ಭಾಗ್ಯೋದಯ ರಕ್ಷೆಗಳು ನಿಮ್ಮನ್ನು ರಕ್ಷಿಸಬಲ್ಲವೋ?
ಬ್ರೇಸೀಲಿನ ಒಬ್ಬ ವ್ಯಕ್ತಿಯ ಕಿಸೆಯಲ್ಲಿ ಒಯ್ಯಲ್ಪಡುವ ಒಂದು ಹರಳು. ಅಮೆರಿಕನ್ ಆಟಗಾರನೊಬ್ಬನು ಒಯ್ಯುವ ಒಂದು ಭಾಗ್ಯೋದಯ ನಾಣ್ಯ. ಒಂದು ಐರಿಷ್ ಕುಟುಂಬದ ಮನೆಯಲ್ಲಿನ ಮಂಚದ ಮೇಲೆ ಜೋತಾಡುವ ಸಂತ-ಬ್ರಿಜಿಟ್ನ ಕ್ರೂಜೆ. ಇಂಥ ವಸ್ತುಗಳನ್ನು ಲಕ್ಷಾಂತರ ಜನರು ಭಾಗ್ಯೋದಯ ರಕ್ಷೆಗಳಾಗಿ ಅಥವಾ ತಾಯಿತಿಗಳಾಗಿa ಉಪಯೋಗಿಸುತ್ತಾರೆ. ಈ ರಕ್ಷೆಗಳ ಇಟ್ಟುಕೊಳ್ಳುವಿಕೆಯು ಕೇಡನ್ನು ತೊಲಗಿಸಬಲ್ಲದು ಮತ್ತು ಅವರಿಗೆ ಶುಭವನ್ನು ತರಬಲ್ಲದೆಂದು ಅವರು ನಂಬುತ್ತಾರೆ.
ದೃಷ್ಟಾಂತಕ್ಕೆ ಬ್ರೆಸೀಲನ್ನು ತಕ್ಕೊಳ್ಳಿರಿ. ವೀಜಾ ಪತ್ರಿಕೆಗೆ ಅನುಸಾರವಾಗಿ, “ಹೊಂದುವವರಿಗೆ ಭಾಗ್ಯವನ್ನು ಮತ್ತು ಮಾನಸಿಕ ಮತ್ತು ಶಾರೀರಿಕ ಓಜಸ್ಸನ್ನು ಆಕರ್ಷಿಸಲು ಶಕ್ತಿ ಇರುವದೆಂದು ಹೇಳಲಾಗುವ ಶಿಲಾ ತುಣುಕುಗಳನ್ನು ಮತ್ತು ಅರ್ಧ ಪ್ರಶಸ್ತ ಹರಳುಗಳನ್ನು” ಬ್ರೆಸೀಲ್ ದೇಶದ ಹೆಚ್ಚಿನವರು ಒಯ್ಯುತ್ತಾರೆ. ಮಾಂತ್ರಿಕ ಶಕ್ತಿಗಳನ್ನು ಕಡೆಗಣಿಸುವುದಕ್ಕೆ ಹೆದರುತ್ತಾ, ಆ ದೇಶದ ಇತರರು ತಮ್ಮ ಮನೆಯ ಗೋಡೆಯ ಮೇಲೆ ಒಂದು ಧಾರ್ಮಿಕ ಕುರುಹನ್ನು ಅಥವಾ ವಚನವನ್ನು ತೂಗಿಸುತ್ತಾರೆ. ಕೆಲವರು ಬೈಬಲನ್ನು ಸಹ ಒಂದು ಪವಿತ್ರ ರಕ್ಷೆಯಾಗಿ ಉಪಯೋಗಿಸುತ್ತಾರೆ; ಅವರದನ್ನು ಕೀರ್ತನೆ 91 ಕ್ಕೆ ಸದಾ ತೆರೆದಿರುವಂತೆ ಮಾಡಿ, ಮೇಜಿನ ಮೇಲೆ ಪ್ರದರ್ಶಿಸುತ್ತಾರೆ.
ದಕ್ಷಿಣ ಆಫ್ರಿಕದ ಪ್ರದೇಶಗಳಲ್ಲಿ ಮ್ಯೂಟಿ ಅಥವಾ ಸಾಂಪ್ರದಾಯಿಕ ಔಷಧವು, ತದ್ರೀತಿಯಲ್ಲಿ, ಕೇವಲ ಅದರ ವಾಸಿಕಾರಕ ಗುಣಗಳಿಗಾಗಿ ಮಾತ್ರವೇ ಅಲ್ಲ, ಅಪಶಕುನದ ವಿರುದ್ಧ ರಕ್ಷಣೆಯಾಗಿ ಬಳಸಲ್ಪಡುತ್ತದೆ. ಅನಾರೋಗ್ಯ, ಮರಣ, ಆರ್ಥಿಕ ವಿಪರ್ಯಸತ್ತೆಗಳು, ಮತ್ತು ವಿಫಲಗೊಂಡ ಪ್ರಣಯಾಚರಣೆಗಳು ಸಹ, ಶತ್ರುಗಳಿಂದ ಹಾಕಲ್ಪಟ್ಟ ವಶೀಕರಣಗಳ ಅಥವಾ ಮೃತರಾದ ಪೂರ್ವಜರನ್ನು ಶಾಂತಗೊಳಿಸದ ಫಲಿತಾಂಶಗಳೆಂದು ಆಗಿಂದಾಗ್ಗೆ ನೆನಸಲಾಗುತ್ತವೆ. ಮ್ಯೂಟಿ ಯನ್ನು ಸಾಮಾನ್ಯವಾಗಿ ಸಸ್ಯಗಳ, ಮರಗಳ, ಅಥವಾ ಪ್ರಾಣಿ ಅವಯವಗಳ ಭಾಗಗಳನ್ನು ಬೆರಸಿ ಗುಟುಕನ್ನು ತಯಾರಿಸುವ ಒಬ್ಬ ಗ್ರಾಮೀಣ ವೈದ್ಯನಿಂದ ಪಡೆಯಲಾಗುತ್ತದೆಯಾದರೂ, ಮ್ಯೂಟಿ ಗ್ರಾಮೀಣ ವ್ಯಕ್ತಿಗಳಿಗೆ ಮಾತ್ರವೇ ನಿರ್ಬಂಧಿತವಲ್ಲವೆಂಬದು ಕುತೂಹಲಕಾರಿಯು; ದಕ್ಷಿಣ ಆಫ್ರಿಕದ ಪಟ್ಟಣಗಳಲ್ಲಿ ಈ ಪದ್ಧತಿಯು ವಿಸ್ತಾರವಾಗಿ ಹಬ್ಬಿರುತ್ತದೆ. ಮ್ಯೂಟಿ ಯಲ್ಲಿ ಆತುಕೊಳ್ಳುವವರಲ್ಲಿ ವ್ಯಾಪಾರಸ್ಥರು ಮತ್ತು ವಿಶ್ವವಿದ್ಯಾನಿಲಯದ ಪದವೀ ಧರರು ಸೇರಿರುತ್ತಾರೆ.
ಯೂರೋಪಿಯನ್ ದೇಶಗಳಲ್ಲೂ ಭಾಗ್ಯೋದಯಕ್ಕಾಗಿ ಹುಡುಕುವಿಕೆಯು ಸರ್ವಸಾಮಾನ್ಯವಾಗಿದೆ. ಸಡ್ಟೀಸ್ ಇನ್ ಫೋಕ್ಲೈಫ್ ಪ್ರೆಸೆಂಟೆಡ್ ಟು ಎಮಿರ್ ಎಷ್ಟಿನ್ ಎವನ್ಸ್ ಎಂಬ ಪುಸ್ತಕವು ನಮಗೆ ತಿಳಿಸುವುದು: “ಕೆಲವು ನಿವಾಸಗಳ ಅಥವಾ ಹೊರಕಟ್ಟಡಗಳ ಬಾಗಿಲುಗಳಲ್ಲಿ ಅಥವಾ ಮೇಲೆ ಕುದುರೇ ಲಾಳ ಕಟ್ಟಲ್ಪಡದೆ ಇರಬಹುದಾದ ಒಂದು ಪಾದ್ರಿಯಾಡಳಿತದ ಪ್ರಾಂತ ಅಥವಾ ಊರನ್ನು ಕಾಣುವುದು ಐರ್ಲೆಂಡ್ನಲ್ಲಿ ಅಪರೂಪ.” ಆ ದೇಶದಲ್ಲಿ ಇನ್ನೂ ಹೆಚ್ಚು ಸರ್ವ ಸಾಮಾನ್ಯವಾಗಿರುವಂತಾದ್ದು ಭಾಗ್ಯೋದಯವನ್ನು ತರಲಿಕ್ಕಾಗಿ, ಮಂಚಗಳ ಮತ್ತು ಬಾಗಲುಗಳ ಮೇಲೆ ಜೋತಾಡುವ ಜೊಂಡು ಸಸ್ಯಗಳಿಂದ ಹೆಣೆಯಲ್ಪಟ್ಟ ಜೊಂಡು ಕ್ರೂಜೆಗಳು. ಇಂಥ ಮೂಢನಂಬಿಕೆಗಳನ್ನು ಅನೇಕ ಐರಿಷ್ ಜನರು ಮೇಲ್ಮೈಯಲ್ಲಿ ಹಗುರ ವಿಷಯವಾಗಿ ನೋಡುತ್ತಾರೆಂದು ಪ್ರೇಕ್ಷಕರು ಹೇಳುತ್ತಾರೆ. ಆದರೂ, ಅದನ್ನು ಪೂರ್ಣವಾಗಿ ಅಸಡ್ಡೆ ಮಾಡುವವರು ಕೊಂಚಜನ.
ಸುರಕ್ಷೆಗಾಗಿ ಹುಡುಕುವಿಕೆ
ಅಂತಹ ಮೂಢನಂಬಿಕೆಗಳ ಆಕರ್ಷಣೆ ಏನಾಗಿದೆ? ಸುರಕ್ಷೆಗಾಗಿ ಜನರಿಗಿರುವ ಮೂಲಭೂತ ಅಗತ್ಯತೆಯನ್ನು ಅವು ಪೂರೈಸುತ್ತವೆಂಬದು ವ್ಯಕ್ತ. ರಾತ್ರಿಯಲ್ಲಿ ರಸ್ತೆ ನಡೆಯುವುದಂತೂ ಅಸುರಕ್ಷಿತವಿರುವಾಗ, ನಿಜವಾಗಿ ತಮ್ಮ ಮನೆಗಳಲ್ಲಿ ಸುರಕ್ಷೆಯ ಅನುಭವವಾದರೂ ಎಷ್ಟು ಮಂದಿಗಿದೆ? ಅದಕ್ಕೆ ಕೂಡಿಸಿ, ಜೀವನೋಪಾಯವನ್ನು ನಡಿಸುವ ಶ್ರಮ ಮತ್ತು ಮಕ್ಕಳ ಪರಿಪಾಲನೆ ಬೇರೆ. ಹೌದು, ಬೈಬಲು ಕರೆಯುವ “ತೊಂದರೆಗಳ ಸಮಯ” ದಲ್ಲಿ ನಾವು ಜೀವಿಸುತ್ತೇವೆ. (2 ತಿಮೊಥೆಯ 3:1, ದ ನ್ಯೂ ಇಂಗ್ಲಿಷ್ ಬೈಬಲ್) ಹೀಗೆ ಸುರಕ್ಷೆಗಾಗಿ ಜನರಿಗೆ ಬಲವಾದ ಅಪೇಕ್ಷೆ ಇರುವುದು ತೀರ ಸ್ವಾಭಾವಿಕವಾಗಿದೆ.
ಹಲವಾರು ತರದ ಪ್ರೇತವಿದ್ಯೆ ಮತ್ತು ಮಂತ್ರವಿದ್ಯೆಯು ಜನಪ್ರಿಯವಾಗಿರುವ ಸಂಸ್ಕೃತಿಗಳಲ್ಲಿ ಇದು ವಿಶೇಷವಾಗಿ ಹೀಗಿರಬಹುದು. ಸತ್ತವರದೆಂದು ಊಹಿಸಲ್ಪಡುವ ಆತ್ಮಗಳ ಅಥವಾ ಒಬ್ಬ ವೈರಿಯ ಶಾಪಕ್ಕೆ ಬಲಿಯಾಗುವ ಹೆದರಿಕೆಯು, ಒಂದು ರಕ್ಷೆ ಅಥವಾ ತಾಯಿತಿ ಅನ್ನಿಸಿಕೊಳ್ಳುವ ಸುರಕ್ಷೆಯನ್ನು ಅನಿವಾರ್ಯವಾಗಿ ತೋರುವಂತೆ ಮಾಡಬಹುದು. ಹೇಗೆಯೇ ಆದರೂ, ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಗಮನಿಸುವುದು: “ಹೆಚ್ಚಿನ ಜನರಿಗೆ ಅವರನ್ನು ಅಭದ್ರರನ್ನಾಗಿ ಮಾಡುವ ಹೆದರಿಕೆಗಳಿವೆ. ಮೂಢ ನಂಬಿಕೆಗಳು ಭದ್ರತೆಯನ್ನು ಒದಗಿಸುವ ಮೂಲಕ ಅಂಥ ಹೆದರಿಕೆಗಳನ್ನು ನೀಗಿಸಲು ನೆರವಾಗುತ್ತವೆ. ಅವು ಜನರಿಗೆ ತಮಗೇನು ಬೇಕೋ ಅದನ್ನು ಪಡೆಯುವ ಮತ್ತು ತೊಂದರೆಯನ್ನು ದೂರವಿರಿಸುವ ಆಶ್ವಾಸನೆಯನ್ನು ಕೊಡುತ್ತವೆ.”
ತಾಯಿತಿಗಳ ಸಂಶಯಾಸ್ಪದ ಶಕ್ತಿ
ಆದಕಾರಣ ಲೋಕದಲ್ಲೆಲ್ಲೂ ಜನರಿಂದ ವಿವಿಧ ತೆರಗಳ ಮತ್ತು ಆಕಾರಗಳ ತಾಯಿತಿಗಳು, ರಕ್ಷಾಬಂಧಗಳು, ಮತ್ತು ರಕ್ಷೆಗಳು ಧರಿಸಲ್ಪಡುತ್ತವೆ, ಒಯ್ಯಲ್ಪಡುತ್ತವೆ, ಮತ್ತು ಪ್ರದರ್ಶಿಸಲ್ಪಡುತ್ತವೆ. ಆದರೆ ಮಾನವ ನಿರ್ಮಿತ ರಕ್ಷೆಯೊಂದು ಯಾವುದೇ ನಿಜ ಭದ್ರತೆಯನ್ನು ನೀಡಬಲ್ಲದೆಂದು ನಂಬುವುದು ನ್ಯಾಯಸಮ್ಮತವಾಗಿದೆಯೇ? ರಕ್ಷೆಗಳಾಗಿ ಜನಪ್ರಿಯವಾಗಿ ಬಳಸಲ್ಪಡುವ ಅನೇಕ ವಸ್ತುಗಳು, ರಾಶಿಗಟ್ಟಳೆ ತಯಾರಿಕೆಯಾಗುವ ವ್ಯಾಪಾರೀ ಉತ್ಪಾದನೆಗಳಾಗಿವೆ. ಕಾರ್ಖಾನೆಯೊಂದರಲ್ಲಿ ಜೋಡಿಸಲ್ಪಡುವ ಒಂದು ವಸ್ತುವಿಗೆ ಮಾಂತ್ರಿಕ ಶಕ್ತಿಗಳು ಇರಬಲ್ಲವೆಂದು ನಂಬುವುದು ತರ್ಕಬದ್ಧತೆ ಮತ್ತು ವ್ಯವಹಾರ ಜ್ಞಾನವನ್ನು ವಿರೋಧಿಸದೇ? ಮತ್ತು ಗ್ರಾಮೀಣ ವೈದ್ಯನಿಂದ ವಿಶಿಷ್ಟವಾಗಿ ತಯಾರಿಸಲ್ಪಟ್ಟ ಔಷಧದ ಗುಟುಕು ಸಹ ಸಾಮಾನ್ಯ ಘಟಕಗಳಾದ—ಬೇರುಗಳು, ಮೂಲಿಕೆಗಳೇ ಮುಂತಾದ ಮಿಶ್ರಣವಲ್ಲದೆ ಬೇರೇನೂ ಅಲ್ಲ. ಅಂಥ ಮಿಶ್ರಣವೊಂದಕ್ಕೆ ಮಾಂತ್ರಿಕ ಗುಣಗಳು ಇರಬೇಕೇಕೆ? ಅದಲ್ಲದೆ, ತಾಯಿತಿಗಳನ್ನು ಬಳಸುವ ಜನರು ಅವನ್ನು ಬಳಸದವರಿಗಿಂತ—ಹೆಚ್ಚು ಕಾಲ—ಅಥವಾ ಹೆಚ್ಚು ಸುಖವಾಗಿ ಜೀವಿಸುತ್ತಾರೆಂಬದಕ್ಕೆ ಯಾವುದೇ ನಿಜ ರುಜುವಾತು ಇದೆಯೇ? ಆ ಮಾಂತ್ರಿಕ ರಕ್ಷೆಗಳನ್ನು ಮಾಡುವವರು ಸ್ವತಃ ಅಸ್ವಸ್ಥ ಮತ್ತು ಮರಣಕ್ಕೆ ಬಲಿಬೀಳುವುದಿಲ್ಲವೇ?
ಜನರಿಗೆ ನಿಜ ಸುರಕ್ಷೆಯನ್ನು ಮತ್ತು ತಮ್ಮ ಜೀವಿತಗಳ ಮೇಲೆ ಹತೋಟಿಯ ಭಾವನೆಯನ್ನು ಕೊಡುವ ಬದಲಾಗಿ, ತಾಯಿತಿಗಳ ಮತ್ತು ರಕ್ಷೆಗಳ ಅಂಧಶ್ರದ್ಧೆಯ ಬಳಕೆಯು, ಜನರನ್ನು ತಮ್ಮ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಎದುರಿಸುವುದರಿಂದ ಕಾರ್ಯತಃ ನಿರುತ್ತೇಜನಗೊಳಿಸಿ, ಅದೃಷವ್ಟೇ ಎಲ್ಲವನ್ನು ನೀಗಿಸುವುದಾಗಿ ನೋಡುವಂತೆ ಉತ್ತೇಜನ ಕೊಡುತ್ತದೆ. ತಾಯಿತಿಗಳ ಶಕ್ತಿಯಲ್ಲಿ ಭರವಸವಿಡುವಿಕೆಯು ಅವನ್ನು ಬಳಸುವವನಿಗೆ ಸುರಕ್ಷೆಯ ಕೃತ್ರಿಮ ಅನಿಸಿಕೆಯನ್ನು ಸಹ ಕೊಡಬಲ್ಲದು. ಮದ್ಯದ ಅಮಲಿನಲ್ಲಿರುವ ವ್ಯಕ್ತಿಯೊಬ್ಬನು ತನ್ನ ಪ್ರತಿಕ್ರಿಯೆಗಳಲ್ಲಿ ಮತ್ತು ಸಾಮರ್ಥ್ಯಗಳಲ್ಲಿ ಯಾವ ಕಗ್ಗೂ ಇಲ್ಲವೆಂದು ವಾದಿಸಬಹುದು, ಆದರೆ ಅವನು ವಾಹನ ನಡಿಸಲು ಪ್ರಯತ್ನಿಸಿದಲ್ಲಿ, ಅವನು ತನಗೆ ಅಥವಾ ಇತರರಿಗೆ ಹಾನಿಯನ್ನು ತರುವ ಸಂಭವನೀಯತೆ ಇದೆ. ಒಂದು ತಾಯಿತಿಯ ಶಕ್ತಿಯಲ್ಲಿ ತನ್ನ ಭರವಸೆಯನ್ನಿಡುವ ವ್ಯಕ್ತಿಯು ತದ್ರೀತಿ ತನಗೆ ಹಾನಿಯನ್ನು ತರಬಹುದು. ತಾನು ಕಾಪಾಡಲ್ಪಡುತ್ತೇನೆ ಎಂಬ ಭ್ರಮೆಯ ಕೆಳಗೆ, ಅವನು ಮೂರ್ಖ ಸಾಹಸಗಳಿಗೆ ಕೈಹಾಕುವ ಪ್ರವೃತ್ತಿಯುಳ್ಳವನಾಗಬಹುದು ಅಥವಾ ಅವಿವೇಕದ ನಿರ್ಣಯಗಳನ್ನು ಮಾಡಲೂಬಹುದು.
ತಾಯಿತಿಗಳ ಶಕ್ತಿಯಲ್ಲಿ ನಂಬಿಕೆಯು ಅವುಗಳನ್ನು ಬಳಸುವ ಲಕ್ಷಾಂತರ ಜನರಿಂದ ಮರೆಯಾಗಿರುವ ಇನ್ನೂ ಬೇರೆ ಗುರುತರವಾದ ಕೇಡುಗಳನ್ನು ಮುಂದಿಡುತ್ತದೆ. ಈ ಅಪಾಯಗಳು ಯಾವುವು, ಮತ್ತು ಕೇಡನ್ನು ತೊಲಗಿಸಲು ಯಾವುದೇ ಯೋಗ್ಯವಾದ ಮಾರ್ಗವು ಇದೆಯೇ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ನಿರ್ವಹಿಸುವುದು.
[ಅಧ್ಯಯನ ಪ್ರಶ್ನೆಗಳು]
a ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್ಷನರಿ ಯು “ತಾಯಿತಿ” ಯನ್ನು, “ಧರಿಸುವಾತನನ್ನು (ರೋಗ ಅಥವಾ ಮಾಟದಂತಹ) ಕೇಡಿನಿಂದ ರಕ್ಷಿಸಲು ಅಥವಾ ಅವನಿಗೆ ಸಹಾಯ ಮಾಡಲು, ಕೆಲವೊಮ್ಮೆ ಮಂತ್ರ ಪಠನ ಅಥವಾ ಸಂಕೇತವು ಲೇಖಿಸಲ್ಪಟ್ಟಿರುವ ಒಂದು (ಒಡವೆಯಂತಿರುವ) ರಕ್ಷೆಯಾಗಿ” ಅರ್ಥವಿವರಿಸಿಯದೆ.