ತಪ್ಪನ್ನು ಯಾಕೆ ಒಪ್ಪಿಕೊಳ್ಳಬೇಕು?
ಸೈನಿಕ ಇತಿಹಾಸದಲ್ಲಿಯೇ ಅದೊಂದು ಅತ್ಯಂತ ಅಸಾಮಾನ್ಯವಾದ ಸಮಾಗಮವಾಗಿತ್ತು. ಅಪಮಾನವೊಂದರ ಮೇಲೆ ಹಗೆ ತೀರಿಸಿಕೊಳ್ಳಲು ನಿಶ್ಚಿತರಾಗಿದ್ದ ಭಾವನಾವಶರಾಗದ 400 ಸೈನಿಕರನ್ನು, ಅಶಸ್ತ್ರಧಾರಿಯಾದ ಒಬ್ಬ ಸ್ತ್ರೀ ಪ್ರತಿನಿಧಿಯು, ಹಿಮ್ಮೆಟ್ಟುವಂತೆ ಮಾಡಿದಳು. ಕೇವಲ ಒಬ್ಬ ಶೂರ ಸ್ತ್ರೀಯ ಮೊರೆಗಳನ್ನು ಕೇಳಿದ ಬಳಿಕ, ಆ ಪುರುಷರ ನಾಯಕನು ತನ್ನ ನಿಯೋಗವನ್ನು ತೊರೆದುಬಿಟ್ಟನು.
ತದನಂತರ ಇಸ್ರಾಯೇಲಿನ ರಾಜನಾದ ದಾವೀದನು, ಆ ನಾಯಕನಾಗಿದ್ದನು. ದೇವರನ್ನು ಮೆಚ್ಚಿಸಲು ಅವನು ಬಯಸಿದರಿಂದ, ಸ್ತ್ರೀಯಾದ ಅಬೀಗೈಲಳಿಗೆ ಕಿವಿಗೊಟ್ಟನು. ಆಕೆಯ ಗಂಡನಾದ ನಾಬಾಲನ ಮೇಲೆ ಹಗೆ ತೀರಿಸಿಕೊಳ್ಳುವುದು ರಕ್ತಾಪರಾಧವನ್ನು ಫಲಿಸುವುದು ಎಂದು ಅವಳು ನಿಪುಣತೆಯಿಂದ ಅವನಿಗೆ ತೋರಿಸಿದಾಗ, ದಾವೀದನು ಉದ್ಗರಿಸಿದ್ದು: “ಈಹೊತ್ತು ನನ್ನನ್ನು ಎದುರುಗೊಳ್ಳುವದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್‌ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ.” ಒಂದು ಗಂಭೀರವಾದ ತಪ್ಪನ್ನು ಮಾಡುವುದರಿಂದ ಅವನನ್ನು ತಡೆಯಲು ದೇವರು ಅಬೀಗೈಲಳನ್ನು ಉಪಯೋಗಿಸಿದಕ್ಕಾಗಿ ದಾವೀದನು ಕೃತಜ್ಞತೆಯುಳ್ಳವನಾಗಿದ್ದನು.—1 ಸಮುವೇಲ 25:9-35.
ಒಂದು ಕೀರ್ತನೆಯಲ್ಲಿ, ದಾವೀದನು ಕೇಳಿದ್ದು: “ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾವನು?” (ಕೀರ್ತನೆ 19:12) ಅವನಂತೆ, ಅವುಗಳನ್ನು ನಮಗೆ ಯಾರಾದರೂ ಎತ್ತಿತೋರಿಸುವ ತನಕ ನಮ್ಮ ತಪ್ಪುಗಳ ಕುರಿತು ನಮಗೆ ಅರಿವಿರದೇ ಇರಬಹುದು. ಬೇರೆ ಸಂದರ್ಭಗಳಲ್ಲಿ ಹಿತಕರವಲ್ಲದ ಪರಿಣಾಮಗಳು ನಾವು ತಪ್ಪು ಮಾಡಿದ್ದೇವೆ, ಬುದ್ಧಿಹೀನರಾಗಿದ್ದೇವೆ, ಯಾ ನಿರ್ದಯಿಗಳಾಗಿದ್ದೇವೆಂದು ಗ್ರಹಿಸುವಂತೆ ನಮ್ಮನ್ನು ಒತ್ತಯಾಪಡಿಸುತ್ತವೆ.
ಎದೆಗುಂದುವ ಕಾರಣವಿಲ್ಲ
ನಾವೆಲ್ಲರು ತಪ್ಪುಗಳನ್ನು ಮಾಡಿದರೂ, ಇವುಗಳು ಎದೆಗುಂದಿಸುವ ಕಾರಣವಾಗಿರುವ ಅಗತ್ಯವಿಲ್ಲ. ವ್ಯವಹಾರದಲ್ಲಿ ನುರಿತವನಾದ ಎಡ್‌ವರ್ಡ್ ಜಾನ್ ಫೆಲ್ಪ್ ಗಮನಿಸಿದ್ದು: “ತಪ್ಪುಗಳನ್ನು ಮಾಡದ ಮನುಷ್ಯ ಸಾಮಾನ್ಯವಾಗಿ ಏನನ್ನೂ ಮಾಡುವುದಿಲ್ಲ.” ಕ್ರೈಸ್ತ ಶಿಷ್ಯ ಯಾಕೋಬನು ಹೇಳಿದ್ದು: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.” (ಯಾಕೋಬ 3:2) ನಡೆಯುವುದನ್ನು ಒಂದು ಮಗುವು ಎಂದೂ ಎಡವದೆ ಕಲಿಯುವುದೇ? ಇಲ್ಲ, ಯಾಕಂದರೆ ಮಗುವು ತಪ್ಪುಗಳಿಂದ ಕಲಿಯುತ್ತದೆ ಮತ್ತು ಸಮತೂಕವನ್ನು ಗಳಿಸುವ ತನಕ ಪ್ರಯತ್ನಿಸುತ್ತಾ ಇರುತ್ತದೆ.
ಸಮತೂಕದ ಜೀವಿತಗಳನ್ನು ನಡೆಸಲು, ನಮ್ಮ ತಪ್ಪುಗಳಿಂದ ಮತ್ತು ಇತರರ ತಪ್ಪುಗಳಿಂದ ಕಲಿಯುವ ಅಗತ್ಯ ಕೂಡ ನಮಗಿದೆ. ನಮ್ಮ ಪರಿಸ್ಥಿತಿಗಳಿಗೆ ಸರಿಹೊಂದುವ ಅನೇಕರ ಅನುಭವಗಳನ್ನು ಬೈಬಲ್ ವರದಿಸುವುದರಿಂದ, ಅವರು ಮಾಡಿದ್ದ ಅದೇ ತಪ್ಪುಗಳನ್ನು ನಾವು ಮಾಡುವುದರಿಂದ ತಡೆಯಲ್ಪಡುವಂತೆ ಸಹಾಯಿಸಲ್ಪಡಸಾಧ್ಯವಿದೆ. ಹಾಗಾದರೆ, ಅವರ ತಪ್ಪುಗಳಿಂದ ನಾವು ಏನನ್ನು ಕಲಿಯಬಲ್ಲೆವು?
ದೀನತೆ ಪ್ರಾಮುಖ್ಯವಾದೊಂದು ಗುಣ
ತಪ್ಪುಗಳನ್ನು ಮಾಡುವವರೆಲ್ಲರನ್ನು ದೇವರು ಖಂಡಿಸುವುದಿಲ್ಲ, ಆದರೆ ಸಾಧ್ಯವಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ನಿರಾಕರಿಸುವವರನ್ನು ಆತನು ನ್ಯಾಯತೀರಿಸುತ್ತಾನೆ ಎಂಬುದು ಒಂದು ಪಾಠವಾಗಿದೆ. ಅಮಾಲೇಕ್ಯರ ನಾಶನದ ಕುರಿತು ಯೆಹೋವನ ಉಪದೇಶಗಳಿಗೆ ಇಸ್ರಾಯೇಲಿನ ಅರಸನಾದ ಸೌಲನು ಅವಿಧೇಯನಾದನು. ಪ್ರವಾದಿಯಾದ ಸಮುವೇಲನಿಂದ ಎದುರಿಸಲ್ಪಟ್ಟಾಗ, ಪ್ರಥಮವಾಗಿ ವಿಷಯಗಳನ್ನು ಅಲ್ಪವಾಗಿ ಮಾಡಲು ಮತ್ತು ತದನಂತರ ಇತರರನ್ನು ದೂಷಿಸಲು ಸೌಲನು ಪ್ರಯತ್ನಿಸಿದನು. ತಪ್ಪನ್ನು ಒಪ್ಪಿಕೊಳ್ಳುವ ಬದಲು ತನ್ನ ಜನರಿಂದ ಹೀಯಾಳಿಸಲ್ಪಡುವುದರ ಕುರಿತು ಅವನು ಹೆಚ್ಚು ಕಳವಳಗೊಂಡಿದ್ದನು. ಆದಕಾರಣ, ‘ಯೆಹೋವನು ಅವನನ್ನು ಅರಸುತನದಿಂದ ತಳ್ಳಿಬಿಟ್ಟನು.’—1 ಸಮುವೇಲ 15:20-23, 30.
ಸೌಲನ ಉತ್ತರಾಧಿಕಾರಿಯಾದ ದಾವೀದನು, ಗಂಭೀರವಾದ ಪಾಪಗಳನ್ನು ಮಾಡಿದರೂ, ಅವನು ದೀನತೆಯಿಂದ ಬುದ್ಧಿವಾದ ಮತ್ತು ಶಿಕ್ಷೆಯನ್ನು ಸ್ವೀಕರಿಸಿದ ಕಾರಣ ಕ್ಷಮಿಸಲ್ಪಟ್ಟನು. ದಾವೀದನ ದೀನತೆ ಅಬೀಗೈಲಳ ಮಾತುಗಳನ್ನು ಆಲಿಸುವಂತೆ ಅವನನ್ನು ಪ್ರೇರೇಪಿಸಿತು. ಅವನ ಸೈನ್ಯವು ಯುದ್ಧಕ್ಕಾಗಿ ಸಿದ್ಧವಾಗಿತ್ತು. ಆದರೂ, ಅವನ ಸೈನ್ಯದ ಮುಂದೆ, ತಾನು ದುಡುಕಿನ ನಿರ್ಣಯವನ್ನು ಮಾಡಿದ್ದನೆಂದು ದಾವೀದನು ಒಪ್ಪಿಕೊಂಡನು. ಅವನ ಜೀವನದ ಉದ್ದಕ್ಕೂ, ಅಂತಹ ದೀನತೆಯು ಕ್ಷಮಾಪಣೆಯನ್ನು ಯಾಚಿಸಲು ಮತ್ತು ಅವನ ಹೆಜ್ಜೆಗಳನ್ನು ಸರಿಪಡಿಸಲು ದಾವೀದನಿಗೆ ಸಹಾಯ ಮಾಡಿತು.
ವಿವೇಕಶೂನ್ಯ ಹೇಳಿಕೆಗಳನ್ನು ಸರಿಪಡಿಸುವಂತೆ ಕೂಡ ದೀನತೆಯು ಯೆಹೋವನ ಸೇವಕರನ್ನು ಪ್ರೇರೇಪಿಸುತ್ತದೆ. ಹಿರೀಸಭೆಯ ಮುಂದೆ ನ್ಯಾಯವಿಚಾರಣೆಯ ಒಂದು ಸಮಯದಲ್ಲಿ, ಪೌಲನನ್ನು ಬಾಯ ಮೇಲೆ ಹೊಡೆಯುವಂತೆ ಮಹಾ ಯಾಜಕನು ಆಜ್ಞೆಯನ್ನು ವಿಧಿಸಿದನು. ಅಪೊಸ್ತಲನು ಎದುರುತ್ತರಿಸಿದ್ದು: “ಎಲೈ ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು.” (ಅ. ಕೃತ್ಯಗಳು 23:3) ಬಲಹೀನ ನೇತ್ರದೃಷ್ಟಿಯಿಂದಾಗಿ ಬಹುಶಃ, ಹತ್ತಿರದಲ್ಲಿ ನಿಂತಿರುವವರು, “ದೇವರು ನೇಮಿಸಿದ ಮಹಾಯಾಜಕನನ್ನು ನೀನು ಬೈಯುತ್ತೀಯಾ?” ಎಂದು ಕೇಳುವ ತನಕ ತಾನು ಯಾರನ್ನು ಉದ್ದೇಶಿಸಿ ಮಾತಾಡಿದೆನೆಂದು ಪೌಲನು ಗ್ರಹಿಸಲಿಲ್ಲ. ಆಗ, “ಸಹೋದರರೇ, ಮಹಾಯಾಜಕನೆಂದು ನನಗೆ ತಿಳಿಯಲಿಲ್ಲ. ನಿನ್ನ ಜನರಲ್ಲಿ ಅಧಿಪತಿಯಾಗಿರುವವನ ವಿಷಯವಾಗಿ ಕೆಟ್ಟದ್ದೇನೂ ಆಡಬಾರದೆಂದು ಬರೆದದೆಯಷ್ಟೆ,” ಎಂದು ಹೇಳುತ್ತಾ ಪೌಲನು ಕೂಡಲೇ ತನ್ನ ತಪ್ಪನ್ನು ಅಂಗೀಕರಿಸಿದನು. (ಅ. ಕೃತ್ಯಗಳು 23:4, 5; ವಿಮೋಚನಕಾಂಡ 22:28) ಹೌದು, ಪೌಲನು ದೀನನಾಗಿ ತನ್ನ ತಪ್ಪನ್ನು ಒಪ್ಪಿಕೊಂಡನು.
ಅವರು ತಪ್ಪುಗಳನ್ನು ಒಪ್ಪಿಕೊಂಡರು
ಕೆಲವರು ಅವರ ತಪ್ಪಾದ ಯೋಚನಾ ಮಾರ್ಗವನ್ನು ಬದಲಾಯಿಸಿದರೆಂದು ಕೂಡ ಬೈಬಲ್ ತೋರಿಸುತ್ತದೆ. ಉದಾಹರಣೆಗೆ, ಕೀರ್ತನೆಗಾರ ಆಸಾಫನನ್ನು ಪರಿಗಣಿಸಿರಿ. ದುಷ್ಟ ಜನರು ಚೆನ್ನಾಗಿ ಬಾಳುತ್ತಿದ್ದರೆಂದು ತೋರಿದ ಕಾರಣ, ಅವನು ಅಂದದ್ದು: “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ . . . ವ್ಯರ್ಥವೇ ಸರಿ.” ದೇವರ ಆಲಯಕ್ಕೆ ಹೋಗಿ ಶುದ್ಧ ಆರಾಧನೆಯ ಪ್ರಯೋಜನಗಳ ಕುರಿತು ಮನನ ಮಾಡಿದ ತರುವಾಯ ಆಸಾಫನು ಸ್ಪಷ್ಟವಾಗಿಗಿ ಯೋಚಿಸಲು ಆರಂಭಿಸಿದನು. ಅಷ್ಟೇ ಅಲ್ಲದೆ ಅವನು ತನ್ನ ತಪ್ಪನ್ನು ಕೀರ್ತನೆ 73 ರಲ್ಲಿ ಒಪ್ಪಿಕೊಂಡನು.
ತಪ್ಪು ಯೋಚನೆಯು ತನ್ನ ದೃಷ್ಟಿಕೋನವನ್ನು ಮಬ್ಬಾಗಿಸುವಂತೆ ಯೋನನು ಕೂಡ ಅನುಮತಿಸಿದನು. ನಿನೆವೆಯಲ್ಲಿ ಸಾರಿದ ಬಳಿಕ, ಆ ನಗರದ ನಿವಾಸಿಗಳ ಉಳಿಸುವಿಕೆಯ ಬದಲು ಅವನು ವೈಯಕ್ತಿಕ ಸಮರ್ಥನೆಯ ಕುರಿತು ಚಿಂತಿತನಾಗಿದ್ದನು. ಅವರ ಪಶ್ಚಾತ್ತಾಪದ ಕಾರಣ ಯೆಹೋವನು ನಿನೆವೆಯ ನಿವಾಸಿಗಳನ್ನು ದಂಡಿಸದೆ ಇದ್ದಾಗ, ಯೋನನು ಅಸಂತೋಷಗೊಂಡನು, ಆದರೆ ದೇವರು ಅವನನ್ನು ತಿದ್ದದನು. ತನ್ನ ದೃಷ್ಟಿಕೋನವು ತಪ್ಪಾಗಿತ್ತೆಂದು ಯೋನನು ಗ್ರಹಿಸಿದನು ಯಾಕಂದರೆ ಅವನ ಹೆಸರನ್ನು ಹೊಂದಿರುವ ಬೈಬಲ್ ಪುಸ್ತಕವು ಅವನ ತಪ್ಪುಗಳನ್ನು ಪ್ರಾಮಾಣಿಕವಾಗಿ ಅಂಗೀಕರಿಸುತ್ತದೆ.—ಯೋನ 3:10–4:11.
ಸೈತಾನನಲ್ಲ ಆದರೆ ಯೆಹೋವ ದೇವರು ತನ್ನ ಸಂಕಟವನ್ನು ಉಂಟುಮಾಡುತ್ತಿದ್ದನೆಂದು ತಪ್ಪಾಗಿ ಊಹಿಸುತ್ತಾ, ಮನುಷ್ಯನಾದ ಯೋಬನು ಕಷ್ಟಾನುಭವಗಳಿಗೆ ತಾನು ಅರ್ಹನಾಗಿಲ್ಲ ಎಂದು ರುಜುಪಡಿಸಲು ಪ್ರಯತ್ನಿಸಿದನು. ಪರೀಕ್ಷೆಯ ಕೆಳಗೆ ದೇವರ ಸೇವಕರು ಆತನಿಗೆ ನಿಷ್ಠಾವಂತರಾಗಿ ಉಳಿಯುವರೊ? ಎಂಬ ಮಹತ್ತರವಾದ ವಿವಾದಾಂಶದ ಅರಿವು ಅವನಿಗಿರಲಿಲ್ಲ. (ಯೋಬ 1:9-12) ಎಲೀಹು ಮತ್ತು ಆಮೇಲೆ ಯೆಹೋವನು ಅವನ ತಪ್ಪನ್ನು ನೋಡುವಂತೆ ಯೋಬನಿಗೆ ಸಹಾಯ ಮಾಡಿದ ಬಳಿಕ, ಅವನು ಒಪ್ಪಿಕೊಂಡಿದ್ದು: “ನಾನು ತಿಳಿಯದ ಸಂಗತಿಗಳನ್ನೂ . . . ಮಾತಾಡಿದ್ದೇನೆ. ಆದಕಾರಣ [ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತಾಪ್ತಪಡುತ್ತೇನೆ.”—ಯೋಬ 42:3, 6.
ತಪ್ಪುಗಳನ್ನು ಒಪ್ಪಿಕೊಳ್ಳುವುದು ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಲು ನಮಗೆ ಸಹಾಯ ಮಾಡುತ್ತದೆ. ಹಿಂದಿನ ಉದಾಹರಣೆಗಳು ತೋರಿಸಿದಂತೆ, ನಾವು ಅವುಗಳನ್ನು ಒಪ್ಪಿಕೊಂಡರೆ ಮತ್ತು ತಪ್ಪಾದ ಯೋಚನೆಯನ್ನು, ವಿವೇಕಶೂನ್ಯ ಮಾತುಗಳನ್ನು, ಯಾ ಮೂರ್ಖ ಕ್ರಿಯೆಗಳನ್ನು ಸರಿಪಡಿಸಲು ನಮ್ಮಿಂದ ಸಾಧ್ಯವಾದದ್ದನ್ನು ನಾವು ಮಾಡಿದರೆ, ಆತನು ನಮ್ಮನ್ನು ನಮ್ಮ ತಪ್ಪುಗಳಿಗಾಗಿ ಖಂಡಿಸುವುದಿಲ್ಲ. ಈ ಜ್ಞಾನವನ್ನು ನಾವು ಹೇಗೆ ಅನ್ವಯಿಸಸಾಧ್ಯವಿದೆ?
ನಮ್ಮ ತಪ್ಪುಗಳ ಕುರಿತು ಏನನ್ನಾದರೂ ಮಾಡುವುದು
ಒಂದು ತಪ್ಪನ್ನು ದೀನತೆಯಿಂದ ಅಂಗೀಕರಿಸುವುದು ಮತ್ತು ಅದರ ಕುರಿತು ಏನನ್ನಾದರೂ ಮಾಡುವುದು ಕುಟುಂಬ ಸಂಬಂಧಗಳನ್ನು ಬಲಪಡಿಸಬಲ್ಲವು. ಉದಾಹರಣೆಗೆ, ಬಹುಶಃ ಆಯಾಸ ಯಾ ಕಿರುಕುಳದಿಂದಾಗಿ, ತಂದೆಯು ಅವನ ಮಗುವನ್ನು ಶಿಕ್ಷಿಸುವುದರಲ್ಲಿ ಕಠೋರನಾಗಿರಬಹುದು. ಈ ತಪ್ಪನ್ನು ಸರಿಪಡಿಸಲು ನಿರಾಕರಿಸುವುದು ಕೆಟ್ಟ ಪರಿಣಾಮಗಳನ್ನು ಬೀರಬಲ್ಲದು. ಅಂತೆಯೇ, ಅಪೊಸ್ತಲ ಪೌಲನು ಬರೆದದ್ದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲ ಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನೂ ಸಾಕಿಸಲಹಿರಿ.”—ಎಫೆಸ 6:4.
ಪೌಲನೆಂಬ ಒಬ್ಬ ಯುವ ಕ್ರೈಸ್ತನು ಆದರದಿಂದ ಜ್ಞಾಪಿಸಿಕೊಳ್ಳುತ್ತಾನೆ: “ಅತಿಯಾಗಿ ಪ್ರತಿಕ್ರಿಯಿಸಿದ್ದರೆಂದು ತಮಗೆ ಅನಿಸಿದರೆ ತಂದೆಯು ಯಾವಾಗಲೂ ಕ್ಷಮೆಯಾಚಿಸಿದರು. ಅವರನ್ನು ಗೌರವಿಸಲು ಅದು ನನಗೆ ಸಹಾಯ ಮಾಡಿತು.” ಪ್ರತ್ಯೇಕವಾದ ಒಂದು ಸನ್ನಿವೇಶದಲ್ಲಿ ಕ್ಷಮಾಯಾಚನೆಯು ಅಗತ್ಯವೊ ಇಲ್ಲವೊ ಎಂಬುದು ವೈಯಕ್ತಿಕ ನಿರ್ಣಯಕ್ಕಾಗಿರುವ ವಿಷಯವಾಗಿದೆ. ಆದರೂ, ಭವಿಷ್ಯತ್ತಿನಲ್ಲಿ ಅಂತಹ ತಪ್ಪುಗಳನ್ನು ತೊರೆಯುವ ಶ್ರದ್ಧಾಪೂರ್ವಕ ಪ್ರಯತ್ನಗಳಿಂದ ಕ್ಷಮಾಯಾಚನೆಗಳು ಹಿಂಬಾಲಿಸಲ್ಪಡಬೇಕು.
ಸಂಕಟವನ್ನು ಉಂಟುಮಾಡುವ ಒಂದು ತಪ್ಪನ್ನು ಒಬ್ಬ ಗಂಡ ಯಾ ಒಬ್ಬಾಕೆ ಹೆಂಡತಿಯು ಮಾಡಿದರೆ, ಆಗೇನು? ಪ್ರಾಮಾಣಿಕ ಒಪ್ಪಿಕೊಳ್ಳುವಿಕೆ, ಹೃತ್ಪೂರ್ವಕ ಕ್ಷಮಾಯಾಚನೆ, ಮತ್ತು ಕ್ಷಮಿಸುವ ಒಂದು ಆತ್ಮವು ಅವರ ಪ್ರೀತಿಪರ ಸಂಬಂಧವನ್ನು ಕಾಪಾಡುವುದರಲ್ಲಿ ಸಹಾಯಮಾಡುವುದು. (ಎಫೆಸ 5:33; ಕೊಲೊಸ್ಸೆ 3:13) ತನ್ನ 50 ಗಳಲ್ಲಿರುವ ದೃಢವಾದ ಸ್ವಭಾವವಿರುವ ಸ್ಪೆಯಿನ್‌ನ ಒಬ್ಬ ಮನುಷ್ಯನಾದ ಕೇಸೂಸ್, ತನ್ನ ಹೆಂಡತಿಯಾದ ಅಲ್‌ಬಿನಾಳಲ್ಲಿ ಕ್ಷಮೆಯಾಚಿಸದೆ ಇರುವಷ್ಟು ಅಹಂಕಾರಿಯಾಗಿಲ್ಲ. “ನಾವು ಒಬ್ಬರನ್ನೊಬ್ಬರು ಮನನೋಯಿಸಿದಾಗ ಕ್ಷಮೆಯಾಚಿಸುವ ರೂಢಿ ನಮ್ಮಲ್ಲಿದೆ,” ಎಂದು ಅವಳು ಹೇಳುತ್ತಾಳೆ. “ಇದು ನಾವು ಪರಸ್ಪರವಾಗಿ ಪ್ರೀತಿಯಲ್ಲಿ ಸಹಕರಿಸುವಂತೆ ಸಹಾಯ ಮಾಡುತ್ತದೆ.”
ಹಿರಿಯನೊಬ್ಬನು ತಪ್ಪೊಂದನ್ನು ಮಾಡಿದಾಗ
ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ಯಥಾರ್ಥವಾದ ಕ್ಷಮಾಯಾಚನೆಗಳನ್ನು ಮಾಡುವುದು ಕ್ರೈಸ್ತ ಹಿರಿಯರಿಗೆ, ಏಕಮತರಾಗಿ ಒಟ್ಟಾಗಿ ಕೆಲಸ ಮಾಡಲು ಮತ್ತು ‘ಒಬ್ಬರು ಇನ್ನೊಬ್ಬರಿಗೆ ಮಾನಮರ್ಯಾದೆ ತೋರಿಸುವಲ್ಲಿ’ ಕೂಡ ಸಹಾಯಮಾಡುವುದು. (ರೋಮಾಪುರ 12:10) ಸಭೆಯಲ್ಲಿ ತನ್ನ ಅಧಿಕಾರವನ್ನು ಇದು ಕಡೆಗಣಿಸುವುದೆಂದು ಅವನು ಹೆದರುವ ಕಾರಣದಿಂದ ಒಬ್ಬ ಹಿರಿಯನು ತಪ್ಪನ್ನು ಒಪ್ಪಿಕೊಳ್ಳುವುದರಿಂದ ಹಿಂಜರಿಯಬಹುದು. ಹಾಗಿದ್ದರೂ, ತಪ್ಪಿಲ್ಲವೆಂದು ತೋರಿಸಲು ಪ್ರಯತ್ನಿಸುವುದು, ಕಡೆಗಣಿಸುವುದು, ಯಾ ತಪ್ಪನ್ನು ಅಲ್ಪವೆಂದು ತೋರಿಸುವುದು, ಅವನ ಮೇಲ್ವಿಚಾರಣೆಯಲ್ಲಿ ಇತರರು ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡುವ ಸಾಧ್ಯತೆಯು ಇದೆ. ಬಹುಶಃ ಯಾವುದೊ ಅವಿಚಾರದ ಹೇಳಿಕೆಗಾಗಿ ದೀನತೆಯಿಂದ ಕ್ಷಮೆಯಾಚಿಸುವ ಒಬ್ಬ ಪ್ರೌಢ ಸಹೋದರನು, ಇತರರ ಗೌರವವನ್ನು ಸಂಪಾದಿಸುತ್ತಾನೆ.
ಹಿರಿಯರ ಒಂದು ದೊಡ್ಡ ಕೂಟದ ಮೇಲೆ ಸರ್ಕಿಟ್ ಮೇಲ್ವಿಚಾರಕನು ಅಧ್ಯಕ್ಷತೆ ನಡೆಸುತ್ತಿದ್ದಾಗ, ಕೂಟವೊಂದನ್ನು ಹೇಗೆ ನಡೆಸಬೇಕೆಂಬುದರ ಕುರಿತು ತಪ್ಪಾದ ಹೇಳಿಕೆಯನ್ನು ಮಾಡಿದ ಒಂದು ಸಂದರ್ಭವನ್ನು ಸ್ಪೆಯಿನ್‌ನಲ್ಲಿರುವ ಒಬ್ಬ ಹಿರಿಯ, ಫರ್ನಾಂಡೊ ಜ್ಞಾಪಿಸಿಕೊಳ್ಳುತ್ತಾನೆ. ಅವನು ಹೇಳಿದ್ದನ್ನು ಒಬ್ಬ ಸಹೋದರನು ಗೌರವದಿಂದ ತಿದ್ದಿದಾಗ, ಸರ್ಕಿಟ್ ಮೇಲ್ವಿಚಾರಕನು ಕೂಡಲೇ ತಾನು ತಪ್ಪು ಮಾಡಿದೆನೆಂದು ಅಂಗೀಕರಿಸಿದನು. ಫರ್ನಾಂಡೊ ಜ್ಞಾಪಿಸಿಕೊಳ್ಳುವುದು: “ಆ ಎಲ್ಲಾ ಹಿರಿಯರ ಮುಂದೆ ತನ್ನ ತಪ್ಪನ್ನು ಅವರು ಒಪ್ಪಿಕೊಂಡದ್ದನ್ನು ನಾನು ನೋಡಿದಾಗ, ಅದು ನನ್ನನ್ನು ಬಹಳವಾಗಿ ಪ್ರಭಾವಿಸಿತು. ಆ ಕ್ಷಮಾಯಾಚನೆಯ ಬಳಿಕ ನಾನು ಅವರನ್ನು ಇನ್ನೂ ಹೆಚ್ಚಾಗಿ ಗೌರವಿಸಿದೆ. ನನ್ನ ಸ್ವಂತ ಬಲಹೀನತೆಗಳನ್ನು ಗುರುತಿಸುವುದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಅವರ ಮಾದರಿ ನನಗೆ ಕಲಿಸಿತು.”
ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ಚುರುಕಾಗಿರ್ರಿ
ಕ್ಷಮಾಯಾಚನೆಯು ವಿಶೇಷವಾಗಿ ತಕ್ಷಣ ಮಾಡಲ್ಪಡುವುದಾದರೆ, ಸಾಮಾನ್ಯವಾಗಿ ಶ್ಲಾಘಿಸಲ್ಪಡುತ್ತದೆ. ವಾಸ್ತವದಲ್ಲಿ, ತಪ್ಪನ್ನು ತತ್‌ಕ್ಷಣ ಒಪ್ಪಿಕೊಂಡಷ್ಟು ಉತ್ತಮ. ಇದನ್ನು ದೃಷ್ಟಾಂತಿಸಲು: ವಿಶ್ವದ ಕೇಂದ್ರ ಭೂಮಿಯಾಗಿಲ್ಲ ಎಂಬುದನ್ನು ಪ್ರತಿಪಾದಿಸಿದ್ದಕ್ಕಾಗಿ, ಗ್ಯಾಲಿಲಿಯೊನನ್ನು ದಂಡಿಸುವುದರಲ್ಲಿ 360 ವರ್ಷಗಳ ಹಿಂದೆ ಮಠೀಯ ವಿಚಾರಣೆಯು “ತಪ್ಪಾಗಿ” ಕಾರ್ಯಮಾಡಿತ್ತೆಂದು, ಅಕ್ಟೋಬರ 31, 1992 ರಂದು, ಪೋಪ್ II ನೆಯ ಜಾನ್ ಪೌಲ್ ಒಪ್ಪಿಕೊಂಡರು. ಆದರೂ, ಕ್ಷಮಾಯಾಚನೆಯನ್ನು ಇಷ್ಟು ದೀರ್ಘ ಕಾಲದ ವರೆಗೆ ತಳ್ಳಿಹಾಕುವುದು ಅದರ ಮೌಲ್ಯವನ್ನು ಕಡಿಮೆಗೊಳಿಸುತ್ತದೆ.
ಅದೇ ವಿಷಯವು ವೈಯಕ್ತಿಕ ಸಂಬಂಧಗಳಲ್ಲಿ ಸತ್ಯವಾಗಿದೆ. ನಿರ್ದಯ ಮಾತು ಯಾ ಕ್ರಿಯೆಯ ಮೂಲಕ ಉಂಟಾದ ಒಂದು ಗಾಯವನ್ನು ತತ್‌ಕ್ಷಣ ಮಾಡಲಾದ ಒಂದು ಕ್ಷಮಾಯಾಚನೆಯು ಗುಣಪಡಿಸಬಲ್ಲದು. ಸಮಾಧಾನ ಮಾಡುವುದರಲ್ಲಿ ತಡೆಯನ್ನು ಮಾಡಬಾರದೆಂದು ಯೇಸು ನಮ್ಮನ್ನು ಪ್ರಚೋದಿಸಿದನು. ಅವನು ಅಂದದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.” (ಮತ್ತಾಯ 5:23, 24) ಅನೇಕ ಬಾರಿ ಶಾಂತಿಭರಿತ ಸಂಬಂಧಗಳನ್ನು ಪುನಃಸ್ಥಾಪಿಸುವುರ ಅರ್ಥವು, ನಾವು ವಿಷಯಗಳನ್ನು ತಪ್ಪಾಗಿ ನಿರ್ವಹಿಸಿದ್ದೇವೆಂದು ಒಪ್ಪಿಕೊಳ್ಳುವುದನ್ನು ಮತ್ತು ಕ್ಷಮೆಯನ್ನು ಕೇಳುವುದನ್ನು ಆವಶ್ಯಪಡಿಸುತ್ತದೆ. ಇದನ್ನು ಮಾಡಲು ನಾವು ಕಾದಷ್ಟು ಅದು ಹೆಚ್ಚು ಕಷ್ಟಕರವಾಗುತ್ತದೆ.
ತಪ್ಪುಗಳನ್ನು ಒಪ್ಪಿಕೊಳ್ಳಲು ಸಂತೋಷಿತರು
ಸೌಲ ಮತ್ತು ದಾವೀದನ ಮಾದರಿಗಳು ದೃಷ್ಟಾಂತಿಸುವಂತೆ, ನಮ್ಮ ತಪ್ಪುಗಳನ್ನು ನಾವು ನಿರ್ವಹಿಸುವ ವಿಧಾನವು ನಮ್ಮ ಜೀವಿತಗಳನ್ನು ಪ್ರಭಾವಿಸಬಲ್ಲದು. ಸೌಲನು ಹಟಮಾರಿತನದಿಂದ ಬುದ್ಧಿವಾದವನ್ನು ತಡೆದನು, ಮತ್ತು ಅವನ ತಪ್ಪುಗಳು ವೃದ್ಧಿಯಾಗುತ್ತಾ, ದೇವರ ಅಪ್ರಸನ್ನತೆಯಿಂದ ಅವನ ಮರಣದಲ್ಲಿ ಅದು ಅಂತಿಮವಾಗಿ ತುತ್ತತುದಿಗೆ ಏರಿತು. ದಾವೀದನ ತಪ್ಪುಗಳು ಮತ್ತು ಪಾಪಗಳ ಹೊರತೂ, ಅವನು ಪಶ್ಚಾತ್ತಾಪದಿಂದ ತಿದ್ದುವಿಕೆಯನ್ನು ಸ್ವೀಕರಿಸಿದನು ಮತ್ತು ಯೆಹೋವನಿಗೆ ನಂಬಿಗಸ್ತನಾಗಿ ಉಳಿದನು. (ಹೋಲಿಸಿ ಕೀರ್ತನೆ 32:3-5) ಅದು ನಮ್ಮ ಬಯಕೆಯಾಗಿಲವ್ಲೆ?
ಅದು ದೇವರಿಂದ ಕ್ಷಮಿಸಲ್ಪಟ್ಟಿದೆ ಎಂಬುದನ್ನು ತಿಳಿದುಕೊಳ್ಳುವುದೇ ಒಂದು ತಪ್ಪನ್ನು ಒಪ್ಪಿಕೊಳ್ಳುವ ಯಾ ಸರಿಪಡಿಸಿಕೊಳ್ಳುವ ಅಥವಾ ಪಾಪದ ಕುರಿತು ಪಶ್ಚಾತಾಪ್ತಪಡುವುದರ ಅತ್ಯಂತ ಮಹಾ ಪ್ರತಿಫಲವಾಗಿದೆ. “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು,” ಎಂದು ದಾವೀದನು ಹೇಳಿದನು. (ಕೀರ್ತನೆ 32:1, 2) ಹಾಗಾದರೆ, ತಪ್ಪನ್ನು ಒಪ್ಪಿಕೊಳ್ಳುವುದು ಎಷ್ಟು ವಿವೇಕಪ್ರದವು!
[ಪುಟ 29 ರಲ್ಲಿರುವ ಚಿತ್ರ]
ನಡೆಯುವುದನ್ನು ಎಂದೂ ಎಡವದೆ ಒಂದು ಮಗುವು ಕಲಿಯುವುದೇ?