20 ನೆಯ ಶತಮಾನದಲ್ಲಿ ದೇವರ ನಿರಾಕರಣೆ
“ಜನರು ದೇವರ ಅನುಪಸ್ಥಿತಿಯ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಮತ್ತು ದೇವರನ್ನು ಪರಿಗಣಿಸದೆ ತಮ್ಮ ಜೀವಿತಗಳನ್ನು ಒಳ್ಳೇದಕ್ಕಾಗಲಿ ಯಾ ಕೆಟ್ಟದಕ್ಕಾಗಲಿ ಸ್ವತಂತ್ರವಾಗಿ ಸಂಘಟಿಸುತ್ತಿದ್ದಾರೆ.”—ವನ್ ಹಂಡ್ರೆಡ್ ಯಿಯರ್ಸ್ ಆಫ್ ಡಿಬೇಟ್ ಓವರ್ ಗಾಡ್—ದ ಸೋರ್ಸ್ಸ್ ಆಫ್ ಮಾಡರ್ನ್ ಏತಿಇಸಮ್.
ಅದು ಮೊದಲು ಮನತಟ್ಟುವುದಾದರೂ, ಎತ್ತರವಾದ ಮರವೊಂದು ಕಟ್ಟಕಡೆಗೆ ಮಾಮೂಲಿಯದ್ದಾಗಿ ಎಣಿಸಲ್ಪಡುತ್ತದೆ. ಅದರ ಇರುವು ಹೆಚ್ಚು ಪರಿಚಿತವಾಗುತ್ತದೆ; ಅದರ ಎತ್ತರವು ಇನ್ನು ಮುಂದೆ ವಿಸ್ಮಯ ಹುಟ್ಟಿಸುವದಿಲ್ಲ.
ನಾಸ್ತಿಕತೆಯೊಂದಿಗೂ ಇದು ತದ್ರೀತಿಯಾಗಿರುತ್ತದೆ. 19 ನೆಯ ಶತಮಾನದಲ್ಲಿ ಅದು ತುಂಬ ವಾಗ್ವಾದವನ್ನು ಕೆರಳಿಸಿದರೂ, ಇಂದು ದೇವರ ಅಸ್ತಿತ್ವದ ನಿರಾಕರಣೆಯು ತಲ್ಲಣಗೊಳಿಸುವಂಥದ್ದೂ ಅಥವಾ ಕ್ಷೋಭೆಗೊಳಿಸುವಂಥದ್ದೂ ಆಗಿರುವದಿಲ್ಲ. ಸಹಿಷ್ಣುತೆಯ ಒಂದು ಯುಗವು, ನಾಸ್ತಿಕತ್ವವನ್ನು ದೇವರಲ್ಲಿ ನಂಬಿಕೆಯೊಂದಿಗೆ ಶಾಂತಿಯುಕ್ತ ಸಹಬಾಳೆಯ್ವೊಳಗೆ ನೆಲೆಸುವಂತೆ ಅನುಮತಿಸಿದೆ.
ಹೆಚ್ಚಿನ ಜನರು ದೇವರನ್ನು ಬಹಿರಂಗವಾಗಿ ನಿರಾಕರಿಸುತ್ತಾರೆ ಎಂದು ಇದರ ಅರ್ಥವಲ್ಲ; ವ್ಯತಿರಿಕ್ತವಾಗಿ, 2 ಶೇಕಡಕ್ಕಿಂತ ಸ್ವಲ್ಪ ಹೆಚ್ಚು ಜನರು ನಾಸ್ತಿಕರೆಂದು ಹೇಳಿಕೊಳ್ಳುತ್ತಾರೆಂದು ಅಮೆರಿಕ, ಯೂರೋಪ್, ಮತ್ತು ಏಷಿಯಾದಲ್ಲೆಲ್ಲಾ ಇರುವ 11 ದೇಶಗಳ ಮತದ ಫಲಿತಾಂಶಗಳು ಪ್ರಕಟಿಸುತ್ತವೆ. ಆದರೂ, ಒಂದು ನಾಸ್ತಿಕ ಆತ್ಮವು ಚಾಲ್ತಿಯಲ್ಲಿದೆ—ದೇವರು ಅಸ್ತಿತ್ವದಲ್ಲಿದ್ದಾನೆ ಎಂದು ನಂಬುವ ಅನೇಕರ ಮಧ್ಯೆಯೂ. ಇದು ಹೇಗಾಗಬಲ್ಲದು?
ದೇವರ ಅಧಿಕಾರವನ್ನು ನಿರಾಕರಿಸುವುದು
“ಕೆಲವೊಮ್ಮೆ ನಾಸ್ತಿಕತೆಯು ಕೇವಲ ಪ್ರಾಯೋಗಿಕವಾದ ದೇವರ ತ್ಯಜಿಸುವಿಕೆ ಅಥವಾ ಅಲಕ್ಷಿಸುವಿಕೆಗೆ ಸೂಚಿಸುತ್ತದೆ,” ಎಂದು ಗಮನಿಸುತ್ತದೆ ದಿ ಎನ್ಸೈಕ್ಲೊಪೀಡಿಯ ಅಮೆರಿಕಾನಾ. ಈ ಕಾರಣಕ್ಕಾಗಿ, ದ ನ್ಯೂ ಷಾರ್ಟರ್ ಆಕ್ಸಫರ್ಡ್ ಇಂಗ್ಲಿಷ್ ಡಿಕ್ಷನರಿ “ನಾಸ್ತಿಕ” ಎಂಬ ಪದಕ್ಕೆ ಈ ಮುಂದಿನ ಎರಡನೆ ಅರ್ಥವನ್ನು ಕೊಡುತ್ತದೆ: “ನೈತಿಕವಾಗಿ ದೇವರನ್ನು ನಿರಾಕರಿಸುವ ವ್ಯಕ್ತಿ; ಒಬ್ಬ ಅಧಾರ್ಮಿಕ ವ್ಯಕ್ತಿ.”—ಓರೆಅಕ್ಷರಗಳು ನಮ್ಮವು.
ಹೌದು, ನಾಸ್ತಿಕತೆಯು ದೇವರ ಅಸ್ತಿತ್ವದ ಅಥವಾ ಅವನ ಅಧಿಕಾರದ, ಇಲ್ಲವೇ ಎರಡೂ ವಿಷಯಗಳ ನಿರಾಕರಣೆಯನ್ನು ಒಳಗೂಡಬಹುದು. ಬೈಬಲು ಈ ನಾಸ್ತಿಕ ಆತ್ಮವನ್ನು ತೀತ 1:16 ರಲ್ಲಿ ಪ್ರಸ್ತಾಪಿಸುತ್ತದೆ: “ದೇವರನ್ನು ಅಂಗೀಕರಿಸುತ್ತೇವೆಂದು ಅವರು ಹೇಳಿಕೊಳ್ಳುತ್ತಾರೆ, ಆದರೆ ತಮ್ಮ ಕಾರ್ಯಗಳಿಂದ ಅವನನ್ನು ನಿರಾಕರಿಸುತ್ತಾರೆ.”—ದ ನ್ಯೂ ಇಂಗ್ಲಿಷ್ ಬೈಬಲ್; ಕೀರ್ತನೆ 14:1ನ್ನು ಹೋಲಿಸಿರಿ.
ದೇವರ ಅಧಿಕಾರದ ಅಂಥ ನಿರಾಕರಣೆಯನ್ನು ಮೊದಲ ಮಾನವ ಜೋಡಿಗೆ ಪತ್ತೆಬಚ್ಚಬಹುದು. ಹವ್ವಳು ದೇವರ ಅಸ್ತಿತ್ವವನ್ನು ಅಂಗೀಕರಿಸಿದಳು; ಆದರೂ, ಅವಳು “ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವ”ಳಾಗಿರಲು ಬಯಸಿದಳು. ಅವಳು ‘ತನ್ನ ಸ್ವಂತ ಮಾಲಿಕಳು’ ಆಗಿರಬಲ್ಲಳು ಮತ್ತು ಅವಳ ಸ್ವಂತ ನೈತಿಕ ನಿಯಮಾವಳಿಯನ್ನು ನಿರ್ಮಿಸಬಲ್ಲಳು ಎಂದು ಅದರ ಅರ್ಥವಾಗಿತ್ತು. ದೇವರ ಅಧಿಕಾರದ ಈ ನಿರಾಕರಣೆಯಲ್ಲಿ ಅನಂತರ ಆದಾಮನು ಹವ್ವಳೊಂದಿಗೆ ಜತೆಗೂಡಿದನು.—ಆದಿಕಾಂಡ 3:5, 6.
ಈ ರೀತಿಯ ಮನೋಭಾವವು ಇಂದು ಚಾಲ್ತಿಯಲ್ಲಿದೆಯೋ? ಹೌದು. ಸ್ವತಂತ್ರತೆಯ ಅನ್ವೇಷಣೆಯಲ್ಲಿ ಒಂದು ಕಪಟೋಪಾಯದ ನಾಸ್ತಿಕತೆಯು ತೋರಿಬರುತ್ತದೆ. “ಇಂದು ಜನರು ಇನ್ನು ಮುಂದೆ ದೇವರ ಕಣ್ಗಾವಲಿನ ಕೆಳಗೆ ಜೀವಿಸಲು ಆಶಿಸುವುದಿಲ್ಲ” ಎಂಬದಾಗಿ ವನ್ ಹಂಡ್ರೆಡ್ ಯಿಯರ್ಸ್ ಆಫ್ ಡಿಬೇಟ್ ಓವರ್ ಗಾಡ್—ದ ಸೋರ್ಸ್ಸ್ ಆಫ್ ಮಾಡರ್ನ್ ಏತಿಇಜಮ್ ಎಂಬ ಪುಸ್ತಕವು ಅವಲೋಕಿಸುತ್ತದೆ. “ಅವರು . . . ಸ್ವತಂತ್ರತೆಯಲ್ಲಿ ಜೀವಿಸಲು ಇಷ್ಟಪಡುತ್ತಾರೆ.” ಬೈಬಲಿನ ನೈತಿಕ ನಿಯಮಾವಳಿಯು ಕಾರ್ಯಸಾಧ್ಯವಲ್ಲದ್ದು ಮತ್ತು ಅವಾಸ್ತವಿಕವಾದದ್ದಾಗಿ ತೊರೆಯಲ್ಪಡುತ್ತದೆ. ಅನೇಕರ ಆಲೋಚನೆಯು ಹೆಚ್ಚಿನಾಂಶ, ಎದೆಗಾರಿಕೆಯಿಂದ ಹೀಗೆ ಘೋಷಿಸಿದ ಐಗುಪ್ತದ ಫರೋಹನಂತಿದೆ: “ಯೆಹೋವನೆಂಬವನು ಯಾರು? ನಾನು ಅವನ ಮಾತಿಗೆ ಯಾಕೆ ವಿಧೇಯನಾಗಬೇಕು? ಯೆಹೋವನು ಯಾರೋ ನನಗೆ ಗೊತ್ತಿಲ್ಲ.” ಅವನು ಯೆಹೋವನ ಅಧಿಕಾರವನ್ನು ನಿರಾಕರಿಸಿದನು.—ವಿಮೋಚನಕಾಂಡ 5:2.
ಕ್ರೈಸ್ತಪ್ರಪಂಚದಿಂದ ದೇವರ ನಿರಾಕರಣೆ
ದೇವರ ಅಧಿಕಾರದ ಅತ್ಯಂತ ತಲ್ಲಣಗೊಳಿಸುವ ನಿರಾಕರಣೆಯು ಬೈಬಲಿನ ಶುದ್ಧ ಸತ್ಯಗಳನ್ನು ಮಾನವನಿರ್ಮಿತ ಸಂಪ್ರದಾಯಗಳಿಂದ ಬದಲಿಯಾಗಿರಿಸಿರುವ ಕ್ರೈಸ್ತಪ್ರಪಂಚದ ವೈದಿಕ ವರ್ಗದವರಿಂದ ಬರುತ್ತದೆ. (ಮತ್ತಾಯ 15:9ನ್ನು ಹೋಲಿಸಿರಿ.) ಇದಕ್ಕೆ ಕೂಡಿಸಿ, ಅವರು 20 ನೆಯ ಶತಮಾನದ ಅತ್ಯಂತ ರಕ್ತಮಯವಾದ ಯುದ್ಧಗಳನ್ನು ಬೆಂಬಲಿಸಿದ್ದಾರೆ, ಹೀಗೆ ನಿಜವಾದ ಪ್ರೀತಿಯನ್ನು ಪ್ರದರ್ಶಿಸಬೇಕೆಂದು ಹೇಳುವ ಬೈಬಲಿನ ನಿಯಮವನ್ನು ತಿರಸ್ಕರಿಸಿದ್ದಾರೆ.—ಯೋಹಾನ 13:35.
ಮಕ್ಕಳಕಾಮಿಗಳು ಎಂದು ಆರೋಪಿಸಲ್ಪಟ್ಟಿರುವ ಪಾದ್ರಿಗಳ ವಿರುದ್ಧ ಮೊಕದ್ದಮೆಗಳ ನಿರಂತರವಾದ ಶ್ರೇಣಿಯಿಂದ ರುಜುವಾಗುವಂತೆ, ಪಾದ್ರಿವರ್ಗವು ದೇವರ ನೈತಿಕ ಮಟ್ಟಗಳನ್ನು ಪಾಲಿಸಲು ನಿರಾಕರಿಸುವದರಿಂದಲೂ ದೇವರನ್ನು ನಿರಾಕರಿಸಿದೆ. ಕ್ರೈಸ್ತಪ್ರಪಂಚದ ಪರಿಸ್ಥಿತಿಯು ಪುರಾತನ ಇಸ್ರಾಯೇಲ್ ಮತ್ತು ಯೆಹೂದವನ್ನು ಹೋಲುತ್ತದೆ. “ದೇಶವು ರಕ್ತಪೂರ್ಣವಾಗಿದೆ, ಪಟ್ಟಣವು ಅನ್ಯಾಯಭರಿತವಾಗಿದೆ; ಆ ವಂಶದವರು—ನಮ್ಮ ದೇಶವನ್ನು ಯೆಹೋವನು ಬಿಟ್ಟುಬಿಟ್ಟಿದ್ದಾನೆ, ಯೆಹೋವನು ನೋಡನು ಎಂಬದಾಗಿ ಮಾತಾಡಿಕೊಳ್ಳುತ್ತಿದ್ದಾರಲ್ಲಾ” ಎಂಬದಾಗಿ ಪ್ರವಾದಿಯಾದ ಯೆಹೆಜ್ಕೇಲನಿಗೆ ಹೇಳಲಾಯಿತು. (ಯೆಹೆಜ್ಕೇಲ 9:9; ಯೆಶಾಯ 29:15ನ್ನು ಹೋಲಿಸಿರಿ.) ಅನೇಕರು ಕ್ರೈಸ್ತಪ್ರಪಂಚದ ಚರ್ಚುಗಳನ್ನು ಪೂರ್ಣವಾಗಿ ತೊರೆದಿದ್ದಾರೆ ಎಂಬುದು ಆಶ್ಚರ್ಯಜನಕವಲ್ಲ! ಆದರೆ ಅವರು ದೇವರಲ್ಲಿ ನಂಬಿಕೆಯನ್ನು ತೊರೆಯಬೇಕೋ?
ನಾಸ್ತಿಕತೆಗೆ ನ್ಯಾಯಸಮ್ಮತವಾದ ಕಾರಣಗಳೊ?
ಧರ್ಮದ ಕಪಟತನವನ್ನು ಅವರು ಗಮನಿಸಿರಲಿ ಯಾ ಇಲ್ಲದಿರಲಿ, ಅನೇಕ ನಾಸ್ತಿಕರು, ಲೋಕದಲ್ಲಿನ ಕಷ್ಟಾನುಭವದೊಂದಿಗೆ ದೇವರಲ್ಲಿನ ನಂಬಿಕೆಯನ್ನು ಸರಿಹೊಂದಿಸಲಾರರು. ಸೀಮೋನ್ ದಾ ಬೋವಾರ್ ಒಮ್ಮೆ ಅಂದದ್ದು: “ಲೋಕದಲ್ಲಿನ ಅಸಂಬದ್ಧತೆಗಳ ಭಾರ ಹೊತ್ತುಕೊಂಡ ಒಬ್ಬ ಸೃಷ್ಟಿಕರ್ತನಿಗಿಂತ, ಸೃಷಿಕರ್ತನಿಲ್ಲದ ಒಂದು ಲೋಕದ ಕುರಿತಾಗಿ ಯೋಚಿಸಲು ನನಗೆ ಹೆಚ್ಚು ಸುಲಭವಾಗಿತ್ತು.”
ಲೋಕದ ಅನ್ಯಾಯಗಳು—ಕಪಟಾಚಾರಣೆಯ ಧರ್ಮಾವಲಂಬಿಗಳಿಂದ ಪ್ರೇರೇಪಿಸಲ್ಪಟ್ಟವುಗಳನ್ನು ಒಳಗೂಡಿ—ದೇವರು ಇಲ್ಲವೆಂದು ರುಜುಪಡಿಸುತ್ತವೋ? ಪರಿಗಣಿಸಿರಿ: ಒಬ್ಬ ನಿರ್ದೋಷಿ ವ್ಯಕ್ತಿಯನ್ನು ಬೆದರಿಸಲು, ಹಾನಿಗೊಳಿಸಲು ಅಥವಾ ಕೊಲಲ್ಲೂ ಒಂದು ಕತ್ತಿಯು ಬಳಸಲ್ಪಡುವದಾದರೆ, ಆ ಕತ್ತಿಗೆ ಒಬ್ಬ ವಿನ್ಯಾಸಗಾರನು ಇಲ್ಲವೆಂದು ಇದು ರುಜುಪಡಿಸುತ್ತದೋ? ಅದರ ಬದಲು ವಸ್ತುವು ತಪ್ಪಾಗಿ ಬಳಸಲ್ಪಟ್ಟಿತ್ತೆಂದು ಅದು ತೋರಿಸುವದಿಲ್ಲವೋ? ತದ್ರೀತಿಯಲ್ಲಿ, ಮಾನವರು ತಮ್ಮ ದೇವದತ್ತ ಸಾಮರ್ಥ್ಯಗಳನ್ನು ಹಾಗೂ ಸ್ವತಃ ಭೂಮಿಯನ್ನೇ ದುರುಪಯೋಗಿಸುತ್ತಿದ್ದಾರೆ ಎಂಬದಕ್ಕೆ ಮಾನವ ದುಃಖದಲ್ಲಿ ಹೆಚ್ಚಿನದ್ದು ಸಾಕ್ಷ್ಯವನ್ನು ಕೊಡುತ್ತದೆ.
ಕೆಲವರಿಗಾದರೋ, ನಮಗೆ ದೇವರನ್ನು ನೋಡುವುದು ಅಸಾಧ್ಯವಾಗಿರುವದರಿಂದ, ದೇವರಲ್ಲಿ ನಂಬುವುದು ಅಸಮಂಜಸವೆಂದು ಅನ್ನಿಸುತ್ತದೆ. ಆದರೆ ಗಾಳಿ, ಧ್ವನಿ ತರಂಗಗಳು ಮತ್ತು ಸುವಾಸನೆಗಳ ಕುರಿತಾಗಿ ಏನು? ನಾವು ಈ ವಿಷಯಗಳಲ್ಲಿ ಯಾವದನ್ನೂ ನೋಡಲಾರೆವು, ಆದರೆ ಅವು ಅಸ್ತಿತ್ವದಲ್ಲಿವೆ ಎಂದು ನಮಗೆ ತಿಳಿದಿದೆ. ನಮ್ಮ ಶ್ವಾಸಕೋಶಗಳು, ಕಿವಿಗಳು ಮತ್ತು ಮೂಗುಗಳು ನಮಗೆ ಇದನ್ನು ತಿಳಿಸುತ್ತವೆ. ನಿಶ್ಚಯವಾಗಿ, ನಮಗೆ ಸಾಕ್ಷ್ಯವಿರುವದಾದರೆ ಕಾಣಲಾರದಂಥವುಗಳಲ್ಲಿ ನಾವು ನಂಬುತ್ತೇವೆ.
ವಿದ್ಯುನ್ಮಾನಗಳು, ಪ್ರೋಟಾನ್ಗಳು, ಪರಮಾಣುಗಳು, ಅಮೀನೋ ಆಮ್ಲಗಳು ಮತ್ತು ಸಂಕೀರ್ಣ ಮಿದುಳನ್ನು ಒಳಗೂಡಿಸಿ—ಪ್ರಾಕೃತಿಕ ಸಾಕ್ಷ್ಯವನ್ನು ಪರಿಗಣಿಸಿದ ಅನಂತರ ಪ್ರಾಕೃತಿಕ ವಿಜ್ಞಾನಿ ಅರ್ವಿಂಗ್ ವಿಲ್ಯಮ್ ನೋಬ್ಲಾಖ್ ಹೀಗೆ ಹೇಳಲು ಪ್ರಚೋದಿಸಲ್ಪಟ್ಟನು: “ನಾನು ದೇವರಲ್ಲಿ ನಂಬುತ್ತೇನೆ ಯಾಕಂದರೆ ನನಗೆ, ವಿಷಯಗಳು ಇರುವ ರೀತಿಗಾಗಿ ಏಕೈಕ ತರ್ಕಸಮ್ಮತವಾದ ವಿವರಣೆಯು ಆತನ ದೈವಿಕ ಅಸ್ತಿತ್ವವಾಗಿದೆ.” (ಕೀರ್ತನೆ 104:24ನ್ನು ಹೋಲಿಸಿರಿ.) ಅದರಂತೆಯೇ ಶರೀರ ವಿಜ್ಞಾನಿ ಮಾರ್ಲನ್ ಬುಕ್ಸ್ ಕ್ರೈಡರ್ ತಿಳಿಸಿದ್ದು: “ಒಬ್ಬ ಸಾಮಾನ್ಯ ಮಾನವ ಜೀವಿಯಾಗಿ ಮತ್ತು ವೈಜ್ಞಾನಿಕ ಅಧ್ಯಯನ ಹಾಗೂ ಪರಿಶೋಧನೆಗಾಗಿ ತನ್ನ ಜೀವಿತವನ್ನು ಅರ್ಪಿಸಿರುವ ಒಬ್ಬ ಮನುಷ್ಯನಾಗಿ, ಈ ಎರಡು ರೀತಿಯಲ್ಲಿಯೂ ನನಗೆ ದೇವರ ಅಸ್ತಿತ್ವದ ಕುರಿತಾಗಿ ಯಾವದೇ ಸಂದೇಹವಿಲ್ಲ.”
ದೇವರ ಅಸ್ತಿತ್ವದಲ್ಲಿ ನಂಬುವವರು ಇವರು ಮಾತ್ರವಲ್ಲ. ಭೌತವಿಜ್ಞಾನದ ಪ್ರೊಫೆಸರ್ ಹೆನ್ರಿ ಮಾರ್ಗನೊ ಅವರಿಗನುಸಾರ, “ನೀವು ಉಚ್ಚ ಮಟ್ಟದ ವಿಜ್ಞಾನಿಗಳನ್ನು ಪರಿಗಣಿಸುವದಾದರೆ, ನೀವು ಅವರಲ್ಲಿ ಅತಿ ಕೊಂಚ ಮಂದಿ ನಾಸ್ತಿಕರನ್ನು ಕಂಡುಕೊಳ್ಳುವಿರಿ.” ವಿಜ್ಞಾನದ ಏಳಿಗೆಗಳು ಅಥವಾ ಧರ್ಮದ ಸೋಲು ಯಾವುದೂ ನಮಗೆ ಒಬ್ಬ ಸೃಷ್ಟಿಕರ್ತನಲ್ಲಿ ನಂಬಿಕೆಯನ್ನು ತೊರೆಯುವಂತೆ ಮಾಡಬಾರದು. ಯಾಕೆಂದು ನಾವು ಪರೀಕ್ಷಿಸೋಣ.
ಸತ್ಯ ಧರ್ಮದ ವ್ಯೆದೃಶ್ಯ
1803 ರಲ್ಲಿ, ಅಮೆರಿಕದ ರಾಷ್ಟ್ರಾಧ್ಯಕ್ಷರಾದ ತಾಮಸ್ ಜೆಫರ್ಸನ್ ಬರೆದದ್ದು: “ಕ್ರೈಸ್ತತ್ವದ ಭ್ರಷ್ಟತೆಗಳಿಗೆ ನಾನು ನಿಜವಾಗಿಯೂ ವಿರೋಧವಾಗಿದ್ದೇನೆ; ಆದರೆ ಯೇಸು ಕ್ರಿಸ್ತನ ಯಥಾರ್ಥವಾದ ನೀತಿಬೋಧೆಗಳಿಗಲ್ಲ.” ಹೌದು, ಕ್ರೈಸ್ತಪ್ರಪಂಚ ಮತ್ತು ಕ್ರೈಸ್ತತ್ವದ ನಡುವೆ ಒಂದು ವ್ಯತ್ಯಾಸವಿದೆ. ಕ್ರೈಸ್ತಪ್ರಪಂಚದ ಅನೇಕ ಸಿದ್ಧಾಂತಗಳು ಮಾನವರ ಸಂಪ್ರದಾಯಗಳ ಮೇಲೆ ಆಧಾರಿತವಾಗಿವೆ. ವ್ಯತಿರಿಕ್ತವಾಗಿ, ನಿಜ ಕ್ರೈಸ್ತತ್ವವು ತನ್ನ ನಂಬಿಕೆಗಳನ್ನು ಕೇವಲ ಬೈಬಲಿನ ಮೇಲೆ ಆಧಾರಿಸುತ್ತದೆ. ಆದುದರಿಂದ, ಪೌಲನು ಮೊದಲನೆಯ ಶತಕದ ಕೊಲೊಸ್ಸೆಯವರಿಗೆ ಅವರು “ನಿಷ್ಕೃಷ್ಟ ಜ್ಞಾನ,” “ವಿವೇಕ,” ಮತ್ತು “ಆತ್ಮಿಕ ಗ್ರಹಣ ಶಕ್ತಿ” ಯನ್ನು ಪಡೆದುಕೊಳ್ಳಬೇಕೆಂದು ಬರೆದನು.—ಕೊಲೊಸ್ಸೆ 1:9, 10, NW.
ನಿಜವಾದ ಕ್ರೈಸ್ತರಿಂದ ನಾವು ಇದನ್ನೇ ಅಪೇಕ್ಷಿಸತಕ್ಕದ್ದು, ಯಾಕಂದರೆ ಯೇಸು ತನ್ನ ಹಿಂಬಾಲಕರಿಗೆ ಹೀಗೆ ಆಜ್ಞಾಪಿಸಿದನು: “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ, ಅವರಿಗೆ . . . ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”—ಮತ್ತಾಯ 28:19, 20.
ಇಂದು, ಭೂಸುತ್ತಲೂ 231 ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ಈ ಆಜ್ಞೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಅವರು ಬೈಬಲನ್ನು 12 ಭಾಷೆಗಳಲ್ಲಿ ತರ್ಜುಮೆ ಮಾಡಿದ್ದಾರೆ ಮತ್ತು ಸುಮಾರು 7,40,00,000 ಪ್ರತಿಗಳನ್ನು ಛಾಪಿಸಿದ್ದಾರೆ. ಇನ್ನೂ ಹೆಚ್ಚಾಗಿ, ಒಂದು ಮನೆ ಬೈಬಲಭ್ಯಾಸದ ಕಾರ್ಯಕ್ರಮದ ಮೂಲಕ, ಅವರು ಪ್ರಸ್ತುತ 45,00,000 ಕ್ಕಿಂತಲೂ ಹೆಚ್ಚಿನ ಜನರಿಗೆ ‘ಯೇಸು ಆಜ್ಞಾಪಿಸಿದ ಎಲ್ಲಾ ವಿಷಯಗಳನ್ನು ಕಾಪಾಡಿಕೊಳ್ಳುವದಕ್ಕೆ’ ಸಹಾಯ ಮಾಡುತ್ತಿದ್ದಾರೆ.
ಈ ಶೈಕ್ಷಣಿಕ ಕಾರ್ಯಕ್ರಮಕ್ಕೆ ಅತಿ ವ್ಯಾಪಕವಾದ ಪರಿಣಾಮಗಳಿವೆ. ಅದು ನಿಜ ಜ್ಞಾನೋದಯವನ್ನು ತರುತ್ತದೆ, ಯಾಕಂದರೆ ಅದು ಮಾನವನ ಅಲೋಚನೆಗಳ ಮೇಲಲ್ಲ, ಬದಲಾಗಿ ದೇವರ ವಿವೇಕದ ಮೇಲೆ ಆಧಾರಿತವಾಗಿದೆ. (ಜ್ಞಾನೋಕ್ತಿ 4:18) ಇದಲ್ಲದೆ, ಇದು ಎಲ್ಲಾ ರಾಷ್ಟ್ರಗಳ ಮತ್ತು ಕುಲಗಳ ಜನರು, ಮಾನವನ “ಜ್ಞಾನೋದಯ”ಕ್ಕೆ ಎಂದಿಗೂ ಮಾಡಲು ಸಾಧ್ಯವಾಗದಿದ್ದ ಒಂದು ವಿಷಯವನ್ನು—ಒಬ್ಬರ ಮೇಲೊಬ್ಬರಿಗೆ ನಿಜ ಪ್ರೀತಿಯನ್ನು ಬೆಳೆಸುವಂತೆ ಸಾಧ್ಯಮಾಡುವ “ನೂತನ ವ್ಯಕ್ತಿತ್ವ” ಧಾರಣವನ್ನು—ಮಾಡುವಂತೆ ಸಹಾಯ ಮಾಡುತ್ತಿದೆ.—ಕೊಲೊಸ್ಸೆ 3:9, 10, NW.
ಸತ್ಯ ಧರ್ಮವು ನಮ್ಮ 20 ನೆಯ ಶತಮಾನದಲ್ಲಿ ವಿಜಯಿಯಾಗುತ್ತಿದೆ. ಅದು ದೇವರನ್ನು—ಅವನ ಅಸ್ತಿತ್ವವನ್ನಾಗಲಿ ಯಾ ಅವನ ಅಧಿಕಾರವನ್ನಾಗಲಿ—ನಿರಾಕರಿಸುವದಿಲ್ಲ. ನೀವಿದನ್ನು ಸ್ವತಃ ಪರೀಕ್ಷಿಸಿ ನೋಡುವಂತೆ, ಅವರ ಸಭಾಗೃಹಗಳಲ್ಲಿ ಒಂದರಲ್ಲಿ ಯೆಹೋವನ ಸಾಕ್ಷಿಗಳನ್ನು ಭೇಟಿಯಾಗಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಪುಟ 6 ರಲ್ಲಿರುವ ಚೌಕ]
ನಾಸ್ತಿಕತೆಯ ಬೇರುಗಳನ್ನು ಬಲಗೊಳಿಸುವದು
18 ನೆಯ ಶತಮಾನದ ಮಧ್ಯದಲ್ಲಿ, ತತ್ವಜ್ಞಾನಿ ಡನೀ ಡೀಡ್ರೋ ಎಂಬವನನ್ನು ಒಂದು ಸಂಪುಟವುಳ್ಳ ವಿಶ್ವಕೋಶವನ್ನು ಇಂಗ್ಲಿಷ್ನಿಂದ ಫ್ರೆಂಚ್ಗೆ ಭಾಷಾಂತರಿಸಲು ನಿಯೋಜಿಸಲಾಯಿತು. ಆದರೆ, ಅವನು ತನ್ನ ಧಣಿಯ ನಿರೀಕ್ಷಣೆಗಳಿಗಿಂತಲೂ ಹೆಚ್ಚಿನದನ್ನು ಸಾಧಿಸಿದನು. ತನ್ನ ಆನ್ಸೀಕ್ಲಾಪೇಡಿ ಯವನ್ನು ಒಟ್ಟುಗೂಡಿಸಲು ಡೀಡ್ರೋ ಮೂರು ದಶಕಗಳನ್ನು ವ್ಯಯಿಸಿದನು, ಇದು ಆ ಯುಗದ ಚಾಲ್ತಿಯಲ್ಲಿದ್ದ ಮನೋಪ್ರವೃತ್ತಿಯನ್ನು ವಶಪಡಿಸಿದ 28-ಸಂಪುಟಗಳ ಕೃತಿಯಾಗಿತ್ತು.
ಆನ್ಸೀಕ್ಲಾಪೇಡಿ ಯದಲ್ಲಿ ತುಂಬಾ ಪ್ರಾಯೋಗಿಕ ಮಾಹಿತಿಯು ಒಳಗೂಡಿದ್ದರೂ, ಅದರ ಒತ್ತು ಮಾನವ ವಿವೇಕದ ಮೇಲಿತ್ತು. ಗ್ರೇಟ್ ಏಜಸ್ ಆಫ್ ಮ್ಯಾನ್ ಎಂಬ ಶೀರ್ಷಿಕೆಯುಳ್ಳ ಒಂದು ಪುಸ್ತಕದ ಸಂಗ್ರಹಕ್ಕನುಸಾರ, “ಮಾನವನು ತನ್ನ ನಂಬಿಕೆಯ ಬದಲಿಗೆ ವಿವೇಚನೆಯನ್ನು ತನ್ನ ಮಾರ್ಗದರ್ಶಿಸುವ ಸೂತ್ರವಾಗಿ ಇಟ್ಟರೆ ಆತನು ತನ್ನ ಜೀವನ ರೀತಿಯನ್ನು ತುಂಬಾ ಉತ್ತಮಗೊಳಿಸಬಹುದು ಎಂಬ [ತತ್ವಜ್ಞಾನಿಗಳ] ನಿಶಿತ್ಚಾಭಿಪ್ರಾಯವನ್ನು ಸಾರುವ ಧೈರ್ಯವನ್ನು ತೋರಿಸಿತು.” “ಅವರ ವಿಷಯಗಳ ಆಯ್ಕೆಯ ಮೂಲಕ, ಧರ್ಮವು ಮನುಷ್ಯರು ತಿಳಿಯಬೇಕಾದ ಅಗತ್ಯವಿರುವ ವಿಷಯವಾಗಿರಲಿಲ್ಲವೆಂದು ಸಂಪಾದಕರು ಸ್ಪಷ್ಟಮಾಡಿದರು” ಎಂದು ಹೇಳುತ್ತದೆ ದ ಮಾರ್ಡನ್ ಹೆರಿಟೆಜ್ ಎಂಬ ಪುಸ್ತಕ. ಆಶ್ಚರ್ಯರಹಿತವಾಗಿ, ಚರ್ಚು ಆನ್ಸೀಕ್ಲಾಪೇಡಿ ಯವನ್ನು ನಿಗ್ರಹಿಸಲು ಪ್ರಯತ್ನಿಸಿತು. ಸರಕಾರೀ ಮುಖ್ಯ ನ್ಯಾಯವಾದಿಯು ಅದನ್ನು ರಾಜಕೀಯತೆ, ನೈತಿಕತೆಗಳು, ಮತ್ತು ಧರ್ಮವನ್ನು ಬುಡಮೇಲು ಮಾಡುವಂತಹದ್ದಾಗಿ ಖಂಡಿಸಿದನು.
ಅದರ ಶತ್ರುಗಳ ಹೊರತಾಗಿಯೂ, ಡೀಡ್ರೋರವರ ಅನ್ಸೇಕ್ಲೊಪೇಡಿ ಯ ಸುಮಾರು 4,000 ವ್ಯಕ್ತಿಗಳಿಂದ ವಿನಂತಿಸಲ್ಪಟ್ಟಿತ್ತು—ಅದರ ದುಬಾರಿಯಾದ ಕ್ರಯವನ್ನು ಪರಿಗಣಿಸುವಾಗ, ಇದು ಒಂದು ದಿಗಿಲುಪಡಿಸುವ ಸಂಖ್ಯೆ. ಬಲು ಬೇಗನೇ ಈ ನಾಸ್ತಿಕ ಅಂತಃಪ್ರವಾಹವು, ಪೂರ್ತಿಯಾಗಿ ಗರಿಮೂಡಿದ, ದೇವರ ನಿರಾಕರಣೆಯಲ್ಲಿ ಖಂಡಿತವಾಗಿ ವಿಕಸಿಸಲಿತ್ತು.