ಕೋಮಲವಾಗಿ ಕನಿಕರಿಸುವವರಾಗಿರ್ರಿ
“ಕನಿಕರದ ಕೋಮಲ ವಾತ್ಸಲ್ಯದಿಂದ, ದಯೆಯಿಂದ ನಿಮ್ಮನ್ನು ಧರಿಸಿಕೊಳ್ಳಿರಿ.”—ಕೊಲೊಸ್ಸೆ 3:12, NW.
1. ಕನಿಕರದ ಮಹಾ ಆವಶ್ಯಕತೆ ಇಂದು ಏಕೆ ಇದೆ?
ಇತಿಹಾಸದಲ್ಲಿ ಈ ಮೊದಲು ಎಂದಿಗೂ ಇಷ್ಟೊಂದು ಜನರಿಗೆ ಕನಿಕರದ ಸಹಾಯದ ಜರೂರಿಯು ಇರಲಿಲ್ಲ. ರೋಗ, ದಾರಿದ್ರ್ಯ, ನಿರುದ್ಯೋಗ, ಪಾತಕ, ಯುದ್ಧಗಳು, ಅರಾಜಕತೆ, ಮತ್ತು ನೈಸರ್ಗಿಕ ವಿಪತ್ತುಗಳ ಎದುರಿನಲ್ಲಿ ಲಕ್ಷಾಂತರ ಜನರಿಗೆ ಸಹಾಯವು ಬೇಕಾಗಿದೆ. ಆದರೆ ಇದಕ್ಕಿಂತಲೂ ಗಂಭೀರವಾದ ಸಮಸ್ಯೆಯೊಂದು ಇದೆ, ಮತ್ತು ಅದು ಮಾನವಕುಲದ ಹತಾಶೆಯ ಆತ್ಮಿಕ ದುರವಸ್ಥೆ. ತನ್ನ ಸಮಯವು ಕೊಂಚವೆಂದು ತಿಳಿದಿರುವ ಸೈತಾನನು, “ಭೂಲೋಕದವರನ್ನೆಲ್ಲಾ ಮರುಳುಗೊಳಿಸು” ತ್ತಾನೆ. (ಪ್ರಕಟನೆ 12:9, 12) ಆದಕಾರಣ, ನಿಜ ಕ್ರೈಸ್ತ ಸಭೆಯ ಹೊರಗೆ ಇರುವವರು ವಿಶೇಷವಾಗಿ ತಮ್ಮ ಜೀವಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿರುತ್ತಾರೆ, ಮತ್ತು ಬರಲಿರುವ ದೇವರ ನ್ಯಾಯತೀರ್ಪಿನ ಸಮಯದಲ್ಲಿ ಹತಿಸಲ್ಪಟ್ಟವರಿಗೆ ಪುನರುತ್ಥಾನದ ಯಾವುದೇ ನಿರೀಕ್ಷೆಯನ್ನು ಬೈಬಲು ತಳ್ಳಿಹಾಕುತ್ತದೆ.—ಮತ್ತಾಯ 25:31-33, 41, 46; 2 ಥೆಸಲೊನೀಕ 1:6-9.
2. ದುಷ್ಟರನ್ನು ನಾಶಮಾಡುವುದರಿಂದ ಯೆಹೋವನು ಏಕೆ ತಡೆಹಿಡಿದನು?
2 ಆದರೂ, ಈ ಕಡೇ ತಾಸಿನ ತನಕ, ಯೆಹೋವ ದೇವರು ಉಪಕಾರನೆನಸದವರಿಗೂ, ಕೆಟ್ಟವರಿಗೂ ತಾಳ್ಮೆ ಮತ್ತು ಕನಿಕರವನ್ನು ತೋರಿಸುವುದನ್ನು ಮುಂದುವರಿಸುತ್ತಾನೆ. (ಮತ್ತಾಯ 5:45; ಲೂಕ 6:35, 36) ಅಪನಂಬಿಗಸ್ತ ಇಸ್ರಾಯೇಲ್ ಜನಾಂಗವನ್ನು ದಂಡಿಸಲು ಅವನು ವಿಳಂಬಿಸಿದ ಅದೇ ಕಾರಣಕ್ಕಾಗಿ ಇದನ್ನಾತನು ಮಾಡಿದ್ದಾನೆ. “ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ. ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ಮಾರ್ಗವನ್ನು ಬಿಡಿರಿ, ಬಿಟ್ಟು ಬಿಡಿರಿ; ನೀವು ಸಾಯಲೇಕೆ? ಇದು ಕರ್ತನಾದ ಯೆಹೋವನ ನುಡಿ.”—ಯೆಹೆಜ್ಕೇಲ 33:11.
3. ತನ್ನ ಜನರಲ್ಲದವರಿಗಾಗಿ ಯೆಹೋವನ ಕನಿಕರದ ಯಾವ ಉದಾಹರಣೆಯು ನಮಗೆ ಇದೆ, ಮತ್ತು ಇದರಿಂದ ನಾವೇನು ಕಲಿಯುತ್ತೇವೆ?
3 ಯೆಹೋವನ ಕನಿಕರವು ದುಷ್ಟ ನಿನೆವೆಯವರನ್ನು ಸಹ ಆವರಿಸಿತು. ಆಸನ್ನವಾಗಿರುವ ನಾಶನದ ಕುರಿತು ಅವರನ್ನು ಎಚ್ಚರಿಸಲು ಯೆಹೋವನು ತನ್ನ ಪ್ರವಾದಿಯಾದ ಯೋನನನ್ನು ಕಳುಹಿಸಿದನು. ಅವರು ಯೋನನ ಸಾರುವಿಕೆಗೆ ಸಕಾರಾತ್ಮಕವಾಗಿ ಪ್ರತಿವರ್ತಿಸಿದರು ಮತ್ತು ಪಶ್ಚಾತ್ತಾಪ ಪಟ್ಟರು. ಇದು ಕನಿಕರಿಸುವ ದೇವರಾದ ಯೆಹೋವನನ್ನು ಆ ಸಮಯದಲ್ಲಿ ನಗರವನ್ನು ನಾಶಮಾಡುವುದರಿಂದ ತಡೆಯಿತು. (ಯೋನ 3:10; 4:11) ಪುನರುತ್ಥಾನವೊಂದರ ಸಂಭಾವ್ಯತೆಯಿದ್ದಿರಬಹುದಾದ ನಿನೆವೆಯವರ ಕುರಿತು ದೇವರು ಮರುಕಪಟ್ಟಿರುವುದಾದರೆ, ನಿತ್ಯ ನಾಶನವನ್ನು ಇಂದು ಎದುರಿಸುತ್ತಿರುವ ಜನರಿಗಾಗಿ ಅವನೆಷ್ಟು ಹೆಚ್ಚು ಕನಿಕರವುಳ್ಳವನಾಗಿರಬೇಕು!—ಲೂಕ 11:32.
ಕನಿಕರದ ಒಂದು ಅಭೂತಪೂರ್ವ ಕಾರ್ಯ
4. ಜನರಿಗಾಗಿ ಯೆಹೋವನು ಕನಿಕರವನ್ನು ಇಂದು ಹೇಗೆ ವ್ಯಕ್ತಪಡಿಸುತ್ತಾನೆ?
4 ತನ್ನ ಕನಿಕರಿಸುವ ವ್ಯಕ್ತಿತ್ವದ ಹೊಂದಾಣಿಕೆಯಲ್ಲಿ, ಯೆಹೋವನು ತನ್ನ ಸಾಕ್ಷಿಗಳು ಅವರ ನೆರೆಯವರಿಗೆ “ರಾಜ್ಯದ . . . ಸುವಾರ್ತೆ” ಯೊಂದಿಗೆ ಸಂದರ್ಶಿಸುತ್ತಾ ಇರುವಂತೆ ಅವರಿಗೆ ನಿಯೋಗವನ್ನು ವಹಿಸಿಕೊಟ್ಟಿದ್ದಾನೆ. (ಮತ್ತಾಯ 24:14) ಮತ್ತು ಆತನ ಜನರು ಈ ಜೀವರಕ್ಷಕ ಕಾರ್ಯದಲ್ಲಿ ಗಣ್ಯತೆಯೊಂದಿಗೆ ಪ್ರತಿಕ್ರಿಯಿಸುವಾಗ, ರಾಜ್ಯ ಸಂದೇಶವನ್ನು ಮನವರಿಕೆ ಮಾಡಿಕೊಳ್ಳಲು ಅವರ ಹೃದಯಗಳನ್ನು ಯೆಹೋವನು ತೆರೆಯುತ್ತಾನೆ. (ಮತ್ತಾಯ 11:25; ಅ. ಕೃತ್ಯಗಳು 16:14) ತಮ್ಮ ತಂದೆಯ ಅನುಕರಣೆಯಲ್ಲಿ, ಆಸಕ್ತ ಜನರನ್ನು ಪುನಃ ಭೇಟಿ ಮಾಡುವುದರ ಮೂಲಕ, ಸಾಧ್ಯವಿದ್ದಲ್ಲಿ ಮನೆ ಬೈಬಲ್ ಅಧ್ಯಯನವೊಂದರ ಮೂಲಕ ಅವರಿಗೆ ಸಹಾಯಿಸುವುದರ ಮೂಲಕ ನಿಜ ಕ್ರೈಸ್ತರು ಕೋಮಲ ಕನಿಕರವನ್ನು ತೋರಿಸುತ್ತಾರೆ. ಹೀಗೆ, 1993 ರಲ್ಲಿ ಯೆಹೋವನ 45 ಲಕ್ಷಕ್ಕಿಂತಲೂ ಅಧಿಕ ಸಾಕ್ಷಿಗಳು 231 ದೇಶಗಳಲ್ಲಿ ಒಂದು ಶತ ಕೋಟಿಗಿಂತಲೂ ಅಧಿಕ ತಾಸುಗಳನ್ನು ಮನೆಯಿಂದ ಮನೆಯಲ್ಲಿ ಸಾರುವುದರಲ್ಲಿ ಮತ್ತು ತಮ್ಮ ನೆರೆಯವರೊಂದಿಗೆ ಬೈಬಲನ್ನು ಅಧ್ಯಯನಿಸುವುದರಲ್ಲಿ ವ್ಯಯಿಸಿದರು. ಪ್ರತಿಯಾಗಿ ಈ ಹೊಸ ಆಸಕ್ತರಿಗೆ ತಮ್ಮ ಜೀವಗಳನ್ನು ಯೆಹೋವನ ಸೇವೆಯಲ್ಲಿ ಸಮರ್ಪಿಸಲು ಮತ್ತು ಆತನ ಸ್ನಾನಿತ ಸಾಕ್ಷಿಗಳ ಶ್ರೇಣಿಯಲ್ಲಿ ಜೊತೆಗೂಡಲು ಇರುವ ಒಂದು ಅವಕಾಶವು ಇದೆ. ಹೀಗೆ, ಅವರು ಸಹ ಸೈತಾನನ ಸಾಯುತ್ತಿರುವ ಲೋಕದಲ್ಲಿ ಸಿಲುಕಿಕೊಂಡಿರುವ ಭಾವೀ ಶಿಷ್ಯರ ಪರವಾಗಿ ಕನಿಕರದ ಈ ಅಭೂತಪೂರ್ವ ಕಾರ್ಯದಲ್ಲಿ ತಮ್ಮನ್ನು ಬದ್ಧರನ್ನಾಗಿಸುತ್ತಾರೆ.—ಮತ್ತಾಯ 28:19, 20; ಯೋಹಾನ 14:12.
5. ದಿವ್ಯ ಕನಿಕರವು ಅದರ ಪರಿಮಿತಿಯನ್ನು ಮುಟ್ಟಿದಾಗ, ದೇವರನ್ನು ತಪ್ಪಾಗಿ ಪ್ರತಿನಿಧಿಸಿದ ಧರ್ಮಕ್ಕೆ ಏನು ಸಂಭವಿಸುತ್ತದೆ?
5 ಬಲುಬೇಗನೆ ಯೆಹೋವನು “ಯುದ್ಧಶೂರ” ನೋಪಾದಿ ಕ್ರಿಯೆಗೈಯಲಿರುವನು. (ವಿಮೋಚನಕಾಂಡ 15:3) ತನ್ನ ನಾಮಕ್ಕಾಗಿ ಮತ್ತು ತನ್ನ ಜನರಿಗಾಗಿ ಕನಿಕರದಿಂದ, ಅವನು ದುಷ್ಟತನವನ್ನು ನಿರ್ಮೂಲಗೊಳಿಸುವನು ಮತ್ತು ನೀತಿಯ ಹೊಸ ಲೋಕವೊಂದನ್ನು ಸ್ಥಾಪಿಸುವನು. (2 ಪೇತ್ರ 3:13) ಕ್ರೈಸ್ತಪ್ರಪಂಚದ ಚರ್ಚುಗಳು ದೇವರ ಕ್ರೋಧದ ದಿನವನ್ನು ಪ್ರಥಮವಾಗಿ ಅನುಭವಿಸುವುವು. ಬಾಬೆಲಿನ ಅರಸನ ಹಸ್ತದಿಂದ ಯೆರೂಸಲೇಮಿನಲ್ಲಿರುವ ತನ್ನ ಸ್ವಂತ ದೇವಾಲಯವನ್ನು ಸಹ ದೇವರು ಹೇಗೆ ಉಳಿಸಲಿಲ್ಲವೋ ಹಾಗೆಯೇ ಆತನನ್ನು ತಪ್ಪಾಗಿ ಪ್ರತಿನಿಧಿಸಿದ್ದ ಧಾರ್ಮಿಕ ಸಂಸ್ಥೆಗಳನ್ನೂ ಅವನು ಉಳಿಸುವುದಿಲ್ಲ. ಕ್ರೈಸ್ತಪ್ರಪಂಚವನ್ನು ಮತ್ತು ಸುಳ್ಳು ಧರ್ಮದ ಇತರ ಎಲ್ಲಾ ರೂಪಗಳನ್ನು ಧ್ವಂಸಗೊಳಿಸುವಂತೆ ದೇವರು ಸಂಯುಕ್ತ ರಾಷ್ಟ್ರದ ಸದಸ್ಯರ ಹೃದಯಗಳಲ್ಲಿ ಅದನ್ನು ಹಾಕುವನು. (ಪ್ರಕಟನೆ 17:16, 17) ಯೆಹೋವನು ಘೋಷಿಸುವುದು, “ನಾನಂತು ಅವರನ್ನು ಕಟಾಕ್ಷಿಸೆನು, ಉಳಿಸೆನು, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು.”—ಯೆಹೆಜ್ಕೇಲ 9:5, 10.
6. ಯಾವ ವಿಧಗಳಲ್ಲಿ ಕನಿಕರವನ್ನು ತೋರಿಸಲು ಯೆಹೋವನ ಸಾಕ್ಷಿಗಳು ಪ್ರೇರಿಸಲ್ಪಟ್ಟಿದ್ದಾರೆ?
6 ಇನ್ನೂ ಸಮಯವಿರುವಾಗಲೇ, ಯೆಹೋವನ ಸಾಕ್ಷಿಗಳು ರಕ್ಷಣೆಯ ದೇವರ ಸಂದೇಶವನ್ನು ಹುರುಪಿನಿಂದ ಸಾರುವುದರ ಮೂಲಕ ತಮ್ಮ ನೆರೆಯವರಿಗೆ ಕನಿಕರ ತೋರಿಸುವುದನ್ನು ಮುಂದುವರಿಸುವರು. ಮತ್ತು ಸ್ವಾಭಾವಿಕವಾಗಿ, ಎಲ್ಲಿ ಸಾಧ್ಯವೊ ಅಲ್ಲಿ ಭೌತಿಕ ಜರೂರಿಯಲ್ಲಿರುವ ಜನರಿಗೂ ಸಹಾಯವನ್ನೀಯುವರು. ಈ ವಿಚಾರದಲ್ಲಾದರೊ, ಅವರ ಮೊದಲ ಜವಾಬ್ದಾರಿಕೆಯು ನಿಕಟ ಕೌಟುಂಬಿಕ ಸದಸ್ಯರ ಮತ್ತು ನಂಬಿಕೆಯಲ್ಲಿ ಅವರಿಗೆ ಸಂಬಂಧಿಗಳಾಗಿರುವವರ ಜರೂರಿಗಳ ಜಾಗ್ರತೆಯನ್ನು ನೋಡಿಕೊಳ್ಳುವದಾಗಿದೆ. (ಗಲಾತ್ಯ 6:10; 1 ತಿಮೊಥೆಯ 5:4, 8) ವಿವಿಧ ಆಪತ್ತುಗಳಿಂದ ಬಾಧಿತರಾದ ಸಹ ವಿಶ್ವಾಸಿಗಳ ಪರವಾಗಿ ಯೆಹೋವನ ಸಾಕ್ಷಿಗಳಿಂದ ನಿರ್ವಹಿಸಲ್ಪಟ್ಟ ಅನೇಕ ಪರಿಹಾರ ಕಾರ್ಯನಿಯೋಗಗಳು ಕನಿಕರದ ಗಮನಾರ್ಹ ಉದಾಹರಣೆಗಳಾಗಿವೆ. ಹಾಗಿದ್ದರೂ, ಕೋಮಲ ಕನಿಕರವನ್ನು ತೋರಿಸುವ ಮೊದಲು ಒಂದು ವಿಷಮಸ್ಥಿತಿಗಾಗಿ ಕ್ರೈಸ್ತರು ಕಾಯುವುದಿಲ್ಲ. ಅವರು ಈ ಗುಣವನ್ನು ದೈನಿಕ ಜೀವನದ ಏರಿಳಿತಗಳೊಂದಿಗೆ ವ್ಯವಹರಿಸುವಾಗ ಬಲುಬೇಗನೆ ಪ್ರದರ್ಶಿಸುವರು.
ಹೊಸ ವ್ಯಕ್ತಿತ್ವದ ಭಾಗ
7. (ಎ) ಕೊಲೊಸ್ಸೆ 3:8-13 ರಲ್ಲಿ, ಹೊಸ ವ್ಯಕ್ತಿತ್ವದೊಂದಿಗೆ ಕನಿಕರವು ಹೇಗೆ ಜೋಡಿಸಲ್ಪಟ್ಟಿದೆ? (ಬಿ) ಕೋಮಲ ವಾತ್ಸಲ್ಯವು ಕ್ರೈಸ್ತರಿಗೆ ಅದನ್ನು ಮಾಡಲು ಹೇಗೆ ಸುಲಭವನ್ನಾಗಿ ಮಾಡುತ್ತದೆ?
7 ನಮ್ಮ ಪಾಪಪೂರ್ಣ ಸ್ವಭಾವ ಮತ್ತು ಸೈತಾನನ ಲೋಕದ ಕೆಟ್ಟ ಪ್ರಭಾವ ನಾವು ಕೋಮಲವಾಗಿ ಕನಿಕರಿಸುವವರಾಗಿರುವುದಕ್ಕೆ ಅಡಿಗ್ಡಳಾಗಿವೆ ಎಂಬುದೇನೊ ನಿಜ. ಆದುದರಿಂದಲೇ ನಾವು “ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ” ಗಳನ್ನು ವಿಸರ್ಜಿಸಿಬಿಡಲು ಬೈಬಲು ನಮ್ಮನ್ನು ಒತ್ತಾಯಿಸುತ್ತದೆ. ಬದಲಾಗಿ ನಾವು ‘ನೂತನ ವ್ಯಕ್ತಿತ್ವ’—ದೇವರ ಸ್ವರೂಪಕ್ಕೆ ಅನುರೂಪವಾಗಿರುವ ಒಂದು ವ್ಯಕ್ತಿತ್ವ— ‘ವನ್ನು ಸ್ವತಃ ಧರಿಸಿಕೊಳ್ಳುವಂತೆ’ ನಮಗೆ ಸಲಹೆಯನ್ನೀಯಲಾಗುತ್ತದೆ. ಮೊತ್ತಮೊದಲಾಗಿ “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ” ಯನ್ನು ಸ್ವತಃ ಧರಿಸಿಕೊಳ್ಳಲು ನಮಗೆ ಆಜ್ಞಾಪಿಸಲಾಗುತ್ತದೆ. ಅನಂತರ, ಈ ಗುಣಗಳನ್ನು ವ್ಯಕ್ತಪಡಿಸುವ ವ್ಯಾವಹಾರ್ಯ ರೀತಿಯನ್ನು ನಮಗೆ ಬೈಬಲು ತೋರಿಸುತ್ತದೆ. “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [ಯೆಹೋವನು, NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” ‘ಕನಿಕರಿಸುವ ಕೋಮಲ ವಾತ್ಸಲ್ಯವನ್ನು’ ನಾವು ಬೆಳೆಸಿರುವುದಾದರೆ, ಕ್ಷಮಿಸುವವರಾಗಿರುವುದು ಎಷ್ಟೋ ಸುಲಭವಾಗಿದೆ.—ಕೊಲೊಸ್ಸೆ 3:8-13.
8. ಕ್ಷಮಿಸುವ ಆತ್ಮವೊಂದು ಇರುವುದು ಯಾಕೆ ಪ್ರಾಮುಖ್ಯವಾಗಿದೆ?
8 ಇನ್ನೊಂದು ಪಕ್ಕದಲ್ಲಿ, ಕನಿಕರವುಳ್ಳ ಕ್ಷಮಿಸುವಿಕೆಯನ್ನು ಪ್ರದರ್ಶಿಸುವುದರಲ್ಲಿ ತಪ್ಪಿಹೋಗುವಿಕೆಯು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಗಂಡಾಂತರಕ್ಕೀಡುಮಾಡುತ್ತದೆ. ಇದನ್ನು ಯೇಸುವು, ‘ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ’ ತನ್ನ ಒಡೆಯನಿಂದ ಸೆರೆಮನೆಗೆ ಹಾಕಲ್ಪಟ್ಟಿದ್ದ ಕ್ಷಮಿಸದ ಸೇವಕನ ದೃಷ್ಟಾಂತದಲ್ಲಿ ಬಲವತ್ತಾಗಿ ತೋರಿಸಿದನು. ಈ ಸೇವಕನು ಈ ಉಪಚಾರಕ್ಕೆ ಅರ್ಹನಾಗಿದ್ದನು ಯಾಕಂದರೆ ಕರುಣೆಗಾಗಿ ಬೇಡಿದಾಗ ಜೊತೆ ಸೇವಕನಿಗೆ ಕನಿಕರವನ್ನು ತೋರಿಸಲು ಧಕ್ಕೆಯನ್ನುಂಟುಮಾಡುವಂತಹ ರೀತಿಯಲ್ಲಿ ಅವನು ತಪ್ಪಿದನು. ಯೇಸುವು ಈ ಉದಾಹರಣೆಯನ್ನು ಹೀಗನ್ನುತ್ತಾ, ಕೊನೆಗೊಳಿಸುತ್ತಾನೆ: “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.”—ಕೊಲೊಸ್ಸೆ ಮತ್ತಾಯ 18:34, 35.
9. ಹೊಸ ವ್ಯಕ್ತಿತ್ವದ ಅತಿ ಪ್ರಧಾನ ರೂಪದೊಂದಿಗೆ ಕೋಮಲ ಕನಿಕರವು ಹೇಗೆ ಸಂಬಂಧಿತವಾಗಿದೆ?
9 ಕೋಮಲವಾಗಿ ಕನಿಕರಿಸುವವರಾಗಿರುವುದು ಪ್ರೀತಿಯ ಒಂದು ಪ್ರಮುಖ ರೂಪವಾಗಿದೆ. ಮತ್ತು ನಿಜ ಕ್ರೈಸ್ತತ್ವದ ಗುರುತಿಸುವಿಕೆಯ ಚಿಹ್ನೆಯು ಪ್ರೀತಿಯಾಗಿದೆ. (ಯೋಹಾನ 13:35) ಆದಕಾರಣ, ಹೊಸ ವ್ಯಕ್ತಿತ್ವದ ಕುರಿತು ಬೈಬಲಿನ ವರ್ಣನೆಯು ಸಮಾಪ್ತಿಗೊಳ್ಳುವುದು: “ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:14.
ಅಸೂಯೆ—ಕನಿಕರಕ್ಕೆ ಒಂದು ಅಡ್ಡಿ
10. (ಎ) ನಮ್ಮ ಹೃದಯಗಳಲ್ಲಿ ಅಸೂಯೆಯು ಬೇರೂರುವಂತೆ ಯಾವುದು ಕಾರಣವಾಗಬಹುದು? (ಬಿ) ಅಸೂಯೆಯಿಂದ ಯಾವ ದುಷ್ಪರಿಣಾಮಗಳು ಬರಬಹುದು?
10 ನಮ್ಮ ಪಾಪಪೂರ್ಣ ಮಾನವ ಸ್ವಭಾವದ ಕಾರಣ, ಅಸೂಯೆಯ ಭಾವನೆಗಳು ಬಲು ಸುಲಭವಾಗಿ ನಮ್ಮ ಹೃದಯಗಳಲ್ಲಿ ಬೇರೂರಬಲ್ಲವು. ಸಹೋದರನೊಬ್ಬನು ಯಾ ಸಹೋದರಿಯೊಬ್ಬಳು ನಮಗೆ ಇಲ್ಲದಂತಹ ಸ್ವಭಾವಸಿದ್ಧವಾದ ಸಾಮರ್ಥ್ಯಗಳೊಂದಿಗೆ ಯಾ ಪ್ರಾಪಂಚಿಕ ಅನುಕೂಲತೆಗಳೊಂದಿಗೆ ಆಶೀರ್ವದಿಸಲ್ಪಟ್ಟಿರಬಹುದು. ಯಾ ಯಾರಾದರೊಬ್ಬನು ವಿಶೇಷ ಆತ್ಮಿಕ ಆಶೀರ್ವಾದಗಳನ್ನು ಮತ್ತು ಸುಯೋಗಗಳನ್ನು ಪಡೆದಿರಬಹುದು. ಅಂತಹವರ ಕುರಿತು ನಾವು ಅಸೂಯೆಯುಳ್ಳವರಾದರೆ, ನಾವು ಅವರನ್ನು ಕೋಮಲವಾದ ಕನಿಕರದಿಂದ ಸತ್ಕರಿಸಬಲ್ಲೆವೇ? ಪ್ರಾಯಶಃ ಇಲ್ಲ. ಬದಲಾಗಿ, ಮತ್ಸರದ ಭಾವನೆಗಳು ಕಟ್ಟಕಡೆಗೆ ಟೀಕೆಯ ಮಾತಿನಲ್ಲಿ ಯಾ ದಯಾರಹಿತ ಕಾರ್ಯಗಳಿಂದ ತಾವಾಗಿಯೇ ವ್ಯಕ್ತಿಗೊಳ್ಳಬಹುದು, ಏಕಂದರೆ ಮಾನವರ ಬಗ್ಗೆ ಯೇಸುವು ಅಂದದ್ದು: “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಲೂಕ 6:45) ಇತರರು ಅಂತಹ ಟೀಕೆಗಳೊಂದಿಗೆ ಪಕ್ಷವಹಿಸಬಹುದು. ಈ ರೀತಿಯಲ್ಲಿ ಕುಟುಂಬ ಯಾ ದೇವಜನರ ಸಭೆಯೊಂದರ ಶಾಂತಿಯು ಭಂಗಗೊಳ್ಳಬಹುದು.
11. ಯೋಸೇಫನ ಹತ್ತು ಸಹೋದರರು ತಮ್ಮ ಹೃದಯಗಳಲ್ಲಿ ಕನಿಕರಕ್ಕೆ ಹೇಗೆ ಎಡೆಕೊಡಲಿಲ್ಲ, ಮತ್ತು ಯಾವ ಫಲಿತಾಂಶದೊಂದಿಗೆ?
11 ಒಂದು ದೊಡ್ಡ ಪರಿವಾರಕ್ಕೆ ಏನು ಸಂಭವಿಸಿತೆಂದು ಪರಿಗಣಿಸಿರಿ. ಯಾಕೋಬನ ಹಿರಿಯ ಹತ್ತು ಪುತ್ರರು ಅವರ ಕಿರಿಯ ಸಹೋದರನಾದ ಯೋಸೇಫನ ಕುರಿತು ಮತ್ಸರವುಳ್ಳವರಾದರು ಯಾಕಂದರೆ ಅವನು ಅವರ ತಂದೆಯ ಅಚ್ಚುಮೆಚ್ಚಿನವನಾಗಿದ್ದನು. ಫಲಿತಾಂಶವಾಗಿ, “ಸಮಾಧಾನದಿಂದ ಅವನೊಂದಿಗೆ ಅವರು ಮಾತಾಡಲು ಶಕ್ತರಾಗಿರಲಿಲ್ಲ.” ತದನಂತರ, ಯೋಸೇಫನು ದಿವ್ಯ ಕನಸುಗಳಿಂದ ಆಶೀರ್ವದಿಸಲ್ಪಟ್ಟು, ಅವನಿಗೆ ಯೆಹೋವನ ಮೆಚ್ಚಿಗೆ ಇದೆಯೆಂದು ರುಜುವಾಯಿತು. ಇದು ಅವನ ಸಹೋದರರಿಗೆ ‘ಅವನನ್ನು ದ್ವೇಷಿಸಲು ಹೆಚ್ಚಿನ ಕಾರಣ’ ಕೊಟ್ಟಿತು. ಅವರ ಹೃದಯಗಳಿಂದ ಮತ್ಸರವನ್ನು ಅವರು ನಿರ್ಮೂಲಗೊಳಿಸದೆ ಇದ್ದುದರಿಂದ, ಅದು ಕನಿಕರಕ್ಕೆ ಎಡೆಯನ್ನೀಯಲಿಲ್ಲ ಮತ್ತು ಗಂಭೀರವಾದ ಪಾಪಕ್ಕೆ ನಡಿಸಿತು.—ಆದಿಕಾಂಡ 37:4, NW, 5, 11.
12, 13. ನಮ್ಮ ಹೃದಯದೊಳಗೆ ಅಸೂಯೆಯ ಭಾವನೆಗಳು ಪ್ರವೇಶಿಸಿದಾಗ ನಾವೇನು ಮಾಡತಕ್ಕದ್ದು?
12 ನಿರ್ದಯವಾಗಿ, ಅವರು ಯೋಸೇಫನನ್ನು ಗುಲಾಮತ್ವಕ್ಕೆ ಮಾರಿದರು. ಅವರ ದೋಷವನ್ನು ಮುಚ್ಚಿಡುವ ಪ್ರಯತ್ನದಲ್ಲಿ, ಯೋಸೇಫನು ಕಾಡುಮೃಗವೊಂದರಿಂದ ಕೊಲ್ಲಲ್ಪಟ್ಟಿದ್ದಾನೆಂದು ತಿಳಿಯುವಂತೆ ಅವರು ತಮ್ಮ ತಂದೆಯನ್ನು ವಂಚಿಸಿದರು. ವರುಷಗಳಾನಂತರ ಕ್ಷಾಮದ ಕಾರಣ ಧಾನ್ಯವನ್ನು ಖರೀದಿಸಲು ಐಗುಪ್ತಕ್ಕೆ ಹೋಗುವಂತೆ ಅವರು ಬಲಾತ್ಕರಿಸಲ್ಪಟ್ಟಾಗ, ಅವರ ಪಾಪವು ಬೆಳಕಿಗೆ ಬಂತು. ಯಾರನ್ನು ಯೋಸೇಫನೆಂದು ಅವರು ಗುರುತಿಸಲಿಲ್ಲವೋ ಆ ಧಾನ್ಯಾಡಳಿತಗಾರನು ಅವರನ್ನು ಗೂಢಚಾರರೆಂದು ಆಪಾದಿಸಿದನು ಮತ್ತು ಕಿರಿಯ ಸಹೋದರನಾದ ಬೆನ್ಯಾಮೀನನನ್ನು ಅವರು ತರುವ ತನಕ ತನ್ನ ಸಹಾಯವನ್ನು ಇನ್ನೊಮ್ಮೆ ಕೋರಬಾರದೆಂದು ಅವರಿಗೆ ಹೇಳಿದನು. ಇಷ್ಟರೊಳಗೆ ಬೆನ್ಯಾಮೀನನು ಅವರ ತಂದೆಯ ಅಚ್ಚುಮೆಚ್ಚಿನವನಾಗಿದ್ದನು, ಮತ್ತು ಅವನು ಹೋಗುವಂತೆ ಯಾಕೋಬನು ಬಿಡಲಾರನೆಂದು ಅವರಿಗೆ ಗೊತ್ತಿತ್ತು.
13 ಆದುದರಿಂದ ಯೋಸೇಫನ ಮುಂದೆ ನಿಂತಿರುವಾಗ, ಅವರ ಮನಸ್ಸಾಕ್ಷಿಗಳು ಅವರನ್ನು ಹೀಗೆ ಒಪ್ಪಿಕೊಳ್ಳುವಂತೆ ನಡಿಸಿತು: “ನಾವು ನಮ್ಮ ತಮ್ಮನಿಗೆ [ಯೋಸೇಫನಿಗೆ] ಮಾಡಿದ್ದು ದ್ರೋಹವೇ ಸರಿ; ಅವನು ನಮ್ಮನ್ನು ಬೇಡಿಕೊಂಡಾಗ ನಾವು ಅವನ ಪ್ರಾಣಸಂಕಟವನ್ನು ತಿಳಿದರೂ ಅವನ ಮೊರೆಗೆ ಕಿವಿಗೊಡಲಿಲ್ಲ; ಆ ಕಾರಣದಿಂದಲೇ ಈ ಸಂಕಟವು ನಮಗೆ ಪ್ರಾಪ್ತವಾಗಿದೆ.” (ಆದಿಕಾಂಡ 42:21) ಆತನ ಕನಿಕರಿಸುವ ಆದರೂ ದೃಢವಾದ ವ್ಯವಹಾರಗಳ ಮೂಲಕ, ಅವರ ಪಶ್ಚಾತ್ತಾಪದ ಸಾಚತನವನ್ನು ರುಜುಪಡಿಸಲು ಯೋಸೇಫನು ಅವನ ಸಹೋದರರಿಗೆ ಸಹಾಯ ನೀಡಿದನು. ಅನಂತರ ಅವನು ತನ್ನ ಗುರುತನ್ನು ಪ್ರಕಟಿಸಿದನು ಮತ್ತು ಉದಾರವಾಗಿ ಅವರನ್ನು ಕ್ಷಮಿಸಿದನು. ಕುಟುಂಬ ಐಕ್ಯವು ಪುನಃ ಸ್ಥಾಪಿಸಲ್ಪಟ್ಟಿತು. (ಆದಿಕಾಂಡ 45:4-8) ಕ್ರೈಸ್ತರೋಪಾದಿ, ಇದರಿಂದ ನಾವೊಂದು ಪಾಠವನ್ನು ಕಲಿಯತಕ್ಕದ್ದು. ಅಸೂಯೆಯ ಕೆಟ್ಟ ಪರಿಣಾಮಗಳನ್ನು ಅರಿತವರಾಗಿ, ಮತ್ಸರದ ಭಾವನೆಗಳನ್ನು ‘ಕನಿಕರದ ಕೋಮಲ ವಾತ್ಸಲ್ಯ’ ದೊಂದಿಗೆ ಸ್ಥಾನಪಲ್ಲಟಮಾಡಲು ಸಹಾಯಕ್ಕಾಗಿ ನಾವು ಯೆಹೋವನಿಗೆ ಬೇಡತಕ್ಕದ್ದು.
ಕನಿಕರಕ್ಕೆ ಇತರ ಅಡಿಗ್ಡಳು
14. ಹಿಂಸಾಚಾರಕ್ಕೆ ಅನಾವಶ್ಯಕವಾದ ಒಡ್ಡುವಿಕೆಯನ್ನು ನಾವು ಯಾಕೆ ಹೋಗಲಾಡಿಸಬೇಕು?
14 ನಾವು ಕನಿಕರಿಸುವವರಾಗಿರುವುದಕ್ಕೆ ಇನ್ನೊಂದು ಅಡಿಯ್ಡು ಹಿಂಸಾಚಾರಕ್ಕೆ ನಮ್ಮನ್ನು ಅನಾವಶ್ಯಕವಾಗಿ ಒಡ್ಡಿಕೊಳ್ಳುವುದರಿಂದ ಫಲಿಸಬಹುದು. ಹಿಂಸಾಚಾರವನ್ನು ಪ್ರಧಾನವಾಗಿ ತೋರಿಸುವ ಕ್ರೀಡೆಗಳು ಮತ್ತು ಮನೋರಂಜನೆಗಳು ರಕ್ತದಾಹವನ್ನು ಪ್ರವರ್ಧಿಸುತ್ತವೆ. ಬೈಬಲ್ ಸಮಯಗಳಲ್ಲಿ, ರೋಮನ್ ಸಾಮ್ರಾಜ್ಯದ ಆಖಾಡಗಳಲ್ಲಿ ವಿಧರ್ಮಿಗಳು ಖಡ್ಗಮಲ್ಲರ ಪಂದ್ಯಾಟಗಳನ್ನು ಮತ್ತು ಮಾನವ ಚಿತ್ರಹಿಂಸೆಯ ಇತರ ವಿಧಗಳನ್ನು ನಿಯತಕ್ರಮದಲ್ಲಿ ವೀಕ್ಷಿಸುತ್ತಿದ್ದರು. ಅಂತಹ ಮನೋರಂಜನೆ, ಒಬ್ಬ ಇತಿಹಾಸಕಾರನಿಗನುಸಾರ, “ಮೃಗಗಳಿಂದ ಮಾನವರನ್ನು ಪ್ರತ್ಯೇಕಿಸುವ ಕಷ್ಟಾನುಭವಕ್ಕಾಗಿರುವ ಅನುಕಂಪದ ಅನಿಸಿಕೆಗಳನ್ನು ನಾಶಗೊಳಿಸಿತು.” ಇಂದಿನ ಆಧುನಿಕ ಲೋಕದ ಮನೋರಂಜನೆಯಲ್ಲಿ ಹೆಚ್ಚಿನದ್ದು ತದ್ರೀತಿಯ ಪರಿಣಾಮವುಳ್ಳದ್ದಾಗಿದೆ. ಕೋಮಲವಾಗಿ ಕನಿಕರಿಸಲು ಪ್ರಯತ್ನಿಸುವ ಕ್ರೈಸ್ತರು ವಾಚನದ ವಿಷಯಗಳ, ಚಲನ ಚಿತ್ರಗಳ, ಮತ್ತು ಟೀವೀ ಕಾರ್ಯಕ್ರಮಗಳ ಅವರ ಆರಿಸುವಿಕೆಯಲ್ಲಿ ವಿಶೇಷವಾಗಿ ಉತ್ಕೃಷ್ಟವಾದುದನ್ನು ಆಯ್ಕೆಮಾಡುವ ಅಗತ್ಯವಿದೆ. ವಿವೇಕಯುಕ್ತವಾಗಿ ಅವರು ಕೀರ್ತನೆ 11:5ರ (NW) ಮಾತುಗಳನ್ನು ನೆನಪಿನಲ್ಲಿಡುತ್ತಾರೆ: “ಹಿಂಸಾಚಾರವನ್ನು ಪ್ರೀತಿಸುವ ಯಾವನನ್ನೂ [ಯೆಹೋವನು] ಖಂಡಿತವಾಗಿಯೂ ದ್ವೇಷಿಸುತ್ತಾನೆ.”
15. (ಎ) ಗಂಭೀರವಾದ ಕನಿಕರದ ಕೊರತೆಯನ್ನು ವ್ಯಕ್ತಿಯೊಬ್ಬನು ಹೇಗೆ ತೋರ್ಪಡಿಸಬಹುದು? (ಬಿ) ಸಹ ವಿಶ್ವಾಸಿಗಳ ಮತ್ತು ನೆರೆಯವರ ಆವಶ್ಯಕತೆಗಳಿಗೆ ನಿಜ ಕ್ರೈಸ್ತರು ಹೇಗೆ ಪ್ರತಿವರ್ತಿಸುವರು?
15 ಒಬ್ಬ ಸ್ವಹಿತಾಸಕ್ತಿಯುಳ್ಳ ವ್ಯಕ್ತಿಯು ಸಹ ಕನಿಕರದ ಕೊರತೆಯುಳ್ಳವನಾಗಿರುವ ಸಂಭಾವ್ಯತೆಯು ಇದೆ. ಅಪೊಸ್ತಲ ಯೋಹಾನನು ವಿವರಿಸಿದಂತೆ, ಇದು ಗಂಭೀರವಾಗಿದೆ: “ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ?” (1 ಯೋಹಾನ 3:17) ಯೇಸುವಿನ ನೆರೆಹೊರೆಭಾವದ ಸಮಾರ್ಯನ ಉದಾಹರಣೆಯಲ್ಲಿ, ತದ್ರೀತಿ ಕನಿಕರದ ಕೊರತೆಯು ಸ್ವನೀತಿಯ ಯಾಜಕನಿಂದ ಮತ್ತು ಲೇವ್ಯನಿಂದ ತೋರಿಸಲಾಗಿತ್ತು. ತಮ್ಮ ಅರೆಸತ್ತ ಯೆಹೂದಿ ಸಹೋದರನ ದುರವಸ್ಥೆಯನ್ನು ನೋಡಿದ ಮೇಲೆ ಅವರು ರಸ್ತೆಯ ಆಚೇಪಕ್ಕಕ್ಕೆ ದಾಟಿ, ತಮ್ಮ ದಾರಿಗಳಲ್ಲಿ ಮುಂದುವರಿದರು. (ಲೂಕ 10:31, 32) ವ್ಯತಿರಿಕ್ತವಾಗಿ, ಕನಿಕರಿಸುವ ಕ್ರೈಸ್ತರು ತಮ್ಮ ಸಹೋದರರ ಭೌತಿಕ ಮತ್ತು ಆತ್ಮಿಕ ಆವಶ್ಯಕತೆಗಳಿಗೆ ಬಲುಬೇಗನೆ ಪ್ರತಿವರ್ತಿಸುವರು. ಮತ್ತು ಯೇಸುವಿನ ಉದಾಹರಣೆಯ ಸಮಾರ್ಯದವನಂತೆ, ಅವರು ಅಪರಿಚಿತರ ಜರೂರತೆಗಳ ಕುರಿತು ಸಹ ಪರಿಗಣನೆಯುಳ್ಳವರಾಗಿದ್ದಾರೆ. ಹೀಗೆ ಶಿಷ್ಯರನ್ನಾಗಿ ಮಾಡುವ ಕಾರ್ಯವನ್ನು ಅಭಿವೃದ್ಧಿಗೊಳಿಸಲು ಅವರು ತಮ್ಮ ಸಮಯ, ಶಕ್ತಿ, ಮತ್ತು ಸಂಪತ್ಸಾಧನಗಳನ್ನು ಸಂತೋಷದಿಂದ ಕೊಡುತ್ತಾರೆ. ಈ ರೀತಿಯಲ್ಲಿ ಅವರು ಲಕ್ಷಾಂತರ ಮಂದಿಯ ರಕ್ಷಣೆಗೆ ನೆರವು ನೀಡುತ್ತಾರೆ.—1 ತಿಮೊಥೆಯ 4:16.
ರೋಗಿಗಳಿಗೆ ಕನಿಕರ
16. ಅಸ್ವಸ್ಥದ ಪ್ರಸಂಗಗಳೊಂದಿಗೆ ವ್ಯವಹರಿಸುವಲ್ಲಿ ಯಾವ ಮಿತಿಗಳನ್ನು ನಾವು ಎದುರಿಸುತ್ತೇವೆ?
16 ಅನಾರೋಗ್ಯವು ಅಪರಿಪೂರ್ಣ, ಸಾಯುವ ಮಾನವಕುಲದ ಪ್ರಾಪ್ತಿಯಾಗಿದೆ. ಕ್ರೈಸ್ತರು ಇದಕ್ಕೆ ಅಪವಾದವೇನೂ ಅಲ್ಲ, ಮತ್ತು ಅವರಲ್ಲಿ ಅನೇಕರು ವೈದ್ಯಕೀಯ ತಜ್ಞರಲ್ಲ, ಯಾ ಕ್ರಿಸ್ತನಿಂದ ಮತ್ತು ಆತನ ಅಪೊಸ್ತಲರಿಂದ ಅದ್ಭುತಗಳನ್ನು ನಡಿಸುವಂತಹ ಶಕ್ತಿಯನ್ನು ಪಡೆದ ಕೆಲವು ಆರಂಭದ ಕ್ರೈಸ್ತರೋಪಾದಿ ಅವರು ಅದ್ಭುತಗಳನ್ನು ನಡಿಸಶಕ್ತರಲ್ಲ. ಕ್ರಿಸ್ತನ ಅಪೊಸ್ತಲರ ಮತ್ತು ಅವರ ನಿಕಟ ಸಂಗಾತಿಗಳ ಮರಣದೊಂದಿಗೆ ಅಂತಹ ಅದ್ಭುತಕರ ಶಕ್ತಿ ಗತಿಸಿಹೋಯಿತು. ಆದಕಾರಣ, ಮಿದುಳಿನ ಅಪಸಾಮಾನ್ಯ ಕ್ರಿಯೆ ಮತ್ತು ಮನೋವಿಕಲ್ಪದ ಸಹಿತ ಶಾರೀರಿಕ ಅನಾರೋಗ್ಯದಿಂದ ಬಳಲುವವರಿಗೆ ಸಹಾಯ ನೀಡುವ ನಮ್ಮ ಸಾಮರ್ಥ್ಯವು ಸೀಮಿತವಾಗಿದೆ.—ಅ. ಕೃತ್ಯಗಳು 8:13, 18; 1 ಕೊರಿಂಥ 13:8.
17. ಅಸ್ವಸ್ಥ ಮತ್ತು ವಿಯೋಗಿತ ಮನುಷ್ಯನಾದ ಯೋಬನನ್ನು ಉಪಚರಿಸಿದ ರೀತಿಯಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
17 ಆಗಾಗ್ಗೆ ಅಸ್ವಸ್ಥತೆಯೊಂದಿಗೆ ಖಿನ್ನತೆಯು ಸೇರಿಕೊಂಡಿರುತ್ತದೆ. ಉದಾಹರಣೆಗೆ ಸೈತಾನನು ಅವನ ಮೇಲೆ ತಂದ ಕಠಿಣವಾದ ಅನಾರೋಗ್ಯ ಮತ್ತು ವಿಪತ್ತುಗಳ ಕಾರಣದಿಂದ ದೇವಭೀರು ಯೋಬನು ಅತಿಯಾಗಿ ಖಿನ್ನನಾಗಿದ್ದನು. (ಯೋಬ 1:18, 19; 2:7; 3:3, 11-13) ಕೋಮಲ ಕನಿಕರದೊಂದಿಗೆ ಅವನನ್ನು ಉಪಚರಿಸುವ ಮತ್ತು ‘ದುಃಖಶಮನವಾಗುವಂತೆ ಮಾತಾಡುವ’ ಸ್ನೇಹಿತರು ಅವನಿಗೆ ಬೇಕಾಗಿದ್ದರು. (1 ಥೆಸಲೊನೀಕ 5:14) ಬದಲಾಗಿ, ಸಂತೈಸುವವರೆಂದು ಹೇಳಿಕೊಳ್ಳುವ ಮೂವರು ಅವನನ್ನು ಸಂದರ್ಶಿಸಿದರು ಮತ್ತು ಅವಸರದಿಂದ ತಪ್ಪಾದ ನಿರ್ಣಯಗಳನ್ನು ಮಾಡಿದರು. ಯೋಬನ ವಿಪತ್ತುಗಳು ಅವನ ಯಾವುದೋ ಸ್ವಂತ ದೋಷದ ಕಾರಣದಿಂದ ಎಂದು ಸೂಚಿಸುವುದರ ಮೂಲಕ ಅವರು ಅವನ ಖಿನ್ನತೆಯ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದರು. ಕೋಮಲವಾಗಿ ಕನಿಕರಿಸುವವರಾಗಿರುವ ಮೂಲಕ, ಸಹ ವಿಶ್ವಾಸಿಗಳು ಅಸ್ವಸ್ಥರಾದಾಗ ಯಾ ಖಿನ್ನರಾದಾಗ, ಕ್ರೈಸ್ತರು ತದ್ರೀತಿಯ ಪಾಶದೊಳಗೆ ಬೀಳುವುದನ್ನು ಹೋಗಲಾಡಿಸುತ್ತಾರೆ. ಕೆಲವೊಮ್ಮೆ, ಮುಖ್ಯ ಸಂಗತಿಯು ಅನುಕಂಪದ ಕಿವಿಯಿಂದ ಆಲಿಸುವ, ತಿಳಿವಳಿಕೆಯನ್ನು ತೋರಿಸುವ, ಮತ್ತು ಪ್ರೀತಿಯ ಶಾಸ್ತ್ರೀಯ ಹಿತೋಕ್ತಿಗಳನ್ನು ಒದಗಿಸುವ ಹಿರಿಯರಿಂದ ಯಾ ಇತರ ಪ್ರೌಢ ಕ್ರೈಸ್ತರಿಂದ ಕೆಲವು ದಯಾಪೂರಿತ ಭೇಟಿಗಳು ಮಾತ್ರ ಅಂತಹವರಿಗೆ ಬೇಕಾಗುತ್ತವೆ.—ರೋಮಾಪುರ 12:15; ಯಾಕೋಬ 1:19.
ಬಲಹೀನರಿಗಾಗಿ ಕನಿಕರ
18, 19. (ಎ) ಬಲಹೀನರೊಂದಿಗೆ ಯಾ ತಪ್ಪಿತಸ್ಥರೊಂದಿಗೆ ಹಿರಿಯರು ಹೇಗೆ ವ್ಯವಹರಿಸತಕ್ಕದ್ದು? (ಬಿ) ನ್ಯಾಯನಿರ್ಣಾಯಕ ಕಮಿಟಿಯನ್ನು ರಚಿಸುವ ಆವಶ್ಯಕತೆಯಿದ್ದರೂ, ಕೋಮಲ ಕನಿಕರದೊಂದಿಗೆ ತಪ್ಪಿತಸ್ಥರನ್ನು ಹಿರಿಯರು ಉಪಚರಿಸುವುದು ಯಾಕೆ ಪ್ರಾಮುಖ್ಯವಾಗಿದೆ?
18 ಹಿರಿಯರು ವಿಶೇಷವಾಗಿ ಕೋಮಲವಾಗಿ ಕನಿಕರಿಸುವವರಾಗಿರಬೇಕು. (ಅ. ಕೃತ್ಯಗಳು 20:29, 35) “ದೃಢವಾದ ನಂಬಿಕೆಯುಳ್ಳ ನಾವು . . . ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು,” ಎಂದು ಬೈಬಲು ಆಜ್ಞಾಪಿಸುತ್ತದೆ. (ರೋಮಾಪುರ 15:1) ಅಪರಿಪೂರ್ಣರಾಗಿರುವುದರಿಂದ, ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. (ಯಾಕೋಬ 3:2) ‘ಯಾವುದಾದರೂ ತಪ್ಪು ಹೆಜ್ಜೆಯನ್ನು ಅವನಿಗೆ ಅದು ತಿಳಿಯುವ ಮೊದಲೇ ತೆಗೆದುಕೊಳ್ಳುವ’ ಒಬ್ಬನೊಡನೆ ವ್ಯವಹರಿಸುವಾಗ ಕೋಮಲತೆಯು ಆವಶ್ಯಕವಾಗಿದೆ. (ಗಲಾತ್ಯ 6:1, NW) ದೇವರ ವಾಕ್ಯದ ತಮ್ಮ ಅಯುಕ್ತ ಅನ್ವಯದಲ್ಲಿ ಸ್ವನೀತಿಯ ಫರಿಸಾಯರಂತೆ ಆಗಲು ಹಿರಿಯರು ಎಂದಿಗೂ ಆಶಿಸಕೂಡದು.
19 ವಿಪರ್ಯಸ್ತವಾಗಿ, ಕೋಮಲವಾಗಿ ಕನಿಕರಿಸುವ ಯೆಹೋವ ದೇವರ ಮತ್ತು ಯೇಸುಕ್ರಿಸ್ತನ ಮಾದರಿಗಳನ್ನು ಹಿರಿಯರು ಅನುಸರಿಸುವರು. ದೇವರ ಕುರಿಗಳನ್ನು ಪೋಷಿಸುವುದು, ಹುರಿದುಂಬಿಸುವುದು, ಮತ್ತು ನವಚೈತನ್ಯಗೊಳಿಸುವುದು ಅವರ ಮುಖ್ಯ ಕೆಲಸವಾಗಿದೆ. (ಯೆಶಾಯ 32:1, 2) ಬಹುಸಂಖ್ಯೆಯ ನಿಯಮಗಳಿಂದ ವಿಷಯಗಳನ್ನು ನಿಯಂತ್ರಿಸಲು ಪ್ರಯತ್ನಿಸುವ ಬದಲು, ಅವರು ಬೆಂಬಲಕ್ಕಾಗಿ ದೇವರ ವಾಕ್ಯದ ಉತ್ತಮವಾದ ತತ್ವಗಳನ್ನು ಸೂಚಿಸುತ್ತಾರೆ. ಆದಕಾರಣ, ಹಿರಿಯರ ಕಾರ್ಯನಿರ್ವಹಣೆಯು ಆತ್ಮೋನ್ನತಿಮಾಡುವುದು, ಅವರ ಸಹೋದರರ ಹೃದಯದಲ್ಲಿ ಯೆಹೋವನ ಒಳ್ಳೇತನಕ್ಕಾಗಿ ಆನಂದವನ್ನು ಮತ್ತು ಗಣ್ಯತೆಯನ್ನು ತರುವುದು ಆಗಿದೆ. ಸಹ ವಿಶ್ವಾಸಿಯೊಬ್ಬನು ಯಾವುದೋ ಒಂದು ಚಿಕ್ಕ ತಪ್ಪನ್ನು ಮಾಡಿದರೆ, ಹಿರಿಯನೊಬ್ಬನು ಇತರರಿಗೆ ಕೇಳಿಸುವಂತಹ ರೀತಿಯಲ್ಲಿ ಅವನನ್ನು ಸರಿಪಡಿಸುವುದನ್ನು ಸಾಮಾನ್ಯವಾಗಿ ಹೋಗಲಾಡಿಸುತ್ತಾನೆ. ಒಂದು ವೇಳೆ ಮಾತಾಡುವುದು ಆವಶ್ಯಕವಾಗಿದ್ದರೆ, ಹಿರಿಯನು ಅವನನ್ನು ಪಕ್ಕಕ್ಕೆ ಕೊಂಡೊಯ್ಯುವಂತೆ ಮತ್ತು ಇತರರ ಕೇಳುದೂರದಿಂದ ಸಮಸ್ಯೆಯನ್ನು ಚರ್ಚಿಸುವಂತೆ ಕನಿಕರದ ಕೋಮಲ ಭಾವನೆಗಳು ಪ್ರೇರಿಸುತ್ತವೆ. (ಹೋಲಿಸಿರಿ ಮತ್ತಾಯ 18:15.) ಹೊಂದಿಕೊಂಡು ಹೋಗಲು ಒಬ್ಬನು ಎಷ್ಟೇ ಕಷ್ಟಕರದವನಾಗಿದ್ದರೂ, ಹಿರಿಯನ ಸಮೀಪಿಸುವಿಕೆಯು ತಾಳ್ಮೆಯದ್ದು, ಮತ್ತು ಸಹಾಯಕಾರಿಯದ್ದು ಆಗಿರತಕ್ಕದ್ದು. ಸಭೆಯಿಂದ ಅಂಥವನೊಬ್ಬನನ್ನು ಹೊರದಬ್ಬಲು ನೆವನಗಳನ್ನು ಹುಡುಕಲು ಅವನೆಂದಿಗೂ ಬಯಸಬಾರದು. ಒಂದು ನ್ಯಾಯನಿರ್ಣಾಯಕ ಕಮಿಟಿಯನ್ನು ರಚಿಸುವ ಆವಶ್ಯವಿದ್ದರೂ, ಗಂಭೀರವಾದ ಅಪರಾಧದಲ್ಲಿ ಒಳಗೂಡಿರುವ ವ್ಯಕ್ತಿಯೊಂದಿಗೆ ವ್ಯವಹರಿಸುವಾಗ ಕೋಮಲ ಕನಿಕರವನ್ನು ಹಿರಿಯರು ತೋರಿಸತಕ್ಕದ್ದು. ಅವರ ಮೃದು ಸ್ವಭಾವವು ಆತನು ಪಶ್ಚಾತ್ತಾಪಕ್ಕೆ ತರಲ್ಪಡುವಂತೆ ಸಹಾಯಿಸಬಹುದು.—2 ತಿಮೊಥೆಯ 2:24-26.
20. ಕನಿಕರದ ಭಾವನಾತ್ಮಕ ವ್ಯಕ್ತಪಡಿಸುವಿಕೆಗಳು ಯಾವಾಗ ಅಯುಕ್ತವಾಗಿವೆ, ಮತ್ತು ಏಕೆ?
20 ಆದಾಗ್ಯೂ, ಯೆಹೋವನ ಸೇವಕನೊಬ್ಬನು ಕನಿಕರವನ್ನು ತೋರಿಸಸಾಧ್ಯವಿರದ ಸಮಯಗಳು ಇವೆ. (ಹೋಲಿಸಿರಿ ಧರ್ಮೋಪದೇಶಕಾಂಡ 13:6-9.) ಬಹಿಷ್ಕರಿಸಲ್ಪಟ್ಟ ಆಪ್ತ ಸ್ನೇಹಿತನೊಂದಿಗೆ ಯಾ ಸಂಬಂಧಿಕನೊಂದಿಗೆ “ಸಹವಾಸಮಾಡುವದನ್ನು ಬಿಟ್ಟುಬಿಡುವುದು” ಕ್ರೈಸ್ತನೊಬ್ಬನಿಗೆ ನಿಜವಾದ ಒಂದು ಪರೀಕೆಯ್ಷಾಗಿರಬಲ್ಲದು. ಅಂತಹ ವಿದ್ಯಮಾನದಲ್ಲಿ, ಕರುಣೆಯ ಭಾವನೆಗಳಿಗೆ ಒಬ್ಬನು ವಶವಾಗದೆ ಇರುವುದು ಪ್ರಾಮುಖ್ಯವಾಗಿದೆ. (1 ಕೊರಿಂಥ 5:11-13) ಅಂತಹ ದೃಢತೆಯು ತಪ್ಪಿತಸ್ಥನಿಗೆ ಪಶ್ಚಾತ್ತಾಪ ಪಡಲು ಕೂಡ ಪ್ರೋತ್ಸಾಹಿಸಬಹುದು. ಇನ್ನೂ ಹೆಚ್ಚಾಗಿ, ವಿರುದ್ಧ ಲಿಂಗದವರೊಂದಿಗೆ ವ್ಯವಹರಿಸುವಾಗ, ಕ್ರೈಸ್ತರು ಲೈಂಗಿಕ ಅನೈತಿಕತೆಗೆ ನಡಿಸಸಾಧ್ಯವಿರುವ ಕನಿಕರದ ಅಸಮಂಜಸ ಪ್ರದರ್ಶನಗಳನ್ನು ಹೋಗಲಾಡಿಸತಕ್ಕದ್ದು.
21. ಇತರ ಯಾವ ಕ್ಷೇತ್ರಗಳಲ್ಲಿ ಕೋಮಲ ಕನಿಕರವನ್ನು ನಾವು ತೋರಿಸುವ ಆವಶ್ಯಕತೆಯಿದೆ, ಮತ್ತು ಅದರಿಂದಾಗುವ ಪ್ರಯೋಜನಗಳು ಯಾವುವು?
21 ಕೋಮಲ ಕನಿಕರವು ಆವಶ್ಯಕವಾಗಿರುವ ಇತರ ಅನೇಕ ಕ್ಷೇತ್ರಗಳನ್ನೆಲ್ಲಾ—ಪ್ರಾಯಸಂದವರೊಂದಿಗೆ, ವಿಯೋಗಿಗಳೊಂದಿಗೆ, ಅವಿಶ್ವಾಸಿ ಸಂಗಾತಿಗಳಿಂದ ಹಿಂಸೆಯನ್ನು ಅನುಭವಿಸುತ್ತಿರುವವರೊಂದಿಗೆ ವ್ಯವಹರಿಸುವಾಗ—ಚರ್ಚಿಸಲು ಸ್ಥಳವು ಅನುಮತಿಸುವುದಿಲ್ಲ. ಶ್ರಮಪಟ್ಟು ಕೆಲಸಮಾಡುವ ಹಿರಿಯರನ್ನು ಸಹ ಕೋಮಲ ಕನಿಕರದಿಂದ ಸತ್ಕರಿಸತಕ್ಕದ್ದು. (1 ತಿಮೊಥೆಯ 5:17) ಅವರನ್ನು ಸನ್ಮಾನಿಸಿರಿ ಮತ್ತು ಅವರಿಗೆ ಬೆಂಬಲವನ್ನು ನೀಡಿರಿ. (ಇಬ್ರಿಯ 13:7, 17) “ನೀವೆಲ್ಲರೂ . . . ಕೋಮಲವಾಗಿ ಕನಿಕರಿಸುವವವರಾಗಿರಿ,” ಎಂದು ಬರೆದನು ಅಪೊಸ್ತಲ ಪೇತ್ರನು. (1 ಪೇತ್ರ 3:8) ಅದು ಜರೂರಿಯಿರುವ ಎಲ್ಲಾ ಸನ್ನಿವೇಶಗಳಲ್ಲಿ ಈ ರೀತಿಯಲ್ಲಿ ವರ್ತಿಸುವುದರ ಮೂಲಕ, ಸಭೆಯಲ್ಲಿ ಐಕಮತ್ಯ ಮತ್ತು ಸಂತೋಷವನ್ನು ನಾವು ಪ್ರವರ್ಧಿಸುತ್ತೇವೆ ಮತ್ತು ಸತ್ಯಕ್ಕೆ ಹೊರಗಿನವರನ್ನು ಸೆಳೆಯುತ್ತೇವೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಈ ಮೂಲಕ ಕೋಮಲವಾಗಿ ಕನಿಕರಿಸುವ ಪಿತನಾದ ಯೆಹೋವನನ್ನು ಗೌರವಿಸುತ್ತೇವೆ.
ಪುನರ್ವಿಮರ್ಶೆಗೆ ಪ್ರಶ್ನೆಗಳು
◻ ಯೆಹೋವನು ಪಾಪಿ ಮಾನವಕುಲಕ್ಕೆ ಕನಿಕರವನ್ನು ಹೇಗೆ ತೋರಿಸುತ್ತಾನೆ?
◻ ಕೋಮಲವಾಗಿ ಕನಿಕರಿಸುವವರಾಗಿರುವುದು ಏಕೆ ಪ್ರಾಮುಖ್ಯವಾಗಿದೆ?
◻ ನಾವು ಕೋಮಲವಾಗಿ ಕನಿಕರಿಸುವವರಾಗಿರುವುದಕ್ಕೆ ಇರುವ ಕೆಲವು ಅಡಿಗ್ಡಳು ಯಾವುವು?
◻ ರೋಗಿಗಳನ್ನು ಮತ್ತು ಖಿನ್ನರಾಗಿರುವವರನ್ನು ನಾವು ಹೇಗೆ ಉಪಚರಿಸತಕ್ಕದ್ದು?
◻ ಯಾರು ವಿಶೇಷವಾಗಿ ಕೋಮಲವಾಗಿ ಕನಿಕರಿಸುವವರಾಗಿರುವ ಆವಶ್ಯಕತೆಯಿದೆ, ಮತ್ತು ಏಕೆ?
[ಪುಟ 19 ರಲ್ಲಿರುವ ಚೌಕ]
ಕನಿಕರವಿಲ್ಲದ ಫರಿಸಾಯರು
ವಿಶ್ರಾಂತಿಯ ಸಬ್ಬತ್ ದಿನವು ದೇವ ಜನರಿಗೆ ಆತ್ಮಿಕ ಮತ್ತು ಶಾರೀರಿಕ ಆಶೀರ್ವಾದದ ಅರ್ಥದಲ್ಲಿರಬೇಕಾಗಿತ್ತು. ಆದಾಗ್ಯೂ, ಯೆಹೂದಿ ಧಾರ್ಮಿಕ ನಾಯಕರು ದೇವರ ಸಬ್ಬತ್ ನಿಯಮವನ್ನು ಅಗೌರವಿಸುವ ಮತ್ತು ಅದನ್ನು ಜನರಿಗೆ ಹೊರೆಯನ್ನಾಗಿ ಮಾಡುವ ಅನೇಕ ಕಾನೂನುಗಳನ್ನು ಮಾಡಿದರು. ಉದಾಹರಣೆಗೆ, ಯಾರಾದರೂ ಅಪಘಾತಕ್ಕೊಳಗಾದರೆ ಯಾ ಅಸ್ವಸ್ಥತೆಯಿಂದ ಕಷ್ಟಪಡುವುದಾದರೆ, ಅವನ ಜೀವವು ಅಪಾಯದಲ್ಲಿರದ ಹೊರತು ಸಬ್ಬತ್ ದಿನದಲ್ಲಿ ಅವನು ಯಾವುದೇ ಸಹಾಯವನ್ನು ಪಡೆಯಸಾಧ್ಯವಿರಲಿಲ್ಲ.
ಫರಿಸಾಯರ ಒಂದು ಪರಂಪರೆಯು ಸಬ್ಬತ್ ನಿಯಮದ ಅರ್ಥನಿರೂಪಣೆಯಲ್ಲಿ ಎಷ್ಟು ಕಟ್ಟುನಿಟ್ಟಿನವರಾಗಿದ್ದರೆಂದರೆ ಅದು ಹೇಳಿದ್ದು: “ಸಬ್ಬತ್ ದಿನದಲ್ಲಿ ಶೋಕಿಸುವವರನ್ನು ಒಬ್ಬನು ಸಂತೈಸುವುದಿಲ್ಲ, ಇಲ್ಲವೆ ರೋಗಿಗಳನ್ನು ಸಂದರ್ಶಿಸುವುದಿಲ್ಲ.” ಇತರ ಧಾರ್ಮಿಕ ನಾಯಕರು ಸಬ್ಬತ್ ದಿನದಲ್ಲಿ ಅಂತಹ ಭೇಟಿಗಳನ್ನು ಅನುಮತಿಸಿದರಾದರೂ ಈ ಷರತ್ತು ಹಾಕಿದರು: “ಕಣ್ಣೀರು ನಿಷೇಧಿಸಲ್ಪಟ್ಟಿದೆ.”
ಹೀಗೆ, ನ್ಯಾಯ, ಪ್ರೀತಿ, ಮತ್ತು ಕರುಣೆಯಂತಹ ನಿಯಮಶಾಸ್ತ್ರದ ಹೆಚ್ಚು ಪ್ರಾಮುಖ್ಯ ಆವಶ್ಯಕತೆಗಳನ್ನು ಕಡೆಗಣಿಸಿದಕ್ಕಾಗಿ ಯೇಸುವು ಯೋಗ್ಯವಾಗಿ ಯೆಹೂದಿ ಧಾರ್ಮಿಕ ನಾಯಕರನ್ನು ಖಂಡಿಸಿದನು. ಫರಿಸಾಯರಿಗೆ ಅವನು ಹೀಗಂದದರ್ದಲ್ಲಿ ಸೋಜಿಗವೇನೂ ಇಲ್ಲ: ‘ನೀವು . . . ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ.’—ಮಾರ್ಕ 7:8, 13; ಮತ್ತಾಯ 23:23; ಲೂಕ 11:42.
[ಪುಟ 17 ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳು 231 ದೇಶಗಳಲ್ಲಿ ಜನರ ಮನೆಗಳಲ್ಲಿ, ರಸ್ತೆಗಳಲ್ಲಿ, ಸೆರೆಮನೆಗಳಲ್ಲೂ ಕೂಡ ಕನಿಕರದ ಅಭೂತಪೂರ್ವ ಕಾರ್ಯವನ್ನು ನಡೆಸುತ್ತಿದ್ದಾರೆ
[ಪುಟ 18 ರಲ್ಲಿರುವ ಚಿತ್ರ]
ಟೀವೀ ಪ್ರೇಕ್ಷಣದಲ್ಲಿ ಆಗುವಂತೆ ಹಿಂಸಾಚಾರಕ್ಕೆ ಒಡ್ಡಿಕೊಳ್ಳುವುದು ಕೋಮಲ ಕನಿಕರವನ್ನು ಶಿಥಿಲಗೊಳಿಸುತ್ತದೆ