ಧರ್ಮದಲ್ಲಿ ಯಾಕೆ ಆಸಕ್ತರಾಗಿರಬೇಕು?
ಭೂಮಿಯ ಮೇಲಿನ ಪ್ರತಿಯೊಂದು ದೇಶದಲ್ಲಿ, ಧರ್ಮದಲ್ಲಿ ಅಭಿರುಚಿಯುಂಟು. ಇನ್ನೊಂದು ಬದಿಯಲ್ಲಿ, ಧರ್ಮದಲ್ಲಿ ತಮಗೆ ಅಭಿರುಚಿಯೇ ಇಲ್ಲ ಎಂದು ಅತಿ ನೇರವಾಗಿ ಹೇಳುವ ಅನೇಕರೂ ಇದ್ದಾರೆ. ಆದರೆ ಅವರಿಗೆ ಯಾವಾಗಲೂ ಹಾಗೆಯೆ ಅನಿಸುತ್ತಿತ್ತೋ?
ಒಬ್ಬ ವ್ಯಕ್ತಿಯು ಕೇವಲ ಭೌತಿಕ ವಸ್ತುಗಳೊಂದಿಗೆ ನಿಜಕ್ಕೂ ಸಂತೃಪ್ತಿಪಡಲಾರನು ಎಂಬಂತೆ ಮಾನವ ಸ್ವಭಾವವು ಇದೆ. ಮಾನವರಿಗೆ ಆತ್ಮಿಕತೆ ಅವಶ್ಯ. ವಿನೋದದ ಸಮಯೋಪಯುಕ್ತ ಅವಧಿಗಳೊಂದಿಗೆ, ಕೇವಲ ದೈಹಿಕ ಆವಶ್ಯಕತೆಗಳನ್ನು ಪಡೆದುಕೊಳ್ಳುವುದರ ಸುತ್ತಲು ಕಟ್ಟಿರುವ ದಿನನಿತ್ಯದ ಆಸ್ತಿತ್ವವು, ವ್ಯಕ್ತಿಯ ಅತ್ಯಂತ ಆಂತರಿಕ ಅಗತ್ಯಗಳನ್ನು ಪೂರ್ಣವಾಗಿ ಈಡೇರಿಸುವುದಿಲ್ಲ. ಪ್ರಾಣಿಗಳಿಗೆ ಅಸದೃಶವಾಗಿ, ಮಾನವರು, ‘ಜೀವಿತದ ಉದ್ದೇಶವೇನಾಗಿದೆ?’ ‘ಸುಂದರವಾದ ಹೇರಳ ವಿಷಯಗಳನ್ನು ಮಾತ್ರವಲ್ಲ ವಿರೂಪವಾದ ಹೇರಳ ವಿಷಯಗಳನ್ನು ಸಹ ಒಳಗೊಂಡಿರುವ ಈ ಅಲ್ಪ ಕಾಲಿಕ ಜೀವನ ಇರುವುದು ಇಷ್ಟು ಮಾತ್ರವೊ?,’ ಎಂದು ತಿಳಿಯಬಯಸುತ್ತಾರೆ. ಇಂತಹ ಪ್ರಶ್ನೆಗಳನ್ನು ನೀವು ಕೇಳಿರುವುದಿಲ್ಲವೊ?
ಆದರೂ, ಇಂದು ಜೀವದಿಂದಿರುವ ಅನೇಕ ಲಕ್ಷಗಟ್ಟಲೆ ಜನರು ಧರ್ಮದಲ್ಲಿ ಯಾವುದೇ ಅರ್ಥಭರಿತ ಅಭಿರುಚಿಯನ್ನು ನಿರುತ್ತೇಜಿಸುವ ಪರಿಸರದಲ್ಲಿ ಬೆಳೆದಿರುತ್ತಾರೆ. ಆ ಪ್ರಭಾವವು ಅವರ ಹೆತ್ತವರ ಮೂಲಕ, ಶಿಕ್ಷಕರ ಮೂಲಕ, ಸಮಾನ ವಯಸ್ಕರ ಮೂಲಕ ಯಾ ಸರಕಾರದ ಮೂಲಕ ಸಹ ಬಂದಿರಬಹುದು.
ಸ್ಕಾಲಾಬ್ರಿನೊ ಎಂಬ ಅಲ್ಪೇನ್ಯದ ಯುವಕನು ವಿವರಿಸಿದ್ದೇನೆಂದರೆ, ಕಮ್ಯೂನಿಸ್ಟ್ ಆಳಿಕೆಯ ಕೆಳಗೆ, ದೇವರು ಇಲ್ಲ ಎಂದು ಜನರಿಗೆ ಕಲಿಸಲ್ಪಟ್ಟಿತು. ಇಷ್ಟೇ ಅಲ್ಲದೆ, ಅವರು ಧರ್ಮದ ಕುರಿತು ಮಾತಾಡುವುದು ಅಪಾಯಕರವಾಗಿತ್ತು; ಹಾಗೆ ಮಾಡುವುದು ಸೆರೆವಾಸಕ್ಕೆ ನಡೆಸಸಾಧ್ಯವಿತ್ತು. ಆದರೂ, 1991 ರಲ್ಲಿ, ಅವನು ಸ್ವಿಟ್ಸರ್ಲೆಂಡ್ನಲ್ಲಿ ನಿರಾಶ್ರಿತನಾಗಿದ್ದಾಗ, ಬೈಬಲ್ ಅಧ್ಯಯನವನ್ನು ಮಾಡುವ ಸಂದರ್ಭವು ಅವನಿಗೆ ಕೊಡಲ್ಪಟ್ಟಿತು. ಅದನ್ನಾತನು ಸ್ವೀಕರಿಸಿದನು. ಯಾಕೆ?
ಬೈಬಲ್ ಎಂಬಂತಹ ಪುಸ್ತಕವು ಇದೆ ಎಂದು ಅವನು ಅಲ್ಪೇನ್ಯದಲ್ಲಿ ಕೇಳಿದ್ದನು, ಆದರೆ ಆತನಿಗೆ ಅದರ ಕುರಿತು ನಿಜಕ್ಕೂ ಏನೂ ಗೊತ್ತಿರಲಿಲ್ಲ. ಹೀಗೆ, ಆರಂಭದಲ್ಲಿ ಬೈಬಲನ್ನು ತಿಳಿಯುವ ಬಯಕೆಯು ಪ್ರಧಾನವಾಗಿ ಅವನನ್ನು ಪ್ರೇರೇಪಿಸಿರಲಿಕ್ಕಿಲ್ಲ. ಮಾನವಕುಲ ಮತ್ತು ಭೂಮಿಗಾಗಿ ದೇವರ ಉದ್ದೇಶದ ಕುರಿತು ಅವನು ಅಭ್ಯಾಸ ಮಾಡುವನೆಂದು ಅವನಿಗೆ ಹೇಳಲಾಗಿತ್ತಾದರೂ, ಸ್ಥಳೀಯ ಭಾಷೆಯ ಅವನ ಬಳಕೆಯನ್ನು ಪ್ರಗತಿಗೊಳಿಸಲು ಒಂದು ಸಂದರ್ಭವನ್ನಾಗಿಯೂ ಅವನು ಅದನ್ನು ಕಂಡನು. ಆದಾಗ್ಯೂ, ಅವನು ಕಲಿಯುತ್ತಿದ್ದದ್ದು ಅವನ ಪಾಲಿಗೆ ಬಲವಾದ ಆಂತರಿಕ ಆತ್ಮಿಕ ಹಂಬಲವನ್ನು ಈಡೇರಿಸಿತು ಎಂಬುದನ್ನು ಆತನು ಕೂಡಲೆ ಕಂಡುಕೊಂಡನು. ಶಾಂತಿಯು ಉಳಿಯಬಲ್ಲ ನೂತನ ಲೋಕ, ಜನರು ಸದಾ ಜೀವಿಸಶಕ್ತರಾಗುವ ಮತ್ತು ಜೀವನಕ್ಕೆ ಅವಶ್ಯವಿರುವ ಎಲ್ಲ ವಸ್ತುಗಳ ಒಂದು ಹೇರಳತೆಯನ್ನು ಅನುಭವಿಸುವ ಲೋಕದ ದೇವರ ವಾಗ್ದಾನದ ಕುರಿತು ಅವನು ಕಲಿತಾಗ, ಅವನು ಸಂತೋಷ ಮತ್ತು ಆನಂದವನ್ನನುಭವಿಸಿದನು. ಅವನು ಮತ್ತು ಅವನ ಕುಟುಂಬವು ಈ ನೂತನ ಲೋಕದ ಭಾಗವಾಗಶಕ್ತರೆಂಬುದನ್ನು ಅವನು ಕಲಿತಾಗ ಅವನ ಅಭಿರುಚಿಯು ಅಧಿಕವಾಯಿತು. ಈ ಸುವಾರ್ತೆಯನ್ನು ತನ್ನಷ್ಟಕ್ಕೆ ಇಟ್ಟುಕೊಳ್ಳಲಾಗದೆ, ಅದನ್ನು ಅಲ್ಪೇನ್ಯದಲ್ಲಿನ ತನ್ನ ಕುಟುಂಬದವರೊಂದಿಗೆ ಹಂಚಿಕೊಳ್ಳಲು ಅವನು ದೂರವಾಣಿಯ ಮೂಲಕ ಅವರೊಂದಿಗೆ ಮಾತಾಡಿದನು.
ರಷ್ಯಾದಲ್ಲಿ ಜೀವಿಸುವ ಅಲ್ಯಿಕ್ಸ್ವೇ ಕೂಡ, ಒಬ್ಬ ವ್ಯಕ್ತಿಯ ಜೀವಿತದ ಮೇಲೆ ಬೀರಬಲ್ಲ ಬೈಬಲಿನ ನಿಷ್ಕೃಷ್ಟ ಜ್ಞಾನದ ಪ್ರಭಾವದ ಬಗ್ಗೆ ಬೆರಗುಗೊಂಡನು. ಸಮಸ್ಯೆಗಳೊಂದಿಗೆ ಪೂರ್ತಿ ಮುಳುಗಲ್ಪಟ್ಟು, ಜೀವಿತದ ಉದ್ದೇಶದ ಕುರಿತು ತೃಪ್ತಿಕರ ವಿವರಣೆಯನ್ನು ಕಂಡುಕೊಳ್ಳಲಾರದೆ, ಅವನು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಯೋಜಿಸಿದನು. ಆದರೂ, ಮೊದಲು ಸ್ನೇಹಿತನನ್ನು ಭೇಟಿಯಾಗಲು ಅವನು ಫಿನ್ಲೆಂಡಿಗೆ ಹೋದನು. ರೈಲು ಬಂಡಿಯಲ್ಲಿ ದಾರಿಯಲ್ಲಿ, ಕೆಲವು ಜೊತೆ ಪ್ರವಾಸಿಗರೊಂದಿಗೆ ಅವನು ತನ್ನ ಸಮಸ್ಯೆಗಳ ಕುರಿತು ಮಾತಾಡಿದನು. ಅವರಲ್ಲಿ ಯೆಹೋವನ ಸಾಕ್ಷಿಗಳಲ್ಲೊಬ್ಬಳಿದ್ದಳು, ಅಂತಹ ಸಮಸ್ಯೆಗಳಿಗೆ ಬೈಬಲು ಪರಿಹಾರಗಳನ್ನು ಕೊಡುವುದರಿಂದ, ಅವಳು ಅವನನ್ನು ಅದನ್ನು ಅಧ್ಯಯನ ಮಾಡುವಂತೆ ಕೇಳಿಕೊಂಡಳು. ಅವನು ಅನಿಶ್ಚಿತಮತಿಯಾಗಿದ್ದನು. ಹಿಂದಿರುಗುವ ಪ್ರಯಾಣದಲ್ಲಿ, ಅವನಿಗೆ ಅಂಥಾದ್ದೇ ಅನುಭವವಾಯಿತು. ಈ ಸಲ ಸರಳವಾಗಿ ಮಾತಾಡಿದವಳು ಇನೊಬ್ಬ ಸಾಕ್ಷಿಯಾಗಿದಳ್ದು ಮತ್ತು ಅವಳಿಗೂ ಇದೇ ಬಗೆಯ ಸಮಸ್ಯೆಗಳು ಇದ್ದವು ಆದರೆ ಇವುಗಳನ್ನು ಜಯಿಸಲು ಬೈಬಲು ತನಗೆ ಸಹಾಯ ಮಾಡಿತು ಎಂದು ಅವಳು ಅವನಿಗೆ ಹೇಳಿದಳು. ಅವಳು ಕೂಡ ಬೈಬಲ್ ಅಧ್ಯಯನ ಮಾಡುವಂತೆ ಅವನನ್ನು ಪ್ರೋತ್ಸಾಹಿಸಿದಳು. ಅವನು ಮನೆಗೆ ತಲಪಿದಾಗ, ದೂರವಾಣಿಯು ಘಣಘಣಿಸಿತು. ಅದು ಸಾಕ್ಷಿಗಳೊಂದಿಗೆ ಅಧ್ಯಯನ ಮಾಡುತ್ತಿದ್ದ ಮತ್ತು ಬಹಳ ಸಂತೋಷವಾಗಿದ್ದ ಇನ್ನೊಬ್ಬ ಸ್ನೇಹಿತೆಯದ್ದಾಗಿತ್ತು. ಅವನಿಗೆ ಏನು ಅಗತ್ಯವಿತ್ತೋ ಅದನ್ನು ಪ್ರಾಯಶಃ ಬೈಬಲು ನಿಜಕ್ಕೂ ಕೊಡಬಲ್ಲದೆಂದು ಆ ಮನುಷ್ಯನು ಅರಿಯಲಾರಂಭಿಸಿದನು, ಆದರೆ ಸಹಾಯವಿಲ್ಲದೆ ಅದನ್ನಾತನು ತಿಳಿಯಲಸಾಧ್ಯವೆಂದು ಅವನು ಅರಿತಿದ್ದನು. ಯೆಹೋವನ ಸಾಕ್ಷಿಗಳೊಂದಿಗೆ ಕ್ರಮದ ಮನೆ ಬೈಬಲ್ ಅಧ್ಯಯನವನ್ನು ಪಡೆದುಕೊಳ್ಳಲು ಅವನು ಒಪ್ಪಿದನು, ಮತ್ತು ಅವನು ಅವರ ಕೂಟಗಳನ್ನು ಹಾಜರಾಗಲು ಆರಂಭಿಸಿದನು. ಬೈಬಲ್ ಕಲಿಸುವುದರ ಸುತ್ತ ತಮ್ಮ ಜೀವಿತಗಳನ್ನು ರೂಪಿಸಿಕೊಳ್ಳುವವರು, ಮಾನವಕುಲಕ್ಕೆ ಸಾಮಾನ್ಯವಾಗಿರುವ ಸಮಸ್ಯೆಗಳನ್ನು ಅವರು ಕೂಡ ಎದುರಿಸುವದಾದರೂ, ಅಷ್ಟೊಂದು ಸಂತೋಷಿಗಳಾಗಿರುವ ಕಾರಣವನ್ನು ತಿಳಿಯಲು ಅವನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.
ಮಾನವ ಸಂಬಂಧದ ಒಳನೋಟದೊಂದಿಗೆ, ಯೇಸು ಕ್ರಿಸ್ತನು ಹೇಳಿದ್ದು: “ಮನುಷ್ಯನು ರೊಟ್ಟಿಯಿಂದ ಮಾತ್ರ ಬದುಕಲಾರನು.” (ಮತ್ತಾಯ 4:4, ದ ನ್ಯೂ ಇಂಗ್ಲಿಷ್ ಬೈಬಲ್) ಅವನು ಮತ್ತೂ ಅಂದದ್ದು: “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:3, NW) ಅವರು ತಮ್ಮ ಅಗತ್ಯಗಳ ಕುರಿತು ತೀವ್ರವಾಗಿ ಎಚ್ಚರವಿರುವ ಕಾರಣದಿಂದಾಗಿ, ಅದನ್ನು ಈಡೇರಿಸಲು ತಕ್ಕ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾರೆ, ಮತ್ತು ದೇವರ ಆಶೀರ್ವಾದವನ್ನು ಅನುಭವಿಸುವುದರಿಂದ ಅವರಿಗೆ ಸಂತೋಷವು ಲಭಿಸುತ್ತದೆ. ಆದಾಗ್ಯೂ, ಕೇವಲ ಒಂದು ಚರ್ಚಿಗೆ ಸೇರುವುದರ ಮೂಲಕ ಯಾ ಕೆಲವು ಧಾರ್ಮಿಕ ಆರಾಧನೆಗಳನ್ನು ಹಾಜರಾಗುವ ಮೂಲಕ ನಮ್ಮ ಆತ್ಮಿಕ ಅಗತ್ಯವು ಈಡೇರಲಾರದು. ಬಹುವಾಗಿ ಮತಾಚರಣೆಯಿರುವ ಧರ್ಮವು ಒಬ್ಬನ ಭಾವೊದ್ರೇಕಗಳಿಗೆ ಹಿಡಿಸಬಹುದು, ಆದರೆ ಅದು ಜೀವಿತದ ಸಮಸ್ಯೆಗಳಿಗೆ ಯಥಾವತ್ತಾದ ಪರಿಹಾರ ಮಾರ್ಗಗಳನ್ನು ಒದಗಿಸುತ್ತದೋ? ಒಂದು ಧರ್ಮವು ಕೆಲವು ಮೂಲ ನೀತಿ ಬೋಧೆಗಳು ತರ್ಕಬದ್ಧವಾಗಿವೆ ಎಂದು ಹೇಳಿಕೊಳ್ಳುವುದಾದರೂ, ಜೀವಿತದ ನಿಜ ಉದ್ದೇಶದ ಕುರಿತು ಸತ್ಯ ತಿಳಿವಳಿಕೆಯನ್ನು ಒದಗಿಸಲು ತಪ್ಪುವುದಾದರೆ, ಅದು ನಿಮ್ಮ ಆತ್ಮಿಕ ಅಗತ್ಯವನ್ನು ಈಡೇರಿಸುವುದೋ? ಇನ್ನೂ ಮಹತ್ತಾದ ಚಿಂತೆಯು, ಅಂತಹ ಒಂದು ಧರ್ಮವನ್ನು ಆಚರಿಸುವುದು ದೇವರೊಂದಿಗೆ ಉತ್ತಮ ಸಂಬಂಧಕ್ಕೆ ನಡೆಸುವುದೋ? ಅದಿಲ್ಲದೆ, ನಿಜ ಸಂತೃಪ್ತಿಯು ಇಲ್ಲದಿರುವುದು.
ಈ ವಿಷಯದಲ್ಲಿ ಅನೇಕ ಜನರು ಅವರಿಗೆ ಇನ್ನೂ ದೊರಕದಿರುವುದನ್ನು ಅನ್ವೇಷಿಸುತ್ತಿದ್ದಾರೆ.
[ಪುಟ 3 ರಲ್ಲಿರುವ ಚಿತ್ರ]
ಒಂದು ಚರ್ಚನ್ನು ಸೇರುವುದರ ಮೂಲಕ ನಿಮ್ಮ ಆತ್ಮಿಕ ಅಗತ್ಯಗಳು ನಿಜವಾಗಿಯೂ ಈಡೇರುವವೂ?
[ಪುಟ 4 ರಲ್ಲಿರುವ ಚಿತ್ರ]
ಬೈಬಲನ್ನು ಅವರು ತಿಳಿದುಕೊಂಡಾಗ, ಜೀವಿತವು ಹೊಸ ಅರ್ಥವನ್ನು ಪಡೆದುಕೊಳ್ಳುತ್ತದೆಂದು ಅನೇಕರು ಕಂಡುಕೊಂಡಿದ್ದಾರೆ