ಯುಕ್ತವಾದ ಧರ್ಮವನ್ನು ಅರಿಯುವುದರೊಂದಿಗೆ ಜವಾಬ್ದಾರಿ ಬರುತ್ತದೆ
“ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು!”—ಲೂಕ 11:28, NW.
1. ಯುಕ್ತವಾದ ಧರ್ಮವನ್ನು ಅವರು ಗುರುತಿಸಿದೊಡನೆ, ಯಾವ ತರಹದ ಜನರು ತಮ್ಮ ಜೀವಿತಗಳನ್ನು ಅದರ ಸುತ್ತಲೂ ಕಟ್ಟುತ್ತಾರೆ?
ಯುಕ್ತವಾದ ಧರ್ಮವನ್ನು ಕೇವಲ ಗುರುತಿಸುವುದು ಸಾಲದು. ನಾವು ಯುಕ್ತವಾದುದನ್ನು ಮತ್ತು ಸತ್ಯವಾದುದನ್ನು ಪ್ರೀತಿಸುವಲ್ಲಿ, ನಾವದನ್ನು ಕಂಡುಕೊಂಡಾಗ, ನಮ್ಮ ಜೀವಿತಗಳನ್ನು ಅದರ ಸುತ್ತಲೂ ಕಟ್ಟುವೆವು. ಸತ್ಯ ಧರ್ಮವು ಕೇವಲ ಒಂದು ಮಾನಸಿಕ ತತ್ವಜ್ಞಾನವಾಗಿರುವುದಿಲ್ಲ; ಜೀವನದ ಮಾರ್ಗವು ಅದಾಗಿದೆ.—ಕೀರ್ತನೆ 119:105; ಯೆಶಾಯ 2:3; ಹೋಲಿಸಿ ಅ. ಕೃತ್ಯಗಳು 9:2.
2, 3. (ಎ) ದೇವರ ಚಿತ್ತವನ್ನು ಮಾಡುವುದರ ಪ್ರಮುಖತೆಯನ್ನು ಯೇಸುವು ಒತ್ತಿ ಹೇಳಿದ್ದು ಹೇಗೆ? (ಬಿ) ಯುಕ್ತವಾದ ಧರ್ಮವನ್ನು ಅರಿತವರೆಲ್ಲರ ಮೇಲೆ ಯಾವ ಜವಾಬ್ದಾರಿಯು ಇರುತ್ತದೆ?
2 ಯೇಸು ಕ್ರಿಸ್ತನು, ದೇವರು ತನ್ನ ಚಿತ್ತವೇನೆಂದು ಪ್ರಕಟಿಸಿರುವುದನ್ನು ಮಾಡುವುದರ ಪ್ರಮುಖತೆಗೆ ಪ್ರಾಶಸ್ತ್ಯ ಕೊಟ್ಟನು. ಪರ್ವತ ಪ್ರಸಂಗವೆಂದು ಪರಿಚಿತವಾಗಿ ಬಂದಿರುವುದನ್ನು ಸಮಾಪ್ತಿಗೊಳಿಸುವಾಗ, ಅವನನ್ನು ಸ್ವಾಮಿ ಎಂದು (ಹೀಗೆ ಕ್ರೈಸ್ತರೆಂದು ಹೇಳಿಕೊಳ್ಳುವವರು) ಕರೆಯುವವರೆಲ್ಲರೂ ರಾಜ್ಯದಲ್ಲಿ ಸೇರುವುದಿಲ್ಲ; ಅವನ ತಂದೆಯ ಚಿತ್ತವನ್ನು ಮಾಡುವವರು ಮಾತ್ರ ಸೇರುವರೆಂದು ಯೇಸು ತಿಳಿಯಪಡಿಸಿದನು. ಅವನಂದದ್ದು, ಇತರರು “ನಿಯಮರಾಹಿತ್ಯದ ಕೆಲಸಗಾರರು” ಎಂದು ತಿರಸ್ಕರಿಸಲ್ಪಡುವರು. ಯಾಕೆ ನಿಯಮರಾಹಿತ್ಯವಾಗಿದೆ? ಯಾಕಂದರೆ ಬೈಬಲು ಹೇಳುವಂತೆ, ದೇವರ ಚಿತ್ತವನ್ನು ಮಾಡಲು ತಪ್ಪುವುದು ಪಾಪವಾಗಿದೆ, ಮತ್ತು ಎಲ್ಲ ಪಾಪವು ನಿಯಮರಾಹಿತ್ಯವಾಗಿದೆ. (ಮತ್ತಾಯ 7:21-23, NW; 1 ಯೋಹಾನ 3:4; ಹೋಲಿಸಿ ರೋಮಾಪುರ 10:2, 3.) ಒಬ್ಬ ವ್ಯಕ್ತಿಯು ಯುಕ್ತವಾದ ಧರ್ಮವನ್ನು ತಿಳಿದಿರಬಹುದು, ಅದನ್ನು ಬೋಧಿಸುವವರನ್ನು ಆವನು ಪ್ರಶಂಸಿಸಬಹುದು, ಅದನ್ನು ಆಚರಿಸುವವರನ್ನು ಅವನು ಹೊಗಳಬಹುದು, ಆದರೆ ಅದನ್ನು ಅವನು ತನ್ನ ಸ್ವಂತ ಜೀವಿತದಲ್ಲಿ ಅನ್ವಯಿಸುವ ಜವಾಬ್ದಾರಿಯೂ ಅವನಿಗಿದೆ. (ಯಾಕೋಬ 4:17) ಅವನು ಆ ಜವಾಬ್ದಾರಿಯನ್ನು ಸ್ವೀಕರಿಸುವಲ್ಲಿ, ಅವನ ಜೀವಿತವು ಸಂಪದ್ಯುಕ್ತವಾಗುವುದನ್ನು ಕಂಡುಕೊಳ್ಳುವನು, ಮತ್ತು ಇತರ ಯಾವುದೇ ಮಾರ್ಗದಿಂದ ಬರಸಾಧ್ಯವಿಲ್ಲದ ಆನಂದವನ್ನು ಅವನು ಅನುಭವಿಸುವನು.
3 ಮುಂಚಿನ ಲೇಖನದಲ್ಲಿ, ಸತ್ಯ ಧರ್ಮವನ್ನು ಗುರುತಿಸುವ ಆರು ಚಿಹ್ನೆಗಳನ್ನು ನಾವು ಪರಿಗಣಿಸಿದೆವು. ಅವುಗಳಲ್ಲಿನ ಪ್ರತಿಯೊಂದು, ಕೇವಲ ಸತ್ಯ ಧರ್ಮವನ್ನು ಗುರುತಿಸಲು ನಮಗೆ ಸಹಾಯ ಮಾಡುವುದು ಮಾತ್ರವಲ್ಲ, ಆಹ್ವಾನಗಳನ್ನು ಮತ್ತು ಸಂದರ್ಭಗಳನ್ನೂ ನಮಗೆ ವೈಯಕ್ತಿಕವಾಗಿ ನೀಡುತ್ತದೆ. ಅದು ಹೇಗೆ?
ನೀವು ದೇವರ ವಾಕ್ಯಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ?
4. (ಎ) ಯೆಹೋವನ ಸಾಕ್ಷಿಗಳೊಂದಿಗೆ ಹೊಸಬರು ಸೇರಲಾರಂಭಿಸುವಾಗ, ಸಾಕ್ಷಿಗಳ ಬೈಬಲಿನ ಬಳಕೆಯ ಕುರಿತು ಅವರು ಬೇಗನೆ ಏನನ್ನು ಅವಲೋಕಿಸುತ್ತಾರೆ? (ಬಿ) ಆತ್ಮಿಕವಾಗಿ ಉತ್ತಮವಾಗಿ ಪೋಷಿಸಲ್ಪಡುವಿಕೆಯು ಯೆಹೋವನ ಸಾಕ್ಷಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
4 ಯೆಹೋವನ ಸಾಕ್ಷಿಗಳು ಹೊಸತಾಗಿ ಅಭಿರುಚಿ ಇರುವವರೊಂದಿಗೆ ಬೈಬಲ್ ಅಧ್ಯಯನವನ್ನು ನಡೆಸುವಾಗ, ಈ ಹೊಸಬರಲ್ಲಿ ಅನೇಕರು, ಏನು ಕಲಿಸಲ್ಪಡುತ್ತಿದೆಯೊ ಅದು ಬೈಬಲಿನಿಂದಲೇ ಎಂದು ಬಹು ಬೇಗನೆ ವಿವೇಚಿಸುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರವಾಗಿ, ಚರ್ಚು ನಂಬಿಕೆಗಳಿಗೆ, ಮಾನವ ಸಂಪ್ರದಾಯಗಳಿಗೆ, ಯಾ ಪ್ರಮುಖ ಜನರ ಅಭಿಪ್ರಾಯಗಳಿಗೆ ಅವರು ನಿರ್ದೇಶಿಸಲ್ಪಡುವುದಿಲ್ಲ. ದೇವರ ಸ್ವಂತ ವಾಕ್ಯವೇ ಅಧಿಕಾರವಾಗಿದೆ. ಅವರು ರಾಜ್ಯ ಸಭಾಗೃಹಗಳಿಗೆ ಹೋಗುವಾಗ, ಅಲಿಯ್ಲೂ ಕೂಡ ಬೈಬಲ್ ಮುಖ್ಯ ಪಠ್ಯಪುಸ್ತಕವಾಗಿರುವುದನ್ನು ಅವರು ಅವಲೋಕಿಸುತ್ತಾರೆ. ಯೆಹೋವನ ಸಾಕ್ಷಿಗಳೊಳಗೆ ಅವರು ನೋಡುವ ಆನಂದದಲ್ಲಿನ ಹೆಚ್ಚಿನ ಅಂಶವು ಅವರು ದೇವರ ವಾಕ್ಯದಿಂದ ಆತ್ಮಿಕವಾಗಿ ಸರಿಯಾಗಿ ಉಣಿಸಲ್ಪಡುತ್ತಿದ್ದಾರೆಂಬ ನಿಜತ್ವವಾಗಿದೆ ಎಂದು ಅರಿಯಲು ಸತ್ಯದ ಪ್ರಾಮಾಣಿಕ ಅನ್ವೇಷಕರಿಗೆ ಹೆಚ್ಚು ಸಮಯ ಹಿಡಿಯುವುದಿಲ್ಲ.—ಯೆಶಾಯ 65:13, 14.
5. (ಎ) ಯೆಹೋವನ ಸಾಕ್ಷಿಗಳನ್ನು ಅವಲೋಕಿಸುವವರಿಗೆ ಯಾವ ಆಹ್ವಾನವು ನೀಡಲ್ಪಡುತ್ತದೆ? (ಬಿ) ಸಾಕ್ಷಿಗಳ ಆನಂದದಲ್ಲಿ ಅವರು ಹೇಗೆ ಭಾಗಿಗಳಾಗಬಲ್ಲರು?
5 ನೀವು ಇದನ್ನು ಗುರುತಿಸುವಲ್ಲಿ, ಅದಕ್ಕೆ ಹೇಗೆ ಪ್ರತಿಕ್ರಿಯಿಸುವಿರಿ? ನಿಮಗೆ ಅದರ ಪರಿಜ್ಞಾನವು ದೊರಕಿರುವಲ್ಲಿ, ನೀವು ಯುಕ್ತವಾಗಿ ಕೇವಲ ಒಬ್ಬ ನಿಷ್ಪಯ್ರತ್ನದ ವೀಕ್ಷಕರಾಗಿರಲು ಸಾಧ್ಯವಿಲ್ಲ, ಅಥವಾ ಹಾಗಿರಲು ನೀವು ಬಯಸಲೂ ಬಾರದು. “ಕೇಳುವವರು ಮಾತ್ರ” ಆಗಿದ್ದು, “ವಾಕ್ಯದ ಪ್ರಕಾರ ನಡೆಯುವವರಾಗಿ” ಇರದವರು ‘ಸುಳ್ಳು ವಿವೇಚನೆಯಿಂದ ಅವರನ್ನೇ ಮೋಸಗೊಳಿಸಿಕೊಳ್ಳುತ್ತಾರೆ’ ಎಂದು ಬೈಬಲು ತೋರಿಸುತ್ತದೆ. (ಯಾಕೋಬ 1:22) ಅವರು ಏನನ್ನೇ ಹೇಳಬಹುದಾದರೂ, ದೇವರಿಗೆ ವಿಧೇಯರಾಗಲು ಅವರ ತಪ್ಪುವಿಕೆಯು ಅವರು ಆತನನ್ನು ನಿಜವಾಗಿಯೂ ಪ್ರೀತಿಸುವುದಿಲ್ಲವೆಂಬುದನ್ನು ತಿಳಿದುಕೊಳ್ಳಲು ತಪ್ಪುವ ಕಾರಣದಿಂದ ಅವರು ತಮ್ಮನ್ನೇ ಮೋಸಗೊಳಿಸುತ್ತಾರೆ. (ಯಾಕೋಬ 2:18-26; 1 ಯೋಹಾನ 5:3) ವೈದೃಶ್ಯವಾಗಿ, ಯೆಹೋವನಿಗಾಗಿ ಪ್ರೀತಿಯ ಮೂಲಕ ಪ್ರೇರಿಸಲ್ಪಟ್ಟವನು ‘ಕಾರ್ಯವನ್ನು ಮಾಡುವವನಾಗಿ,’ “ನಡತೆಯಿಂದ ಧನ್ಯನಾಗುವನು.” ಹೌದು, ಯೇಸು ಕ್ರಿಸ್ತನು ವಿವರಿಸಿದಂತೆ, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು!”—ಯಾಕೋಬ 1:25; ಲೂಕ 11:28; ಯೋಹಾನ 13:17.
6. ನಾವು ನಿಜವಾಗಿಯೂ ದೇವರ ವಾಕ್ಯವನ್ನು ಗಣ್ಯಮಾಡುವಲ್ಲಿ, ಯಾವ ಸಂದರ್ಭಗಳನ್ನು ಕೈಗೆತ್ತಿಕೊಳ್ಳಲು ನಾವು ವೈಯಕ್ತಿಕವಾಗಿ ಪ್ರಯತ್ನಿಸುವೆವು?
6 ದೇವರ ಚಿತ್ತದ ಜ್ಞಾನದಲ್ಲಿ ನೀವು ಬೆಳೆಯುವಾಗ ಮತ್ತು ನೀವು ಕಲಿಯುವ ಹೆಚ್ಚಿನ ವಿಷಯಗಳನ್ನು ಅನ್ವಯಿಸುವಾಗ ಆ ಸಂತೋಷವು ಆಳವಾಗುವುದು. ದೇವರ ವಾಕ್ಯದ ಅಧ್ಯಯನ ಮಾಡಲು ನೀವೆಷ್ಟು ಪ್ರಯತ್ನವನ್ನು ಮಾಡುವಿರಿ? ಹತ್ತಾರು ಸಾವಿರಗಳಷ್ಟು ಅನಕ್ಷರಸ್ಥ ವ್ಯಕ್ತಿಗಳು ಓದು ಮತ್ತು ಬರಹವನ್ನು ಕಲಿಯಲು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಿರ್ದಿಷ್ಟವಾಗಿ ಶಾಸ್ತ್ರವಚನಗಳನ್ನು ಓದಲು ಮತ್ತು ಅವುಗಳನ್ನು ಇತರ ಜನರಿಗೆ ಕಲಿಸಲು ಅವರಿಗೆ ಸಾಧ್ಯವಾಗುವಂತೆ ಅವರಿದನ್ನು ಮಾಡಿದ್ದಾರೆ. ಇತರರು, ಬೈಬಲನ್ನು ಮತ್ತು ಕಾವಲಿನಬುರುಜುವಿನಂತಹ, ಬೈಬಲ್ ಅಧ್ಯಯನಾ ಸಹಾಯಕಗಳನ್ನು ಓದಲು ಪ್ರತಿ ದಿನ ಸ್ವಲ್ಪ ಸಮಯವನ್ನು ವ್ಯಯಿಸಲು ಸಾಧ್ಯವಾಗುವಂತೆ ಪ್ರತಿ ಬೆಳಗ್ಗೆ ಬೇಗನೆ ಏಳುತ್ತಾರೆ. ನೀವು ವೈಯಕ್ತಿಕವಾಗಿ ಬೈಬಲಿನ ಓದುವಿಕೆಯನ್ನು ಕ್ರಮಾನುಗತವಾಗಿ ಮಾಡುವಾಗ ಯಾ ಇತರ ಅಧ್ಯಯನ ವಿಷಯಗಳಲ್ಲಿ ಸೂಚಿಸಲ್ಪಟ್ಟ ಶಾಸ್ತ್ರವಚನಗಳನ್ನು ತೆರೆದು ನೋಡುವಾಗ, ಯೆಹೋವನ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜಾಗರೂಕತೆಯಿಂದ ಗಮನಿಸಿರಿ, ಮತ್ತು ನಮ್ಮ ಮಾರ್ಗದರ್ಶನೆಗಾಗಿ ಅಲ್ಲಿರುವ ಅನೇಕ ಸೂತ್ರಗಳನ್ನು ವಿವೇಚಿಸಲು ನೋಡಿರಿ. ದೇವರ, ಆತನ ಉದ್ದೇಶ, ಮತ್ತು ಮಾನವಕುಲದೊಂದಿಗೆ ಆತನ ವ್ಯವಹಾರಗಳ ಕುರಿತು ಪ್ರತಿಯೊಂದು ಭಾಗವು ಪ್ರಕಟಿಸುವುದನ್ನು ಮನನ ಮಾಡಿರಿ. ಇವುಗಳು ನಿಮ್ಮ ಹೃದಯಗಳನ್ನು ರೂಪಿಸಲು ಸಮಯವನ್ನು ಕೊಡಿರಿ. ನಿಮ್ಮ ಸ್ವಂತ ಜೀವಿತದಲ್ಲಿ ಬೈಬಲ್ ಸಲಹೆಯನ್ನು ಹೆಚ್ಚು ಪೂರ್ಣವಾಗಿ ನೀವು ಅನ್ವಯಿಸಬಲ್ಲ ಮಾರ್ಗಗಳಿವೆಯೋ ಎಂದು ಗಮನಿಸಿರಿ.—ಕೀರ್ತನೆ 1:1, 2; 19:7-11; 1 ಥೆಸಲೊನೀಕ 4:1.
ಯೆಹೋವನಿಗಾಗಿ ನಿಮ್ಮ ಭಕ್ತಿಯು ಪೂರ್ಣವಾಗಿದೆಯೊ?
7. (ಎ) ದೇವರನ್ನು ಆರಾಧಿಸಲು ಜನರ ಪ್ರಯತ್ನಗಳ ಮೇಲೆ ತ್ರಯೈಕ್ಯ ತತ್ವವು ಹೇಗೆ ಪರಿಣಾಮ ಬೀರಿದೆ? (ಬಿ) ಒಬ್ಬ ವ್ಯಕ್ತಿಯು ದೇವರ ಕುರಿತು ಸತ್ಯವನ್ನು ಕಲಿಯುವಾಗ ಏನು ಸಂಭವಿಸಬಹುದು?
7 ಮಿಲ್ಯಾಂತರ ಜನರಿಗೆ, ಸತ್ಯ ದೇವರು ತ್ರಯೈಕ್ಯನಲವ್ಲೆಂದು ಕಲಿಯುವುದು ಉಪಶಮನವಾಗಿದೆ. “ಅದೊಂದು ಮರ್ಮ” ಎನ್ನುವ ವಿವರಣೆಯು ಅವರನ್ನು ಎಂದೂ ತೃಪ್ತಿಪಡಿಸಿದ್ದಿಲ್ಲ. ಗ್ರಹಿಸಲಸಾಧ್ಯವಾಗಿದ್ದ ದೇವರ ಬಳಿಗೆ ಅವರು ಸೆಳೆಯಲ್ಪಡಲು ಹೇಗೆ ಸಾಧ್ಯ? ಆ ಬೋಧನೆಯ ಫಲವಾಗಿ, ಅವರು ತಂದೆಯನ್ನು (ಯಾರ ಹೆಸರನ್ನು ಅವರು ಚರ್ಚ್ನಲ್ಲಿ ಎಂದೂ ಕೇಳಿರಲಿಲ್ಲವೊ ಆ ಹೆಸರನ್ನು) ಅಲಕ್ಷಿಸಲು ಮತ್ತು ಯೇಸುವನ್ನು ದೇವರಂತೆ ಆರಾಧಿಸಲು ಯಾ ಅವರ ಆರಾಧನೆಯನ್ನು (“ದೇವರ ತಾಯಿ”ಯಾಗಿದ್ದಳೆಂದು ಅವರು ಕಲಿಸಿದ್ದ) ಮರಿಯಳ ಕಡೆಗೆ ನಿರ್ದೇಶಿಸಲು ಮುಂದಾದರು. ಆದರೆ ಯೆಹೋವನ ಸಾಕ್ಷಿಗಳಲ್ಲೊಬ್ಬರು ಬೈಬಲನ್ನು ತೆರೆದು, ಅವರಿಗೆ ಯೆಹೋವ ಎಂಬ ದೇವರ ವೈಯಕ್ತಿಕ ಹೆಸರನ್ನು ತೋರಿಸಿದಾಗ ಅವರ ಹೃದಯಗಳು ಆನಂದದಿಂದ ಪ್ರತಿಕ್ರಿಯಿಸಿದವು. (ಕೀರ್ತನೆ 83:18) ವೆನಸೇಲ್ವದ ಸ್ತ್ರೀಯೊಬ್ಬಳು ದೈವಿಕ ನಾಮವು ತೋರಿಸಲ್ಪಟ್ಟಾಗ ಆಕೆ ಎಷ್ಟೊಂದು ಹಿಗ್ಗಿದಳೆಂದರೆ, ಆ ಅಮೂಲ್ಯ ಸತ್ಯವನ್ನು ಅವಳೊಂದಿಗೆ ಹಂಚಿಕೊಂಡ ಆ ಸಾಕ್ಷಿ ಯುವತಿಯನ್ನು ಅಕ್ಷರಶಃ ಅಪ್ಪಿಕೊಂಡಳು, ಮತ್ತು ಒಂದು ಮನೆ ಬೈಬಲ್ ಅಧ್ಯಯನವನ್ನು ಪಡೆದುಕೊಳ್ಳಲಿಕ್ಕಾಗಿ ಒಪ್ಪಿಕೊಂಡಳು. ಯೇಸು ತನ್ನ ತಂದೆಯ ಕುರಿತು “ನನ್ನ ದೇವರೂ ನಿಮ್ಮ ದೇವರೂ” ಎಂದು ಮಾತಾಡಿದ್ದನ್ನು ಮತ್ತು ತನ್ನ ತಂದೆಗೆ “ಒಬ್ಬನೇ ಸತ್ಯದೇವರು” ಎಂದು ಕರೆದದ್ದನ್ನು ಅಂತಹ ಜನರು ಕಲಿಯುವಾಗ, ದೇವರ ಕುರಿತು ಬೈಬಲು ಏನನ್ನು ಕಲಿಸುತ್ತದೋ ಅದು ಗ್ರಹಿಸಲಸಾಧ್ಯವಾದದ್ದಲ್ಲವೆಂದು ಅವರು ತಿಳಿದುಕೊಳ್ಳುತ್ತಾರೆ. (ಯೋಹಾನ 17:3; 20:17) ಅವರು ಯೆಹೋವನ ಗುಣಗಳನ್ನು ಅರಿತುಕೊಳ್ಳುವಂತೆ, ಅವನ ಬಳಿಗೆ ಸೆಳೆಯಲ್ಪಟ್ಟಂತೆ ಅವರಿಗೆ ಭಾಸವಾಗಿ, ಅವರು ಅವನಿಗೆ ಪ್ರಾರ್ಥಿಸಲು ಆರಂಭಿಸುತ್ತಾರೆ, ಮತ್ತು ಅವನನ್ನು ಮೆಚ್ಚಿಸಲು ಬಯಸುತ್ತಾರೆ. ಫಲಿತಾಂಶವೇನು?
8. (ಎ) ಯೆಹೋವನಿಗೋಸ್ಕರ ಪ್ರೀತಿ ಮತ್ತು ಆತನನ್ನು ಮೆಚ್ಚಿಸುವ ಅವರ ಬಯಕೆಯ ಕಾರಣ, ಮಿಲ್ಯಾಂತರ ವ್ಯಕ್ತಿಗಳು ಏನನ್ನು ಮಾಡಿರುತ್ತಾರೆ? (ಬಿ) ಕ್ರೈಸ್ತ ದೀಕ್ಷಾಸ್ನಾನವು ಅತ್ಯಾವಶ್ಯಕವಾಗಿ ಪ್ರಾಮುಖ್ಯವಾಗಿದೆ ಏಕೆ?
8 ಕಳೆದ ಹತ್ತು ವರುಷಗಳಲ್ಲಿ, ಆರು ಖಂಡಗಳಲ್ಲಿ ಮತ್ತು ಹಲವಾರು ದ್ವೀಪಗಳಲ್ಲಿ 25,28,524 ಜನರು ಅವರ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿದ್ದಾರೆ ಮತ್ತು ಅನಂತರ ಈ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ನೀವೊಬ್ಬರಾಗಿದ್ದಿರೊ? ಯಾ ದೀಕ್ಷಾಸ್ನಾನ ಹೊಂದಲು ನೀವೀಗ ತಯಾರಿಸುತ್ತಿದ್ದೀರೊ? ಪ್ರತಿಯೊಬ್ಬ ಕ್ರೈಸ್ತನ ಜೀವಿತದಲ್ಲಿ ದೀಕ್ಷಾಸ್ನಾನವು ಒಂದು ಪ್ರಾಮುಖ್ಯ ಮೈಲುಗಲ್ಲಾಗಿದೆ. ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಲು ಮತ್ತು ಅವರನ್ನು ದೀಕ್ಷಾಸ್ನಾನ ಮಾಡಿಸಲು ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದನು. (ಮತ್ತಾಯ 28:19, 20) ಯೇಸುವಿನ ಸ್ವಂತ ದೀಕ್ಷಾಸ್ನಾನವನ್ನು ಹಿಂಬಾಲಿಸಿ ಯೆಹೋವನು ತಾನೇ ಸ್ವರ್ಗದಿಂದ ಮಾತಾಡಿದ್ದು ಕೂಡ ಗಮನಾರ್ಹವಾಗಿದೆ, ಆತನಂದದ್ದು: “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ.”—ಲೂಕ 3:21, 22.
9. ಯೆಹೋವನೊಂದಿಗೆ ಒಂದು ಮೆಚ್ಚಿಕೆಯ ಸಂಬಂಧವನ್ನು ಕಾಪಾಡಬೇಕಾದರೆ, ನಮ್ಮಿಂದ ಯಾವುದು ಅವಶ್ಯವಾಗಿದೆ?
9 ಯೆಹೋವನೊಂದಿಗೆ ಒಂದು ಮೆಚ್ಚಿಕೆಯ ಸಂಬಂಧವು ಆದರಿಸುವಂತಹ ವಿಷಯವಾಗಿದೆ. ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮೂಲಕ ಅಂತಹ ಸಂಬಂಧದೊಳಗೆ ನೀವು ಪ್ರವೇಶಿಸಿರುವುದಾದರೆ, ಆ ಸಂಬಂಧವನ್ನು ಶಿಥಿಲಗೊಳಿಸುವ ಯಾವುದೇ ವಿಷಯದಿಂದ ದೂರವಿರಿ. ಜೀವಿತದ ಚಿಂತೆಗಳು ಮತ್ತು ಪ್ರಾಪಂಚಿಕ ವಸ್ತುಗಳ ಮೇಲಿನ ವ್ಯಾಕುಲವು ಅದನ್ನು ದ್ವಿತೀಯ ಸ್ಥಾನದೊಳಗೆ ತಳ್ಳುವಂತೆ ಬಿಡಬೇಡಿರಿ. (1 ತಿಮೊಥೆಯ 6:8-12) ಜ್ಞಾನೋಕ್ತಿ 3:6ರ ಸಲಹೆಯ ಹೊಂದಿಕೆಯಲ್ಲಿ ನಿಜಕ್ಕೂ ಜೀವಿಸಿರಿ: “ನಿನ್ನ ಎಲ್ಲಾ ನಡವಳಿಯಲ್ಲಿ [ಯೆಹೋವನ] ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”
ಕ್ರಿಸ್ತನ ಪ್ರೀತಿಯು ನಿಮ್ಮನ್ನು ಎಷ್ಟು ಆಳವಾಗಿ ಪ್ರಭಾವಿಸುತ್ತದೆ?
10. ನಾವು ಯೆಹೋವನನ್ನು ಆರಾಧಿಸುವುದು ಯೇಸುವನ್ನು ಅಲಕ್ಷಿಸಲು ಕಾರಣವಾಗುವುದಿಲ್ಲ ಯಾಕೆ?
10 ನಿಜವಾಗಿಯೂ, ಒಬ್ಬನೇ ಸತ್ಯ ದೇವರಂತೆ ಯೆಹೋವನಿಗಾಗಿರುವ ಯೋಗ್ಯ ಗಣ್ಯತೆಯು, ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನನ್ನು ಕಡೆಗಣಿಸಲು ಕಾರಣವನ್ನೀಯುವುದಿಲ್ಲ. ಅದಕ್ಕೆ ಪ್ರತಿಯಾಗಿ, ಪ್ರಕಟನೆ 19:10 ಹೇಳುವುದು: “ಪ್ರವಾದಿಸುವುದನ್ನು ಪ್ರೇರಿಸುವುದು ಯೇಸುವಿಗೆ ಸಾಕ್ಷಿ ನೀಡುವಿಕೆಯೇ.” (NW) ಆದಿಕಾಂಡದಿಂದ ಪ್ರಕಟನೆಯವರೆಗೆ, ಪ್ರೇರಿತ ಪ್ರವಾದನೆಗಳು, ಯೆಹೋವನ ಉದ್ದೇಶದಲ್ಲಿ ಯೇಸುಕ್ರಿಸ್ತನ ಪಾತ್ರದ ಕುರಿತು ವಿವರಣೆಯನ್ನು ಒದಗಿಸುತ್ತವೆ. ಒಬ್ಬ ವ್ಯಕ್ತಿಯು ಆ ವಿವರಣೆಗಳೊಂದಿಗೆ ಪರಿಚಿತನಾಗುವಾಗ, ಕ್ರೈಸ್ತ ಪ್ರಪಂಚದ ಸುಳ್ಳು ಬೋಧನೆಗಳಿಂದ ಫಲಿಸಿದ ರೂಪವಿಕಾರ ಮತ್ತು ಅಪಾರ್ಥಗಳಿಂದ ಸ್ವತಂತ್ರವಾದ ಒಂದು ಸ್ತಂಭಿಸುವ ಚಿತ್ರವು ಹೊರಬರುತ್ತದೆ.
11. ದೇವರ ಮಗನ ಕುರಿತು ಬೈಬಲು ನಿಜವಾಗಿಯೂ ಬೋಧಿಸುವುದನ್ನು ತಿಳಿಯುವುದು ಪೋಲೆಂಡಿನ ಒಬ್ಬ ಸ್ತ್ರೀಯ ಮೇಲೆ ಹೇಗೆ ಪ್ರಭಾವ ಬೀರಿತು?
11 ದೇವರ ಮಗನ ಕುರಿತ ಸತ್ಯವನ್ನು ಗ್ರಹಿಸುವುದು ಒಬ್ಬ ವ್ಯಕ್ತಿಯ ಮೇಲೆ ತೀವ್ರವಾದ ಪರಿಣಾಮವನ್ನು ಬೀರಬಲ್ಲದು. ಡನೂಟ ಎಂಬ ಪೋಲೆಂಡಿನ ಸ್ತ್ರೀಗೆ ಹೀಗೆಯೇ ಆಗಿತ್ತು. ಅವಳು ಎಂಟು ವರುಷಗಳಿಂದ ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕವನ್ನಿಟ್ಟಿದ್ದಳು, ಅವರೇನನ್ನು ಕಲಿಸುತ್ತಿದ್ದರೊ ಅದರಲ್ಲಿ ಆನಂದಿಸುತಿದ್ದಳು, ಆದರೆ ಸತ್ಯ ಆರಾಧನೆಯನ್ನು ತನ್ನ ಜೀವಿತದ ಮಾರ್ಗವನ್ನಾಗಿ ಅವಳು ಮಾಡುತ್ತಿರಲಿಲ್ಲ. ಅನಂತರ ತಿಳಿದುಕೊಳ್ಳಲು ಒಂದು ಸರಳವಾದ ವಿಧಾನದಲ್ಲಿ ಕ್ರಿಸ್ತನ ಜೀವಿತವನ್ನು ಸಾದರಪಡಿಸುವ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕದ ಪ್ರತಿಯನ್ನು ಅವಳು ಪಡೆದಳು.a ಸಂಜೆಯ ಹೊತ್ತಾರೆಯಲ್ಲಿ, ಕೇವಲ ಒಂದು ಅಧ್ಯಾಯವನ್ನು ಓದಲು ಬಯಸಿ ಅವಳು ಆ ಪುಸ್ತಕವನ್ನು ತೆರೆದಳು. ಆದಾಗ್ಯೂ, ಬೆಳಕು ಹರಿಯುವ ವರೆಗೆ ಓದಿ ಅವಳು ಆ ಪುಸ್ತಕವನ್ನು ಮುಗಿಸಿದಾಗ, ಅದನ್ನು ಬದಿಗಿಟ್ಟಳು. ಅವಳು ಕಣ್ಣೀರಿಟ್ಟಳು. “ಯೆಹೋವ, ನನ್ನನ್ನು ಕ್ಷಮಿಸು,” ಎಂದಾಕೆ ಮೊರೆಯಿಟಳ್ಟು. ಅವಳು ಓದಿದರ್ದ ಫಲಿತಾಂಶವಾಗಿ, ಯೆಹೋವನ ಮತ್ತು ಆತನ ಮಗನ ಮೂಲಕ ತೋರಿಸಲ್ಪಟ್ಟ ಪ್ರೀತಿಯನ್ನು ಅವಳು ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿಗಿ ನೋಡಿದಳು. ದೇವರು ತಾಳ್ಮೆಯಿಂದ ಆಕೆಯ ಕಡೆಗೆ ವಿಸ್ತರಿಸುತ್ತಿದ್ದ ಸಹಾಯದಿಂದ ಅವಳು ಉಪಕಾರ ಸ್ಮರಣೆ ಮಾಡದೇ ದೂರ ಸರಿಯುತ್ತಿದ್ದುದ್ದನ್ನು ಅವಳು ಅರಿತುಕೊಂಡಳು. ಅವಳು, ಯೇಸು ಕ್ರಿಸ್ತನ ನಂಬಿಕೆಯ ಆಧಾರದ ಮೇಲೆ ಯೆಹೋವನಿಗೆ ಸಮರ್ಪಿಸುವ ಗುರುತಾಗಿ 1993 ರಲ್ಲಿ ದೀಕ್ಷಾಸ್ನಾನ ಹೊಂದಿದಳು.
12. ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನವು ನಮ್ಮ ಜೀವಿತಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
12 “ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಂಬಂಧವಾದ ಪರಿಜ್ಞಾನ”ವನ್ನು ಒಬ್ಬ ಚಟುವಟಿಕೆಭರಿತ ಮತ್ತು ಫಲದಾಯಕ ಕ್ರೈಸ್ತನಾಗಿರುವುದರೊಂದಿಗೆ ಜೊತೆಗೂಡಿಸಲಾಗಿದೆ. (2 ಪೇತ್ರ 1:8) ರಾಜ್ಯ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳುವಂಥ ಚಟುವಟಿಕೆಯಲ್ಲಿ ಎಷ್ಟರಮಟ್ಟಿಗೆ ನೀವು ಭಾಗವನ್ನು ತೆಗೆದುಕೊಳ್ಳುವಿರಿ? ವ್ಯಕ್ತಿಗಳು ಮಾಡ ಸಾಧ್ಯವಿರುವ ಮೊತ್ತವು ಅನೇಕ ಪರಿಸ್ಥಿತಿಗಳ ಮೂಲಕ ಪ್ರಭಾವಿಸಲ್ಪಟ್ಟಿದೆ. (ಮತ್ತಾಯ 13:18-23) ಕೆಲವು ಪರಿಸ್ಥಿತಿಗಳನ್ನು ನಾವು ಬದಲಿಸಸಾಧ್ಯವಿಲ್ಲ; ಇತರ ಪರಿಸ್ಥಿತಿಗಳನ್ನು ಬದಲಿಸಸಾಧ್ಯವಿದೆ. ಮಾಡಲು ಸಾಧ್ಯವಿರುವ ಬದಲಾವಣೆಗಳನ್ನು ಗುರುತಿಸಲು ಮತ್ತು ಮಾಡಲು ನಮ್ಮನ್ನು ಪ್ರೇರೇಪಿಸುವುದು ಯಾವುದು? ಅಪೊಸ್ತಲ ಪೌಲನು ಬರೆದದ್ದು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯ ಮಾಡುತ್ತದೆ”; ಇತರ ಮಾತುಗಳಲ್ಲಿ, ನಮಗೋಸ್ಕರ ಅವನು ತನ್ನ ಜೀವವನ್ನು ಕೊಟ್ಟದ್ದರಲ್ಲಿ ಅವನು ತೋರಿಸಿದ ಪ್ರೀತಿಯು ಎಷ್ಟೊಂದು ಎದ್ದುಕಾಣುವಂಥದ್ದಾಗಿತ್ತೆಂದರೆ ಅದಕ್ಕೋಸ್ಕರ ನಮ್ಮ ಗಣ್ಯತೆಯು ಬೆಳೆಯುತ್ತಿರುವಾಗ, ನಮ್ಮ ಸ್ವಂತ ಹೃದಯಗಳು ಆಳವಾಗಿ ಪ್ರೇರೇಪಿಸಲ್ಪಡುವವು. ಫಲಿತಾಂಶವಾಗಿ, ಸ್ವಾರ್ಥ ಗುರಿಗಳನ್ನು ಬೆನ್ನಟ್ಟುತ್ತಾ ಇರುವುದು ಮತ್ತು ಹೆಚ್ಚಾಗಿ ಸ್ವಇಚ್ಛಾಪೂರ್ತಿಮಾಡಿಕೊಳ್ಳಲು ಜೀವಿಸುವುದು ನಮಗೆ ಅತಿ ಅನುಚಿತವಾಗಿರುವುದೆಂದು ನಾವು ಅರಿಯುತ್ತೇವೆ. ಅದರ ಬದಲಿಗೆ, ಕ್ರಿಸ್ತನು ತನ್ನ ಶಿಷ್ಯರಿಗೆ ಮಾಡಲು ಕಲಿಸಿದ ಕೆಲಸಕ್ಕೆ ಮೊದಲ ಸ್ಥಾನವನ್ನು ಕೊಡಲು ನಮ್ಮ ವ್ಯವಹಾರಗಳನ್ನು ನಾವು ಏರ್ಪಡಿಸುವೆವು.—2 ಕೊರಿಂಥ 5:14, 15.
ಲೋಕದಿಂದ ಪ್ರತ್ಯೇಕರು—ಎಷ್ಟರ ಮಟ್ಟಿಗೆ?
13. ತನ್ನನ್ನು ಲೋಕದ ಭಾಗವನ್ನಾಗಿ ಮಾಡಿಕೊಂಡಂಥ ಒಂದು ಧರ್ಮದಲ್ಲಿ ಭಾಗವಹಿಸುವುದು ನಮಗೇಕೆ ಬೇಡವಾಗಬೇಕು?
13 ಕ್ರೈಸ್ತ ಪ್ರಪಂಚ ಮತ್ತು ಇತರ ಧರ್ಮಗಳು ಲೋಕದ ಭಾಗವಾಗಿರಲು ಬಯಸುವ ಕಾರಣದಿಂದಾಗಿ ಅವರು ಮಾಡಿರುವ ದಾಖಲೆಯನ್ನು ನೋಡುವುದು ಕಷ್ಟಕರವಾಗಿಲ್ಲ. ಚರ್ಚ್ ವಂತಿಗೆಗಳನ್ನು ಕ್ರಾಂತಿಕಾರಿ ಚಟುವಟಿಕೆಗಳಿಗೆ ಬಂಡವಾಳ ಒದಗಿಸಲು ಬಳಸಲಾಗಿದೆ. ಪಾದ್ರಿಗಳು ಗೆರಿಲ ಹೋರಾಟಗಾರರಾಗಿದ್ದಾರೆ. ದಿನನಿತ್ಯ, ವಾರ್ತಾಪತ್ರಿಕೆಗಳು ಭೂಮಿಯ ವಿವಿಧ ಭಾಗಗಳಲ್ಲಿ ಒಬ್ಬರೊಂದಿಗೊಬ್ಬರು ಹೋರಾಡುವ ಧಾರ್ಮಿಕ ಪಕ್ಷಗಳ ಕುರಿತು ವರದಿಸುತ್ತವೆ. ಅವರ ಕೈಗಳು ರಕ್ತವನ್ನು ತೊಟ್ಟಿಕ್ಕುತ್ತವೆ. (ಯೆಶಾಯ 1:15) ಮತ್ತು ಲೋಕವ್ಯಾಪಕವಾಗಿ ವೈದಿಕರು ರಾಜಕೀಯ ದೃಶ್ಯವನ್ನು ಕೌಶಲದಿಂದ ನಿರ್ವಹಿಸಲು ಪ್ರಯತ್ನಿಸುತ್ತಾ ಮುಂದುವರಿಯುತ್ತಿದ್ದಾರೆ. ನಿಜ ಆರಾಧಕರಿಗೆ ಇದರಲ್ಲಿ ಯಾವುದೇ ಭಾಗವಿಲ್ಲ.—ಯಾಕೋಬ 4:1-4.
14. (ಎ) ನಾವು ಲೋಕದಿಂದ ಪ್ರತ್ಯೇಕವಾಗಿ ಉಳಿಯುತ್ತೇವಾದರೆ ನಾವು ವೈಯಕ್ತಿಕವಾಗಿ ಯಾವುದರಿಂದ ದೂರವಿರಬೇಕು? (ಬಿ) ಲೌಕಿಕ ಮನೋಭಾವಗಳ ಮತ್ತು ಆಚಾರಗಳ ಮೂಲಕ ಪಾಶಕ್ಕೆ ಸಿಕ್ಕಿಸಿಕೊಳ್ಳುವುದನ್ನು ತಪ್ಪಿಸಲು ನಮಗೆ ಯಾವುದು ಸಹಾಯ ಮಾಡಬಲ್ಲದು?
14 ಆದರೆ ಲೋಕದಿಂದ ಪ್ರತ್ಯೇಕತೆಯು ಅದಕ್ಕಿಂತಲೂ ಹೆಚ್ಚಿನದನ್ನು ಒಳಗೊಳ್ಳುತ್ತದೆ. ಇತರರಿಗಾಗಿ ನಿಜವಾದ ಚಿಂತೆಯ ಕೊರತೆ, ಸುಳ್ಳಾಡುವಿಕೆ ಮತ್ತು ದುರ್ನುಡಿಗಳು, ಅಧಿಕಾರದ ವಿರುದ್ಧ ದಂಗೆ, ಮತ್ತು ಸ್ವನಿಯಂತ್ರಣವನ್ನು ಅಭ್ಯಸಿಸಲು ತಪ್ಪುವಿಕೆಯಂಥವುಗಳೊಂದಿಗೆ ಲೋಕವು ಹಣದಾಶೆ ಮತ್ತು ಹಣವು ಕೊಂಡುಕೊಳ್ಳುವಂಥ, ವೈಯಕ್ತಿಕ ಪ್ರಮುಖತೆಯ ಬಯಕೆ, ಮತ್ತು ಸುಖಾನುಭೋಗದ ಒಂದು ಸಂತತ ಬೆನ್ನಟ್ಟುವಿಕೆಯ ಮೂಲಕ ವೈಲಕ್ಷಣ್ಯವನ್ನು ಹೊಂದಿದೆ. (2 ತಿಮೊಥೆಯ 3:2-5; 1 ಯೋಹಾನ 2:15, 16) ನಮ್ಮ ಸ್ವಂತ ಅಪರಿಪೂರ್ಣತೆಯ ಕಾರಣದಿಂದಾಗಿ, ನಾವು ಅಂತಹ ಸ್ವಭಾವ ಲಕ್ಷಣಗಳಲ್ಲಿ ನಿರ್ದಿಷ್ಟವಾದುದನ್ನು ಹೇಗಾದರೂ ಕೆಲವೊಮ್ಮೆ ಪ್ರತಿಬಿಂಬಿಸಬಹುದು. ಅಂಥಾ ಪಾಶಗಳನ್ನು ತಡೆಯುವ ನಮ್ಮ ಪ್ರಯಾಸದಲ್ಲಿ ನಮ್ಮನ್ನು ಯಾವುದು ಸಹಾಯ ಮಾಡಬಲ್ಲದು? ಲೋಕದ ಸ್ವಭಾವ ಲಕ್ಷಣಗಳಿಗೆ ಜವಾಬ್ದಾರನು ಯಾರೆಂದು ನಾವು ನಮ್ಮನ್ನೇ ಜ್ಞಾಪಿಸಿಕೊಳ್ಳುವ ಅಗತ್ಯವಿದೆ. “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” (1 ಯೋಹಾನ 5:19) ಒಂದು ನಿರ್ದಿಷ್ಟ ಪಥವು ಎಷ್ಟೇ ಆಕರ್ಷಿತವಾಗಿ ಕಂಡುಬರಲಿ, ಇತರ ಎಷ್ಟೇ ಜನರು ಆ ರೀತಿಯಲ್ಲಿ ಜೀವಿಸಲಿ, ಯೆಹೋವನ ಪ್ರಮುಖ ವೈರಿ, ಪಿಶಾಚನಾದ ಸೈತಾನನು ಇದರ ಹಿಂದಿದ್ದಾನೆಂದು ನಾವು ನೋಡುವಾಗ, ಅದು ನಿಜಕ್ಕೂ ಎಷ್ಟೊಂದು ಕುರೂಪವಾದದ್ದಾಗಿದೆ ಎಂದು ನಾವು ಅರಿಯುತ್ತೇವೆ.—ಕೀರ್ತನೆ 97:10.
ನಿಮ್ಮ ಪ್ರೀತಿಯು ಎಷ್ಟು ದೂರ ತಲಪುತ್ತದೆ?
15. ನೀವು ಅವಲೋಕಿಸಿದ ನಿಸ್ವಾರ್ಥ ಪ್ರೀತಿಯು ಯುಕ್ತವಾದ ಧರ್ಮವನ್ನು ಗುರುತಿಸಲು ನಿಮಗೆ ಹೇಗೆ ಸಹಾಯ ಮಾಡೀತು?
15 ನೀವು ಯೆಹೋವನ ಸಾಕ್ಷಿಗಳೊಂದಿಗೆ ಪ್ರಥಮವಾಗಿ ಸೇರಲು ಆರಂಭಿಸಿದಾಗ, ಅವರೊಳಗೆ ವ್ಯಕ್ತವಾಗಿರುವ ಪ್ರೀತಿಯು, ಲೋಕದ ಆತ್ಮಕ್ಕೆ ಅದರ ವ್ಯತಿರಿಕತ್ತೆಯ ಕಾರಣದಿಂದಾಗಿ, ನಿಸ್ಸಂಶಯವಾಗಿ ನಿಮಗೆ ಹಿಡಿಸಿತು. ನಿಸ್ವಾರ್ಥ ಪ್ರೇಮದ ಮೇಲೆ ಒತ್ತಡ ಹಾಕುವಿಕೆಯು, ಯೆಹೋವನ ಶುದ್ಧ ಆರಾಧನೆಯನ್ನು ಇತರ ಎಲ್ಲಾ ಆರಾಧನೆಯ ವಿಧಾನಗಳಿಂದ ಭಿನ್ನವಾಗಿಸುತ್ತದೆ. ಯೆಹೋವನ ಸಾಕ್ಷಿಗಳು ಕಾರ್ಯತಃ ಯುಕ್ತವಾದ ಧರ್ಮವನ್ನು ಆಚರಿಸುತ್ತಾರೆಂದು ನಿಮಗೆ ಮನದಟ್ಟು ಮಾಡಿರುವುದು ಇದೇ ಆಗಿರಬಹುದು. ಯೇಸು ಕ್ರಿಸ್ತನು ಸ್ವತಃ ಅಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35.
16. ನಮ್ಮ ಪ್ರೀತಿಯಲ್ಲಿ ವಿಶಾಲವಾಗಲು ನಮಗೆ ವೈಯಕ್ತಿಕವಾಗಿ ಯಾವ ಸಂದರ್ಭಗಳು ಇರಬಹುದು?
16 ಆ ಗುಣವು ನಿಮ್ಮನ್ನು ಕೂಡ ಕ್ರಿಸ್ತನ ಶಿಷ್ಯರಲ್ಲಿ ಒಬ್ಬರೆಂದು ಗುರುತಿಸುತ್ತದೊ? ನಿಮ್ಮ ಪ್ರೀತಿ ತೋರಿಸುವಿಕೆಯಲ್ಲಿ ವಿಶಾಲಗೊಳ್ಳಲು ಮಾರ್ಗಗಳುಂಟೊ? ನಿಸ್ಸಂದೇಹವಾಗಿ ನಾವೆಲ್ಲರು ಹಾಗೆ ಮಾಡಬಲ್ಲೆವು. ರಾಜ್ಯ ಸಭಾಗೃಹದಲ್ಲಿ ಇತರರ ಕಡೆಗೆ ಸ್ನೇಹಪರತೆಗಿಂತ ಹೆಚ್ಚಿನದ್ದು ಅದಕ್ಕೆ ಇದೆ. ಮತ್ತು ನಮ್ಮನ್ನು ಪ್ರೀತಿಸುವವರಿಗೆ ಮಾತ್ರ ನಾವು ಪ್ರೀತಿಯನ್ನು ವಿಸ್ತರಿಸುವವರಾಗಿರುವಲ್ಲಿ, ಲೋಕದಿಂದ ನಾವೆಷ್ಟು ಭಿನ್ನರಾಗಿರುವೆವು? “ಮೊಟಮ್ಟೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ,” ಎಂದು ಬೈಬಲ್ ಪ್ರೇರೇಪಿಸುತ್ತದೆ. (1 ಪೇತ್ರ 4:8) ನಾವು ಯಾರ ಕಡೆಗೆ ಹೆಚ್ಚು ಪ್ರೀತಿಯನ್ನು ತೋರಿಸಬಹುದು? ನಮ್ಮದಕ್ಕಿಂತ ಭಿನ್ನವಾದ ಹಿನ್ನೆಲೆಯಿರುವ ಮತ್ತು ನಿರ್ದಿಷ್ಟ ವಿಷಯಗಳನ್ನು ಇನ್ನೊಂದು ವಿಧಾನದಲ್ಲಿ ಮಾಡುವ ಒಬ್ಬ ಕ್ರೈಸ್ತ ಸಹೋದರ ಯಾ ಸಹೊದರಿ ನಮ್ಮನ್ನು ರೇಗಿಸುತ್ತಾರೊ? ಅನಾರೋಗ್ಯ ಮತ್ತು ಮುದಿತನದ ಫಲಿತಾಂಶವಾಗಿ, ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಅಸಾಧ್ಯವಾಗಿರುವ ಯಾರಾದರೊಬ್ಬರಾಗಿರುವರೊ? ನಮ್ಮ ವಿವಾಹ ಸಂಗಾತಿಯಾಗಿರಬಹುದೊ? ಯಾ ಪ್ರಾಯಶಃ, ವೃದ್ಧರಾಗುತ್ತಿರುವ ನಮ್ಮ ಹೆತ್ತವರೊ? ಪ್ರೀತಿಯನ್ನು ಸೇರಿಸಿ, ಆತ್ಮದ ಫಲಗಳನ್ನು ವ್ಯಕ್ತಪಡಿಸುವುದರಲ್ಲಿ ಉತ್ತಮರಾಗಿದ್ದ ಕೆಲವರು, ಕಠಿನ ನ್ಯೂನತೆಯುಳ್ಳವನಾಗಿರುವ ಕುಟುಂಬ ಸದಸ್ಯನಿಗೆ ಹೆಚ್ಚಾಗಿ ಪೂರ್ಣ ಪರಾಮರಿಕೆಯನ್ನು ನೀಡುವಲ್ಲಿ ಏಳಬಲ್ಲ ಅತಿ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದಾಗ ಈ ಗುಣಗಳನ್ನು ತಾವು ಮತ್ತೊಮ್ಮೆ ಆರಂಭದಿಂದ ಕಲಿಯುತ್ತಿರುವಂತೆ ಅವರಿಗೆ ಭಾಸವಾಯಿತು. ನಿಜವಾಗಿಯೂ, ಈ ಪರಿಸ್ಥಿತಿಗಳನ್ನು ಎದುರಿಸಿದಾಗಲೂ, ನಮ್ಮ ಪ್ರೀತಿಯು ನಮ್ಮ ಸ್ವಂತ ಮನೆವಾರ್ತೆಗಿಂತಲೂ ಆಚೆಗೆ ತಲಪಬೇಕೆಂಬುದು ನಿಶ್ಚಯ.
ರಾಜ್ಯ ಸಾರುವಿಕೆ—ನಿಮಗೆಷ್ಟು ಪ್ರಾಮುಖ್ಯ?
17. ಯೆಹೋವನ ಸಾಕ್ಷಿಗಳ ಭೇಟಿಗಳ ಮೂಲಕ ನಾವು ವೈಯಕ್ತಿಕವಾಗಿ ಪ್ರಯೋಜನ ಹೊಂದಿರುವಲ್ಲಿ, ನಾವೀಗ ಏನು ಮಾಡುವಂತೆ ಪ್ರಚೋದಿಸಲ್ಪಡಬೇಕು?
17 ನಮ್ಮ ಜೊತೆ ಮಾನವರಿಗಾಗಿ ಪ್ರೀತಿಯನ್ನು ನಾವು ತೋರಿಸುವ ಒಂದು ಪ್ರಾಮುಖ್ಯ ವಿಧಾನವು ದೇವರ ರಾಜ್ಯದ ಕುರಿತು ಅವರಿಗೆ ಸಾಕ್ಷಿ ನೀಡುವ ಮೂಲಕವಾಗಿದೆ. ಯೇಸು ಮುಂತಿಳಿಸಿದ ಈ ಕೆಲಸವನ್ನು ಒಂದೇ ಒಂದು ಜನರ ಗುಂಪು ಮಾಡುತ್ತಿದೆ. (ಮಾರ್ಕ 13:10) ಇವರು ಯೆಹೋವನ ಸಾಕ್ಷಿಗಳು. ಅದರ ಮೂಲಕ ನಾವು ವೈಯಕ್ತಿಕವಾಗಿ ಪ್ರಯೋಜನ ಹೊಂದಿರುವೆವು. ಈಗ ಇತರರಿಗೆ ಸಹಾಯ ಮಾಡುವದು ನಮ್ಮ ಸುಯೋಗವಾಗಿದೆ. ವಿಷಯದ ದೇವರ ದೃಷ್ಟಿಕೋನದಲ್ಲಿ ನಾವು ಭಾಗಿಗಳಾಗುವಲ್ಲಿ, ಈ ಕೆಲಸವು ನಮ್ಮ ಜೀವಿತಗಳಲ್ಲಿ ಪ್ರಧಾನವಾಗುವುದು.
18. ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು ಪುಸ್ತಕದ ನಮ್ಮ ಓದುವಿಕೆಯು ನಮ್ಮ ಸ್ವಂತ ರಾಜ್ಯದ ಸಾಕ್ಷಿಕಾರ್ಯದ ಮೇಲೆ ಹೇಗೆ ಪ್ರಭಾವವನ್ನು ಬೀರಬಹುದು?
18 ಈ ಕೊನೇ ದಿವಸಗಳಲ್ಲಿ ರಾಜ್ಯ ಸಂದೇಶವು ಭೂಮಿಯ ಅತಿ ಮೂಲೆಯ ಭಾಗಗಳಲ್ಲೂ ಒಯ್ಯಲ್ಪಟ್ಟಿರುವ ವಿಧಾನದ ರೋಮಾಂಚಕ ಕಥನವು ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್ನಲ್ಲಿ ಲಭ್ಯ) ಎಂಬ ಪುಸ್ತಕದಲ್ಲಿ ತಿಳಿಸಲಾಗಿದೆ. ನಿಮಗೆ ಇಂಗ್ಲಿಷ್ ಗೊತ್ತಿರುವುದಾದರೆ, ಅದನ್ನು ಓದಲು ತಪ್ಪಬೇಡಿರಿ. ಮತ್ತು ನೀವು ಹಾಗೆ ಮಾಡುವಾಗ, ರಾಜ್ಯದ ಕುರಿತು ಸಾಕ್ಷಿಯನ್ನು ಕೊಡುವುದರಲ್ಲಿ ವ್ಯಕ್ತಿಗಳು ಭಾಗಿಗಳಾದ ಎಲ್ಲ ವಿಧಾನಗಳನ್ನು ವಿಶೇಷವಾಗಿ ಗಮನಿಸಿರಿ. ಯಾರ ಮಾದರಿಯನ್ನು ನಿಮಗೆ ಅನುಸರಿಸುವುದು ಸಾಧ್ಯವೋ ಅಂತಹ ಕೆಲವರಿದ್ದಾರೊ? ನಮ್ಮೆಲ್ಲರಿಗೆ ತೆರೆದಿರುವ ಅನೇಕ ಸಂದರ್ಭಗಳಿವೆ. ಅವುಗಳ ಉತ್ತಮ ಉಪಯೋಗವನ್ನು ಮಾಡಲು ಯೆಹೋವನಿಗಾಗಿರುವ ನಮ್ಮ ಪ್ರೀತಿಯು ನಮ್ಮನ್ನು ಪ್ರಚೋದಿಸಲಿ.
19 ಯುಕ್ತವಾದ ಧರ್ಮವನ್ನು ತಿಳಿಯುವುದರೊಂದಿಗಿರುವ ಜವಾಬ್ದಾರಿಯನ್ನು ಸ್ವೀಕರಿಸಿದಾಗ ನಾವು ಪ್ರಯೋಜನ ಹೊಂದುವವರಾಗುವುದು ಹೇಗೆ?
19 ಹೀಗೆ ನಾವು ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ನಮ್ಮನ್ನು ನಾವೇ ಅನ್ವಯಿಸಿಕೊಳ್ಳುವಾಗ, ಜೀವಿತದ ಅರ್ಥವೇನು? ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳುತ್ತೇವೆ. (ಪ್ರಕಟನೆ 4:11) ಇನ್ನು ಮುಂದಕ್ಕೆ ನಾವು ತಡಕಾಡುವವರಲ್ಲ, ಬರಿದುತನದ ಭಾವನೆಯೊಂದಿಗೆ ಬಿಡಲ್ಪಟ್ಟವರಾಗಿರುವವರಲ್ಲ. ಯೆಹೋವ ದೇವರ ಸೇವೆಗೆ ನಿಮ್ಮನ್ನು ಪೂರ್ಣ ಹೃದಯದಿಂದ ಅನ್ವಯಿಸುವದಕ್ಕಿಂತ ಹೆಚ್ಚಿನ ತೃಪ್ತಿಯು ನಿಮ್ಮನ್ನು ಸಮರ್ಪಿಸಿಕೊಳ್ಳುವ ಇನ್ಯಾವ ಜೀವನೋಪಾಯದಲ್ಲಿಯೂ ಇರುವುದಿಲ್ಲ. ಮತ್ತು ಅದು ಎಂತಹ ಒಂದು ಮಹಾ ಭವಿಷ್ಯವನ್ನು ಎತ್ತಿ ಹಿಡಿಯುತ್ತದೆ! ಎಲ್ಲಿ ಮಾನವಕುಲವನ್ನು ದೇವರು ರಚಿಸಿದ ಪ್ರೀತಿಯ ಉದ್ದೇಶದ ಹೊಂದಿಕೆಯಲ್ಲಿ ನಾವು ನಮ್ಮ ಸಾಮರ್ಥ್ಯಗಳನ್ನು ಪೂರ್ಣವಾಗಿ ಉಪಯೋಗಿಸಲು ಸಾಧ್ಯವಾಗುವುದೋ ಅಂತಹ, ಆತನ ಹೊಸ ಲೋಕದಲ್ಲಿ ತೃಪ್ತಿದಾಯಕ ಜೀವಿತದ ಒಂದು ನಿರಂತರತೆಯು ಅದಾಗಿದೆ.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್. ಮೂಲಕ ಪ್ರಕಾಶಿತ.
ನೀವು ಹೇಗೆ ಉತ್ತರಿಸುವಿರಿ?
▫ ಒಂದು ಧರ್ಮವು ಬೈಬಲನ್ನು ದೇವರ ವಾಕ್ಯವಾಗಿ ಸ್ವೀಕರಿಸುವುದು ಮತ್ತು ಯೆಹೋವನನ್ನು ಸತ್ಯ ದೇವರಾಗಿ ಗೌರವಿಸುವುದು ಪ್ರಾಮುಖ್ಯವಾಗಿರುವುದು ಯಾಕೆ?
▫ ಪ್ರಾಯಶ್ಚಿತಗ್ತಾರನೋಪಾದಿ ಯೇಸುವಿನ ಪಾತ್ರದ ಕುರಿತು ಸತ್ಯ ಧರ್ಮವು ಏನನ್ನು ಕಲಿಸುತ್ತದೆ?
▫ ಕ್ರೈಸ್ತರು ಲೋಕದಿಂದ ಪ್ರತ್ಯೇಕವಾಗಿರಬೇಕು ಮತ್ತು ನಿಸ್ವಾರ್ಥ ಪ್ರೀತಿಯನ್ನು ಆಚರಿಸಬೇಕು ಯಾಕೆ?
▫ ಯುಕ್ತವಾದ ಧರ್ಮದಲ್ಲಿ ರಾಜ್ಯ ಸಾಕ್ಷಿಕಾರ್ಯಕ್ಕೆ ಯಾವ ಪಾತ್ರವಿದೆ?
[ಪುಟ 16 ರಲ್ಲಿರುವ ಚಿತ್ರಗಳು]
ದೀಕ್ಷಾಸ್ನಾನವು ಸತ್ಯ ಆರಾಧನೆಯ ಜವಾಬ್ದಾರಿಗಳನ್ನು ಸ್ವೀಕರಿಸುವಲ್ಲಿ ಪ್ರಧಾನ ಹೆಜ್ಜೆಯಾಗಿದೆ. ಪ್ರತಿಯೊಂದು ತಿಂಗಳಲ್ಲಿ, ಲೋಕವ್ಯಾಪಕವಾಗಿ ಸುಮಾರು 25,000 ದಷ್ಟು ಜನರು ಆ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ
ರಷ್ಯಾ
ಸೆನಿಗಲ್
ಪ್ಯಾಪುವ ನ್ಯೂ ಗಿನೀ
ಅಮೆರಿಕ
[ಪುಟ 17 ರಲ್ಲಿರುವ ಚಿತ್ರಗಳು]
ಬೈಬಲ್ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸತ್ಯ ಆರಾಧನೆಯ ಭಾಗವಾಗಿದೆ
ಅಮೆರಿಕ
ಬ್ರೆಜಿಲ್
ಅಮೆರಿಕ
ಹಾಂಗ್ ಕಾಂಗ್