ನಿರ್ಬಂಧಗಳು ನಿಮ್ಮನ್ನು ನಿರುತ್ಸಾಹಗೊಳಿಸುತ್ತವೊ?
ನಿರ್ಬಂಧಗಳು! ನಿಜವಾಗಿಯೂ ಅವುಗಳನ್ನು ಯಾರೂ ಇಷ್ಟಪಡುವುದಿಲ್ಲ; ಆದರೂ ನಮ್ಮಲ್ಲಿ ಎಲ್ಲರೂ ಅವುಗಳನ್ನು ಸ್ವಲ್ಪ ಮಟ್ಟಿಗಾದರೂ ತಾಳಿಕೊಳ್ಳಬೇಕು. ನಿಮ್ಮ ಜೀವಿತವು ಬಹಳ ಸೀಮಿತವಾಗಿ ತೋರುವುದರಿಂದ ಕೆಲವೊಮ್ಮೆ ನೀವು ನಿರುತ್ಸಾಹಗೊಳ್ಳುತ್ತೀರೊ? ನಿಮ್ಮ ದೃಷ್ಟಿಕೋನವನ್ನು ನೀವು ಬದಲಿಸುವುದಾದರೆ ಬಹುಶಃ ನಿಮಗೆ ಉತ್ತಮವಾಗಿ ಅನಿಸಬಹುದು. ನಿಮಗೆ ಮಾಡಲು ಸಾಧ್ಯವಾಗದ ವಿಷಯಗಳ ಕುರಿತು ತಳಮಳಗೊಳ್ಳುವ ಬದಲಿಗೆ, ನೀವು ಅನುಭವಿಸುವ ಯಾವುದೇ ಸ್ವಾತಂತ್ರ್ಯಗಳ ಸಂಪೂರ್ಣ ಲಾಭವನ್ನು ಯಾಕೆ ಪಡೆಯಬಾರದು?
ಉದಾಹರಣೆಗೆ, ಆರ್ಥಿಕವಾಗಿ ಬಡವರಾಗಿರುವ ಅನೇಕರು ತಾವು ಶ್ರೀಮಂತರಾಗಿದ್ದಿರಬೇಕೆಂದು ಬಯಸುತ್ತಾರೆ. ಹಾಗಿದ್ದರೂ, ಈ ವಿಷಯಗಳ ವ್ಯವಸ್ಥೆಯಲ್ಲಿ ನಾವು ಮಾಡಬಲ್ಲ ವಿಷಯಗಳನ್ನು ಬಡತನವು ಸೀಮಿತಗೊಳಿಸುವುದಾದರೂ, ಜೀವಿತದಲ್ಲಿನ ಪ್ರಾಮುಖ್ಯ ವಿಷಯಗಳು ಎಲ್ಲರಿಗೂ ಲಭ್ಯ ಇದೆ. ಬಡ ಜನರು ಹಾಗೂ ಶ್ರೀಮಂತರು ಪ್ರೇಮಿಸುತ್ತಾರೆ, ಮದುವೆಯಾಗುತ್ತಾರೆ, ಮಕ್ಕಳನ್ನು ಬೆಳೆಸುತ್ತಾರೆ, ಒಳ್ಳೆಯ ಗೆಳೆತನಗಳನ್ನು ಅನುಭವಿಸುತ್ತಾರೆ, ಮತ್ತು ಇತ್ಯಾದಿ. ಹೆಚ್ಚು ಪ್ರಾಮುಖ್ಯವಾಗಿ, ಬಡ ಜನರು ಹಾಗೂ ಶ್ರೀಮಂತರು ಯೆಹೋವನನ್ನು ಬಲ್ಲವರಾಗಿದ್ದಾರೆ ಮತ್ತು ವಾಗ್ದತ್ತ ನೂತನ ಲೋಕವನ್ನು ಎದುರುನೋಡುತ್ತಾರೆ. ಬಡ ಜನರು ಹಾಗೂ ಶ್ರೀಮಂತರು ಐಶ್ವರ್ಯಗಳಿಗಿಂತ ಉತ್ತಮವಾಗಿರುವ ಕ್ರಿಸ್ತೀಯ ವಿವೇಕ ಮತ್ತು ಜ್ಞಾನದಲ್ಲಿ ಪ್ರಗತಿಹೊಂದುತ್ತಾರೆ. (ಜ್ಞಾನೋಕ್ತಿ 2:1-9; ಪ್ರಸಂಗಿ 7:12) ಎಲ್ಲರು—ಶ್ರೀಮಂತರು ಹಾಗೂ ಬಡವರು—ಯೆಹೋವನಲ್ಲಿ ತಮಗಾಗಿ ಒಂದು ಅತ್ಯುತ್ತಮವಾದ ಹೆಸರನ್ನು ನಿರ್ಮಿಸಿಕೊಳ್ಳಬಲ್ಲರು. (ಪ್ರಸಂಗಿ 7:1) ಪೌಲನ ದಿನಗಳಲ್ಲಿ ಕ್ರೈಸ್ತ ಸಭೆಯು ಮುಖ್ಯವಾಗಿ, ತಮ್ಮ ಪರಿಸ್ಥಿತಿಗಳು ಅನುಮತಿಸಿದ ಯಾವುದೇ ರೀತಿಯ ಸ್ವಾತಂತ್ರ್ಯದ ವಿವೇಚನಾಯುಕ್ತ ಉಪಯೋಗವನ್ನು ಮಾಡಿದ ಕೆಳದರ್ಜೆಯ ಜನರಿಂದ—ಅವರಲ್ಲಿ ಕೆಲವರು ದಾಸರಾಗಿದ್ದರು—ರಚಿಸಲ್ಪಟ್ಟಿತ್ತು.—1 ಕೊರಿಂಥ 1:26-29.
ಶಾಸ್ತ್ರೀಯ ತಲೆತನ
ಕ್ರೈಸ್ತ ಮದುವೆಯೊಂದರಲ್ಲಿ, ಹೆಂಡತಿಯು ತನ್ನ ಗಂಡನಿಗೆ ಅಧೀನಳಾಗಿದ್ದಾಳೆ—ಇಡೀ ಕುಟುಂಬವನ್ನು ಪ್ರಯೋಜನಪಡಿಸಲು ರಚಿಸಲ್ಪಟ್ಟ ಒಂದು ಏರ್ಪಾಡು ಇದಾಗಿದೆ. (ಎಫೆಸ 5:22-24) ಇದರಿಂದ ಹೆಂಡತಿಯೊಬ್ಬಳು ಹೀನಾಯವಾಗಿ ಎಣಿಸಿಕೊಳ್ಳಬೇಕೊ? ಖಂಡಿತವಾಗಿಯೂ ಇಲ್ಲ. ಗಂಡ ಮತ್ತು ಹೆಂಡತಿ ಒಂದು ತಂಡವಾಗಿದ್ದಾರೆ. ಮನುಷ್ಯನ ತಲೆತನವು, ಕ್ರಿಸ್ತನಂತಹ ವಿಧಾನದಲ್ಲಿ ನಿರ್ವಹಿಸಲ್ಪಟ್ಟಾಗ, ಸಂಬಂಧಸೂಚಕವಾಗಿ ತನ್ನ ಹೆಂಡತಿಯ ಮೇಲೆ ಕೆಲವೇ ನಿರ್ಬಂಧಗಳನ್ನು ಹಾಕುತ್ತದೆ ಮತ್ತು ತನ್ನ ಸಾಮರ್ಥ್ಯಗಳನ್ನು ಆಕೆ ನೆರವೇರಿಸುವಂತೆ ಅನೇಕ ಅವಕಾಶಗಳನ್ನು ಆಕೆಗೆ ನೀಡುತ್ತದೆ. (ಎಫೆಸ 5:25, 31) ಜ್ಞಾನೋಕ್ತಿ 31 ನೆಯ ಅಧ್ಯಾಯದ “ಸಮರ್ಥ ಹೆಂಡತಿ”ಯು ಅನೇಕ ಆಸಕ್ತಿಕರ ಹಾಗೂ ಸವಾಲಾಗಿರುವ ಜವಾಬ್ದಾರಿಗಳಿಂದ ಕಾರ್ಯಮಗ್ನಳಾಗಿದ್ದಳು. ಸ್ಪಷ್ಟವಾಗಿಗಿ, ತನ್ನ ಗಂಡನಿಗೆ ಅಧೀನತೆಯು ಆಕೆಗೆ ಆಶಾಭಂಗಪಡಿಸುವಂಥದ್ದಾಗಿರಲಿಲ್ಲ.—ಜ್ಞಾನೋಕ್ತಿ 31:10-29.
ಅದೇ ರೀತಿಯಲ್ಲಿ, ಕ್ರೈಸ್ತ ಸಭೆಯಲ್ಲಿರುವ ಅರ್ಹ ಪುರುಷರ ಮೇಲೆ ನಾಯಕತ್ವವನ್ನು ವಹಿಸುವ ಯಾವ ಅವಕಾಶವೂ ಒಬ್ಬ ಸ್ತ್ರೀಗೆ ಇರುವುದಿಲ್ಲ. (1 ಕೊರಿಂಥ 14:34; 1 ತಿಮೊಥೆಯ 2:11, 12) ಆ ನಿರ್ಬಂಧದ ಕೆಳಗೆ ಕ್ರೈಸ್ತ ಸ್ತ್ರೀಯರು ಅತೃಪಿಗ್ತೊಳ್ಳಬೇಕೊ? ಇಲ್ಲ. ಕ್ರೈಸ್ತ ಸೇವೆಯ ಆ ರೂಪವು ಒಂದು ದೇವಪ್ರಭುತ್ವ ವಿಧಾನದಲ್ಲಿ ನೋಡಿಕೊಳ್ಳಲ್ಪಡುವುದನ್ನು ಕಾಣಲು ಹೆಚ್ಚಿನವರು ಕೃತಜ್ಞತೆಯುಳ್ಳವರಾಗಿದ್ದಾರೆ. ನೇಮಿತ ಹಿರಿಯರ ಪಾಲನೆಯ ಕೆಲಸದಿಂದ ಮತ್ತು ಬೋಧನೆಯಿಂದ ಪ್ರಯೋಜನ ಪಡೆಯಲು ಮತ್ತು ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಪ್ರಾಮುಖ್ಯ ಕೆಲಸದಲ್ಲಿ ತಮ್ಮನ್ನು ಭಾಗವಹಿಸಿಕೊಳ್ಳಲು ಅವರು ಸಂತುಷ್ಟರಾಗಿದ್ದಾರೆ. (ಮತ್ತಾಯ 24:14; 28:19, 20) ಕ್ರೈಸ್ತ ಸ್ತ್ರೀಯರು ಈ ಕ್ಷೇತ್ರದಲ್ಲಿ ಹೆಚ್ಚನ್ನು ಸಾಧಿಸುತ್ತಾರೆ, ಮತ್ತು ಇದು ಯೆಹೋವ ದೇವರ ದೃಷ್ಟಿಯಲ್ಲಿ ಅವರಿಗೆ ಘನತೆಯನ್ನು ತರುತ್ತದೆ.—ಕೀರ್ತನೆ 68:11; ಜ್ಞಾನೋಕ್ತಿ 3:35.
ಯುವ ಜನರ ಮೇಲೆ ನಿರ್ಬಂಧಗಳು
ಅನೇಕ ವೇಳೆ ಯುವ ಜನರು ತಮ್ಮ ಹೆತ್ತವರ ಅಧಿಕಾರದ ಕೆಳಗೆ ಇರುವುದರಿಂದ ಅವರು ಕೂಡ ಕೆಲವೊಮ್ಮೆ ಅವರ ಜೀವಿತವು ಬಹಳ ನಿರ್ಬಂಧಿತವಾಗಿದೆ ಎಂದು ದೂರುತ್ತಾರೆ. ಆದರೂ ಇದು ಶಾಸ್ತ್ರೀಯವಾಗಿದೆ. (ಎಫೆಸ 6:1) ಅವರ ಹೆತ್ತವರು ಅವರ ಮೇಲೆ ಹಾಕುವ ನಿರ್ಬಂಧಗಳ ಮೂಲಕ ಕೆರಳಿಸಲ್ಪಡುವ ಬದಲಿಗೆ, ಬುದ್ಧಿವಂತ ಯುವ ಕ್ರೈಸ್ತರು, ಅವರಿಗಿರುವ ಸ್ವಾತಂತ್ರ್ಯಗಳಲ್ಲಿ—ಸಾಮಾನ್ಯವಾಗಿ ಗಂಭೀರವಾದ ಜವಾಬ್ದಾರಿಗಳಿಲದ್ಲಿರುವ ಸ್ವಾತಂತ್ರ್ಯವನ್ನು ಸೇರಿಸಿ—ಆನಂದಿಸುವುದರ ಮೇಲೆ ಕೇಂದ್ರೀಕರಿಸುತ್ತಾರೆ. ಹೀಗೆ ಅವರು ತಮ್ಮನ್ನು ವಯಸ್ಕ ಜೀವಿತಕ್ಕಾಗಿ ತಯಾರಿಸಿಕೊಳ್ಳಲು ತಮ್ಮ ತಾರುಣ್ಯ ಬಲದ ಮತ್ತು ಪರಿಸ್ಥಿತಿಗಳ ಲಾಭವನ್ನು ತೆಗೆದುಕೊಳ್ಳಬಲ್ಲರು.
ತಾನು ಮಾಡಬಹುದಿದ್ದ ವಿಷಯಗಳಲ್ಲಿ ನಿರ್ಬಂಧಿತನಾಗಿದ್ದ ಒಂದು ಸಣ್ಣ ಗುಂಪಿನ ಒಬ್ಬ 12 ವರ್ಷ ಪ್ರಾಯದ ಹುಡುಗನನ್ನು, ಬ್ರೆಜಿಲ್ನಲ್ಲಿದ್ದ ಒಬ್ಬ ಹಿಂದಿನ ಸರ್ಕಿಟ್ ಮೇಲ್ವಿಚಾರಕನು ಜ್ಞಾಪಿಸಿಕೊಳ್ಳುತ್ತಾನೆ. ದಾಖಲೆಗಳ ಮೇಲ್ವಿಚಾರಣೆ ಹೊಂದಿದ್ದ ಸಹೋದರನು ಐಹಿಕ ಕೆಲಸದಲ್ಲಿ ಮಗ್ನನಾಗಿದ್ದನು ಮತ್ತು ಅವನಿಗೆ ಗುಂಪಿನ ಕಡೆಗೆ ಹೆಚ್ಚಿನ ಗಮನವನ್ನು ಕೊಡಲು ಸಾಧ್ಯವಾಗಲಿಲ್ಲ, ಆದರೆ ಈ ಯುವ ಪುರುಷನು ಅವನಿಗೆ ಸಹಾಯ ಮಾಡುವಂತೆ ಅವನು ಏರ್ಪಡಿಸಿದನು. ಎಲ್ಲಾ ಸಭಾ ಫಾರ್ಮ್ಗಳು ಎಲ್ಲಿವೆ ಎಂದು ಅವನು ಕಲಿತನು ಮತ್ತು ಸಹಾಯ ಮಾಡಲು ಅವನು ಯಾವಾಗಲೂ ಲಭ್ಯವಿದ್ದನು. ಅವನ ಆಸಕ್ತಿಯು ಉತ್ತೇಜನದಾಯಕವಾಗಿತ್ತು, ಮತ್ತು ಅವನು ಕ್ಷೇತ್ರ ಸೇವೆಯಲ್ಲಿ ಒಬ್ಬ ನಂಬಿಗಸ್ತ ಸಂಗಾತಿಯಾಗಿದ್ದನು. ಆ ಯುವ ಪುರುಷನೀಗ ಒಬ್ಬ ನೇಮಿತ ಹಿರಿಯನಾಗಿದ್ದಾನೆ.
ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ಸೀಮಿತಗೊಳಿಸಬಹುದಾದ ಇತರ ಅನೇಕ ಸನ್ನಿವೇಶಗಳಿವೆ. ಕೆಲವರು ಅನಾರೋಗ್ಯದಿಂದ ನಿರ್ಬಂಧಿತರಾಗಿದ್ದಾರೆ. ಕೆಲವರು ವಿಭಾಗಿತ ಮನೆವಾರ್ತೆಗಳಲ್ಲಿ ಜೀವಿಸುತ್ತಾರೆ ಮತ್ತು ತಮ್ಮ ಸ್ವಾತಂತ್ರ್ಯವು ಒಬ್ಬ ಅವಿಶ್ವಾಸಿ ಸಂಗಾತಿಯ ಬೇಡಿಕೆಗಳ ಮೂಲಕ ಸೀಮಿತಗೊಳ್ಳುವುದನ್ನು ಕಂಡುಕೊಳ್ಳುತ್ತಾರೆ. ವಿಷಯಗಳು ಭಿನ್ನವಾಗಿರಬೇಕೆಂದು ನಿರ್ಬಂಧಗಳೊಂದಿಗೆ ಜೀವಿಸುವವರು ಬಯಸಬಹುದಾದರೂ, ಅವರು ತೃಪ್ತಿಕರ ಜೀವಿತಗಳನ್ನು ಇನ್ನೂ ಜೀವಿಸಬಲ್ಲರು. ಯೆಹೋವನ ಮೇಲೆ ಆತುಕೊಂಡು ತಮ್ಮ ಪರಿಸ್ಥಿತಿಗಳ ಲಾಭವನ್ನು ಪಡೆದುಕೊಂಡದರ್ದಿಂದ ಇತರರಿಗೆ ಅತ್ಯಂತ ಉತ್ತೇಜನದಾಯಕರಾಗಿದ್ದ ವ್ಯಕ್ತಿಗಳ ಅನೇಕ ಕಥನಗಳು ಈ ಪತ್ರಿಕೆಯಲ್ಲಿ ಬಂದಿವೆ.
ತನ್ನ ಸ್ವಂತ ದಿನದಲ್ಲಿದ್ದ ಒಂದು ಸಾಮಾನ್ಯ ಸನ್ನಿವೇಶದ ಕುರಿತು ಮಾತಾಡುತ್ತಾ, ಅಪೊಸ್ತಲ ಪೌಲನು ಹೇಳಿದ್ದು: “ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದಿಯ್ದೋ? ಅದಕ್ಕೆ ಚಿಂತೆಮಾಡಬೇಡ. ಆದರೆ ಬಿಡುಗಡೆಹೊಂದುವದಕ್ಕೆ ನಿನ್ನ ಕೈಯಿಂದಾದರೆ ಸ್ವತಂತ್ರನಾಗುವದೇ ಉತ್ತಮ.” (1 ಕೊರಿಂಥ 7:21) ಎಂತಹ ಸಮತೂಕದ ದೃಷ್ಟಿಕೋನ! ಕೆಲವು ಸನ್ನಿವೇಶಗಳು ಬದಲಾಗುತ್ತವೆ. ಯುವ ಜನರು ದೊಡ್ಡವರಾಗುತ್ತಾರೆ. ವಿರೋಧಿಸುವ ಸಂಗಾತಿಗಳು ಕೆಲವೊಮ್ಮೆ ಸತ್ಯವನ್ನು ಸ್ವೀಕರಿಸುತ್ತಾರೆ. ಆರ್ಥಿಕ ಸನ್ನಿವೇಶಗಳು ಉತ್ತಮಗೊಂಡಿರುವುದು ಗೊತ್ತಾಗಿ ಬಂದಿದೆ. ಅಸ್ವಸ್ಥ ಜನರು ಗುಣಹೊಂದಬಹುದು. ಇತರ ವಿದ್ಯಮಾನಗಳಲ್ಲಿ, ಯೆಹೋವನ ನೂತನ ಲೋಕವು ಇಲ್ಲಿಗೆ ಬರುವ ತನಕ ವಿಷಯಗಳು ಬದಲಾಗದೆ ಇರಬಹುದು. ಆದರೂ, ಇತರರು ಮಾಡಬಲ್ಲ ವಿಷಯಗಳನ್ನು ಒಬ್ಬನು ಮಾಡಸಾಧ್ಯವಿಲ್ಲದ ಕಾರಣ ತಳಮಳಗೊಳ್ಳುವುದರಿಂದ ಏನನ್ನು ಪಡೆಯಸಾಧ್ಯವಿದೆ?
ಭೂಮಿಯ ಮೇಲೆ ಆಕಾಶದಲ್ಲಿ ಹಾರುವ ಪಕ್ಷಿಗಳನ್ನು ನೀವು ನೋಡಿ, ಅವುಗಳ ಚಲನೆಗಳ ಸೌಂದರ್ಯ ಹಾಗೂ ಸ್ವಾತಂತ್ರ್ಯವನ್ನು ಎಂದಾದರೂ ಶ್ಲಾಘಿಸಿದ್ದೀರೊ? ಬಹುಶಃ ನೀವು ಅದರಂತೆ ಹಾರಲು ಬಯಸಿರಬಹುದು. ಒಳ್ಳೆಯದು, ನಿಮಗದು ಸಾಧ್ಯವಿಲ್ಲ ಮತ್ತು ಪಕ್ಷಿಗಳು ಹಾರುವಂತೆ ಹಾರಲು ನೀವು ಎಂದಿಗೂ ಶಕ್ತರಾಗಿರುವುದಿಲ್ಲ! ಆದರೆ ಪ್ರಾಯಶಃ ನೀವು ದೂರುವುದಿಲ್ಲ. ಬದಲಿಗೆ, ನಿಮ್ಮ ದೇವದತ್ತ ಸಾಮರ್ಥ್ಯಗಳಲ್ಲಿ ನೀವು ಹರ್ಷಿಸುತ್ತೀರಿ. ಭೂಮಿಯ ಮೇಲೆ ನಡೆದಾಡುವುದಾದರೂ, ಯಶಸ್ವಿಕರವಾಗಿ ಜೀವಿಸಲು ನೀವು ಶಕ್ತರಾಗಿದ್ದೀರಿ. ಅದೇ ರೀತಿಯಲ್ಲಿ, ಜೀವನದಲ್ಲಿ ನಮ್ಮ ಸನ್ನಿವೇಶವು ಏನೇ ಆಗಿರಲಿ, ನಮಗೆ ಮಾಡಸಾಧ್ಯವಿರದ ವಿಷಯಗಳ ಕುರಿತು ತಳಮಳಗೊಳ್ಳುವುದಕ್ಕಿಂತ ನಾವು ಮಾಡಸಾಧ್ಯವಿರುವ ವಿಷಯಗಳ ಮೇಲೆ ನಾವು ಲಕ್ಷ್ಯವಿಡುವುದಾದರೆ, ಜೀವಿತವು ತೃಪಿಕರವಾಗಿರುವುದು, ಮತ್ತು ನಾವು ಯೆಹೋವನ ಸೇವೆಯಲ್ಲಿ ಆನಂದವನ್ನು ಕಂಡುಕೊಳ್ಳುವೆವು.—ಕೀರ್ತನೆ 126:5, 6.
[ಪುಟ 28 ರಲ್ಲಿರುವ ಚಿತ್ರ]
ನಿಮ್ಮ ಹೆತ್ತವರು ನಿಮ್ಮ ಸುತ್ತಲೂ ಬೇಲಿಹಾಕುತ್ತಾರೆಂದು ನಿಮಗನಿಸುತ್ತದೊ?