ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 10/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ನಾನಾಭಾಷೆಗಳನ್ನಾಡುವ ವರದಾನವು ನಿಜ ಕ್ರೈಸ್ತತ್ವದ ಭಾಗವೋ?
    ಕಾವಲಿನಬುರುಜು—1992
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1996
  • ಒಂದನೇ ಶತಮಾನದಲ್ಲಿ ಮತ್ತು ಇಂದು ಪವಿತ್ರಾತ್ಮದ ಮಾರ್ಗದರ್ಶನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ವಾಸಿಮಾಡುವ ಪವಾಡ ದೇವರಿಂದಲೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಕಾವಲಿನಬುರುಜು—1993
w93 10/15 ಪು. 31

ವಾಚಕರಿಂದ ಪ್ರಶ್ನೆಗಳು

ಒಂದನೆಯ ಕೊರಿಂಥ 14:37 ರಲ್ಲಿ ತೋರಿಬರುವ “ದೇವರಾತ್ಮನಿಂದ ನಡಿಸಲ್ಪಡುವವನೆಂದಾಗಲಿ” ಎಂಬ ವಾಕ್ಸರಣಿಯು, ವ್ಯಕ್ತಿಯೊಬ್ಬನು ಅಭಿಷೇಕಿಸಲ್ಪಟ್ಟಿದ್ದಾನೆಂಬ ಅರ್ಥದಲ್ಲಿ ಪವಿತ್ರಾತ್ಮವನ್ನು ಹೊಂದಿದ್ದಾನೆ ಯಾ ಪವಿತ್ರಾತ್ಮನಿಂದ ಅದ್ಭುತಕರ ವರದಾನವು ಅವನಿಗೆ ಇದೆ ಎಂಬ ಅರ್ಥದಲ್ಲಿ ಹೇಳಲಾಗಿದೆಯೇ?

ನ್ಯೂ ವರ್ಲ್ಡ್‌ ಟ್ರಾನ್‌ಸ್‌ಲೇಶನ್‌ ಆಫ್‌ ದಿ ಹೋಲಿ ಸ್ಕ್ರಿಪ್ಚರ್ಸ್‌ ನಲ್ಲಿ ಈ ವಚನವು ಹೀಗೆ ಓದಲ್ಪಡುತ್ತದೆ: “ಯಾವನೇ ಒಬ್ಬನು ತಾನು ಪ್ರವಾದಿಯೆಂದು ಎಣಿಸುವುದಾದರೆ ಯಾ ಆತ್ಮದೊಂದಿಗೆ ವರದಾನಿಸಲ್ಪಟ್ಟರೆ, ಅವನು ನಾನು ನಿಮಗೆ ಬರೆಯುವ ಸಂಗತಿಗಳನ್ನು ಅಂಗೀಕರಿಸಲಿ, ಯಾಕಂದರೆ ಅವುಗಳು ಕರ್ತನ ಆಜ್ಞೆಯಾಗಿದೆ.”—1 ಕೊರಿಂಥ 14:37.

“ಆತ್ಮದೊಂದಿಗೆ ವರದಾನಿಸಲ್ಪಟ್ಟರೆ” ಎಂಬ ವಾಕ್ಸರಣಿಯನ್ನು ವಾಚಕನೊಬ್ಬನು, ಮೊದಲನೆಯ ಶತಕದ ಕ್ರೈಸ್ತರು ಆತ್ಮದಿಂದ ಜನಿತರಾದವರೂ, ಹೀಗೆ ದೇವರ ಆತ್ಮಿಕ ಪುತ್ರರಾಗಿರುವುದರ ವಾಸ್ತವಾಂಶ ನಿರ್ದೇಶವಾಗಿ ತೆಗೆದುಕೊಳ್ಳಸಾಧ್ಯವಿದೆ. ಯಾ ಪವಿತ್ರಾತ್ಮನ ವಿಶೇಷ ವರದಾನವನ್ನು ಪಡೆದುಕೊಂಡಿರುವ ಒಬ್ಬನಿಗೆ ಈ ವಾಕ್ಸರಣಿಯು ಅನ್ವಯಿಸಬಲ್ಲದು ಎಂದು ಅರ್ಥಮಾಡಸಾಧ್ಯವಿದೆ. ಕೊನೆಯ ಅರ್ಥ ಆಗಿದ್ದಿರಬಹುದೆಂದು ಎಂದು ನಮಗೆ ತೋರಿಸಲು ಹಿನ್ನೆಲೆಯು ಸಹಾಯ ಮಾಡುತ್ತದೆ.

ಅಪೊಸ್ತಲ ಪೌಲನು ಇಲ್ಲಿ ಗ್ರೀಕ್‌ ನ್ಯೂಮಟಿಕೊಸ್‌ ಅನ್ನು ಬಳಸುತ್ತಾನೆ, ಅದಕ್ಕೆ ಮೂಲತಃ “ಆತ್ಮಕ್ಕೆ ಸಂಬಂಧಿಸಿದ್ದು, ಆತ್ಮಿಕ” ಎಂಬ ಅರ್ಥವಿದೆ. ಅದರ ರೂಪಗಳು ವಿವರಣೆಗಳಲ್ಲಿ “ಆತ್ಮಿಕ ದೇಹ,” “ಆತ್ಮಿಕ ವರ,” “ಆತ್ಮಿಕ ಜ್ಞಾನ,” ಮತ್ತು “ಆತ್ಮಸಂಬಂಧವಾದ ಮಂದಿರ” ಎಂಬಿವುಗಳಲ್ಲಿ ಬಳಸಲಾಗಿದೆ.—1 ಕೊರಿಂಥ 15:44; ಎಫೆಸ 1:3; ಕೊಲೊಸ್ಸೆ 1:9; 1 ಪೇತ್ರ 2:5.

ಆ ವಿದ್ಯಮಾನಗಳಲ್ಲಾದರೋ, “ಆತ್ಮಿಕ” ಎಂದು ವರ್ಣಿಸುವ ವಿಷಯ (ದೇಹ, ವರ, ಜ್ಞಾನ, ಮಂದಿರ) ವನ್ನು ಬೈಬಲು ವಿಧಿಸುತ್ತದೆ. ಆದರೆ ಇತರ ವಿದ್ಯಮಾನಗಳಲ್ಲಿ, ಭಾವ ಮತ್ತು “ಆತ್ಮಿಕ”ದ ತಕ್ಕದಾದ ಪೂರಕವನ್ನು ಪೂರ್ವಾಪರದಿಂದ ನಿರ್ಧರಿಸತಕ್ಕದ್ದು. ಉದಾಹರಣೆಗೆ, 1 ಕೊರಿಂಥ 2:14, 15 ರಲ್ಲಿ ಪ್ರಾಕೃತ ಮನುಷ್ಯನೊಂದಿಗೆ ಹೊ ನ್ಯೂಮಟಿಕೊ ಅಂದರೆ “ಆತ್ಮಿಕ ಮನುಷ್ಯ” ನನ್ನು ವ್ಯತ್ಯಾಸ ತೋರಿಸಲಾಗಿದೆ.

ಒಂದನೆಯ ಕೊರಿಂಥ 12 ರಿಂದ 14ರ ವರೆಗಿನ ಅಧ್ಯಾಯಗಳು ಪವಿತ್ರಾತ್ಮನ ಅದ್ಭುತಕರ ವರದಾನಗಳ ಮೇಲೆ ಕೇಂದ್ರೀಕರಿಸುತ್ತವೆ. ಮಾಂಸಿಕ ಇಸ್ರಾಯೇಲನ್ನು ಇನ್ನು ಮುಂದೆ ಅವನು ಬಳಸುವುದಿಲ್ಲ, ಬದಲಿಗೆ ಕ್ರೈಸ್ತ, “ದೇವರ ಇಸ್ರಾಯೇಲ್‌” ಅನ್ನು ಈಗ ಆಶೀರ್ವದಿಸುತ್ತಾನೆಂದು ಪ್ರದರ್ಶಿಸಲು ಆರಂಭದ ಕೆಲವು ಕ್ರೈಸ್ತರಿಗೆ ದೇವರು ಈ ವರದಾನಗಳನ್ನು ಕೊಟ್ಟನು. (ಗಲಾತ್ಯ 6:16) ಈ ವರದಾನಗಳ ಕುರಿತು, ಪೌಲನು ಬರೆದದ್ದು: “ವರಗಳಲ್ಲಿ ಬೇರೆ ಬೇರೆ ವಿಧಗಳುಂಟು, ದೇವರಾತ್ಮನು ಒಬ್ಬನೇ.” (1 ಕೊರಿಂಥ 12:4) ಆತ್ಮನ ವರಗಳಲ್ಲಿ ವಿಶೇಷ ವಿವೇಕ, ಜ್ಞಾನ, ಮತ್ತು ನಂಬಿಕೆ ಇದ್ದವು, ಅಂತೆಯೇ ಪ್ರವಾದಿಸುವುದು, ನಾನಾ ವಾಣಿಗಳಲ್ಲಿ ಮಾತಾಡುವುದು, ಮತ್ತು ವಾಣಿಗಳ ಅರ್ಥವನ್ನು ವಿವರಿಸುವುದು ಇತ್ತು.—1 ಕೊರಿಂಥ 12:8-11.

ಪೌಲನು ಬರೆದ ಕೊರಿಂಥದಲ್ಲಿದ್ದ ಕ್ರೈಸ್ತರು ದೇವರ ಪವಿತ್ರಾತ್ಮನಿಂದ ಅಭಿಷೇಕಿತರಾಗಿದ್ದರು. ಪೌಲನು ಹೇಳಿದ್ದು: “ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.” (1 ಕೊರಿಂಥ 6:11; 12:13) ಹೌದು, ಎಲ್ಲರಿಗೂ “ಪವಿತ್ರಾತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ.” (2 ಕೊರಿಂಥ 5:5) ಆದಾಗ್ಯೂ, ಪವಿತ್ರಾತ್ಮನ ಮೂಲಕ ಅವರೆಲ್ಲರೂ ವಿಶೇಷ ವರವನ್ನು ಪಡೆದಿರಲಿಲ್ಲ. ಮತ್ತು ಅನೇಕರು ವಾಣಿಗಳಲ್ಲಿ ಮಾತಾಡುವ ವರಕ್ಕೆ ಅನುಚಿತವಾದ ಮಹತ್ವವನ್ನು ಕೊಟ್ಟು, ಅದಕ್ಕೆ ಆಕರ್ಷಿತರಾಗಿದ್ದಂತೆ ಭಾಸವಾಗುತ್ತಿತ್ತು. ಅವರ ಆಲೋಚನೆಯನ್ನು ಸರಿಪಡಿಸಲು ಪೌಲನು ಬರೆದನು ಮತ್ತು ಪ್ರವಾದಿಸುವುದು ಎಷ್ಟೊಂದು ಜನರಿಗೆ ಪ್ರಯೋಜನ ತರುತ್ತದೊ, ಅಷ್ಟು ಜನರಿಗೆ ವಾಣಿಗಳನ್ನಾಡುವುದು ತರುವುದಿಲ್ಲವೆಂದು ಸೂಚಿಸಿದನು. ಅಧ್ಯಾಯ 12ರ ಕೊನೆಯಲ್ಲಿ, ಪೌಲನು ಕೊರಿಂಥದವರಿಗೆ ಬುದ್ಧಿವಾದವನ್ನಿತ್ತದ್ದು: “ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ.”—1 ಕೊರಿಂಥ 12:28-31.

ಅನಂತರ, 14 ನೆಯ ಅಧ್ಯಾಯದ ಆರಂಭದಲ್ಲಿ ಅವನು ಒತ್ತಾಯಿಸಿದ್ದು: “ಪ್ರೀತಿಯನ್ನು ಅಭ್ಯಾಸಮಾಡಿಕೊಳ್ಳಿರಿ. ಆದರೂ ಪವಿತ್ರಾತ್ಮನಿಂದುಂಟಾಗುವ ವರಗಳನ್ನು, ಅವುಗಳೊಳಗೆ ವಿಶೇಷವಾಗಿ ಪ್ರವಾದಿಸುವ ವರವನ್ನೇ ಆಸಕ್ತಿಯಿಂದ [ಟಾ ನ್ಯೂಮಟಿಕ] ಅಪೇಕ್ಷಿಸಿರಿ.” ಯಾವುದನ್ನು ಅಪೇಕ್ಷಿಸಬೇಕು? ಆ ಕ್ರೈಸ್ತರು ಆತ್ಮಾಭಿಷೇಕವನ್ನು ಅಪೇಕ್ಷಿಸಬೇಕಾಗಿರಲಿಲ್ಲ, ಯಾಕಂದರೆ ಅವರಿಗೆ ಈಗಾಗಲೇ ಅದು ಆಗಿತ್ತು. ತಾರ್ಕಿಕವಾಗಿಯೇ, ಪೌಲನು ಆತ್ಮನಿಂದುಂಟಾಗುವ “ವರಗಳನ್ನು” ಎಂದು ಅರ್ಥೈಸಿದ್ದನು, ಅದನ್ನೇ ಅವರು ಅಪೇಕ್ಷಿಸುವಂತೆ ಅವನು ಅಧ್ಯಾಯ 12ರ ಕೊನೆಯಲ್ಲಿ ಒತ್ತಾಯಿಸಿದ್ದನು. ಆದಕಾರಣ, ನ್ಯೂ ವರ್ಲ್ಡ್‌ ಟ್ರಾನ್‌ಸ್‌ಲೇಶನ್‌ ಆಫ್‌ ದಿ ಹೋಲಿ ಸ್ಕ್ರಿಪ್ಚರ್ಸ್‌ 1 ಕೊರಿಂಥ 14:1ನ್ನು ಹೀಗೆ ಅನುವಾದಿಸುತ್ತದೆ: “ಆತ್ಮಿಕ ವರಗಳನ್ನು ಹುರುಪಿನಿಂದ ಹುಡುಕುತ್ತಾ ಇರ್ರಿ.” ಇತರ ಬೈಬಲ್‌ ತರ್ಜುಮೆಗಳು ಇಲ್ಲಿ ಟಾ ನ್ಯೂಮಟಿಕ ವನ್ನು “ಆತ್ಮಿಕ ವರಗಳು” ಯಾ “ಆತ್ಮನ ವರಗಳು” ಎಂದು ತರ್ಜುಮಿಸಿವೆ.

ಈ ಹಿನ್ನೆಲೆಯೊಂದಿಗೆ, ಅಧ್ಯಾಯ 14ರ ಸಮಾಪ್ತಿಯ ನಿಕಟದಲ್ಲಿ, ಪೌಲನು ಪ್ರವಾದಿಸುವುದನ್ನು ಮತ್ತು ನ್ಯೂಮಟಿಕೊಸ್‌ ಅನ್ನು ಜೋಡಿಸುವುದನ್ನು ನಾವು ಗಮನಿಸುತ್ತೇವೆ. ವಚನ 1 ರಲ್ಲಿದ್ದಂತೆ, ಅವನು ಆತ್ಮನಿಂದುಂಟಾಗುವ ವರದಾನಿಸಲ್ಪಡುವಿಕೆಯನ್ನು ಅರ್ಥೈಸಿದ್ದನು ಎಂದು ಪೂರ್ವಾಪರವು ಸೂಚಿಸುತ್ತದೆ. ಆರ್‌. ಎಫ್‌. ವೆಯ್‌ಮೌತ್‌ರ, ನ್ಯೂ ಟೆಸ್ಟಮಂಟ್‌ ಇನ್‌ ಮಾಡರ್‌ನ್‌ ಸ್ಪೀಚ್‌ ಈ ತರ್ಜುಮೆಯನ್ನು ಅಂಗೀಕರಿಸುತ್ತದೆ: “ಯಾರೆ ಒಬ್ಬನು ತಾನು ಪ್ರವಾದಿಯೆಂದು ಯಾ ಆತ್ಮಿಕ ವರಗಳೊಂದಿಗಿನ ಮನುಷ್ಯನೆಂದು ಸ್ವತಃ ಎಣಿಸಿಕೊಳ್ಳುವುದಾದರೆ, ನಾನು ಈಗ ಬರೆಯುತ್ತಿರುವದನ್ನು ಕರ್ತನ ಆಜ್ಞೆಯೋಪಾದಿ ಅವನು ತಿಳಿದುಕೊಳ್ಳಲಿ.”

ಹೌದು, ಎಲ್ಲಾ ಕ್ರೈಸ್ತರು—ಅವರಿಗೆ ಪ್ರವಾದಿಸುವ ವರ ಇದ್ದಿರಲಿ ಯಾ ಆತ್ಮನ ಬೇರೆ ಯಾವುದೇ ವರ ಇರಲಿ—ಸಭೆಯಲ್ಲಿ ವಿಷಯಗಳು ಹೇಗೆ ನಿರ್ವಹಿಸಲ್ಪಡಬೇಕು ಎಂಬ ವಿಷಯದ ಕುರಿತು ಪೌಲನು ಬರೆದಿರುವ ಹಿತೋಪದೇಶವನ್ನು ಸ್ವೀಕರಿಸುವ ಮತ್ತು ಅನುಸರಿಸುವ ಅಗತ್ಯವಿತ್ತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ