿನ ಪದವಿ ಪಡೆಯುವಿಕೆಗೆ 4,798 ಜನ ಆಮಂತ್ರಿಸಲ್ಪಟ್ಟಿದ್ದ ಅತಿಥಿಗಳು ಮತ್ತು ಅಮೆರಿಕದ ಬೆತೆಲ್ ಕುಟುಂಬದ ಸದಸ್ಯರು ಹಾಜರಿದ್ದರು. ಈ ನಿಜವಾಗಿಯೂ ವಿಶೇಷ ಸಂದರ್ಭವು ಗಿಲ್ಯಾದ್ ಶಾಲೆಯ 50 ವರ್ಷಗಳನ್ನು ಹಿಂದಿರುಗಿ ನೋಡುವ ಸಂದರ್ಭವನ್ನು ಒದಗಿಸಿತು. ಆ ಕಾರ್ಯಕ್ರಮದ ಬಗೆಗೆ ಸ್ವಲ್ಪ ತಿಳಿಯಲು ನಿಮಗೆ ಮನಸ್ಸಿದೆಯೆ?
ಆರಂಭದ ಗೀತ ಹಾಡಿದ ಬಳಿಕ, ಆಡಳಿತ ಮಂಡಲಿಯ ಜಾರ್ಜ್ ಡಿ. ಗ್ಯಾಂಗಸ್ ಒಂದು ಉತ್ಸಾಹಪೂರಿತ ಪ್ರಾರ್ಥನೆ ಮಾಡಿದರು. ಆ ಬಳಿಕ, ಅಧ್ಯಕ್ಷ ಕ್ಯಾರಿ ಡಬ್ಲ್ಯು. ಬಾರ್ಬರ್ ಅವರಿಂದ ಪೀಠಿಕೆಯ ಹೇಳಿಕೆಗಳ ಅನಂತರ, ಪದವೀಧರರು ಮತ್ತು—ಉಪಸ್ಥಿತರಾಗಿದ್ದ ಎಲ್ಲರು—ಅಲ್ಪಾವಧಿಯ ಒಂದು ಭಾಷಣಮಾಲೆಗೆ ಜಾಗರೂಕತೆಯಿಂದ ಕಿವಿಗೊಟ್ಟರು.
“ನೀವು ಎಂದಿಗೂ ಒಬ್ಬಂಟಿಗರಾಗಿಲ್ಲ” ಎಂಬ ವಿಷಯದ ಮೇಲೆ ಪ್ರಥಮವಾಗಿ ರಾಬರ್ಟ್ ಡಬ್ಲ್ಯು. ವಾಲನ್ ಮಾತಾಡಿದರು. ಆದರದ ಸರ್ವದಲ್ಲಿ ಅವರು ಹೇಳಿದ್ದು: ‘ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಎಷ್ಟೋ ಒಂಟಿಗರಾಗಿರುವ, ನಿಮ್ಮ ಕುಟುಂಬ ಮತ್ತು ಮಿತ್ರರಿಂದ ಎಷ್ಟೋ ದೂರವಾಗಿರುವ ಅನಿಸಿಕೆ ಬರುವ ಸಂದರ್ಭಗಳು ನಿಮಗೆ ಬರಲಿವೆ.’ ಹಾಗಾದರೆ, “ನೀವು ಒಬ್ಬಂಟಿಗರಾಗಿಲ್ಲ” ಎಂದು ಹೇಗೆ ಹೇಳಸಾಧ್ಯವಿದೆ? ಅವರು ವಿವರಿಸಿದ್ದು: ‘ಏಕೆಂದರೆ ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಯೆಹೋವ ದೇವರೊಂದಿಗೆ ತತ್ಕ್ಷಣದ ಸಂಪರ್ಕದ ಸಾಧ್ಯತೆಯಿದೆ.’ ಪದವೀಧರರು ಪ್ರಾರ್ಥನಾ ಸುಯೋಗವನ್ನು ಬೆಲೆಯುಳ್ಳದ್ದಾಗಿ ಎಣಿಸಿ ಅದನ್ನು ದಿನಾಲೂ ಉಪಯೋಗಿಸುವಂತೆ ಅವರು ಪ್ರೋತ್ಸಾಹಿಸಿದರು. ಆಗ, ಯೇಸುವಿನಂತೆ, “ನಾನು ಒಂಟಿಗನಲ್ಲ” ವೆಂದು ಅವರು ಹೇಳಶಕ್ತರಾಗುವರು. (ಯೋಹಾನ 16:32) ಆ ಮಾತುಗಳು ಪದವೀಧರರಿಗೆ ಎಷ್ಟು ಪ್ರೋತ್ಸಾಹಜನಕವಾಗಿದ್ದವು!
“ನಿಮ್ಮ ನಿರೀಕ್ಷೆಯನ್ನು ಭದ್ರವಾಗಿ ಹಿಡಿದುಕೊಳ್ಳಿರಿ” ಎಂಬ ಮುಖ್ಯ ವಿಷಯ (ಮಾರ್ಚ್ 7 ರ ದಿನದ ವಚನದ ಮೇಲೆ ಆಧಾರ ಮಾಡಿದ್ದು) ವನ್ನು ವಿಕಸಿಸುತ್ತಾ, ಆಡಳಿತ ಮಂಡಲಿಯ ಲೈಮನ್ ಎ. ಸ್ವಿಂಗಲ್, ತಾಳ್ಮೆ ಮತ್ತು ನಿರೀಕ್ಷೆ ಎಂಬ ಎರಡು ಗುಣಗಳ ವಿಷಯದಲ್ಲಿ ಆ ಬಳಿಕ ಮಾತಾಡಿದರು. ‘ನಿಂದೆ, ವಿರೋಧ, ದ್ವೇಷ, ಸೆರೆಮನೆ, ಮತ್ತು ಮರಣದ ಕಾರಣಗಳಿಂದಲೂ ಕ್ರೈಸ್ತರಿಗೆ ತಾಳ್ಮೆ ಅವಶ್ಯ’ ಎಂದು ಅವರು ಹೇಳಿದರು. ‘ಯೆಹೋವನ ನಂಬಿಗಸ್ತ ಸಾಕ್ಷಿಗಳು ಅವಶ್ಯವಿರುವ ಸಮಯಗಳಲ್ಲಿ ಹೀರಿಕೊಳ್ಳಸಾಧ್ಯವಿರುವ ಸಾಧಾರಣವನ್ನು ಮೀರುವ ಶಕ್ತಿಗೆ ಯಾವ ಮಿತಿಯೂ ಇಲ್ಲ. ಇದು ವಿಶೇಷವಾಗಿ ಪದವೀಧರರಾಗಿರುವ ನಿಮಗೆ ನಿಶ್ಚಯವಾಗಿಯೂ ಪುನರಾಶ್ವಾಸನೀಯ.’ ನಿರೀಕ್ಷೆಯ ವಿಷಯದಲ್ಲೇನು? ‘ನಿರೀಕ್ಷೆಯು ವರ್ಜಿಸಲಸಾಧ್ಯವಾದ ಸಂಗತಿ,’ ಎಂದು ಅವರು ವಿವರಿಸಿದರು. ‘ಒಂದು ಶಿರಸ್ತ್ರಾಣವು ಅದನ್ನು ಧರಿಸುವವನ ತಲೆಯನ್ನು ರಕ್ಷಿಸುವಂತೆಯೇ, ರಕ್ಷಣೆಯ ನಿರೀಕ್ಷೆಯು ಒಬ್ಬ ಕ್ರೈಸ್ತನ ಮಾನಸಿಕ ಶಕ್ತಿಗಳನ್ನು ರಕ್ಷಿಸಿ, ಅವನು ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಸಹಾಯ ಮಾಡುತ್ತದೆ.’—1 ಥೆಸಲೊನೀಕ 5:8.
ಮುಂದಿನ ಉಪನ್ಯಾಸಕರಾಗಿದ್ದ ರಾಲ್ಫ್ ಇ. ವಾಲ್ಸ್, “ನಾವು ಒಂದು ‘ವಿಶಾಲ ಸ್ಥಳಕ್ಕೆ’ ಹೇಗೆ ಓಡಿಹೋಗಬಲ್ಲೆವು?” ಎಂಬ ಕುತೂಹಲ ಕೆರಳಿಸುವ ಒಂದು ವಿಷಯವನ್ನು ಆರಿಸಿಕೊಂಡರು. ಈ “ವಿಶಾಲ ಸ್ಥಳ” ಯಾವುದು? (ಕೀರ್ತನೆ 18:19) “ಮನಶ್ಶಾಂತಿ ಮತ್ತು ಹೃದಯದ ಭದ್ರತೆಯನ್ನು ತರುವ ಒಂದು ವಿಮೋಚನಾ ಸ್ಥಿತಿ,” ಎಂದು ಭಾಷಣಕರ್ತರು ವಿವರಿಸಿದರು. ನಮಗೆ ಯಾವುದರಿಂದ ವಿಮೋಚನೆ ಅಗತ್ಯ? ‘ನಿಮ್ಮಿಂದ—ನಿಮ್ಮ ಸ್ವಂತ ಬಲಹೀನತೆಗಳಿಂದ.’ ಅವರು ಕೂಡಿಸಿದ್ದು: ‘ಸೈತಾನನಿಂದ ಉದ್ರೇಕಿಸಲ್ಪಡುವ ಬಾಹ್ಯ ಪರಿಸ್ಥಿತಿಗಳಿಂದ ಕೂಡ.’ (ಕೀರ್ತನೆ 118:5) ನಾವು ವಿಶಾಲ ಸ್ಥಳದ ಭದ್ರತೆಗೆ ಹೇಗೆ ಓಡಿಹೋಗಬಲ್ಲೆವು? ‘ನಾವು ಮಾಡುವ ಸಕಲ ಕೆಲಸಗಳಲ್ಲಿ ಯೆಹೋವನ ಆಜ್ಞೆಗಳನ್ನು ಹುಡುಕಿ, ನಮ್ಮ ಸಕಲ ಚಿಂತೆಗಳಲ್ಲಿ ಯೆಹೋವನಿಗೆ ನಂಬಿಕೆಯಿಂದ ಪ್ರಾರ್ಥಿಸುವ ಮೂಲಕವೇ.’
“ಮುಂದೆ ಏನು ಕಾದಿದೆ?” ಎಂಬುದು ಡಾನ್ ಎ. ಆ್ಯಡಮ್ಸ್ ಆರಿಸಿಕೊಂಡಿದ್ದ ವಿಷಯವಾಗಿತ್ತು. ಮತ್ತು ಹೊಸ ಮಿಷನೆರಿಗಳಿಗೆ ಏನು ಕಾದಿತ್ತು? ಹೊಂದಿಸಿಕೊಳ್ಳುವ ಸಮಯಾವಧಿ, ಎಂದು ಅವರು ವಿವರಿಸಿದರು. “ನಿಮ್ಮ ಮುಂದೆ ಅನೇಕ ಆಶೀರ್ವಾದಗಳೂ ಇವೆ.” ದೃಷ್ಟಾಂತವಾಗಿ, ತಮ್ಮ ನೇಮಕಸ್ಥಳದಲ್ಲಿ ನೆಲೆನಿಂತ ಬಳಿಕ ಪತ್ರ ಬರೆದ ಇಬ್ಬರು ಮಿಷನೆರಿಗಳ ಕುರಿತು ಅವರು ಹೇಳಿದರು. ಅವರು ಬರೆದುದು: “ಸೇವೆಯಲ್ಲಿ ನಿಮ್ಮ ಅತಿ ಉತ್ತಮ ದಿನದ ಕುರಿತು ಯೋಚಿಸಿರಿ, ಮತ್ತು ಪ್ರತಿ ದಿನವೂ ಹಾಗೆಯೇ ಇದೆ. ನಮಗೆ ಒಯ್ಯಲು ಸಾಧ್ಯವಾಗುವುದಕ್ಕಿಂತ ಹೆಚ್ಚು ಸಾಹಿತ್ಯಗಳು ಯಾವಾಗಲೂ ಬೇಕಾಗುತ್ತವೆ. ಮತ್ತು ಜನರು ಅಧ್ಯಯನಗಳಿಗಾಗಿ ಕೇಳುತ್ತಾ ಇರುತ್ತಾರೆ.” ಉಪನ್ಯಾಸಕರು ಕೆಲವು ಹೇಳಿಕೆಗಳನ್ನು ಈ ಪದವೀಧರರ ಕುಟುಂಬದವರನ್ನೂ ಮಿತ್ರರನ್ನೂ ಉದ್ದೇಶಿಸಿ ಹೇಳಿದರು: ‘ಈ ಪದವೀಧರರ ಕುರಿತು ನೀವು ಚಿಂತಿತರಾಗುವ ಅವಶ್ಯವಿಲ್ಲ. ನೀವು ಪ್ರೋತ್ಸಾಹದ ಮಾತುಗಳನ್ನು ಬರೆಯುವ ಮೂಲಕ ಅವರಿಗೆ ಸಹಾಯಮಾಡಬಲ್ಲಿರಿ.’—ಜ್ಞಾನೋಕ್ತಿ 25:25.
ಶಾಲೆಯ ಶಿಕ್ಷಕರು ಆ ಬಳಿಕ ಮಾತಾಡಿದರು. ಜ್ಯಾಕ್ ಡಿ. ರೆಡ್ಫರ್ಡ್, “ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ” ಎಂಬ ವಿಷಯವನ್ನು ಆರಿಸಿದರು. ಪದವೀಧರರು ಎದುರಿಸುವ ಆಹ್ವಾನಗಳಲ್ಲಿ ಒಂದು, ಜನರೊಂದಿಗೆ ಹೊಂದಿಕೊಂಡು ಹೋಗುವುದೇ ಎಂದು ಅವರು ವಿವರಿಸಿದರು. ಇದಕ್ಕೆ ಯಾವುದು ಸಹಾಯ ಮಾಡಬಲ್ಲದು? “ಅವರ ತಪ್ಪುಗಳನ್ನು ಅಲಕ್ಷ್ಯ ಮಾಡಿರಿ. ಅವರಿಂದ ವಿಪರೀತವಾದುದನ್ನು ಅಪೇಕ್ಷಿಸಬೇಡಿ. ನಿಮಗೆ ಸಲ್ಲತಕ್ಕದ್ದೆಂದು ನೀವೇಣಿಸುವ ಪೂರ್ತಿ ಮೊತ್ತವನ್ನು ಸದಾ ಅಪೇಕ್ಷಿಸಬೇಡಿ. ಇತರ ಜನರ ಅಪೂರ್ಣತೆಗೆ ಅವಕಾಶ ಕೊಡಿರಿ, ಮತ್ತು ಈ ದಯೆಯು ನೀವು ಹೊಂದಿಕೊಂಡು ಹೋಗುವಂತೆ ಸಹಾಯ ಮಾಡುವುದು. ನೀವು ಇತರರಿಗೆ ಹೊಂದಿಕೊಂಡು ಹೋಗುವ ಸಾಮರ್ಥ್ಯವು ನಿಮ್ಮ ಪಕ್ವತೆಯ ಮಟ್ಟವಾಗಿರುವುದು.” (ಜ್ಞಾನೋಕ್ತಿ 17:9) ಈ ವಿವೇಕಪೂರ್ಣ ಸಲಹೆಯನ್ನು ಅನ್ವಯಿಸಿಕೊಳ್ಳುವಲ್ಲಿ ಪದವೀಧರರು ವಿದೇಶದಲ್ಲಿ ಮಿಷನೆರಿಗಳಾಗಿ ಸಫಲ ಹೊಂದಾಣಿಕೆಯನ್ನು ಮಾಡುವಂತೆ ಸಹಾಯವಾಗುವುದು ನಿಶ್ಚಯ!
“ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು,” ಎಂದು 2 ಕೊರಿಂಥ 4:7 ಹೇಳುತ್ತದೆ. ಗಿಲ್ಯಾದ್ ಶಾಲೆಯ ರಿಜಿಸ್ಟ್ರಾರ್ ಯುಲಿಸೀಸ್ ವಿ. ಗ್ಲಾಸ್, “ನಿಮ್ಮ ಪರೀಕ್ಷಿಸಲ್ಪಟ್ಟಿರುವ ನಂಬಿಗಸ್ತ ಸಹೋದರರಲ್ಲಿ ಭರವಸವಿಡಿರಿ” ಎಂಬ ಮುಖ್ಯ ವಿಷಯವನ್ನು ವಿಕಸಿಸಿದಾಗ, ಈ ವಚನದ ಮೇಲೆ ಮಾತಾಡಿದರು. “ಮಣ್ಣಿನ ಘಟಗಳು” ಅಂದರೇನು? “ಅಪರಿಪೂರ್ಣ ಮನುಷ್ಯರಾದ ನಮ್ಮನ್ನು ಇದು ಸೂಚಿಸಬೇಕು,” ಎಂದು ಅವರು ಗಮನಿಸಿದರು. ಮತ್ತು ಈ “ನಿಕ್ಷೇಪ” ಏನು? “ಅದು ನಮ್ಮ ಕ್ರೈಸ್ತ ಶುಶ್ರೂಷೆಯೇ,” ಎಂದು ಅವರು ವಿವರಿಸಿದರು. (2 ಕೊರಿಂಥ 4:1) ಮತ್ತು ಈ ನಿಕ್ಷೇಪವನ್ನು ಏನು ಮಾಡಬೇಕು? “ಯೆಹೋವನು ನಮಗೆ ಕೊಟ್ಟಿರುವ ಈ ನಿಕ್ಷೇಪವನ್ನು ಸಂಗ್ರಹಿಸಿಡಬಾರದು. ಆದುದದರಿಂದ, ಪ್ರಿಯ ಭಾವೀ ಮಿಷನೆರಿಗಳೇ, ಈ ನಿಕ್ಷೇಪವನ್ನು ಹೋಗುವಲ್ಲೆಲ್ಲಾ ಹಂಚಿರಿ, ಮತ್ತು ಹಂಚುವ ವಿಧವನ್ನು ಇತರ ಅನೇಕರಿಗೆ ಕಲಿಸಿರಿ.”
ಆಲ್ಬರ್ಟ್ ಡಿ. ಶ್ರೋಡರ್ ವೇದಿಕೆಯ ಮೇಲೆ ಬಂದಾಗ ಅದೊಂದು ಹಿಂದಿನದ್ದನ್ನು ನೆನಪಿಸುವ ಸಂದರ್ಭವಾಗಿತ್ತು. ಏಕೆಂದರೆ ಗಿಲ್ಯಾದ್ ಶಾಲೆ ಆರಂಭವಾದಾಗ ಅವರು ರಿಜಿಸ್ಟ್ರಾರ್ ಆಗಿದ್ದರು. “ದೇವಪ್ರಭುತ್ವ ತರಬೇತಿನ ಅರ್ಧ ಶತಮಾನ,” ಅವರ ಭಾಷಣದ ವಿಷಯವಾಗಿತ್ತು. “ಕಾರ್ಯಸಾಧಕವಾದ ತರಬೇತನ್ನು ಹೇಗೆ ನೀಡಬೇಕೆಂದು ಯೆಹೋವನು ಬಲ್ಲನು, ಮತ್ತು ಅದನ್ನು ಆತನು ಕೊಟ್ಟಿದ್ದಾನೆ,” ಎಂದರವರು. ಇದು ಹೇಗೆ? ಐವತ್ತು ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಎರಡು ಶಾಲೆ—ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಗಿಲ್ಯಾದ್ ಶಾಲೆ—ಗಳ ಮೂಲಕ ಪಡೆದಿರುವ ತರಬೇತನ್ನು ಸೂಚಿಸಿ ಸಹೋದರ ಶ್ರೋಡರ್ ಮಾತಾಡಿದರು. ನಿಷ್ಕೃಷ್ಟ ಜ್ಞಾನವನ್ನು ಒದಗಿಸಿದ ಒಂದು ಬೆಲೆಬಾಳುವ ಉಪಕರಣವು ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಎಂದು ಅವರು ತೋರಿಸಿದರು. ಅವರು ಪದವೀಧರರಿಗೆ ಆಶ್ವಾಸನೆ ನೀಡಿದ್ದು: “ಸೊಸೈಟಿಯು ಯೆಹೋವನ ಉದ್ದೇಶಗಳ ನಿಷ್ಕೃಷ್ಟ ಜ್ಞಾನದ ಉತ್ತಮ ಸರಬರಾಯಿಯನ್ನು ಮಾಡುವುದೆಂಬ ಮಹಾ ಭರವಸೆಯೊಡಗೂಡಿ ನೀವು ನಿಮ್ಮ ವಿದೇಶೀ ನೇಮಕಸ್ಥಾನಗಳಿಗೆ ಹೋಗಬಲ್ಲಿರಿ.”
ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲೇನ್ವಿಯದ ಅಧ್ಯಕ್ಷರಾದ ಮಿಲ್ಟನ್ ಜಿ. ಹೆನ್ಶೆಲ್, “ವಿಜಯಿಗಳಿಗಿಂತಲೂ ಹೆಚ್ಚಿನವರು” ಎಂಬ ವಿಷಯದ ಮೇಲೆ ಮಾತಾಡಿದರು. ಸಹೋದರ ಹೆನ್ಶೆಲ್ ತನ್ನ ಮುಖ್ಯ ವಿಷಯವನ್ನು 1943 ರ ವರ್ಷ ವಚನದಿಂದ ತೆಗೆದರು: “ನಮ್ಮನ್ನು ಪ್ರೀತಿಸಿದವನ ಮೂಲಕ ವಿಜಯಿಗಳಿಗಿಂತಲೂ ಹೆಚ್ಚಿನವರು.” (ರೋಮಾಪುರ 8:37, ಕಿಂಗ್ ಜೇಮ್ಸ್ ವರ್ಷನ್) ನಮ್ಮ ಸಹೋದರರು II ನೆಯ ಲೋಕ ಯುದ್ಧದ ಕಾಲದಲ್ಲಿ ಅನೇಕ ದೇಶಗಳಲ್ಲಿ ತುಂಬ ಹಿಂಸೆಯನ್ನು ಅನುಭವಿಸುತ್ತಿದ್ದುದರಿಂದ ಅದು ತಕ್ಕದಾದ ವರ್ಷ ವಚನವಾಗಿತ್ತೆಂದು ಅವರು ವಿವರಿಸಿದರು. ಆ ವಾಚ್ಟವರ್ ಸಂಚಿಕೆಯಿಂದ ಸ್ವಲ್ಪ ಎತ್ತಿಕೆಗಳನ್ನು ಓದಿ ಆ ಬಳಿಕ ಸಹೋದರ ಹೆನ್ಶೆಲ್ ವಿವರಿಸಿದ್ದು: “ಈ ವಾಚ್ಟವರ್ ಲೇಖನ [ಜನವರಿ 15, 1943] ವನ್ನು ಫೆಬ್ರವರಿ ತಿಂಗಳಲ್ಲಿ ಒಂದನೆಯ ಗಿಲ್ಯಾದ್ ಕ್ಲಾಸ್ ಅಭ್ಯಾಸ ಮಾಡಿತು, ಮತ್ತು ಮುಂದೆ ನಡೆಯಲಿದ್ದ ಘಟನೆಗಳಿಗೆ ಇದು ಅವರನ್ನು ಸಿದ್ಧಗೊಳಿಸಿತು.” ಪದವೀಧರರಲ್ಲಿ ಅನೇಕರು ಕಳೆದ 50 ವರ್ಷಗಳಲ್ಲಿ ತಾವು ವಿಜಯಿಗಳೆಂದು ಆಗಲೇ ರುಜುಪಡಿಸಿದ್ದಾರೆ, ಎಂದರವರು. ಹಾಗಾದರೆ 94 ನೆಯ ಕ್ಲಾಸಿನ ವಿಷಯದಲ್ಲೇನು? “ಯೆಹೋವನಿಗೆ ನಿಕಟವಾಗಿ ನಿಲ್ಲಿರಿ, ಆತನ ಪ್ರೀತಿಗೆ ನಿಕಟವಾಗಿ ನಿಲ್ಲಿರಿ, ಆಗ ನಿಮ್ಮ ವಿಜಯ ಖಾತ್ರಿಯಾಗಿರುವುದು.”
ಬೆಳಗ್ಗಿನ ಭಾಷಣಗಳಾದ ಮೇಲೆ, ಅಧ್ಯಕ್ಷರು ವಿವಿಧ ದೇಶಗಳಿಂದ ಬಂದಿದ್ದ ಕೆಲವು ವಂದನೆಗಳಲ್ಲಿ ಪಾಲಿಗರಾದರು. ಬಳಿಕ ಆ 24 ವಿವಾಹಿತ ದಂಪತಿಗಳು ಆತುರದಿಂದ ಹಾತೊರೆಯುತ್ತಿದ್ದ ಕ್ಷಣ—ಪ್ರಶಸ್ತಿಪತ್ರಗಳ ವಿತರಣೆ—ವು ಬಂದಿತು. ಗಿಲ್ಯಾದಿನ ಈ ವಿದ್ಯಾರ್ಥಿಗಳು ಈಗ ಅಧಿಕೃತವಾಗಿ ಗಿಲ್ಯಾದ್ ಪದವೀಧರರು ಆಗಿದ್ದರು! ಅವರು 5 ದೇಶಗಳಿಂದ ಬಂದಿದ್ದರೂ ಅವರ ನೇಮಕಗಳು ಅವರನ್ನು ಹಾಂಗ್ ಕಾಂಗ್, ಟಯಿವಾನ್, ಮೋಸಂಬೀಕ್, ಮತ್ತು ಪೂರ್ವ ಯೂರೋಪಿನ ಭಾಗಗಳು ಸೇರಿರುವ 17 ದೇಶಗಳಿಗೆ ಕೊಂಡೊಯ್ಯಲಿಕ್ಕಿತ್ತು.
ವಿರಾಮ ಕಳೆದ ಬಳಿಕ, ಮಧ್ಯಾಹ್ನದ ಮೇಲಿನ ಕಾರ್ಯಕ್ರಮವು ರಾಬರ್ಟ್ ಎಲ್. ಬಟ್ಲರ್ ನಡೆಸಿದ ಒಂದು ಸಂಕ್ಷಿಪ್ತ ಕಾವಲಿನ ಬುರುಜು ಅಧ್ಯಯನದೊಂದಿಗೆ ಪ್ರಾರಂಭವಾಯಿತು. ಆ ಬಳಿಕ ಪದವೀಧರರು ತಾವು ನ್ಯೂ ಯಾರ್ಕಿನ ವಾಲ್ಕಿಲ್ ಬಳಿ ಸಾಕ್ಷಿ ನೀಡುವಾಗ ಅನುಭವಿಸಿದ ಗಮನಾರ್ಹ ಅನುಭವಗಳನ್ನು ಅಭಿನಯಿಸಿ ತೋರಿಸಿದರು. ಈ ಕಾರ್ಯಕ್ರಮವು, ಅವರನ್ನು ನಿಸ್ಸಂದೇಹವಾಗಿ ಗಿಲ್ಯಾದಿಗೆ ಕರೆತಂದಿದ್ದ ವಿಷಯಗಳಲ್ಲಿ ಒಂದನ್ನು ಪ್ರತಿಬಿಂಬಿಸಿತು—ಕ್ಷೇತ್ರ ಶುಶ್ರೂಷೆಗೆ ಅವರಲ್ಲಿದ್ದ ಆಳವಾದ ಪ್ರೀತಿ.
ವಿದ್ಯಾರ್ಥಿಗಳ ಕಾರ್ಯಕ್ರಮ ಮುಗಿದ ಬಳಿಕ, ಸಭಿಕರಲ್ಲಿ ಅನೇಕರು, ಗಿಲ್ಯಾದ್ ಶಾಲೆಯ 50 ವರ್ಷಗಳನ್ನು ನೆನಪಿಸಿಕೊಳ್ಳಲು ಕಾರ್ಯಕ್ರಮದಲ್ಲಿ ಏನಾದರೂ ವಿಶೇಷ ಭಾಗವಿದ್ದೀತೋ ಎಂದು ಯೋಚಿಸುತ್ತಿದ್ದರು. ಇಂಥವರು ನಿರಾಶರಾಗಲಿಲ್ಲ!—ಜೊತೆಗಿರುವ “ಗಿಲ್ಯಾದ್ ಶಾಲೆಯ 50 ವರ್ಷಗಳನ್ನು ಪುನರ್ವಿಮರ್ಶಿಸುವುದು,” ಎಂಬ ಪೆಟ್ಟಿಗೆ ನೋಡಿ.
ಐವತ್ತು ವರ್ಷಗಳ ಹಿಂದೆ, ತಾನು ನಂಬಿಕೆ ಮತ್ತು ದೂರದೃಷ್ಟಿಯ ಪುರುಷನೆಂದು ಸಹೋದರ ನಾರ್ ತೋರಿಸಿದರು. ಗಿಲ್ಯಾದ್ ಶಾಲೆ ಸಾಫಲ್ಯ ಪಡೆಯುವುದೆಂಬ ಅವರ ದೃಢಸಂಕಲ್ಪವು ಅವರು ಒಂದನೆಯ ಕ್ಲಾಸಿಗೆ ಕೊಟ್ಟ ಅವರ ಆರಂಭದ ಭಾಷಣದಲ್ಲಿ ವ್ಯಕ್ತವಾಗಿತ್ತು. ಅವರಂದದ್ದು: “ಅದರ ಹೆಸರಿಗೆ ತಕ್ಕಂತೆ, ಒಂದು ‘ಸಾಕ್ಷಿ ಕುಪ್ಪೆಯು’ ಈ ಸ್ಥಳದಿಂದ ಲೋಕದ ಎಲ್ಲ ಭಾಗಗಳಿಗೆ ಹೋಗುತ್ತದೆಂದೂ, ಇಂತಹ ಸಾಕ್ಷಿಯು ಎಂದಿಗೂ ನಾಶಮಾಡಲಾಗದ ದೇವರ ಮಹಿಮೆಗೆ ಸ್ಮಾರಕವಾಗಿ ನಿಲ್ಲುವುದೆಂದೂ ನಮ್ಮ ನಂಬುಗೆ. ನೀವು ನೇಮಿಸಲ್ಪಟ್ಟ ಶುಶ್ರೂಷಕರೋಪಾದಿ, ಸರ್ವೋನ್ನತನು ಆವಶ್ಯಕತೆಯ ಪ್ರತಿಯೊಂದು ಸಮಯದಲ್ಲಿ ನಿಮ್ಮನ್ನು ನಡಿಸುವನೆಂದು ಬಲ್ಲವರಾಗಿ ಮತ್ತು ಆತನು ಆಶೀರ್ವಾದದ ದೇವರೂ ಆಗಿದ್ದಾನೆಂದು ಬಲ್ಲವರಾಗಿ, ಆತನಲ್ಲಿ ಪೂರ್ಣ ಭರವಸವಿಡುವಿರಿ.”a
ಐವತ್ತು ವರ್ಷಗಳಾನಂತರ, ಗಿಲ್ಯಾದ್ ಶಾಲೆ ಇನ್ನೂ ಏಳಿಗೆ ಹೊಂದುತ್ತಿದೆ! ಈ 94 ನೆಯ ಕ್ಲಾಸಿನ ಪದವೀಧರರಿಗೆ ಈಗ ಅವರ ಮುಂದಿನಿಂದ ಹೋಗಿರುವ 6,500 ಕ್ಕೂ ಹೆಚ್ಚು ಪದವೀಧರರನ್ನು ಹಿಂಬಾಲಿಸಿ ಹೋಗುವ ಸುಯೋಗವಿದೆ. ಅವರೂ, ಯೆಹೋವ ದೇವರ ಮಹಿಮೆಗೆ ಸ್ಮಾರಕವಾಗಿ ನಿಲ್ಲುವ “ಸಾಕ್ಷಿಯ ಕುಪ್ಪೆ” ಯನ್ನು ಹಾಕುವುದರಲ್ಲಿ ತಮ್ಮ ಭಾಗವನ್ನು ಮಾಡುವಾಗ, ಸರ್ವೋನ್ನತನಲ್ಲಿ ತಮ್ಮ ಪೂರ್ಣ ಭರವಸವನ್ನು ಇಡುವಂತಾಗಲಿ.
[ಅಧ್ಯಯನ ಪ್ರಶ್ನೆಗಳು]
a ಹಿಬ್ರೂವಿನಲ್ಲಿ “ಗಿಲ್ಯಾದ್” ಅಂದರೆ “ಸಾಕ್ಷಿ ಕುಪ್ಪೆ.”—ಆದಿಕಾಂಡ 31:47, 48.
[ಪುಟ 25 ರಲ್ಲಿರುವ ಚೌಕ]
ಕ್ಲಾಸ್ ಅಂಕಿ ಅಂಶಗಳು
ವಿದ್ಯಾರ್ಥಿಗಳ ಒಟ್ಟು ಸಂಖ್ಯೆ: 48
ಪ್ರತಿನಿಧೀಕರಿಸಿರುವ ದೇಶಗಳ ಸಂಖ್ಯೆ: 5
ನೇಮಿಸಲ್ಪಟ್ಟಿರುವ ದೇಶಗಳ ಸಂಖ್ಯೆ: 17
ಸರಾಸರಿ ವಯಸ್ಸು: 32
ಸತ್ಯದಲ್ಲಿ ಸರಾಸರಿ ವರ್ಷಗಳು: 15.3
ಪೂರ್ಣ ಸಮಯದ ಸೇವೆಯಲ್ಲಿ ಸರಾಸರಿ ವರ್ಷಗಳು: 9.6
[ಪುಟ 26,27ರಲ್ಲಿರುವಚೌಕ]
ಗಿಲ್ಯಾದ್ ಶಾಲೆಯ 50 ವರ್ಷಗಳನ್ನು ಪುನರ್ವಿಮರ್ಶಿಸುವುದು
ಗಿಲ್ಯಾದಿನ ಚರಿತ್ರೆಯನ್ನು ಅದನ್ನು ಅನುಭವಿಸಿದವರ—ಮೊದಲಿನ ಪದವೀಧರರ, ಶಿಕ್ಷಕರ, ಮತ್ತು ಅದನ್ನು ಸಂಘಟಿಸಲು ಸಹಾಯ ಮಾಡಿದವರ—ಅನುಭವಗಳ ಮೂಲಕ ಹಿಂದೆ ನೋಡುವುದಕ್ಕಿಂತ ಹೆಚ್ಚು ಉತ್ತಮವಾದ ಮಾರ್ಗ ಇನ್ನಾವುದಿದೆ? “ಗಿಲ್ಯಾದ್ ಶಾಲೆಯ 50 ವರ್ಷಗಳನ್ನು ಪುನರ್ವಿಮರ್ಶಿಸುವುದು,” ಎಂಬ ಥೀಯಡೊರ್ ಜರಸ್ ನಡೆಸಿದ ಭಾಗವನ್ನು ಆಲಿಸಿದಾಗ ಸಭಿಕರು ಉಲ್ಲಾಸಿಸಿದರು.
ಈ ಶಾಲೆಯ ಸ್ಥಾಪನೆಗೆ ನಡೆಸಿದ ಪರಿಸ್ಥಿತಿಗಳು ಯಾವುವು? ತಾನು ಮತ್ತು ಇನ್ನಿಬ್ಬರು ಶಿಕ್ಷಕರಿಗೆ ಈ ಶಾಲೆಯನ್ನು ಸಂಘಟಿಸಲು ಕೇವಲ ನಾಲ್ಕು ತಿಂಗಳುಗಳು ಮಾತ್ರ ಕೊಡಲ್ಪಟ್ಟವೆಂದು ಸಹೋದರ ಶ್ರೋಡರ್ ವಿವರಿಸಿದರು. “ಆದರೆ 1943 ರ ಫೆಬ್ರವರಿ 1 ನೆಯ ಸೋಮವಾರ ನಾವು ಪ್ರತಿಷ್ಠೆಗೆ ಸಿದ್ಧರಾಗಿದ್ದೆವು.”
ಕಳುಹಿಸಲ್ಪಟ್ಟಿದ್ದ ಪ್ರಥಮ ಮಿಷನೆರಿಗಳ ಅನುಭವವೇನಾಗಿತ್ತು? ಸಹೋದರ ಹೆನ್ಶೆಲ್ ನೆನಪಿಸಿದ್ದು: “ಸೊಸೈಟಿಯ ಸರಕು ರವಾನೆಯ ಇಲಾಖೆ ಅವರು ಕೊಂಡೊಯ್ಯಲು ಇಷ್ಟಪಟ್ಟ ಎಲ್ಲ ಸ್ವತ್ತುಗಳನ್ನು ಮರದ ಪೆಟ್ಟಿಗೆಗಳಲ್ಲಿ ತುಂಬಿಸಿತು. ಆ ಪೆಟ್ಟಿಗೆಗಳು ಗಮ್ಯಸ್ಥಾನಕ್ಕೆ ತಲಪಿದಾಗ, ಅವರು ಜಾಗರೂಕತೆಯಿಂದ ಅವುಗಳನ್ನು ತೆರೆದು ಅವರ ಸ್ವತ್ತುಗಳನ್ನು ತೆಗೆದರು. ಆದರೆ ಅವರು ಆ ಪೆಟ್ಟಿಗೆಗಳನ್ನು ಪೀಠೋಪಕರಣಗಳನ್ನು ಮಾಡಲು ಉಪಯೋಗಿಸಿದರು.” ಕೊನೆಗೆ, ಮಿತಿಯಿಂದ ಸಜ್ಜಿತವಾದ ಮಿಷನೆರಿ ಗೃಹಗಳನ್ನು ಸೊಸೈಟಿ ಒದಗಿಸಿತೆಂದು ಅವರು ಗಮನಿಸಿದರು.
ಮುಂದಿನ ಕಾರ್ಯಕ್ರಮದಲ್ಲಿ, ಈಗ ಅಮೆರಿಕದ ಬೆತೆಲ್ ಕುಟುಂಬದ ಸದಸ್ಯರಾಗಿರುವ, ಗಿಲ್ಯಾದ್ನ ಆರಂಭದ ಕ್ಲಾಸ್ಗಳ ಕೆಲವು ಪದವೀಧರರು ತಮ್ಮ ಜ್ಞಾಪನ, ಅನಿಸಿಕೆಗಳು, ಮತ್ತು ಅನುಭವಗಳಲ್ಲಿ ಪಾಲಿಗರಾದರು. ಅವರ ಹೇಳಿಕೆಗಳು ಉಪಸ್ಥಿತರಾಗಿದ್ದ ಸಕಲರ ಹೃದಯಗಳನ್ನು ಸ್ಪರ್ಶಿಸಿದವು.
“ಒಂದನೆಯ ಕ್ಲಾಸಿಗೆ ಹಾಜರಾಗಲು ನನಗೆ ಆಮಂತ್ರಣ ಸಿಕ್ಕಿದ ಬಳಿಕ, ನನ್ನ ತಾಯಿಗೆ ಕ್ಯಾನ್ಸರ್ ಇದೆಯೆಂದು ನನಗೆ ತಿಳಿದುಬಂತು. ಆದರೆ 16 ನೆಯ ವಯಸ್ಸಿನಿಂದ ಪಯನೀಯರಿಂಗ್ ಮಾಡಿದ್ದ ಅವರು, ನಾನು ಆಮಂತ್ರಣವನ್ನು ಸ್ವೀಕರಿಸುವಂತೆ ನನಗೆ ಬಲವಾದ ಬುದ್ಧಿವಾದ ಕೊಟ್ಟರು. ಹೀಗೆ ವಿವಿಧ ಭಾವವೇಶಗಳುಳ್ಳವಳಾಗಿ ಮತ್ತು ಯೆಹೋವನ ಮೇಲೆ ಭರವಸದಿಂದ ನಾನು ಸೌತ್ ಲ್ಯಾನ್ಸಿಂಗ್ಗೆ ಪ್ರಯಾಣ ಬೆಳೆಸಿದೆ. ನಾನು ಗಿಲ್ಯಾದ್ ತರಬೇತಿನಲ್ಲಿ ಪೂರ್ತಿ ಆನಂದಪಟ್ಟು ಅದನ್ನು ಆಳವಾಗಿ ಗಣ್ಯ ಮಾಡಿದೆ. ನನ್ನ ತಾಯಿ ನನಗೆ ಪದವಿ ಸಿಕ್ಕಿದ ಬಳಿಕ ಸ್ವಲ್ಪ ಸಮಯದಲ್ಲಿ ತನ್ನ ಭೂಯಾತ್ರೆಯನ್ನು ಮುಗಿಸಿದರು.”—ಮೆಕ್ಸಿಕೊ ಮತ್ತು ಎಲ್ ಸಾಲ್ವಡೋರ್ನಲ್ಲಿ ಸೇವೆ ಮಾಡಿದ ಷಾರ್ಲಟ್ ಶ್ರೋಡರ್.
“ನಾನು ಭೂಮಿಯ ಯಾವ ಭಾಗದಲ್ಲಿದ್ದೆನೋ ಅಲ್ಲಿ ಯೆಹೋವನು ಆಗಲೇ ನನ್ನನ್ನು ಪರಾಮರಿಸುತ್ತಿದ್ದುದರಿಂದ, ನಾನು ಎಲ್ಲಿ ಹೋದರೂ ಅದು ಇನ್ನೂ ಆತನ ಭೂಮಿಯೇ ಎಂದೂ, ಆತನು ನನ್ನನ್ನು ಪರಾಮರಿಸುವನೆಂದೂ ನಾನು ಎಣಿಸಿದೆ. ಆದುದರಿಂದ ನಾನು ಒಂದನೆಯ ಕ್ಲಾಸಿಗೆ ಆಮಂತ್ರಣವನ್ನು ಅಂಗೀಕರಿಸಲು ತೀರಾ ಸಂತೋಷಪಟ್ಟೆ.”—ಮೆಕ್ಸಿಕೊ ಮತ್ತು ಎಲ್ ಸಾಲ್ವಡೋರ್ನಲ್ಲಿ ಸೇವೆ ಮಾಡಿದ ಜೂಲಿಯ ವೈಲ್ಡ್ಮನ್.
“ಅದು ಅದ್ಭುತಕರವಾಗಿತ್ತು! ನಾವು ಪ್ರತಿ ಮನೆಯಲ್ಲಿಯೂ ಮಾತಾಡಸಾಧ್ಯವಿತ್ತು. ಪ್ರಥಮ ತಿಂಗಳಲ್ಲಿ, ನಾನು 107 ಪುಸ್ತಕಗಳನ್ನು ನೀಡಿ 19 ಬೈಬಲ್ ಅಧ್ಯಯನಗಳನ್ನು ನಡೆಸಿದೆ. ಎರಡನೆಯ ತಿಂಗಳಲ್ಲಿ ನನಗೆ 28 ಬೈಬಲ್ ಅಧ್ಯಯನಗಳಿದ್ದವು. ನಮಗೆ ರೂಢಿ ಮಾಡಿಕೊಳ್ಳಲು ಕೆಲವು ವಿಷಯಗಳು—ಉಷ್ಣ, ತೇವ, ಕೀಟಗಳು—ಇದ್ದವು. ಆದರೆ ಅಲ್ಲಿರುವುದು ಅದ್ಭುತಕರವಾದ ಸುಯೋಗವಾಗಿತ್ತು. ನಾನು ಸದಾ ಬೆಲೆಯುಳ್ಳದ್ದೆಂದು ಎಣಿಸುವ ಸಂಗತಿ ಇದಾಗಿರುವುದು.”—ಮೇರಿ ಆ್ಯಡಮ್ಸ್, ಎರಡನೆಯ ಕ್ಲಾಸ್, ತನ್ನ ಕ್ಯೂಬದ ನೇಮಕದ ಸಂಬಂಧದಲ್ಲಿ.
“ಅಲಾಸ್ಕದಲ್ಲಿ ನಮಗೆ ಹೋರಾಡಬೇಕಾಗಿದ್ದ ದೊಡ್ಡ ತಡೆ ಹವಾಮಾನವೇ. ಉತ್ತರದಲ್ಲಿ ತೀರಾ ಚಳಿಯಿತ್ತು, ಉಷ್ಣತೆಯು ಸೊನ್ನೆಯ ಕೆಳಗೆ 60 ಡಿಗ್ರಿ ಫ್ಯಾರನ್ಹೈಟ್ ಮತ್ತು ಅದಕ್ಕಿಂತಲೂ ಕೆಳಗೆ ಹೋಗುತ್ತಿತ್ತು. ಆಗ್ನೇಯ ಅಲಾಸ್ಕದ ಇಂಡಿಯನ್ ಹಳ್ಳಿಗಳನ್ನು ಮತ್ತು ಚಿಕ್ಕ ಚಿಕ್ಕ ದೂರದ ಪ್ರದೇಶಗಳನ್ನು ದೋಣಿ ಯಾ ವಿಮಾನಗಳ ಮೂಲಕ ತಲಪಲಾಗುತ್ತಿತ್ತು.”—ಜಾನ್ ಎರಿಕೆಟಿ, ಮೂರನೆಯ ಕ್ಲಾಸ್.
“ನನಗಾದರೋ, ಗಿಲ್ಯಾದ್ ಶಾಲೆ ನಮ್ಮನ್ನು ಆತ್ಮಿಕವಾಗಿ ಬಲಪಡಿಸಲು ಮತ್ತು ಒಂದು ಅದ್ಭುತಕರವಾದ ಜೀವನಮಾರ್ಗವನ್ನು ತೋರಿಸಲು ತನ್ನ ಭೂಸಂಸ್ಥೆಯ ಮೂಲಕ ಯೆಹೋವನು ಕೊಟ್ಟ ಆಮಂತ್ರಣವಾಗಿತ್ತು.”—ಐರ್ಲೆಂಡ್ನಲ್ಲಿ ಸೇವೆ ಮಾಡಿದ ಮಿಲ್ಡ್ರೆಡ್ ಬಾರ್, 11 ನೆಯ ಕ್ಲಾಸ್.
ಆನಂದಕರವಾದ ಇನ್ನೂ ಹೆಚ್ಚು ಸಂದರ್ಶನಗಳು ನಡೆದವು—ಲುಸೀಲ್ ಹೆನ್ಶೆಲ್ (ವೆನೆಸ್ವೇಲದಲ್ಲಿ ಸೇವೆ, 14 ನೆಯ ಕ್ಲಾಸ್), ಮಾರ್ಗರೇಟ ಕ್ಲೈನ್ (ಬೊಲಿವಿಯದಲ್ಲಿ ಸೇವೆ, 20 ನೆಯ ಕ್ಲಾಸ್), ಲುಸೀಲ್ ಕೋಲ್ಟ್ರಪ್ (ಪೆರುವಿನಲ್ಲಿ ಸೇವೆ, 24 ನೆಯ ಕ್ಲಾಸ್), ಲೊರೇನ್ ವಾಲನ್ (ಬ್ರಜೀಲ್ನಲ್ಲಿ ಸೇವೆ, 27 ನೆಯ ಕ್ಲಾಸ್), ವಿಲ್ಯಮ್ ಮತ್ತು ಸಾಂಡ್ರ ಮ್ಯಾಲೆನ್ಫಾಂಟ್ (ಮೊರಾಕ್ಕೊದಲ್ಲಿ ಸೇವೆ, 34 ನೆಯ ಕ್ಲಾಸ್), ಗೆರೆಟ್ ಲೋಶ್ (ಆಸ್ಟ್ರಿಯದಲ್ಲಿ ಸೇವೆ, 41 ನೆಯ ಕ್ಲಾಸ್), ಮತ್ತು ಡೇವಿಡ್ ಸ್ಲ್ಪೇನ್ (ಸೆನಿಗಲ್ನಲ್ಲಿ ಸೇವೆ, 42 ನೆಯ ಕ್ಲಾಸ್).
ಶಿಕ್ಷಕರಾಗಿ ಸೇವೆ ಮಾಡಿದ ಸಹೋದರರ ವಿಷಯದಲ್ಲೇನು? ಇವರಲ್ಲಿ ಅನೇಕರನ್ನು ಸಹ ಸಂದರ್ಶನ ಮಾಡಲಾಯಿತು—ರಸೆಲ್ ಕರ್ಜನ್, ಕಾರ್ಲ್ ಆ್ಯಡಮ್ಸ್, ಹ್ಯಾರಲ್ಡ್ ಜ್ಯಾಕ್ಸನ್, ಫ್ರೆಡ್ ರಸ್ಕ್, ಹ್ಯಾರಿ ಪೆಲಾಯನ್, ಜ್ಯಾಕ್ ರೆಡ್ಫರ್ಡ್, ಮತ್ತು ಯುಲಿಸೀಸ್ ಗ್ಲಾಸ್. ತಮ್ಮ ಸುಯೋಗಗಳನ್ನು ಅವರು ಜ್ಞಾಪಿಸಿಕೊಂಡು ಅದು ತಮ್ಮ ಮೇಲೆ ಇಂದಿನ ವರೆಗೂ ಹೇಗೆ ಪರಿಣಾಮ ಬೀರಿದೆಯೆಂದು ಹೇಳಿದರು.
ಗಿಲ್ಯಾದ್ನಲ್ಲಿ ತರಬೇತು ಹೊಂದಿದ ಮಿಷನೆರಿಗಳ ಕಾರ್ಯಸಾಧಕತೆಯ ಕುರಿತ ರೋಮಾಂಚಕ ಸಾಕ್ಷಿಯನ್ನು ಜಪಾನಿನಲ್ಲಿ ಸೇವೆ ಮಾಡಿದ ಲೈಡ್ ಬ್ಯಾರಿ ನೀಡಿದರು. ಇಸವಿ 1949 ರಲ್ಲಿ ಅಲ್ಲಿಗೆ 15 ಜನ ಮಿಷನೆರಿಗಳನ್ನು ಕಳುಹಿಸಿದಾಗ, ಇಡೀ ಜಪಾನಿನಲ್ಲಿ ಹತ್ತಕ್ಕೂ ಕಡಮೆ ಪ್ರಚಾರಕರಿದ್ದರು. ಆದರೆ 44 ವರ್ಷಗಳ ಬಳಿಕ, ಆ ದೇಶದಲ್ಲಿ 1,75,000 ಕ್ಕೂ ಹೆಚ್ಚು ಜನ ರಾಜ್ಯ ಘೋಷಕರಿದ್ದಾರೆ! ಆ ಬಳಿಕ ರಾಬರ್ಟ್ ವಾಲೆನ್, ಸತ್ಯಕ್ಕೆ ಜನರನ್ನು ತರಲು ಸಹಾಯ ಮಾಡುವುದರಲ್ಲಿ ಕೆಲವು ಮಿಷನೆರಿಗಳಿಗಿದ್ದ ಗಮನಾರ್ಹ ಸಾಫಲ್ಯದ ಕುರಿತು—ಪ್ಯಾನಮದಲ್ಲಿ 45 ವರ್ಷಗಳಿಂದ ಇರುವ ಒಬ್ಬ ಮಿಷನೆರಿ ಸಹೋದರಿಯು 125 ಮಂದಿ ಸಮರ್ಪಣೆ ಮತ್ತು ದೀಕ್ಷಾಸ್ನಾನವನ್ನು ಮಾಡುವಂತೆ ಸಹಾಯ ಮಾಡಿದ್ದಾರೆ—ಹೇಳಿದರು.
ಸಭೆಯಲ್ಲಿದ್ದ ಪದವೀಧರರೆಲ್ಲರೂ ವೇದಿಕೆಗೆ ಬರಲು ಆಮಂತ್ರಿಸಲ್ಪಟ್ಟಾಗ ಇಡೀ ಕಾರ್ಯಕ್ರಮ ಪರಾಕಾಷ್ಠೆಗೇರಿತು. ಅದು ನಿಜವಾಗಿಯೂ ಒಂದು ಹೃದಯದ್ರಾವಕ ಕ್ಷಣವಾಗಿತ್ತು. ಸೋದರ ಸೋದರಿಯರ ಒಂದು ಏಕಪ್ರಕಾರದ ಪ್ರವಾಹವು—ಭೇಟಿ ಕೊಡುತ್ತಿದ್ದ ಪದವೀಧರರಲ್ಲದೆ ಬೆತೆಲ್ ಕುಟುಂಬದ 89 ಜನ ಸಹ—ಸಭಾಂಗಣದ ಮಧ್ಯಹಾದಿಯಿಂದ ಬಂದು ವೇದಿಕೆಯನ್ನು ಹತ್ತಿತು. ಅನೇಕ ವರ್ಷಗಳಿಂದ ಶಿಕ್ಷಕರಾಗಿ ಸೇವೆಮಾಡಿದವರು ಅವರನ್ನು ಹೋಗಿ ಸೇರಿದರು, ಮತ್ತು ಆ ಬಳಿಕ 94 ನೆಯ ಕ್ಲಾಸು—ಒಟ್ಟು 160 ಮಂದಿ!—ಮೇಲೆ ಹೋಗಿ ಸೇರಿಕೊಂಡಿತು.
“ವಿದೇಶಗಳಿಗೆ ಮಿಷನೆರಿಗಳನ್ನು ತರಬೇತುಗೊಳಿಸುವ ಗಿಲ್ಯಾದ್ ಶಾಲೆಯ ಕೆಲಸಕ್ಕೆ ನಿಶ್ಚಯವಾದ ಯಶಸ್ಸು ಸಿಕ್ಕಿದೆಯೆ?” ಎಂದು ಸಹೋದರ ಜರಸ್ ಕೇಳಿದರು. “ಕಳೆದ 50 ವರ್ಷಗಳ ಸಾಕ್ಷ್ಯವು ಅಬ್ಬರದಿಂದ ಹೌದು! ಎನ್ನುತ್ತದೆ.”
[ಪುಟ 25 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ ಪದವಿ ಗಳಿಸಿದ 94 ನೆಯ ಕ್ಲಾಸ್
ಕೆಳಗಿನ ಪಟ್ಟಿಯಲ್ಲಿ, ಸಾಲುಗಳನ್ನು ಮುಂದಿನಿಂದ ಹಿಂದಿನ ವರೆಗೆ ಲೆಕ್ಕಿಸಲಾಗಿದ್ದು, ಹೆಸರುಗಳು ಪ್ರತಿ ಸಾಲಿನಲ್ಲಿ ಎಡದಿಂದ ಬಲಕ್ಕೆ ಕೊಡಲ್ಪಟ್ಟಿವೆ.
(1)ಡಿ ಲ ಗಾರ್ಸ, ಸಿ.; ಬೋರ್ಗ್, ಇ.; ಆರ್ಯಾಗ, ಇ.; ಚು, ಇ.; ಪರ್ವಿಸ್, ಡಿ.; ಫಾಸ್ಬೆರಿ, ಎ.; ಡೆಲ್ಗಾಡೊ, ಎ.; ಡ್ರೆಶರ್, ಎಲ್. (2) ಸ್ಕಾಟ್, ವಿ.; ಫ್ರೀಡ್ಲಂಡ್, ಎಲ್.; ಕೆಟೂಲ, ಎಸ್.; ಕೋಪ್ಲೆಂಡ್, ಡಿ.; ಆರ್ಯಾಗ, ಜೆ.; ಟಿಡೆ, ಜೆ.; ಓಲ್ಸನ್, ಇ.; ವೀಡಗ್ರೆನ್, ಎಸ್. (3) ಡೆಲ್ಗಾಡೊ, ಎಫ್.; ಕೀಗನ್, ಎಸ್.; ಲೇನನೆನ್, ಎ.; ಫಿನಿಗನ್, ಇ.; ಫಾಸ್ಬೆರಿ, ಎಫ್.; ಹಾಲ್ಬ್ರುಕ್, ಜೆ.; ಬರ್ಗ್ಲಂಡ್, ಎ.; ಜೋನ್ಸ್, ಪಿ. (4) ವಾಟ್ಸನ್, ಬಿ.; ಫ್ರೀಎಸ್, ಸಿ.; ಚು, ಬಿ.; ಹಾಲ್ಬ್ರಕ್, ಜೆ.; ಪರ್ವಿಸ್, ಜೆ.; ಫಿನಿಗನ್, ಎಸ್.; ಜೋನ್ಸ್, ಎ.; ಕೂಚಿಯ, ಎಮ್. (5) ಸ್ಕಾಟ್, ಜಿ.; ಕೋಪ್ಲೆಂಡ್, ಡಿ.; ಡ್ರೆಶರ್, ಬಿ.; ಡಿ ಲ ಗಾರ್ಸ, ಆರ್.; ಲೇನನೆನ್, ಐ.; ಕೀಗನ್, ಡಿ.; ವಾಟ್ಸನ್, ಟಿ.; ಕೆಟೂಲ, ಎಮ್. (6) ವೀಡಗ್ರೆನ್, ಜೆ.; ಬೋರ್ಗ್, ಎಸ್.; ಕೂಚಿಯ, ಎಲ್.; ಬರ್ಗ್ಲಂಡ್, ಎ.; ಓಲ್ಸನ್, ಬಿ.; ಫ್ರೀಎಸ್, ಜೆ.; ಫ್ರೀಡ್ಲಂಡ್, ಟಿ.; ಟಿಡೆ, ಪಿ.