ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 6/1 ಪು. 32
  • ನೀವು ಯಾಕೆ ಹಾಜರಾಗಬೇಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಯಾಕೆ ಹಾಜರಾಗಬೇಕು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ನಮ್ಮ ಕಠಿನಕಾಲಗಳಿಗಾಗಿ ದೈವಿಕ ಬೋಧನೆಯನ್ನು ಪಡೆಯುವುದು
    ಎಚ್ಚರ!—1993
  • “ದಿವ್ಯ ಭಯ” ಜಿಲ್ಲಾ ಅಧಿವೇಶನವು ಹತ್ತಿರವಿದೆ
    ಎಚ್ಚರ!—1994
  • ಯೆಹೋವನ ಸಾಕ್ಷಿಗಳ “ಹರ್ಷಭರಿತ ಸುತ್ತಿಗಾರರು” ಜಿಲ್ಲಾ ಅಧಿವೇಶನ
    ಕಾವಲಿನಬುರುಜು—1995
  • “ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನಕ್ಕೆ ಬನ್ನಿರಿ!
    ಕಾವಲಿನಬುರುಜು—1997
ಇನ್ನಷ್ಟು
ಕಾವಲಿನಬುರುಜು—1993
w93 6/1 ಪು. 32

ನೀವು ಯಾಕೆ ಹಾಜರಾಗಬೇಕು

ಈ ಬೇಸಗೆಯಲ್ಲಿ ಭೂಸುತ್ತಲ ಶಹರಗಳಲ್ಲಿ ಜರಗಲಿಕ್ಕಿರುವ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನಗಳಲ್ಲಿ ಆತ್ಮಿಕ ಉಪದೇಶದ ನಾಲ್ಕು ಪ್ರತಿಫಲದಾಯಕ ದಿನಗಳನ್ನು ನೀವು ಪಡೆಯಲಿರುವಿರಿ. ಅಮೆರಿಕ ಒಂದರಲ್ಲಿಯೇ, ಇಂತಹ 150 ಕ್ಕಿಂತಲೂ ಹೆಚ್ಚು ನೆರವಿಗಳು ಜೂನ್‌, ಜುಲೈ ಮತ್ತು ಅಗೋಸಿನ್ತಲ್ಲಿ ನಡೆಯಲಿರುವುವು. ಸಾಮಾನ್ಯವಾಗಿ ಕಾರ್ಯಕ್ರಮವು ಗುರುವಾರ ಅಪರಾಹ್ನ 1:20 ಕ್ಕೆ ಆರಂಭಗೊಂಡು, ಆದಿತ್ಯವಾರ ಸಂಜೆ 4:15 ಕ್ಕೆ ಕೊನೆಗೊಳ್ಳುವುದು. ಕೆಲವು ಅಧಿವೇಶನಗಳಲ್ಲಿ ಒಂದು ಉಜ್ವಲಭಾಗವು, ಈ ಸಂತೋಷದ ಸುಯೋಗಕ್ಕಾಗಿ ತಮ್ಮ ಸ್ವದೇಶಕ್ಕೆ ಹಿಂತಿರುಗಲು ಸಹಾಯಮಾಡಲ್ಪಟ್ಟ ಮಿಷನೆರಿಗಳಿಂದ ಕೊಡಲ್ಪಡುವ ವರದಿಗಳಾಗಿರುವುವು.

ನೀವು ಯುವಕರು ಯಾ ವೃದ್ಧರು—ಗಂಡ, ಹೆಂಡತಿ, ತಂದೆ, ತಾಯಿ, ಹದಿವಯಸ್ಕ ಅಥವಾ ಮಗು ಆಗಿರ್ರಿ—ನಿಮಗೆ ಪ್ರಯೋಜನಕರವಾಗುವ ಸ್ಪಷ್ಟವೂ ರಂಜಿತವೂ ಆದ ರೀತಿಯಲ್ಲಿ ನೀಡಲ್ಪಡುವ ಬೋಧನೆಯನ್ನು ನೀವು ಪಡೆಯುವಿರಿ. ಉದಾಹರಣೆಗೆ, ಜೀವಿತದ ಉದ್ದೇಶವೇನೆಂದು ಅನೇಕರು ಕೇಳುತ್ತಾರೆ. ಶುಕ್ರವಾರ ಬೆಳಿಗ್ಗೆ ಈ ಪ್ರಶ್ನೆಯು ಚರ್ಚಿಸಲ್ಪಡುವುದನ್ನು ಕೇಳಲು ನೀವು ಸಂತೋಷಪಡುವಿರಿ ಮತ್ತು ಈ ವಿಷಯವನ್ನು ಇತರರೂ ತಿಳಿಯುವಂತೆ ಸಹಾಯಮಾಡಲು ಏನನ್ನು ಪಡೆಯುವಿರೋ ಅದರಲ್ಲಿ ಆನಂದಿಸುವಿರಿ.

ಶುಕ್ರವಾರ ಅಪರಾಹ್ನದ ಕಾರ್ಯಕ್ರಮವು, “ಮದುವೆಯನ್ನು ಬಾಳುವ ಒಕ್ಕಟ್ಟನ್ನಾಗಿ ಮಾಡುವುದು,” “ನಿಮ್ಮ ಮನೆವಾರ್ತೆಯ ರಕ್ಷಣೆಗಾಗಿ ಕಷ್ಟಪಟ್ಟು ದುಡಿಯಿರಿ,” ಮತ್ತು “ಹೆತ್ತವರೇ—ನಿಮ್ಮ ಮಕ್ಕಳಿಗೆ ವಿಶಿಷ್ಟತರದ ಗಮನವು ಬೇಕಾಗಿದೆ” ಎಂಬ ಭಾಗಗಳಿಗೆ ಪ್ರಾಧಾನ್ಯತೆ ಕೊಡುವುದು. ಇವನ್ನು ಒಡನೆಯೇ ಹಿಂಬಾಲಿಸಿ, ಯುವಜನರು ಎದುರಿಸುವ ಸಮಸ್ಯೆಗಳೆಡೆಗೆ ಮತ್ತು ಅವುಗಳೊಂದಿಗೆ ಅವರು ವ್ಯವಹರಿಸುವ ವಿಧಾನದೆಡೆಗೆ ವಿಶಿಷ್ಟ ಗಮನವು ಕೇಂದ್ರೀಕರಿಸಲ್ಪಡುವುದು. ಈಗ ತಮ್ಮ ಸೃಷ್ಟಿಕರ್ತನನ್ನು ಸ್ಮರಿಸುವ ಯುವಜನರು ಎಂಬ ಶೀರ್ಷಿಕೆಯ ಆಧುನಿಕ ದಿನದ ಡ್ರಾಮದಿಂದ ಅವರು ಉತ್ತೇಜಿಸಲ್ಪಡಬೇಕು.

ಶನಿವಾರದ ಕಾರ್ಯಕ್ರಮವು ಕಡೇ ದಿನಗಳ ಕುರಿತಾದ ಯೇಸುವಿನ ಪ್ರವಾದನೆಗೆ ಮತ್ತು ವಿಶೇಷವಾಗಿ, “ಆ ದಿನಗಳ ಸಂಕಟವು ತೀರಿದ ಕೂಡಲೆ ಸೂರ್ಯನು ಕತ್ತಲಾಗಿ ಹೋಗುವನು” ಎಂಬ ಆತನ ಮಾತುಗಳಿಗೆ ಪ್ರಾಧಾನ್ಯತೆ ಕೊಡುವುದು. (ಮತ್ತಾಯ 24:29) ಆ “ಸಂಕಟ” ಯಾವಾಗ ಸಂಭವಿಸುವುದು ಎಂಬದರ ಕುರಿತಾದ ಚರ್ಚೆಯನ್ನು ಕೇಳಲು ನೀವು ಬಯಸುವಿರಿ. ಶನಿವಾರದ ಕಾರ್ಯಕ್ರಮವು ಯೆಹೋವನ ಸಾಕ್ಷಿಗಳ ಅಧುನಿಕ ಕಾಲದ ದಾಖಲೆಯನ್ನು ಮತ್ತು ಅವರೇನನ್ನು ಪೂರೈಸಿದ್ದಾರೆಂಬದನ್ನು ಸಹ ಪುನರ್ವಿಮರ್ಶಿಸಲಿದೆ.

ಆದಿತ್ಯವಾರದಂದು, ಮೋಸಹೋಗಬೇಡಿರಿ ಅಥವಾ ದೇವರನ್ನು ಕೆಣಕಬೇಡಿರಿ ಎಂಬ ಶೀರ್ಷಿಕೆಯ ಇನ್ನೊಂದು ಡ್ರಾಮವು, ಪ್ರಚಲಿತ ಜನಪ್ರಿಯ ವೀಡಿಯೋಗಳ ಮತ್ತು ಸಂಗೀತದ ಕಾರಣ ಒಬ್ಬನ ಕ್ರಿಸ್ತೀಯ ಸಮಗ್ರತೆಗಿರುವ ಪಂಥಾಹ್ವಾನವನ್ನು ಉದ್ದೇಶಿಸಿ ಬೋಧಿಸುವುದು. ಅಪರಾಹ್ನದ ಬಹಿರಂಗ ಭಾಷಣವು “ನಮ್ಮ ಕಠಿಣಕಾಲಕ್ಕಾಗಿ ಸಹಾಯಕರ ಬೋಧನೆ” ಎಂಬ ಮುಖ್ಯ ವಿಷಯವನ್ನು ಮುಂತರುವುದು. ಕಾರ್ಯಕ್ರಮವು “ದೈವಿಕ ಬೋಧನೆಗೆ ಬಿಗಿಹಿಡಿದುಕೊಳ್ಳುತ್ತಾ ಇರ್ರಿ” ಎಂಬ ಉಪದೇಶದೊಂದಿಗೆ ಮುಕ್ತಾಯವಾಗುವುದು.

ಎಲ್ಲಾ ನಾಲ್ಕು ದಿನಗಳಲ್ಲಿ ಹಾಜರಿರುವ ಮೂಲಕ ನೀವು ಪ್ರಯೋಜನ ಹೊಂದುವಿರಿ ನಿಶ್ಚಯ! ಹಾಜರಾಗಲು ನಿಮಗೆ ಹೃತ್ಪೂರ್ವಕ ಸ್ವಾಗತವಿದೆ. ನಿಮ್ಮ ಮನೆಗೆ ಅತಿ ಹತ್ತಿರದ ಸ್ಥಳವನ್ನು ಕಂಡುಹಿಡಿಯಲು, ಯೆಹೋವನ ಸಾಕ್ಷಿಗಳ ಸ್ಥಳೀಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿರಿ ಯಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ ಅಥವಾ ಯಾವುದರಲ್ಲಿ ಅಮೆರಿಕ, ಕೆನಡ, ಲಂಡನ್‌ ಮತ್ತು ಐರ್ಲಂಡ್‌ನಲ್ಲಿ ಜರಗಲಿರುವ ಎಲ್ಲಾ ಅಧಿವೇಶನಗಳ ವಿಳಾಸಗಳು ಅಡಕವಾಗಿರಲಿವೆಯೋ ಆ ಜೂನ್‌ 8 ರ ಎವೇಕ್‌! ಪತ್ರಿಕೆಯನ್ನು ನೋಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ