“ದಿವ್ಯ ಭಯ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಿರಿ!
ಯೆಹೋವನ ಸಾಕ್ಷಿಗಳ 1994ರ “ದಿವ್ಯ ಭಯ” ಜಿಲ್ಲಾ ಅಧಿವೇಶನವನ್ನು ಹಾಜರಾಗಲು ನೀವು ಇನ್ನೂ ಯೋಜನೆಗಳನ್ನು ಮಾಡಿರುವಿರೊ? ಎಲ್ಲಾ ಮೂರು ದಿನಗಳಿಗೆ ಹಾಜರಾಗುವುದರ ಮೂಲಕ ನೀವು ನಿಜಕ್ಕೂ ಪ್ರಯೋಜನ ಹೊಂದುವಿರಿ! ಭಾರತದಲ್ಲಿಯೆ 16 ಅಧಿವೇಶನಗಳನ್ನು ಯೋಜಿಸುವುದರಿಂದ, ನೀವು ವಾಸಿಸುವ ಸ್ಥಳದ ಸಮೀಪವೇ ಒಂದು ಅಧಿವೇಶನ ಜರುಗುವುದು ಸಂಭವನೀಯ.
ನಿರ್ದಿಷ್ಟ ರೀತಿಯ ಭಯವು ಧೈರ್ಯವನ್ನು ಶಿಥಿಲಗೊಳಿಸಬಲ್ಲದು ಮತ್ತು ನಿರೀಕ್ಷೆಯನ್ನು ನಾಶಪಡಿಸಬಲ್ಲದು; ಆದಾಗ್ಯೂ, ಶುಕ್ರವಾರ ಬೆಳಗ್ಗಿನ ಮುಖ್ಯ ಭಾಷಣವು ದಿವ್ಯ ಭಯವನ್ನು ಸ್ಪಷ್ಟೀಕರಿಸುವುದು ಮತ್ತು ಅದರ ಅನೇಕ ಪ್ರಯೋಜನಗಳನ್ನು ವಿವರಿಸುವುದು. ಅಧಿವೇಶನದ ಇಡೀ ಕಾರ್ಯಕ್ರಮವು ಈ ಪ್ರಯೋಜನಗಳನ್ನು ಎತ್ತಿತೋರಿಸುವುದೆಂಬುದು ನಿಶ್ಚಯ.
ದಿವ್ಯ ಭಯ ಹೇಗೆ ವಿವಾಹ ಮತ್ತು ಕುಟುಂಬ ಜೀವನವನ್ನು ಬಲಪಡಿಸಬಲ್ಲದೆಂದೂ, ಮತ್ತು ಯುವಕರು ದೇವರಿಗೆ ಅವರ ನಿಷ್ಠೆಯಲ್ಲಿ ದೃಢರಾಗಿ ಉಳಿಯಲು ಅದು ಅವರಿಗೆ ಹೇಗೆ ಸಹಾಯಮಾಡಬಲ್ಲದೆಂದೂ ಶುಕ್ರವಾರ ಅಪರಾಹ್ಣ ನೀವು ಕೇಳುವಿರಿ. “ವಿಯೋಗಿಗಳಿಗೆ ದುಃಖೋಪಶಮನ” ಎಂಬ ಹೃತ್ಪೂರ್ವಕ ಸಾದರಪಡಿಸುವಿಕೆಯೊಂದಿಗೆ ಅಪರಾಹ್ಣದ ಕಾರ್ಯಕ್ರಮವು ಮುಕ್ತಾಯವಾಗುವುದು. ಮರಣದಲ್ಲಿ ಪ್ರಿಯರನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಆ ಭಾಷಣದ ಸಮಯದಲ್ಲಿ ಒದಗಿಸಲಾಗುವ ಪ್ರಾಯೋಗಿಕ ಮಾಹಿತಿಯನ್ನು ನೀವು ಗಣ್ಯಮಾಡುವಿರಿ.
ದಿವ್ಯ ಭಯವು ಸಭೆಯ ಮತ್ತು ನಮ್ಮ ಶುಶ್ರೂಷೆಯ ಕುರಿತು ಯೆಹೋವನ ಮಾರ್ಗದರ್ಶನೆಗೆ ನಮ್ಮ ಅಂಟಿಕೊಳ್ಳುವಿಕೆಯನ್ನು ಬಲಪಡಿಸುವ ವಿಧವನ್ನು ಶನಿವಾರದ ಕಾರ್ಯಕ್ರಮವು ತೋರಿಸುವುದು. “ದೇವರ ವಾಕ್ಯವಾದ ಪವಿತ್ರ ಬೈಬಲನ್ನು ಪ್ರತಿನಿತ್ಯ ಓದಿರಿ” ಎಂಬ ಭಾಷಣದಲ್ಲಿ, ಬೈಬಲನ್ನು ಓದಲು ಮತ್ತು ಅಧ್ಯಯನ ಮಾಡಲು ವ್ಯಾವಹಾರಿಕ ಸಲಹೆಗಳು ಪ್ರತಿನಿಧಿಗಳಿಗೆ ದೊರಕುವವು. “ಯೆಹೋವನ ಭಯೋತ್ಪಾದಕ ದಿನವು ಹತ್ತರವದೆ” ಎಂಬ ಆಸಕ್ತಿ ಕೆರಳಿಸುವ ವಿಷಯದ ಭಾಷಣದೊಂದಿಗೆ ಶನಿವಾರದ ಕಾರ್ಯಕ್ರಮವು ಮುಗಿಯುವುದು.
ಭಾನುವಾರದ ಒಂದು ವೈಶಿಷ್ಟ್ಯವು “ನೀತಿವಂತರಿಗೆ ಒಂದು ಪುನರುತ್ಥಾನವಿರುವುದು” ಎಂಬ ಭಾಷಣವಾಗಿದೆ. ಯೇಸುವಿನ ಆಶ್ಚರ್ಯಕರ ವಾಗ್ದಾನವಾದ ಎಂದಿಗೂ ಸಾಯದೇ ಉಳಿಯುವವರ ಕುರಿತು ಒಂದು ವಿವರಣೆಯು “ಮಹಾ ಸಂಕಟದಿಂದ ಜೀವಂತವಾಗಿ ರಕ್ಷಿಸಲ್ಪಡುವುದು” ಎಂಬ ಮುಂದಿನ ಭಾಷಣದಲ್ಲಿ ಒದಗಿಸಲ್ಪಡುವುದು.—ಯೋಹಾನ 11:26.
ಭಾನುವಾರದ ಬೆಳಗ್ಗಿನ ಕಾರ್ಯಕ್ರಮವು ನೀವು ಎದುರಿಸುವ ಆಯ್ಕೆಗಳು ಎಂಬ ಆಲೋಚನೆಯನ್ನು ಕೆರಳಿಸುವ 40 ನಿಮಿಷದ ನಾಟಕದೊಂದಿಗೆ ಮುಕ್ತಾಯಗೊಳ್ಳುವುದು. ಪ್ರೇಕ್ಷಕರಿಗೆ ಯೆಹೋಶುವನ ದಿನಗಳನ್ನು ನೆನಪಿಗೆ ತರಲಾಗುವುದು ಮತ್ತು ಯೆಹೋವನನ್ನು ಸೇವಿಸಲು ಅವನ ದೃಢ ನಿರ್ಧಾರದ ಚಿತ್ರಿಸುವಿಕೆಯನ್ನು ಅವರು ನೋಡುವರು. ಎಲೀಯನ ದಿನಗಳ ಅಗ್ನಿಯ ಪರೀಕ್ಷೆಯನ್ನು ಕೂಡ ಸಾದರಪಡಿಸಲಾಗುವುದು, ಮತ್ತು ಪ್ರತಿನಿಧಿಗಳಿಗೆ ಇವೆರಡೂ ಘಟನೆಗಳಿಂದ ಇಂದು ದಿವ್ಯ ಭಯವನ್ನು ಪ್ರದರ್ಶಿಸಲು ಸಹಾಯ ಮಾಡುವ ಪಾಠಗಳನ್ನು ಹೊರದೆಗೆಯಲಾಗುವುದು. ಅಪರಾಹ್ಣದಲ್ಲಿ, “ಸತ್ಯ ದೇವರಿಗೆ ಈಗ ಭಯಪಡಬೇಕಾದ ಕಾರಣ” ಎಂಬ ಸಾರ್ವಜನಿಕ ಭಾಷಣವು ಅಧಿವೇಶನದ ಒಂದು ಅತ್ಯುಜಲ್ವ ಭಾಗವಾಗುವುದು.
ಹಾಜರಾಗಲು ಈಗಲೇ ಯೋಜನೆಗಳನ್ನು ಮಾಡಿರಿ. ನಿಮ್ಮ ಮನೆಗೆ ಹತ್ತರವಾಗುವ ಸ್ಥಳವನ್ನು ಕಂಡುಕೊಳ್ಳಲು, ಸ್ಥಳೀಯ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿರಿ ಯಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. ಜೂನ್ 8ರ ಎಚ್ಚರ! ಸಂಚಿಕೆಯು ಕೂಡ ಭಾರತದ ಎಲ್ಲಾ ಅಧಿವೇಶನಾ ಸ್ಥಳಗಳ ವಿಳಾಸವನ್ನು ಪಟ್ಟಿ ಮಾಡುವುದು.
[ಪುಟ 32 ರಲ್ಲಿರುವ ಚಿತ್ರ ಕೃಪೆ]
T. Rosenthal/SUPERSTOCK