ನಮ್ಮ ಕಠಿನಕಾಲಗಳಿಗಾಗಿ ದೈವಿಕ ಬೋಧನೆಯನ್ನು ಪಡೆಯುವುದು
ಅದು ನಿಮ್ಮನ್ನು ನಿಜವಾಗಿಯೂ ಪ್ರಯೋಜನಪಡಿಸುವ ವಿಧ
ಯೆಹೋವನ ಸಾಕ್ಷಿಗಳ ಒಂದು “ದೈವಿಕ ಬೋಧನೆ” ಜಿಲ್ಲಾ ಅಧಿವೇಶನವನ್ನು ಹಾಜರಾಗುವ ಮೂಲಕ ನೀವು ಅದನ್ನು ಪಡೆಯಬಹುದು. ಲೋಕದ ಸುತ್ತಲೂ ಇರುವ ನಗರಗಳಲ್ಲಿ ಈ ಬೇಸುಗೆಯ ಕಾಲ ಲಕ್ಷಾಂತರ ಜನರು ಹಾಜರಿಯಲ್ಲಿ ಇರುವರು. ಅಮೆರಿಕವೊದರಲ್ಲಿಯೇ, 150ಕ್ಕಿಂತಲೂ ಅಧಿಕ ಈ ನಾಲ್ಕು ದಿನಗಳ ಅಧಿವೇಶನಗಳು ಜೂನ್, ಜುಲೈ, ಮತ್ತು ಆಗಸ್ಟ್ನಲ್ಲಿ ನಡೆಸಲ್ಪಡುವವು.
ನೀವು ವೃದ್ಧರೊ ಎಳೆಯರೊ—ಗಂಡ, ಹೆಂಡತಿ, ತಂದೆ, ತಾಯಿ, ಹದಿಹರೆಯದವರು, ಯಾ ಮಗು ಏನೇ ಆಗಿರಲಿ—ನಿಮ್ಮನ್ನು ಪ್ರಯೋಜನ ಪಡಿಸುವಂತಹ ರೀತಿಯಲ್ಲಿ ಸ್ಪಷ್ಟವಾಗಿಗಿ, ಹಿತವಾಗಿ ಸಾದರಪಡಿಸಿದ ಬೋಧನೆಯನ್ನು ನೀವು ಪಡೆಯುವಿರಿ. “ಮದುವೆಯನ್ನು ಒಂದು ಬಾಳುವ ಬಂಧವನ್ನಾಗಿ ಮಾಡುವುದು,” “ನಿಮ್ಮ ಮನೆವಾರ್ತೆಯವರ ರಕ್ಷಣೆಗಾಗಿ ಶ್ರಮಪಟ್ಟು ಕ್ರಿಯೆಗೈಯಿರಿ,” ಮತ್ತು “ಹೆತ್ತವರೇ—ನಿಮ್ಮ ಮಕ್ಕಳಿಗೆ ವಿಶೇಷತಮ ಗಮನ ಆವಶ್ಯಕವಾಗಿದೆ” ಇವು ಕಾರ್ಯಕ್ರಮದಲ್ಲಿ ಸೇರಿರುವ ಕೇವಲ ಕೆಲವೊಂದು ವಿಷಯಗಳಾಗಿವೆ.
ಯುವಜನರು ಎದುರಿಸುವ ಸಮಸ್ಯೆಗಳು ಮತ್ತು ಅವರು ನಮ್ಮ ಕಠಿನಕಾಲಗಳಲ್ಲಿ ಅವುಗಳೊಂದಿಗೆ ಹೇಗೆ ವ್ಯವಹರಿಸಬಹುದು ಎಂಬ ವಿಷಯಗಳ ಮೇಲೆ ನಿರ್ದಿಷ್ಟ ಗಮನವನ್ನು ಕೊಡಲಾಗುವುದು. ತಮ್ಮ ಸೃಷ್ಟಿಕರ್ತನನ್ನು ಈಗ ನೆನೆಸಿಕೊಳ್ಳುವ ಯುವಜನರು ಎಂಬ ಶೀರ್ಷಿಕೆವುಳ್ಳ ಆಧುನಿಕ ದಿನದ ನಾಟಕದಿಂದ ಅವರು ಉತ್ತೇಜಿಸಲ್ಪಡತಕ್ಕದ್ದು. ಮೋಸ ಹೋಗಬೇಡಿರಿ ಯಾ ದೇವರನ್ನು ಕೆಣಕಬೇಡಿರಿ ಎಂದು ಕರೆಯಲಾಗುವ ಇನ್ನೊಂದು ಉತ್ತಮವಾಗಿ ತಯಾರಿಸಲ್ಪಟ್ಟ ನಾಟಕವು, ಇಂದಿನ ಹೆಸರುವಾಸಿಯಾದ ವಿಡಿಯೋಗಳು ಮತ್ತು ಸಂಗೀತದಿಂದಾಗಿ ಕ್ರೈಸ್ತ ಯುವಜನರು ಎದುರಿಸುವ ಪಂಥಾಹ್ವಾನವನ್ನು ಸಂಬೋಧಿಸುವುದು.
ನಿಜವಾಗಿಯೂ, ನಾವು ಕಠಿನಕಾಲಗಳಲ್ಲಿ ಜೀವಿಸುತ್ತಿದ್ದೇವೆ. “ಆ ದಿನಗಳ ಸಂಕಟವು ತೀರಿದಕೂಡಲೆ ಸೂರ್ಯನು ಕತ್ತಲಾಗಿಹೋಗುವನು” ಎಂದು ಯೇಸು ಮುಂತಿಳಿಸಿದನು. (ಮತ್ತಾಯ 24:29) ಆ “ಸಂಕಟವು” ಯಾವಾಗ ಸಂಭವಿಸುವುದು, ಮತ್ತು ಸೂರ್ಯನು ಯಾವಾಗ ಕತ್ತಲಾಗಿಹೋಗುವನು ಎಂಬುದರ ರುಜುವಾತನ್ನು ಅಧಿವೇಶನದ ಕಾರ್ಯಕ್ರಮವು ಚರ್ಚಿಸುವುದು.
ಜೀವನದ ಉದ್ದೇಶವೇನು? ಎಂದು ಅನೇಕರು ಈ ಕಠಿನಕಾಲಗಳಲ್ಲಿ ಕೇಳುತ್ತಾರೆ. ಈ ವಿಷಯವನ್ನು ಕೂಲಂಕುಷವಾಗಿ ಪರೀಕ್ಷಿಸಲಾಗುವುದು ಮತ್ತು ಈ ವಿಷಯದ ಮೇಲೆ ನೀವು ಏನನ್ನು ಪಡೆಯುವಿರೊ ಅದರ ಕುರಿತು ನಿಸ್ಸಂದೇಹವಾಗಿ ನೀವು ಹರ್ಷಿತರಾಗುವಿರಿ. ಕಾರ್ಯಕ್ರಮದ ಮತ್ತೊಂದು ಭಾಗವು ಆಧುನಿಕ ಕಾಲದಲ್ಲಿ ಯೆಹೋವನ ಸಾಕ್ಷಿಗಳ ದಾಖಲೆಯನ್ನು ಪುನರ್ವಿಮರ್ಶಿಸುವುದು ಮತ್ತು ಅವರು ಏನನ್ನು ಸಾಧಿಸಿದ್ದಾರೆಂದು ತೋರಿಸುವುದು.
ಅಧಿವೇಶನದ ಕೊನೆಯ ದಿನದಲ್ಲಿ, ಬಹಿರಂಗ ಭಾಷಣವು “ನಮ್ಮ ಕಠಿನ ಸಮಯಗಳಿಗಾಗಿ ಸಹಾಯಕಾರಿ ಬೋಧನೆ” ಎಂಬ ವಿಷಯವನ್ನು ಮುಖ್ಯ ನೋಟವಾಗಿ ತೋರಿಸುವುದು. “ದೈವಿಕ ಬೋಧನೆಗೆ ಅಂಟಿಕೊಳ್ಳುತ್ತಾ ಇರ್ರಿ” ಎಂಬ ಎಚ್ಚರಿಕೆಯೊಂದಿಗೆ ಕಾರ್ಯಕ್ರಮವು ಅಂತ್ಯಗೊಳ್ಳುವುದು.
ನಿಶ್ಚಯವಾಗಿಯೂ, ನೀವು ಎಲ್ಲ ನಾಲ್ಕು ದಿನಗಳಲ್ಲೂ ಹಾಜರಿರುವ ಮೂಲಕ ಪ್ರಯೋಜನ ಹೊಂದುವಿರಿ! ನೀವು ಹಾಜರಾಗಲು ಹೃತ್ಪೂರ್ವಕವಾಗಿ ಆಮಂತ್ರಿಸಲ್ಪಟ್ಟಿದ್ದೀರಿ. ನಿಮ್ಮ ಮನೆಗೆ ಹತ್ತಿರವಾಗಿರುವ ಸ್ಥಳವನ್ನು ಕಂಡುಕೊಳ್ಳಲು, ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿರಿ ಯಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ.