ನಿಮಗೆ ನೆನಪಿದೆಯೇ?
ಇತ್ತೀಚಿನ ಕಾವಲಿನಬುರುಜು ಸಂಚಿಕೆಗಳ ಓದುವಿಕೆಯನ್ನು ನೀವು ಗಣ್ಯ ಮಾಡಿದ್ದೀರಾ? ಒಳ್ಳೆಯದು, ಈ ಕೆಳಗಣ ಪ್ರಶ್ನೆಗಳನ್ನು ನೀವು ಉತ್ತರಿಸಬಲ್ಲಿರೋ ಎಂದು ನೋಡಿ:
▫ ಇಂದು ಒಂದು ಸಭೆಯಲ್ಲಿ ರೋಗಿಗಳಿಗೂ ವೃದ್ಧರಿಗೂ ಯಾವ ಪ್ರಾಯೋಗಿಕ ಸಹಾಯವನ್ನು ಕೊಡಸಾಧ್ಯವಿದೆ?
ಆದಿ ಕ್ರೈಸ್ತ ಸಭೆಯಲ್ಲಿ ಲೌಕಿಕ ಸಹಾಯ ಬೇಕಾಗಿದ್ದ ವಿಧವೆಯರ ಒಂದು ಪಟ್ಟಿಯನ್ನು ಇಡಲಾಗುತ್ತಿತ್ತು. (1 ತಿಮೊಥೆಯ 5:9, 10) ಅಂತೆಯೇ ಇಂದು, ಹಿರಿಯರು ವಿಶೇಷ ಗಮನ ಬೇಕಾಗಿರುವ ರೋಗಿಗಳ ಮತ್ತು ವೃದ್ಧರ ಒಂದು ಪಟ್ಟಿಯನ್ನು ತಯಾರಿಸಬಹುದು. ಆದರೂ, ಈ ಕ್ಷೇತ್ರದಲ್ಲಿ ಆರಂಭಹೆಜ್ಜೆಯನ್ನು ಕೇವಲ ಹಿರಿಯರೇ ಇಡುವಂತೆ ಬಿಡಬಾರದು. ಇಂತಹ ಆವಶ್ಯಕತೆಗಳ ಅರಿವು ಸಭೆಯಲ್ಲಿ ಎಲ್ಲರಿಗೂ ಇರತಕ್ಕದ್ದು. (1 ತಿಮೊಥೆಯ 5:4-8)—8⁄15, ಪುಟಗಳು 28-9.
▫ ಯೋನನು ಒಂದು ಜಲಪ್ರಾಣಿಯಿಂದ ನುಂಗಲ್ಪಟ್ಟ ವಿಷಯದ ಬೈಬಲ್ ಕಥೆಯು ನಂಬಲಾಗದ್ದೇ?
ಅಲ್ಲ, ಮೇದಸ್ಸುಳ್ಳ ತಿಮಿಂಗಿಲ, ದೀರ್ಘಾಕಾರದ ವೈಟ್ ಷಾರ್ಕ್, ಅಥವಾ ತಿಮಿಂಗಿಲ ಷಾರ್ಕ್ ಒಬ್ಬ ಮನುಷ್ಯನನ್ನು ನುಂಗಬಲ್ಲದು. ಅಲ್ಲದೆ, ಯೋನನ ವೃತ್ತಾಂತ ಸತ್ಯವೆಂದು ಯೇಸು ತಾನೇ ಪುಷ್ಟೀಕರಿಸಿದನು. (ಮತ್ತಾಯ 12:39, 40)—8⁄15, ಪುಟ 32.
▫ ತಾಯಿತಿಗಳ ಮತ್ತು ರಕ್ಷೆಗಳ ಮೂಢನಂಬಿಕೆಯ ಉಪಯೋಗದಿಂದ ಯಾವ ಹಾನಿ ಫಲಿಸುತ್ತದೆ?
ಅವುಗಳ ಉಪಯೋಗ ಜನರು ಚುರುಕುಬುದ್ಧಿಯಿಂದ ತಮ್ಮ ಸಮಸ್ಯೆಗಳನ್ನು ಎದುರಿಸುವುದನ್ನು ನಿಜವಾಗಿಯೂ ನಿರುತ್ತೇಜನಗೊಳಿಸಿ, ಅವರು ಭಾಗ್ಯವನ್ನು ಸರ್ವರೋಗ ಪರಿಹಾರಕವಾಗಿ ನೋಡುವಂತೆ ಪ್ರೋತ್ಸಾಹಿಸುತ್ತದೆ. ಅದರ ಬಳಕೆದಾರರಿಗೆ ಅದು ಒಂದು ಭದ್ರತೆಯ ಮಿಥ್ಯಾಬೋಧವನ್ನೂ ಕೊಡುತ್ತದೆ. ಹೆಚ್ಚು ಪ್ರಾಮುಖ್ಯವಾಗಿ, ಈ ಮಾಂತ್ರಿಕ ತಾಯಿತಿಗಳಲ್ಲಿ ಮತ್ತು ಅದೃಷ್ಟ ರಕ್ಷೆಗಳಲ್ಲಿ ನಂಬುವ ವ್ಯಕ್ತಿಯು ತನ್ನ ಬಾಳಿನ ನಿಯಂತ್ರಣವನ್ನು ಅದೃಶ್ಯ ದೆವ್ವ ಪಡೆಗಳಿಗೆ ಒಪ್ಪಿಸಿಕೊಡಲೂಬಹುದು.—9⁄1, ಪುಟ 4.
▫ ವಿವಾಹವನ್ನು ಬಾಳಿಕೆ ಬರುವಂತೆ ಮಾಡಸಾಧ್ಯವಿರುವ ನಾಲ್ಕು ಮೂಲಾಂಶಗಳು ಯಾವುವು?
ಆಲಿಸುವ ಮನಸ್ಸು, ತಪ್ಪೊಪ್ಪಿಕೊಳ್ಳುವ ಸಾಮರ್ಥ್ಯ, ಭಾವಾವೇಶದ ಬೆಂಬಲವನ್ನು ಕೊಡುವ ಸಾಮರ್ಥ್ಯ, ಮತ್ತು ಒಲುಮೆಯಿಂದ ಸ್ಪರ್ಶಿಸುವ ಮನಸ್ಸು. (1 ಕೊರಿಂಥ 13:4-8: ಎಫೆಸ 5:33; ಯಾಕೋಬ 1:19)—9⁄1, ಪುಟ 20.
▫ ಪರೀಕ್ಷೆಯನ್ನು ಎದುರಿಸುವವರಿಗೆ ಯೆಹೋವನು ತಾಳ್ಮೆಯನ್ನು ಒದಗಿಸುವ ಒಂದು ವಿಧವು ಯಾವುದು?
ಯೆಹೋವನು ಇದನ್ನು ತನ್ನ ವಾಕ್ಯವಾದ ಬೈಬಲಿನಲ್ಲಿ ದಾಖಲೆಯಾಗಿರುವ ತಾಳ್ಮೆಯ ಮಾದರಿಗಳ ಮೂಲಕ ಮಾಡುತ್ತಾನೆ. (ರೋಮಾಪುರ 15:4) ನಾವು ಇವನ್ನು ಧ್ಯಾನಿಸುವಾಗ, ತಾಳುವಂತೆ ಪ್ರೋತ್ಸಾಹಿಸಲ್ಪಡುತ್ತೇವೆ ಮಾತ್ರವಲ್ಲ, ತಾಳುವುದು ಹೇಗೆಂಬುದರ ಕುರಿತೂ ಹೆಚ್ಚಿನದನ್ನು ಕಲಿಯುತ್ತೇವೆ.—9⁄15, ಪುಟಗಳು 11-12.
▫ ದಿವ್ಯ ಭಕ್ತಿ ಎಂದರೇನು?
ದಿವ್ಯ ಭಕ್ತಿಯು ಯೆಹೋವನು ಏನನ್ನು ಮೆಚ್ಚುತ್ತಾನೋ ಅದನ್ನು ಕಷ್ಟಕರವಾದ ಪರೀಕ್ಷೆಗಳ ಎದುರಲ್ಲಿಯೂ ನಾವು ಹೃದಯದಿಂದ ದೇವರನ್ನು ಪ್ರೀತಿಸುವ ಕಾರಣ ಮಾಡುವಂತೆ ನಮ್ಮನ್ನು ಪ್ರಚೋದಿಸುವ ಆತನ ಮೇಲಿನ ಭಕ್ತಿ ಎಂದು ಸೂಚಿಸುತ್ತದೆ.—9⁄15, ಪುಟ 15.
▫ ನಾವು ದೇವರ ಕರುಣೆಯನ್ನು ಹೇಗೆ ವೀಕ್ಷಿಸಬೇಕು?
ದೇವರ ಮಹಾ ಕರುಣೆಯನ್ನು ನಾವು ಲಘುವಾಗಿ ನೋಡಬಾರದು. ನಾವು ಪೌಲನಂತಿದ್ದು ನಮ್ಮ ಸ್ವಂತ ಅಪೂರ್ಣತೆಗಳ ವಿರುದ್ಧ ಹೋರಾಡುವ ಮೂಲಕ ನಮ್ಮ ಗಣ್ಯತೆಯನ್ನು ತೋರಿಸಬೇಕು. (1 ಕೊರಿಂಥ 9:27) ಈ ವಿಧದಲ್ಲಿ ನಾವು, ಕಷ್ಟಗಳ ಎದುರಲ್ಲಿಯೂ, ಸಮರ್ಪಕವಾದುದನ್ನು ಮಾಡುವ ಮನಸ್ಸು ನಮಗಿದೆಯೆಂದು ಪ್ರದರ್ಶಿಸುವೆವು.—10⁄1, ಪುಟ 23.
▫ ಪೌಲನು ದೀರ್ಘಶಾಂತಿಯನ್ನು ಪ್ರೀತಿಯ ಮೊದಲನೆಯ ವಿಷಯಾಂಶವಾಗಿ ದಾಖಲ್ಮಾಡಿದ್ದು ಸಮಂಜಸವೇಕೆ?
ದೀರ್ಘಶಾಂತಿಯ ಹೊರತು ಅಥವಾ ಪರಸ್ಪರವಾಗಿ ತಾಳ್ಮೆಯಿಂದ ಸಹಿಸಿಕೊಳ್ಳುವ ಹೊರತು ಕ್ರೈಸ್ತ ಒಡನಾಟವೆಂಬಂತಹ ಸಂಗತಿಯೇ ಇಲ್ಲವೆಂದು ಹೇಳಲಾಗಿದೆ. ನಾವೆಲ್ಲರೂ ಅಪೂರ್ಣರಾಗಿರುವುದೇ ಇದಕ್ಕೆ ಕಾರಣ ಮತ್ತು ನಮ್ಮ ಅಪೂರ್ಣತೆಗಳು ಮತ್ತು ಕುಂದುಗಳು ಇತರರನ್ನು ಪರೀಕೆಗ್ಷೊಳಪಡಿಸುತ್ತವೆ. ಆದುದರಿಂದ, ಪ್ರೀತಿಯು ಸಹೋದರರ ಮಧ್ಯೆ ಇರಬೇಕಾದರೆ ದೀರ್ಘಶಾಂತಿ ಆಧಾರಭೂತವಾಗಿದೆ.—10⁄15, ಪುಟ 21.
▫ ಆದಿ ಕ್ರೈಸ್ತರು ದೇವರ ಹೆಸರನ್ನು ಉಪಯೋಗಿಸಿದರೊ?
ರುಜುವಾತು ಹೌದೆನ್ನುತ್ತದೆ. ತನ್ನ ಅನುಯಾಯಿಗಳು ದೇವರಿಗೆ, “ನಿನ್ನ ನಾಮವು ಪರಿಶುದ್ಧವೆಂದೆಣಿಸಲ್ಪಡಲಿ” ಎಂದು ಪ್ರಾರ್ಥಿಸಲು ಯೇಸು ಕಲಿಸಿದನು. (ಮತ್ತಾಯ 6:9) ಮತ್ತು ಅವನ ಶುಶ್ರೂಷೆಯ ಅಂತ್ಯದಲ್ಲಿ, ಅವನು ಪ್ರಾರ್ಥಿಸಿದ್ದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು.” (ಯೋಹಾನ 17:6) ಇದಲ್ಲದೆ ಸೆಪ್ಟ್ಯೂಜಿಂಟ್‌ನ ಆದಿಪ್ರತಿಗಳಲ್ಲಿ ಹೀಬ್ರೂ ಟೆಟ್ರಗ್ರ್ಯಾಮಟಾನ್ ರೂಪದಲ್ಲಿ ದೇವರ ನಾಮವು ಸೇರಿತ್ತು.—11⁄1, ಪುಟ 30.
▫ ನಮ್ಮ ದೋಷಗಳನ್ನು ನಾವು ನಿರ್ವಹಿಸುವ ವಿಧವು ನಮ್ಮ ಜೀವಿತಗಳನ್ನು ಬಾಧಿಸಬಲ್ಲದೆಂದು ಯಾವ ಬೈಬಲ್ ಉದಾಹರಣೆಗಳು ತೋರಿಸುತ್ತವೆ?
ರಾಜ ಸೌಲನು ಹಟಮಾರಿತನದಿಂದ ಸಲಹೆಯನ್ನು ಪ್ರತಿಭಟಿಸಿದನು, ಮತ್ತು ಅವನ ದೋಷಗಳು ಬಹುಸಂಖ್ಯಾಕವಾಗಿ, ಕ್ರಮೇಣ ಅವನ ಮರಣ ಮತ್ತು ದೇವರ ಅನನುಗ್ರಹದಲ್ಲಿ ಅಂತ್ಯಗೊಂಡವು. (1 ಸಮುವೇಲ 15:17-29) ಮತ್ತೊಂದು ಕಡೆಯಲ್ಲಿ, ದೋಷ ಮತ್ತು ಪಾಪಗಳ ಎದುರಿನಲ್ಲಿಯೂ ರಾಜ ದಾವೀದನು ಪಶ್ಚಾತ್ತಾಪಪೂರ್ವಕವಾಗಿ ತಿದ್ದುಪಾಟನ್ನು ಅಂಗೀಕರಿಸಿ ಯೆಹೋವನಿಗೆ ನಂಬಿಗಸ್ತನಾಗಿ ಉಳಿದನು. ಈ ಬೈಬಲ್ ಉದಾಹರಣೆಗಳು, ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು ದೇವರೊಂದಿಗೆ ಸುಸಂಬಂಧವನ್ನು ಇಟ್ಟುಕೊಳ್ಳಲು ಮತ್ತು ಈ ಕಾರಣದಿಂದ ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗಲು ಸಹಾಯ ಮಾಡುತ್ತದೆಂದು ತೋರಿಸುತ್ತವೆ. (ಕೀರ್ತನೆ 32:1-5)—11⁄15, ಪುಟಗಳು 29-30.
▫ ನೈಸರ್ಗಿಕ ವಿಪತ್ತುಗಳಿಂದಾಗಿ ಅಥವಾ ಇತರ ಕಾರಣಗಳಿಂದಾಗಿ ಬಿಕ್ಕಟ್ಟಿನಲ್ಲಿರುವಾಗ ಯೆಹೋವನು ಹೇಗೆ ತನ್ನ ಜನರ ಸಹಾಯಕ್ಕೆ ಬರುತ್ತಾನೆ?
ಅದ್ಭುತಕರವಾಗಿ ಪ್ರಕೃತಿಶಕ್ತಿಗಳನ್ನು ವಿಪರ್ಯಸ್ತ ಮಾಡಿಯಾಗಲಿ, ಇನ್ನಿತರ ಪ್ರಕೃತ್ಯತೀತ ಕೃತ್ಯದಿಂದಾಗಿಯಾಗಲಿ ಅಲ್ಲ, ಹೆಚ್ಚಿನ ಜನರು ನಿಜವಾಗಿಯೂ ಗ್ರಹಿಸದ ಇನ್ನೊಂದು ಶಕ್ತಿಯಾದ ಪ್ರೀತಿಯ ಮೂಲಕ ಯೆಹೋವನು ಸಹಾಯ ಮಾಡುತ್ತಾನೆ. ಹೌದು, ಯೆಹೋವನು ತನ್ನ ಜನರನ್ನು ನಿಜವಾಗಿಯೂ ಪ್ರೀತಿಸುತ್ತಾನೆ, ಮತ್ತು ಆತನು ಅವರ ಮಧ್ಯೆ ಪರಸ್ಪರವಾಗಿ ಎಷ್ಟು ಬಲವಾದ ಪ್ರೀತಿಯನ್ನು ಪೋಷಿಸಿದ್ದಾನೆಂದರೆ, ಅದ್ಭುತವೆಂದು ಕಂಡುಬರುವ ವಿಷಯಗಳನ್ನು ಅವರಿಗಾಗಿ ಪೂರೈಸಲು ಶಕ್ತನಾಗಿದ್ದಾನೆ. (1 ಯೋಹಾನ 4:10-12, 21)—12⁄1, ಪುಟ 10.