ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು”
ಪ್ರಥಮ ಶತಮಾನದಲ್ಲಿ, ಎಫೆಸದಲ್ಲಿದ್ದ “ಮಾಂತ್ರಿಕ ಕಲೆಗಳ” ಭಕ್ತರ ಒಂದು ಗುಂಪು, ಮಂತ್ರವಿದ್ಯೆಯ ಪುಸ್ತಕಗಳನ್ನು ಬಹಿರಂಗವಾಗಿ ಸುಡುವ ಮೂಲಕ ಕ್ರೈಸ್ತ ಸಂದೇಶಕ್ಕೆ ಪ್ರತಿಕ್ರಿಯಿಸಿತು. (ಅ. ಕೃತ್ಯಗಳು 19:19) ಈ ಪುಸ್ತಕಗಳ ಎಣಿಕೆಮಾಡಲಾದ ಬೆಲೆಯು 50,000 ಬೆಳ್ಳಿ ನಾಣ್ಯಗಳಾಗಿದ್ದವು. ಬೈಬಲ್ ದಾಖಲೆಯು, ರೋಮನ್ ಬೆಳ್ಳಿ ನಾಣ್ಯವಾದ ದೀನಾರ್ ನಾಣ್ಯವನ್ನು ಸೂಚಿಸುತ್ತಿದ್ದರೆ, ಅದು ಕಡಿಮೆ ಪಕ್ಷ 37,000 ಡಾಲರುಗಳಿಗೆ ಸಮವಾಗುತ್ತಿತ್ತು!
ಒಂದು ಸಂದರ್ಭದಲ್ಲಿ ರಹಸ್ಯವಾದದೊಂದಿಗೆ ನಿರ್ವಹಿಸುವ ಸಾಹಿತ್ಯವನ್ನು ಹೊಂದಿದ್ದ ಆದರೆ ಪೂರ್ವ ಎಫೆಸದವರಿಗೆ ಸಮಾನವಾದ ದೃಢಸಂಕಲ್ಪವನ್ನು ಪ್ರದರ್ಶಿಸಿದ ಅನೇಕರು ಇಂದು ಇದ್ದಾರೆ. ಕೆನಡದಿಂದ ಬಂದ ಈ ಮುಂದಿನ ಅನುಭವವನ್ನು ಪರಿಗಣಿಸಿರಿ.
ಸುಮಾರು ಐದು ವರ್ಷಗಳ ಹಿಂದೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಾಕೆ ಮನೆಯಿಂದ ಮನೆಗೆ ಸಾರುತ್ತಿದ್ದಾಗ, ಒಂದು ಬಾಗಿಲಿನಲ್ಲಿ ನೋರಾ ಎಂಬ ಸ್ತ್ರೀಯು ಅವಳನ್ನು ಅಕ್ಷರಶಃ ಮನೆಯೊಳಗೆ ಎಳೆದುಕೊಂಡಳು. ಆತ್ಮಿಕ ಅನ್ವೇಷಣೆಯ ಅನೇಕ ದೀರ್ಘ ವರ್ಷಗಳಲ್ಲಿ, ನೋರಾ ನೂರಾರು ಧಾರ್ಮಿಕ ಹಾಗೂ ಆತ್ಮವಾದದ ಪುಸ್ತಕಗಳನ್ನು ಕೂಡಿಸಿದ್ದಳು, ಆದರೆ ಸತ್ತವರಿಗಾಗಿರುವ ನಿರೀಕ್ಷೆಯ ಕುರಿತು ಬೈಬಲಿಗೆ ಏನನ್ನು ಹೇಳಲಿಕ್ಕಿದೆ ಎಂಬುದನ್ನು ಅರಿಯಲು ಅವಳು ಬಯಸಿದಳು. ಸಾಕ್ಷಿಯು ಅವಳಿಗೆ ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? ಎಂಬ ಕಿರುಹೊತ್ತಗೆಯನ್ನು ನೀಡಿದಳು. ನೋರಾಳ ಪ್ರಶ್ನೆಗಳು ಉತ್ತರಿಸಲ್ಪಟ್ಟವು, ಮತ್ತು ಆಕೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಗಳನ್ನು ಸ್ವೀಕರಿಸಿದಳು.
ತದನಂತರ ಆಕೆ ಸ್ಥಳಾಂತರಿಸಿದಳು ಮತ್ತು ಯೆಹೋವನ ಸಾಕ್ಷಿಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಳು. ಹಾಗಿದ್ದರೂ, ಆಕೆಯ ಹೊಸ ವಿಳಾಸದಲ್ಲಿ ಅಂಚೆಯ ಮೂಲಕ ಪತ್ರಿಕೆಗಳನ್ನು ಪಡೆಯಲು ಅವಳು ಮುಂದುವರಿದಳು. ಪತ್ರಿಕೆಗಳಲ್ಲಿ ಉಲ್ಲೇಖಿಸಲಾದ ಕೆಲವು ಬೈಬಲಾಧಾರಿತ ಪ್ರಕಾಶನಗಳನ್ನು ಸಹ ಆಕೆ ಆರ್ಡರ್ ಮಾಡಿದಳು. ಸ್ವಲ್ಪ ಸಮಯದ ತರುವಾಯ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಾಕೆ ಅವಳ ಬಾಗಿಲಿಗೆ ಬಂದಳು. ಪ್ರಶ್ನೆಗಳನ್ನು ಉತ್ತರಿಸುವಾಗ ಸಾಕ್ಷಿಯು ನೇರವಾಗಿ ಬೈಬಲಿನ ಕಡೆಗೆ ತಿರುಗುವುದನ್ನು ಕಂಡು ಪ್ರಭಾವಿತಳಾಗಿ, ನೋರಾ ಅವಳನ್ನು ಸ್ವಾಗತಿಸಿದಳು ಮತ್ತು ಹೆಚ್ಚಿನ ಚರ್ಚೆಗಳಿಗಾಗಿ ಹಿಂದಿರುಗಲು ಅವಳನ್ನು ಆಮಂತ್ರಿಸಿದಳು.
ಆದರೆ ನೋರಾಳನ್ನು ಪುನಃ ಸಂಪರ್ಕಿಸುವುದು ಕಠಿನವೆಂದು ಆ ಸಾಕ್ಷಿಯು ಕಂಡುಕೊಂಡಳು. ದಿನದ ವಿಭಿನ್ನ ಸಮಯಗಳಲ್ಲಿ ಮತ್ತು ವಾರದ ವಿಭಿನ್ನ ಸಮಯಗಳಲ್ಲಿ ಸತತವಾದ ಭೇಟಿಗಳು ಯಶಸ್ಸಿಲ್ಲದೆ ಮಾಡಲ್ಪಟ್ಟವು. ಸಕಾಲದಲ್ಲಿ, ಆಕೆಯ ಪಟ್ಟುಹಿಡಿದಿರುವಿಕೆಯು ಬಹುಮಾನಿಸಲ್ಪಟ್ಟಿತು, ಮತ್ತು ಆಕೆ ಒಳ್ಳೆಯ ಫಲಿತಾಂಶಗಳನ್ನು ಕೊಯ್ದಳು. ಅನೇಕ ವೇಳೆ ನೋರಾಳ ಒತ್ತಾಯದಿಂದ ವಾರಕ್ಕೆ ಮೂರು ಬಾರಿ ನಡೆಸಲಾಗುತ್ತಿದ್ದ ಒಂದು ಕ್ರಮವಾದ ಬೈಬಲ್ ಅಧ್ಯಯನವನ್ನು ಆರಂಭಿಸಲಾಯಿತು. ಮಿತ್ರರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಮಾತಾಡುವಂತೆ ಆಕೆ ಕಲಿಯುತ್ತಿದ್ದ ವಿಷಯಗಳು ಆಕೆಯನ್ನು ಪ್ರಚೋದಿಸಿದವು, ಇದು ಅವರಲ್ಲಿ ಮೂವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನಗಳನ್ನು ವಿನಂತಿಸಿಕೊಳ್ಳುವುದರಲ್ಲಿ ಫಲಿಸಿತು.
ಆಕೆಯ ಅಧ್ಯಯನದ ಮುಖಾಂತರ, ಅನೇಕ ಸುಳ್ಳು ಧರ್ಮಗಳು ಮತ್ತು ಸುಳ್ಳು ಪ್ರವಾದಿಗಳು ಇದ್ದಾರೆಂದು ಆದರೆ ಒಂದೇ ಒಂದು ಮಾರ್ಗ ಮಾತ್ರ ಜೀವಕ್ಕೆ ನಡೆಸುತ್ತದೆ ಎಂಬುದನ್ನು ನೋರಾ ಗಣ್ಯಮಾಡಲಾರಂಭಿಸಿದಳು. ಆಕೆಯ ಪ್ರಶ್ನೆಗಳಿಗೆ ಉತ್ತರಗಳನ್ನು ಆಕೆ ಸುಳ್ಳು ಧರ್ಮಗಳಲ್ಲಿ ಅನೇಕ ವರ್ಷಗಳ ವರೆಗೆ ಹುಡುಕುತ್ತಾ ಇದ್ದಳು, ಆದರೆ ದೆವ್ವಗಳ ಕುರಿತು ಬೈಬಲಿಗೆ ಏನನ್ನು ಹೇಳಲಿಕ್ಕಿದೆ ಎಂಬುದನ್ನು ಕಲಿತ ಅನಂತರ, ಅಪೊಸ್ತಲ ಕೃತ್ಯಗಳು 19:19 ರಲ್ಲಿ ಉಲ್ಲೇಖಿಸಲಾದ ಪ್ರಾಚೀನ ಎಫೆಸದವರಂತೆ ಆಕೆ ವರ್ತಿಸಿದಳು. ಆಕೆ ತನ್ನ ಲೈಬ್ರರಿಯನ್ನು ಶುಚಿಮಾಡಿದಳು ಮತ್ತು ಅನೇಕ ದಿನಗಳ ಸಮಯದಲ್ಲಿ ರಹಸ್ಯವಾದ ಮತ್ತು ಸುಳ್ಳು ಧಾರ್ಮಿಕ ಬೋಧನೆಗಳೊಂದಿಗೆ ನಿರ್ವಹಿಸುವ ಒಂದು ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳನ್ನು ನಾಶಮಾಡಿದಳು. ನಾಶಮಾಡಲ್ಪಟ್ಟ ಪ್ರಕಾಶನಗಳಲ್ಲಿ, ನಾಲ್ಕು ಪುಸ್ತಕಗಳ ಒಂದು ಕಟ್ಟು 800 ಡಾಲರುಗಳಿಗಿಂತಲೂ ಅಧಿಕ ಮೌಲ್ಯವುಳದ್ದಾಗಿತ್ತು!
ನೋರಾಳ ಕ್ರಿಯೆಗಳಿಂದ ಸ್ಪಷ್ಟವಾಗಿಗಿ ಅಸಂತೋಷಗೊಂಡು, ದೆವ್ವಗಳು ಆಕೆಯನ್ನು ಸುಮಾರು ಎರಡು ವಾರಗಳ ವರೆಗೆ ಪೀಡಿಸಿದವು. ಆದರೂ, ಬೈಬಲ್ ಅಧ್ಯಯನವನ್ನು ಮತ್ತು ಯೆಹೋವನ ಆಧುನಿಕ ದಿನದ ಸಂಸ್ಥೆಯೊಂದಿಗೆ ಆಕೆಯ ಸಹವಾಸವನ್ನು ಮುಂದುವರಿಸುವುದರಿಂದ ಆಕೆಯನ್ನು ತಿರುಗಿಸಲು ದುಷ್ಟಾತ್ಮಗಳಿಗೆ ಸಾಧ್ಯವಾಗಲಿಲ್ಲ.
ಇಂತಹ ಅನುಭವಗಳು ಬೈಬಲಿನ ಮಾತುಗಳ ಸತ್ಯವನ್ನು ಚೆನ್ನಾಗಿ ದೃಷ್ಟಾಂತಿಸುತ್ತವೆ: “ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.”—ಯಾಕೋಬ 4:7.