ಮಾನವ ಕಷ್ಟಾನುಭವ—ಅದು ಎಂದಾದರೂ ಕೊನೆಗೊಳ್ಳುವುದೋ?
ಸಾರಯೆವೊದ ಒಂದು ಜನಸಂದಣಿಯಲ್ಲಿ ಬಾಂಬೊಂದು ಸ್ಫೋಟಿಸಿದ ನಂತರದ ಬೀಭತ್ಸ ದೃಶ್ಯಗಳು; ರುಆಂಡದಲ್ಲಿ ಸಾಮೂಹಿಕ ಹತ್ಯೆಗಳು ಮತ್ತು ವಿಕೃತ ಅಂಗಛೇದನ; ಸೊಮಾಲಿಯದಲ್ಲಿ ಆಹಾರಕ್ಕಾಗಿ ಬೊಬ್ಬೆಯಿಡುವ ಹಸಿದ ಮಕ್ಕಳು; ಲಾಸ್ ಆ್ಯಂಜಲೀಸ್ನಲ್ಲಿ ಭೂಕಂಪದ ಅನಂತರ ತಮ್ಮ ನಷ್ಟಗಳನ್ನು ಲೆಕ್ಕಿಸುತ್ತಿರುವ ಕಂಗಾಲಾದ ಕುಟುಂಬಗಳು; ನೆರೆಯಿಂದ ಧ್ವಂಸವಾದ ಬಾಂಗ್ಲಾದೇಶದ ದಿಕ್ಕಿಲ್ಲದ ಬಲಿಗಳು. ಮಾನವ ಕಷ್ಟಾನುಭವದ ಇಂತಹ ದೃಶ್ಯಗಳು ಟೀವೀಯ ಮೇಲೆ ಯಾ ಪತ್ರಿಕೆಗಳಲ್ಲಿ ಮತ್ತು ವಾರ್ತಾಪತ್ರಗಳಲ್ಲಿ ಪ್ರತಿದಿನ ನಮ್ಮನ್ನೆದುರಿಸುತ್ತವೆ.
ಮಾನವ ಕಷ್ಟಾನುಭವದ ಒಂದು ದುಃಖಕರ ಪರಿಣಾಮವೇನಂದರೆ ಅದು ದೇವರಲ್ಲಿನ ವಿಶ್ವಾಸವನ್ನು ನಷ್ಟಗೊಳಿಸಲು ಕೆಲವು ಜನರಿಗೆ ಕಾರಣವಾಗುತ್ತದೆ. ಅಮೆರಿಕದಲ್ಲಿನ ಯೆಹೂದಿ ಸಮುದಾಯವೊಂದರಿಂದ ಪ್ರಕಾಶಿಸಲ್ಪಟ್ಟ ಒಂದು ಹೇಳಿಕೆಗನುಸಾರ “ದುಷ್ಟತನದ ಅಸ್ತಿತ್ವವು ಯಾವಾಗಲೂ ವಿಶ್ವಾಸಕ್ಕೆ ಅತ್ಯಧಿಕ ಗಂಭೀರ ತಡೆಗಟ್ಟನ್ನು ಒದಗಿಸಿದೆ.” ಲೇಖಕರು ಔಷ್ವಿಟ್ಸ್ನಂತಹ ಕೂಟಶಿಬಿರಗಳಲ್ಲಿ ಮತ್ತು ಹಿರೊಶೀಮದ ಮೇಲೆ ಸ್ಫೋಟನಗೊಂಡಂತಹ ಬಾಂಬುಗಳಿಂದ ಆದ ಮರಣಗಳಿಗೆ ಸೂಚಿಸುತ್ತಾರೆ. “ನ್ಯಾಯಿ ಮತ್ತು ಬಲಾಢ್ಯನಾದ ದೇವರೊಬ್ಬನು ಅಷ್ಟೊಂದು ನಿರಪರಾಧಿ ಜೀವಗಳ ಸರ್ವನಾಶಕ್ಕೆ ಹೇಗೆ ಅನುಮತಿಸಬಲ್ಲನು ಎಂಬುದು ಧಾರ್ಮಿಕ ಮನಸ್ಸಾಕ್ಷಿಯನ್ನು ಕಾಡುತ್ತದೆ ಮತ್ತು ಊಹೆಯನ್ನು ತತ್ತರಗುಟ್ಟಿಸುತ್ತದೆ,” ಎನ್ನುತ್ತಾರೆ ಗ್ರಂಥಕರ್ತರು.
ವಿಷಾದನೀಯವಾಗಿ, ದುರಂತಮಯ ವರದಿಗಳ ಅವಿರತ ಹರಿವು ಮಾನವ ಭಾವಾವೇಶಗಳ ಮೇಲೆ ಜಡಗಟ್ಟಿಸುವ ಪರಿಣಾಮವನ್ನುಂಟುಮಾಡಬಲ್ಲದು. ಎಷ್ಟರ ಮಟ್ಟಿಗೆ ಮಿತ್ರರು ಮತ್ತು ಸಂಬಂಧಿಕರು ಒಳಗೂಡಿರುವುದಿಲ್ಲವೊ ಅಷ್ಟರ ತನಕ ಅನೇಕರು ಇತರರ ಕಷ್ಟಾನುಭವದಿಂದ ತಾವು ಕೊಂಚವಾಗಿ ಪ್ರಚೋದಿಸಲ್ಪಡುತ್ತೇವೆಂದು ಕಂಡುಕೊಳ್ಳುತ್ತಾರೆ.
ಆದಾಗ್ಯೂ, ಕಡಿಮೆಪಕ್ಷ ನಮ್ಮ ಸ್ವಂತ ಪ್ರಿಯರಿಗಾದರೂ ನಾವು ಕನಿಕರದ ಭಾವನೆಯ ಸಾಮರ್ಥ್ಯವುಳ್ಳವರಾಗಿರುವ ವಾಸ್ತವಾಂಶವು, ನಮ್ಮ ನಿರ್ಮಾಣಿಕನ ಕುರಿತು ಏನಾದರೊಂದನ್ನು ನಮಗೆ ಹೇಳಲೇಬೇಕು. ಮನುಷ್ಯನು “ದೇವಸ್ವರೂಪದಲ್ಲಿ” ಮತ್ತು “[ದೇವರ] ಹೋಲಿಕೆಗೆ ಸರಿಯಾಗಿ” ಸೃಷ್ಟಿಸಲ್ಪಟ್ಟನು ಎಂದು ಬೈಬಲು ಹೇಳುತ್ತದೆ. (ಆದಿಕಾಂಡ 1:26, 27) ಮಾನವರು ತೋರಿಕೆಯಲ್ಲಿ ದೇವರಂತೆ ಇದ್ದಾರೆ ಎಂದು ಇದರ ಅರ್ಥವಲ್ಲ. ಇಲ್ಲ, “ದೇವರು ಆತ್ಮಸ್ವರೂಪನು,” ಮತ್ತು “ಆತ್ಮವೊಂದಕ್ಕೆ ಮಾಂಸ ಮತ್ತು ಎಲುಬುಗಳಿಲ್ಲ” ಎಂದು ಯೇಸು ಕ್ರಿಸ್ತನು ವಿವರಿಸಿದನು. (ಯೋಹಾನ 4:2-4; ಲೂಕ 24:39, NW) ದೇವರ ಹೋಲಿಕೆಗನುಸಾರ ಮಾಡಲ್ಪಟ್ಟಿರುವುದು ದೇವರಂತಹ ಗುಣಗಳನ್ನು ಪ್ರದರ್ಶಿಸುವ ನಮ್ಮ ಸಾಮರ್ಥ್ಯವನ್ನು ಸೂಚಿಸುತ್ತದೆ. ಆದಕಾರಣ, ಕಷ್ಟಾನುಭವಿಸುವವರೆಡೆಗೆ ಸಾಮಾನ್ಯ ಮನುಷ್ಯರು ಕನಿಕರವನ್ನು ತಾಳುವುದರಿಂದ, ಮನುಷ್ಯರ ಸೃಷ್ಟಿಕರ್ತನಾದ ಯೆಹೋವ ದೇವರು ಕನಿಕರಿಸುವವನು ಮತ್ತು ಕಷ್ಟಾನುಭವಿಸುವ ಆತನ ಮಾನವ ಸೃಷ್ಟಿಗಾಗಿ ಆತನಿಗೆ ಆಳವಾಗಿ ಕನಿಕರವಿದೆ ಎಂದು ನಾವು ತೀರ್ಮಾನಿಸಬೇಕು.—ಹೋಲಿಸಿರಿ ಲೂಕ 11:13.
ದೇವರು ತನ್ನ ಕನಿಕರವನ್ನು ತೋರಿಸಿದ ಒಂದು ರೀತಿಯು ಕಷ್ಟಾನುಭವದ ಕಾರಣದ ಲಿಖಿತ ವಿವರಣೆಯನ್ನು ಮಾನವಕುಲಕ್ಕೆ ಒದಗಿಸಿರುವ ಮೂಲಕವೇ. ಇದನ್ನಾತನು ತನ್ನ ವಾಕ್ಯವಾದ ಬೈಬಲಿನಲ್ಲಿ ಮಾಡಿದ್ದಾನೆ. ಜೀವಿತವನ್ನು ಆನಂದಿಸಲಿಕ್ಕಾಗಿ ದೇವರು ಮನುಷ್ಯನನ್ನು ಉಂಟುಮಾಡಿದನೇ ಹೊರತು, ಕಷ್ಟಾನುಭವಿಸಲಿಕ್ಕಲ್ಲವೆಂದು ಬೈಬಲು ಸ್ಪಷ್ಟವಾಗಿಗಿ ತೋರಿಸುತ್ತದೆ. (ಆದಿಕಾಂಡ 2:7-9) ದೇವರ ನೀತಿಯ ಆಳಿಕೆಯನ್ನು ತ್ಯಜಿಸಿದ್ದರಿಂದಾಗಿ ಮೊದಲ ಮಾನವರು ತಮ್ಮ ಮೇಲೆ ತಾವಾಗಿಯೇ ಕಷ್ಟಾನುಭವವನ್ನು ತಂದುಕೊಂಡರು ಎಂದು ಸಹ ಅದು ಪ್ರಕಟಿಸುತ್ತದೆ.—ಧರ್ಮೋಪದೇಶಕಾಂಡ 32:4, 5; ರೋಮಾಪುರ 5:12.
ಹೀಗೆ ಇದ್ದಾಗ್ಯೂ, ಕಷ್ಟಾನುಭವಿಸುತ್ತಿರುವ ಮಾನವತ್ವಕ್ಕಾಗಿ ದೇವರು ಇನ್ನೂ ಕನಿಕರವನ್ನು ತಾಳುತ್ತಾನೆ. ಮಾನವ ಕಷ್ಟಾನುಭವಕ್ಕೆ ಅಂತ್ಯವೊಂದನ್ನು ತರುವ ಅವನ ಆಶ್ವಾಸನೆಯಲ್ಲಿ ಇದು ಸ್ಪಷ್ಟವಾಗಿಗಿ ತೋರಿಸಲಾಗಿದೆ. “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಆವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4; ಇದನ್ನು ಸಹ ನೋಡಿರಿ ಯೆಶಾಯ 25:8; 65:17-25; ರೋಮಾಪುರ 8:19-21.
ಮಾನವ ನರಳುವಿಕೆಗೆ ದೇವರು ಸೂಕ್ಷ್ಮಸಂವೇದಿಯಾಗಿದ್ದಾನೆ ಮತ್ತು ಅದಕ್ಕೆ ಅಂತ್ಯವನ್ನು ತರಲು ನಿಶ್ಚಯಿಸಿದ್ದಾನೆ ಎಂದು ಈ ಆಶ್ಚರ್ಯಕರ ಆಶ್ವಾಸನೆಗಳು ರುಜುಪಡಿಸುತ್ತವೆ. ಆದರೆ ಮೊತ್ತ ಮೊದಲಾಗಿ ಮಾನವ ನರಳುವಿಕೆಗೆ ನಿಷ್ಕೃಷ್ಟವಾಗಿ ಕಾರಣವಾದದ್ದಾದರೂ ಏನು, ಮತ್ತು ನಮ್ಮ ದಿನಗಳ ತನಕ ಅದು ಮುಂದುವರಿಯುವಂತೆ ದೇವರು ಯಾಕೆ ಅನುಮತಿಸಿದ್ದಾನೆ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover and page 32: Alexandra Boulat/Sipa Press
[ಪುಟ 3 ರಲ್ಲಿರುವ ಚಿತ್ರ ಕೃಪೆ]
Kevin Frayer/Sipa Press