ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಬಹಾಮಸ್
ಬಹಾಮಸ್ನ ಪ್ರಜಾಪ್ರಭುತ್ವ—3,000 ದ್ವೀಪಗಳು ಮತ್ತು ಸಣ್ಣದ್ವೀಪಗಳ ಒಂದು ದ್ವೀಪಸ್ತೋಮವು—ಫ್ಲೋರಿಡ ಮತ್ತು ಕ್ಯೂಬದ ನಡುವೆ 900 ಕಿಲೋಮೀಟರುಗಳ ಹಸಿರುನೀಲಿ ಬಣ್ಣದ ಸಮುದ್ರದ ಆಚೆಗೆ ಹವಳದ ಕಂಠಹಾರದಂತೆ ಹರಡಿದೆ. ಅದರ 2,67,000 ನಿವಾಸಿಗಳೊಳಗೆ ರಾಜ್ಯ ಘೋಷಕರ ಬೆಳೆಯುತ್ತಿರುವ ಒಂದು ಮೇಳವಿದೆ. ಸ್ತುತಿಯ ಅವರ ಗಾನವು ಯೆಶಾಯ 42:10-12ನ್ನು ಮನಸ್ಸಿಗೆ ತರುತ್ತದೆ: “ಸಮುದ್ರಪ್ರಯಾಣಿಕರೇ, ಸಕಲಜಲಚರಗಳೇ, ದ್ವೀಪಾಂತರಗಳೇ, ದ್ವೀಪಾಂತರವಾಸಿಗಳೇ, ಯೆಹೋವನ ಘನತೆಗಾಗಿ ನೂತನಗೀತವನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ. . . . ಪರ್ವತಾಗ್ರಗಳಲ್ಲಿ ಕೇಕೆಹಾಕಲಿ. ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ.”
ಹೊಸ ನಂಬಿಕೆಯು ಆಹ್ವಾನಿಸಲ್ಪಟ್ಟದ್ದು
ಇಸವಿ 1992ರ ಜುಲೈ ತಿಂಗಳಿನಲ್ಲಿ, ಕ್ರಮದ ಪಯನೀಯರನೊಬ್ಬನು (ಒಬ್ಬ ಪೂರ್ಣ ಸಮಯದ ರಾಜ್ಯ ಪ್ರಚಾರಕನು), ಒಬ್ಬ ವ್ಯಾಪಾರಿ ಪರಿಚಯಸ್ಥನಿಗೆ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸಬಲ್ಲಿರಿ ಎಂಬ ಬೈಬಲ್ ಅಧ್ಯಯನ ಸಹಾಯಕವನ್ನು ನೀಡಿದನು. ಪುಸ್ತಕವನ್ನು ಓದಿದ ತರುವಾಯ, ಆ ಮನುಷ್ಯನು ತನ್ನಲ್ಲಿಯೇ ಹೇಳಿಕೊಂಡದ್ದು: ‘ನಾನು ತನಿಖೆ ನಡೆಸಬೇಕಾದ ಧರ್ಮವು ಇದಾಗಿದೆ.’ ಮುಂದಿನ ಎರಡು ಭಾನುವಾರಗಳಂದು, ಯೆಹೋವನ ಸಾಕ್ಷಿಗಳ ಎರಡು ಭಿನ್ನವಾದ ರಾಜ್ಯ ಸಭಾಗೃಹಗಳಲ್ಲಿ ಕೂಟಗಳನ್ನು ಅವನು ಹಾಜರಾದನು. ಮುಂದೆ, ಅವನೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಾಯಿತು. ಆದರೂ, ಅವನು ಆರಂಭಿಸಿದ ಕೇವಲ ಆರು ವಾರಗಳಲ್ಲೇ, ತನ್ನ ಹೊಸ ನಂಬಿಕೆಯನ್ನು ಪರೀಕ್ಷಿಸುವ ಒಂದು ಆಹ್ವಾನವು ಎದ್ದುಬಂತು—ಜನ್ಮ ದಿನಾಚರಣೆಗಳು.
ಆ ವ್ಯಾಪಾರಿಯ ಕುಟುಂಬವು ಇಂತಹ ಆಚರಣೆಗಳಲ್ಲಿ ಬಹಳವಾಗಿ ಒಳಸೇರಿತ್ತು, ಆದರೆ ದೇವರ ವಾಕ್ಯಕ್ಕಾಗಿದ್ದ ಅವನ ಪ್ರೀತಿಯು ಅವನ ಬೈಬಲ್ ಪಾಠಗಳನ್ನು ಮುಂದುವರಿಸುವಂತೆ ಅವನನ್ನು ಪ್ರಚೋದಿಸಿತು. ಶಾಸ್ತ್ರೀಯ ಸತ್ಯದ ಅವನ ಜ್ಞಾನವು ಹೆಚ್ಚಾದಂತೆ, ಜನ್ಮ ದಿನಾಚರಣೆಗಳ ಮತ್ತು ಲೌಕಿಕ ರಜಾದಿನಗಳ ಹಾಗೂ ಅವುಗಳ ಯೆಹೋವನ ನೋಟದ ತಿಳಿವಳಿಕೆಯೂ ಹೆಚ್ಚಾಯಿತು.
ತಂದೆಯ ದಿನಕ್ಕಾಗಿ ಸಾಮಾಜಿಕ ಕೂಟವೊಂದನ್ನು ಈ ಮನುಷ್ಯನ ಹೆಂಡತಿಯು ಸಂಘಟಿಸಿದಾಗ, ಅವನು ಹಾಜರಾಗಲು ವಿನಯವಾಗಿ ನಿರಾಕರಿಸಿದನು. ಆಕೆಗಾದರೊ, ಅವನು ಅವಳನ್ನು ಇನ್ನು ಪ್ರೀತಿಸುವುದೇ ಇಲ್ಲವೆಂದು ಮತ್ತು ಅವಳ ಹಾಗೂ ಕುಟುಂಬದ ಮುಂಚಿತವಾಗಿ ಅವನ ಧರ್ಮವನ್ನು ಹಾಕುತ್ತಿದ್ದಾನೆಂದು ಅನಿಸಿತು. ಬೈಬಲಿನಿಂದ ಅವನು ಕಲಿಯುತ್ತಿದ್ದ ವಿಷಯವನ್ನು ಅನ್ವಯಿಸುವುದು ತಾನೊಬ್ಬ ಉತ್ತಮ ಗಂಡ ಹಾಗೂ ತಂದೆಯಾಗಿ ಪರಿವರ್ತನೆ ಹೊಂದಲು ಸಹಾಯ ಮಾಡುತ್ತಿದೆ ಎಂದು ಅವನು ದಯಾಪರನಾಗಿ ವಿವರಿಸಿದನು. ಕಟ್ಟಕಡೆಗೆ, ಶಾಸ್ತ್ರೀಯ ಸತ್ಯಕ್ಕಾಗಿ ಅವನ ಪ್ರೀತಿಯನ್ನು ಅವಳು ಗಣ್ಯಮಾಡಲು ತೊಡಗಿದಳು ಮತ್ತು ಬೈಬಲನ್ನು ಅಭ್ಯಾಸಿಸಲು ಒಪ್ಪಿದಳು. ಈಗ ಅವನು ತನ್ನ ಕುಟುಂಬದೊಂದಿಗೆ ಬೈಬಲ್ ಅಧ್ಯಯನವೊಂದನ್ನು ನಡೆಸುತ್ತಾನೆ. ಕಳೆದ ವರ್ಷ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದಲ್ಲಿ ಅವನಿಗೆ ಎಂತಹ ಆನಂದವಿತ್ತು! ಅವನ ಹೆಂಡತಿ ಹಾಗೂ ಮಗಳು ಅಲಿದ್ದರು ಮತ್ತು ಅವನು ದೀಕ್ಷಾಸ್ನಾನ ಪಡೆಯುವುದನ್ನು ನೋಡಿದರು.
ವಲಸೆಗಾರರು ಹೊಸ ಹಾಡನ್ನು ಕೇಳುತ್ತಾರೆ
ಸಾವಿರಾರು ಹೇಟೀ ದೇಶದ ವಲಸೆಗಾರರು ಬಹಾಮಸ್ನ ಸಮಾಜದೊಳಗೆ ಸೇರಿಕೊಳ್ಳುತ್ತಿದ್ದಾರೆ. ರಾಜ್ಯ ಸತ್ಯದ ಹೊಸ ಹಾಡನ್ನು ಅವರು ಕೂಡ ಕೇಳುವ ಅಗತ್ಯವಿದೆ. ಎರಡು ಹೇಟೀಯನ್-ಅಮೆರಿಕನ್ ದಂಪತಿಗಳು ಬಂದಿರುವುದಕ್ಕೆ ಬಹಾಮಸ್ನಲ್ಲಿ ಜೀವಿಸುತ್ತಿರುವ ಸಾಕ್ಷಿಗಳು ಕೃತಜ್ಞತೆಯುಳ್ಳವರಾಗಿದ್ದಾರೆ. ಗ್ರ್ಯಾಂಡ್ ಬಹಾಮ ಮತ್ತು ಆ್ಯಬಕೊ ದ್ವೀಪಗಳ ಮೇಲಿರುವ ಹೊಸದಾಗಿ ರಚಿಸಲ್ಪಟ್ಟ ಹೇಟೀಯನ್ ಗುಂಪುಗಳನ್ನು ಬಲಪಡಿಸಲು ಈ ವ್ಯಕ್ತಿಗಳು ಸಹಾಯ ಮಾಡಿದ್ದಾರೆ.
ರಾಜ್ಯದ ಸಂದೇಶದಲ್ಲಿ ಆಸಕ್ತರಾಗಿರುವ ಹೇಟೀಯವರಿಗೆ ಇನ್ನೂ ಹೆಚ್ಚಿನ ನೆರವಿನಂತೆ, ಬಹಾಮಸ್ನಲ್ಲಿ ನಡೆದಿರುವುವುಗಳಲ್ಲಿ ಪ್ರಥಮ ಕ್ರಿಯೋಲ್ ಭಾಷೆಯ ಜಿಲ್ಲಾ ಅಧಿವೇಶನವು ಜುಲೈ 31 ರಿಂದ ಆಗಸ್ಟ್ 1, 1993ರ ತನಕ ಜರುಗಿತು. ಹೊಸದಾಗಿ ಸಮರ್ಪಿಸಿಕೊಂಡ ಮೂವರು ದೀಕ್ಷಾಸ್ನಾನ ಪಡೆಯುವುದರೊಂದಿಗೆ, ಹಾಜರಿಯು 214ನ್ನು ತಲಪಿತು. ಬಹಾಮಸ್ನಲ್ಲಿ ಸತ್ಯವನ್ನು ಕಲಿತಿರುವ ಅನೇಕ ಹೇಟೀಯವರು ತಮ್ಮ ಸದ್ವೀಪ್ವಕ್ಕೆ ಹಿಂದಿರುಗಿದ್ದಾರೆ ಅಥವಾ ಯೆಹೋವನಿಗೆ ಸ್ತುತಿಯನ್ನು ಹಾಡುವುದರಲ್ಲಿ ಸ್ಥಳಿಕ ಸಾಕ್ಷಿಗಳ ಧ್ವನಿಗಳೊಂದಿಗೆ ತಮ್ಮ ಧ್ವನಿಗಳನ್ನು ಸೇರಿಸಲು ಬೇರೆ ಕಡೆ ಸ್ಥಳಾಂತರಿಸಿಕೊಂಡಿದ್ದಾರೆ.
[ಪುಟ 8 ರಲ್ಲಿರುವ ಚೌಕ]
ದೇಶದ ಪಾರ್ಶ್ವ ದೃಶ್ಯ
ಇಸವಿ 1993ರ ಸೇವಾ ವರ್ಷa
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 1,294
ಪ್ರಮಾಣ: 1 ಸಾಕ್ಷಿಗೆ 197
ಜ್ಞಾಪಕ ಹಾಜರಿ: 3.794
ಸರಾಸರಿ ಪಯನೀಯರ್ ಪ್ರಚಾರಕರು: 186
ಸರಾಸರಿ ಬೈಬಲ್ ಅಧ್ಯಯನಗಳು: 1,715
ದೀಕ್ಷಾಸ್ನಾನ ಪಡೆದವರು: 79
ಸಭೆಗಳ ಸಂಖ್ಯೆ: 22
ಶಾಖಾ ಆಫೀಸ್: ನ್ಯಾಸಾ
[ಅಧ್ಯಯನ ಪ್ರಶ್ನೆಗಳು]
a ಅಧಿಕ ಮಾಹಿತಿಗಾಗಿ, ಇಸವಿ 1994ರ ಕ್ಯಾಲೆಂಡರ್ ಆಫ್ ಜಿಹೋವಸ್ ವಿಟ್ನೆಸೆಸ್ಸ್ ನೋಡಿರಿ.
[ಪುಟ 9 ರಲ್ಲಿರುವ ಚಿತ್ರ]
ಬ್ರಾಂಚ್ ಆಫೀಸ್ ಮತ್ತು ಮಿಷನೆರಿ ಗೃಹ ದೊಂದಿಗೆ, ಪ್ರಥಮ ರಾಜ್ಯ ಸಭಾಗೃಹ
[ಪುಟ 9 ರಲ್ಲಿರುವ ಚಿತ್ರ]
ಸುವಾರ್ತೆಯನ್ನು ಸಾಕ್ಷಿಗಳು ಹುರುಪಿನಿಂದ ಘೋಷಿಸುತ್ತಾರೆ
[ಪುಟ 9 ರಲ್ಲಿರುವ ಚಿತ್ರ]
ಸುಮಾರು 45 ವರ್ಷಗಳ ಹಿಂದೆ, ನ್ಯಾಸಾದಲ್ಲಿ ಮಿಷನೆರಿಗಳೊಂದಿಗೆ ಮಿಲ್ಟನ್ ಜಿ. ಹೆನ್ಷೆಲ್ ಮತ್ತು ನೇಥನ್ ಎಚ್. ನಾರ್
[ಪುಟ 9 ರಲ್ಲಿರುವ ಚಿತ್ರ]
ಫೆಬ್ರವರಿ 8, 1992 ರಂದು ಸಮರ್ಪಿಸಲ್ಪಟ್ಟ ಹೊಸ ಬ್ರಾಂಚ್ ಆಫೀಸ್