ಯೇಸು ಹಿಮದಲ್ಲಿ ಜನಿಸಿದನೋ?
“ಭಾರಿ ಹಿಮ ಯೆರೂಸಲೇಮನ್ನು ಚಲನಾಹೀನವಾಗಿಸುತ್ತದೆ,” ಮತ್ತು “ಹಿಮದ ಮುತ್ತಿಗೆಯು ಉತ್ತರವನ್ನು ತತ್ತರಗೊಳಿಸುತ್ತದೆ.” ಈ ಶತಮಾನದ ಇಸ್ರಾಯೇಲಿನ ಅತಿ ಕಠಿನ ಚಳಿಗಾಲಗಳಲ್ಲಿ ಒಂದಾಗಿ ಪರಿಣಮಿಸಿದ ಚಳಿಗಾಲದ ಕುರಿತು ದ ಜೆರೂಸಲೇಮ್ ಪೋಸ್ಟ್ ನಲ್ಲಿನ ಇಂಥ ಶಿರೋನಾಮಗಳು, 1992 ರಲ್ಲಿ ಇಸ್ರಾಯೇಲ್ಯ ಓದುಗರಿಗೆ ಸಾಮಾನ್ಯ ಘಟನೆಯಾಯಿತು.
ಜನವರಿಯಷ್ಟಕ್ಕೆ ಹರ್ಮೋನ್ ಪರ್ವತದ ಶಿಖರವು 22 ರಿಂದ 40 ಅಡಿಗಳಷ್ಟು ಹಿಮದಿಂದ ಆವರಿಸಲ್ಪಟ್ಟಿತ್ತು, ಮತ್ತು ಚಳಿಗಾಲವು ಕೊನೆಗೊಂಡಿರಲಿಲ್ಲ. ಗೋಲನ್ ಮೇಲ್ನಾಡು ಮತ್ತು ಎತ್ತರದ ಗಲಿಲಾಯದಿಂದ ಯೆರೂಸಲೇಮ್ ಮತ್ತು ಸಮೀಪದ ಬೇತ್ಲೆಹೇಮ್‌ನ್ನು (ಮುಖ ಪುಟದಲ್ಲಿ ಕಾಣುತ್ತದೆ) ದಾಟಿ, ದಕ್ಷಿಣದ ನೆಗೆಬಿನಲ್ಲಿಯೂ, ಸತತವಾಗಿ ಪ್ರತಿನಿತ್ಯದ ಇಸ್ರೇಲ್ಯ ಜೀವನ ಮತ್ತು ದಿನಚರಿಯು ಬೆಡಗಿನ ಮತ್ತು ಕೋಮಲ, ಆದರೂ ಬಲಿಷ್ಠ, ಹಿಮಗಾಲದಿಂದ ಚಲನಾಹೀನವಾಗಿದ್ದವು. ಜೆರೂಸಲೇಮ್ ಪೋಸ್ಟ್‌ನ ಒಂದು ಲೇಖನವು ಹೇಳಿದ್ದು: “ಕಳೆದ ವಾರ ಕಟ್ಯೂಷ ರಾಕೆಟ್‌ಗಳ ಮಳೆಯು ವಸಾಹಾತುಗಳನ್ನು ಮುಚ್ಚಲು ಮತ್ತು ನಿವಾಸಿಗಳನ್ನು ಅವರ ಮನೆಗಳಲ್ಲಿ ಕದಲದೆ ಉಳಿಯುವಂತೆ ಮಾಡಲು ತಪ್ಪಿದ್ದನ್ನು, ನಿನ್ನೆ ಭಾರಿ ಹಿಮಪಾತವು ಮಾಡುವುದರಲ್ಲಿ ಯಶಸ್ವಿಯಾಯಿತು.”
ಬಿರುಸಾದ ಚಳಿಗಾಲವು ನಗರ ನಿವಾಸಿಗಳಿಗೆ ಮಾತ್ರವಲ್ಲದೆ, ಇತರರಿಗೂ ಹಾವಳಿಯನ್ನು ತಂದಿತು. ನೂರಾರು ದನ ಮತ್ತು ಕರುಗಳು, ಹಾಗೂ ಸಾವಿರಾರು ಕೋಳಿಗಳು, ರಾತ್ರಿಯ ವೇಳೆಯಲ್ಲಿ ಶಾಖವು ಘನಿಸುವ ತಾಪಮಾನಕ್ಕೆ ಇಳಿಯಲ್ಪಟ್ಟಾಗ, ಸತ್ತು ನೀರ್ಗಲ್ಲಾದುವು. ಹಿಮವು ಸಾಕಾಗಲಾರದೋ ಎಂಬಂತೆ, ಭಾರಿ, ಶೀತಲ ಮಳೆಗಳು ಕೂಡ ಆಹುತಿಯನ್ನು ತೆಗೆದುಕೊಂಡವು. ಒಂದು ದಿನ, ಎರಡು ಯುವ ಕುರುಬ ಹುಡುಗರು, ಕ್ಷಣ ನೆರೆಯಲ್ಲಿ ಸಿಲುಕಿದ ತಮ್ಮ ಕುರಿಗಳಲ್ಲಿ ಹೆಚ್ಚಿನವುಗಳನ್ನು ರಕ್ಷಿಸಲು ಪ್ರಾಯಶಃ ಅತ್ಯಂತ ಮೈಮರೆತ ಪ್ರಯತ್ನವನ್ನು ಮಾಡುವಾಗ, ತಾವೇ ಕೊಚ್ಚಿ ಕೊಂಡೊಯ್ಯಲ್ಪಟ್ಟು ಹುಚ್ಚು ಹೊಳೆಯಲ್ಲಿ ಮುಳುಗಿ ಸತ್ತರು.
ಇದು ಮಧ್ಯ ಪೂರ್ವ ಚಳಿಗಾಲದ ನಮೂನೆಯಲ್ಲದಿದ್ದರೂ, ಇಸ್ರಾಯೇಲಿನ ಪತ್ರಿಕೆ ಇರೆಟ್ಸ್ ವರದಿಸಿದ್ದು: “ಇಸ್ರಾಯೇಲಿನ ಪ್ರದೇಶದಲ್ಲಿ ಕಳೆದ 130 ವರುಷಗಳಲ್ಲಿ ಸಂಗ್ರಹಿತ ಮತ್ತು ದಾಖಲಿತ ಹವಾಮಾನಶಾಸ್ತ್ರದ ಅಂಕೆಸಂಖ್ಯೆಯು, ಯೆರೂಸಲೇಮಿನಲ್ಲಿನ ಹಿಮವು ನಿರೀಕ್ಷಿಸುವುದಕ್ಕಿಂತಲೂ ಹೆಚ್ಚು ಸಾಮಾನ್ಯ ಘಟನೆಯಾಗಿರುತ್ತದೆಂದು ವ್ಯಕ್ತಪಡಿಸುತ್ತದೆ. . . . ಇಸವಿ 1949 ಮತ್ತು 1980ರ ನಡುವೆ, ಯೆರೂಸಲೇಮ್ ಪಟ್ಟಣವು ಇಪ್ಪತ್ತನಾಲ್ಕು ಹಿಮದ ಚಳಿಗಾಲಗಳನ್ನು ಪಡೆದಿತ್ತು.” ಆದರೆ ಇದು ಬರೀ ಹವಾಮಾನಶಾಸ್ತ್ರ ಮತ್ತು ಮಾನವ ಅಭಿರುಚಿಯ ಮೌಲ್ಯದ್ದಾಗಿದೆಯೋ, ಯಾ ಬೈಬಲ್ ವಿದ್ಯಾರ್ಥಿಗಳಿಗೆ ವಿಶಿಷ್ಟ ಅರ್ಥವನ್ನು ಇದು ಹೊಂದಿರುತ್ತದೋ?
ಬೈಬಲ್ ವಿದ್ಯಾರ್ಥಿಗಳಿಗೆ ಯಾವ ಅರ್ಥದ್ದಾಗಿದೆ?
ಯೇಸುವಿನ ಜನನವನ್ನು ಆಲೋಚಿಸುವಾಗ, ಅನೇಕಬಾರಿ ಕ್ರಿಸ್ಮಸ್ ಸಮಯದಲ್ಲಿ ಪ್ರದರ್ಶಿಸಲ್ಪಡುವ ಭಾವನಾತ್ಮಕವಾಗಿ ರಂಜಿಸುವ ಗೋದಣಿಗೆಯ ದೃಶ್ಯವನ್ನು ಅನೇಕ ಜನರು ತಮ್ಮ ಮಾನಸಿಕ ನೇತ್ರಗಳಲ್ಲಿ ಕಟ್ಟಿಕೊಳ್ಳುತ್ತಾರೆ. ಬೆಚ್ಚಗೆ ಸುತ್ತಲ್ಪಟ್ಟು ಮತ್ತು ತನ್ನ ತಾಯಿಯಿಂದ ಕಾಯಲ್ಪಟ್ಟು, ಸುತ್ತುಮುತ್ತಲಿನ ಭೂ ದೃಶ್ಯವನ್ನು ಹಿಮವು ಮೃದುವಾಗಿ ಹೊದಿಸುವುದರೊಂದಿಗೆ, ಅಲ್ಲಿ ಕೂಸು ಯೇಸುವು ಮಲಗಿರುತ್ತಾನೆ. ಈ ಜನಪ್ರಿಯ ನೋಟವು ಈ ಐತಿಹಾಸಿಕ ಘಟನೆಯ ಬೈಬಲಿನ ವಿವರಣೆಗೆ ಸರಿಬೀಳುತ್ತದೋ?
ಯೇಸುವಿನ ಜನನದ ಜಾಗ್ರತೆಯಿಂದ ದಾಖಲಿಸಿದ ವೃತ್ತಾಂತವನ್ನು ಬೈಬಲ್ ಬರಹಗಾರ ಲೂಕನು ತಿಳಿಸುತ್ತಾನೆ: “ಆ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು ಕಾಯುತ್ತಿರಲಾಗಿ ಕರ್ತನ ದೂತನೊಬ್ಬನು ಬಂದು ಅವರ ಎದುರಿನಲ್ಲಿ ನಿಂತನು. ಕರ್ತನ ಪ್ರಭೆಯು ಅವರ ಸುತ್ತಲು ಪ್ರಕಾಶಿಸಿತು; ಅವರು ಬಹಳವಾಗಿ ಹೆದರಿದರು. ಆ ದೂತನು ಅವರಿಗೆ—ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ. ಆತನು ನಿಮಗೆ ಗೊತ್ತಾಗುವದಕ್ಕೆ ಗುರುತೇನಂದರೆ—ಬಟೆಯ್ಟಿಂದ ಸುತ್ತಿರುವ ಒಂದು ಕೂಸು ಗೋದಲಿಯಲ್ಲಿ ಮಲಗಿರುವದನ್ನು ಕಾಣುವಿರಿ ಎಂದು ಹೇಳಿದನು. ಫಕ್ಕನೆ ಆ ದೂತನ ಸಂಗಡ ಪರಲೋಕಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು—ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ, ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು.”—ಲೂಕ 2:8-14.
ಇಂದಿನ ಸಾಮಾನ್ಯ ಇಸ್ರಾಯೇಲ್ಯನಿಗೆ ಈ ವೃತ್ತಾಂತವನ್ನು ನೀವು ಓದುವಲ್ಲಿ ಮತ್ತು ಅವನಿಗೆ ಇದು ವರುಷದ ಯಾವ ಸಮಯವಿರಬಲ್ಲುದೆಂದು ಕೇಳುವಲ್ಲಿ, “ಎಪ್ರಿಲ್ ಮತ್ತು ಅಕ್ಟೋಬರದ ನಡುವೆ ಎಲಿಯ್ಲಾದರು,” ಎಂದು ಅವನು ಉತ್ತರಿಸುವುದು ಸಂಭವನೀಯ. ಯಾಕೆ? ಉತ್ತರವು ಸರಳವಾಗಿದೆ. ನವಂಬರದಿಂದ ಮಾರ್ಚ್‌ವರೆಗೆ ಇಸ್ರಾಯೇಲಿನಲ್ಲಿ ಚಳಿಯ, ಮಳೆಗಾಲವಾಗಿದೆ. ಮತ್ತು ದಶಂಬರ 25 ನಿಶ್ಚಯವಾಗಿಯೂ ಚಳಿಗಾಲದಲ್ಲಿರುತ್ತದೆ. ಕುರುಬರು ರಾತ್ರಿಯಲ್ಲಿ ಹೊಲದಲ್ಲಿ ಅವರ ಮಂದೆಗಳನ್ನು ಕಾಯುತ್ತಾ ಹೊರಗೆ ವಾಸಿಸುತ್ತಿರಲಾರರು. ಈ ಲೇಖನದ ಆರಂಭದ ವರದಿಗಳನ್ನು ಗಮನಿಸುವಲ್ಲಿ, ಇದು ಯಾಕೆ ಎಂದು ನೀವು ತಿಳಿದುಕೊಳ್ಳುವಿರಿ. ಯೇಸು ಜನಿಸಿದ ಬೇತ್ಲೆಹೇಮ್, ಉನ್ನತ ಪ್ರದೇಶದಲ್ಲಿರುತ್ತದೆ ಮತ್ತು ಯೆರೂಸಲೇಮಿನಿಂದ ಕೆಲವೇ ಮೈಲು ದೂರದಲ್ಲಿದೆ. ಅಲ್ಲಿ ಹವಾಮಾನವು ಕಡಮೆ ಅತಿರೇಕದ್ದಾಗಿರುವ ವರುಷಗಳಲ್ಲಿಯೂ, ಚಳಿಗಾಲದ ರಾತ್ರಿಯಲ್ಲಿ ಬಹಳಷ್ಟು ಚಳಿ ಇರುತ್ತದೆ.—ಮೀಕ 5:2; ಲೂಕ 2:15.
ಯೇಸುವಿನ ಜನನದ ಸಮಯದ ಇತಿಹಾಸದೊಳಗೆ ಒಂದು ನೋಟವು ಅವನು ದಶಂಬರ ಹಿಮದ ಸಮಯದಲ್ಲಿ ಜನಿಸಿರಲಿಲ್ಲ ಎಂಬ ನಿಜತ್ವದ ಮೇಲೆ ಬೆಳಕು ಹರಿಸುತ್ತದೆ. ಯೇಸುವಿನ ತಾಯಿ ಮರಿಯಳು, ಗರ್ಭಧಾರಣೆಯ ಕೊನೆಯ ಘಟ್ಟದಲ್ಲಿರುವುದಾದರೂ, ನಜರೇತ್‌ನಲ್ಲಿನ ಅವಳ ಮನೆಯಿಂದ ಬೇತ್ಲೆಹೇಮಿಗೆ ಪ್ರಯಾಣಿಸಬೇಕಿತ್ತು. ರೋಮೀಯ ಚಕ್ರವರ್ತಿ ಕೈಸರ್ ಔಗುಸ್ತನಿಂದ ಹೊರಟ ಖಾನೆಷುಮಾರಿಯ ಆಜ್ಞೆಯ ಆವಶ್ಯಕತೆಗಳನ್ನು ತಲಪಲು ಅವಳು ಮತ್ತು ಯೋಸೇಫನು ಹಾಗೆಯೆ ಮಾಡಿದರು. (ಲೂಕ 2:1-7) ರೋಮೀಯ ಆಡಳಿತ ಮತ್ತು ಅದರ ಭಾರಿ ಸುಂಕದ ಕಡೆಗೆ ತೀವ್ರ ಅಸಮಾಧಾನ ತೋರಿಸಿದ ಯೆಹೂದಿ ಜನಸಂಖ್ಯೆಯು, ಆಗಲೇ ದಂಗೆಯ ಅಂಚಿನಲ್ಲಿತ್ತು. ಅತಿ ಕಷ್ಟಮಯ ಮತ್ತು ಮೋಸಕರವೂ ಆದ ಚಳಿಗಾಲದ ಹವಾಮಾನದಲ್ಲಿ ಹೆಸರು ನೊಂದಾಯಿಸಲು ಅನೇಕರು ಪ್ರಯಾಣಿಸುವಂತೆ ಅವಶ್ಯಪಡಿಸುವುದರ ಮೂಲಕ ಅವರನ್ನು ರೋಮ್ ಅನಾವಶ್ಯಕವಾಗಿ ರೇಗಿಸುವುದೇಕೆ? ವಸಂತಕಾಲ ಯಾ ಶರತ್ಕಾಲಗಳಂತಹ, ಪ್ರಯಾಣಗೈಯಲು ಸಹಾಯವಾಗುವ ಹವಾಮಾನದಲ್ಲಿ ಈ ಆಜ್ಞೆಯು ಹೊರಡಿಸಲ್ಪಟ್ಟಿರಬಹುದೆಂಬುದು ಅತಿ ಹೆಚ್ಚು ಸಮಂಜಸವುಳ್ಳದ್ದಾಗಿರುವುದಿಲ್ಲವೇ?
ಬೈಬಲ್ ಆಧಾರಿತ ಗಣನೆಗಳು
ಐತಿಹಾಸಿಕ ಮತ್ತು ಪ್ರಾಕೃತಿಕ ರುಜುವಾತು ದಶಂಬರ, ಯಾ ಯಾವುದೇ ಇತರ ಚಳಿಗಾಲದ ತಿಂಗಳನ್ನು ಯೇಸುವಿನ ಜನನ ವೃತ್ತಾಂತಗಳಿಗೆ ಹೊಂದಿಕೆಯಾಗಿದೆ ಎಂಬ ವಿಷಯವನ್ನು ಅನರ್ಹವಾಗಿಸುತ್ತದೆ. ಇನ್ನೂ, ಪ್ರವಾದನೆಯ ಮೂಲಕ ಯೇಸು ಜನಿಸಿದ ವರುಷದ ಸಮಯವನ್ನು ಬೈಬಲ್ ಪ್ರಕಟಿಸುತ್ತದೆ. ಅದು ಇದನ್ನು ಎಲ್ಲಿ ತೋರಿಸುತ್ತದೆ?
ದಾನಿಯೇಲ ಪುಸ್ತಕದ, 9ನೇ ಅಧ್ಯಾಯದಲ್ಲಿ, ಮೆಸ್ಸೀಯನ ಕುರಿತು ಪ್ರವಾದನೆಗಳಲ್ಲಿ ಅತಿ ಪರಿಣಾಮಕಾರಕವಾದದೊಂದನ್ನು ನಾವು ಕಂಡುಕೊಳ್ಳುತ್ತೇವೆ. ಅವನ ಬರೋಣವನ್ನೂ ಮತ್ತು, ಪಾಪ ಪರಿಹಾರ ಮಾಡಲು ಈಡಿನ ಯಜ್ಞವನ್ನು ಒದಗಿಸುವ ಮತ್ತು ವಿಧೇಯ ಮಾನವಕುಲವು “ಸನಾತನಧರ್ಮವನ್ನು” ಪಡೆಯಲು ಆಧಾರವನ್ನು ಸ್ಥಾಪಿಸುವ, ಅವನ ಮರಣದ ಛೇದಿಸಲ್ಪಡುವಿಕೆಯನ್ನೂ ಅದು ವಿವರಿಸುತ್ತದೆ. (ದಾನಿಯೇಲ 9:24-27; ಹೋಲಿಸಿ ಮತ್ತಾಯ 20:28.) ಈ ಪ್ರವಾದನೆಗನುಸಾರ, ಇವೆಲ್ಲವೂ ಯೆರೂಸಲೇಮ್ ಪುನರ್ನಿರ್ಮಾಣವಾಗಬೇಕೆಂಬ ಆಜ್ಞೆಯು ಹೊರಟ ಸಾ.ಶ.ಪೂ. 455 ನೆಯ ವರ್ಷದಲ್ಲಿ ಆರಂಭಗೊಂಡು ವರ್ಷಗಳ 70 ವಾರಗಳ ಸಮಯಾವಧಿಯಲ್ಲಿ ಮುಗಿಸಲ್ಪಡುವುವು.a (ನೆಹೆಮೀಯ 2:1-11) ಈ ಪ್ರವಾದನೆಯಲ್ಲಿನ ಸಮಯ ವಿಭಾಗದಿಂದ, ಮೆಸ್ಸೀಯನು ವರ್ಷಗಳ 70ನೆಯ ವಾರದ ಆರಂಭದಲ್ಲಿ ಗೋಚರಿಸುವನೆಂದು ವಿವೇಚಿಸಸಾಧ್ಯವಿದೆ. ಇದು ಸಾ.ಶ. 29 ರಲ್ಲಿ ಯೇಸುವು ತನ್ನನ್ನು ದೀಕ್ಷಾಸ್ನಾನಕ್ಕಾಗಿ ಸಾದರಪಡಿಸಿಕೊಂಡಾಗ, ಅಧಿಕೃತವಾಗಿ ಆತನ ಮೆಸ್ಸೀಯ ಸಂಬಂಧಿತ ಪಾತ್ರದ ಆರಂಭಿಸುವಿಕೆಯಲ್ಲಿ ಸಂಭವಿಸಿತು. “ಅರ್ಧ ವಾರದಲ್ಲಿ,” ಯಾ ಮೂರುವರೆ ವರ್ಷಗಳಾದನಂತರ, ಮೆಸ್ಸೀಯನು ಮರಣದಲ್ಲಿ ಛೇದಿಸಲ್ಪಡುವನು, ಅದರ ಫಲವಾಗಿ ಮೋಶೆಯ ನಿಯಮದ ಒಡಂಬಡಿಕೆಯ ಕೆಳಗಿನ ಎಲ್ಲಾ ಯಜ್ಞಗಳ ಮೌಲ್ಯಕ್ಕೆ ಅಂತ್ಯವನ್ನು ತರಲಾಯಿತು.—ಇಬ್ರಿಯ 9:11-15; 10:1-10.
ಈ ಪ್ರವಾದನೆಯು ಯೇಸುವಿನ ಶುಶ್ರೂಷೆಯು ಮೂರುವರೆ ವರ್ಷಗಳಷ್ಟು ಉದ್ದವಿತ್ತೆಂದು ತೋರಿಸುತ್ತದೆ. ಯೇಸುವು (ಯೆಹೂದ್ಯ ಕ್ಯಾಲೆಂಡರಿನ ಪ್ರಕಾರ) ನೈಸಾನ್ 14ರ ಪಂಚಾಶತ್ತಮದಂದು, ಸಾ.ಶ. 33ರ ವಸಂತಕಾಲದಲ್ಲಿ ಸತ್ತನು. ಆ ವರುಷಕ್ಕೆ ಸಮಾನವಾದ ತಾರೀಖು ಎಪ್ರಿಲ್ 1 ಆಗಿರುವುದು. (ಮತ್ತಾಯ 26:2) ಮೂರುವರೆ ವರ್ಷಗಳನ್ನು ಹಿಂದಕ್ಕೆ ಎಣಿಸುವುದು ಸಾ.ಶ. 29ರ ಅಕ್ಟೋಬರದ ಆರಂಭದಲ್ಲಿ ಆತನ ದೀಕ್ಷಾಸ್ನಾನವನ್ನು ನಿಯಮಿಸುತ್ತದೆ. ಯೇಸುವು ಆತನ ದೀಕ್ಷಾಸ್ನಾದ ಸಮಯದಲ್ಲಿ ಸಾಧಾರಣ 30 ವರುಷದವನಾಗಿದ್ದನೆಂದು ಲೂಕನು ಮಾಹಿತಿ ಕೊಡುತ್ತಾನೆ. (ಲೂಕ 3:21-23) ಯೇಸುವಿನ ಜನನವು ಕೂಡ ಅಕ್ಟೋಬರಿನ ಆರಂಭದ ಸಮೀಪದಲ್ಲಿ ಎಂದು ಇದರರ್ಥವಾಗುವುದು. ಲೂಕನ ವೃತ್ತಾಂತಕ್ಕೆ ಹೊಂದಿಕೆಯಲ್ಲಿ, ಕುರುಬರು ವರುಷದ ಆ ಸಮಯದಲ್ಲಿ ಇನ್ನೂ “ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು ಕಾಯುತ್ತಿದ್ದರು.”—ಲೂಕ 2:8.
ಯಾವ ಮೂಲದಿಂದ?
ಯೇಸುವಿನ ಜನನದ ಸಮಯವನ್ನು ರುಜುವಾತು ಅಕ್ಟೋಬರದ ಆರಂಭಕ್ಕೆ ನಿರ್ದೇಶಿಸುವಾಗ, ಅದನ್ನು ದಶಂಬರ 25ಕ್ಕೆ ಯಾಕೆ ಆಚರಿಸಲಾಗುತ್ತದೆ? ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕವು, ಈ ಆಚರಣೆಯು ಯೇಸುವಿನ ಜನನದ ಶತಮಾನಗಳಾನಂತರ ದತ್ತುಪಡೆಯಲಾಗಿತ್ತೆಂದು ತೋರಿಸುತ್ತದೆ: “ನಾಲ್ಕನೆಯ ಶತಮಾನದ ಸಮಯದಲ್ಲಿ ದಶಂಬರ 25ರ ಕ್ರಿಸ್ತನ ಜನನದ ಆಚರಣೆಯು, ಕ್ರಮೇಣ ಹೆಚ್ಚಿನ ಪೂರ್ವ ಚರ್ಚುಗಳಿಂದ ಸ್ವೀಕರಿಸಲ್ಪಟ್ಟಿತು. ಯೆರೂಸಲೇಮಿನಲ್ಲಿ, ಕ್ರಿಸ್ಮಸ್‌ಗೆ ವಿರೋಧವು ಬಹುಕಾಲ ಉಳಿಯಿತು, ಆದರೆ ಅದು ತರುವಾಯ ಸ್ವೀಕರಿಸಲ್ಪಟ್ಟಿತು.”
ಕ್ರಿಸ್ತನ ಅನಂತರ ಅನೇಕ ಶತಮಾನಗಳಲ್ಲಿ ಕ್ರೈಸ್ತರೆಂದು ಕರೆಯಲ್ಪಡುತ್ತಿದ್ದವರ ಮೂಲಕ ಆ ಪದ್ಧತಿಯು ಅಷ್ಟು ಸುಲಭವಾಗಿ ಯಾಕೆ ಸ್ವೀಕರಿಸಲ್ಪಟ್ಟಿತು? ಈ ವಿಷಯದ ಮೇಲೆ ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕವು ಹೆಚ್ಚಿನ ಬೆಳಕನ್ನು ಬೀರುತ್ತದೆ: “ಮಧ್ಯ ಚಳಿಗಾಲಾವಧಿಯಲ್ಲಿ ಬೇಸಾಯ ಮತ್ತು ಸೂರ್ಯನ ವಿಧರ್ಮಿ ಆಚರಣೆಗಳೊಂದಿಗೆ ಕ್ರಿಸ್ತನ ಜನನದ ಆಚರಣೆಯ ಸಹಘಟನೆಯ ಫಲಿತಾಂಶವಾಗಿ ಅನೇಕ ಮೂಲಗಳಿಂದ, ಕ್ರಿಸ್ಮಸ್‌ದೊಂದಿಗೆ ಜೋಡಿಸಲಾದ ಸಾಂಪ್ರದಾಯಿಕ ಪದ್ಧತಿಗಳು ಬೆಳೆದಿರುತ್ತವೆ. ರೋಮನ್ ಲೋಕದಲ್ಲಿ ಸೆಟರ್ನಾಲಿಯವು (ದಶಂಬರ 17) ಸಂತೋಷ ಸಂಭ್ರಮಗಳ ಮತ್ತು ಇನಾಮುಗಳನ್ನು ಅದಲುಬದಲು ಮಾಡುವ ಸಮಯವಾಗಿತ್ತು. ದಶಂಬರ 25 ಕೂಡ ಐರೇನಿಯನ್ ರಹಸ್ಯ ದೇವ ಮಿತ್ರ—ನೀತಿಯ ಸೂರ್ಯ—ನ ಜನನ ತಾರೀಖಾಗಿಯೂ ಪರಿಗಣಿಸಲಾಗಿತ್ತು.”
ಇವೆಲ್ಲವು ನಿಜಕ್ಕೂ ಒಂದು “ಸಹಘಟನೆ” ಯಾಗಿತ್ತೊ? ನಿಶ್ಚಯವಾಗಿಯೂ ಇಲ್ಲ! ಸಾ.ಶ. ನಾಲ್ಕನೇ ಶತಮಾನದಲ್ಲಿ, ಸಾಮ್ರಾಟ ಕಾನ್‌ಸ್ಟಂಟೀನನ ಕೆಳಗೆ ರೋಮನ್ ಸಾಮ್ರಾಜ್ಯವು ಕ್ರೈಸ್ತತ್ವದ ಹಿಂಸಕನಿಂದ ಒಂದು ಸ್ವೀಕೃತ ಧರ್ಮದಂತೆ “ಕ್ರೈಸ್ತತ್ವದ” ಹೊಣೆಗಾರನೋಪಾದಿ ಗಮನಾರ್ಹ ಬದಲಾವಣೆ ಹೊಂದಿತು. ಕ್ರೈಸ್ತತ್ವದ ನಿಜ ಅರ್ಥದಲ್ಲಿ ಹಿನ್ನೆಲೆ ಇಲ್ಲದ ಹೆಚ್ಚಿನ ಸಾಮಾನ್ಯ ಜನಸಂಖ್ಯೆಯು ಈ ಹೊಸ ನಂಬಿಕೆಯನ್ನು ದತ್ತುಪಡಕೊಳ್ಳುತ್ತಿದ್ದಂತೆಯೆ, ಹೊಸದಾಗಿ ದೊರಕಿದ “ಕ್ರೈಸ್ತ” ಶಿರೋನಾಮಗಳೊಂದಿಗೆ ಅವರ ರೂಢಿಯ ವಿಧರ್ಮಿ ಹಬ್ಬಗಳನ್ನು ಅವರು ಆಚರಿಸಲಾರಂಭಿಸಿದರು. ಕ್ರಿಸ್ತನ ಜನನವನ್ನು ಆಚರಿಸಲು, “ನೀತಿಯ ಸೂರ್ಯನ” ಜನನ ದಿನವಾಗಿ ಈಗಾಗಲೇ ಗುರುತಿಸಲ್ಪಟ್ಟ ದಶಂಬರ 25 ಕ್ಕಿಂತ ಯಾವ ತಾರೀಖು ಹೆಚ್ಚು ತಕ್ಕುದ್ದಾಗಿರಬಲ್ಲುದು?
ಅದು ಪ್ರಾಮುಖ್ಯವೊ?
ಯೆಹೂದ್ಯ ಹಿನ್ನೆಲೆಯುಳ್ಳವರಾಗಿದ್ದ ಯೇಸುವಿನ ಪ್ರಥಮ ಶಿಷ್ಯರು, ಆತನ ಜನನ ದಿನವನ್ನು ಆಚರಿಸಿರಲಿಲವ್ಲೆಂಬುದು ಪ್ರಶ್ನಾತೀತ. ಎನ್‌ಸೈಕ್ಲೊಪೀಡಿಯ ಜುಡೈಕಾ ಗನುಸಾರ, “ಸಾಂಪ್ರದಾಯಿಕ ಯೆಹೂದ್ಯ ಮತಾಚರಣೆಯಲ್ಲಿ ಜನ್ಮ ದಿನಗಳ ಆಚರಣೆಯು ಅಜ್ಞಾತವಾಗಿತ್ತು.” ಆರಂಭದ ಕ್ರೈಸ್ತರು ನಿಶ್ಚಯವಾಗಿಯೂ ಅಂಥ ಆಚರಣೆಗಳನ್ನು ಸ್ವೀಕರಿಸುತ್ತಿದ್ದರಲಿಲ್ಲ. ಆತನ ಜನನವನ್ನು ಆಚರಿಸುವುದಕ್ಕಿಂತ, ಅವನ ಮರಣದ ಜ್ಞಾಪಕವನ್ನಾಚರಿಸುವ ಯೇಸುವಿನ ಆಜ್ಞೆಯನ್ನು ಅವರು ಗೌರವಿಸುವರು. ಯಾಕಂದರೆ ಅದಕ್ಕಾಗಿ ಒಂದು ವಿವಾದಾಸ್ಪದವಲ್ಲದ—ನೈಸಾನ್ 14 ಎನ್ನುವ—ತಾರೀಖು ಅವರಿಗೆ ಇತ್ತು.—ಲೂಕ 22:7, 15, 19, 20; 1 ಕೊರಿಂಥ 11:23-26.
ಕ್ರಿಸ್ತನ ಮುಂಚೆ ಶತಮಾನಗಳಲ್ಲಿ, ಆಗಿನ ದೇವರ ಆರಿಸಲ್ಪಟ್ಟ ಜನಾಂಗವಾಗಿದ್ದ ಯೆಹೂದ್ಯ ಜನರು ಬೆಬಿಲೋನಿನ ಮುಂಬರುವ ಅಂತ್ಯದ ಕುರಿತು ಪ್ರವಾದನಾರೂಪವಾಗಿ ಎಚ್ಚರಿಸಲ್ಪಟ್ಟದ್ದು: “ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!” (ಯೆಶಾಯ 52:11) ಅವರು ತಮ್ಮ ಸ್ವದೇಶಕ್ಕೆ ಯೆಹೋವನ ಶುದ್ಧ ಆರಾಧನೆಯನ್ನು ಪುನಃಸ್ಥಾಪಿಸಲು ತೆರಳಬೇಕಾಗಿತ್ತು. ಬಾಬೆಲಿನಲ್ಲಿ ಅವರು ಆಚರಿಸಿದ್ದ ಅಶುದ್ಧ ವಿಧರ್ಮಿ ಪದ್ಧತಿಗಳನ್ನು ಮತ್ತು ಆರಾಧನಾ ವಿಧಗಳನ್ನು ದತ್ತುಪಡಕೊಳ್ಳುವುದು ಅವರಿಗೆ ಆಲೋಚಿಸಲಸಾಧ್ಯವಾಗಿತ್ತು.
ಆಶ್ಚರ್ಯವಿಲ್ಲದೇ, ಇದೇ ರೀತಿಯ ಆಜ್ಞೆಯು ಕ್ರೈಸ್ತರಿಗಾಗಿ 2 ಕೊರಿಂಥ 6:14-18 ರಲ್ಲಿ ಪುನರಾವರ್ತಿಸಲಾಗಿದೆ. ಕ್ರಿಸ್ತನನ್ನು ತಿರಸ್ಕರಿಸಿದ ಯೆಹೂದ್ಯ ಜನಾಂಗದ ಸ್ಥಾನದಲ್ಲಿ, ಆತನ ಹಿಂಬಾಲಕರು ಶುದ್ಧಾರಾಧನೆಯ ಪ್ರತಿನಿಧಿಗಳಾದರು. ಆತ್ಮಿಕ ಅಂಧಕಾರದಿಂದ ಹೊರಬಂದು, ಸತ್ಯದ ಬೆಳಕಿನೊಳಗೆ ಸೇರಲು ಇತರರಿಗೆ ಸಹಾಯ ಮಾಡುವ ಜವಾಬ್ದಾರಿಯು ಅವರಿಗಿತ್ತು. (1 ಪೇತ್ರ 2:9,10) ಕ್ರಿಸ್ತನ ಬೋಧನೆಗಳನ್ನು ವಿಧರ್ಮಿ ಮೂಲದ ಪದ್ಧತಿ ಮತ್ತು ರಜಾ ದಿನಗಳೊಂದಿಗೆ ಬೆರೆಸುವಲ್ಲಿ ಅವರು ಅದನ್ನು ಹೇಗೆ ಮಾಡಸಾಧ್ಯವಿತ್ತು?
ಜನಪ್ರಿಯ ಅಭಿರುಚಿಗಳಿಗೆ ಬಹಳ ಹಿಡಿಸಬಹುದಾದರೂ, ಒಂದು “ಹಿಮದ ಕ್ರಿಸ್ಮಸ್ಸನ್ನು” ಆಚರಿಸುವುದು “ಅಶುದ್ಧವಾದದನ್ನು ಮುಟ್ಟುವುದಕ್ಕೆ” ಸಮಾನವಾಗುತ್ತದೆ. (2 ಕೊರಿಂಥ 6:17) ದೇವರನ್ನು ಮತ್ತು ಕ್ರಿಸ್ತನನ್ನು ಯಾರು ನಿಜವಾಗಿಯೂ ಪ್ರೀತಿಸುತ್ತಾರೋ ಅವರು ಅದನ್ನು ವರ್ಜಿಸಲೇ ಬೇಕು.
ವಿಧರ್ಮಿ ಆಚರಣೆಗಳಲ್ಲಿ ಅದರ ಮೂಲಗಳಿವೆ ಎಂಬ ನಿಜತ್ವಗಳ ಹೊರತೂ, ಯೇಸು ಅಕ್ಟೋಬರದಲ್ಲಿ ಜನಿಸಿದ್ದರಿಂದ, ಕ್ರಿಸ್ಮಸ್ ಸತ್ಯವನ್ನು ಪ್ರತಿನಿಧೀಕರಿಸುವುದಿಲ್ಲವೆಂಬುದನ್ನು ಕೂಡ ನಾವು ನೋಡಿದೆವು. ಹೌದು, ಒಬ್ಬರ ಕಲ್ಪನೆಯಲ್ಲಿ ಯಾವುದೇ ದೃಶ್ಯವು ಬರಲಿ, ಯೇಸು ಮಾತ್ರ ಹಿಮದಲ್ಲಿ ಜನಿಸಿರಲೇ ಇಲ್ಲ.
[ಅಧ್ಯಯನ ಪ್ರಶ್ನೆಗಳು]
a ಈ ಪ್ರವಾದನೆಯ ಪೂರ್ಣ ಚರ್ಚೆಗಾಗಿ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್ ಮೂಲಕ ಪ್ರಕಾಶಿತ ಯುದ್ಧರಹಿತವಾದ ಲೋಕವು ಎಂದಾದರೂ ಇದ್ದೀತೆ? (ವಿಲ್ ದೇರ್ ಬೀ ಏ ವರ್ಲ್ಡ್ ವಿದೌಟ್ ವಾರ್) ಬ್ರೋಷರಿನ ಪುಟ 26ನ್ನು ನೋಡಿರಿ.
[ಪುಟ 4,5 ರಲ್ಲಿರುವಚಿತ್ರ]
ಹಿಮಾವರಿತ ಯೆರೂಸಲೇಮ್, ಪೂರ್ವದಿಂದ ಕಾಣುವಂತೆ
[ಕೃಪೆ]
Garo Nalbandian
[ಪುಟ 6 ರಲ್ಲಿರುವ ಚಿತ್ರ]
ಯೆರೂಸಲೇಮಿನ ಗೊಡೆಯುದ್ದಕ್ಕೂ ಹಿಮ
[ಪುಟ 7 ರಲ್ಲಿರುವ ಚಿತ್ರ]
ಕೆಳಗೆ ಕಾಣುವಂತೆ, ಕೇವಲ ಬೆಚ್ಚಗೆನ ಕಾಲದಲ್ಲಿ, ಕುರುಬರು ತಮ್ಮ ಕುರಿಮಂದೆಗಳೊಂದಿಗೆ ರಾತ್ರಿಯಲ್ಲಿ ಕಲ್ಲುಬಂಡೆಗಳಿಂದಾವರಿತ ಗುಡ್ಡಬದಿಗಳಲ್ಲಿ ಇರಸಾಧ್ಯ
[ಕೃಪೆ]
Garo Nalbandian