ನೀವು ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸುತ್ತಿದ್ದೀರೊ?
“ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ . . . ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.” —1 ಕೊರಿಂಥ 2:12.
1, 2. ಭಾರತದ ಭೋಪಾಲ್ನಲ್ಲಿ, ವಿಷಕಾರಿ ಅನಿಲವನ್ನೊಳಗೊಂಡಿದ್ದ ಯಾವ ದುರಂತವು ಸಂಭವಿಸಿತು, ಆದರೆ ಹೆಚ್ಚು ಮಾರಕವಾದ ಯಾವ “ಗಾಳಿ”ಯು ಲೋಕವ್ಯಾಪಕವಾಗಿ ಉಸಿರಾಡುತ್ತಿದೆ?
ದಶಂಬರ 1984ರ ಒಂದು ತಂಪಾದ ರಾತ್ರಿಯಂದು, ಭಾರತದ ಭೋಪಾಲ್ನಲ್ಲಿ ಅಘಾತಗೊಳಿಸುವಂತಹ ಒಂದು ಸಂಗತಿಯು ಸಂಭವಿಸಿತು. ಆ ನಗರದಲ್ಲಿ, ಒಂದು ರಾಸಾಯನಿಕ ಸ್ಥಾವರವಿದೆ, ಮತ್ತು ದಶಂಬರದ ಆ ರಾತ್ರಿಯಂದು, ಅನಿಲ ಶೇಖರಣೆಯ ಟ್ಯಾಂಕ್ಗಳೊಂದರಲ್ಲಿ ಒಂದು ಕವಾಟವು ದೋಷವುಳ್ಳದ್ದಾಗಿ ಕಾರ್ಯ ನಡೆಸಿತು. ಕೂಡಲೆ, ಟನ್ನುಗಟ್ಟಲೆ ಮೆತಿಲ್ ಐಸೊಸೈಅನೇಟ್ ವಾಯುವಿನಲ್ಲಿ ಪ್ರವಹಿಸಲು ಆರಂಭಿಸಿತು. ಗಾಳಿಯ ಮೂಲಕ ಸಾಗಿಸಲ್ಪಟ್ಟು, ಈ ಮಾರಕ ವಾಯುವು ಮನೆಗಳೊಳಗೆ ಮತ್ತು ನಿದ್ರಿಸುತ್ತಿರುವ ಕುಟುಂಬಗಳ ಮೇಲೆ ಸುಳಿಯುತಿತ್ತು. ಮರಣಪಟ್ಟವರ ಸಂಖ್ಯೆಯು ಸಾವಿರಗಳಿಗೇರಿತು, ಮತ್ತು ಇನ್ನೂ ಅನೇಕರು ಅಂಗವಿಕಲರಾದರು. ಆ ಸಮಯದ ತನಕ ಅದು ಅತ್ಯಂತ ಕೆಟ್ಟದ್ದಾದ ಕೈಗಾರಿಕೆಯ ಅಪಘಾತವಾಗಿತ್ತು.
2 ಭೋಪಾಲ್ನ ಕುರಿತಾಗಿ ಕೇಳಿದಾಗ ಜನರು ದುಃಖಪಟ್ಟರು. ಆದರೆ ಅದು ಮಾರಕವಾಗಿದ್ದರೂ, ಅಲ್ಲಿ ಬಿಡುಗಡೆ ಹೊಂದಿದ ಅನಿಲವು, ಜನರು ಪ್ರತಿದಿನ ಲೋಕದಾದ್ಯಂತ ಉಸಿರಾಡುವ ಒಂದು “ಅನಿಲ”ದಿಂದ ಆತ್ಮಿಕವಾಗಿ ಕೊಲ್ಲಲ್ಪಡುವ ಸಂಖ್ಯೆಗಿಂತ ಎಷ್ಟೋ ಕಡಿಮೆ ಜನರನ್ನು ಕೊಂದಿತು. ಬೈಬಲ್ ಅದನ್ನು “ಪ್ರಾಪಂಚಿಕ ಆತ್ಮ” ಎಂದು ಕರೆಯುತ್ತದೆ. ಅಪೊಸ್ತಲ ಪೌಲನು ದೇವರಿಂದ ಬರುವ ಆತ್ಮದೊಂದಿಗೆ ವೈದೃಶ್ಯವಾಗಿಟ್ಟ ಮಾರಕ ವಾತಾವರಣವು ಅದಾಗಿದ್ದು, ಆತನಂದದ್ದು: “ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ದಯಪಾಲಿಸಿರುವ ಕೃಪಾವರಗಳನ್ನು ತಿಳುಕೊಳ್ಳುವದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.”—1 ಕೊರಿಂಥ 2:2112.
3. “ಪ್ರಾಪಂಚಿಕ ಆತ್ಮ” ಎಂದರೇನು?
3 “ಪ್ರಾಪಂಚಿಕ ಆತ್ಮ”ವು ನಿಷ್ಕೃಷ್ಟವಾಗಿ ಏನಾಗಿದೆ? ದ ನ್ಯೂ ಥ್ಯಾಯರ್ಸ್ ಗ್ರೀಕ್ ಇಂಗ್ಲಿಷ್ ಲೆಕ್ಸಿಕನ್ ಆಫ್ ದ ನ್ಯೂ ಟೆಸ್ಟಮೆಂಟ್ ಗನುಸಾರ, “ಆತ್ಮ” (ಗ್ರೀಕ್, ನ್ಯೂಮ) ಎಂಬ ಪದದ ಸಾಮಾನ್ಯವಾದ ಅರ್ಥವು, “ಯಾವುದೇ ವ್ಯಕ್ತಿಯ ಜೀವಾತ್ಮವನ್ನು ಆವರಿಸುವ ಮತ್ತು ಆಳುವ ಪ್ರಭಾವ ಅಥವಾ ಮನೋವೃತ್ತಿ” ಆಗಿದೆ. ವ್ಯಕ್ತಿಯೊಬ್ಬನಿಗೆ ಒಂದು ಒಳ್ಳೆಯ ಅಥವಾ ಒಂದು ಕೆಟ್ಟ ಆತ್ಮ, ಯಾ ಮನೋವೃತ್ತಿ ಇರಸಾಧ್ಯವಿದೆ. (ಕೀರ್ತನೆ 51:10; 2 ತಿಮೊಥೆಯ 4:22) ಜನರ ಒಂದು ಗುಂಪಿಗೆ ಸಹ ಒಂದು ಆತ್ಮ, ಅಥವಾ ಪ್ರಬಲವಾದ ಮನೋವೃತ್ತಿಯು ಇರಸಾಧ್ಯವಿದೆ. ತನ್ನ ಸ್ನೇಹಿತ ಫಿಲೆಮೋನನಿಗೆ ಅಪೊಸ್ತಲ ಪೌಲನು ಬರೆದದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ.” (ಫಿಲೆಮೋನ 25) ತದ್ರೀತಿಯಲ್ಲಿ—ಆದರೆ ಇನ್ನೂ ಅಧಿಕ ಪ್ರಮಾಣದಲ್ಲಿ—ಸರ್ವಸಾಮಾನ್ಯವಾಗಿ ಈ ಲೋಕವು ಒಂದು ಅಧಿಕಾರ ನಡೆಸುವ ಮನೋವೃತ್ತಿಯನ್ನು ಹೊಂದಿದೆ, ಮತ್ತು ಪೌಲನಿಂದ ನಿರ್ದೇಶಿಸಲ್ಪಟ್ಟ “ಪ್ರಾಪಂಚಿಕ ಆತ್ಮ”ವು ಇದಾಗಿದೆ. ವಿನ್ಸೆಂಟ್ಸ್ ವರ್ಡ್ ಸಡ್ಟೀಸ್ ಇನ್ ದ ನ್ಯೂ ಟೆಸ್ಟಮೆಂಟ್ಗನುಸಾರ, “ಆತ್ಮೋನ್ನತಿಯನ್ನುಂಟುಮಾಡದ ಲೋಕವನ್ನು ಪ್ರಚೋದಿಸುವ ಕೆಡುಕನ ಮೂಲ ತತ್ವವೆಂದು ಈ ವಾಕ್ಸರಣಿಯ ಅರ್ಥ.” ಈ ಲೋಕದ ಆಲೋಚನೆಯನ್ನು ವ್ಯಾಪನೆ ಮಾಡುವ ಮತ್ತು ಜನರ ವರ್ತನೆಯ ಮೇಲೆ ಪ್ರಬಲವಾಗಿ ಪರಿಣಾಮ ಬೀರುವ ಪಾಪಪೂರ್ಣ ಪ್ರವೃತ್ತಿಯೇ ಇದಾಗಿದೆ.
4. ಪ್ರಾಪಂಚಿಕ ಆತ್ಮದ ಮೂಲನು ಯಾರು, ಮತ್ತು ಈ ಆತ್ಮವು ಮಾನವರ ಮೇಲೆ ಯಾವ ಪರಿಣಾಮವನ್ನುಂಟುಮಾಡುತ್ತದೆ?
4 ಈ ಆತ್ಮವು ವಿಷಕರವಾದದ್ದಾಗಿದೆ. ಏಕೆ? “ಇಹಲೋಕಾಧಿಪತಿ” ಯಾದ ಸೈತಾನನಿಂದ ಅದು ಪ್ರವರ್ತಿಸುವುದರಿಂದಲೇ. ವಾಸ್ತವವಾಗಿ, “ವಾಯು ಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿ, ಅವಿಧೇಯತೆಯ ಪುತ್ರರೊಳಗೆ ಈಗ ಕಾರ್ಯನಡಿಸುವ ಆತ್ಮ,” ಎಂದು ಅವನು ಕರೆಯಲ್ಪಟ್ಟಿದ್ದಾನೆ. (ಯೋಹಾನ 12:31; ಎಫೆಸ 2:2, NW.) ಈ “ವಾಯು” ಅಥವಾ “ಅವಿಧೇಯತೆಯ ಪುತ್ರರೊಳಗೆ ಈಗ ಕಾರ್ಯನಡಿಸುವ ಆತ್ಮ”ವನ್ನು ತಪ್ಪಿಸಿಕೊಳ್ಳುವುದು ಕಷ್ಟಕರವಾದದ್ದಾಗಿದೆ. ಮಾನವ ಸಮಾಜದಲ್ಲಿ ಇದು ಎಲ್ಲೆಲ್ಲಿಯೂ ಇದೆ. ನಾವು ಅದನ್ನು ಒಳಗೆ ತೆಗೆದುಕೊಳ್ಳುವಲ್ಲಿ, ಅದರ ಮನೋಭಾವಗಳನ್ನು, ಅದರ ಗುರಿಗಳನ್ನು ಅಳವಡಿಸಿಕೊಳ್ಳಲು ನಾವು ಆರಂಭಿಸುತ್ತೇವೆ. ಈ ಪ್ರಾಪಂಚಿಕ ಆತ್ಮವು ನಮ್ಮ ಪಾಪಪೂರ್ಣ ಅಪರಿಪೂರ್ಣತೆಗನುಸಾರ ಅಂದರೆ, ‘ಶರೀರಭಾವಕ್ಕನುಸಾರ ಜೀವಿಸುವಂತೆ’ ಉತ್ತೇಜಿಸುತ್ತದೆ. ಅದು ಮರಣಾಂತಕವಾಗಿದೆ, ಏಕೆಂದರೆ, “ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ.”—ರೋಮಾಪುರ 8:13.
ಈ ಪ್ರಾಪಂಚಿಕ ಆತ್ಮವನ್ನು ತೊರೆಯುವುದು
5. ಭೋಪಾಲ್ನ ದುರಂತದ ಸಮಯದಲ್ಲಿ ಒಬ್ಬ ಸಾಕ್ಷಿಯು ಹೇಗೆ ವಿವೇಕದಿಂದ ವರ್ತಿಸಿದನು?
5 ಭೋಪಾಲ್ನ ವಿಪತ್ತಿನ ಸಮಯದಲ್ಲಿ, ಒಬ್ಬ ಯೆಹೋವನ ಸಾಕ್ಷಿಯು ಸೈರನಿನ ಧ್ವನಿಯಿಂದಾಗಿ ಮತ್ತು ವಿಷಕಾರಿ ಅನಿಲದ ಕಟು ವಾಸನೆಯ ಮೂಲಕ ಎಚ್ಚರಗೊಂಡನು. ತಡಮಾಡದೆ ತನ್ನ ಕುಟುಂಬವನ್ನು ಅವನು ಎಬ್ಬಿಸಿದನು ಮತ್ತು ಅವರನ್ನು ರಸ್ತೆಗೆ ಅವಸರದಿಂದ ಹೊರಡಿಸಿದನು. ಗಾಳಿಯ ದಿಕ್ಕನ್ನು ಗ್ರಹಿಸಲಿಕ್ಕಾಗಿ ಒಂದು ಕ್ಷಣ ತಡೆದು, ಮಾರ್ಗದಲ್ಲಿ ಗೊಂದಲಭರಿತ ಗುಂಪುಗಳ ಮಧ್ಯೆ ಪ್ರಯಾಸಪಡುತ್ತಾ, ತನ್ನ ಕುಟುಂಬವನ್ನು ನಗರದ ಹೊರಗಿರುವ ಒಂದು ಬೆಟ್ಟದ ತುದಿಗೆ ಕೊಂಡೊಯ್ದನು. ಅಲ್ಲಿ ಅವರು ಸಮೀಪದ ಒಂದು ಸರೋವರದಿಂದ ಬೀಸುವ ಸ್ವಚ್ಛವಾದ, ನಿರ್ಮಲ ಗಾಳಿಯಿಂದ ತಮ್ಮ ಶ್ವಾಸ ಕೋಶಗಳನ್ನು ತುಂಬಿಸಲು ಶಕ್ತರಾದರು.
6. ಪ್ರಾಪಂಚಿಕ ಆತ್ಮವನ್ನು ತ್ಯಜಿಸಲು ನಾವೆಲ್ಲಿಗೆ ಹೋಗಸಾಧ್ಯವಿದೆ?
6 ಈ ಲೋಕದ ವಿಷಕಾರಿ “ವಾಯು” ವಿನಿಂದ ಆಶ್ರಯ ಪಡೆಯಲಿಕ್ಕಾಗಿ ನಾವು ಹೋಗಸಾಧ್ಯವಿರುವ ಎತ್ತರಿಸಲ್ಪಟ್ಟ ಒಂದು ಸ್ಥಳವಿದೆಯೊ? ಇದೆಯೆಂದು ಬೈಬಲ್ ಹೇಳುತ್ತದೆ. ನಮ್ಮ ದಿನದ ಕುರಿತಾಗಿ ಮುಂಗಾಣುತ್ತಾ, ಪ್ರವಾದಿ ಯೆಶಾಯನು ಬರೆದದ್ದು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.” (ಯೆಶಾಯ 2:2, 3) ಈ ಗ್ರಹದಲ್ಲಿ, ಶುದ್ಧ ಆರಾಧನೆಯಿಂದ ಎತ್ತಿ ಹಿಡಿಯಲ್ಪಟ್ಟ, ಮೇಲಕ್ಕೆತ್ತಲ್ಪಟ್ಟ “ಯೆಹೋವನ ಮಂದಿರದ ಪರ್ವತ”ವು ಮಾತ್ರವೇ, ಈ ಲೋಕದ ಉಸಿರುಕಟ್ಟಿಸುವ, ವಿಷಮಯ ಆತ್ಮದಿಂದ ಸ್ವತಂತ್ರವಾಗಿರುವ ಒಂದೇ ಒಂದು ನೆಲೆಯಾಗಿದೆ. ಅಲ್ಲಿ ನಂಬಿಗಸ್ತ ಕ್ರೈಸ್ತರ ನಡುವೆ ಯೆಹೋವನ ಆತ್ಮವು ಸ್ವತಂತ್ರವಾಗಿ ಹರಿಯುತ್ತದೆ.
7. ಅನೇಕರು ಪ್ರಾಪಂಚಿಕ ಆತ್ಮದಿಂದ ಹೇಗೆ ರಕ್ಷಿಸಲ್ಪಟ್ಟಿದ್ದಾರೆ?
7 ಭೋಪಾಲ್ನ ಆ ಸಾಕ್ಷಿಯಿಂದ ಅನುಭವಿಸಲ್ಪಟ್ಟಂತಹ ವಿಚಾರಕ್ಕೆ ಸದೃಶವಾದ ಒಂದು ಪರಿಹಾರವನ್ನು, ಹಿಂದೆ ಈ ಪ್ರಾಪಂಚಿಕ ಆತ್ಮವನ್ನು ಸೇವಿಸುತ್ತಿದ್ದ ಅನೇಕರು ಅನುಭವಿಸಿದ್ದಾರೆ. ಈ ಲೋಕದ ಗಾಳಿ, ಅಥವಾ ಆತ್ಮವನ್ನು ಸೇವಿಸಿದ “ಅವಿಧೇಯತೆಯ ಪುತ್ರರ” ಕುರಿತಾಗಿ ಮಾತಾಡಿದ ಬಳಿಕ ಅಪೊಸ್ತಲ ಪೌಲನು ಹೇಳುವುದು: “ನಾವೆಲ್ಲರೂ ಪೂರ್ವದಲ್ಲಿ ಅವಿಧೇಯರಾಗಿದ್ದು ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವಸಿದ್ಧವಾಗಿ ದೇವರ ಕೋಪಕ್ಕೆ ಗುರಿಯಾಗಿದ್ದೆವು. ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮ ಮೇಲೆ ಮಹಾ ಪ್ರೀತಿಯನ್ನಿಟ್ಟು ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು.” (ಎಫೆಸ 2:3-5) ಈ ವಿಷಯಗಳ ವ್ಯವಸ್ಥೆಯ ವಿಷಮಯ ಗಾಳಿಯನ್ನು ಹೊರತು ಬೇರೇನನ್ನೂ ಸೇವಿಸದವರು ಆತ್ಮಿಕ ರೀತಿಯಲ್ಲಿ ಸತ್ತವರಾಗಿದ್ದಾರೆ. ಆದರೂ, ಇಂದು ಲಕ್ಷಗಟ್ಟಲೆ ಜನರು ಆತ್ಮಿಕವಾಗಿ ಮೇಲಕ್ಕೆತ್ತಲ್ಪಟ್ಟ ಸ್ಥಳಗಳಿಗೆ ಪಲಾಯನ ಮಾಡುತ್ತಿದ್ದಾರೆ ಮತ್ತು ಆ ಮಾರಕ ಸ್ಥಿತಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.
“ಪ್ರಾಪಂಚಿಕ ಆತ್ಮ”ದ ತೋರಿಕೆಗಳು
8, 9. (ಎ) ಪ್ರಾಪಂಚಿಕ ಆತ್ಮದ ವಿರುದ್ಧ ನಾವು ಸಂತತವಾಗಿ ಎಚ್ಚರಿಕೆಯಿಂದಿರಬೇಕೆಂದು ಯಾವುದು ತೋರಿಸುತ್ತದೆ? (ಬಿ) ಸೈತಾನನ ಆತ್ಮವು ಹೇಗೆ ನಮ್ಮನ್ನು ಭ್ರಷ್ಟಗೊಳಿಸಬಹುದು?
8 ಸೈತಾನನ ಮರಣಾಂತಕ ವಾಯುವು ಇನ್ನೂ ನಮ್ಮ ಸುತ್ತಲೂ ಸುಳಿಯಾಗಿ ಸುತ್ತುತ್ತಿದೆ. ಶುದ್ಧ ಆರಾಧನೆಯ ಉನ್ನತ ಸ್ಥಳದಿಂದ ಕೆಳಕ್ಕೆ, ಪ್ರಾಯಶಃ ಆತ್ಮಿಕತೆಯನ್ನು ನಿಗ್ರಹಿಸಬಹುದಾದ ಲೋಕದೊಳಕ್ಕೆ ಹಿಂದಿರುಗಿ, ತೇಲಿಹೋಗದಂತೆ ನಾವು ಎಚ್ಚರಿಕೆಯಿಂದಿರಬೇಕಾಗಿದೆ. ಸಂತತವಾದ ಜಾಗರೂಕತೆಯನ್ನು ಇದು ಕೇಳಿಕೊಳ್ಳುತ್ತದೆ. (ಲೂಕ 21:36; 1 ಕೊರಿಂಥ 16:13) ಉದಾಹರಣೆಗೆ ಈ ಸಂಗತಿಯನ್ನು ಪರಿಗಣಿಸಿ. ನೈತಿಕತೆಯ ಕುರಿತಾದ ಯೆಹೋವನ ಮಟ್ಟಗಳೊಂದಿಗೆ ಎಲ್ಲಾ ಕ್ರೈಸ್ತರು ಪರಿಚಿತರಾಗಿದ್ದಾರೆ ಮತ್ತು ವ್ಯಭಿಚಾರ, ಹಾದರ, ಮತ್ತು ಸಲಿಂಗೀಕಾಮಗಳಂತಹ ಅಶುದ್ಧ ನಡವಳಿಕೆಗಳು ಅಂಗೀಕರಿಸಲ್ಪಡುತ್ತವೆಂದು ಅವರು ಎಂದಿಗೂ ಒಪ್ಪುವುದಿಲ್ಲ. ಆದರೂ, ಪ್ರತಿ ವರ್ಷ ಸುಮಾರು 40,000 ವ್ಯಕ್ತಿಗಳು ಯೆಹೋವನ ಸಂಸ್ಥೆಯಿಂದ ಬಹಿಷ್ಕರಿಸಲ್ಪಡುತ್ತಿದ್ದಾರೆ. ಏಕೆ? ಅಧಿಕ ಸಂದರ್ಭಗಳಲ್ಲಿ ತದ್ರೂಪದ ಈ ಅಶುದ್ಧ ನಡವಳಿಕೆಗಳ ಕಾರಣದಿಂದಲೆ. ಅದು ಹೇಗೆ ಸಂಭವಿಸಸಾಧ್ಯವಿದೆ?
9 ಯಾಕೆಂದರೆ ನಾವೆಲ್ಲರೂ ಅಸಂಪೂರ್ಣರಾಗಿದ್ದೇವೆ. ಶರೀರವು ದುರ್ಬಲವಾಗಿದೆ, ಮತ್ತು ನಮ್ಮ ಹೃದಯದಲ್ಲಿ ಬೇರೂರಿರುವ ಕೆಟ್ಟ ಪ್ರವೃತ್ತಿಗಳ ವಿರುದ್ಧ ನಾವು ಸಂತತವಾಗಿ ಹೋರಾಡಬೇಕಾಗಿದೆ. (ಪ್ರಸಂಗಿ 7:20; ಯೆರೆಮೀಯ 17:9) ಆದರೂ, ಅಂತಹ ಕೆಟ್ಟ ಪ್ರವೃತ್ತಿಗಳೆಲ್ಲವೂ ಪ್ರಾಪಂಚಿಕ ಆತ್ಮದಿಂದ ಉತ್ತೇಜಿಸಲ್ಪಡುತ್ತವೆ. ಈ ಲೋಕದಲ್ಲಿರುವ ಅನೇಕರು, ಅನೈತಿಕತೆಯಲ್ಲಿ ಯಾವ ತಪ್ಪನ್ನೂ ಕಾಣುವುದಿಲ್ಲ, ಮತ್ತು ಯಾವುದೂ ನಡೆಯುತ್ತದೆಂಬ ವಿಚಾರವು ಸೈತಾನನ ವಿಷಯ ವ್ಯವಸ್ಥೆಯ ಮಾನಸಿಕ ಪ್ರವೃತ್ತಿಯ ಭಾಗವಾಗಿದೆ. ಅಂತಹ ಆಲೋಚನೆಗಳಿಗೆ ನಾವು ನಮ್ಮನ್ನು ಒಡ್ಡುವುದಾದರೆ, ನಾವು ಕೂಡ ಲೋಕದವರಂತೆ ಆಲೋಚಿಸಲಾರಂಭಿಸುವ ಅಧಿಕ ಸಂಭವನೀಯತೆಯಿದೆ. ಬೇಗನೆ, ಅಂತಹ ಅಶುದ್ಧ ಆಲೋಚನೆಗಳು, ಗಂಭೀರವಾದ ಪಾಪದಲ್ಲಿ ಅಂತ್ಯಗೊಳ್ಳುವಂತಹ ಕೆಟ್ಟ ಅಪೇಕ್ಷೆಗಳನ್ನು ಫಲಿಸಬಹುದು. (ಯಾಕೋಬ 1:14, 15) ಯೆಹೋವನ ಶುದ್ಧ ಆರಾಧನೆಯ ಪರ್ವತದಿಂದ ಅಲೆದಾಡಿ, ನಾವು ಸೈತಾನನ ಲೋಕದ ಕಳಂಕಿತ ತಗ್ಗುಗಳಿಗೆ ಹಿಂದಿರುಗಿರುವೆವು. ಅಲ್ಲಿ ಬೇಕೆಂದು ಉಳಿಯುವ ಯಾರೊಬ್ಬನೂ ನಿತ್ಯ ಜೀವವನ್ನು ಹೊಂದನು.—ಎಫೆಸ 5:3-5, 7.
10. ಸೈತಾನನ ಗಾಳಿಯ ಒಂದು ತೋರಿಕೆ ಯಾವುದಾಗಿದೆ, ಮತ್ತು ಕ್ರೈಸ್ತರು ಇದನ್ನು ಏಕೆ ತ್ಯಜಿಸಬೇಕು?
10 ಪ್ರಾಪಂಚಿಕ ಆತ್ಮವು ನಮ್ಮ ಸುತ್ತಲೂ ಸ್ಪಷ್ಟವಾಗಿಗಿ ವ್ಯಕ್ತವಾಗುತ್ತಿದೆ. ಉದಾಹರಣೆಗೆ, ಗೇಲಿಮಾಡುವ, ಅಣಕ ಮನೋವೃತ್ತಿಯೊಂದಿಗೆ ಅನೇಕರು ಜೀವನ ನಡೆಸುತ್ತಾರೆ. ಭ್ರಷ್ಟ ಅಥವಾ ಅನುಚಿತ ರಾಜ್ಯನೀತಿಜ್ಞರಿಂದ ಮತ್ತು ಅನೈತಿಕ, ಲೋಭಿಗಳಾದ ಧಾರ್ಮಿಕ ಮುಖಂಡರಿಂದ ಭ್ರಮನಿರಸನಗೊಳಿಸಲ್ಪಟ್ಟು, ಗಂಭೀರ ವಿಷಯಗಳ ಕುರಿತು ಸಹ ಅವರು ಅಗೌರವದಿಂದ ಮಾತಾಡುತ್ತಾರೆ. ಕ್ರೈಸ್ತರು ಈ ಪ್ರವೃತ್ತಿಯನ್ನು ಪ್ರತಿರೋಧಿಸುತ್ತಾರೆ. ಹಿತಕರವಾದ ಹಾಸ್ಯದರ್ಶನ ಶಕ್ತಿಯು ನಮಗಿರುವುದಾದರೆ, ಅಗೌರವದ ಒಂದು ಅಣಕದ ಆತ್ಮವನ್ನು ಸಭೆಯೊಳಗೆ ತರುವುದನ್ನು ನಾವು ತಪ್ಪಿಸುತ್ತೇವೆ. ಕ್ರೈಸ್ತನೊಬ್ಬನ ಮಾತು ಯೆಹೋವನ ಭಯ ಮತ್ತು ಹೃದಯದ ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ. (ಯಾಕೋಬ 3:10, 11; ಹೋಲಿಸಿ ಜ್ಞಾನೋಕ್ತಿ 6:14.) ನಾವು ಎಳೆಯರಾಗಿರಲಿ ವೃದ್ಧರಾಗಿರಲಿ, ನಮ್ಮ ಮಾತು “ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”—ಕೊಲೊಸ್ಸೆ 4:6.
11. (ಎ) ಪ್ರಾಪಂಚಿಕ ಆತ್ಮದ ಕುರಿತಾದ ಎರಡನೆಯ ನೋಟವು ಏನಾಗಿದೆ? (ಬಿ) ಈ ನೋಟವನ್ನು ಪ್ರತಿಬಿಂಬಿಸುವವರಿಂದ ಕ್ರೈಸ್ತರು ಭಿನ್ನರಾಗಿದ್ದಾರೆ ಏಕೆ?
11 ಈ ಪ್ರಾಪಂಚಿಕ ಆತ್ಮವನ್ನು ಪ್ರತಿಬಿಂಬಿಸುವ ಇನ್ನೊಂದು ಸಾಮಾನ್ಯ ಪ್ರವೃತ್ತಿಯು ದ್ವೇಷವಾಗಿದೆ. ಈ ಲೋಕವು ದ್ವೇಷಗಳಿಂದ ವಿಭಾಗಿಸಲ್ಪಟ್ಟಿದೆ ಮತ್ತು ಜಾತಿ, ಕುಲ, ರಾಷ್ಟ್ರ ಮತ್ತು ವೈಯಕ್ತಿಕ ವ್ಯತ್ಯಾಸಗಳ ಮೇಲೆ ಸಹ ವೈಷಮ್ಯಗಳು ಆಧಾರಿಸಿವೆ. ದೇವರ ಆತ್ಮವು ಸಕ್ರಿಯವಾಗಿರುವಲ್ಲಿ ವಿಷಯಗಳು ಎಷ್ಟೊಂದು ಉತ್ತಮವಾಗಿರುತ್ತವೆ! ಅಪೊಸ್ತಲ ಪೌಲನು ಬರೆದದ್ದು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆಂಬದಾಗಿ ಬರೆದದೆ. ಹಾಗಾದರೆ ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು. ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.”—ರೋಮಾಪುರ 12:17-21.
12. ಕ್ರೈಸ್ತರು ಪ್ರಾಪಂಚಿಕತೆಯನ್ನು ಏಕೆ ತ್ಯಜಿಸಬೇಕು?
12 ಈ ಪ್ರಾಪಂಚಿಕ ಆತ್ಮವು ಪ್ರಾಪಂಚಿಕತೆಯನ್ನು ಸಹ ಪ್ರಚೋದಿಸುತ್ತದೆ. ವಾಣಿಜ್ಯ ಲೋಕದಿಂದ ಉತ್ತೇಜಿಸಲ್ಪಟ್ಟು, ಅನೇಕರು ಅತ್ಯಾಧುನಿಕ ಸಲಕರಣೆ, ಅತ್ಯಾಧುನಿಕ ಶೈಲಿ, ಅತ್ಯಾಧುನಿಕ ಮಾದರಿಯ ಕಾರಿನ ಭ್ರಾಂತಿಪೀಡಿತರಾಗಿದ್ದಾರೆ. “ಕಣ್ಣಿನಾಶೆ”ಯ ದಾಸ್ವತಕ್ಕೆ ಅವರು ಒಳಗಾಗಿದ್ದಾರೆ. (1 ಯೋಹಾನ 2:16) ಅಧಿಕಾಂಶ ಜನರು ಜೀವನದಲ್ಲಿ ತಾವು ಮಾಡಿದ ಯಶಸ್ಸನ್ನು, ತಮ್ಮ ಮನೆಯ ಗಾತ್ರದ ಪ್ರಮಾಣದಿಂದ ಅಥವಾ ತಮ್ಮ ಬ್ಯಾಂಕ್ ಅಕೌಂಟ್ಗಳ ಮೂಲಕ ಅಳೆಯುತ್ತಾರೆ. ಎತ್ತರಿಸಲ್ಪಟ್ಟ ಯೆಹೋವನ ಶುದ್ಧ ಆರಾಧನಾ ಪರ್ವತದ ಮೇಲೆ ಸ್ಪಚ್ಛವಾದ ಆತ್ಮಿಕ ಗಾಳಿಯನ್ನು ಸೇವಿಸುತ್ತಿರುವ ಕ್ರೈಸ್ತರು, ಈ ಪ್ರವೃತ್ತಿಯನ್ನು ಪ್ರತಿರೋಧಿಸುತ್ತಾರೆ. ಪ್ರಾಪಂಚಿಕ ವಿಷಯಗಳ ದೃಢವಾದ ಬೆನ್ನಟ್ಟುವಿಕೆಯು ನಾಶಕಾರಕವೆಂದು ಅವರು ತಿಳಿದಿದ್ದಾರೆ. (1 ತಿಮೊಥೆಯ 6:9, 10) ಯೇಸು ತನ್ನ ಶಿಷ್ಯರಿಗೆ ಜ್ಞಾಪಿಸಿದ್ದು: “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.”—ಲೂಕ 12:15.
13. ಈ ಪ್ರಾಪಂಚಿಕ ಆತ್ಮದ ಇನ್ನಿತರ ಕೆಲವು ತೋರಿಕೆಗಳು ಯಾವುವು?
13 ಈ ಲೋಕದ ಅಸ್ವಸ್ಥಕರ “ಗಾಳಿ”ಯ ಇನ್ನಿತರ ತೋರಿಕೆಗಳಿವೆ. ದಂಗೆಕೋರ ಆತ್ಮವು ಒಂದಾಗಿದೆ. (2 ತಿಮೊಥೆಯ 3:1-3) ಅನೇಕ ಜನರು ಅಧಿಕಾರದೊಂದಿಗೆ ಹಿಂದಿನಂತೆ ಸಹಕರಿಸದಿರುವುದನ್ನು ನೀವು ಲಕ್ಷಿಸಿದ್ದೀರೋ? ನಿಮ್ಮ ಸ್ಥಳಿಕ ಕೆಲಸದಲ್ಲಿ, ಯಾರಾದರೂ ವಾಸ್ತವವಾಗಿ ಕಣ್ಣಿಟ್ಟು ಕಾಯದ ಹೊರತು ಕೆಲಸ ಮಾಡದಿರುವಂತಹ ಬಹುವಿಸ್ತಾರವಾಗಿ ಹರಡಿರುವ ಹವ್ಯಾಸವನ್ನು ನೀವು ಗಮನಿಸಿದ್ದೀರೋ? ಪ್ರಾಯಶಃ ತಮ್ಮ ತೆರಿಗೆಗಳಲ್ಲಿ ವಂಚಿಸುವ ಮೂಲಕ ಅಥವಾ ಕೆಲಸದ ಸ್ಥಳದಿಂದ ಕಳ್ಳತನ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿರುವ ಎಷ್ಟು ಜನರನ್ನು ನೀವು ತಿಳಿದಿದ್ದೀರಿ? ನೀವಿನ್ನೂ ಶಾಲೆಗೆ ಹೋಗುತ್ತಿರುವುದಾದರೆ, ಶೈಕ್ಷಣಿಕವಾಗಿ ಯಶಸ್ವಿಗಳಿಸುವವರನ್ನು ನಿಮ್ಮ ಸಹಪಾಠಿಗಳು ತಿರಸ್ಕಾರದಿಂದ ಕಾಣುತ್ತಾರೆಂಬ ಕಾರಣದಿಂದ ನಿಮ್ಮಿಂದ ಅತ್ಯುತ್ತಮವಾದುದನ್ನು ಮಾಡುವುದರಲ್ಲಿ ನೀವೆಂದಾದರೂ ನಿರುತ್ಸಾಹಗೊಂಡಿದ್ದೀರೊ? ಇವುಗಳೆಲ್ಲವೂ ಕ್ರೈಸ್ತರು ಪ್ರತಿರೋಧಿಸಬೇಕಾದ ಈ ಪ್ರಾಪಂಚಿಕ ಆತ್ಮದ ತೋರಿಕೆಗಳಾಗಿವೆ.
ಈ ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸುವ ವಿಧ
14. ಕ್ರೈಸ್ತರು ಯಾವ ರೀತಿಗಳಲ್ಲಿ ಕ್ರೈಸ್ತೇತರರಿಗಿಂತ ವಿಭಿನ್ನರಾಗಿದ್ದಾರೆ?
14 ಆದರೂ, ವಾಸ್ತವವಾಗಿ ಲೋಕದಲ್ಲಿ ನಾವು ಜೀವಿಸುತ್ತಿರುವಾಗ ಈ ಪ್ರಾಪಂಚಿಕ ಆತ್ಮವನ್ನು ನಾವು ಹೇಗೆ ಪ್ರತಿರೋಧಿಸಸಾಧ್ಯವಿದೆ? ಭೌತಿಕವಾಗಿ ನಾವೆಲ್ಲಿದ್ದೇವೆಂಬುದು ಅಷ್ಟೊಂದು ಪ್ರಾಮುಖ್ಯವಲ್ಲವಾದರೂ, ಆತ್ಮಿಕವಾಗಿ ನಾವು ಲೋಕದ ಭಾಗವಾಗಿಲ್ಲವೆಂಬುದನ್ನು ನಾವು ನೆನಪಿನಲ್ಲಡಬೇಕು. (ಯೋಹಾನ 17:15, 16) ನಮ್ಮ ಧ್ಯೇಯಗಳು ಈ ಲೋಕದ ಧ್ಯೇಯಗಳಾಗಿರುವುದಿಲ್ಲ. ನಮ್ಮ ವಿಷಯಗಳ ದೃಷ್ಟಿಕೋನವು ಬೇರೆಯೇ ಆಗಿದೆ. ನಾವು “ಮಾನುಷಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ದೇವರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮಸಂಬಂಧವಾದವುಗಳನ್ನು ಆತ್ಮನಿಗೆ ಯುಕ್ತವಾದ ರೀತಿಯಲ್ಲಿ ವಿವರಿಸುವ,” ಆಲೋಚಿಸುವ ಮತ್ತು ಮಾತಾಡುವ ಆತ್ಮಿಕ ಜನರಾಗಿದ್ದೇವೆ.—1 ಕೊರಿಂಥ 2:13.
15. ಪ್ರಾಪಂಚಿಕ ಆತ್ಮವನ್ನು ನಾವು ಹೇಗೆ ಪ್ರತಿರೋಧಿಸಸಾಧ್ಯವಿದೆ?
15 ವಿಷಮಯ ಅನಿಲದಿಂದ ಮಲಿನಗೊಂಡ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಸ್ವತಃ ತನ್ನನ್ನು ಕಂಡುಕೊಳ್ಳುವುದಾದರೆ ಅವನೇನು ಮಾಡಬಲ್ಲನು? ಅವನು ಒಂದು ಶುದ್ಧವಾದ ವಾಯುವಿನ ಸರಬರಾಯಿಗೆ ಜೋಡಿಸಲ್ಪಟ್ಟಿರುವ ಒಂದು ಅನಿಲ ಮುಸುಕನ್ನು ಧರಿಸಬಹುದು, ಅಥವಾ ಸ್ವತಃ ಆ ಕ್ಷೇತ್ರದಿಂದ ಶಾರೀರಿಕವಾಗಿ ತನ್ನನ್ನು ಬೇರ್ಪಡಿಸಿಕೊಳ್ಳಬಹುದು. ಸೈತಾನನ ಗಾಳಿಯನ್ನು ತ್ಯಜಿಸುವ ಮಾರ್ಗವು ಈ ವಿಧಾನಗಳನ್ನು ಸಂಯೋಜಿಸುತ್ತದೆ. ನಮ್ಮ ಆಲೋಚನೆಯನ್ನು ಪ್ರಭಾವಿಸಲು ಈ ಪ್ರಾಪಂಚಿಕ ಆತ್ಮಕ್ಕೆ ಶಕಿಕ್ತೊಡುವ ಯಾವುದೇ ವಿಷಯದಿಂದ ನಮ್ಮನ್ನು ಶಾರೀರಿಕವಾಗಿ ಬೇರ್ಪಡಿಸಿಕೊಳ್ಳಲು, ಸಾಧ್ಯವಿರುವಷ್ಟು ಮಟ್ಟಿಗೆ ನಾವು ಪ್ರಯತ್ನಿಸುತ್ತೇವೆ. ಹೀಗೆ, ಕೆಟ್ಟ ಸಹವಾಸವನ್ನು ನಾವು ತೊರೆಯುತ್ತೇವೆ, ಮತ್ತು ಬಲಾತ್ಕಾರ, ಅನೈತಿಕತೆ, ಪ್ರೇತವ್ಯವಹಾರ, ದಂಗೆಕೋರತನ, ಅಥವಾ ಇತರ ಯಾವುದೇ ರೀತಿಯ ಶರೀರ ಭಾವದ ಕೆಲಸಗಳನ್ನು ಪ್ರಚೋದಿಸುವ ಯಾವುದೇ ರೀತಿಯ ಮನೋರಂಜನೆಗೆ ನಮ್ಮನ್ನು ನಾವು ಅಧೀನವಾಗಿಸಿಕೊಳ್ಳುವುದಿಲ್ಲ. (ಗಲಾತ್ಯ 5:19-21) ಹಾಗಿದ್ದರೂ, ನಾವು ಲೋಕದಲ್ಲಿ ಜೀವಿಸುತ್ತಿರುವುದರಿಂದ, ಈ ಎಲ್ಲಾ ವಿಷಯಗಳಿಗೆ ಒಡ್ಡಿಕೊಳ್ಳುವುದನ್ನು ಸಂಪೂರ್ಣವಾಗಿ ತೊರೆಯಲು ನಮ್ಮಿಂದ ಸಾಧ್ಯವಿಲ್ಲ. ಒಂದು ಆತ್ಮಿಕ ರೀತಿಯ ಶುದ್ಧವಾದ ಗಾಳಿಯ ಸರಬರಾಯಿಗೆ ನಾವು ಜೋಡಿಸಿಕೊಂಡಿರುವುದಾದರೆ, ನಾವು ವಿವೇಕಿಗಳಾಗಿ ಕಾರ್ಯನಡಿಸುತ್ತಿದ್ದೇವೆ. ಸ್ಪಲ್ಪ ಮಟ್ಟಿಗೆ, ಕ್ರಮವಾದ ಕೂಟದ ಹಾಜರಿ, ವೈಯಕ್ತಿಕ ಅಭ್ಯಾಸ, ಕ್ರೈಸ್ತ ಚಟುವಟಿಕೆ ಮತ್ತು ಸಹವಾಸ, ಮತ್ತು ಪ್ರಾರ್ಥನೆಯ ಮೂಲಕ ನಾವು ನಮ್ಮ ಆತ್ಮಿಕ ಶ್ವಾಸ ಕೋಶಗಳನ್ನು ತುಂಬಿಸುತ್ತೇವೆ. ಈ ರೀತಿಯಲ್ಲಿ, ನಮ್ಮ ಆತ್ಮಿಕ ಶ್ವಾಸ ಕೋಶಗಳೊಳಗೆ ಸೈತಾನನ ಗಾಳಿಯಲ್ಲಿ ಯಾವುದಾದರೂ ಒಳತೂರುವುದಾದರೆ, ಅದನ್ನು ತಿರಸ್ಕರಿಸಲು ದೇವರ ಆತ್ಮವು ನಮ್ಮನ್ನು ಬಲಪಡಿಸುತ್ತದೆ.—ಕೀರ್ತನೆ 17:1-3; ಜ್ಞಾನೋಕ್ತಿ 9:9; 13:20; 19:20; 22:17.
16. ದೇವರ ಆತ್ಮವು ನಮಗಿರುವುದರ ರುಜುವಾತನ್ನು ನಾವು ಹೇಗೆ ನೀಡುತ್ತೇವೆ?
16 ದೇವರ ಆತ್ಮವು ಒಬ್ಬ ಕ್ರೈಸ್ತನನ್ನು, ಈ ಲೋಕದ ಭಾಗವಾಗಿರುವವರಿಂದ ಗಮನಾರ್ಹವಾಗಿ ಭಿನ್ನನಾಗಿರುವಂತಹ ಒಬ್ಬ ವ್ಯಕ್ತಿಯನ್ನಾಗಿ ಮಾಡುತ್ತದೆ. (ರೋಮಾಪುರ 12:1, 2) ಪೌಲನಂದದ್ದು: “ದೇವರಾತ್ಮನಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ. ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ.” (ಗಲಾತ್ಯ 5:22, 23) ವಿಷಯಗಳ ಅತಿ ಆಳವಾದ ತಿಳಿವಳಿಕೆಯನ್ನು ಸಹ ದೇವರ ವಾಕ್ಯವು ಕ್ರೈಸ್ತನೊಬ್ಬನಿಗೆ ಕೊಡುತ್ತದೆ. ಪೌಲನು ಹೇಳಿದ್ದು: “ದೇವರ ಆಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರೂ ಗ್ರಹಿಸುವದಿಲ್ಲ.” (1 ಕೊರಿಂಥ 2:11) ಸರ್ವಸಾಮಾನ್ಯ ಅರ್ಥದಲ್ಲಿ, ವಿಮೋಚನಾ ಯಜ್ಞ, ಯೇಸು ಕ್ರಿಸ್ತನ ಅಧೀನತೆಯಲ್ಲಿ ದೇವರ ರಾಜ್ಯ, ನಿತ್ಯಜೀವದ ಕುರಿತಾದ ನಿರೀಕ್ಷೆ, ಮತ್ತು ಈ ದುಷ್ಟ ಲೋಕದ ಸನ್ನಿಹಿತ ತೊಲಗಿಸುವಿಕೆಗಳಂತಹ ಸತ್ಯತೆಗಳನ್ನು “ದೇವರ ಆಲೋಚನೆಗಳು” ಒಳಗೊಂಡಿವೆ. ದೇವರ ಆತ್ಮದ ಸಹಾಯದಿಂದ, ಕ್ರೈಸ್ತರು ಈ ವಿಷಯಗಳನ್ನು ಸತ್ಯವೆಂದು ವಿಚಾರಗಳನ್ನು ತಿಳಿಯುತ್ತಾರೆ ಮತ್ತು ಅಂಗೀಕರಿಸುತ್ತಾರೆ, ಮತ್ತು ಇದು ಅವರ ಜೀವಿತದ ದೃಷ್ಟಿಕೋನವನ್ನು ಲೋಕದ ಜನರ ದೃಷ್ಟಿಕೋನಕ್ಕಿಂತ ವಿಭಿನ್ನವಾದದ್ದಾಗಿ ಮಾಡುತ್ತದೆ. ಮುಂದೆ ಶಾಶ್ವತವಾಗಿ ಆತನನ್ನು ಸೇವಿಸುವ ಪ್ರತೀಕ್ಷೆಯೊಂದಿಗೆ, ಈಗ ಅವರು ಯೆಹೋವನ ಸೇವೆ ಮಾಡುವುದರಲ್ಲಿ ತಮ್ಮ ಆನಂದವನ್ನು ಕಂಡುಕೊಳ್ಳಲು ತೃಪ್ತರಾಗುತ್ತಾರೆ.
17. ಈ ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸುವುದರಲ್ಲಿ ಯಾರು ಒಂದು ಅತ್ಯುತ್ತಮವಾದ ಮಾದರಿಯನ್ನಿಟ್ಟಿದ್ದಾರೆ, ಮತ್ತು ಹೇಗೆ?
17 ಈ ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸುವವರಿಗೆ ಯೇಸು ಒಂದು ಅತ್ಯುತ್ತಮ ಪಾತ್ರದ ಮಾದರಿಯಾಗಿದ್ದನು. ಮೂರು ದುಷ್ಪ್ರೇರಣೆಗಳನ್ನು ನೀಡುವ ಮೂಲಕ ಯೆಹೋವನನ್ನು ಸೇವಿಸುವುದರಿಂದ ಆತನನ್ನು ದೂರಸೆಳೆಯಲು ಸೈತಾನನು ಪ್ರಯತ್ನಿಸಿದನು. (ಮತ್ತಾಯ 4:1-11) ಸೈತಾನನಿಗೆ ಒಂದು ಆರಾಧನಾ ವರ್ತನೆಯ ಬೆಲೆಯಾಗಿ ಪ್ರಪಂಚದ ಎಲ್ಲಾ ಪ್ರಭುತ್ವವನ್ನು ಯೇಸು ಪಡೆದುಕೊಳ್ಳಬಹುದಾದ ಸಂಭವನೀಯತೆಯನ್ನು ಕೊನೆಯ ದುಷ್ಪ್ರೇರಣೆಯು ಒಳಗೊಂಡಿತ್ತು. ಯೇಸು ಹೀಗೆ ವಿವೇಚಿಸಬಹುದಾಗಿತ್ತು: ‘ಒಳ್ಳೇದು, ನಾನು ಒಮ್ಮೆ ನಮಸ್ಕರಿಸುತ್ತೇನೆ, ಮತ್ತು ಅನಂತರ ಈ ಲೋಕದ ಆಧಿಪತ್ಯವನ್ನು ಪಡೆದುಕೊಂಡ ಬಳಿಕ, ನಾನು ಪಶ್ಚಾತ್ತಾಪ ಪಡುವೆನು ಹಾಗೂ ಯೆಹೋವನನ್ನು ಆರಾಧಿಸಲು ಹಿಂದಿರುಗುವೆನು. ನಜರೇತ್ನ ಒಬ್ಬ ಬಡಗಿಯಾಗಿರುವುದಕ್ಕಿಂತಲೂ ಲೋಕಾಧಿಪತಿಯೋಪಾದಿ, ಮಾನವಕುಲಕ್ಕೆ ಒಳಿತನ್ನು ಮಾಡಲು ಹೆಚ್ಚು ಉತ್ತಮವಾದ ಒಂದು ಸ್ಥಾನದಲ್ಲಿ ನಾನಿರುವೆನು.’ ಯೇಸು ಆ ರೀತಿಯಲ್ಲಿ ವಿವೇಚಿಸಲಿಲ್ಲ. ಯೆಹೋವನು ತನಗೆ ಲೋಕದ ಅಧಿಕಾರವನ್ನು ವಹಿಸಿಕೊಡುವ ವರೆಗೆ ಕಾಯಲು ಆತನು ಸಿದ್ಧನಾಗಿದ್ದನು. (ಕೀರ್ತನೆ 2:8) ಆ ಸಂದರ್ಭದಲ್ಲಿ, ಮತ್ತು ತನ್ನ ಜೀವಿತದ ಇನ್ನಿತರ ಎಲ್ಲಾ ಸಂದರ್ಭಗಳಲ್ಲಿ, ಆತನು ಸೈತಾನನ ಗಾಳಿಯ ವಿಷಕಾರಿ ಪ್ರಭಾವವನ್ನು ಪ್ರತಿರೋಧಿಸಿದನು. ಹೀಗೆ, ಆತ್ಮಿಕವಾಗಿ ಮಲಿನಗೊಂಡ ಈ ಲೋಕವನ್ನು ಆತನು ಜಯಿಸಿದನು.—ಯೋಹಾನ 16:33.
18. ನಾವು ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸುವುದು ಯೆಹೋವನಿಗೆ ಹೇಗೆ ಸ್ತುತಿಯನ್ನು ತರುತ್ತದೆ?
18 ನಾವು ಯೇಸುವಿನ ಹೆಜ್ಜೆಜಾಡನ್ನು ನಿಕಟವಾಗಿ ಹಿಂಬಾಲಿಸಬೇಕೆಂದು ಅಪೊಸ್ತಲ ಪೌಲನು ಹೇಳಿದ್ದಾನೆ. (1 ಪೇತ್ರ 2:21) ಇದಕ್ಕಿಂತಲೂ ಹೆಚ್ಚು ಉತ್ತಮವಾದ ಇನ್ನಾವ ಮಾದರಿಯು ನಮಗಿದೆ? ಈ ಕಡೇ ದಿವಸಗಳಲ್ಲಿ, ಪ್ರಾಪಂಚಿಕ ಆತ್ಮದಿಂದ ಪ್ರಭಾವಿತರಾಗಿ, ಮಾನವರು ನೀತಿಭ್ರಷ್ಟತೆಯಲ್ಲಿ ಹೆಚ್ಚೆಚ್ಚು ಆಳವಾಗಿ ಮುಳುಗುತ್ತಿದ್ದಾರೆ. ಅಂತಹ ಒಂದು ಲೋಕದ ಮಧ್ಯೆ, ಯೆಹೋವನ ಆರಾಧನೆಯ ಉನ್ನತ ಸ್ಥಳವು ಶುದ್ಧವೂ ನಿರ್ಮಲವಾಗಿಯೂ ನೆಲೆ ನಿಂತಿರುವುದು ಎಂಥ ಒಂದು ಅದ್ಭುತವಾದ ವಿಚಾರವಾಗಿದೆ! (ಮೀಕ 4:1, 2) ಖಂಡಿತವಾಗಿಯೂ, ದೇವರ ಆತ್ಮದ ಶಕ್ತಿಯು ಕಾರ್ಯನಡಿಸುತ್ತಿರುವುದರಿಂದ, ಈ ಲೋಕದ ಸರ್ವವ್ಯಾಪಿ ಆತ್ಮವನ್ನು ಪ್ರತಿರೋಧಿಸುವ ಮೂಲಕ ಲಕ್ಷಾಂತರ ಜನರು ದೇವರ ಆರಾಧನಾ ಸ್ಥಳಕ್ಕೆ ಪ್ರವಾಹದಂತೆ ಬರುತ್ತಿದ್ದಾರೆ ಮತ್ತು ಯೆಹೋವನಿಗೆ ಘನತೆ ಮತ್ತು ಸ್ತುತಿಯನ್ನು ತರುತ್ತಿದ್ದಾರೆ! (1 ಪೇತ್ರ 2:11, 12) ಯೆಹೋವನ ಅಭಿಷಿಕ್ತ ಅರಸನು ಈ ದುಷ್ಟ ಲೋಕವನ್ನು ತೆಗೆದುಹಾಕುವ ಮತ್ತು ಪಿಶಾಚನಾದ ಸೈತಾನನನ್ನು ಮತ್ತು ಅವನ ದೆವ್ವಗಳನ್ನು ಅಧೊಲೋಕಕ್ಕೆ ದೊಬ್ಬುವ ತನಕ, ಎತ್ತರಿಸಲ್ಪಟ್ಟ ಆ ಸ್ಥಾನದಲ್ಲಿ ಉಳಿಯಲು ನಾವೆಲ್ಲರೂ ನಿರ್ಧರಿಸೋಣ. (ಪ್ರಕಟನೆ 19:19–20:3) ಆಗ, ಈ ಪ್ರಾಪಂಚಿಕ ಆತ್ಮವು ಇನ್ನೆಂದಿಗೂ ಅಸ್ತಿತ್ವದಲ್ಲಿರುವುದಿಲ್ಲ. ಎಂತಹ ಆಶೀರ್ವದಿಸಲ್ಪಟ್ಟ ಒಂದು ಸಮಯವು ಅದಾಗಲಿರುವುದು!
ನೀವು ವಿವರಿಸಬಲ್ಲಿರೋ?
▫ ಪ್ರಾಪಂಚಿಕ ಆತ್ಮ ಎಂದರೇನು?
▫ ಈ ಪ್ರಾಪಂಚಿಕ ಆತ್ಮವು ವ್ಯಕ್ತಿಗಳ ಮೇಲೆ ಯಾವ ಪರಿಣಾಮವನ್ನುಂಟುಮಾಡುತ್ತದೆ?
▫ ಪ್ರಾಪಂಚಿಕ ಆತ್ಮದ ಕೆಲವು ತೋರಿಕೆಗಳು ಯಾವುವು, ಮತ್ತು ನಾವು ಅದನ್ನು ಹೇಗೆ ತ್ಯಜಿಸಸಾಧ್ಯವಿದೆ?
▫ ದೇವರ ಆತ್ಮವನ್ನು ನಾವು ಹೊಂದಿದ್ದೇವೆಂದು ನಾವು ಹೇಗೆ ತೋರಿಸುತ್ತೇವೆ?
▫ ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸುವವರೆಲ್ಲರಿಗೆ ಯಾವ ಆಶೀರ್ವಾದಗಳು ದೊರಕುತ್ತವೆ?
[ಪುಟ 16,17 ರಲ್ಲಿರುವಚಿತ್ರಗಳು]
ಪ್ರಾಪಂಚಿಕ ಆತ್ಮವು ಸೈತಾನನಿಂದ ಬಂದದ್ದಾಗಿದೆ
ಪ್ರಾಪಂಚಿಕ ಆತ್ಮವನ್ನು ತ್ಯಜಿಸಲಿಕ್ಕಾಗಿ, ಯೆಹೋವನ ಆರಾಧನೆಯ ಎತ್ತರಿಸಲ್ಪಟ್ಟ ಸ್ಥಳಕ್ಕೆ ಪಲಾಯನ ಮಾಡಿರಿ