ವಾಚಕರಿಂದ ಪ್ರಶ್ನೆಗಳು
ಬೈಬಲ್ ಅನೇಕ ಬಾರಿ “ತಂದೆಯಿಲ್ಲದ ಹುಡುಗ”ನ ಕುರಿತು ತಿಳಿಸುವುದರಿಂದ, ಇದು ಹುಡುಗಿಯರಿಗಾಗಿ ಕಡಿಮೆ ಹಿತಾಸಕ್ತಿಯನ್ನು ಸೂಚಿಸುತ್ತದೊ?
ಖಂಡಿತವಾಗಿಯೂ ಇಲ್ಲ.
ಹೆತ್ತವರಲ್ಲೊಬ್ಬರ ಕೊರತೆ ಇರುವ ಮಕ್ಕಳಿಗಾಗಿ ದೇವರ ಚಿಂತೆಯನ್ನು ಪ್ರದರ್ಶಿಸುವ ಅನೇಕ ವಚನಗಳಲ್ಲಿ, “ತಂದೆಯಿಲ್ಲದ ಹುಡುಗ” ಎಂಬ ವಾಕ್ಸರಣಿಯನ್ನು ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್‌ಚರ್ಸ್ ಉಪಯೋಗಿಸುತ್ತದೆ. ಆತನು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳಲ್ಲಿ ಈ ಚಿಂತೆಯನ್ನು ದೇವರು ಸೃಷ್ಟಗೊಳಿಸಿದನು.
ಉದಾಹರಣೆಗೆ, ದೇವರು ಹೇಳಿದ್ದು: “ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು. ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು; ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ. ನಾನು ಕೋಪಿಸಿಕೊಂಡು ನಿಮ್ಮನ್ನು ಶತ್ರುಗಳ ಕತ್ತಿಯಿಂದ ಸಂಹಾರಮಾಡಿಸುವೆನು; ನಿಮ್ಮ ಹೆಂಡತಿಯರು ವಿಧವೆಗಳಾಗುವರು, ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.” (ವಿಮೋಚನಕಾಂಡ 22:22-24) “ನಿಮ್ಮ ದೇವರಾದ ಯೆಹೋವನು ದೇವಾಧಿದೇವನಾಗಿಯೂ ಕರ್ತರ ಕರ್ತನಾಗಿಯೂ ಇದ್ದಾನೆ; ಆತನು ಪರಮದೇವರೂ ಪರಾಕ್ರಮಿಯೂ ಭಯಂಕರನೂ ಆಗಿದ್ದಾನೆ. ಆತನು ದಾಕ್ಷಿಣ್ಯ ನೋಡುವವನಲ್ಲ, ಲಂಚತೆಗೆದುಕೊಳ್ಳುವವನಲ್ಲ. ಆತನು ತಾಯಿತಂದೆಯಿಲ್ಲದವರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸುತ್ತಾನೆ.”—ಧರ್ಮೋಪದೇಶಕಾಂಡ 10:17, 18; 14:29; 24:17; 27:19.
ಅನೇಕ ಬೈಬಲ್ ಭಾಷಾಂತರಗಳು, ಈ ವಚನಗಳಲ್ಲಿ “ತಂದೆಯಿಲ್ಲದ ಮಗು” ಯಾ “ಅನಾಥ” ಎಂಬುದಾಗಿ ಉಪಯೋಗಿಸುತ್ತಾ ಹೀಗೆ ಹುಡುಗರನ್ನು ಮತ್ತು ಹುಡುಗಿಯರನ್ನು ಸೇರಿಸಿಕೊಳ್ಳುತ್ತವೆ. ಹಾಗಿದ್ದರೂ, ಪುಲ್ಲಿಂಗದಲ್ಲಿರುವ ಹಿಬ್ರೂ ಪದ (ಯಾಥೋಮ್) ನಲ್ಲಿ ಕಂಡುಕೊಳ್ಳಲಾದ ಒಂದು ವೈಶಿಷ್ಟ್ಯವನ್ನು ಇಂತಹ ಭಾಷಾಂತರಗಳು ಕಡೆಗಣಿಸುತ್ತವೆ. ಬದಲಿಗೆ, ಕೀರ್ತನೆ 68:5 ರಲ್ಲಿ ಇರುವಂತೆ “ತಂದೆಯಿಲ್ಲದ ಹುಡುಗ(ರು),” ಎಂಬ ನಿಷ್ಕೃಷ್ಟವಾದ ಭಾಷಾಂತರವನ್ನು ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್‌ಚರ್ಸ್ ಉಪಯೋಗಿಸುತ್ತದೆ. ಅದು ಓದುವುದು: “ಪರಿಶುದ್ಧವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ ತಂದೆಯೂ ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ.” ಆಧಾರವಾಗಿರುವ ಹಿಬ್ರೂ ಪದದ ಅದೇ ಸೂಕ್ಷ್ಮತೆಯ ಮೇಲೆ ಆಧಾರಿಸಿ, ಕೀರ್ತನೆ 68:11 ರಲ್ಲಿರುವ ಕ್ರಿಯಾಪದದ ಸ್ತ್ರೀಲಿಂಗವು, ಅದರ ಈ ರೀತಿಯ ಓದುವಿಕೆಯನ್ನು ಶಿಫಾರಸ್ಸು ಮಾಡುತ್ತದೆ: “ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.”a
“ತಂದೆಯಿಲ್ಲದ ಹುಡುಗ” ಎಂಬುದು ಯಾಥೋಮ್‌ನ ಪ್ರಧಾನ ಭಾಷಾಂತರವಾಗಿದ್ದರೂ, ಹೆತ್ತವರಲ್ಲೊಬ್ಬರ ಕೊರತೆ ಇರುವ ಹುಡುಗಿಯರಿಗಾಗಿ ಚಿಂತೆಯ ಅಭಾವವನ್ನು ಸೂಚಿಸುವ ರೀತಿಯಲ್ಲಿ ಇದನ್ನು ತೆಗೆದುಕೊಳ್ಳಬಾರದು. ವಿಧವೆಯರಿಗಾಗಿ, ಹೆಣ್ಣುಮಕ್ಕಳಿಗಾಗಿ ಕಾಳಜಿ ವಹಿಸುವಂತೆ ದೇವರ ಜನರು ಉತ್ತೇಜಿಸಲ್ಪಟ್ಟರೆಂದು, ನಮೂದಿಸಲಾದ ಉದ್ಧೃತ ಭಾಗಗಳು ಮತ್ತು ಬೇರೆ ಭಾಗಗಳು ತೋರಿಸುತ್ತವೆ. (ಕೀರ್ತನೆ 146:9; ಯೆಶಾಯ 1:17; ಯೆರೆಮೀಯ 22:3; ಜೆಕರ್ಯ 7:9, 10; ಮಲಾಕಿಯ 3:5) ಧರ್ಮಶಾಸ್ತ್ರದಲ್ಲಿ, ಚಲ್ಪಹಾದನ ತಂದೆಯಿಲ್ಲದ ಹೆಣ್ಣುಮಕ್ಕಳಿಗಾಗಿ ಆಸ್ತಿಯ ಭರವಸೆ ಕೊಟ್ಟಂಥ ಒಂದು ನ್ಯಾಯನಿರ್ಣಯದ ಕುರಿತು ದಾಖಲೆಯೊಂದನ್ನು ಕೂಡ ದೇವರು ಒಳಸೇರಿಸಿದನು. ತಂದೆಯಿಲ್ಲದ ಹುಡುಗಿಯರ ಹಕ್ಕುಗಳನ್ನು ಹೀಗೆ ಎತ್ತಿಹಿಡಿಯುತ್ತಾ, ಸಮಾನವಾದ ಸನ್ನಿವೇಶಗಳನ್ನು ನಿರ್ವಹಿಸುವುದಕ್ಕಾಗಿ ಆ ನಿರ್ಣಯ ಒಂದು ಕಟ್ಟಳೆಯಾಯಿತು.—ಅರಣ್ಯಕಾಂಡ 27:1-8.
ಮಕ್ಕಳಿಗೆ ದಯೆ ತೋರಿಸುವಲ್ಲಿ ಯೇಸು ಲಿಂಗದ ಆಧಾರದ ಮೇಲೆ ಪಕ್ಷಪಾತಮಾಡಲಿಲ್ಲ. ಅದರ ಬದಲಿಗೆ, ನಾವು ಓದುವುದು: “ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು ಶಿಷ್ಯರು ಅವರನ್ನು ಗದರಿಸಿದರು. ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ—ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡಿಮ್ಡಾಡಬೇಡಿರಿ; ದೇವರ ರಾಜ್ಯವು ಇಂಥವರದೇ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಎಂದು ಹೇಳಿ ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.”—ಮಾರ್ಕ 10:13-16.
“ಚಿಕ್ಕ ಮಕ್ಕಳು” ಎಂಬುದಾಗಿ ಇಲ್ಲಿ ಭಾಷಾಂತರಿಸಲಾದ ಗ್ರೀಕ್ ಪದವು ನಪುಂಸಕ ಲಿಂಗದಲ್ಲಿದೆ. ಈ ಪದವನ್ನು “ಹುಡುಗಿಯರಿಗೆ ಹಾಗೂ ಹುಡುಗರಿಗೆ ಉಪಯೋಗಿಸಲಾಗುತ್ತದೆ” ಎಂಬುದಾಗಿ ಪ್ರಸಿದ್ಧವಾಗಿರುವ ಒಂದು ಗ್ರೀಕ್ ನಿಘಂಟು ಹೇಳುತ್ತದೆ. ಎಲ್ಲಾ ಮಕ್ಕಳಲ್ಲಿ, ಹುಡುಗರು ಮತ್ತು ಹುಡುಗಿಯರಲ್ಲಿ ಯೆಹೋವನಿಗಿರುವ ಅನುಗುಣವಾದ ಆಸಕ್ತಿಯನ್ನು ಯೇಸು ಪ್ರತಿಬಿಂಬಿಸುತ್ತಾ ಇದ್ದನು. (ಇಬ್ರಿಯ 1:3; ಹೋಲಿಸಿ ಧರ್ಮೋಪದೇಶಕಾಂಡ 16:14; ಮಾರ್ಕ 5:35, 38-42.) “ತಂದೆಯಿಲ್ಲದ ಹುಡುಗರ” ಕಾಳಜಿ ವಹಿಸುವುದರ ಕುರಿತು ಹಿಬ್ರೂ ವಚನಗಳಲ್ಲಿರುವ ಸಲಹೆಯು, ಹೆತ್ತವರಲ್ಲೊಬ್ಬರ ಯಾ ಹೆತ್ತವರ ಕೊರತೆ ಇರುವ ಎಲ್ಲಾ ಮಕ್ಕಳ ಕುರಿತು ನಾವು ಹೇಗೆ ಚಿಂತಿತರಾಗಿರಬೇಕು ಎಂಬುದರ ಮೇಲಿರುವ ಬುದ್ಧಿವಾದಕ್ಕೆ ಫಲಿತಾರ್ಥವಾಗುತ್ತದೆ ಎಂದು ಹೀಗೆ ಅದು ಗುರುತಿಸಲ್ಪಡಬೇಕು.
[ಅಧ್ಯಯನ ಪ್ರಶ್ನೆಗಳು]
a ಯೆಹೂದಿ ತನಕ್ ಓದುವುದು: “ಕರ್ತನು ಒಂದು ಆಜ್ಞೆಯನ್ನು ಕೊಡುತ್ತಾನೆ; ವಾರ್ತೆಯನ್ನು ತರುವ ಸ್ತ್ರೀಯರು ಒಂದು ದೊಡ್ಡ ಸಮೂಹವಾಗಿದ್ದಾರೆ.”